ಪಿಸಿಒಎಸ್ ಗೆ ಕೆಲವೊಂದು ಮನೆಮದ್ದುಗಳು

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್(ಪಿಸಿಒಎಸ್) ಎನ್ನುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಇದರಿಂದಾಗಿ ಹಲವಾರು ಮಹಿಳೆಯರು ಇದಕ್ಕೆ ಔಷಧಿ ತೆಗೆದುಕೊಳ್ಳುವರು, ಜೀವನಶೈಲಿ ಬದಲಾಯಿಸುವರು ಮತ್ತು ವ್ಯಾಯಾಮ ಮಾಡಿಕೊಂಡು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವರು.

ಆದರೆ ಇದಕ್ಕೆಲ್ಲಕ್ಕೂ ಕೆಲವೊಂದು ಮನೆಮದ್ದುಗಳು ಇದೆ ಎಂದು ನಿಮಗೆ ತಿಳಿದಿದೆಯಾ? ಹೌದು, ನೀವು ಮನೆಯ ಅಡುಗೆ ಮನೆಯಲ್ಲಿ ಇದಕ್ಕೆ ಮನೆಮದ್ದನ್ನು ಹುಡುಕಿಕೊಳ್ಳಬಹುದು. ನೀವು ಬಳಸುವಂತಹ ಪ್ರತಿನಿತ್ಯದ ಆಹಾರಗಳಲ್ಲಿ ಇದನ್ನು ನಿಯಂತ್ರಿಸಬಹುದಾದ ಕೆಲವೊಂದು ಔಷಧೀಯ ಗುಣಗಳು ಇವೆ.

ಮೆಂತೆ ಕಾಳುಗಳು

ಮೆಂತೆ ಕಾಳುಗಳು

ಮಹಿಳೆಯರಲ್ಲಿ ಕಂಡು ಬರುವಂತಹ ಪಿಸಿಒಎಸ್ ಸಮಸ್ಯೆಯೆಂದರೆ ಅದು ಮೇಥೋಜೀರಕ ಗ್ರಂಥಿಗಳು ಸ್ರವಿಸುವಂತಹ ಇನ್ಸುಲಿನ್ ನ್ನು ಅಂಗಾಂಶಗಳು ಸರಿಯಾಗಿ ಬಳಸಿಕೊಳ್ಳದೆ ಇರುವುದು ಮತ್ತು ಇದರಿಂದಾಗಿ ಬೊಜ್ಜು ಮತ್ತು ಅತಿಯಾಗಿ ಟೆಸ್ಟೋಸ್ಟೆರಾನ್ ಮಟ್ಟವು ಬಿಡುಗಡೆ ಆಗುವುದು. ಮೆಂತ್ಯೆ ಗಿಡದ ಸೊಪ್ಪು ಅಥವಾ ಕಾಳುಗಳನ್ನು ಸೇವನೆ ಮಾಡಿದರೆ ಆಗ ಇನ್ಸುಲಿನ್ ಮಟ್ಟವು ಸಾಮಾನ್ಯವಾಗಿ ಇರುವುದು. ಮೆಂತ್ಯೆ ಕಾಳುಗಳು ದೇಹದಲ್ಲಿ ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಣೆ ಮಾಡುವುದು, ಇದರಿಂದಾಗಿ ತೂಕ ಕಳೆದುಕೊಳ್ಳಲು ಇದು ಸಹಕಾರಿ ಆಗಿದೆ. ಮೆಂತ್ಯೆ ಕಾಳುಗಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ ಮತ್ತು ದಿನದಲ್ಲಿ ಮೂರು ಸಲ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ಬೆಳಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ, ಮಧ್ಯಾಹ್ನ ಊಟಕ್ಕೆ ಐದು ನಿಮಿಷ ಮೊದಲು ಮತ್ತು ರಾತ್ರಿ ಊಟಕ್ಕೆ ಮೊದಲು ನೀವು ಇದನ್ನು ಸೇವಿಸಿ. ಬೇಯಿಸಿ ಮೆಂತೆ ಸೊಪ್ಪನ್ನು ಕೂಡ ಸೇವಿಸಬಹುದು.

ದಾಲ್ಚಿನ್ನಿ

ದಾಲ್ಚಿನ್ನಿ

ಮಧುಮೇಹ ತಜ್ಞೆಯಾಗಿರುವಂತಹ ಸ್ವಸ್ತಿಕ್ ಮಿಶ್ರಾ ಅವರು ಹೇಳುವ ಪ್ರಕಾರ, ಟೈಪ್ 2 ಮಧುಮೇಹವನ್ನು ದಾಲ್ಚಿನಿ ನಿವಾರಣೆ ಮಾಡುವುದು ಎಂದು ಪತ್ತೆ ಮಾಡಲಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದು ಮತ್ತು ಇನ್ಸುಲಿನ್ ತಡೆಯನ್ನು ಕಡಿಮೆ ಮಾಡುವುದು. ಅಧ್ಯಯನಗಳು ಕಂಡುಕೊಂಡಿರುವ ವಿಚಾರವೆಂದರೆ ಈ ಗಿಡಮೂಲಿಕೆಯು ಗರ್ಭಧಾರಣೆ ಸಾಧ್ಯತೆ ಹೆಚ್ಚು ಮಾಡುವುದು ಎನ್ನುತ್ತಾರೆ. ದಾಲ್ಚಿನಿ ಹುಡಿಯನ್ನು ಹಾಲಿನ ಶೇಕ್ ಅಥವಾ ಮೊಸರಿನ ಜತೆಗೆ ಸೇರಿಸಿಕೊಳ್ಳಿ. ಕೇಕ್ ಅಥವಾ ಮಫಿನ್ ಗೆ ಹಾಕಿಕೊಂಡು ನೀವು ಸೇರಿಸಬಹುದು. ಚಾಗೆ ಸ್ವಲ್ಪ ಹುಡಿ ಹಾಕಿಕೊಂಡು ಸೇವಿಸಬಹುದು. ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆ ಇರುವ ಕಾರಣದಿಂದಾಗಿ ನೀವು ತೂಕ ಹೆಚ್ಚಳದ ಬಗ್ಗೆ ಆಲೋಚನೆ ಮಾಡಬೇಕಾಗಿಲ್ಲ.

ಅಗಸೆ ಬೀಜಗಳು

ಅಗಸೆ ಬೀಜಗಳು

ಈ ಬೀಜಗಳಲ್ಲಿ ಉನ್ನತ ಮಟ್ಟದ ನಾರಿನಾಂಶ, ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳು ಇವೆ. ಇದರೊಂದಿಗೆ ಲಿಗ್ನನ್ಸ್ ಎನ್ನುವ ಪ್ರೋಟೀನ್ ಇದ್ದು, ದೇಹದಲ್ಲಿ ಸಿಗುವಂತಹ ಟೆಸ್ಟೋಸ್ಟೆರಾನ್ ಪ್ರಮಾಣವನ್ನು ಇದು ಕಡಿಮೆ ಮಾಡುವುದು. ಅಗಸೆ ಬೀಜಗಳು ಗ್ಲೂಕೋಸ್ ಮತ್ತು ಇನ್ಸುಲಿನ್ ನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ನೆರವಾಗುವುದು ಮತ್ತು ಪಿಸಿಒಎಸ್ ನ ಅಡ್ಡಪರಿಣಾಮಗಳನ್ನು ಇದು ತಡೆಯುವುದು ಎಂದು ಆಹಾರ ತಜ್ಞೆ ಅನುಶಾ ಎಂ ಹೇಳುತ್ತಾರೆ. ಈ ಬೀಜಗಳನ್ನು ಹುಡಿ ಮಾಡಿಕೊಳ್ಳಬಹುದು ಅಥವಾ ನೀವು ಇದನ್ನು ಉಪಾಹಾರದೊಂದಿಗೆ ಅಥವಾ ಜ್ಯುಸ್ ಗೆ ಬೆರೆಸಿ ಸೇವಿಸಬಹುದು. ಇದನ್ನು ಕುಡಿಯುವ ನೀರಿಗೆ ಸೇರಿಸಿಕೊಂಡು ಕುಡಿಯಬಹುದು.

ತುಳಸಿ

ತುಳಸಿ

ಮಲ್ಲಿಕಾ ಅವರು ಹೇಳುವ ಪ್ರಕಾರ, ಅಂಡೋತ್ಪತ್ತಿ ಪ್ರಕ್ರಿಯೆಯು ನಡೆಯದೆ ಇರುವ ಕಾರಣದಿಂದಾಗಿ ಆಂಡ್ರೊಜೆನ್ ಗಳನ್ನು ಸರಿಯಾಗಿ ಬಳಕೆ ಮಾಡಲು ಸಾಧ್ಯವಾಗಿಲ್ಲ. ಇದರೊಂದಿಗೆ ಯಕೃತ್ ಉತ್ಪತ್ತಿ ಮಾಡುವಂತಹ ಎಸ್ ಎಚ್ ಬಿಜಿ ಪ್ರೋಟೀನ್ ಕೂಡ ತುಂಬಾ ಕಡಿಮೆ ಮಟ್ಟದಲ್ಲಿದೆ. ಇದರಿಂದಾಗಿ ಹೆಚ್ಚಾಗಿ ಮಹಿಳೆಯರ ಮುಖದಲ್ಲಿ ಅತಿಯಾದ ಕೂದಲು ಬೆಳವಣಿಗೆ, ಮೊಡವೆ ಮತ್ತು ಗರ್ಭಧಾರಣೆಗೆ ಸಮಸ್ಯೆಗಳು ಕಾಣಿಸಿಕೊಳ್ಳುವುದು. ತುಳಸಿಯು ಆಂಡ್ರೊಜೆನ್ ಮಟ್ಟವನ್ನು ಮತ್ತು ಇನ್ಸುಲಿನ್ ಸಮಪ್ರಮಾಣದಲ್ಲಿ ಇರುವಂತಹ ನಿಯಂತ್ರಣ ಮಾಡುವುದು. ಇದು ಒಂದು ಅದ್ಭುತವಾದ ಆಂಟಿಆಕ್ಸಿಡೆಂಟ್ ಆಗಿದೆ. ಖಾಲಿ ಹೊಟ್ಟೆಯಲ್ಲಿ ನೀವು ಬೆಳಗ್ಗೆ 10 ತುಳಸಿ ಎಲೆಗಳನ್ನು ಜಗಿಯಿರಿ. ನಿಯಮಿತವಾಗಿ ತುಳಸಿ ಬೇಯಿಸಿದ ನೀರನ್ನು ಕುಡಿಯಿರಿ.

ಜೇನುತುಪ್ಪ

ಜೇನುತುಪ್ಪ

ಬೊಜ್ಜು ಮತ್ತು ಪಿಸಿಒಎಸ್ ಎನ್ನುವುದು ಒಂದರಿಂದ ಮತ್ತೊಂದು ಉತ್ಪನ್ನವಾಗಿದೆ. ಪಿಸಿಒಎಸ್ ದೇಹದಲ್ಲಿ ಹಾರ್ಮೋನು ಮಟ್ಟದಲ್ಲಿ ಅಸಮತೋಲನ ಉಂಟು ಮಾಡುವುದು ಮತ್ತು ಇದರಿಂದ ಬೊಜ್ಜು ಬೆಳೆಯುವುದು. ತೂಕ ತಗ್ಗಿಸಲು ಯಾವುದ ಕ್ರಮ ತೆಗೆದುಕೊಳ್ಳದೆ ಇದ್ದರೆ ಆಗ ಸಂಧಿವಾತ ಮತ್ತು ಹೃದಯದ ಕಾಯಿಲೆಗಳು ಕಾಣಿಸಿಕೊಳ್ಳುವುದು. ಜೇನುತುಪ್ಪವು ಹಸಿವು ಕಡಿಮೆ ಮಾಡಿ ಹೊಟ್ಟೆ ತುಂಬಿರುವಂತೆ ಮಾಡುವುದು. ಒಂದು ಚಮಚ ಜೇನುತುಪ್ಪವನ್ನು ಲಿಂಬೆರಸ ಮತ್ತು ಉಗುರುಬೆಚ್ಚಗಿನ ನೀರಿನೊಂದಿಗೆ ಬೆರೆಸಿಕೊಂಡು ಕುಡಿದರೆ ಆಗ ತೂಕ ಕಳೆದುಕೊಳ್ಳಲು ಇದು ತುಂಬಾ ಸಹಕಾರಿಯಾಗಿ ಇರಲಿದೆ. ಜೇನುತುಪ್ಪವನ್ನು ಬಿಸಿ ಮಾಡಬೇಡಿ ಅಥವಾ ಮತ್ತೆ ಸೇವಿಸುತ್ತೇವೆ ಎಂದು ಹಾಗೆ ಬಿಡಬೇಡಿ. ಇದರಿಂದ ತೂಕ ಹೆಚ್ಚುವುದು.

ಹಾಗಲಕಾಯಿ ಮತ್ತು ತೊಂಡೆಕಾಯಿ

ಹಾಗಲಕಾಯಿ ಮತ್ತು ತೊಂಡೆಕಾಯಿ

ಹಾಗಲಕಾಯಿ ಮತ್ತು ತೊಂಡೆಕಾಯಿಯು ಮಧುಮೇಹಕ್ಕೆ ಹೇಳಿ ಮಾಡಿಸಿರುವಂತಹ ತರಕಾರಿಗಳು ಇದು ಇನ್ಸುಲಿನ್ ಮತ್ತು ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರ ಎಲೆಗಳು ಮತ್ತು ತರಕಾರಿ ತುಂಬಾ ಒಳ್ಳೆಯದು. ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರು ಇದನ್ನು ಸೇವಿಸಬೇಕು. ಇದನ್ನು ಸಾಮಾನ್ಯವಾಗಿ ಅಡುಗೆ ಮಾಡಬೇಕು ಮತ್ತು ವಾರದಲ್ಲಿ ಐದು ಸಲ ಸೇವಿಸಬೇಕು. ಹಾಗಲಕಾಯಿ ಜ್ಯೂಸ್ ಮಾಡಿಕೊಂಡು ಅದನ್ನು ಸೇವಿಸಬಹುದು.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವಲ್ಲಿ ತುಂಬಾ ಪ್ರಾಮುಖ್ಯತೆ ವಹಿಸುವುದು ಮತ್ತು ಇದು ಮಹಿಳೆಯರಲ್ಲಿ ಫಲವತ್ತತೆ ಹೆಚ್ಚು ಮಾಡುವುದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಅನುಶಾ ಅವರು ಹೇಳುವ ಪ್ರಕಾರ, ಇದು ದೇಹವನ್ನು ಅದ್ಭುತವಾಗಿ ಶುದ್ಧೀಕರಿಸುವುದು. ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ಇದರಿಂದಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಒಂದು ನೆಲ್ಲಿಕಾಯಿ ತೆಗೆದುಕೊಳ್ಳಿ ಮತ್ತು ಇದರ ಜ್ಯೂಸ್ ತೆಗೆಯಿರಿ. ಇದಕ್ಕೆ ಉಗುರುಬೆಚ್ಚಗಿನ ನೀರು ಹಾಕಿ ಸೇವಿಸಿ. ನೀವು ಇದರ ಬೀಜ ತೆಗೆದು ತುಂಡು ಮಾಡಿಕೊಂಡು ಮೊಸರಿಗೆ ಹಾಕಿ ಸೇವಿಸಬಹುದು.

English summary

Find the cure for pcos in your kitchen

Polycystic Ovary Syndrome (PCOS) is quite common these days. So, it’s not surprising to find many women taking medications, making lifestyle changes and embarking on a fitness regime just to keep the condition under control. But, did you know there are home remedies for it, too? All you need to do is step inside your kitchen and identify these everyday food ingredients and add them to your diet
X
Desktop Bottom Promotion