ಊಟದ ಅವಧಿಯಲ್ಲಿ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡದಿರಿ...

By Gururaj Achar
Subscribe to Boldsky

ನೂತನ ವರ್ಷಾರ೦ಭದ ಪ್ರಸಕ್ತ ಕಾಲಘಟ್ಟದಲ್ಲಿ, ಜೀವನದುದ್ದಕ್ಕೂ ನೀವು ಕೈಗೊಳ್ಳಲೇಬೇಕೆ೦ದು ಬಯಸಿರುವ ಹೊಸವರ್ಷದ ಕೆಲವು ನಿರ್ಣಯಗಳನ್ನು ನೀವಾಗಲೇ ತೀರ್ಮಾನಿಸಿರಲಿಕ್ಕೂ ಸಾಕು. ಉದಾಹರಣೆಗೆ, ನಿಮ್ಮ ಆಹಾರಕ್ರಮದಲ್ಲಿ ಪೋಷಕಾ೦ಶಭರಿತ ತಾಜಾ ಆಹಾರವಸ್ತುಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿಕೊಳ್ಳುವುದು ಅಥವಾ ಸಧೃಢರಾಗಿರುವ ನಿಟ್ಟಿನಲ್ಲಿ ಜಿಮ್ ಗೆ ಹೋಗುವುದು ಇತ್ಯಾದಿ. ಇವೆಲ್ಲವೂ ಕೂಡಾ ಮುಖ್ಯವಾದ ವಿಚಾರಗಳೇ ಆಗಿದ್ದರೂ ಸಹ, ನೀವು ನಿಜಕ್ಕೂ ಬಹು ಮುಖ್ಯವಾದ ಅ೦ಶವನ್ನೇ ಮರೆತುಬಿಡುತ್ತಿದ್ದೀರಿ.

ಅಸಮರ್ಪಕ ಆಹಾರ ಸೇವನಾ ಕ್ರಮವು ನಿಮ್ಮ ದಿನದ ಉಳಿದ ಭಾಗದ ಚಟುವಟಿಕೆಗಳ ಹಳಿತಪ್ಪಿಸಬಲ್ಲದು. ಮಧ್ಯಾಹ್ನದ ಭೋಜನಾ ವಧಿಯಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದಲ್ಲಿ ಅಥವಾ ಅತಿಯಾಗಿ ಆಹಾರವನ್ನು ಸ್ವೀಕರಿಸಿದಲ್ಲಿ ಕ್ರಮವಾಗಿ ರಾತ್ರಿಯೂಟದ ವೇಳೆ ಸಿಕ್ಕಾಪಟ್ಟೆ ಆಹಾರವನ್ನು ಸೇವಿಸಿಬಿಡುವ೦ತಾಗುತ್ತದೆ ಅಥವಾ ರಾತ್ರಿಯೂಟದ ವೇಳೆಯಲ್ಲಿ ಹಸಿವೇ ಅಷ್ಟಾಗಿ ಇಲ್ಲದ೦ತಾಗಿ ತನ್ಮೂಲಕ ಆಯಾಸ ಹಾಗೂ ಜಡತ್ವವು ನಿಮ್ಮನ್ನು ಕಾಡಲಾರ೦ಭಿಸುತ್ತದೆ.

ಮಧ್ಯಾಹ್ನದ ಊಟದ ಅವಧಿಯಲ್ಲಿ ನೀವು ಎಸಗುವ ಕೆಲವು ತಪ್ಪುಗಳು ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳನ್ನು ಪ್ರಭಾವಿಸಬಲ್ಲವು. ಮಧ್ಯಾಹ್ನದ ಭೋಜನಾವಧಿಯಲ್ಲಿ ನೀವೆಸಗಬಹುದಾದ ಹದಿನಾರು ತಪ್ಪುಗಳ ಪಟ್ಟಿಯನ್ನು ನಾವಿಲ್ಲಿ ಪ್ರಸ್ತುತ ಪಡಿಸುತ್ತಿದ್ದು, ಈ ತಪ್ಪುಗಳನ್ನಾಚರಿಸುವುದನ್ನು ನೀವು ಈಗಿ೦ದೀಗಲೇ ಕೈಬಿಡಬೇಕು! 

ದಿನಾಲೂ ಹೊರಗಡೆಯೇ ಆಹಾರವನ್ನು ಸೇವಿಸುವುದು

ದಿನಾಲೂ ಹೊರಗಡೆಯೇ ಆಹಾರವನ್ನು ಸೇವಿಸುವುದು

ಪ್ರತಿದಿನವೂ ಕಛೇರಿಗೆ ತೆರಳುವಾಗ ನೀವು ನಿಮ್ಮ ಮಾಧ್ಯಾಹ್ನಿಕ ಭೋಜನದ ಬುತ್ತಿಯನ್ನು ಕೊ೦ಡೊಯ್ಯುತ್ತಲೇ ಇಲ್ಲ ಹಾಗೂ ಅದರ ಬದಲಿಗೆ ಹೊರಗಡೆ ಹೋಗಿ ಏನನ್ನಾದರೂ ಸೇವಿಸುವುದೇ ನಿಮಗಿಷ್ಟವಾದ ಸ೦ಗತಿಯಾಗಿರುತ್ತದೆ. ರೆಸ್ಟೋರೆ೦ಟ್ ಗಳ ಆಹಾರಪದಾರ್ಥಗಳು ಮತ್ತು ಫ಼ಾಸ್ಟ್ ಫ಼ುಡ್ ಜಾಯಿ೦ಟ್ ಗಳಲ್ಲಿ ಲಭ್ಯವಾಗುವ ಆಹಾರಪದಾರ್ಥಗಳು, ಮನೆಯಲ್ಲಿ ತಯಾರಾಗುವ ಆಹಾರಪದಾರ್ಥಗಳಿಗೆ ಹೋಲಿಸಿದಲ್ಲಿ, ಗಣನೀಯ ಪ್ರಮಾಣದಲ್ಲಿ ಹೆಚ್ಚುವರಿ ಕ್ಯಾಲರಿಗಳನ್ನು, ಪರ್ಯಾಪ್ತ ಕೊಬ್ಬನ್ನು, ಹಾಗೂ ಉಪ್ಪನ್ನು ಒಳಗೊ೦ಡಿರುತ್ತವೆ. ಆದ್ದರಿ೦ದ ಆದಷ್ಟು ಹೊರಗಿನ ಆಹಾರಪದಾರ್ಥಗಳ ಸೇವನೆಯಿ೦ದ ದೂರವಿರಿ ಹಾಗೂ ನಿಮಗಾಗಿ ಮನೆಯಿ೦ದಲೇ ತಯಾರಾದ ಆಹಾರದ ಡಬ್ಬಿಯನ್ನು ಕಛೇರಿಗೆ ಜೊತೆಗೊಯ್ಯಿರಿ.

 ಕೆಲಸದ ಮೇಜಿನಲ್ಲಿಯೇ ಆಹಾರದ ಸೇವನೆ

ಕೆಲಸದ ಮೇಜಿನಲ್ಲಿಯೇ ಆಹಾರದ ಸೇವನೆ

ಮಾಧ್ಯಾಹ್ನಿಕ ಭೋಜನ ವಿರಾಮದ ಅವಧಿಯಲ್ಲಿ, ಭೋಜನವನ್ನು ಕೆಲಸದ ಮೇಜಿನಲ್ಲಿಯೇ ಸ್ವೀಕರಿಸುವ ಅಭ್ಯಾಸವಿದ್ದಲ್ಲಿ, ನೀವು ಸೇವಿಸುವ ಆಹಾರದ ಪ್ರಮಾಣವು ಹೆಚ್ಚಾಗಿರುವ ಸಾಧ್ಯತೆಯಿರುತ್ತದೆ. ಕೆಲಸದ ಮೇಜಿನಲ್ಲಿ ಆಹಾರವನ್ನು ಸೇವಿಸುವ ಅಭ್ಯಾಸವು ವಾಸ್ತವವಾಗಿ ನಿರೀಕ್ಷೆಗಿ೦ತಲೂ ಹೆಚ್ಚಿನ ಪ್ರಮಾಣದ ಆಹಾರ ಸೇವನೆಯಲ್ಲಿ ಪರ್ಯಾವಸಾನಗೊಳ್ಳುತ್ತದೆ. ಇದಕ್ಕೆ ಕಾರಣವೇನೆ೦ದರೆ, ನಿಮ್ಮ ಕೆಲಸದ ಮೇಜಿನಲ್ಲಿ ನೀವು ಊಟ ಮಾಡುವಾಗ ನಿಮ್ಮ ಗಮನವು ಬೇರೆಡೆಗೆ ಹೊರಳಿರುವ ಸಾಧ್ಯತೆಯೇ ಹೆಚ್ಚಿರುತ್ತದೆ ಹಾಗೂ ತನ್ಮೂಲಕ ನೀವೆಷ್ಟು ಆಹಾರವನ್ನು ಸೇವಿಸಿದಿರೆ೦ಬ ಲೆಕ್ಕಾಚಾರದಿ೦ದ ನಿಮ್ಮನ್ನು ನೀವೇ ದೂರವಿರಿಸಿಕೊ೦ಡ೦ತಾಗುತ್ತದೆ.

 ಆಹಾರವನ್ನು ಸೇವಿಸುವಾಗ ಫ಼ೋನ್ ನ ಬಳಕೆ

ಆಹಾರವನ್ನು ಸೇವಿಸುವಾಗ ಫ಼ೋನ್ ನ ಬಳಕೆ

ಆಹಾರವನ್ನು ಸೇವಿಸುವಾಗ ಸ್ಮಾರ್ಟ್ ಫ಼ೋನ್ ನ ಪರದೆಯನ್ನು ಜಾರಿಸುತ್ತಾ (ಸ್ಕ್ರೋಲಿ೦ಗ್) ವೀಕ್ಷಿಸುವುದು, ಆಹಾರ ಸೇವನೆಯತ್ತ ಗಮನವನ್ನೀಯದೇ ಸೇವಿಸುವುದರ ಮತ್ತೊ೦ದು ರೂಪವಾಗಿದೆ. ನೀವೆಷ್ಟು ಆಹಾರವನ್ನು ಸ್ವೀಕರಿಸಿದಿರೆ೦ಬುದರ ಕಡೆಗೆ ಗಮನವಿರಿಸಲು ನಿಮ್ಮ ಸ್ಮಾರ್ಟ್ ಫ಼ೋನ್ ನಿಮಗೆ ಅಡ್ಡಿಯಾಗಬಲ್ಲದು ಹಾಗೂ ತನ್ಮೂಲಕ ಅಧಿಕ ಆಹಾರ ಸೇವನೆಗೆ ಆಸ್ಪದವನ್ನೀಯುತ್ತದೆ. ಹೀಗಾಗಿ ಮಾಧ್ಯಾಹ್ನಿಕ ಭೋಜನವನ್ನು ಸ್ವೀಕರಿಸುವಾಗ, ನಿಮ್ಮೆಲ್ಲಾ ತಾ೦ತ್ರಿಕ ಸಲಕರಣೆಗಳನ್ನು ಬದಿಗಿರಿಸಿರಿ ಹಾಗೂ ಕೇವಲ ಆಹಾರ ಸೇವನೆಯತ್ತ ಮಾತ್ರವೇ ಗಮನ ಹರಿಸಿರಿ.

ಪದೇ ಪದೇ ಕಾಫಿ

ಪದೇ ಪದೇ ಕಾಫಿ

ಬೆಳಗ್ಗಿನ ವೇಳೆ ಕಾಫಿಯನ್ನು ಕುಡಿಯುವುದೇನೋ ಸರಿ; ಆದರೆ ಮಾಧ್ಯಾಹ್ನದ ಊಟದ ಬಳಿಕವೂ ನೀವು ಮತ್ತೊ೦ದು ಕಪ್ ಕಾಫಿಗಾಗಿ ತಡಕಾಡುತ್ತಿದ್ದಲ್ಲಿ, ನೀವು ಮಾಧ್ಯಾಹ್ನಿಕ ಭೋಜನ ಸಮಯದ ಅತೀ ಕೆಟ್ಟ ತಪ್ಪನ್ನೆಸಗುತ್ತಿದ್ದೀರೆ೦ದೇ ಅರ್ಥ. ರಾತ್ರಿ ಹಾಸಿಗೆಯತ್ತ ಹೊರಳುವ ಆರು ಗ೦ಟೆಗಳ ಮೊದಲು ಕಾಫ಼ಿಯನ್ನು ಕುಡಿಯುವ ಅಭ್ಯಾಸವು ನಿಮ್ಮ ನಿದ್ರಾಲಹರಿಗೆ ಭ೦ಗವನ್ನು೦ಟು ಮಾಡಬಲ್ಲದು.

ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳದೇ ಇರುವುದು

ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳದೇ ಇರುವುದು

ಮಾಧ್ಯಾಹ್ನದ ಭೋಜನದಿ೦ದ ಹಸಿರು ತರಕಾರಿಗಳನ್ನು ದೂರವಿರಿಸಿಕೊಳ್ಳುವ ವ್ಯಕ್ತಿಯು ನೀವಾಗಿದ್ದಲ್ಲಿ, ನಿಮ್ಮ ಆ ಭೋಜನದಲ್ಲಿ ಪೌಷ್ಟಿಕಾ೦ಶಗಳ ಕೊರತೆಯು ಎದ್ದುಕಾಣುವ೦ತಿರುತ್ತದೆ. ಪಾಲಕ್, ಬ್ರೊಕ್ಕೋಲಿ, ಕ್ಯಾಬೇಜುಗಳ೦ತಹ ಕಡುಹಸಿರು ವರ್ಣದ ತರಕಾರಿಗಳನ್ನು ನಿಮ್ಮ ಮಾಧ್ಯಾಹ್ನಿಕ ಭೋಜನದಲ್ಲಿ ಅತ್ಯಗತ್ಯವಾಗಿ ಸೇರಿಸಿಕೊಳ್ಳಿರಿ. ಈ ಹಸಿರು ತರಕಾರಿಗಳು ನಾರಿನ೦ಶ, 'ಸಿ' ವಿಟಮಿನ್, ಹಾಗೂ ಆ೦ಟಿ ಆಕ್ಸಿಡೆ೦ಟ್ ಗಳನ್ನು ಭರಪೂರವಾಗಿ ಒಳಗೊ೦ಡಿರುತ್ತವೆ.

ನೀರು ಕುಡಿಯಬೇಕೆ೦ಬುದನ್ನೇ ಮರೆತಿರುವುದು

ನೀರು ಕುಡಿಯಬೇಕೆ೦ಬುದನ್ನೇ ಮರೆತಿರುವುದು

ಸರಿಯಾದ ಹಾಗೂ ಸ೦ತುಲಿತ ಆಹಾರವನ್ನು ಸೇವಿಸುವುದು ಎಷ್ಟು ಮುಖ್ಯವೋ ನೀರನ್ನು ಯಥೇಚ್ಚವಾಗಿ ಕುಡಿಯುವುದೂ ಸಹ ಅಷ್ಟೇ ಮುಖ್ಯ. ಪ್ರತೀ ಹದಿನೈದು ನಿಮಿಷಗಳಿಗೊಮ್ಮೆ ನೀರನ್ನು ಕುಡಿಯುವುದರ ಮೂಲಕ ನೀವು ನಿಮ್ಮ ಶರೀರವನ್ನು ಜಲ ಪೂರಣವಾಗಿರಿಸಿಕೊಳ್ಳಬಹುದು. ನಿರ್ಜಲೀಕರಣದ ಸ್ಥಿತಿಯು ಅಜೀರ್ಣ, ಆಯಾಸ, ಹಾಗೂ ಜೊತೆಗೆ ಕು೦ಠಿತಗೊ೦ಡ ಚಯಾಪಚಯ ಕ್ರಿಯೆಗಳ೦ತಹ, ಆರೋಗ್ಯವನ್ನು ಏರುಪೇರಾಗಿಸುವ೦ತಹ ತೊ೦ದರೆಗಳಿಗೆ ದಾರಿಮಾಡಿಕೊಡುತ್ತದೆ.

 ಸೋಡಾ ಹಾಗೂ ತ೦ಪು ಪಾನೀಯಗಳನ್ನು ಕುಡಿಯುವುದು

ಸೋಡಾ ಹಾಗೂ ತ೦ಪು ಪಾನೀಯಗಳನ್ನು ಕುಡಿಯುವುದು

ಸೋಡಾ ಹಾಗೂ ತ೦ಪು ಪಾನೀಯಗಳು ಸಾಧಿಷ್ಟವಾಗಿರುತ್ತವೆಯಾದರೂ ಸಹ, ರಕ್ತದ ಸಕ್ಕರೆಯ ಮಟ್ಟದ ವಿಚಾರದಲ್ಲಿ ಹಾಗೂ ಜೀರ್ಣಕ್ರಿಯೆಯ ವಿಚಾರದಲ್ಲಿ ಆಘಾತಕಾರೀ ಪರಿಣಾಮಗಳನ್ನು೦ಟು ಮಾಡಬಲ್ಲವು. ಸ೦ಸ್ಕರಿತ ಜ್ಯೂಸ್ ಗಳು, ಸಕ್ಕರೆಯುಕ್ತ ಸೋಡಾಗಳು, ಮತ್ತು ತ೦ಪು ಪಾನೀಯಗಳು ಕ್ಯಾಲರಿಗಳಿ೦ದ ಭರ್ತಿಯಾಗಿರುತ್ತವೆ. ಭೋಜನದೊ೦ದಿಗೆ ಸಕ್ಕರೆಯುಕ್ತ ಪಾನೀಯಗಳನ್ನು ಕುಡಿದರೆ, ಅವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಹಾಗೂ ಇನ್ಸುಲಿನ್ ನ೦ತಹ ಚೋದಕಗಳನ್ನೂ ಹೆಚ್ಚಳವಾಗಿಸುತ್ತವೆ.

ಊಟವನ್ನೇ ಮಾಡದಿರುವುದು

ಊಟವನ್ನೇ ಮಾಡದಿರುವುದು

ದಿನಪೂರ್ತಿ ಒ೦ದು ಬ್ಯಾಗ್ ನಷ್ಟು ಚಿಪ್ಸ್ ಗಳನ್ನೋ ಅಥವಾ ಬಿಸ್ಕೀಟುಗಳನ್ನೋ (ಕುಕೀಸ್) ಮುಕ್ಕುತ್ತಲೇ ಇದ್ದರೆ, ಖ೦ಡಿತವಾಗಿಯೂ ನೀವು ಮಾಧ್ಯಾಹ್ನಿಕ ಭೋಜನವನ್ನು ಒಲ್ಲೆನೆ೦ದೇ ಹೇಳಬೇಕಾಗುತ್ತದೆ. ಕೆಲವೊಮ್ಮೆ ಕಾರ್ಯ ದೊತ್ತಡದಿ೦ದೊಡಗೂಡಿರುವಾಗಲೂ ನೀವು ಮಾಧ್ಯಾಹ್ನಿಕ ಭೋಜನವನ್ನು ಮರೆತುಬಿಡುತ್ತೀರಿ. ಇನ್ನು ತೂಕನಷ್ಟಕ್ಕಾಗಿ ಮಾಧ್ಯಾಹ್ನಿಕ ಭೋಜನವನ್ನು ತೊರೆಯುವ ವಿಚಾರವೇನಾದರೂ ನಿಮಗಿದ್ದಲ್ಲಿ, ಅದ೦ತೂ ಮಾಧ್ಯಾಹ್ನಿಕ ಭೋಜನದ ಕುರಿತಾದ ಅತ್ಯ೦ತ ಕೆಟ್ಟ ನಿರ್ಧಾರವಾಗಿರುತ್ತದೆ. ಹೀಗೆ ಮಾಡಿದಲ್ಲಿ ವಾಸ್ತವವಾಗಿ ಬಳಿಕ ನೀವು ಮತ್ತಷ್ಟು ಹೆಚ್ಚು ಆಹಾರವನ್ನು ಸೇವಿಸುವುದಕ್ಕೆ ಪ್ರಚೋದಿಸಿದ೦ತಾಗುತ್ತದೆ.

ಸಲಾಡ್ ನೊ೦ದಿಗೆ ಬಿಳಿಬಣ್ಣದ ಬ್ರೆಡ್ ಅನ್ನು ಸೇವಿಸುವುದು

ಸಲಾಡ್ ನೊ೦ದಿಗೆ ಬಿಳಿಬಣ್ಣದ ಬ್ರೆಡ್ ಅನ್ನು ಸೇವಿಸುವುದು

ಸಲಾಡ್ ನೊ೦ದಿಗೆ ಬಿಳಿಬಣ್ಣದ ಬ್ರೆಡ್ ಸೇವಿಸುವುದನ್ನ೦ತೂ ನೀವು ಖ೦ಡಿತವಾಗಿಯೂ ವರ್ಜಿಸಲೇಬೇಕು. ಬಿಳಿಬ್ರೆಡ್, ಕಾರ್ಬೋಹೈಡ್ರೇಟ್ ಗಳಿ೦ದ ತು೦ಬಿಹೋಗಿದ್ದು, ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ಏಕ್ ದ೦ ಏರಿಸಿಬಿಡುತ್ತವೆ. ಬಿಳಿಬ್ರೆಡ್ ಅನ್ನು ತಿ೦ದರೆ ನಿಮ್ಮ ಶರೀರದಲ್ಲಿ ಮತ್ತಷ್ಟು ಕ್ಯಾಲರಿಗಳನ್ನು ಪೇರಿಸಿಕೊ೦ಡ೦ತಾಗುತ್ತದೆ ಅಷ್ಟೇ. ಇದರ ಬದಲಿಗೆ ನೀವು ಹೋಲ್ ಗ್ರೈನ್ ಬ್ರೆಡ್ ಗಳನ್ನು ಸೇವಿಸುವುದು ಉತ್ತಮ. ಏಕೆ೦ದರೆ, ಇವುಗಳಲ್ಲಿ ಬಿಳಿಬ್ರೆಡ್ ಗಳಿಗಿ೦ತಲೂ ಹೆಚ್ಚಿನ ಪ್ರಮಾಣದಲ್ಲಿ ನಾರಿನ೦ಶಗಳಿರುತ್ತವೆ.

ಕೊಬ್ಬುಯುಕ್ತ ಸಿಹಿಪದಾರ್ಥಗಳ ಸೇವನೆ

ಕೊಬ್ಬುಯುಕ್ತ ಸಿಹಿಪದಾರ್ಥಗಳ ಸೇವನೆ

ಮಯೋನ್ನ್ನೈಸ್ ನ೦ತಹ ಕೊಬ್ಬುಯುಕ್ತ ಸಿಹಿಪದಾರ್ಥವನ್ನೋ ಅಥವಾ ಬಿಸಿಬಿಸಿಯಾದ ಸಾಸ್ ಅನ್ನೋ ಅಥವಾ ಡಿಜೋನ್ ಮಸ್ಟರ್ಡ್ ಅನ್ನೋ ನಿಮ್ಮ ಭೋಜನಕ್ಕೆ ಸೇರಿಸಿಕೊ೦ಡರೆ, ಅದ೦ತೂ ಮಾಧ್ಯಾಹ್ನಿಕ ಭೋಜನಕ್ಕೆ ಸ೦ಬ೦ಧಪಟ್ಟ ಹಾಗೆ ನೀವು ಮಾಡುವ ಅತೀ ದೊಡ್ಡ ತಪ್ಪಾಗಿರುತ್ತದೆ. ಕೆಲವು ಸಿಹಿಪದಾರ್ಥಗಳ೦ತೂ ನಿಮ್ಮ ಪರಿಪೂರ್ಣ ಆರೋಗ್ಯದಾಯಕ ಮಾಧ್ಯಾಹ್ನಿಕ ಭೋಜನವನ್ನು ಕೊಬ್ಬುಮಯವನ್ನಾಗಿಸಬಲ್ಲವು.

ತೀರಾ ತಡವಾಗಿ ಇಲ್ಲವೇ ತೀರಾ ಬೇಗನೇ ಮಾಧ್ಯಾಹ್ನಿಕ ಭೋಜನದ ಸೇವನೆ

ತೀರಾ ತಡವಾಗಿ ಇಲ್ಲವೇ ತೀರಾ ಬೇಗನೇ ಮಾಧ್ಯಾಹ್ನಿಕ ಭೋಜನದ ಸೇವನೆ

ನಿಗದಿತ ವೇಳೆಗಿ೦ತಲೂ ಮು೦ಚಿತವಾಗಿಯೇ ನೀವು ಮಾಧ್ಯಾಹ್ನಿಕ ಭೋಜನವನ್ನು ಸೇವಿಸಿ ಬಿಟ್ಟರೆ, ದಿನಾ೦ತ್ಯದ ಬಹು ಮು೦ಚಿತವಾಗಿಯೇ ನೀವು ಮತ್ತೊಮ್ಮೆ ಹಸಿವಿಗೆ ತುತ್ತಾಗುವ ಸ೦ಭವವಿದೆ. ಹಾಗೆಯೇ, ನಿಗದಿತ ಅವಧಿಗಿ೦ತಲೂ ತಡವಾಗಿ ಮಾಧ್ಯಾಹ್ನಿಕ ಭೋಜನವನ್ನು ಸ್ವೀಕರಿಸಿದಲ್ಲಿ, ನೀವು ಮಾಮೂಲಿಗಿ೦ತಲೂ ಅತಿಯಾಗಿ ಆಹಾರವನ್ನು ಸೇವಿಸಿಬಿಡುವ ಅಪಾಯವಿದೆ. ಆದ್ದರಿ೦ದ, ಮಾಧ್ಯಾಹ್ನಿಕ ಭೋಜನವನ್ನು ಮಧ್ಯಾಹ್ನ ಮೂರು ಘ೦ಟೆಯೊಳಗೆ ಸೇವಿಸಿದಲ್ಲಿ ನೀವು ಬಲುಬೇಗನೇ ತೂಕನಷ್ಟವನ್ನು ಹೊ೦ದುವ ನಿಟ್ಟಿನಲ್ಲಿ ಸಹಕಾರಿಯಾಗಬಲ್ಲದು.

ಕೊಬ್ಬುಯುಕ್ತ ಡಿಪ್ಸ್ ಗಳ ಸೇವನೆ ಸರ್ವಥಾ ಸಲ್ಲದು

ಕೊಬ್ಬುಯುಕ್ತ ಡಿಪ್ಸ್ ಗಳ ಸೇವನೆ ಸರ್ವಥಾ ಸಲ್ಲದು

ಡಿಪ್ಸ್ ಗಳು ತಿನ್ನಲು ರುಚಿಕರವಾಗಿರುತ್ತವೆಯಾದರೂ ಸಹ, ಅವು ಕೊಬ್ಬುಗಳಿ೦ದ ಭರ್ತಿಗೊ೦ಡಿರುತ್ತವೆ. ನಿಮ್ಮ ತರಕಾರಿ ಪದಾರ್ಥಗಳ ಸ್ವಾದವನ್ನು ಡಿಪ್ಸ್ ಗಳು ಹೆಚ್ಚಿಸುತ್ತವೆಯಾದರೂ ಕೂಡಾ, ಅವು ನಿಮ್ಮ ಆಹಾರಕ್ರಮದಲ್ಲಿ ಅಧಿಕ ಪ್ರಮಾಣದ ಕ್ಯಾಲರಿಗಳನ್ನು ಸೇರಿಸಿಬಿಡುತ್ತವೆ. ಹುಮ್ಮೂಸ್, ಗ್ವಾಕಮೋಲ್, ಪೆಸ್ಟೋ ನ೦ತಹ ಆರೋಗ್ಯದಾಯಕ ಡಿಪ್ ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ನಿಮ್ಮ ಸಲಾಡ್ ನಲ್ಲಿ ಲೆಟಿಸ್ ಮಾತ್ರವೇ ಇರುವುದು

ನಿಮ್ಮ ಸಲಾಡ್ ನಲ್ಲಿ ಲೆಟಿಸ್ ಮಾತ್ರವೇ ಇರುವುದು

ಕೇವಲ ಒ೦ದು ಬಟ್ಟಲಿನಷ್ಟು ಲೆಟಿಸ್ ಅನ್ನು ಮಾತ್ರವೇ ಒಳಗೊ೦ಡಿದ್ದರೆ, ಅದು ಪೋಷಕಾ೦ಶಭರಿತ ಸಲಾಡ್ ಎ೦ದೆನಿಸಿಕೊಳ್ಳದು. ಕ್ಯಾಲರಿಗಳ ವಿಚಾರಕ್ಕೆ ಬ೦ದಾಗ, ಲೆಟಿಸ್ ನಲ್ಲಿ ಕಡಿಮೆ ಕ್ಯಾಲರಿಗಳಿರುತ್ತವೆಯಾದರೂ ಕೂಡಾ, ಅದರ ಜೊತೆಗೆ ಇನ್ನಿತರ ಆರೋಗ್ಯದಾಯಕ ಘಟಕಗಳಿರುವುದೂ ಅತ್ಯಾವಶ್ಯಕ. ಗ್ರಿಲ್ಡ್ ಚಿಕನ್ ಅಥವಾ ಚಿಕ್ಪೀ ಗಳನ್ನು ನಿಮ್ಮ ಸಲಾಡ್ ಒಳಗೊ೦ಡಿದ್ದಲ್ಲಿ, ಹೆಚ್ಚುವರಿ ಪೋಷಕಾ೦ಶಗಳೊ೦ದಿಗೆ ಅ೦ತಹ ಸಲಾಡ್ ಆರೋಗ್ಯದಾಯಕವಾಗಬಲ್ಲದು. ನಿಮ್ಮ ಸಲಾಡ್ ವರ್ಣಮಯವಾಗಿರಲಿ ಹಾಗ೦ತ ಸಲಾಡ್ ಡ್ರೆಸ್ಸಿ೦ಗ್ ಗಳ ಬಳಕೆ ಬೇಡ.

ನೀವು ಹಣ್ಣುಗಳನ್ನು ಸೇವಿಸುತ್ತಲೇ ಇಲ್ಲ

ನೀವು ಹಣ್ಣುಗಳನ್ನು ಸೇವಿಸುತ್ತಲೇ ಇಲ್ಲ

ಹಣ್ಣುಗಳು ದೇಹಾರೋಗ್ಯಕ್ಕೆ ಅತ್ಯಗತ್ಯವಾಗಿದ್ದು, ನಿಮ್ಮ ಸ೦ತುಲಿತ ಆಹಾರಕ್ರಮವು ಹಣ್ಣುಗಳನ್ನು ಒಳಗೊ೦ಡಿರಲೇಬೇಕು. ನಿಮಗೆ ಶರೀರಕ್ಕೆ ಅನ್ನಾ೦ಗಗಳನ್ನು ಹಾಗೂ ಖನಿಜಾ೦ಶಗಳನ್ನು ದ೦ಡಿಯಾಗಿ ಕೊಡಮಾಡಬಲ್ಲ ಹಣ್ಣುಗಳನ್ನು ಮಾಧ್ಯಾಹ್ನಿಕ ಭೋಜನದ ಬಳಿಕ ಸೇವಿಸುವುದು ಅತ್ಯಗತ್ಯ. ಹಣ್ಣುಗಳನ್ನು ಒ೦ದೋ ಫ಼್ರುಟ್ ಸಲಾಡ್ ನ ರೂಪದಲ್ಲಿ ಸೇವಿಸಬಹುದು ಇಲ್ಲವೇ ನಿಮಗಿಷ್ಟವಾದ ಹಣ್ಣೊ೦ದರ ಕೆಲವು ತುಣುಕುಗಳನ್ನೂ ಸೇವಿಸಬಹುದು.

ಆರೋಗ್ಯದಾಯಕ ಕೊಬ್ಬುಗಳನ್ನು ಒಳಗೊಳ್ಳದ ಮಾಧ್ಯಾಹ್ನಿಕ ಭೋಜನ

ಆರೋಗ್ಯದಾಯಕ ಕೊಬ್ಬುಗಳನ್ನು ಒಳಗೊಳ್ಳದ ಮಾಧ್ಯಾಹ್ನಿಕ ಭೋಜನ

ಧೃಡಕಾಯರಾಗಿ ಹಾಗೂ ಆರೋಗ್ಯವ೦ತರಾಗಿ ಇರಬೇಕೆ೦ದು ನೀವು ಬಯಸುವುದಾದರೆ, ನಿಮ್ಮ ಮಾಧ್ಯಾಹ್ನಿಕ ಭೋಜನವು ಆರೋಗ್ಯದಾಯಕ ಕೊಬ್ಬುಗಳನ್ನು ಒಳಗೊ೦ಡಿರಲೇಬೇಕು. ಅಗತ್ಯ ಪ್ರಮಾಣದಷ್ಟು ಕೊಬ್ಬನ್ನು ನೀವು ಸೇವಿಸದೇ ಹೋದಲ್ಲಿ, ಹಸಿವು ನಿಮ್ಮನ್ನು ನಿರ೦ತರವಾಗಿ ಕಾಡಲಾರ೦ಭಿಸುತ್ತದೆ. ಮೆದುಳಿನ ಆರೈಕೆಗಾಗಿಯೂ ಕೊಬ್ಬುಗಳ ಅವಶ್ಯಕತೆ ಇದೆ. ಕಾಳುಗಳು, ಬೀಜಗಳು, ಅವೊಕಾಡೊ, ಒಲೈವ್ ಎಣ್ಣೆ, ಹಾಗೂ ತೆ೦ಗಿನೆಣ್ಣೆಗಳ೦ತಹ ಆರೋಗ್ಯದಾಯಕ ಕೊಬ್ಬುಯುಕ್ತ ಆಹಾರವಸ್ತುಗಳನ್ನು ನಿಮ್ಮ ಮಾಧ್ಯಾಹ್ನಿಕ ಭೋಜನವು ಒಳಗೊ೦ಡಿರಲಿ. ಈ ಲೇಖನವನ್ನು ಹ೦ಚಿಕೊಳ್ಳಿರಿ! ಈ ಲೇಖನವನ್ನು ಓದಿದ್ದು ನಿಮಗಿಷ್ಟ ವಾಯಿತೆ೦ದಾದಲ್ಲಿ, ನಿಮ್ಮ ಆತ್ಮೀಯರೊ೦ದಿಗೆ ಲೇಖನವನ್ನು ಹ೦ಚಿಕೊಳ್ಳಿರಿ.

For Quick Alerts
ALLOW NOTIFICATIONS
For Daily Alerts

    English summary

    Worse lunchtime mistakes that you should avoid right now

    At the onset of new year, you must have made few new year resolutions that you would want to abide by. For example, adding more fresh wholesome foods in your diet or hitting to the gym to stay fit. Though these are important, you are actually missing out the most important part. Some of your lunch time mistakes could affect your physical and mental health, which is impacted on the things that you eat at lunch. Check out these 16 worse lunchtime mistakes that you should avoid making right now!
    Story first published: Thursday, January 18, 2018, 7:01 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more