Latest Updates
-
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ!
ವೈದ್ಯರ ದಿನಾಚರಣೆ 2019: ರೋಗ ರುಜಿನಗಳಿಂದ ದೂರ ಉಳಿಯಲು ಸ್ವಚ್ಛತೆಯ ಮಹತ್ವದ ಸಲಹೆಗಳು
ನಾವು ಬಾಲ್ಯದಿಂದಲೇ ಕೆಲವೊಂದು ಸ್ವಚ್ಛತೆ ಬಗ್ಗೆ ತಿಳಿದುಕೊಂಡು ಬರುತ್ತಿದ್ದೇವೆ. ಮನೆಯಲ್ಲಿ, ಶಾಲೆಯಲ್ಲಿ, ಸ್ನೇಹಿತರು ಹಾಗೂ ಹಿತೈಷಿಗಳು ನಮಗೆ ಹಲವಾರು ಬಗೆಯಿಂದ ಸ್ವಚ್ಛತೆ ಕಾಪಾಡಿಕೊಂಡು ಹಲವಾರು ರೀತಿಯ ಸೋಂಕುಗಳನ್ನು ದೂರ ಮಾಡಿಕೊಳ್ಳುವುದು ಹೇಗೆ ಎಂದು ಹೇಳಿಕೊಟ್ಟಿರುವರು. ಸ್ವಚ್ಛತೆ ಇದ್ದರೆ ಅದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯ ಪರಿಣಾಮ ಬೀರುವುದು. ಅದೇ ರೀತಿಯಾಗಿ ಸ್ವಚ್ಛತೆಯು ಇಲ್ಲವೆಂದಾದಲ್ಲಿ ಹಲವಾರು ಕಾಯಿಲೆಗಳು ಬರುವುದು. ಇಂತಹ ಸಂದರ್ಭದಲ್ಲಿ ನಾವು ಆರೋಗ್ಯದ ಕಡೆ ಗಮನಹರಿಸಬೇಕು.

ಇಂದಿನ ದಿನಗಳಲ್ಲಿ ನಾವು ಅತಿಯಾದ ಒತ್ತಡದಲ್ಲಿ ಕೆಲಸ ಮಾಡುವ ಪರಿಣಾಮವಾಗಿ ಸ್ವಚ್ಛತೆ ಕಡೆ ಪ್ರತಿನಿತ್ಯವು ಗಮನಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲವು ಮಹತ್ವದ ಸಲಹೆಗಳನ್ನು ಕಡೆಗಣಿಸುತ್ತೇವೆ. ನಾವು ಈ ಸಲಹೆಗಳನ್ನು ಪಾಲಿಸಿಕೊಂಡು ಹೋಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಇದು ಹೇಗೆ ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ. ಓದುಗರೇ ನಾವು ಈ ಲೇಖನದಲ್ಲಿ ನಿಮಗೆ ಕೆಲವೊಂದು ಸ್ವಚ್ಛತೆಯ ಮಹತ್ವದ ಸಲಹೆಗಳನ್ನು ನೀಡಲಿದ್ದೇವೆ. ಇದನ್ನು ನೀವು ಪಾಲಿಸಿಕೊಂಡು ಹೋಗಿ ಬರುವಂತಹ ರೋಗ ರುಜಿನಗಳಿಂದ ದೂರ ಉಳಿಯಬಹುದಾಗಿದೆ. ವೈದ್ಯರ ದಿನದ ಪ್ರಯುಕ್ತ ಬೆಂಗಳೂರಿನ ಜನಪ್ರಿಯ ಮಕ್ಕಳ ಶ್ವಾಸಕೋಶ ಶಾಸ್ತ್ರಜ್ಷ ಆಗಿರುವಂತಹ ಡಾ. ಎಚ್ ಪರಮೇಶ್ ಅವರು ಕೆಲವು ಮಹತ್ವದ ಸಲಹೆಗಳನ್ನು ನೀಡಿರುವರು. ಇದರಿಂದ ಸೋಂಕನ್ನು ದೂರ ಮಾಡಿಕೊಳ್ಳಬಹುದಾಗಿದೆ.

ಮೊದಲ ಸಲಹೆ
ಹೊರಗಡೆ ತೆರೆದಿಟ್ಟಿರುವ ಆಹಾರ ಸೇವಿಸಬೇಡಿ ತೆರೆದಿಟ್ಟಿರುವಂತಹ ಆಹಾರಗಳಲ್ಲಿ ಯಾವಾಗಲೂ ಸೊಳ್ಳೆಗಳು ಮತ್ತು ಕೀಟಗಳು ಹೋಗಿ ಕುಳಿತುಕೊಳ್ಳುವುದನ್ನು ನಾವು ಎಷ್ಟೋ ಸಲ ನೋಡಿದ್ದೇವೆ. ರೋಗಗಳನ್ನು ಉಂಟು ಮಾಡುವಂತಹ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಈ ಕೀಟ ಹಾಗೂ ಸೊಳ್ಳೆಗಳ ಮೂಲಕ ಆಹಾರಕ್ಕೆ ಬಂದು ಸೇರುವುದು ತುಂಬಾ ಸುಲಭವಾಗಿರುವುದು ಎಂದು ವೈದ್ಯರು ಹೇಳುತ್ತಾರೆ. ಇದರಿಂದ ನೀವು ಹೊರಗಡೆ ತೆರೆದ ಆಹಾರ ತಿನ್ನಬೇಡಿ ಮತ್ತು ಮನೆಯಲ್ಲಿ ಕೂಡ ಆಹಾರಗಳನ್ನು ಯಾವಾಗಲೂ ಮುಚ್ಚಿಟ್ಟುಕೊಳ್ಳಿ. ಯಾಕೆಂದರೆ ಇದರಿಂದ ಸೊಳ್ಳೆಗಳು ಹಾಗೂ ಕೀಟಗಳು ಮುತ್ತಿಕೊಳ್ಳುವುದು ತಪ್ಪುವುದು.

ಎರಡನೇ ಸಲಹೆ
ಕೆಮ್ಮುವಾಗ ನೀವು ಬಾಯಿಗೆ ಕರವಸ್ತ್ರ ಹಿಡಿಯಿರಿ
ಕೆಮ್ಮು ಬರುವಾಗ ಕೈ ಅಥವಾ ಕರವಸ್ತ್ರ ಅಡ್ಡ ಹಿಡಿಯದೆ ಕೆಮ್ಮುವುದು ನಮಗೆ ತುಂಬಾ ರೇಜಿಗೆ ಉಂಟು ಮಾಡುವುದು. ಇದರಿಂದಾಗಿ ಹೆಚ್ಚಿನ ಕೀಟಾಣುಗಳು ಪಸರಿಸುವುದು. ಕೆಮ್ಮುವಾಗ ಅಥವಾ ಶೀನುವಾಗ ಈ ಕರವಸ್ತ್ರದಿಂದ ಬಾಯಿ ಮುಚ್ಚಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
•ಅನಿಯಂತ್ರಿತವಾಗಿ ಕೆಮ್ಮು ಅಥವಾ ಶೀನು ಬಂದರೆ ಆಗ ಟಿಶ್ಯೂ ಅಥವಾ ಕರವಸ್ತ್ರದಿಂದ ಬಾಯಿ ಮುಚ್ಚಿಕೊಳ್ಳಿ.
•ಟಿಶ್ಯೂ ಬಳಸಿದ್ದರೆ ಆಗ ನೀವು ಕೆಮ್ಮಿದ ಬಳಿಕ ಇದನ್ನು ಹೋಗಿ ಕಸದ ಡಬ್ಬಿಗೆ ಹಾಕಿಬಿಡಿ.
•ಕೆಮ್ಮಿದ ಬಳಿಕ ನೀವು ಹೋಗಿ ಕೈ ತೊಳೆಯಿರಿ.
•ಈ ರೀತಿಯ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಆಗ ನೀವು ಹಲವಾರು ರೀತಿಯ ಕಾಯಿಲೆಗಳನ್ನು ದೂರವಿಡಬಹುದು.

ಮೂರನೇ ಸಲಹೆ
ನೀವು ಬಳಸುವಂತಹ ಯಾವುದೇ ವೈಯಕ್ತಿಕ ವಸ್ತುಗಳು ಅದು ನಿಮ್ಮದಾಗಿಯೇ ಇರಲಿ ಮತ್ತು ಅದನ್ನು ಬೇರೆಯವರ ಜತೆಗೆ ಹಂಚಿಕೊಳ್ಳಲು ಹೋಗಬೇಡಿ. ಬೇರೆಯವರು ನಿಮ್ಮನ್ನು ತುಂಬಾ ಸ್ವಾರ್ಥಿ ಎಂದು ಭಾವಿಸಿದರೂ ಚಿಂತೆಯಿಲ್ಲ. ನಿಯಮವನ್ನು ಪಾಲಿಸದೆ ಇದ್ದರೆ ಆಗ ಕೆಲವೊಂದು ಮಾರಕ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುತ್ತದೆ.
ನಿಮ್ಮ ಸ್ನೇಹಿತರು ಅಥವಾ ಎಷ್ಟೇ ಆಪ್ತರಾಗಿದ್ದರೂ ಅವರೊಂದಿಗೆ ಲಿಪ್ ಸ್ಟಿಕ್ ಹಂಚಿಕೊಳ್ಳಬೇಡಿ. ಯಾಕೆಂದರೆ ತುಟಿಗಳಲ್ಲಿ ಹೆಚ್ಚಾಗಿ ಕೀಟಾಣುಗಳು ಇರುತ್ತದೆ. ಇದರಲ್ಲಿ ಕೆಲವು ಯಾವುದೇ ಪರಿಣಾಮ ಬೀರದು. ಇನ್ನು ಕೆಲವೊಂದು ತುಂಬಾ ಹಾನಿ ಉಂಟು ಮಾಡುವುದು. ಅದೇ ಲಿಪ್ ಸ್ಟಿಕ್ ನ್ನು ನೀವು ಕೂಡ ಬಳಸಿದರೆ ಆಗ ಹೇಗೆ ಆಗಬಹುದು ಎಂದು ನೀವೇ ಆಲೋಚನೆ ಮಾಡಿಕೊಳ್ಳಿ. ಇದರಿಂದ ನೀವು ಇದನ್ನು ಹಂಚಲು ಹೋಗಬೇಡಿ.

ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ
ರಸ್ತೆ ಬದಿಯಲ್ಲಿ ಕೆಲವೊಂದು ಆಹಾರವನ್ನು ಮಾರಾಟ ಮಾಡುತ್ತಿರುವ ವೇಳೆ ನಿಮ್ಮ ಬಾಯಲ್ಲಿ ನೀರು ಸುರಿದಿರಬಹುದು. ಆದರೆ ಇದು ನಮ್ಮನ್ನು ಸೆಳೆಯುತ್ತದೆ. ಆದರೆ ದೀರ್ಘಕಾಲದ ದೃಷ್ಟಿಯಿಂದ ನೋಡಿದರೆ ಇದು ನಮ್ಮಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಇದರಿಂದಾಗಿ ನೀವು ಮನೆಯಲ್ಲೇ ತಯಾರಿಸಿರುವಂತಹ ತುಂಬಾ ಸ್ವಚ್ಛವಾಗಿರುವ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ತಯಾರಿಸಿಟ್ಟಿರುವಂತಹ ಆಹಾರಗಳು ನಮ್ಮ ಜೀವನಶೈಲಿಗೆ ಅನುಗುಣವಾಗಿ ಲಭ್ಯವಿದೆ. ಆದರೆ ಇದು ಹೊಟ್ಟೆಯ ಸಮಸ್ಯೆಗಳನ್ನು ಉಂಟು ಮಾಡಬಹುದು. ರಸ್ತೆ ಬದಿಯ ಆಹಾರ ಸೇವನೆ ಮಾಡುವ ಮೊದಲು ನೀವು ಮತ್ತೊಂದು ಸಲ ಆಲೋಚನೆ ಮಾಡಿ. ಒಳ್ಳೆಯ ಸ್ವಚ್ಛತೆ ಮತ್ತು ಅದೇ ರೀತಿಯಾಗಿ ಲೈಂಗಿಕ ಜೀವನ ಪಾಲಿಸಿಕೊಂಡು ಹೋಗಬೇಕು. ರಾಸಾಯನಿಕಗಳನ್ನು ಕಡಿಮೆ ಬಳಸಬೇಕು ಮತ್ತು ಶುದ್ಧವಾದ ನೀರು ಕುಡಿಯಬೇಕು. ಇದು ತಜ್ಞರು ಹೇಳಿರುವಂತಹ ಕೆಲವೊಂದು ಸಲಹೆಗಳು. ಇದನ್ನು ನೀವು ತಪ್ಪದೆ ಪಾಲಿಸಿಕೊಂಡು ಹೋದರೆ ಆಗ ನಿಮ್ಮ ಆರೋಗ್ಯವು ತುಮಬಾ ಒಳ್ಳೆಯದಾಗಿ ಇರುತ್ತದೆ.



Click it and Unblock the Notifications