Latest Updates
-
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ
ವೀರ್ಯ ಕಂದು ಬಣ್ಣದಂತೆ ಆಗಲು ಕಾರಣವೇನು? ಇದರ ಅರ್ಥವೇನು?
ಪುರುಷರ ವೀರ್ಯ ಬಣ್ಣವು ಬಿಳಿಬೂದು ಬಣ್ಣದಲ್ಲಿ ಇರುವುದು. ಕೆಲವೊಂದು ಸಂದರ್ಭದಲ್ಲಿ ಇದರ ಬಣ್ಣವು ಬದಲಾಗುವುದು. ವೀರ್ಯದ ಬಣ್ಣವು ಹಠಾತ್ ಆಗಿ ಅಥವಾ ಅನಿರೀಕ್ಷಿತವಾಗಿ ಹಳದಿ, ಕೆಂಪು, ಕಂದು ಅಥವಾ ಹಸಿರು ಬಣ್ಣಕ್ಕೆ ತಿರುಗಿದರೆ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಾಮಾನ್ಯವಾಗಿ ವೀರ್ಯದ ಬಣ್ಣ ಬದಲಾವಣೆಯಾಗುತ್ತದೆ.ಅದರರಲ್ಲೂ ವೀರ್ಯವು ಕಂದು ಬಣ್ಣಕ್ಕೆ ತಿರುಗಿದರೆ ಆಗ ವೀರ್ಯದಲ್ಲಿ ರಕ್ತವು ಮಿಶ್ರಣವಾಗಿದೆ ಎಂದು ಹೇಳಬಹುದು. ಇದು ತುಂಬಾ ಎಚ್ಚರಿಕೆಯ ಕರೆಗಂಟೆಯಾಗಿದೆ. ಅದಾಗ್ಯೂ, ಇದಕ್ಕೆ ಚಿಕಿತ್ಸೆ ಇದೆ. ಸರಿಯಾದ ಚಿಕಿತ್ಸೆ ಮಾಡುವ ಮೊದಲು ನೀವು ಇದಕ್ಕೆ ಕಾರಣವೇನೆಂದು ತಿಳಿದುಕೊಂಡರೆ ತುಂಬಾ ಒಳ್ಳೆಯದು.

ಕಂದು ವೀರ್ಯಕ್ಕೆ ಕಾರಣಗಳು ಏನು?
ವೀರ್ಯವು ಕಂದು ಬಣ್ಣಕ್ಕೆ ತಿರುಗಲು ಕಾರಣವೇನು? ಹೆಮಾಟೋಸ್ಪೆರ್ಮಿಯಾ ಅಥವಾ ಹಲವಾರು ಕಾರಣಗಳಿಂದಾಗಿ ವೀರ್ಯದಲ್ಲಿ ರಕ್ತದ ಅಂಶವು ಕಾಣಿಸಿಕೊಳ್ಳುವುದು. ಈ ಕೆಳಗೆ ಅದಕ್ಕೆ ಕೆಲವೊಂದು ಸಾಮಾನ್ಯ ಕಾರಣಗಳನ್ನು ನೀಡಲಾಗಿದೆ.

ಸೋಂಕು
ಕಡು ಕಂದು ಬಣ್ಣದ ವೀರ್ಯಕ್ಕೆ ಪ್ರಮುಖ ಕಾರಣವೆಂದರೆ ಅದು ಸೋಂಕು. ಕೆಲವೊಂದು ರೀತಿಯ ಸೂಕ್ಷ್ಮಾಣುಜೀವಿಗಳಾಗಿರುವಂತಹ ಪರಾವಲಂಬಿಗಳು, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಮತ್ತು ವೈರಸ್ ನಿಂದಾಗಿ ಇದು ಬರಬಹುದು. ಈ ಸೂಕ್ಷ್ಮಾಣು ಜೀವಿಗಳು ಪುರುಷನ ಸಂತಾನೋತ್ಪತ್ತಿ ವ್ಯವಸ್ಥೆ ಮೇಲೆ ವಿವಿಧ ರೀತಿಯಲ್ಲಿ ದಾಳಿ ಮಾಡಬಹುದು. ಇದರಲ್ಲಿ ಒಂದು ಮುಖ್ಯವಾಗಿ ಲೈಂಗಿಕ ಕ್ರಿಯೆ ಮೂಲಕವಾಗಿ ಇದು ಹೋಗಬಹುದು. ಕಂದು ಬಣ್ಣದ ವೀರ್ಯವು ಕೆಲವೊಂದು ರೀತಿಯ ಲೈಂಗಿಕ ರೋಗಗಳಾಗಿರುವಂತಹ ಗೊನೊರಿಯಾ, ಕ್ಲಮೈಡಿಯಾ ಮತ್ತು ಹಾರ್ಪಿಸ್ ನಿಂದ ಬರಬಹುದು.

ವೈದ್ಯಕೀಯ ಕಾರ್ಯವಿಧಾನ ಮತ್ತು ಗಾಯಾಳು ಸಮಸ್ಯೆ
ವೈದ್ಯಕೀಯ ಶಸ್ತ್ರಚಿಕಿತ್ಸೆಯಾಗಿರುವಂತಹ ಪ್ರೊಸ್ಟೇಟ್ ಬಯಾಸ್ಪಿ, ರೇಡಿಯೋಥೆರಪಿ, ಯುರೊಲಾಜಿಕಲ್ ಕಾರ್ಯವಿಧಾನ ಮತ್ತು ಸಂತಾನಹರಣ ಚಿಕಿತ್ಸೆಯು ಪ್ರಮುಖವಾಗಿ ಹೆಮಟೊಸ್ಪರ್ಮಿಯಾ ಉಂಟು ಮಾಡುವುದು. ವೃಷಣ ಅಥವಾ ಶಿಶ್ನಗಳಿಗೆ ಆಗುವಂತಹ ಗಾಯಾಳು ಸಮಸ್ಯೆಯಿಂದಲೂ ವೀರ್ಯದ ಬಣ್ಣವು ಕಂದು ಬಣ್ಣಕ್ಕೆ ತಿರುಗಬಹುದು. ಶ್ರೋಣಿಯ ಗಾಯ, ಗಡಸು ಸೆಕ್ಸ್ ಮತ್ತು ಅತಿಯಾಗಿ ಹಸ್ತಮೈಥುನ ಕೂಡ ವೀರ್ಯದ ಬಣ್ಣ ಕೆಡಿಸಬಹುದು.

ಅಡಚಣೆ
ನಾಳಗಳಿಗೆ ಅಡ್ಡಿಯಾದಾಗ ಈ ಭಾಗದಲ್ಲಿ ಇರುವಂತಹ ರಕ್ತನಾಳಗಳು ಹಿಗ್ಗುವುದು ಮತ್ತು ಇದರಿಂದ ರಕ್ತವು ಮೂಲದ್ರವದಲ್ಲಿ ಸೇರಿಕೊಳ್ಳುವುದು. ಪ್ರಾಸ್ಟಟಿಕ್ ಹೈಪರ್ಪ್ಲಾಸಿಯಾ(ಬಿಪಿಎಚ್) ಇನ್ನೊಂದು ಕಾರಣವಾಗಿದೆ. ಈ ಪರಿಸ್ಥಿತಿಯಲ್ಲಿ ಹಿಗ್ಗಿಕೊಂಡಿರುವ ಪ್ರೊಸ್ಟೇಟ್ ಮೂತ್ರನಾಳದ ಮೇಲೆ ಪರಿಣಾಮ ಬೀರುವುದು.

ನಾಳೀಯ ತೊಂದರೆಗಳು
ಸಂತಾನೋತ್ಪತ್ತಿ ವ್ಯವಸ್ಥೆಯ ಸುತ್ತಲು ರಕ್ತನಾಳಗಳು ಸೇರಿಕೊಂಡಿರುವುದು. ಹಲವಾರು ಕಾರಣಗಳಿಂದಾಗಿ ಇದಕ್ಕೆ ಹಾನಿಯಾಗಿರಬಹುದು ಅಥವಾ ಹಾನಿಯಾಗಬಹುದು. ಈ ಪರಿಸ್ಥಿತಿಯನ್ನು ಹೆಮಟೊಸ್ಪರ್ಮಿಯಾ ಹಾನಿಯಾಗುವುದು.

ಕೆಲವು ವೈದ್ಯಕೀಯ ಕಾರಣಗಳು
ಕೆಲವೊಂದು ವೈದ್ಯಕೀಯ ಕಾರಣಗಳಿಂದಲೂ ವೀರ್ಯದ ಬಣ್ಣವು ಕಂದು ಕಣ್ಣಕ್ಕೆ ತಿರುಗಬಹುದು. ರಕ್ತದೊತ್ತಡ, ರಕ್ತಕ್ಯಾನ್ಸರ್, ಯಕೃತ್ತು ರೋಗಗಳು, ಮತ್ತು ಎಚ್ಐವಿಯಿಂದ ವೀರ್ಯವು ಕಂದುಬಣ್ಣಕ್ಕೆ ತಿರುಗುವುದು.

ವೀರ್ಯದ ಬಣ್ಣದ ಅರ್ಥವೇನು?
ವೀರ್ಯದ ಬಣ್ಣವು ಪುರುಷನ ಆರೋಗ್ಯದ ಪ್ರಮುಖ ಸೂಚಕವಾಗಿದೆ. ಬಣ್ಣವಿರುವಂತಹ ವೀರ್ಯವು ಏನಾದರೂ ಸಮಸ್ಯೆ ಇದೆ ಎನ್ನುವುದನ್ನು ಸೂಚಿಸುವುದು. ಈ ಕೆಳಗೆ ಸಾಮಾನ್ಯ ವೀರ್ಯದ ಬಣ್ಣವನ್ನು ಮತ್ತು ಅದರ ಅರ್ಥವನ್ನು ನೀಡಲಾಗಿದೆ.

ಬಿಳಿ ವೀರ್ಯ
ಬಿಳಿ, ಮೋಡದ ಬಣ್ಣ ಮತ್ತು ಸ್ನಿಗ್ದತೆ ವೀರ್ಯವು ಒಳ್ಳೆಯ ಆರೋಗ್ಯವನ್ನು ಸೂಚಿಸುವುದು. 30 ನಿಮಿಷಗಳ ಬಳಿಕ ಇದು ಸಾಮಾನ್ಯವಾಗಿ ಕರಗುವುದು. ಇದರಲ್ಲಿ ಇರುವಂತಹ ಫ್ರಕ್ಟೋಸ್ ಅಂಶದಿಂದಾಗಿ ಇದು ಸಿಹಿಯಾಗಿರುವುದು. ನಿಮ್ಮ ಸಂಗಾತಿಗೆ ಬೇರೆ ಯಾವುದೇ ರೀತಿಯ ರುಚಿಯು ಕಂಡುಬಂದಿದ್ದರೆ ಆಗ ನೀವು ಅತಿಯಾಗಿ ನೀರು ಕುಡಿಯುವುದು ಮತ್ತು ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವಿಸಿದರೆ ಅದರಿಂದ ಸಮಸ್ಯೆಯು ಬಗೆಹರಿಯುವುದು.

ಹಳದಿ ವೀರ್ಯ
ಹೆಚ್ಚಿನ ಸಂದರ್ಭಗಳಲ್ಲಿ ಹಳದಿ ವೀರ್ಯವು ಸಾಮಾನ್ಯವಾಗಿರುವುದು. ಪುರುಷರಿಗೆ ವಯಸ್ಸಾಗುತ್ತಾ ಹೋದಂತೆ ಮೂಲ ದ್ರವವು ತನ್ನ ಬಣ್ಣ ಕಳೆದುಕೊಳ್ಳುವುದು. ದೀರ್ಘ ಕಾಲದಿಂದ ವೀರ್ಯಸ್ಖಲನ ಮಾಡದೆ ಇರುವಂತಹ ಪುರುಷರಲ್ಲಿ ಹಳದಿ ಬಣ್ಣದ ವೀರ್ಯವು ಕಂಡುಬರಬಹುದು. ಮೂಲದ್ರವದಲ್ಲಿ ಮೂತ್ರವು ಸೇರಿಕೊಂಡಿದ್ದರೆ ಆಗ ವೀರ್ಯವು ಹಳದಿ ಬಣ್ಣಕ್ಕೆ ತಿರುಗಬಹುದು. ಇದರಿಂದ ನೀವು ಲೈಂಗಿಕ ಕ್ರಿಯೆ ಮೊದಲು ಮೂತ್ರ ವಿಸರ್ಜನೆ ಮಾಡುವುದು ಮುಖ್ಯ.

ಕೆಂಪು ಅಥವಾ ಕಂದು ಬಣ್ಣದ ವೀರ್ಯ
ಈಗಾಗಲೇ ನಾವು ಹೇಳಿರುವಂತೆ ಕೆಂಪು ಅಥವಾ ಕಂದು ಬಣ್ಣದ ವೀರ್ಯವು ವಿವಿಧ ಕಾರಣಗಳಿಂದಾಗಿ ವೀರ್ಯದಲ್ಲಿ ರಕ್ತವು ಸೇರಿರುವ ಕಾರಣವಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಇದು ಚಿಕಿತ್ಸೆ ಇಲ್ಲದೆ ಮುಂದುವರಿಯುವುದು. ಮೂತ್ರವಿಸರ್ಜನೆ ವೇಳೆ ಅಥವಾ ಸ್ಖಲನದ ವೇಳೆ ನೋವು, ಜ್ವರ, ಹೃದಯಬಡಿತ ಹೆಚ್ಚಾಗುವುದು ಮತ್ತು ರಕ್ತದೊತ್ತಡ ಅಧಿಕವಾಗುವ ಸಮಸ್ಯೆ ಕಾಣಿಸಿಕೊಂಡರೆ ಆಗ ತಕ್ಷಣವೇ ನೀವು ಹೋಗಿ ವೈದ್ಯಕೀಯ ನೆರವು ಪಡೆಯುವುದು ಒಳ್ಳೆಯದು.

ವೀರ್ಯದಲ್ಲಿ ರಕ್ತ ಬರುತ್ತಿದ್ದರೆ ಇದನ್ನು ಪತ್ತೆ ಹಚ್ಚುವುದು ಹೇಗೆ?
ಇತ್ತೀಚಿನ ಲೈಂಗಿಕ ಚಟುವಟಿಕೆಗಳ ಸಹಿತ ವೈದ್ಯರು ರೋಗಿಯ ವೈದ್ಯಕೀಯ ಇತಿಹಾಸವನ್ನು ಕೇಳುವರು. ಯಾವುದೇ ಊತ ಅಥವಾ ಗಡ್ಡೆ ಇದೆಯಾ ಎಂದು ತಿಳಿಯಲು ವೈದ್ಯರು ಶಿಶ್ನವನ್ನು ಪರೀಕ್ಷೆ ಮಾಡುವರು. ಗುದನಾಳದಲ್ಲಿ ಯಾವುದೇ ರೀತಿಯ ಊತ ಇದೆಯಾ ಎಂದು ಪರೀಕ್ಷೆ ಮಾಡಲಾಗುವುದು. ಜನನೇಂದ್ರಿಯವು ಊದಿಕೊಳ್ಳುವುದು ಕೂಡ ಇತರ ಕೆಲವು ಲಕ್ಷಣಗಳು. ಮೂತ್ರ ಪರೀಕ್ಷೆ ಮಾಡಬಹುದು. ಇದರಿಂದ ಸೋಂಕು ಅಥವಾ ವಿಕಲತೆ ಇದ್ದರೆ ತಿಳಿಯುವುದು.

ನೆನಪಿಡಿ
*ಒಂದು ವೇಳೆ ಮೂತ್ರವಿಸರ್ಜಿಸುವಾಗ ತೀವ್ರತರದ ಉರಿ ಅಥವಾ ಬಿಸಿಯಾಗುತ್ತಿರುವಂತೆ ಅನ್ನಿಸಿದರೆ, ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳಿ
* ಒಂದು ವೇಳೆ ಮಲವಿಸರ್ಜನೆಯ ಹೊತ್ತಿನಲ್ಲಿ ನೋವಾಗದೇ ಇದ್ದರೂ ರಕ್ತದಿಂದ ಆವರಿಸಿಕೊಂಡಿರುವುದು ಕಂಡುಬಂದರೆ ಕೂಡಲೇ ವೈದ್ಯರನ್ನು ಕಾಣಿ.

ಜನನೇಂದ್ರಿಯ ಗ್ರಂಥಿ ಕ್ಯಾನ್ಸರ್ ಪರೀಕ್ಷೆ ಮಾಡಿಕೊಳ್ಳಿ
ಜನನೇಂದ್ರಿಯ ಗ್ರಂಥಿ ಕ್ಯಾನ್ಸರ್ ಪುರುಷರಿಗೆ ಮಾತ್ರ ಬರುವುದು. ಇದರಿಂದ ಪ್ರತಿಯೊಬ್ಬರು ತಮ್ಮ ದೇಹವನ್ನು ಆಗಾಗ ಪರೀಕ್ಷೆ ಮಾಡಿಕೊಂಡು, ಯಾವುದೇ ರೀತಿಯ ಕ್ಯಾನ್ಸರ್ ಅಂತಿಮ ಹಂತಕ್ಕೆ ಹೋಗುವ ಮೊದಲು ಕಂಡುಹಿಡಿದು ಚಿಕಿತ್ಸೆ ಮಾಡಿಕೊಳ್ಳಬಹುದು. ಜನನೇಂದ್ರೀಯ ಕ್ಯಾನ್ಸರ್ ಪುರುಷರಲ್ಲಿ ಸಾಮಾನ್ಯವಾಗಿದ್ದು, ಇದಕ್ಕಾಗಿ ಪ್ರತಿಯೊಬ್ಬ ಪುರುಷನು ಜನನೇಂದ್ರೀಯ ಕ್ಯಾನ್ಸರ್ ಪರೀಕ್ಷೆ ಮಾಡಿಕೊಳ್ಳಬೇಕು. ಇದರಲ್ಲಿ ಜನನೇಂದ್ರಿಯ ಕ್ಯಾನ್ಸರ್ ನ ಪರೀಕ್ಷೆ ಹೀಗಿರುತ್ತದೆ- ಅಲ್ಟ್ರಾಸೌಂಡ್, ಸಿಸ್ಟೊಸ್ಕೋಪಿ, ಎಂಆರ್ ಐ ಮತ್ತು ಸಿಟಿ ಸ್ಕ್ಯಾನ್ ಮಾಡಲಾಗುವುದು. ಇದೇ ವೇಳೆ ಸಂಗಾತಿಯ ಜನನಾಂಗದಿಂದ ರಕ್ತ ಬರುತ್ತಿದೆಯಾ ಎಂದು ತಿಳಿಯಲು ಕಾಂಡೋಮ್ ಪರೀಕ್ಷೆ ಕೂಡ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪುರುಷರು ಕಾಂಡೋಮ್ ಧರಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು.

ಇಂತಹ ಸಮಸ್ಯೆಗಳೂ ಕಾರಣವಾಗಬಹುದು
ರಕ್ತನಾಳಗಳಿಗೆ ಆಗಿರುವಂತಹ ಯಾವುದೇ ರೀತಿಯ ಸಮಸ್ಯೆಯು ಸ್ಖಲನ ವೇಳೆ ಪ್ರಮುಖ ಪಾತ್ರ ವಹಿಸಬಹುದು ಅಥವಾ ವೀರ್ಯವನ್ನು ಸಾಗಿಸುವಂತಹ ತೆಳುವಾದ ನಾಳಗಲು ವೀರ್ಯದಲ್ಲಿ ರಕ್ತಕಾಣಿಸಿಕೊಳ್ಳಲು ಕಾರಣವಾಗಬಹುದು.ಅಧಿಕ ರಕ್ತದೊತ್ತಡ, ಎಚ್ ಐವಿ, ಯಕೃತ್ ಕಾಯಿಲೆ ಇತ್ಯಾದಿಗಳಿಂದ ವೀರ್ಯದಲ್ಲಿ ರಕ್ತ ಕಾಣಿಸಿಕೊಳ್ಳಬಹುದು. ಗಡಸು ಲೈಂಗಿಕ ಕ್ರಿಯೆ ಅಥವಾ ಹಸ್ತಮೈಥುನ, ಜನನೇಂದ್ರಿಯಗಳಿಗೆ ಆಗಿರುವ ಆಘಾತ ಇತ್ಯಾದಿಗಳು ಕೂಡ ವೀರ್ಯದಲ್ಲಿ ರಕ್ತ ಕಂಡುಬರಲು ಕಾರಣವಾಗಿದೆ.

ಹೆಮಾಟೋಸ್ಪೆರ್ಮಿಯಾದ ಲಕ್ಷಣಗಳು
ಹೆಮಾಟೋಸ್ಪೆರ್ಮಿಯಾ ಎನ್ನುವುದು ವೀರ್ಯದಲ್ಲಿ ರಕ್ತವು ಕಾಣಿಸಿಕೊಳ್ಳುವುದು. ಸಾಮಾನ್ಯವಾಗಿ ಇಂತಹ ಸಮಸ್ಯೆ ಕಂಡುಬರಲು, ಜನನೇಂದ್ರೀಯದ ಬಯಾಸ್ಪಿ ಮಾಡುವುದರಿಂದ ಹೀಗೆ ಆಗುವುದು. ಅಲ್ಲದೆ ಕೆಲವೊಮ್ಮೆ ಸೋಂಕು, ಮೂತ್ರಕೋಶದಲ್ಲಿ ಉರಿಯೂತ, ಗಡ್ಡೆ, ಕಲ್ಲು, ಅಂಗರಚನೆ ಅಸಹಜತೆ ಇತ್ಯಾದಿಗಳಿಂದಲೂ ಇದು ಬರಬಹುದು. ಹೆಮಾಟೋಸ್ಪೆರ್ಮಿಯಾದ ಕೆಲವೊಂದು ಸಾಮಾನ್ಯ ಲಕ್ಷಣಗಳು ಈ ರೀತಿಯಾಗಿ ಇರುವುದು.ಮೂತ್ರ ವಿಸರ್ಜನೆ ವೇಳೆ ನೋವು ಅಥವಾ ಉರಿಯೂತ. ಮೂತ್ರದಲ್ಲಿ ರಕ್ತ. ಪೂರ್ಣ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ ಮಾಡಲು ಅಸಾಧ್ಯವಾಗುವುದು. ಸ್ಖಲನ ವೇಳೆ ನೋವು.ನೋವಿನೊಂದಿಗೆ ಮೂತ್ರನಾಳವು ಊದಿಕೊಂಡಿರುವುದು. ಅಧಿಕ ರಕ್ತದೊತ್ತಡದೊಂದಿಗೆ ಜ್ವರ ಕೂಡ ಕಾಣಿಸಿಕೊಳ್ಳುವುದು.ಪುರುಷರ ಜನನೇಂದ್ರಿಯದಿಂದ ವಿಸರ್ಜನೆ ಅಥವಾ ಬೇರೆ ಲೈಂಗಿಕ ರೋಗಗಳ ಲಕ್ಷಣಗಳು. ಸಂತಾನೋತ್ಪತ್ತಿ ಅಂಗಗಳಲ್ಲಿ ನೋವು ಅಥವಾ ಊತ ಕಾಣಿಸಿಕೊಳ್ಳುವುದು.



Click it and Unblock the Notifications











