Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಾಂಟೆಕ್ಟ್ ಲೆನ್ಸ್ ಧರಿಸುವುದರಿಂದ ಆಗುವ ಕೆಲವು ಅಡ್ಡ ಪರಿಣಾಮಗಳು
ಕಾಂಟೆಕ್ಟ್ ಲೆನ್ಸ್ ಎನ್ನುವುದು ಕನ್ನಡಕ ಧರಿಸಲು ಸ್ವಲ್ಪ ಕಿರಿಕಿರಿ ಆಗುವ ಜನರು ಹೆಚ್ಚಾಗಿ ಬಳಸಿಕೊಳ್ಳುವರು. ಇದರಿಂದ ನಿಮಗೆ ಯಾವುದೇ ದೃಷ್ಟಿ ದೋಷ ಇದೆ ಎಂದು ತಿಳಿಯಲು ಸಾಧ್ಯವಾಗದು. ಹೀಗಾಗಿ ಹಿಂದಿನ ದಿನಗಳಲ್ಲಿ ಹೆಚ್ಚಿನ ಜನರು ಕಾಂಟೆಕ್ಟ್ ಲೆನ್ಸ್ ನ್ನು ಬಳಸುವರು. ಕಾಂಟೆಕ್ಟ್ ಲೆನ್ಸ್ ಎನ್ನುವುದು ಒಂದು ವೈದ್ಯಕೀಯ ಸಾಧನವಾಗಿದ್ದು, ಅಮೆರಿಕಾ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್(ಎಫ್ ಡಿಎ) ಇದನ್ನು ನಿಯಂತ್ರಿಸುವುದು.
ಹೆಚ್ಚಿನ ಜನರು ಕನ್ನಡಕ ಬದಲಿಗೆ ಕಾಂಟೆಕ್ಟ್ ಲೆನ್ಸ್ ನ್ನು ಬಳಸುವರು. ಯಾಕೆಂದರೆ ಇದರಿಂದ ಹಲವಾರು ರೀತಿಯ ಲಾಭಗಳು ಇವೆ. ಇದು ಕಣ್ಣಿಗೆ ಹೆಚ್ಚಿನ ದೃಷ್ಟಿ ನೀಡುವಂತೆ ಹೊಂದಿಕೊಳ್ಳುವುದು. ಇದು ಸರಿಯಾಗಿ ನಿಮ್ಮ ಕಣ್ಣುಗಳಲ್ಲಿ ಕುಳಿತುಕೊಳ್ಳುವ ಕಾರಣದಿಂದಾಗಿ ಇದು ಒಡೆದುಹೋಗುವ ಅಥವಾ ಬೇರೆ ಯಾವುದೇ ರೀತಿಯ ತೊಂದರೆಯು ಆಗಲ್ಲ. ಅದಾಗ್ಯೂ, ಕಾಂಟೆಕ್ಟ್ ಲೆನ್ಸ್ ನಿಂದ ಕೆಲವೊಂದು ಅಡ್ಡಪರಿಣಾಮಗಳು ಕೂಡ ಇದೆ. ಇದನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಕಾಂಟೆಕ್ಟ್ ಲೆನ್ಸ್ ನ ಅಡ್ಡಪರಿಣಾಗಳು

ಒಣ ಕಣ್ಣುಗಳು
ಕಾಂಟೆಕ್ಟ್ ಲೆನ್ಸ್ ಬಳಸುವಂತಹ ಹೆಚ್ಚಿನ ಜನರಿಗೆ ಒಣ ಕಣ್ಣಿನ ಸಮಸ್ಯೆಯು ಕಾಡುವುದು. ಕಾಂಟೆಕ್ಟ್ ಲೆನ್ಸ್ ಧರಿಸುವ ಕಾರಣದಿಂದಾಗಿ ಕಣ್ಣೀರಿನ ಪ್ರಮಾಣ ಮತ್ತು ಕಾರ್ನಿಯಾಗೆ ಆಕ್ಸಿಜನ್ ಮಟ್ಟವು ಕಡಿಮೆ ಆಗುವುದು. ಇದರಿಂದಾಗಿ ತುರಿಕೆ ಕಾಣಿಸುವುದು ಮತ್ತು ನೋವು ಮತ್ತು ಕಿರಿಕಿರಿ ಉಂಟಾಗಬಹುದು.
ಕಾರ್ನಿಯಲ್ ಸವೆತ
ಕಾರ್ನಿಯಾದಲ್ಲಿ ಯಾವುದೇ ರೀತಿಯ ಉಜ್ಜುವಿಕೆ ಉಂಟಾದ ವೇಳೆ ಕಾರ್ನಿಯಾದ ಸವತೆ ಉಂಟಾಗುವುದು. ಕಾಂಟೆಕ್ಟ್ ಲೆನ್ಸ್ ಸರಿಯಾಗಿ ಕುಳಿತುಕೊಳ್ಳದೆ ಇರುವುದು ಅಥವಾ ನಿಮ್ಮ ಕಣ್ಣುಗಲು ಅತಿಯಾಗಿ ಒಣಗಿರುವುದು ಇದಕ್ಕೆ ಕಾರಣವಾಗಿರಬಹುದು. ಕಾಂಟೆಕ್ಟ್ ಲೆನ್ಸ್ ನ ಜತೆಗೆ ನೀವು ಮಲಗಿದರೆ ಆಗ ಕಾರ್ನಿಯಾ ಸವೆತದ ಸಾಧ್ಯತೆಯು ಹೆಚ್ಚಾಗುವುದು. ಲೆನ್ಸ್ ಧೂಲು ಮತ್ತು ಬ್ಯಾಕ್ಟೀರಿಯಾವನ್ನು ಆಕರ್ಷಿಸುತ್ತದೆ ಮತ್ತು ಇದು ಕಾರ್ನಿಯಾದಲ್ಲಿ ಉಜ್ಜುವಿಕೆ ಉಂಟು ಮಾಡುವುದು. ಇದರಿಂದಾಗಿ ಕಣ್ಣಿನ ಸೋಂಕು ಕಾಣಿಸಿಕೊಳ್ಳಬಹುದು.
ಕಣ್ಣಿಗೆ ಆಮ್ಲಜನಕ ಹೋಗಲು ಸಮಸ್ಯೆಯಾಗುವುದು
ಕಾರ್ನಿಯಾಗೆ ಯಾವುದೇ ರೀತಿಯಿಂದಲೂ ರಕ್ತನಾಳಗಳು ಇಲ್ಲ. ಇದರ ಅಂಚುಗಳಿಗೆ ಮಾತ್ರ ಇದೆ. ಸರಿಯಾದ ಆಮ್ಲಜನಕವು ಇಲ್ಲದೆ ಇದ್ದರೆ ಕಾರ್ನಿಯಾದ ಚಯಾಪಚಯದ ಮೇಲೆ ಒತ್ತಡ ಬೀಳುವುದು ಮತ್ತು ಲ್ಯಾಕ್ಟಿಕ್ ಆಮ್ಲವು ಜಮೆಯಾಗಿ ಅದರಿಂದ ಒಸ್ಮೊಟಿಕ್ ಉಂಟಾಗುವುದು ಮತ್ತು ಕಾರ್ನಿಯಾಗೆ ತುಂಬಾ ವೇಗವಾಗಿ ನೀರು ಹೋಗುವಂತೆ ಮಾಡುವುದು. ಇದರಿಂದ ಕಾರ್ನಿಯಾದಲ್ಲಿ ಊತ ಉಂಟಾಗುವುದು ಅಥವಾ ಒಡೆಮಾ ಬರಬಹುದು. ಕಾರ್ನಿಯಾಗೆ ಆಮ್ಲಜನಕವು ಸಿಗುವ ಪ್ರಮಾಣವು ಕಾಂಟೆಕ್ಟ್ ಲೆನ್ಸ್ ಗೆ ಬಳಸುವಂತಹ ಸಾಮಗ್ರಿ ಮತ್ತು ಅದರ ದಪ್ಪದ ಮೇಲೆ ಅವಲಂಬಿತವಾಗಿದೆ.
ಕಾರ್ನಿಯಾದ ಅಲ್ಸರ್
ಕಾಂಟೆಕ್ಟ್ ಲೆನ್ಸ್ ನ ಮತ್ತೊಂದು ಅಡ್ಡಪರಿಣಾಮವೆಂದರ ಅದು ಕಾರ್ನಿಯಾದ ಅಲ್ಸರ್. ಕಾಂಟೆಕ್ಟ್ ಲೆನ್ಸ್ ನ ಮೇಲ್ಪದರಲ್ಲಿ ಬ್ಯಾಕ್ಟೀರಿಯಾವು ನಿರ್ಮಾಣವಾಗುವ ಪರಿಣಾಮವಾಗಿ ಈ ಅಲ್ಸರ್ ಕಾಣಿಸಿಕೊಳ್ಳುವುದು. ಲೆನ್ಸ್ ನ ಮೇಲ್ಮೈಯು ತುಂಬಾ ಮೃಧವಾಗಿರುವ ಕಾರಣದಿಂದಾಗಿ ಬ್ಯಾಕ್ಟೀರಿಯಾ ಬೇಗನೆ ಹರಡಬಹುದು. ಇದರಿಂದಾಗಿ ಬ್ಯಾಕ್ಟೀರಿಯಾದ ಕಾರ್ನಿಯಾಗೆ ಕೂಡ ತಲುಪುವುದು.
ಕೆಂಪು ಕಣ್ಣು
ದೀರ್ಘಕಾಲದ ತನಕ, ರಾತ್ರಿಯಿಡಿ ನೀವು ಕಾಂಟೆಕ್ಟ್ ಲೆನ್ಸ್ ಧರಿಸುತ್ತಲೇ ಇದ್ದರೆ ಆಗ ಕೆಂಪು ಕಣ್ಣು ಕಾಣಿಸುವುದು. ನೀವು ಹೀಗೆ ಮಾಡುವ ಪರಿಣಾಮವಾಗಿ ಸೂಕ್ಷ್ಮಾಣು ಜೀವಿಗಳಿಗೆ ಬೆಳೆಯಲು ಇದು ಅವಕಾಶ ಮಾಡಿಕೊಡುವುದು. ವಿರುಪಗೊಂಡಿರುವ ಲೆನ್ಸ್ ಇದಕ್ಕೆ ಮತ್ತೊಂದು ಕಾರಣವಾಗಿದೆ. ಇದರಿಂದಾಗಿ ಕಿರಿಕಿರಿ ಉಂಟಾಗಬಹುದು ಮತ್ತು ಸರಿಯಾಗಿ ಲೆನ್ಸ್ ಕುಳಿತುಕೊಳ್ಳದೆ ಇರಬಹುದು.
ಮೇಲ್ಮೈಯ ಕೆರಟೈಟಿಸ್
ಮೇಲ್ಮೈಯ ಕೆರಟೈಟಿಸ್ ಎನ್ನುವುದು ಕಾರ್ನಿಯಾದ ಹೊರಪದರದ ಕಿರಿಕಿರಿಯ ಸಮಸ್ಯೆಯಾಗಿದೆ. ಇದು ಲೆನ್ಸ್ ನ್ನು ಸ್ವಚ್ಛಗೊಳಿಸಲು ಬಳಸುವ ಸೊಲ್ಯೂಷನ್, ಅಲರ್ಜಿ, ಸೋಂಕು ಮತ್ತು ಯಾಂತ್ರಿಕ ಕಿರಿಕಿರಿಯಿಂದ ಬರಬಹುದು.
ಕಾರ್ನಿಯಲ್ ಮೋಲ್ಡಿಂಗ್
ಕಾಂಟೆಕ್ಟ್ ಲೆನ್ಸ್ ಧರಿಸುವ ಕಾರಣದಿಂದಾಗಿ ಕಾರ್ನಿಯಾದ ಗಾತ್ರದಲ್ಲಿ ಉಂಟಾಗುವಂತಹ ಸಾಮಾನ್ಯ ಬದಲಾವಣೆ ಆಗಿದೆ. ಆಮ್ಲಜನಕ ಸಿಗದೆ ಇರುವ ಕಾರಣ ಮತ್ತು ಲೆನ್ಸ್ ನ ಕೆಳಗಡೆ ಗುಳ್ಳೆಗಳು ನಿರ್ಮಾಣವಾಗಿರುವ ಪರಿಣಾಮವಾಗಿ ಇದು ಬರುವುದು. ವಿಮಾನವು ತುಂಬಾ ಎತ್ತರದಲ್ಲಿ ಹಾರುತ್ತಿರುವ ವೆಳೆ ನೀವು ಇಂತಹ ಪರಿಸ್ಥಿತಿಯನ್ನು ಕಾಣಬಹುದಾಗಿದೆ.
ದ್ರವ ತುಂಬುವಿಕೆ
ಕಾರ್ನಿಯಾದ ಮಧ್ಯ ಭಾಗದಲ್ಲಿ ಇರುವಂತಹ ಕಂದು ಬಣ್ಣದ ಸ್ಥಳವು ಇದಾಗಿದೆ. ದೀರ್ಘ ಕಾಲದ ತನಕ ನೀವು ಲೆನ್ಸ್ ಧರಿಸಿದರೆ ಹೀಗೆ ಆಗುವುದು. ಲೆನ್ಸ್ ಸರಿಯಾಗಿ ಧರಿಸದೆ ಇರುವುದು ಅಥವಾ ವಿವಿಧ ರೀತಿಯ ಲೆನ್ಸ್ ಧರಿಸುವುದು ಮತ್ತು ಲೆನ್ಸ್ ನ ಸರಿಯಾದ ಸ್ವಚ್ಛತೆ ಮಾಡದೆ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ದೈತ್ಯ ಪ್ಯಾಪಿಲ್ಲರಿ ಕಾಂಜಂಕ್ಟಿವಿಟಿಸ್
ತುಂಬಾ ಮೃಧುವಾಗಿರುವಂತಹ ಕಾಂಟೆಕ್ಟ್ ಲೆನ್ಸ್ ನ್ನು ಧರಿಸುವ ಕಾರಣದಿಂದಾಗಿ ದೈತ್ಯ ಪ್ಯಾಪಿಲ್ಲರಿ ಕಾಂಜಂಕ್ಟಿವಿಟಿಸ್ ಬರುವುದು. ಇದನ್ನು ಅತಿಯಾಗಿ ಬಳಸುವ ಕಾರಣದಿಂದಾಗಿ ಇದು ಬರುವುದು. ಇದರಿಂದಾಗಿ ಕನ್ಣಿನಲ್ಲಿ ಕೀವು ಬರುವುದು ಹೆಚ್ಚಾಗುವುದು ಮತ್ತು ದೃಷ್ಟಿ ಕೂಡ ಮಂದವಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


