Latest Updates
-
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ!
ವಯಸ್ಸು 50 ಕಳೆದ ಬಳಿಕ, ಪುರುಷರನ್ನು ಕಾಡುವ ಕೆಲವು ಕಾಯಿಲೆಗಳು
ಹದಿಹರೆಯದಲ್ಲಿ ಹಾಗು ಯೌವನದಲ್ಲಿ ಎಷ್ಟೇ ಚುರುಕಾಗಿದ್ದರೂ ದೈಹಿಕವಾಗಿ ತುಂಬಾ ಶ್ರಮ ವಹಿಸಿದ್ದರೂ ಕೆಲವು ಕಾಯಿಲೆಗಳು ವಯಸ್ಸಾಗುತ್ತಾ ಇರುವಂತೆ ಪುರುಷರನ್ನು ಕಾಡುತ್ತದೆ. ಮಧ್ಯವಯಸ್ಸು ದಾಟಿದಂತೆ ಕೆಲವೊಂದು ಸಮಸ್ಯೆಗಳು ಪುರುಷರನ್ನು ಕಾಡಲು ಆರಂಭಿಸುತ್ತದೆ. ಇದರಿಂದಾಗಿ ಈ ಬಗ್ಗೆ ಹೆಚ್ಚಿನ ಗಮನಹರಿಸುವುದು ಅತೀ ಅಗತ್ಯವಾಗಿರುವುದು. ಮಧ್ಯ ವಯಸ್ಸಿನಲ್ಲಿ ಪುರುಷರನ್ನು ಕಾಡುವಂತ ಕೆಲವೊಂದು ಸಮಸ್ಯೆಗಳು ಯಾವುದು ಎಂದು ನಾವು ಈ ಲೇಖನದಲ್ಲಿ ತಿಳಿದುಕೊಳ್ಳುವ...

ಮೊಡವೆ
ಮೊಡವೆ ಎನ್ನುವುದು ಕೇವಲ ಮಹಿಳೆಯರನ್ನು ಮಾತ್ರ ಕಾಡುತ್ತದೆ ಎಂದು ನೀವು ಭಾವಿಸಿದ್ದರೆ ಆಗ ನೀವು ಮತ್ತೊಮ್ಮೆ ಆಲೋಚನೆ ಮಾಡಬೇಕು. ನಿಮಗೆ ಹದಿಹರೆಯದಲ್ಲಿ ಮೊಡವೆ ಸಮಸ್ಯೆ ಕಾಡದೆ ಇದ್ದರೂ ಮಧ್ಯ ವಯಸ್ಸಿನಲ್ಲಿ ಇದು ಕಾಡುವ ಸಾಧ್ಯತೆಗಳು ಇದೆ. 39.5 ಹರೆಯದ ವಯಸ್ಸಿನವರಲ್ಲಿ ಸರಾಸರಿಯಾಗಿ ಮೊಡವೆ ಕಾಣಿಸುವುದು ಎಂದು ಅಧ್ಯಯನಗಳು ಹೇಳಿವೆ. ಕಾರ್ಬೋಹೈಡ್ರೇಟ್ಸ್ ಸೇವನೆ ಕಡಿಮೆ ಮಾಡಿ ಮತ್ತು ಅಧಿಕ ಗ್ಳೈಸೆಮಿಕ್ ಇರುವ ಆಹಾರ ಸೇವಿಸದೆ ಇದ್ದರೆ ಮೊಡವೆ ದೂರವಾಗುವುದು.

ತಲೆ ಬೋಳಾಗುವುದು
ಕೂದಲು ಈಗ ದಪ್ಪಗೆ ಇದ್ದರೂ 50ರ ಹರೆಯಕ್ಕೆ ಹತ್ತಿರವಾದಂತೆ ಇದನ್ನು ನೀವು ಸಂಪೂರ್ಣವಾಗಿ ಕಳಕೊಳ್ಳಬಾರದು ಎಂದೇನಿಲ್ಲ. ಶೇ.67ರಷ್ಟು ಮಧ್ಯ ವಯಸ್ಸಿನ ಜನರಲ್ಲಿ ತಲೆ ಬೋಳಾಗುವಂತಹ ಸಮಸ್ಯೆಯು ಕಾಣಿಸಿಕೊಳ್ಳುವುದು ಎಂದು ಫಿನ್ ಲ್ಯಾಂಡ್ ನಲ್ಲಿ ನಡೆಸಿರುವಂತಹ ಅಧ್ಯಯನ ವರದಿಯು ಹೇಳಿದೆ.

ಎಪ್ಸ್ಟೀನ್-ಬಾರ್ ವೈರಸ್
ಈ ವೈರಸ್ ನಿಂದಾಗಿ ಮೊನೊನ್ಯೂಕ್ಲಿಯೊಸಿಸ್ ಕಿಸ್ಸಿಂಗ್ ಕಾಯಿಲೆ ಕಾಡುವುದು. ನಿಮಗೆ ಇದುವರೆಗೆ ಇದರ ಅನುಭವ ಆಗದೆ ಇದ್ದರೆ ನಿಮ್ಮ ದೇಹದ ಯಾವುದಾದರೂ ಭಾಗದಲ್ಲಿ ಇದು ಇದೆ ಎಂದು ಹೇಳಬಹುದು. ಇದರಿಂದ ನಿಮಗೆ ಚಿಂತೆಯಾಗಿದ್ದರೆ ವೈದ್ಯರ ನೆರವು ಪಡೆಯಿರಿ.

ಒಸಡಿನ ಸಮಸ್ಯೆಗಳು
ಮಧ್ಯ ವಯಸ್ಸಿನ ಪುರುಷರಲ್ಲಿ ಹಲ್ಲಿನ ಸಮಸ್ಯೆಗಳು ಕಾಣಿಸುವುದು ಹೆಚ್ಚು ಎಂದು ಜರ್ನಲ್ ಆಫ್ ಡೆಂಟಲ್ ರಿಸರ್ಚ್ ಹೇಳಿದೆ. ಸರಿಯಾಗಿ ಹಲ್ಲುಗಳ ಸ್ವಚ್ಛತೆ ಮಾಡಿಕೊಂಡರೆ ಅದರಿಂದ ಹಲ್ಲಿನ ಸಮಸ್ಯೆಗಳನ್ನು ದೂರವಿಡಬಹುದು.

ಹ್ಯೂಮನ್ ಪಾಪಿಲೋಮ ವೈರಸ್(ಎಚ್ ಪಿವಿ)
ಎಚ್ ಪಿವಿ ಎನ್ನುವುದು ಸಾಮಾನ್ಯವಾಗಿ ಹರಡುವಂತಹ ಲೈಂಗಿಕ ರೋಗವಾಗಿದೆ. ಇದು ಜನನೇಂದ್ರೀಯದ ನರೂಲಿಗಳು, 18ರಿಂದ 40ರ ಹರೆಯದ ಪುರುಷದಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಎಚ್ ಪಿವಿ ತುಂಬಾ ಹಾನಿಕಾರಕವಾಗಿದೆ ಎಚ್ ಪಿವಿ 16 ಮತ್ತು 18 ವಿವಿಧ ರೀತಿಯ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುವುದು. ಸುರಕ್ಷಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಉತ್ತಮವಾಗುವುದು.

ಬೊಜ್ಜು
ಸಿಡಿಸಿ ನೀಡಿರುವಂತಹ ಅಂಕಿಅಂಶಗಳ ಪ್ರಕಾರ ಶೇ.73ರಷ್ಟು ಪುರುಷರು ಅಧಿಕ ತೂಕ ಹೊಂದಿರುವರು ಅಥವಾ ಬೊಜ್ಜು ಹೊಂದಿರುವರು. ಹದಿಹರೆಯದಲ್ಲಿ ನೀವು ಎಷ್ಟೇ ವ್ಯಾಯಾಮ ಮಾಡಿದರೂ ಇದು ನಿಮಗೆ ನೆರವಾಗದು. ನೀವು ಏನು ತಿನ್ನುತ್ತಿದ್ದೀರಿ ಎನ್ನುವ ಮೇಲೆ ಗಮನಹರಿಸಿ. ಯಾಕೆಂದರೆ ಆರೋಗ್ಯಕಾರಿ ಆಹಾರ ಕ್ರಮವು ಮುಖ್ಯವಾಗಿರುವುದು.

ಕಣ್ಣಿನ ದೃಷ್ಟಿ ಕುಂದುವುದು
ಅಮೆರಿಕನ್ ಜರ್ನಲ್ ಆಫ್ ಒಥ್ಹಲ್ಮೊಜಿ ಹೇಳುವ ಪ್ರಕಾರ ಶೇ.46ರಷ್ಟು ಮಂದಿ ಅಮೆರಿಕನ್ನರಲ್ಲಿ ದೂರದೃಷ್ಟಿಯ ಸಮಸ್ಯೆ, ಶೇ.25ರಷ್ಟು ಜನರಲ್ಲಿ ಸಮೀಪ ದೃಷ್ಟಿ ದೋಷ ಮತ್ತು ಶೇ.45ರಷ್ಟು ಜನರಲ್ಲಿ ಅಸಮ ದೃಷ್ಟಿ ಸಮಸ್ಯೆಯು ಕಾಣಿಸುವುದು ಎಂದು ಹೇಳಲಾಗಿದೆ. ಕನ್ನಡಕ ಅಥವಾ ಲೆನ್ಸ್ ಧರಿಸಿದರೆ ಆಗ ಈ ಸಮಸ್ಯೆ ದೂರ ಮಾಡಬಹುದು.



Click it and Unblock the Notifications











