Latest Updates
-
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಅಧ್ಯಯನ ವರದಿ: ಹೆಚ್ಚಾಗಿ ಮಹಿಳೆಯರೇ ಸೆಕ್ಸ್‌ನ ಆರೋಗ್ಯದ ಲಾಭ ಕಡೆಗಣಿಸುತ್ತಾರಂತೆ!
ದೈಹಿಕ, ಮಾನಸಿಕ ಹಾಗೂ ಲೈಂಗಿಕ ಆರೋಗ್ಯವು ಸರಿಯಾಗಿದ್ದರೆ ಆಗ ವ್ಯಕ್ತಿಯು ಆರೋಗ್ಯವಾಗಿ ಇದ್ದಾನೆ ಎಂದು ಹೇಳಬಹುದು. ಕೆಲವೊಂದು ಸಲ ಈ ಮೂರದಲ್ಲಿ ಯಾವುದಾದರೂ ಒಂದು ಸಮಸ್ಯೆಯು ಕಾಣಿಸುವುದು. ಹೀಗಾದಲ್ಲಿ ಜೀವನವು ನರಕವಾಗುವುದು. ಮುಖ್ಯವಾಗಿ ಲೈಂಗಿಕ ಜೀವನ ಸರಿಯಾಗಿದ್ದರೆ ಆಗ ಸಂಗಾತಿ ಜತೆಗಿನ ಸಂಬಂಧವು ಚೆನ್ನಾಗಿರುವುದು ಮತ್ತು ಯಾವುದೇ ಚಿಂತೆ ಹಾಗೂ ಆತಂಕವು ಇರುವುದಿಲ್ಲ. ಲೈಂಗಿಕ ಜೀವನದಿಂದ ದೇಹದ ಇತರ ಎರಡು ಆರೋಗ್ಯದ ಮೇಲೆ ಕೂಡ ಪರಿಣಾಮ ಉಂಟಾಗುವುದು.
ಹೀಗಾಗಿ ಲೈಂಗಿಕ ಜೀವನವು ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ನೀಡುವುದು. ಸೆಕ್ಸ್ ಎನ್ನುವುದು ದೈಹಿಕ ಹಾಗೂ ಮಾನಸಿಕ ಸುಖ ನೀಡುವುದು. ಇದರಿಂದ ನಮ್ಮ ಸಂತೋಷವು ಇಮ್ಮಡಿಯಾಗುವುದು. ಇದರೊಂದಿಗೆ ಹಲವಾರು ಸಣ್ಣಪುಟ್ಟ ಕಾಯಿಲೆಗಳನ್ನು ನಿವಾರಣೆ ಮಾಡುವಂತಹ ಶಕ್ತಿಯು ಸೆಕ್ಸ್ ಗೆ ಇದೆ ಎಂದು ಅಧ್ಯಯನಗಳು ಕಂಡುಕೊಂಡಿದೆ. ಆದರೆ ಹೆಚ್ಚಿನವರು ಇಂದಿನ ಒತ್ತಡದ ಜೀವನದಿಂದಾಗಿ ಸೆಕ್ಸ್ ನಿಂದ ಸಿಗುವ ಆರೋಗ್ಯ ಲಾಭ ಪಡೆಯಲು ವಿಫಲರಾಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ಎಂದರೆ ತಪ್ಪಾಗದು. ಈ ಬಗ್ಗೆ ನಾವು ಲೇಖನದಲ್ಲಿ ತಿಳಿಯುತ್ತಾ ಸಾಗುವ....

ಸೆಕ್ಸ್ ನ ಲಾಭಗಳು
ಸೆಕ್ಸ್ ನ್ನು ಆನಂದಿಸುವುದಕ್ಕೆ ಪ್ರತಿಯೊಬ್ಬರು ಬಯಸುವರು. ಆದರೆ ಕೆಲವೊಂದು ಸಂದರ್ಭದಲ್ಲಿ ಇದು ತುಂಬಾ ಕ್ಲಿಷ್ಟವಾಗಿರುವುದು. ಅದರಲ್ಲೂ ಮಹಿಳೆಯರಿಗೆ. ಮಹಿಳೆಯರು ಕ್ಲೈಮ್ಯಾಕ್ಸ್ ತಲುಪುವುದು ತುಂಬಾ ವಿರಳ ಎಂದು ಹೇಳಲಾಗುತ್ತದೆ. ಶೇ.80ರಷ್ಟು ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಮಹಿಳೆಯರು ಕ್ಲೈಮ್ಯಾಕ್ಸ್ ತಲುಪುವುದರಿಂದ ವಂಚಿತರಾಗುವ ಪರಿಣಾಮ ಅವರಿಗೆ ಸಿಗುವಂತಹ ಹಲವಾರು ಆರೋಗ್ಯ ಲಾಭಗಳಿಂದ ವಂಚಿತವಾಗುವರು ಎಂದು ಹೇಳಲಾಗುತ್ತದೆ.

ಸೆಕ್ಸ್ ನ ಲಾಭಗಳು
ಪ್ರತಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು ಒತ್ತಡದ ಮಟ್ಟ ಕಡಿಮೆ ಮಾಡಲು ಸೆಕ್ಸ್ ಒಂದು ಅದ್ಭುತ ಸಾಧನ ಎಂದು ಹೇಳಲಾಗುತ್ತದೆ. ಪರಾಕಾಷ್ಠೆ ತಲುಪುವ ವೇಳೆ ಆಕ್ಸಿಡಾಸಿನ್ ಮತ್ತು ಎಂಡ್ರೊಪಿನ್ ಹಾರ್ಮೋನುಗಳು ಬಿಡುಗಡೆಯಾಗುವುದು. ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು.

ಅಧ್ಯಯನಗಳ ಪ್ರಕಾರ
ಲೈಂಗಿಕ ತೃಪ್ತಿಯು ಸಂಪೂರ್ಣ ಆರೋಗ್ಯದ ಒಂದು ಭಾಗವಾಗಿದೆ ಮತ್ತು ಅಧ್ಯಯನಗಳ ಪ್ರಕಾರ ಶೇ. 62ರಷ್ಟು ಮಹಿಳೆಯರು ತಮ್ಮ ಸೆಕ್ಸ್ ಜೀವನದಿಂದ ಸಂತುಷ್ಟರಾಗಿಲ್ಲ. ವಯಸ್ಸಿಗೆ ಅನುಗುಣವಾಗಿ ಇದನ್ನು ನೋಡಿದರೆ 25-34ರ ಹರೆಯದ ನಡುವಿನ ಮಹಿಳೆಯರು ತಾವು ಸೆಕ್ಸ್ ನ್ನು ಆನಂದಿಸುತ್ತಿಲ್ಲವೆಂದು ದೂರಿದ್ದಾರೆ. 55-64ರ ಹರೆಯದ ಶೇ. 29ರಷ್ಟು ಮಹಿಳೆಯರು ತಮ್ಮ ಸೆಕ್ಸ್ ಜೀವನದಿಂದಾಗಿ ತುಂಬಾ ಅತೃಪ್ತಿ ಹೊಂದಿರುವುದಾಗಿ ಹೇಳಿದ್ದಾರೆ. ಅದಾಗ್ಯೂ, ಅವರು ಒಳ್ಳೆಯ ಸೆಕ್ಸ್ ನ್ನು ಅನುಭವಿಸಿದ್ದರಿಂದ ಹೀಗೆ ಆಗಿದೆಯಾ ಅಥವಾ ಕಡಿಮೆ ಸೆಕ್ಸ್ ಜೀವನ ಅಥವಾ ಬೇರೆ ಯಾವುದೇ ಕಾರಣದಿಂದ ಹೀಗೆ ಆಗಿದೆಯಾ ಎನ್ನುವುದು ಮಾತ್ರ ಸ್ಪಷ್ಟವಿಲ್ಲ.

ಲೈಂಗಿಕ ತೃಪ್ತಿಯು ವಯಸ್ಸಿನೊಂದಿಗೆ ಬರುವುದು
ಲೈಂಗಿಕ ತೃಪ್ತಿಯು ವಯಸ್ಸಿನೊಂದಿಗೆ ಬರುವುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಇಂಗ್ಲೆಂಡ್ ನ ಸಾರ್ವಜನಿಕ ಆರೋಗ್ಯದ ಸಂತಾನೋತ್ಪತ್ತಿ ಆರೋಗ್ಯದ ಸಾರ್ವಜನಿಕ ಆರೋಗ್ಯ ಸಲಹೆಗಾರ ಅವರು ಈ ಬಗ್ಗೆ ಹೇಳುವ ಪ್ರಕಾರ.

ಲೈಂಗಿಕ ತೃಪ್ತಿಯು ವಯಸ್ಸಿನೊಂದಿಗೆ ಬರುವುದು
ಸೆಕ್ಸ್ ಜೀವನವನ್ನು ಸಂಪೂರ್ಣವಾಗಿ ಆನಂದಿಸುವುದು ಮಹಿಳೆಯರ ಮಾನಸಿಕ ಹಾಗೂ ಭಾವನಾತ್ಮಕತೆ ಅತೀ ಮುಖ್ಯವಾಗಿರುವುದು. ಲೈಂಗಿಕವಾಗಿ ಆನಂದಿಸುವುದು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪ್ರಮುಖ ಪಾತ್ರ ವಹಿಸಿದೆ. ಹೆಚ್ಚಿನ ಮಹಿಳೆಯರು ಲೈಂಗಿಕ ಕೊರತೆಗಳ ಬಗ್ಗೆ ಮಾತನಾಡುವರು. ಇದರಲ್ಲಿ ಹೆಚ್ಚಿನವರು ವೈದ್ಯಕೀಯ ನೆರವನ್ನು ಪಡೆಯುತ್ತಿಲ್ಲ ಎಂದು ಇಂಗ್ಲೆಂಡ್ ನ ಪಬ್ಲಿಕ್ ಹೆಲ್ತ್ ವಿಭಾಗದ ತಜ್ಞ ವೈದ್ಯರಾಗಿರುವಂತಹ ಡಾ. ಸೂ ಮನ್ ತಿಳಿಸುತ್ತಾರೆ.



Click it and Unblock the Notifications