Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಮೂತ್ರ ವಿಸರ್ಜನೆ ಮಾಡಲೇಬೇಕು!
ವೈವಾಹಿಕ ಜೀವನದಲ್ಲಿ ಆರೋಗ್ಯಕರ ಸಂಬಂಧಗಳು ಮುಂದುವರಿದು ಜೀವನಪೂರ್ತಿ ಇರಬೇಕೆಂದರೆ ಅದರಲ್ಲಿ ಪ್ರಮುಖ ಪಾತ್ರ ವಹಿಸುವುದು ಆರೋಗ್ಯಕರ ಲೈಂಗಿಕ ಜೀವನ. ಲೈಂಗಿಕ ಜೀವನ ಆರೋಗ್ಯವಾಗಿದ್ದರೆ ಆಗ ವೈವಾಹಿಕ ಜೀವನ ಕೂಡ ಸುಗಮವಾಗಿ ಸಾಗುತ್ತಲಿರುವುದು. ಆರೋಗ್ಯಕರ ಲೈಂಗಿಕ ಜೀವನ ಕಾಪಾಡಿಕೊಳ್ಳಲು ಸಂಗಾತಿಗಳು ತಮ್ಮ ಸಂತಾತೋತ್ಪತ್ತಿಯ ಅಂಗಗಳನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ.
ಸಂಗಾತಿಯ ಜನನೇಂದ್ರಿಯ ಆರೋಗ್ಯವು ನಿಮ್ಮ ಮೇಲೆ ಕೂಡ ಪರಿಣಾಮ ಬೀರುವುದು. ನಿಮ್ಮ ಸಂಗಾತಿಯ ಜನನಾಂಗಕ್ಕೆ ಸೋಂಕು ತಗುಲಿದ್ದರೆ ಆಗ ಅದು ನಿಮಗೂ ತಲುಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರಿಂದ ಗುಪ್ತಾಂಗಗಳನ್ನು ಆದಷ್ಟು ಸ್ಚಚ್ಛವಾಗಿಟ್ಟುಕೊಳ್ಳುವುದು ಅತೀ ಅಗತ್ಯ.
ಹೆಚ್ಚಿನ ಮಹಿಳೆಯರಿಗೆ ಮೂತ್ರನಾಳದ ಸೋಂಕು ಕಾಣಿಸಿಕೊಳ್ಳುತ್ತದೆ. ಇದು ಸಂಗಾತಿಯಿಂದಲೇ ಹರಡುವಂತಹ ಸೋಂಕು. ಪುರುಷರಲ್ಲಿ ವೀರ್ಯವು ಮೂತ್ರ ನಾಳದ ಮೂಲಕವೇ ಹಾದು ಬರುವ ಕಾರಣದಿಂದಾಗಿ ಅಲ್ಲಿರುವಂತಹ ಸೋಂಕುಗಳು ಮಹಿಳಾ ಸಂಗಾತಿಗೆ ತಗುಲಬಹುದು. ಲೈಂಗಿಕ ಕ್ರಿಯೆ ಬಳಿಕ ಮಹಿಳೆಯರು ಮೂತ್ರ ವಿಸರ್ಜನೆ ಮಾಡುವುದು ಎಷ್ಟು ಅಗತ್ಯವೆಂದು ಈ ಲೇಖನದಲ್ಲಿ ತಿಳಿದುಕೊಳ್ಳಿ....

ಲೈಂಗಿಕ ಕ್ರಿಯೆ ಬಳಿಕ ಮೂತ್ರವಿಸರ್ಜನೆ
ಲೈಂಗಿಕ ಕ್ರಿಯೆಯಾದ ತಕ್ಷಣ ಮಹಿಳೆಯರು ಮೂತ್ರವಿಸರ್ಜನೆ ಮಾಡಿಕೊಳ್ಳುವುದು ಅತೀ ಅಗತ್ಯ. ಯಾಕೆಂದರೆ ಜನನೇಂದ್ರಿಯಗಳಲ್ಲಿ ಇರುವಂತಹ ಸೋಂಕು ಮೂತ್ರವಿಸರ್ಜನೆ ಮೂಲಕ ಹೊರಹೋಗುತ್ತದೆ. ಪುರುಷರ ವೀರ್ಯ ಮತ್ತು ಮೂತ್ರವು ಒಂದೇ ನಾಳದ ಮೂಲಕ ಬರುವ ಕಾರಣದಿಂದ ಮೂತ್ರನಾಳದಲ್ಲಿರುವ ಸೋಂಕು ಮಹಿಳೆಯರಿಗೆ ತಗುಲಬಹುದು.

ಲೈಂಗಿಕ ಕ್ರಿಯೆ ಬಳಿಕ ಯೋನಿ ತೊಳೆಯುವುದು
ಲೈಂಗಿಕ ಕ್ರಿಯೆ ಬಳಿಕ ತೆಗೆದುಕೊಳ್ಳಬೇಕಾದ ಮುಖ್ಯ ಕ್ರಮವೆಂದರೆ ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು. ಕೇವಲ ಮೂತ್ರನಾಳದ ಸೋಂಕು ಮಾತ್ರವಲ್ಲ, ಬೇರೆ ರೀತಿಯ ಸೋಂಕು ನಿಮ್ಮ ದೇಹದೊಳಗೆ ಪ್ರವೇಶ ಮಾಡಬಹುದು. ಕಾಂಡೋಮ್ ಬಳಸಿದರೆ ಅದು ಇಬ್ಬರು ಸಂಗಾತಿಗಳನ್ನು ಕೂಡ ಲೈಂಗಿಕ ಸೋಂಕಿನಿಂದ ರಕ್ಷಿಸುವುದು. ಕಾಂಡೋಮ್ ಬಳಸದೆ ಇದ್ದರೆ ಆಗ ಸರಿಯಾದ ಸ್ವಚ್ಛತೆಯನ್ನು ಪಾಲಿಸಿ.

ಮಹಿಳೆಯರಿಗೆ ಪುರುಷರಿಗೆ ಸೋಂಕು ಬರುವ ಸಾಧ್ಯತೆ ಕಡಿಮೆ?
ಮಹಿಳೆಯರಿಗೆ ಮೂತ್ರವಿಸರ್ಜನೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯು ಬೇರೆ ಬೇರೆಯಾಗಿರುವ ಕಾರಣದಿಂದ ಪುರುಷರಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುವುದು. ಯಾವುದೇ ರೀತಿಯ ಸೋಂಕು ಬರದಂತೆ ತಡೆಯಲು ಮಹಿಳೆಯರು ಹಾಗೂ ಪುರುಷರು ಲೈಂಗಿಕ ಕ್ರಿಯೆ ಮೊದಲು ಗುಪ್ತಾಂಗವನ್ನು ಸರಿಯಾಗಿ ತೊಳೆಯಬೇಕು. ಮಹಿಳೆಯರು ಲೈಂಗಿಕ ಕ್ರಿಯೆ ಬಳಿಕ ಮೂತ್ರವಿಸರ್ಜನೆ ಮಾಡಿದರೆ ಸೋಂಕು ಹೊರಹೋಗುವುದು.

ಪುರುಷರು ಮಹಿಳೆಯರಿಗಿಂತ ಕಡಿಮೆ ಪ್ರಮಾಣದಲ್ಲಿ ಸೋಂಕು ಪೀಡಿತರಾಗುತ್ತಾರೆ
ಮಹಿಳೆಯರಲ್ಲಿ ಯುರೆತ್ರಾ ಮತ್ತು ಸಂತಾನೋತ್ಪತ್ತಿ ನಾಳವು ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಪುರುಷರಿಗೆ ಮಹಿಳೆಯರಿಂದ ಸೋಂಕು ರವಾನೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...
ದಂಪತಿಗಳು ಲೈಂಗಿಕ ಕ್ರಿಯೆಗೆ ಮೊದಲು ಮತ್ತು ನಂತರ ಜನನಾಂಗಗಳನ್ನು ಸ್ವಚ್ಛಗೊಳಿಸಿಕೊಂಡು ತಮ್ಮನ್ನು ತಾವು ಸೋಂಕುಗಳಿಂದ ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಹಿಳೆಯರು ಸಹ ಸಂಭೋಗದ ನಂತರ ಮೂತ್ರ ವಿಸರ್ಜನೆ ಮಾಡಿ, ತಮ್ಮ ಜನನಾಂಗದಲ್ಲಿರುವ ಸೋಂಕನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು.



Click it and Unblock the Notifications
