Latest Updates
-
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ
ಬೆಳವಣಿಗೆಗೆ ಸಲಹೆಗಳು: ಹುಡುಗಿಯರು ಹೇಗೆ ಸ್ತನದ ಗಾತ್ರ ವರ್ಧಿಸಬಹುದು ಎಂದು ತಿಳಿಯಿರಿ
ಹೆಣ್ಣನ್ನು ಸೌಂದರ್ಯದ ಪ್ರತೀಕ ಎಂದು ಪರಿಗಣಿಸಲಾಗುವುದು. ಹಾಗಾಗಿಯೇ ಕೆಲವು ವಯಸ್ಸಿನಲ್ಲಿ ಹುಡುಗಿಯರು ಫ್ಯಾಷನ್ ಹಾಗೂ ಸಿನಿಮಾ ಜಗತ್ತಿನಲ್ಲಿ ಅತ್ಯುತ್ತಮ ರೀತಿಯಲ್ಲಿ ಹೆಸರು ಮಾಡುತ್ತಾರೆ. ಪ್ರಾಯಕ್ಕೆ ಬಂದ ಅಥವಾ ಹದಿ ಹರೆಯದಲ್ಲಿ ಇರುವ ಹುಡುಗಿಯರ ಮೈಮಾಟವು ಅತ್ಯಂತ ಆಕರ್ಷಣೀಯವಾಗಿರುತ್ತದೆ. ದೇಹದಲ್ಲಾಗುವ ಹಾರ್ಮೋನ್ ಬದಲಾವಣೆಯಿಂದಲೇ ಯೌವ್ವನದ ಮೆಟ್ಟಿಲನ್ನು ಏರುವರು. ವೈಜ್ಞಾನಿಕ ರೀತಿಯಲ್ಲಿ ಸ್ವಾಭಾವಿಕವಾಗಿ ಆಗುವ ಈ ಬದಲಾವಣೆಯು ಒಬ್ಬೊಬ್ಬರಲ್ಲಿ ಒಂದೊಂದು ವಿಶೇಷ ಬದಲಾವಣೆಯನ್ನು ಉಂಟುಮಾಡುವುದು. ಸ್ತನ ಬೆಳವಣಿಗೆ, ಮೊಡವೆ, ಋತುಚಕ್ರ, ದೇಹದ ಗಾತ್ರ ಹೀಗೆ ವಿವಿಧ ಬಗೆಯಲ್ಲಿ ದೇಹದ ಬದಲಾವಣೆಯನ್ನು ಕಂಡುಕೊಳ್ಳುವರು. ಹಾಗಾಗಿಯೇ ಹುಡುಗಿಯರಲ್ಲಿ ಎಲ್ಲರಿಗಿಂತಲೂ ನಾನು ಸುಂದರವಾಗಿ ಕಾಣಬೇಕು ಎನ್ನುವ ಮನೋಭಾವ ಇರುತ್ತದೆ.
ಹದಿಹರೆಯಕ್ಕೆ ಕಾಲಿಟ್ಟ ಹುಡುಗಿಯರಿಗೆ ಪ್ರಪಂಚವು ಹೊಸತನದಂತೆ ತೋರುವುದು. ಜೊತೆಗೆ ಪ್ರಪಂಚದಲ್ಲಿ ತಾನೊಬ್ಬ ವಿಶೇಷವಾದ ಹುಡುಗಿ ಎನ್ನುವ ಹೆಮ್ಮೆಯನ್ನು ಸಹ ಪಡೆದುಕೊಳ್ಳುವಳು. ದೇಹದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆ ಆಕೆಯ ಮಾನಸಿಕ ಗುಣ ಹಾಗೂ ವರ್ತನೆಗಳಲ್ಲೂ ಬದಲಾವಣೆಯನ್ನು ತರುತ್ತದೆ. ತನ್ನ ಸೌಂದರ್ಯದಿಂದ ವಿರುದ್ಧ ಲಿಂಗದವರನ್ನು ಆಕರ್ಷಿಸಬಹುದು ಎನ್ನುವುದು ಸಹ ಅವಳಿಗೊಂದು ಹೆಮ್ಮೆಯ ಸಂಗತಿಯಾಗುವುದು. ಈ ನಿಟ್ಟಿನಲ್ಲಿಯೇ ತನ್ನ ಸೌಂದರ್ಯವನ್ನು ವರ್ಧಿಸಿಕೊಳ್ಳಲು ಹಾಗೂ ದೈಹಿಕವಾದ ಸೌಂದರ್ಯದ ಆರೈಕೆ ಮತ್ತು ಕಾಳಜಿಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಾಳೆ. ಅದೇ ಸಂಗತಿಯು ಅವಳಿಗೊಂದು ದೊಡ್ಡ ವಿಚಾರವಾಗಿರುತ್ತವೆ....

ಸ್ತನದ ಗಾತ್ರ ವರ್ಧಿಸಲು
ಇಂತಹ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಹುಡುಗಿಯರಲ್ಲಿ ಸ್ತನದ ಗಾತ್ರ ವರ್ದನೆ ಆಗದೆ ಇರುವುದು ಅಥವಾ ಪ್ರಮಾಣ ಕಿರಿದಾಗಿರುವುದನ್ನು ಕಾಣಬಹುದು. ಬಹುತೇಕವಾಗಿ ಹದಿ ಹರೆಯದ ಹುಡುಗಿಯರಲ್ಲಿ ಸ್ತನದ ಗಾತ್ರ ಕಿರಿದಾಗಿರುತ್ತವೆ. ಈ ಹಂತದ ಬೆಳವಣಿಗೆಯಲ್ಲಿ ಸ್ತನದ ಕೋಶಗಳು ಬೆಳವಣಿಗೆಯ ಹಂತದಲ್ಲಿ ಇರುತ್ತವೆ. ಹಾಗಾಗಿ ಅಂತಹ ಸಮಯದಲ್ಲಿ ಅದರ ಆರೈಕೆ ಹಾಗೂ ಕಾಳಜಿಯ ಕುರಿತು ಸೂಕ್ತ ಜ್ಞಾನ ಹಾಗೂ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮ. ಸ್ತನದ ಗಾತ್ರ ವರ್ಧಿಸಲು ಸಾಕಷ್ಟು ಕಾಸ್ಮೆಟಿಕ್ ತಂತ್ರಗಳಿವೆ. ಆದರೆ ಅದು ಹದಿಹರೆಯದ ಹುಡುಗಿಯರಿಗೆ ಸೂಕ್ತವಾಗಿರುವುದಿಲ್ಲ.

ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವ ಅಥವಾ ಅದರ ಆಕಾರ ಸುಂದರವಾಗಿರುವಂತೆ ನೋಡಿಕೊಳ್ಳಲು
ಹದಿಹರೆಯದ ಹುಡುಗಿಯರು ತಮ್ಮ ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವ ಅಥವಾ ಅದರ ಆಕಾರ ಸುಂದರವಾಗಿರುವಂತೆ ನೋಡಿಕೊಳ್ಳಲು ಸರಿಯಾದ ಆಹಾರ, ಭೌತಿಕ ವ್ಯಾಯಾಮ, ವಿಶ್ರಾಂತಿಗಳು ಅತ್ಯಗತ್ಯವಾಗಿರುತ್ತವೆ. ಹದಿಹರೆಯದಲ್ಲಿಯೇ ದುರ್ಬಲವಾದ ಜೀವನ ಶೈಲಿ, ಕುಡಿಯುವುದು, ಧೂಮಪಾನ ಗಳಂತಹ ಕೆಟ್ಟ ಚಟಗಳನ್ನು ಅನುಸರಿಸಿದರೆ ಸ್ತನ ಕೋಶಗಳ ಬೆಳವಣಿಗೆ ಸಾಮಾನ್ಯವಾಗಿ ತಡೆಯನ್ನು ಅನುಭವಿಸುತ್ತದೆ. ನೀವು ನಿಮ್ಮ ಸ್ತನದ ಆಕಾರ ಹಾಗೂ ಬೆಳವಣಿಗೆ ಸೂಕ್ತ ರೀತಿಯಲ್ಲಿ ಆಗಬೇಕು ಎಂದುಕೊಂಡಿದ್ದರೆ ಆದಷ್ಟು ವ್ಯಸನಗಳಿಂದ ದೂರ ಉಳಿಯಬೇಕು. ಅಲ್ಲದೆ ಸಾಕಷ್ಟು ಆರೋಗ್ಯಕರವಾದ ಕಾಳಜಿ ಹಾಗೂ ಆರೈಕೆಯನ್ನು ಕೈಗೊಳ್ಳಬೇಕು.

ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವ ಅಥವಾ ಅದರ ಆಕಾರ ಸುಂದರವಾಗಿರುವಂತೆ ನೋಡಿಕೊಳ್ಳಲು
ಹದಿಹರೆಯದ ಅಥವಾ ಹರೆಯದ ವಯಸ್ಸಿನಲ್ಲಿ ದೇಹದ ಬೆಳವಣಿಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಸೌಂದರ್ಯದ ಪ್ರತೀಕವಾದ ಸ್ತನದ ಗಾತ್ರದಲ್ಲಿ ನೀವು ಹೆಚ್ಚಳವನ್ನು ಬಯಸುತ್ತಿದ್ದೀರಿ, ಅದಕ್ಕಾಗಿ ಯಾವೆಲ್ಲಾ ಕಾಳಜಿಯ ಕ್ರಮ ಹಾಗೂ ಆರೈಕೆಯ ವಿಧಾನಗಳ ಮೊರೆ ಹೋಗಬಹುದು? ಎನ್ನುವುದನ್ನು ಹುಡುಕುತ್ತಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ಕೆಲವು ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಿ... ಜೊತೆಗೆ ಅದರ ಅನುಕರಣೆಯಂತೆ ಆಕರ್ಷಕ ಸ್ತನವನ್ನು ಪಡೆಯಿರಿ. ಸ್ತನ ಬೆಳವಣಿಗೆಗೆ ವ್ಯಾಯಾಮ..

ಪುಶ್‍ಅಪ್
ನಿಮ್ಮ ಎರಡು ಕೈಗಳನ್ನು ನೆಲಕ್ಕೆ ಚಾಚಿ ಕಾಲುಗಳ ಆಧಾರದ ಮೇಲೆಯೇ ಮಲಗಿರುವಂತೆ ಮಾಡಿ, ಮುಖವನ್ನು ನೇರವಾಗಿ ಹಿಡಿದು ಪುಶ್‍ಅಪ್ ಮಾಡುವುದರಿಂದ ದೇಹಕ್ಕೆ ಸಾಕಷ್ಟು ರೀತಿಯಲ್ಲಿ ದಂಡನೆ ಸಿಗುವುದು. ದೇಹದ ಭಾರವೆಲ್ಲಾ ಎರಡು ಕೈಗಳು ಮತ್ತು ಕಾಲುಗಳ ಮೇಲೆಯೇ ನಿಯಂತ್ರಿಸುವುದರಿಂದ ದೇಹದ ಕೆಲವು ಪ್ರಮುಖ ಭಾಗಗಳಿಗೆ ಸೂಕ್ತ ರೀತಿಯ ರಕ್ತ ಸಂಚಾರ ಹಾಗೂ ಕೋಶಗಳ ಬೆಳವಣಿಗೆಗೆ ಅನುಕೂಲವಾಗುವುದು. ಇದನ್ನು ಕನಿಷ್ಠ 13-15 ಬಾರಿ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಎದೆ ಭಾಗದ ಆರೋಗ್ಯವು ಆರೋಗ್ಯಕರವಾಗುವುದು. ಜೊತೆಗೆ ಸ್ತನದ ಕೋಶಗಳ ಬೆಳವಣಿಗೆ ಸೂಕ್ತ ರೀತಿಯಲ್ಲಿ ಆಗುವುದು. ಜೊತೆಗೆ ಸುಂದರ ಆಕಾರದೊಂದಿಗೆ ಆಕರ್ಷಣೆಯನ್ನು ಪಡೆದುಕೊಳ್ಳುವುದು.

ಪುಶ್‍ಅಪ್
ಬಾವಿಯ ನೀರನ್ನು ಎಳೆಯುವುದರಿಂದಲೂ ನಿಮ್ಮ ಎದೆಯ ಸ್ನಾಯುಗಳು ವಿಸ್ತರಣೆಯನ್ನು ಪಡೆದುಕೊಳ್ಳುತ್ತವೆ. ಇದರಿಂದಲೂ ಸ್ತನಗಳು ಉತ್ತಮ ಬೆಳವಣಿಗೆಯನ್ನು ಕಂಡುಕೊಳ್ಳುತ್ತವೆ. ನೆಲದ ಮೇಲೆ ನೇರವಾಗಿ ಮಲಗಿ ಎರಡು ಕೈಗಳನ್ನು ಮೇಲಕ್ಕೆ ಎತ್ತುವುದು, ನಿಧಾನವಾಗಿ ಕಾಲನ್ನು ಸಹ ನೇರವಾಗಿ ಎತ್ತುವುದು, ಪಾದಗಳನ್ನು ಕೈಗಳಲ್ಲಿ ಹಿಡಿಯುವಂತೆ ಮಾಡುವ ಪ್ರಯತ್ನ ಮಾಡುವಂತೆ ನಿಧಾನವಾಗಿ ಮಾಡಬೇಕು. ಹೀಗೆ ಮಾಡುವುದರಿಂದಲೂ ಎದೆಯ ಭಾಗ ಹಾಗೂ ಸೊಂಟಕ್ಕೆ ಉತ್ತಮ ವ್ಯಾಯಾಮ ದೊರೆಯುವುದು. ಜೊತೆಗೆ ಎದೆ ಮತ್ತು ಸೊಂಟಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುವುದು.

ಚೆಸ್ಟ್ ಪ್ರೆಸ್‍ಸ್ ವ್ಯಾಯಾಮ
ಎರಡು ಭಾರವಾದ ತೂಕದ ಕಲ್ಲು ಅಥವಾ ಡೆಂಬೆಲ್ಸ್ ಸಹಾಯವನ್ನು ಪಡೆದು ಮಾಡುವ ಚೆಸ್ಟ್ ಪ್ರೆಸ್‍ಸ್ ವ್ಯಾಯಾಮವು ಅಧಿಕ ಪರಿಣಾಮವನ್ನು ಬೀರುವುದು. ಚಾಪೆಯ ಮೇಲೆ ನೇರವಾಗಿ ಮಲಗಿ ಎರಡು ಕೈಗಳಲ್ಲೂ ಭಾರವಾದ ತೂಕದ ಕಲ್ಲು ಅಥವಾ ಡೆಂಬೆಲ್ಸ್‍ಗಳನ್ನು ಹಿಡಿದು ಮೇಲಕ್ಕೆ ಎತ್ತುವುದು ಮತ್ತು ಇಳಿಸುವ ಪ್ರಯತ್ನವನ್ನು ಮಾಡಬೇಕು. ಗಣನೀಯವಾಗಿ ಮಾಡುವ ಈ ವ್ಯಾಯಾಮವು ಸ್ತನಗಳ ವಿಸ್ತರಣೆ ಹಾಗೂ ಬೆಳವಣಿಗೆಗೆ ಅತ್ಯುತ್ತಮ ರೀತಿಯ ಪ್ರೇರೇಪಣೆ ನೀಡುವುದು. ತೂಕದ ಕಲ್ಲನ್ನು ಎತ್ತುವಾಗ ಮೊದಲು ಎದೆಯ ಬಳಿಗೆ ಅಂದರೆ ಭುಜದ ಸಮಾನತೆಗೆ ತರಬೇಕು. ನಂತರ ನಿಧಾನವಾಗಿ ಮೇಲೆತ್ತುವ ಪ್ರಯತ್ನಗಳನ್ನು ಮಾಡುತ್ತಾ ಹೋಗಿ. ಹೀಗೆ 10-15 ಬಾರಿ ಮಾಡುತ್ತಾ ಬಂದರೆ ಬಹುಬೇಗ ಉತ್ತಮ ಫಲಿತಾಂಶವನ್ನು ನೀವು ಕಂಡುಕೊಳ್ಳಬಹುದು.

ಎದೆ ಕುಗ್ಗಿಸುವ ವ್ಯಾಯಾಮ/ ಚೆಸ್ಟ್ ಕಂಟ್ರಾಕ್ಷನ್
ವಿಶ್ರಮ ಸ್ಥಿತಿಯಲ್ಲಿ ಎರಡು ಕಾಲುಗಳನ್ನು ನೇರವಾಗಿ ನಿಲ್ಲಿಸಿಕೊಳ್ಳಿ. ಎರಡು ಕಾಲುಗಳ ನಡುವೆ ಇರುವಷ್ಟು ಅಂತರದಷ್ಟು ಉದ್ದದ ಸ್ನಾನದ ಟವೆಲ್‍ಗಳನ್ನು ಎರಡು ಕೈಗಳಿಂದ ಹಿಡಿದುಕೊಳ್ಳಿ. ಜೊತೆಗೆ ನಿಮ್ಮ ಎರಡು ಕೈಗಳನ್ನು ನೇರವಾಗಿ ಚಾಚಿ. ನಿಮ್ಮ ಕಿಬ್ಬೊಟ್ಟೆಯ ಸ್ನಾಯುವನ್ನು ಕಾಂಟ್ರಾಕ್ಟ್ ಮಾಡಿ. ನಿಮ್ಮ ಟವೆಲ್‍ನ ವಿರುದ್ಧ ದಿಕ್ಕಿಗೆ ಸೊಂಟವನ್ನು ತಿರುಗಿಸಿ/ತಳ್ಳಿರಿ. ಎರಡು ಕೈಗಳಿಂದ ಟವೆಲ್‍ನ ಅಂತ್ಯವನ್ನು ಎಳೆಯಿರಿ. ಅದು ನೋಡಲು ಜಗಳವನ್ನು/ಯುದ್ಧವನ್ನು ಹೇಗೆ ಮಾಡುತ್ತೀರಿ ಎನ್ನುವಂತೆ ಇರುತ್ತದೆ. 30 ಸೆಕೆಂಡ್‍ಗಳಿಂದ ಒಂದು ಮಿನಿಟ್‍ಗಳ ಕಾಲದಂತೆ ಮೂರು ಬಾರಿ ಈ ವ್ಯಾಯಾಮವನ್ನು ಮಾಡಿದರೆ ಉತ್ತಮ ಫಲಿತಾಂಶವನ್ನು ನೀವು ಗುರುತಿಸಬಹುದು.

ಸುಂದರವಾದ ಸ್ತನ ಪಡೆಯಲು ಚೇರ್ ಎತ್ತುವ ವ್ಯಾಯಾಮ
ಚೇರ್ ಲಿಫ್ಟ್ ವ್ಯಾಯಾಮವು ಎಲ್ಲೆಡೆಯಲ್ಲೂ ಹುಡುಗಿಯರು ಮಾಡುವ ಸಾಮಾನ್ಯವಾದ ವ್ಯಾಯಾಮ. ಈ ವ್ಯಾಯಾಮದಲ್ಲಿ ಕೈಗಳು, ಭೂಜಗಳು, ಎದೆಯು ಸೂಕ್ತ ಒತ್ತಡಕ್ಕೆ ಒಳಗಾಗಿ ಸ್ತನದ ಗಾತ್ರ ಮತ್ತು ವರ್ಧನೆಯನ್ನು ಹೆಚ್ಚಿಸುವುದು. ಇದನ್ನು ಮಾಡುವ ವಿಧಾನ ಎಂದರೆ ಒಂದು ಖುರ್ಚಿ ಅಥವಾ ಸೋಫಾವನ್ನು ಇರಿಸಿಕೊಳ್ಳಿ. ಅದರ ಮುಂಭಾಗದಲ್ಲಿ ನೀವು ನಿಂತು, ನಿಮ್ಮ ಕೈಗಳು ಹಿಂದಕ್ಕೆ ಚಾಚಿ, ಖುರ್ಚಿಯನ್ನು ಹಿಡಿದುಕೊಳ್ಳಬೇಕು. ಕೈಗಳಿಂದ ಖುರ್ಚಿಯನ್ನು ಸರಿಯಾಗಿ ಹಿಡಿದು, ದೇಹ ಮತ್ತು ಖುರ್ಚಿಯ ನಡುವೆ ಸಮತೋಲನವನ್ನು ಸೃಷ್ಟಿಸಿಕೊಂಡು ಭಾರವನ್ನು ಹಿಡಿದುಕೊಳ್ಳಬೇಕು. ನಿಮ್ಮ ಪಾದಗಳನ್ನು ಸ್ವಲ್ಪ ಕಾಲ ನೆಲಕ್ಕೆ ತಳ್ಳುವಂತೆ ಮಾಡಬೇಕು. ದಿನಕ್ಕೆ 4-5 ಬಾರಿ ಈ ವ್ಯಾಯಾಮವನ್ನು ನೀವು ಪುನರಾವರ್ತಿಸಬಹುದು. ನಿಮ್ಮ ಕೈಗಳ ಆಧಾರದ ಮೇಲೆಯೇ ದೇಹವನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಬೇಕು. ಈ ವ್ಯಾಯಾಮವು ಅತ್ಯಂತ ಸುಲಭವಾದದ್ದು. ಇದನ್ನು ಎಲ್ಲಿಯಾದರೂ ಮಾಡಬಹುದು. ಕೇವಲ ಒಂದು ಖುರ್ಚಿಯ ಸಹಾಯದಿಂದ ನಿಮ್ಮ ವ್ಯಾಯಾಮವನ್ನು ಹೊಂದಬಹುದು.

ಪಾಮ್ ಪ್ರೆಸ್ ವ್ಯಾಯಾಮ
ಈ ವ್ಯಾಯಾಮವು ಸಹ ಅತ್ಯಂತ ಸರಳ ಹಾಗೂ ಸುಲಭ. ಇದನ್ನು ನೀವು ಎಲ್ಲಿ ನಿಂತಿದ್ದರೂ ಸಹ ಮಾಡಬಹುದು. ನಿಮ್ಮ ಎರಡು ಕೈಗಳನ್ನು ಎದೆಯ ನೇರಕ್ಕೆ ತಂದು ನಮಸ್ಕರಿಸುವಂತೆ ಮಾಡಿ. ಕೈಗಳನ್ನು ಒಟ್ಟಿಗೆ ಸೇರಿಸಬೇಕು. ನಿಧಾನಕ್ಕೆ ಒತ್ತುವುದು ಮತ್ತು ಬಿಡುವುದು ಮಾಡಬೇಕು. ಹೀಗೆ ದಿನಕ್ಕೆ 5 ಬಾರಿ ಮಾಡುವುದರಿಂದ ಸ್ನ ಭಾಗಕ್ಕೆ ಮತ್ತು ಎದೆಗೆ ಉತ್ತಮ ವ್ಯಾಯಾಮ ದೊರೆಯುವುದು. ಸ್ತನದ ಕೋಶಗಳ ಬೆಳವಣಿಗೆಯು ಉತ್ತಮ ರೀತಿಯಲ್ಲಿ ನೆರವೇರುವುದು.

ಸಾರಭೂತ ಎಣ್ಣೆಯೊಂದಿಗೆ ಮಸಾಜ್ ಮಾಡಿ
ಪ್ರತಿದಿನವೂ ತೀವ್ರವಾದ ಮಸಾಜ್‍ನಿಂದ ಸ್ತನಗಳ ಗಾತ್ರವನ್ನು ವರ್ಧಿಸಬಹುದು ಎನ್ನುವುದನ್ನು ಬಲವಾಗಿ ನಂಬಲಾಗುವುದು. ವೈಜ್ಞಾನಿಕವಾಗಿಯೂ ಇದನ್ನು ದೃಢಪಡಿಸಲಾಗಿದೆ. ಮೊನೊ ಸ್ಯಾಚುರೇಟೆಡ್ ಕೊಬ್ಬುಗಳು ಸ್ತನದ ಗಾತ್ರವನ್ನು ಹೆಚ್ಚಿಸುವುದು. ಅಲ್ಲದೆ ರಕ್ತ ಪರಿಚಲನೆಯನ್ನು ಹೆಚ್ಚಿಸುವುದು. ಅಲ್ಲದೆ ಸ್ತನ ಕೋಶಗಳ ಬೆಳವಣಿಗೆಗೆ ಸೂಕ್ತ ಪ್ರಚೋದನೆ ನೀಡುವುದು. ಆಲೀವ್ ಎಣ್ಣೆ, ಜೆರೇನಿಯಂ ಅಥವಾ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುವುದು. ನಿತ್ಯವೂ ಎಣ್ಣೆಯಿಂದ ಮಸಾಜ್ ಮಾಡಿದರೆ ಸ್ತನದ ಆಕರ್ಷಣೆ ಹೆಚ್ಚುವುದು. ಜೊತೆಗೆ ತ್ವಚೆಯಲ್ಲಿ ಹೊಳಪು ಪಡೆದುಕೊಳ್ಳುವುದು. ಒರಟಾದಂತಹ ಕೋಶಗಳು ನಿವಾರಣೆ ಹೊಂದುತ್ತವೆ.

ಮಾರ್ಷ್‍ಮಲೋ ರೂಟ್ ಟೀ
ಸ್ತನಗಳ ಗಾತ್ರ ಹೆಚ್ಚಿಸಲು ಆಯುರ್ವೇದದಲ್ಲಿ ಹಲವಾರು ಗಿಡಮೂಲಿಕೆಗಳಿವೆ. ಅವುಗಳ ಪ್ರಯೋಗ ಮಾಡುವ ಮೊದಲು ಅಥವಾ ಸೇವಿಸುವ ಮೊದಲು ಆಯುರ್ವೇದದ ವೈದ್ಯರು ಅಥವಾ ನಾಟಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಮಾರ್ಷ್ ಮಲೋ ಬೇರನ್ನು ಜಜ್ಜಿ, ನೀರಿನಲ್ಲಿ ಹಾಕಿ. ನಂತರ ಅದನ್ನು ಚೆನ್ನಾಗಿ ಕುದಿಸಿ. ನೀರಿನಲ್ಲಿ ಚೆನ್ನಾಗಿ ಬೆರೆತು ಕುದಿ ಬಂದ ನಂತರ ಚಿಟಿಕೆಯಷ್ಟು ಸಕ್ಕರೆಯನ್ನು ಸೇರಿಸಿ. ಈ ಕಷಾಯ ಅಥವಾ ಟೀಯನ್ನು ನಿತ್ಯವೂ ಗಣನೀಯವಾಗಿ ಸೇವಿಸುತ್ತಾ ಬಂದರೆ ಉತ್ತಮ ಫಲಿತಾಂಶ ಪಡೆಯುವಿರಿ. ಸ್ತನಗಳ ಗಾತ್ರವು ಆಕರ್ಷಕರೀತಿಯಲ್ಲಿ ಬದಲಾವಣೆಯನ್ನು ತೋರುವುದು.

ಪ್ಯಾಡೆಡ್ ಬ್ರಾ ಅಥವಾ ಪುಶ್‍ಅಪ್ ಬ್ರಾಗಳ ಬಳಕೆ
ಪ್ರತಿಯೊಬ್ಬರು ವಿಭಿನ್ನ ಆಕಾರದ ಸ್ತನಗಳನ್ನು ಹೊಂದಿರುತ್ತಾರೆ. ಅದನ್ನು ಸೂಕ್ತ ರೀತಿಯ ಆಕರ್ಷಣೆಗೆ ಅಥವಾ ಸುಂದರ ನೋಟಕ್ಕೆ ಒಳಪಡಿಸಬೇಕು ಎಂದರೆ ಧರಿಸುವ ಬ್ರಾಗಳ ಆಯ್ಕೆ ಹಾಗೂ ಅದನ್ನು ಧರಿಸುವ ವಿಧಾನ ಸೂಕ್ತ ರೀತಿಯಲ್ಲಿ ತಿಳಿದಿರಬೇಕು. ಕೆಲವೊಮ್ಮೆ ಬ್ರಾಗಳ ಆಯ್ಕೆ ಸರಿಯಾಗದೆ ಇದ್ದಲ್ಲಿ ಅಥವಾ ಅದನ್ನು ಧರಿಸುವ ಪರಿ ತಿಳಿಯದೆ ಹೋಗಿದ್ದರೆ ಅದರ ಆಕಾರವು ಹಾಳಾಗಿರುವಂತೆ ತೋರುವುದು. ಅನುಚಿತ ಆಕಾರಗಳೊಂದಿಗೆ ಸೌಂದರ್ಯವನ್ನು ಹಾಳುಮಾಡುವುದು.

ಪ್ಯಾಡೆಡ್ ಬ್ರಾ ಅಥವಾ ಪುಶ್‍ಅಪ್ ಬ್ರಾಗಳ ಬಳಕೆ
ಪ್ಯಾಡೆಡ್ ಅಥವಾ ಪುಶ್‍ಅಪ್ ಬ್ರಾಗಳು ಇದೀಗ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಇತ್ತೀಚೆಗೆ ಬಂದಿರುವ ಶೈಲಿ ಯಾಗಿದ್ದರೂ ಸ್ತನಗಳ ಆರೈಕೆಗೆ ಅತ್ಯುತ್ತಮವಾದದ್ದು. ಆಧುನಿಕ ಶೈಲಿಯಲ್ಲಿ ತಯಾಋಇಸಲಾಗುವ ಈ ಬ್ರಾಗಳನ್ನು ಧರಿಸುವು ದರಿಂದ ನಿಮ್ಮ ಸ್ತನಗಳ ಗಾತ್ರವು ಹೆಚ್ಚಿರುವಂತೆ ತೋರುವುದು. ಅಲ್ಲದೆ ನೈಜವಾಗಿಯೇ ಅತ್ಯಾಕರ್ಷಕ ಸ್ತನವನ್ನು ಹೊಂದಿದ್ದೀರಿ ಎನ್ನುವ ಭ್ರಮೆಯನ್ನು ಸೃಷ್ಟಿಸುವುದು. ಮೃದು ಹಾಗೂ ಆರಾಮದಾಯಕ ಅನುಭವವನ್ನು ನೀಡುವುದರಿಂದ ಯಾವುದೇ ರೀತಿಯಲ್ಲೂ ಅಹಿತಕ ಅಥವಾ ಕಿರಿಕಿರಿಯ ಭಾವನೆಯನ್ನು ಮೂಡಿಸದು. ಬದಲಿಗೆ ಸಮೂಹದಲ್ಲಿ ಬೆರೆಯಲು ಹಾಗೂ ನಿಮ್ಮಲ್ಲೊಂದು ಬಗೆಯ ಆತ್ಮವಿಶ್ವಾಸ ಮೂಡಲು ಕಾರಣವಾಗುವುದು.

ಸ್ತನ ಬೆಳವಣಿಗೆಗೆ ಆಹಾರಗಳು
ನೈಸರ್ಗಿಕ ಹಣ್ಣುಗಳ ಸೇವನೆ, ಆರೋಗ್ಯ ಪೂರಕ ಗಿಡಮೂಲಿಕೆಗಳ ಸೇವನೆ, ತರಕಾರಿಗಳ ಸೇವನೆಯು ಸ್ತನಗಳ ಬೆಳವಣಿಗೆಗೆ ಅತ್ಯುತ್ತಮವಾದ ಮಾರ್ಗವಾಗಿದೆ. ಕಡಿಮೆ ಸಮಯದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಮೊಟ್ಟೆ, ಕಡಲೆಕಾಯಿ, ಬೆಣ್ಣೆ, ಮೀನು, ಬೀಜಗಳು, ಹಾಲು, ಚಿಕನ್ ಮತ್ತು ಇನ್ನಿತರ ಸಮೃದ್ಧವಾದ ಪ್ರೋಟೀನ್ ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ಸೇವಿಸಲು ಪ್ರಯತ್ನಿಸಿ. ಪ್ರೋಟೀನ್ ಭರಿತವಾದ ಸಮೃದ್ಧ ಆಹಾರವನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಉಂಟಾಗುವುದು. ಅಲ್ಲದೆ ನಿಮ್ಮ ಸ್ತನಗಳ ಬೆಳವಣಿಗೆಯು ಆರೋಗ್ಯಯುತವಾಗಿ ಉಂಟಾಗುವುದು. ಹಾಗಾಗಿ ನಿಮ್ಮ ಆಹಾರದಲ್ಲಿ ನಿತ್ಯವೂ ಪ್ರೋಟೀನ್‍ಗಳು ಇರುವಂತೆ ನೋಡಿಕೊಳ್ಳಿ. ಸಕ್ಕರೆಯುಕ್ತ ಆಹಾರ, ಸಂಸ್ಕರಿಸಿದ ಆಹಾರಗಳು, ಸೋಡಾ, ಫಾಸ್ಟ್ ಫುಡ್ ಸೇರಿದಂತೆ ಇನ್ನಿತರ ಅನುಚಿತ ಲಾಹಾರಗಳ ಸೇವನೆಯನ್ನು ನಿರಾಕರಿಸಬೇಕು. ನಿತ್ಯವು ಹೆಚ್ಚು ನೀರು ಕುಡಿಯುವುದನ್ನು ಮರೆಯಬಾರದು. ಉತ್ತಮ ಅಥವಾ ಸರಿಯಾದ ತೂಕ ಹೊಂದಲು ಪ್ರೋಟೀನ್‍ಗಳ ಆಹಾರವನ್ನು ಹೊಂದಬೇಕು.

ತೂಕಕ್ಕೆ ಅನುಗುಣವಾಗಿ ಸ್ತನಗಳ ಗಾತ್ರ
ನಿಮ್ಮ ಸ್ತನಗಳು ಯಾವ ಗಾತ್ರದಲ್ಲಿದೆ ಎನ್ನುವಾಗ ನೀವು ಯಾವ ತೂಕದಲ್ಲಿ ಇದ್ದೀರಿ ಎನ್ನುವುದು ಸಹ ಮಹತ್ತರವಾದ ಸಂಗತಿಯಾಗಿರುತ್ತದೆ. ಸಾಮಾನ್ಯವಾಗಿ ವ್ಯಕ್ತಿ ತನ್ನ ತೂಕದಲ್ಲಿ ಹೆಚ್ಚಳವನ್ನು ಪಡೆದುಕೊಂಡಂತೆ ಸ್ತನಗಳ ಗಾತ್ರವೂ ಹೆಚ್ಚುವುದು. ಹಾಗಾಗಿ ಸ್ತನದ ಗಾತ್ರ ಯಾವ ಗಾತ್ರದಲ್ಲಿದೆ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ತೂಕಕ್ಕೆ ಅನುಗುಣವಾಗಿ ಸ್ತನದ ಗಾತ್ರವಿಲ್ಲ ಅಥವಾ ಸ್ತನದ ಗಾತ್ರ ಅಧಿಕವಾಗಿದೆ ಎಂದರೆ ಅದು ಹಾರ್ಮೋನ್‍ಗಳ ಮಟ್ಟದಲ್ಲಿ ವ್ಯತ್ಯಾಸವಾಗಿರುತ್ತದೆ. ಸೂಕ್ತ ತೂಕ ಹಾಗೂ ತೂಕಕ್ಕೆ ಸರಿಯಾದ ಎದೆ ಭಾಗವನ್ನು ಪಡೆಯಬೇಕು ಎಂದಾದರೆ ಮೊದಲು ವೈದ್ಯರಲ್ಲಿ ಹಾರ್ಮೋನ್‍ಗಳ ತಪಾಸಣೆಯನ್ನು ಮಾಡಿಸಬೇಕು. ಆರೋಗ್ಯಕರವಾದ ತೂಕವನ್ನು ಪಡೆದುಕೊಳ್ಳಲು ಕಡಲೆಕಾಯಿ, ಚೀಸ್, ಬೆಣ್ಣೆ, ಮೊಸರು, ಆವಕೊಡ ಹಣ್ಣು ಸೇರಿದಂತೆ ಇನ್ನಿತರ ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ವೇಗವಾದ ಬೆಳವಣಿಗೆ ಕಾಣಲು ಉತ್ತಮ ಆಹಾರದ ಜೊತೆಗೆ ಸೂಕ್ತ ರೀತಿಯ ವ್ಯಾಯಾಮ ಕೈಗೊಳ್ಳುವುದು ಬಹಳ ಉತ್ತಮ. ಆಗ ನಿಮ್ಮ ನಿರೀಕ್ಷೆಯಂತೆ ಬಹು ವೇಗದಲ್ಲಿ ಸ್ತನಗಳ ಗಾತ್ರವನ್ನು ಹೆಚ್ಚಿಸಬಹುದು.

ಬಿಗಿಯಾದ ಸ್ತನವನ್ನು ಪಡೆಯಲು ಮನೆ ಪರಿಹಾರಗಳು
ವಿವಿಧ ಅಧ್ಯಯನಗಳ ಪ್ರಕಾರ ನಿತ್ಯ ಸೇವಿಸುವ ಆಹಾರಗಳಲ್ಲಿ ಪಪ್ಪಾಯ ಹಣ್ಣಿನ ರಸ ಮತ್ತು ಹಾಲನ್ನು ಸೇರಿಸಬೇಖು. ಆಗ ನಿಮ್ಮ ಸ್ತನದ ಗಾತ್ರವು ಬಹುಬೇಗ ಹೆಚ್ಚುವುದು. ಹಾಲು ಮತ್ತು ಪಪ್ಪಾಯದಲ್ಲಿ ವಿಟಮಿನ್ ಮತ್ತು ಖನಿಜಗಳು ಸಮೃದ್ಧ ವಾಗಿರುವುದರಿಂದ ನಿಮ್ಮ ದೇಹ ಹಾಗೂ ಸ್ತನಗಳ ಬೆಳವಣಿಗೆಗೆ ಅಗತ್ಯವಾದ ಪೋಷಣೆ ನೀಡುವುದು. ಪಪ್ಪಾಯ ಹಣ್ಣಿನ ಜ್ಯೂಸ್, ಪಲ್ಪ್, ಸಲಾಡ್‍ಗಳ ರೂಪದಲ್ಲಿ ಹಾಗೂ ಇನ್ನಿತರ ಆಹಾರ ಕ್ರಮಗಳಲ್ಲಿ ಸೇರಿಸಿಕೊಳ್ಳಬಹುದು. ಪಪ್ಪಾಯ ಹಣ್ಣಿನಂತೆ ಬಾಳೆ ಹಣ್ಣಿನ ಮಿಲ್ಕ್‍ಶೇಕ್ ಅಹ ಉತ್ತಮ ರೀತಿಯಲ್ಲಿ ಪೋಷಣೆ ನೀಡುವುದು.

ನಿತ್ಯವೂ ಪ್ರೋಟೀನ್‍ಗಳ ಸೇವನೆ
ಪ್ರತಿನಿತ್ಯ ಪ್ರೋಟೀನ್‍ಗಳ ಸೇವನೆ ಮಾಡುವುದರಿಂದ ಸ್ತನದ ಗಾತ್ರವು ಉತ್ತೇಜನ ಪಡೆದುಕೊಳ್ಳುವುದು. ಕೆಲವರಿಗೆ ಅಸಮ ತೋಲನ ಆಹಾರ ಅಥವಾ ಅನುಚಿತ ರೀತಿಯಲ್ಲಿ ಆಹಾರ ಸೇವನೆ ಪಡೆದುಕೊಳ್ಳುವುದರಿಂದ ಸ್ತನವು ಜೋತುಬಿದ್ದಿರುವಂತೆ ಆಗುವುದು. ಜೋಲುವ ಸ್ತನಗಳಿಂದ ಬಿಗಿದಾದ ಸ್ತನವನ್ನು ಪಡೆಯಲು ಪ್ರೋಟೀನ್‍ಗಳಿಮದ ಸಮೃದ್ಧವಾದ ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು. ಬೀಜಗಳು, ಗ್ರೀಕ್ ಮೊಸರು, ಕಡಲೆಕಾಯಿ ಬೆಣ್ಣೆ, ಚಿಕನ್, ಹಾಲು, ಮೊಟ್ಟೆ, ಮೀನು, ಕುಂಬಳ ಕಾಯಿ ಬೀಜ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಸ್ತನವು ಆರೋಗ್ಯಕರವಾದ ಬೆಳವಣಿಗೆಯನ್ನು ಹೊಂದುವುದು. ಅನಾರೋಗ್ಯಕರ ಆಹಾರ ಪದಾರ್ಥಗಳು ಹಾಗೂ ಸಂಸ್ಕರಿಸಿದ ಪದಾರ್ಥಗಳಿಂದ ಆದಷ್ಟು ದೂರ ಉಳಿಯುವುದು ಉಚಿತ.

ಕೆಫೀನ್ ಸೇವನೆ ಉತ್ತಮವಲ್ಲ.
ಕಾಫಿ ಮತ್ತು ಇತರ ಪಾನೀಯಗಳ ಮೂಲಕ ಕೆಫೀನ್‍ಗಳನ್ನು ಸೇವಿಸುತ್ತೇವೆ. ನಿಮಗೆ ನಿಮ್ಮ ಸ್ತನಗಳ ಬೆಳವಣಿಗೆಯ ಬಗ್ಗೆ ಕಾಳಜಿ ಇದ್ದರೆ ಕೆಫೀನ್‍ಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಅದರ ಸೇವನೆಯ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ಹೊಂದಿರಬೇಕಾಗುವುದು. ಕೆಫೀನ್ ದೇಹದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಅಲ್ಲದೆ ಸ್ತನಗಳ ಬೆಳವಣಿಗೆಯ ವಿಷಯದಲ್ಲಿ ಋಣಾತ್ಮಕವಾದ ಪರಿಣಾಮವನ್ನುಂಟುಮಾಡುವುದು. ಹಾಗಾಗಿ ಬೆಳವಣಿಗೆಯ ಹಂತದಲ್ಲಿ ಇರುವ ಬಾಲಕಿಯರಿಗೆ ಕೆಫೀನ್ ಸೇವನೆ ಉತ್ತಮವಲ್ಲ.

ಸಂಸ್ಕರಿಸಿದ ಕೋಳಿ ಮತ್ತು ಮಾಂಸ
ವ್ಯಾಪಾರ ಹಾಗೂ ಹಣದ ದೃಷ್ಟಿಯಲ್ಲಿ ಕೋಳಿ ಹಾಗೂ ಮಾಂಸವನ್ನು ಪಡೆಯುವ ಜಾನುವಾರುಗಳ ತ್ವರಿತ ಬೆಳವಣಿಗೆಗಾಗಿ ಹಾರ್ಮೋನ್ ಮಿಶ್ರಿತ ಆಹಾರವನ್ನು ನೀಡುತ್ತಾರೆ. ವಿವಿಧ ಹಾರ್ಮೋನ್ ಚುಚ್ಚುಮದ್ದನ್ನು ಬಳಸಿರುತ್ತಾರೆ. ಈ ಸಂಸ್ಕರಿಸಿದ ಕೋಳಿ ಮತ್ತು ಮಾಂಸಗಳನ್ನು ಸೇವಿಸಿದರೆ ಗ್ರಾಹಕರ ದೇಹದಲ್ಲಿ ಸುಲಭವಾಗಿ ಅಸಮತೋಲನ ಉಂಟಾಗುವುದು. ಜೊತೆಗೆ ನೈಸರ್ಗಿಕವಾಗಿರುವ ಹಾರ್ಮೋನ್‍ಗಳ ಮೇಲೆ ಗಮನಾರ್ಹ ಪರಿಣಾಮ ಉಂಟಾಗುವುದು.



Click it and Unblock the Notifications











