Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಒತ್ತಡ ನಿವಾರಣೆಗೆ ಕೆಲವೊಂದು ಪರಿಣಾಮಕಾರಿ ವ್ಯಾಯಾಮಗಳು
ಒತ್ತಡವಿಲ್ಲದೆ ಇರುವಂತಹ ವ್ಯಕ್ತಿಯೇ ಈಗ ಇಲ್ಲವೆನ್ನಬಹುದು. ಯಾಕೆಂದರೆ ಯಾರ ಮುಖವನ್ನು ನೋಡಿ ಅಲ್ಲಿ ನಗುವೆನ್ನುವುದು ಮಾಯವಾಗಿದೆ ಮತ್ತು ಚಿಂತೆಯು ಆವರಿಸಿಕೊಂಡಿದೆ. ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುತ್ತಾರೆ. ಮನೆ, ಕಚೇರಿ ಹೀಗೆ ಎಲ್ಲಿ ನೋಡಿದರೂ ಒತ್ತಡದಲ್ಲೇ ಬದುಕಬೇಕಾದ ಪರಿಸ್ಥಿತಿ ಬಂದಿದೆ. ಇದಕ್ಕೆ ನಾವು ಅನುಸರಿಸಿಕೊಂಡು ಹೋಗುತ್ತಿರುವಂತಹ ಜೀವನಶೈಲಿ ಹಾಗೂ ಇಂದಿನ ವೇಗದ ಜಗತ್ತು ಕಾರಣವಾಗಿದೆ.
ಒತ್ತಡ ಎನ್ನುವುದು ಮನುಷ್ಯನಿಗೆ ತುಂಬಾ ಹಾನಿಕಾರಕ. ಒತ್ತಡದಿಂದಾಗಿ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಕೆಡುವುದು. ಆದರೆ ಕೆಲವೊಂದು ಸರಳ ವ್ಯಾಯಾಮ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳ ಬಹುದು. ವ್ಯಾಯಾಮವು ದೇಹಕ್ಕೆ ಉಲ್ಲಾಸ ನೀಡುವುದು ಮತ್ತು ನಿಮ್ಮನ್ನು ಫಿಟ್ ಆಗಿ ಇಡುವುದು. ಇದು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿ ನೀವು ತುಂಬಾ ಒಳ್ಳೆಯ ಜೀವನ ನಡೆಸುವಂತೆ ಆಗುವುದು. ವ್ಯಾಯಾಮದಿಂದ ಮಾನಸ್ಸಿನ ಮೇಲೆ ಧನಾತ್ಮಕ ಭಾವನೆಯು ಉಂಟಾಗುವುದು. ಇದರಿಂದ ನಿಯಮಿತವಾಗಿ ವ್ಯಾಯಾಮ ಮಾಡಿದರೆ ಅದರಿಂದ ಒತ್ತಡ ನಿವಾರಣೆ ಮಾಡಿಕೊಳ್ಳಬಹುದು. ಇದು ಹೇಗೆ ಎಂದು ನೀವು ತಿಳಿಯಿರಿ.

ವ್ಯಾಯಾಮ ಮತ್ತು ಒತ್ತಡದ ನಡುವಿನ ಸಂಬಂಧ
ವ್ಯಾಯಾಮದಿಂದ ಒತ್ತಡದ ಹಾರ್ಮೋನುಗಳು ಕಡಿಮೆ ಆಗುವುದು ಮತ್ತು ಉತ್ತಮ ಭಾವನೆ ಉಂಟು ಮಾಡುವಂತಹ ಎಂಡ್ರೋಪಿನ್ ಎನ್ನುವ ಹಾರ್ಮೋನ್ ನ್ನು ಹೆಚ್ಚು ಮಾಡುವುದು. ಇದು ದಿನದ ಆರಂಭದಲ್ಲಿ ನಿಮ್ಮ ಶಕ್ತಿ ಹಾಗೂ ಮನಸ್ಥಿತಿಯನ್ನು ಹೆಚ್ಚಿಸುವುದು.
ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ನಕಾರಾತ್ಮಕ ಆಲೋಚನೆ ಹಾಗೂ ಭಾವನೆಗಳನ್ನು ಇದು ದೂರ ಮಾಡುವುದು.
ಜಿಮ್ ಅಥವಾ ಬೇರೆ ಸ್ಥಳದಲ್ಲಿ ಬೇರೆ ಯಾರೊಂದಿಗಾದರೂ ವ್ಯಾಯಾಮ ಮಾಡುತ್ತಲಿದ್ದರೆ ಆಗ ನಿಮಗೆ ಸಾಮಾಜಿಕವಾಗಿ ಬೆರೆಯಲು ನೆರವಾಗುವುದು. ಇದು ಅನಾರೋಗ್ಯ ಸಮಸ್ಯೆಯನ್ನು ದೂರವಿಡುವುದು. ದೇಹವು ಫಿಟ್ ಮತ್ತು ಸದೃಢವಾಗಿರುವ ಕಾರಣದಿಂದಾಗಿ ವ್ಯಾಯಾಮವು ಆತ್ಮವಿಶ್ವಾಸ ಹೆಚ್ಚು ಮಾಡುವುದು.

ವ್ಯಾಯಾಮದಿಂದ ಒತ್ತಡ ನಿವಾರಣೆ ಮಾಡುವುದು ಹೇಗೆ?
ಯೋಗವು ದೇಹ ಹಾಗು ಮನಸ್ಸಿಗೆ ತುಂಬಾ ನೆರವಾಗುವುದು. ಇದು ದೇಹವನ್ನು ಸದೃಢಗೊಳಿಸುವುದು ಮತ್ತು ಏಕಾಗೃತೆ ಹೆಚ್ಚಿಸುವುದು ಮತ್ತು ನಿಮ್ಮೊಳಗೆ ಒಂದು ಅದ್ಭುತವಾಗಿ ಆತ್ಮವಿಶ್ವಾಸ ಉಂಟು ಮಾಡುವುದು. ನೀವು ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಲಿದ್ದರೆ ಆಗ ಒತ್ತಡದ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು. ಧಾನ್ಯ ಮತ್ತು ಉಸಿರಾಟದ ಕೆಲವೊಂದು ವಿಧಾನಗಳಿಂದ ಮಾನಸಿ ಆರೋಗ್ಯ ಸುಧಾರಣೆ ಮಾಡಬಹುದು. ಯೋಗವು ಕಾರ್ಟಿಸಾಲ್ ಮಟ್ಟವನ್ನು ಕಡಿಮೆ ಮಾಡುವುದು. ಇದು ಒತ್ತಡಕ್ಕೆ ಕಾರಣವಾಗಿರುವ ಪ್ರಮುಖ ಹಾರ್ಮೋನ್ ಆಗಿದೆ. ಇದರಿಂದ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗವು ತುಂಬಾ ಪರಿಣಮಕಾರಿ ಯಾಗಿ ಇರಲಿದೆ ಮತ್ತು ಇದು ಒತ್ತಡವನ್ನು ದೂರ ಮಾಡುವುದು. ಯೋಗದಿಂದ ಖಿನ್ನತೆ ದೂರ ಮಾಡಬಹುದು ಮತ್ತು ನಿದ್ರೆಗೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳು ಕೂಡ ನಿವಾರಣೆ ಆಗುವುದು.

ಪಿಲೇಟ್ಸ್
ಪಿಲೇಟ್ಸ್ ವ್ಯಾಯಮದ ಹೊಸ ವಿಧಾನವಾಗಿದೆ ಮತ್ತು ಇದನ್ನು ಪ್ರತಿಯೊಬ್ಬರು ಪ್ರಯತ್ನಿಸುತ್ತಿರುವರು. ಇದು ಒತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ನಿಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚು ಮಾಡುವುದು. ಇದರಲ್ಲಿ ಕೂಡ ಉಸಿರಾಟಕ್ಕೆ ಸಂಬಂಧಿಸಿರುವಂತಹ ಕೆಲವೊಂದು ವ್ಯಾಯಾಮಗಳು ಇವೆ. ಪಿಲೇಟ್ಸ್ ನ ಉತ್ತಮ ವಿಧಾನವೆಂದರೆ ನೀವು ಇದನ್ನು ಮನೆಯಲ್ಲೇ ಮಾಡಬಹುದಾಗಿದೆ. ಪಿಲೇಟ್ಸ್ ಗೆ ಸಾಮಾನ್ಯವಾಗಿ 40-45 ನಿಮಿಷ ಬೇಕಾಗುತ್ತದೆ. ಇದು ಏರೋಬಿಕ್ಸ್ ಮತ್ತು ನಾನ್ ಏರೋಬಿಕ್ಸ್ ನ ವ್ಯಾಯಾಮ ವಿಧವಾಗಿದೆ. ಇದು ನಿಮ್ಮ ದೇಹವನ್ನು ವಿವಿಧ ಭಂಗಿಯಲ್ಲಿ ತಿರುಗಿಸುವುದು. ಪಿಲೇಟ್ಸ್ ದೇಹದ ಸ್ಥಿತಿಸ್ಥಾಪಕತ್ವ ಸುಧಾರಣೆ ಮಾಡುವುದು ಮತ್ತು ಸಂಪೂರ್ಣ ದೇಹದ ಮೇಲೆ ನಿಮಗೆ ನಿಯಂತ್ರಣ ಸಾಧಿಸಲು ಇದರಿಂದ ನೆರವಾಗುವುದು.

ಏರೋಬಿಕ್ಸ್
ಏರೋಬಿಕ್ಸ್ ತುಂಬಾ ಮನರಂಜನೆ ನೀಡುವಂತಹ ವ್ಯಾಯಾಮ. ಇದು ಮನಸ್ಸಿಗೆ ಆಹ್ಲಾದ ನೀಡುವುದು ಮತ್ತು ತೂಕ ಕಳೆದುಕೊಳ್ಳಲು ತುಂಬಾ ಪರಿಣಾಮಕಾರಿ. ಹಲವಾರು ಸಂಶೋಧನೆಗಳ ಪ್ರಕಾರ ಏರೋಬಿಕ್ಸ್ ನಿಂದಾಗಿ ಖಿನ್ನತೆ ದೂರ ಮಾಡಬಹುದು ಎಂದು ಕಂಡುಕೊಳ್ಳಲಾಗಿದೆ. ಉಸಿರಾಟ ಮತ್ತು ಹೃದಯಬಡಿತವನ್ನು ಹೆಚ್ಚು ಮಾಡುವ ಮೂಲಕ ಏರೋಬಿಕ್ಸ್ ನಿಮ್ಮ ಸ್ನಾಯುಗಳಿಗೆ ಶಕ್ತಿ ನೀಡುವುದು. ಇದು ವ್ಯಾಯಾಮ ಮತ್ತು ಡ್ಯಾನ್ಸ್ ನ ಸಮ್ಮಿಲನವಾಗಿದೆ. ಇದು ಒತ್ತಡ ನಿವಾರಣೆ ಮಾಡುವುದು.
ದಿನದಲ್ಲಿ 30 ನಿಮಿಷ ಕಾಲ ವ್ಯಾಯಾಮ ಮಾಡಿ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಫಿಟ್ ಇರಬಹುದು.



Click it and Unblock the Notifications