Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಸ್ತಮಾಗೆ ಚಿಕಿತ್ಸೆ ನೀಡದೆ ಇದ್ದರೆ ಸಾವೂ ಬರಬಹುದಂತೆ! ಇದರ ನಿಯಂತ್ರಣಕ್ಕೆ ಮನೆಮದ್ದುಗಳು ಇವೆ
ಅಸ್ತಮಾ ಎನ್ನುವುದು ಶ್ವಾಸಕೋಶದ ದೀರ್ಘಾವಧಿ ಉರಿಯೂತ ಮತ್ತು ಶ್ವಾಸನಾಳಗಳು ಕುಗ್ಗುವಂತಹ ಕಾಯಿಲೆ ಆಗಿದೆ. ಇದರಿಂದಾಗಿ ಉಬ್ಬಸ, ಎದೆ ಕಟ್ಟುವುದು, ಉಸಿರಾಡಲು ಕಷ್ಟವಾಗುವುದು ಮತ್ತು ಕೆಮ್ಮು ಬರುವುದು. ಈ ಪರಿಸ್ಥಿತಿಯು ಎಲ್ಲಾ ವಯಸ್ಸಿನವರಲ್ಲಿ ಕಂಡಬರಬಹುದು. ಆದರೆ ಇದು ಬಾಲ್ಯದಲ್ಲೇ ಕಂಡುಬರುವುದು. ಅಸ್ತಮಾವನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲ.
ಆದರೆ ಕೆಲವೊಂದು ಚಿಕಿತ್ಸೆ ಮತ್ತು ಔಷಧಿಯಿಂದ ನಿಯಂತ್ರಣದಲ್ಲಿ ಇಡಬಹುದು. ಕೆಲವೊಂದು ಸಲ ಅಸ್ತಮಾದ ಲಕ್ಷಣಗಳು ಲಘುವಾಗಿ ಇರುವುದು ಮತ್ತು ಸಣ್ಣ ಚಿಕಿತ್ಸೆ ಬಳಿಕ ಇದು ಅದಾಗಿಯೇ ಹೋಗುವುದು. ಆರಂಭದಲ್ಲಿಯೇ ಅಸ್ತಮಾಗೆ ಚಿಕಿತ್ಸೆ ನೀಡಬೇಕು ಮತ್ತು ಅದರ ಲಕ್ಷಣಗಳು ತೀವ್ರವಾದರೆ ಆಗ ಅಸ್ತಮಾದ ಆಘಾತ ಆಗಬಹುದು. ಇದಕ್ಕೆ ತುರ್ತು ಚಿಕಿತ್ಸೆ ಬೇಕಾಗುವುದು. ಅಸ್ತಮಾಗೆ ಚಿಕಿತ್ಸೆ ನೀಡದರೆ ಇದ್ದರೆ ಆಗುವ ಕೆಲವೊಂದು ಸಾಮಾನ್ಯ ಅಪಾಯಗಳು ಇಲ್ಲಿದೆ ನೋಡಿ...

ನಿದ್ರೆ ಕಳೆದುಕೊಳ್ಳಬಹುದು
ಅಸ್ತಮಾ ಇರುವಂತಹ ಜನರಲ್ಲಿ ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಪ್ರಮುಖವಾಗಿ ಕೆಮ್ಮು ಕಾಣಿಸಿಕೊಳ್ಳಬಹುದು. ಇದರಿಂದಾಗಿ ನಿದ್ರಾಹೀನತೆ ಉಂಟಾಗಬಹುದು. ನಿದ್ರಾಹೀನತೆಯಿಂದಾಗಿ ನಿಮಗೆ ಕಚೇರಿಯಲ್ಲಿ ಅಥವಾ ಶಾಲೆಯಲ್ಲಿ ಸರಿಯಾಗಿ ಕೆಲಸ ಮಾಡಲು ಅಥವಾ ಕಲಿಯಲು ಆಗದು. ಯಂತ್ರಗಳೊಂದಿಗೆ ಕೆಲಸ ಮಾಡುವ ವೇಳೆ ಮತ್ತು ವಾಹನ ಚಾಲನೆ ವೇಳೆ ಇದು ತುಂಬಾ ಅಪಾಯಕಾರಿ.

ದೈಹಿಕ ಚಟುವಟಿಕೆ
ಅಸ್ತಮಾದಿಂದಾಗಿ ಕೆಲವೊಂದು ಜನರಿಗೆ ವ್ಯಾಯಾಮ ಮತ್ತು ಕ್ರೀಡೆಯಲ್ಲಿ ಭಾಗಿಯಾಗಲು ಆಗದೆ ಇರಬಹುದು. ವ್ಯಾಯಾಮದ ಕೊರತೆಯಿಂದಾಗಿ ಕೆಲವೊಂದು ಆರೋಗ್ಯ ಸಮಸ್ಯೆಗಳಾಗಿರುವಂತಹ ಖಿನ್ನತೆ ಮತ್ತು ಮಾನಸಿಕ ಖಿನ್ನತೆ ಅಥವಾ ತೂಕ ಹೆಚ್ಚಳವಾಗ ಬಹುದು.

ಉತ್ಪಾದಕತ್ವತೆ
ಅಸ್ತಮಾ ಲಕ್ಷಣಗಳು ಪದೇ ಪದೇ ಕಾಡುವ ಕಾರಣದಿಂದಾಗಿ ಶಾಲೆ ಅಥವಾ ಕಚೇರಿಯಲ್ಲಿ ನಿಮ್ಮ ಹಾಜರಾತಿಯು ಕಡಿಮೆ ಆಗಬಹುದು. ಶಾಲೆಯಿಂದ ಮಕ್ಕಳು ರಜೆ ತೆಗೆದುಕೊಳ್ಳಲು ಅಸ್ತಮಾವು ಪ್ರಮುಖ ಕಾರಣವಾಗಿದೆ.

ವಾಯುಮಾರ್ಗ ಮರುರೂಪಗೊಳ್ಳುವುದು
ಕೆಲವೊಂದು ಜನರಲ್ಲಿ ಅಸ್ತಮಾವು ದೀರ್ಘಾವಧಿ ತನಕ ವಾಯುನಾಳದ ಉರಿಯೂತ ಉಂಟು ಮಾಡುವುದು. ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಶಾಶ್ವತವಾಗಿ ವಾಯುನಾಳದಲ್ಲಿ ಹಾನಿಯನ್ನು ಉಂಟು ಮಾಡಬಹುದು. ಇದರಿಂದಾಗಿ ವಾಯುನಾಳದ ಕೋಶಗಳು ಮತ್ತು ಅಂಗಾಂಶಗಳಲ್ಲಿ ಬದಲಾವಣೆ ಮಾಡಬಹುದು. ಈ ಬದಲಾವಣೆಯಿಂದಾಗಿ ಶ್ವಾಸಕೋಶವು ಸರಿಯಾಗಿ ಕಾರ್ಯ ಮಾಡದೆ ಇರಬಹದು ಮತ್ತು ಕೆಲವೊಂದು ಸಲ ದೀರ್ಘಕಾಲಿಕ ಕೆಮ್ಮಿಗೆ ಕಾರಣವಾಗಬಹುದು.

ಸಾವು
ತೀವ್ರವಾದ ಅಸ್ತಮಾ ಆಘಾತವು ವಾಯುನಾಳವನ್ನು ಕುಗ್ಗಿ ಸುವುದು. ಇದರಿಂದ ಶ್ವಾಸಕೋಶದ ವೈಫಲ್ಯಕ್ಕೆ ಕಾರಣವಾಗ ಬಹುದು ಮತ್ತು ಚಿಕಿತ್ಸೆ ನೀಡದೆ ಇದ್ದರೆ ಆಗ ಅದು ಸಾವನ್ನು ಉಂಟು ಮಾಡಬಹುದು. ಅಸ್ತಮಾವನ್ನು ನಿವಾರಿಸಲು ಅಥವಾ ನಿಯಂತ್ರಿಸಲು ಬಳಸಬಹುದಾದ ಗಿಡಮೂಲಿಕೆ ಹಾಗೂ ಆಯುರ್ವೇದದ ಔಷಧಿಗಳನ್ನು ಇಲ್ಲಿ ನೀಡಲಾಗಿದೆ. ಮುಂದೆ ಓದಿ

ಜೇನು
ನೈಸರ್ಗಿಕವಾಗಿ ಸಿಗುವಂತಹ ಜೇನಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಹಾಗೂ ಶಮನಕಾರಿ ಗುಣಗಳಿವೆ. ಅಸ್ತಮಾ ಇರುವವರಿಗೆ ಇದು ತುಂಬಾ ಲಾಭಕಾರಿ. ಇದು ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ ಮತ್ತು ಇದರಲ್ಲಿರುವ ಉರಿಯೂತ ಶಮನಕಾರಿ ಗುಣ ಉರಿಯೂತವನ್ನು ಕಡಿಮೆ ಮಾಡಿ ಉಬ್ಬಸವನ್ನು ತಗ್ಗಿಸುತ್ತದೆ.

ಅರಿಶಿನ
ಅರಿಶಿನವು ಹಲವಾರು ರೀತಿಯ ಸಣ್ಣ ರೋಗಗಳನ್ನು ಗುಣಪಡಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಅರಿಶಿನವು ಅಸ್ತಮಾ ನಿವಾರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಬೀಜಗಳನ್ನು ಸೇವಿಸಿ
ಬೀಜಗಳಲ್ಲಿ ಮೆಗ್ನಿಶಿಯಂ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದರಿಂದ ಇದು ಅಸ್ತಮಾ ರೋಗಿಗಳಿಗೆ ಪರಿಪೂರ್ಣ ಉಪಾಹಾರ ವಾಗಿದೆ. ಮೆಗ್ನಿಶಿಯಂ ಉಬ್ಬಸವನ್ನು ಕಡಿಮೆ ಮಾಡುವುದು. ವಿಟಮಿನ್ ಇ ಪ್ರತಿರೋಧಕ ಶಕ್ತಿ ಹೆಚ್ಚಳ ಮಾಡುವುದು. ಉರಿಯೂತ ಮತ್ತು ಕೋಶಕ್ಕೆ ಹಾನಿ ಉಂಟುಮಾಡುವಂತಹ ಫ್ರೀ ರ್ಯಾಡಿಕಲ್ ನ್ನು ಇದು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದು.

ದ್ವಿದಳ ಧಾನ್ಯಗಳು
ದ್ವಿದಳ ಧಾನ್ಯಗಳಲ್ಲಿ ಕಡಿಮೆ ಕ್ಯಾಲರಿ ಮತ್ತು ಕೊಬ್ಬು ಕಡಿಮೆ ಇರುವ ಕಾರಣದಿಂದ ಇದು ಅಸ್ತಮಾದ ರೋಗಿಗಳಿಗೆ ತುಂಬಾ ಪರಿಣಾಮಕಾರಿ ಆಹಾರವಾಗಿದೆ. ದ್ವಿದಳ ಧಾನ್ಯಗಳಲ್ಲಿ ಇರುವಂತಹ ಉನ್ನತ ಮಟ್ಟ ನಾರಿನಾಂಶವು ದೇಹದಲ್ಲಿರುವ ಮೇದಸ್ಸು ಮತ್ತು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು. ಇದರಿಂದ ಬಾಹ್ಯ ವಸ್ತುಗಳು ಬಂದು ಶ್ವಾಸಕೋಶದ ಸೋಂಕು ಉಂಟು ಮಾಡುವುದನ್ನು ತಡೆಯುವುದು. ದ್ವಿದಳ ಧಾನ್ಯದಲ್ಲಿ ಇರುವಂತಹ ಕೊಬ್ಬು ಕರಗುವ ಕಣಗಳು ಅಸ್ತಮಾದಿಂದ ಉಂಟಾಗುವ ಶೀತ ಮತ್ತು ಜ್ವರವನ್ನು ತಡೆಯುವುದು.

ಮಾವಿನ ಎಲೆಗಳು
ಕೆಲವು ಎಳೆಯ ಮಾವಿನ ಎಲೆಗಳನ್ನು ಕೊಂಚ ಜಜ್ಜಿ ಮುಳುಗುವಷ್ಟು ನೀರಿನಲ್ಲಿ ಕುದಿಸಿ. ಬಳಿಕ ಈ ನೀರನ್ನು ಸೋಸಿ ತಣಿಸಿ ಸಂಗ್ರಹಿಸಿ. ಈ ನೀರನ್ನು ಸೋಂಕಿರುವ ಸಮಯದಲ್ಲಿ ಸೇವಿಸುತ್ತಾ ಬನ್ನಿ. ಇನ್ನೊಂದು ವಿಧಾನದಲ್ಲಿ ಎಳೆಯ ಮಾವಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ಬಾಟಲಿಯಲ್ಲಿ ಸಂಗ್ರಹಿಸಿ. ಅನಾರೋಗ್ಯದ ಸಮಯದಲ್ಲಿ ಈ ಪುಡಿಯನ್ನು ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಸೇರಿಸಿ ಕಲಕಿ ಕುಡಿಯಿರಿ. ಇನ್ನೂ ಉತ್ತಮ ವಿಧಾನವೆಂದರೆ ಎಳೆಯ ಎಲೆಗಳನ್ನು ಹಸಿಯಾಗಿ ಜಗಿದು, ಕೊಂಚ ಒಗರಾಗಿದ್ದರೂ ಸಹಿಸಿ ನುಂಗಿಬಿಡಿ.

ಮೂಲಂಗಿ-ಜೇನು-ನಿಂಬೆರಸ
ಒಂದು ಕಪ್ ತುರಿದ ಮೂಲಂಗಿ, ಒಂದು ಚಮಚ ಜೇನು ಮತ್ತು ಒಂದು ಚಮಚ ನಿಂಬೆರಸ ಸೇರಿಸಿ 20 ನಿಮಿಷ ಕಾಯಿಸಿ ಇದನ್ನು ದಿನವೂ ಒಂದು ಚಮಚ ಸೇವಿಸುತ್ತಾ ಬಂದರೆ ಪರಿಣಾಮಕಾರಿಯಾಗಿ ಅಸ್ತಮಾ ನಿವಾರಿಸುತ್ತೆ.

ಮೆಂತೆ ಕಾಳು
ಮೆಂತೆ ಕಾಳಿನಲ್ಲಿ ಅಲರ್ಜಿ ನಿವಾರಿಸಬಲ್ಲ ಶಕ್ತಿಯಿದೆ. ನೀರಿನೊಂದಿಗೆ ಮಂತೆ ಕಾಳು ಬೇಯಿಸಿ ಅದಕ್ಕೆ ಒಂದು ಚಮಚ ಜೇನು ಮತ್ತು ಶುಂಠಿ ರಸದೊಂದಿಗೆ ಬೆರೆಸಿ ದಿನಕ್ಕೊಮ್ಮೆ ಸೇವಿಸಿದರೆ ಅಸ್ತಮಾ ಕಡಿಮೆಮಾಡಬಹುದು.

ಅರಿಶಿನ
ಅರಿಶಿನವು ಹಲವಾರು ರೀತಿಯ ಸಣ್ಣ ರೋಗಗಳನ್ನು ಗುಣಪಡಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಅರಿಶಿನವು ಅಸ್ತಮಾ ನಿವಾರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.ಅರಿಶಿನದಲ್ಲಿರುವ ಕರ್ಕ್ಯುಮಿನ್ ಎನ್ನುವ ಉರಿಯೂತ ಶಮನಕಾರಿ ಗುಣವು ಶ್ವಾಸಕೋಶದ ಉರಿಯೂತ ವನ್ನು ನಿಯಂತ್ರಣದಲ್ಲಿಡುತ್ತದೆ. ಪ್ರತೀ ದಿನ ಒಂದು ಚಮಚ ಅರಿಶಿನ ಸೇವನೆ ಮಾಡಿದರೆ ಅಸ್ತಮಾ ನಿವಾರಣೆ ಮಾಡಬಹುದು. ಹಾಲಿನೊಂದಿಗೆ ಅರಿಶಿನ ಸೇವನೆ ಮಾಡಬೇಡಿ. ಇದರಿಂದ ಲೋಳೆ ಉಂಟಾಗಿ ಅಸ್ತಮಾದ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಬಹುದು.



Click it and Unblock the Notifications