Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಾಮಾಲೆ ರೋಗ ನಿವಾರಣೆಗೆ 10 ನೈಸರ್ಗಿಕ ಮನೆಮದ್ದುಗಳು
ಮಳೆಗಾಲ ಶುರುವಾಗುತ್ತಿರುವಂತಹ ಹಲವಾರು ರೀತಿಯ ಕಾಯಿಲೆಗಳು ಬರಲು ಆರಂಭವಾಗುವುದು. ಇದರಿಂದ ಮಳೆಗಾಲದಲ್ಲಿ ನಾವು ತುಂಬಾ ಎಚ್ಚರಿಕೆ ವಹಿಸಿ, ನಮ್ಮ ಆರೋಗ್ಯ ಹಾಗೂ ಆಹಾರದ ಕಡೆಗೆ ಗಮನಹರಿಸಬೇಕು. ಅದರಲ್ಲೂ ಕಲುಷಿತ ನೀರಿನಿಂದಾಗಿ ಹಲವಾರು ಕಾಯಿಲೆಗಳು ಬರುವುದು. ಇದರಿಂದ ನೀರನ್ನು ಕುದಿಸಿ ಕುಡಿದರೆ ತುಂಬಾ ಒಳ್ಳೆಯದು. ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವಂತಹ ಸಮಸ್ಯೆ ಕಾಮಾಲೆ ರೋಗ. ಇದು ಯಕೃತ್ ನ ಚಟುವಟಿಕೆ ಮೇಲೆ ಬೀರುವ ಪರಿಣಾಮದಿಂದಾಗಿ ಬರುವುದು. ಯಕೃತ್ ನಮ್ಮ ದೇಹದ ಪ್ರಮುಖ ಅಂಗ. ಇದು ದೇಹದಲ್ಲಿರುವಂತಹ ವಿಷ ಹಾಗೂ ಹಾನಿಗೀಡಾಗಿರುವಂತಹ ರಕ್ತದ ಕಣಗಳನ್ನು ಹೊರಗೆ ಹಾಕುವುದು ಮತ್ತು ದೇಹವು ಆಹಾರದಿಂದ ಪೋಷಕಾಂಶಗಳನ್ನು ಪಡೆಯಲು ನೆರವಾಗುವುದು ಮತ್ತು ಇದನ್ನು ಶಕ್ತಿಯಾಗಿ ಪರಿವರ್ತನೆ ಮಾಡುವುದು.
ಯಕೃತ್ ಕಿತ್ತಳೆ-ಹಳದಿ ಬಣ್ಣದ ವರ್ಣದ್ರವ್ಯ ಸ್ರವಿಸುವುದು. ಇದನ್ನು ಬಿಲಿರುಬಿನ್ ಎಂದು ಕರೆಯಲಾಗುತ್ತದೆ ಮತ್ತು ಇದು ರಕ್ತದಲ್ಲಿ ಇರುವುದು. ಯಕೃತ್ ಗೆ ಸೋಂಕು ಬಂದಾಗ ಬಿಲಿರುಬಿನ್ ಉತ್ಪತ್ತಿ ಮಾಡಲು ಕಷ್ಟವಾಗುವುದು ಮತ್ತು ಇದು ಅತಿಯಾದರೆ ಆಗ ಅದು ಸುತ್ತಲಿನ ಅಂಗಾಂಶಗಳಿಗೆ ಹರಡಿ ಕಾಮಾಲೆ ರೋಗವು ಬರುವುದು. ಕಾಮಾಲೆ ರೋಗದ ಕೆಲವೊಂದು ಲಕ್ಷಣಗಳೆಂದರೆ ಹಳದಿ ಮೂತ್ರ, ಚರ್ಮ ಮತ್ತು ಕಣ್ಣುಗಳು ಹಳದಿಯಾಗುವುದು. ರಕ್ತಸ್ರಾವ, ಜ್ವರ, ವಾಕರಿಕೆ, ವಾಂತಿ, ಹಸಿವು ಇಲ್ಲದಿರುವುದು, ಊತ, ತೂಕ ಇಳಿಯುವುದು ಇತ್ಯಾದಿಗಳು. ಕಾಮಾಲೆ ರೋಗಕ್ಕೆ ಕೆಲವು ಮನೆಮದ್ದುಗಳು

ಕಬ್ಬಿನ ಹಾಲು
ಕಬ್ಬಿನ ಹಾಲಿನಲ್ಲಿ ಉನ್ನತ ಮಟ್ಟ ಆಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದು ಕಾಮಾಲೆ ರೋಗ ನಿವಾರಣೆ ಮಾಡಲು ತುಂಬಾ ಸಹಕಾರಿ ಎಂದು ಪರಿಗಣಿಸಲಾಗಿದೆ. ಕಬ್ಬಿನ ಹಾಲು ಕುಡಿದರೆ ಅದರಿಂದ ಯಕೃತ್ ನ ಚಟುವಟಿಕೆಯು ಆರಂಭವಾಗುವುದು ಮತ್ತು ಬಿಲಿರುಬಿನ್ ಮಟ್ಟವನ್ನು ಸಮತೋಲನದಲ್ಲಿ ಇಡಬಹುದು. ಪ್ರತಿನಿತ್ಯ 1-2 ಲೋಟ ಕಬ್ಬಿನ ಹಾಲು ಕುಡಿಯಿರಿ.
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಇದೆ ಮತ್ತು ಇದು ಯಕೃತ್ ಗೆ ದೇಹವನ್ನು ನಿರ್ವಿಷಗೊಳಿಸಲು ನೆರವಾಗುವುದು. ಹೀಗಾಗಿ ಕಾಮಾಲೆ ರೋಗದಿಂದ ವೇಗವಾಗಿ ಚೇತರಿಕೆ ಪಡೆಯಬಹುದು. ನಿಮ್ಮ ಆಹಾರ ಕ್ರಮದಲ್ಲಿ 3-4 ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಿ.
ಸಿಟ್ರಸ್ ಹಣ್ಣುಗಳ ಜ್ಯೂಸ್
ಸಿಟ್ರಸ್ ಹಣ್ಣುಗಳಾಗಿರುವಂತಹ ದ್ರಾಕ್ಷಿ ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್ ಯೃಕತ್ ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು ಮತ್ತು ಇದು ಬಿಲಿರುಬಿನ್ ಮಟ್ಟವನ್ನು ತಗ್ಗಿಸುವುದು. ಪ್ರತಿನಿತ್ಯ ನೀವು ಒಂದು ಲೋಟ ದ್ರಾಕ್ಷಿ ಜ್ಯೂಸ್ ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್ ಸೇವಿಸಿ.
ರೋಸ್ಮೆರಿ ಸಾರಭೂತ ತೈಲ
ರೋಸ್ಮೆರಿ ಸಾರಭೂತ ತೈಲದಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಇವೆ ಮತ್ತು ಯಕೃತ್ ಗೆ ಇದು ಹೆಪಟೊಪ್ರೊಟೆಕ್ಟಿವ್ ಪರಿಣಾಮ ಉಂಟು ಮಾಡುವುದು. 12 ಹನಿ ರೋಸ್ಮೆರಿ ಸಾರಭೂತ ತೈಲವನ್ನು 30 ಮಿ.ಲೀ. ತೆಂಗಿನ ಎಣ್ಣೆ ಜತೆಗೆ ಮಿಶ್ರಣ ಮಾಡಿಕೊಳ್ಳಿ ಮತ್ತು ಇದನ್ನು ಯಕೃತ್ ಇರುವ ಭಾಗದಲ್ಲಿ ಹೊಟ್ಟೆಗೆ ಹಚ್ಚಿಕೊಳ್ಳಿ. ನಿಧಾನವಾಗಿ ನೀವು ಮಸಾಜ್ ಮಾಡಿಕೊಳ್ಳಿ.
ಬಿಸಿಲು
ಅಧ್ಯಯನಗಳು ಹೇಳುವ ಪ್ರಕಾರ ಬಿಸಿಲಿನಿಂದ 6.5 ಸಲ ಪರಿಣಾಮಕಾರಿಯಾಗಿ ಕಾಮಾಲೆ ರೋಗವನ್ನು ನಿವಾರಣೆ ಮಾಡಬಹುದು. ಇದು ಬಿಲಿರುಬಿನ್ ಅಣುಗಳ ಐಸೋಮಿಕರಣಕ್ಕೆ ಇದು ನೆರವಾಗುವುದು.
ವಿಟಮಿನ್ ಡಿ
ಚೈನೀಸ್ ಮೆಡಿಕಲ್ ಅಸೋಸಿಯೇಶನ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ, ಕಾಮಾಲೆಗೆ ತುತ್ತಾಗುವಂತಹ ಮಕ್ಕಳಲ್ಲಿ ವಿಟಮಿನ್ ಡಿ ಕಡಿಮೆ ಇರುತ್ತದೆ. ಇದರಿಂದಾಗಿ ಮಕ್ಕಳಿಗೆ ವಿಟಮಿನ್ ಡಿ ಇರುವಂತಹ ಆಹಾರ ನೀಡಬೇಕು ಮತ್ತು ಕಾಮಾಲೆ ನಿವಾರಣೆ ಮಾಡಬಹುದು. ವಿಟಮಿನ್ ಡಿ ಇರುವಂತಹ ಮೊಟ್ಟೆ, ಮೀನು, ಚೀಸ್, ಹಾಲು ಮಶ್ರೂಮ್ ಇತ್ಯಾದಿಗಳು.
ಬಾರ್ಲಿ ನೀರು
ಬಾರ್ಲಿಯಲ್ಲಿ ಇರುವಂತಹ ಔಷಧೀಯ ಗುಣಗಳಿಂದಾಗಿ ಇದು ಕಾಮಾಲೆ ರೋಗ ನಿವಾರಣೆ ಮಾಡಲು ತುಂಬಾ ಸಹಕಾರಿ ಆಗಿದೆ ಎಂದು ಜರ್ನಲ್ ಆಫ್ ಕ್ಲಿನಿಕಲ್ ಆಂಡ್ ಡೈಗ್ನಾಸ್ಟಿಕ್ ರಿಸರ್ಚ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಗಳು ಹೇಳಿವೆ.
ಒಂದು ಲೋಟ ನೀರಿಗೆ ಹುರಿದುಕೊಂಡಿರುವ ಬಾರ್ಲಿಯ ಹುಡಿ ಒಂದು ಚಮಚ ಹಾಕಿ. ಇದನ್ನು ದಿನನಿತ್ಯವು ಕುಡಿಯಿರಿ.
ತುಳಸಿ
ಉರಿಯೂತ ಶಮನಕಾರಿ ಮತ್ತು ಯಕೃತ್ ನ್ನು ರಕ್ಷಿಸುವ ಗುಣ ಹೊಂದಿರುವ ತುಳಸಿಯು ಕಾಮಾಲೆ ರೋಗ ನಿವಾರಣೆ ಮಾಡಲು ತುಂಬಾ ಸಹಕಾರಿ ಆಗಿರಲಿದೆ. ತುಳಸಿ ಎಲೆಗಳನ್ನು ಜಗಿಯಿರಿ ಅಥವಾ ನೀವು ತುಳಸಿ ಚಹಾ ದಿನನಿತ್ಯ ಕುಡಿಯಿರಿ.
ನೆಲ್ಲಿಕಾಯಿ
ವೈದ್ಯಕೀಯ ಉದ್ದೇಶದಿಂದ ನೆಲ್ಲಿಕಾಯಿಯನ್ನು ವಿವಿಧ ರೀತಿಯಿಂದ ಬಳಲ್ಪಡುತ್ತದೆ. ನೆಲ್ಲಿಕಾಯಿಯು ಹಿಂದಿನಿಂದಲೂ ಆಯುರ್ವೇದದಲ್ಲಿ ಕಾಮಾಲೆ ರೋಗ, ಭೇದಿ ಮತ್ತು ಉರಿಯೂತ ನಿವಾರಣೆ ಮಾಡಲು ಬಳಸಿಕೊಂಡು ಬರಲಾಗುತ್ತಿದೆ.
•ಒಂದು ಸಣ್ಣ ಪಾತ್ರೆಯಲ್ಲಿ ಸ್ವಲ್ಪ ನೀರಿಟ್ಟು 2-3 ನೆಲ್ಲಿಕಾಯಿ ಕುದಿಸಿ.
•ನೆಲ್ಲಿಕಾಯಿ ತಿರುಳನ್ನು ನೀರಿನ ಜತೆಗೆ ಮಿಶ್ರಣ ಮಾಡಿ.
•ಇದು ತಣ್ಣಗಾದ ಬಳಿಕ ಸ್ವಲ್ಪ ಜೇನುತುಪ್ಪ ಹಾಕಿಕೊಂಡು ಕುಡಿಯಿರಿ.
ಟೊಮೆಟೊ
ಟೊಮೆಟೊದಲ್ಲಿ ಲೈಕೊಪೆನೆ ಎನ್ನುವಂತಹ ಆಂಟಿಆಕ್ಸಿಡೆಂಟ್ ಅಂಶವಿದೆ ಮತ್ತು ಇದು ಆಂಟಿಜೆನೊಟಾಕ್ಸಿಕ್ ಪರಿಣಾಮ ಬೀರುವುದು. ಅಧ್ಯಯನಗಳ ಪ್ರಕಾರ ಟೊಮೆಟೊ ಕಾಮಾಲೆ ರೋಗ ನಿವಾರಣೆ ಮಾಡಲು ನೆರವಾಗುವುದು.
•ಒಂದು ಸಣ್ಣ ಪಾತ್ರೆಯಲ್ಲಿ 2-3 ಟೊಮೆಟೊವನ್ನು ನೀರಿಗೆ ಹಾಕಿ ಕುದಿಸಿ.
•ಈ ಮಿಶ್ರಣವನ್ನು ಸೋಸಿಕೊಳ್ಳಿ ಮತ್ತು ಟೊಮೆಟೊದ ಸಿಪ್ಪೆ ತೆಗೆಯಿರಿ.
•ಇದನ್ನು ಈಗ ನೀರಿಗೆ ಹಾಕಿಕೊಳ್ಳಿ.
•ಈ ಜ್ಯೂಸ್ ನ್ನು ದಿನಿನಿತ್ಯ ಕುಡಿಯಿರಿ.
ಕಾಮಾಲೆ ರೋಗ ತಡೆಯಲು ಸಲಹೆಗಳು
•ಆಲ್ಕೋಹಾಲ್ ಕುಡಿಯಬೇಡಿ.
•ಆರೋಗ್ಯಕರ ತೂಕ ಕಾಪಾಡಿಕೊಳ್ಳಿ.
•ಸ್ವಚ್ಛತೆ ಸರಿಯಾಗಿ ಕಾಪಾಡಿ.
•ತಾಜಾ ಹಣ್ಣು ಹಾಗೂ ತರಕಾರಿ ಸೇವಿಸಿ.
•ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


