Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ವಿಶ್ವ ಆಹಾರ ದಿನ 2018: ಮನೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಸರಳ ಟಿಪ್ಸ್
ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ದಿನವನ್ನಾಗಿ ಆಚರಿಸಲಾಗುತ್ತದೆ. ಬಳಸುವ ವಸ್ತುಗಳಿಂದ ಹಿಡಿದು ದೇಹವನ್ನು ವಕ್ಕರಿಸಿರುವಂತಹ ರೋಗಗಳ ತನಕ. ಹಾಗೆ ನಾವು ತಿನ್ನುವಂತಹ ಆಹಾರಕ್ಕೂ ಒಂದು ದಿನವಿದೆ. ವಿಶ್ವ ಆಹಾರ ದಿನ 2018ನ್ನು ಆಚರಿಸಲಾಗುತ್ತಿದೆ. ವಿಶ್ವದಲ್ಲಿ ವ್ಯರ್ಥವಾಗುವ ಆಹಾರ ತಡೆಗಟ್ಟಲು ಈ ದಿನವನ್ನು ಆಚರಿಸಲಾಗುತ್ತಿದೆ.
ಅ.16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮನೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಇಲ್ಲಿ ಐದು ಸರಳ ವಿಧಾನಗಳನ್ನು ನೀಡಲಾಗಿದೆ. ಇದು ಯಾವುದೆಂದು ನೀವು ಈ ಲೇಖನದ ಮೂಲಕ ತಿಳಿಯಿರಿ...

ಅಡುಗೆ ಮನೆಯಲ್ಲಿ ಕ್ರಿಯಾತ್ಮಕವಾಗಿರಿ
ಅಡುಗೆ ಮಾಡುವುದನ್ನು ತುಂಬಾ ಜಾಣ್ಮೆಯಿಂದ ಕಲಿತುಕೊಂಡರೆ ಆಗ ಆಹಾರವು ವ್ಯರ್ಥವಾಗುವುದು ತಪ್ಪುವುದು. ಯಾಕೆಂದರೆ ನೀವು ಬಳಸುವಂತಹ ಪದಾರ್ಥಗಳು ತುಂಬಾ ಆಯ್ಕೆಯದ್ದಾಗಿರಬೇಕು. ಇದಕ್ಕಾಗಿ ಸ್ವಲ್ಪ ಮಟ್ಟಿನ ಕ್ರಿಯಾತ್ಮಕತೆ ಮತ್ತು ಹಸಿವು ನಿವಾರಣೆ ಮಾಡಲು ಕೆಲವೊಂದು ಸಾಮಾನ್ಯ ಗುರಿಯ ಕಡೆ ಕೆಲಸ ಮಾಡುವ ಮನಸ್ಸು ಬೇಕು.

ಬಾಕಿ ಉಳಿದಿರುವುದನ್ನು ಆದಷ್ಟು ಮರುಬಳಕೆ ಮಾಡಿ
ಬಾಕಿ ಉಳಿದಿರುವ ಎಲ್ಲವನ್ನು ಸೇರಿಸಿಕೊಂಡು ಹೊಸ ಖಾದ್ಯ ಮಾಡಲು ಸಾಧ್ಯವಿಲ್ಲ. ಆದರೆ ಕೆಲವು ಅನ್ನ, ಪದಾರ್ಥ, ಬಾಕಿ ಉಳಿದಿರುವ ಬ್ರೆಡ್ ನ್ನು ಮತ್ತೆ ಮರುಬಳಕೆ ಮಾಡಬಹುದು. ಉಳಿದಿರುವ ಆಹಾರವನ್ನು ತುಂಬಾ ರುಚಿಕರವಾದ ಖಾದ್ಯ ಮಾಡಬಹುದು. ಬಾಕಿ ಉಳಿದಿರುವ ಆಹಾರವನ್ನು ಬಳಕೆ ಮಾಡಿಕೊಂಡು ಹೊಸ ಹಾಗೂ ತಾಜಾ ಖಾದ್ಯ ತಯಾರಿಸಬಹುದು. ಇದನ್ನು ನೀವು ಪ್ರಯತ್ನಿಸಬೇಕು ಮತ್ತು ಇದು ಬಾಕಿ ಉಳಿದಿರುವ ಪದಾರ್ಥವೆಂದು ನಿಮಗೂ ಗೊತ್ತಾಗದು.

ಸಮರ್ಥನೀಯ ಆಹಾರ ಕ್ರಮ ಪಾಲಿಸಿ
ಆರೋಗ್ಯಕರವಾಗಿರುವುದನ್ನು ತಿನ್ನುವುದು ವೆಚ್ಚದಾಯಕವೂ ಅಲ್ಲ ಮತ್ತು ವ್ಯರ್ಥವಾಗುವುದು ಇಲ್ಲ. ಆಹಾರವನ್ನು ವಿವರಿಸುವಂತಹ ಅಗತ್ಯವೂ ಬರಲ್ಲ. ಸರಳ ಹಾಗೂ ಆರೋಗ್ಯಕರವಾಗಿರುವಂತಹ ಪದಾರ್ಥಗಳನ್ನು ಬಳಸಿಕೊಂಡು ಪೋಷಕಾಂಶಗಳಿರುವ ಆಹಾರ ತಯಾರಿಸಬಹುದು. ನಿಮಗೆ ಆಹಾರ ಬಳಸಿಕೊಳ್ಳಲು ಬಯಸಿದರೆ ಆಗ ವ್ಯರ್ಥವಾಗುವುದು ತಪ್ಪುವುದು. ಸಮರ್ಥನೀಯ ಆಹಾರ ಕ್ರಮ ಪಾಲಿಸುವಂತಹ ವಿಡಿಯೋಗಳನ್ನು ಅಥವಾ ಅಡುಗೆ ಮಾಡುವುದನ್ನು ನೋಡಿ ಕಲಿಯಿರಿ.

ವಾಸ್ತವಿಕವಾಗಿ ಶಾಪಿಂಗ್ ಮಾಡಿ
ನೀವು ಶಾಪಿಂಗ್ ಗೆ ಹೋಗುವ ವೇಳೆ ಸಮಯ ವ್ಯರ್ಥ ಮಾಡಿಕೊಳ್ಳದೆ ನಿಮಗೆ ಬೇಕಾಗಿರುವ ವಸ್ತುಗಳನ್ನು ಮಾತ್ರ ಖರೀದಿ ಮಾಡಿ. ಕೆಲವೊಂದು ಸಲ ಅತಿಯಾಗಿ ಖರೀದಿ ಮಾಡಿದರೆ ಅದು ವ್ಯರ್ಥವಾಗುವುದು. ಜಾಣ್ಮೆಯಿಂದ ಶಾಪಿಂಗ್ ಮಾಡಿ ಮತ್ತು ಬೇಕಿರುವುದನ್ನು ಮಾತ್ರ ಖರೀದಿಸಿ. ಹಾಳಾಗುವಂತಹ ಪದಾರ್ಥಗಳನ್ನು ಒಂದು ವಾರದಗೊಳಗೆ ಬಳಸಿಕೊಳ್ಳಿ. ಇದರಿಂದ ವ್ಯರ್ಥವಾಗುವುದು ತಪ್ಪುವುದು.

ಎಕ್ಸ್ ಪೈಯರಿ ಮತ್ತು ಕೊನೆಗೊಳ್ಳುವ ದಿನಾಂಕ ನೋಡಿ
ಆಹಾರ ವ್ಯರ್ಥವಾಗುವುದನ್ನು ತಪ್ಪಿಸಲು ಡಬ್ಬ ಹಾಗೂ ಕ್ಯಾನ್ ಗಳಲ್ಲಿ ಇರುವಂತಹ ಲೇಬಲ್ ಗಳನ್ನು ಸರಿಯಾಗಿ ಓದಿಕೊಳ್ಳಿ. ಇದು ಯಾವಾಗ ಎಕ್ಸ್ ಪೈಯರಿ ಆಗುವುದು ಮತ್ತು ಇದನ್ನು ಎಷ್ಟು ಸಮಯದ ತನಕ ಬಳಸಿಕೊಳ್ಳಬಹುದು ಎಂದು ಸರಿಯಾಗಿ ತಿಳಿಯಿರಿ. ರೆಫ್ರಿಜರೇಟರ್ ನಲ್ಲಿರುವ ಇಂತಹ ಡಬ್ಬಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಗ ಆಹಾರ ವ್ಯರ್ಥ ಮಾಡುವುದು ತಪ್ಪುವುದು. ಇದರ ಹೊರತಾಗಿ ಆಹಾರ ವ್ಯರ್ಥ ಮಾಡುವುದರಿಂದ ಆಗುವಂತಹ ತೊಂದರೆ ಮತ್ತು ಆಹಾರವಿಲ್ಲದೆ ಜನರು ಬಳಲುತ್ತಾ ಇರುವುದನ್ನು ನೀವು ನೋಡಬಹುದು. ಉಳಿದ ಆಹಾರವನ್ನು ತೆಗೆದುಕೊಂಡು ಹಸಿದವರಿಗೆ ನೀಡುವ ಸರಕಾರೇತರ ಸಂಸ್ಥೆ(ಎನ್ ಜಿಒ)ಗಳ ಬಗ್ಗೆ ತಿಳಿದುಕೊಂಡು ಅವುಗಳಿಗೆ ನೀಡಿ.



Click it and Unblock the Notifications