For Quick Alerts
ALLOW NOTIFICATIONS  
For Daily Alerts

ಯಾವೆಲ್ಲಾ ತರಕಾರಿಗಳನ್ನು ಹಸಿಯಾಗಿ ಸೇವಿಸಬಹುದು?

By Jaya
|

ನಮ್ಮ ಆರೋಗ್ಯದಲ್ಲಿ ಹಣ್ಣು ತರಕಾರಿಗಳ ಮಹತ್ವವನ್ನು ಅರಿತಿದ್ದೇವೆ. ತರಕಾರಿಗಳನ್ನು ಯಥೇಚ್ಛವಾಗಿ ತಿನ್ನಬೇಕೆಂಬ ಸಲಹೆಯನ್ನು ವೈದ್ಯರು ನೀಡುತ್ತಿದ್ದು, ಪೋಷಕಾಂಶ ಮತ್ತು ವಿಟಮಿನ್‍‎ಗಳನ್ನು ಇದು ಒದಗಿಸುವುದರಿಂದ ನಿತ್ಯದ ಆಹಾರದಲ್ಲಿ ಈ ತರಕಾರಿಗಳನ್ನು ಸೇವಿಸಲೇಬೇಕು. ನೀವು ಸಾಕಷ್ಟು ಪ್ರಮಾಣದಲ್ಲಿ ತರಕಾರಿಗಳನ್ನು ಸೇವಿಸಿದಲ್ಲಿ ಕಾಯಿಲೆಗಳನ್ನು ಮೂಲದಲ್ಲಿಯೇ ನೀಗಿಸಿ ಕೊಳ್ಳಬಹುದಾಗಿದೆ.

Vegetables

ತರಕಾರಿಗಳಲ್ಲಿರುವ ಆರೋಗ್ಯ ಅಂಶಗಳು ಎಷ್ಟಿದೆ ಎಂದರೆ ಮಾರಕ ಕಾಯಿಲೆಗಳಾದ ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಮಸ್ಯೆಗಳನ್ನು ನೀಗಿಸಬಲ್ಲ ಶಕ್ತಿಯನ್ನು ಪಡೆದುಕೊಂಡಿರುತ್ತವೆ. ಅಗತ್ಯ ಅಂಶಗಳಾದ ಮಿನರಲ್ಸ್, ವಿಟಮಿನ್, ಉತ್ಕರ್ಷಣ ನಿರೋಧಿ ಅಂಶಗಳು ಮತ್ತು ಫೈಬರ್ ಅನ್ನು ತರಕಾರಿಗಳು ಒದಗಿಸುತ್ತವೆ. ಈಗ ಎದ್ದಿರುವ ಪ್ರಶ್ನೆಯೆಂದರೆ ಈ ತರಕಾರಿಗಳನ್ನು ಹಸಿಯಾಗಿ ಸೇವಿಸಬಹುದೇ ಎಂದಾಗಿದೆ. ಹಸಿಯಾಗಿ ಸೇವಿಸುವ ತರಕಾರಿಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಇವುಗಳನ್ನು ಹಸಿಯಾಗಿ ಸೇವಿಸಬಹುದಾಗಿದೆ.

ಬೀಟ್‎ರೂಟ್
ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್‌ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್‌ರೂಟ್ ಅನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.


ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಮತ್ತು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು- ಮೊದಲಾದ ರೀತಿಯಲ್ಲಿ ಈ ಕೆಂಪುಕೆಂಪಾದ ಗಡ್ಡೆ ನಮ್ಮ ನೆರವಿಗೆ ಬರುತ್ತದೆ. ಅತ್ಯಂತ ಮುಖ್ಯವಾಗಿ ನಮ್ಮ ರಕ್ತದಲ್ಲಿ ಕೆಂಪು ರಕ್ತಕಣಗಳ ಕೊರತೆಯಿಂದಾಗಿ ಉಂಟಾಗುವ ಅನೀಮಿಯಾ ಸ್ಥಿತಿಗೂ ಬೀಟ್‌ರೂಟ್ ನೀಡುವ ನೆರವು ಯಾವುದೇ ಬೇರೆ ಆಹಾರದಲ್ಲಿಲ್ಲ! ಅದರಲ್ಲೂ ಹಸಿ ಬೀಟ್‎ರೂಟ್ ಜ್ಯೂಸ್ ಸೇವಿಸುವುದು ಉತ್ತಮವಾಗಿದೆ. ನಿಮ್ಮ ಆರೋಗ್ಯ ವರ್ಧನೆಗಾಗಿ ಮುಂಜಾನೆ ಹಸಿ ಬೀಟ್‎ರೂಟ್ ತುಂಡನ್ನು ಸೇವಿಸಿ.

ಬೆಳ್ಳುಳ್ಳಿ


ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಸಮಸ್ಯೆಯನ್ನು ಬೆಳ್ಳುಳ್ಳಿ ನೀಗಿಸುತ್ತದೆ. ಇದು ಹೃದಯಕ್ಕೆ ಉತ್ತಮ ಎಂದೆನಿಸಿದ್ದು ಇದು ನೈಸರ್ಗಿಕ ಆಂಟಿಬಯೋಟಿಕ್ ಎಂದೆನಿಸಿದೆ.

ಈರುಳ್ಳಿ‎
ಪ್ರಾಚೀನ ಕಾಲದಿಂದಲೂ ಈರುಳ್ಳಿ ಔಷಧೀಯ ಗುಣ ಹೊಂದಿದೆ ಎಂದು ಸಾಬೀತಾಗಿದೆ. ವಿಶ್ವ ಅರೋಗ್ಯ ಸಂಸ್ಥೆ ಕೂಡ ಈರುಳ್ಳಿ ಹಸಿವು ಕಡಿಮೆ ಮಾಡಿ ಅಪಧಮನಿ ಕಾಠಿಣ್ಯ ಹೊಂದದಂತೆ ನೋಡಿಕೊಳ್ಳುತ್ತದೆ ಎಂದು ತಿಳಿಸಿದೆ.ಅರೋಗ್ಯ ತಜ್ಞರು ಈರುಳ್ಳಿಯಿಂದ ಅಸ್ತಮ, ಅಲರ್ಜಿ, ನೆಗಡಿ ಸಂಬಂಧಿತ ಕೆಮ್ಮು, ಶೀತ ಇವುಗಳಿಂದ ಬಿಡುಗಡೆ ದೊರೆಯುತ್ತದೆ ಎಂಬುವುದನ್ನು ಒಪ್ಪಿಕೊಳ್ಳುತ್ತಾರೆ. ಈರುಳ್ಳಿ ಯಲ್ಲಿರುವ ಗಂಧಕದ ಸಂಯುಕ್ತಗಳು ಮತ್ತು ಸಾರಭೂತ ತೈಲಗಳು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ಹೇಳಲಾಗಿದೆ. ಈರುಳ್ಳಿಯನ್ನು ಔಷಧೀಯ ಗುಣಗಳಿಗಾಗಿ ಅನೇಕ ಜನರು ಉಪಯೋಗಿಸುತ್ತಿದ್ದಾರೆ.


ಈರುಳ್ಳಿಯಲ್ಲಿ ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ, ಸೋಡಿಯಂ, ಪೊಟಾಷ್ಯಿಯಂ, ಸೇಲೆನಿಯಂ ಮತ್ತು ರಂಜಕ ಇವೆ.ಈರುಳ್ಳಿಯಲ್ಲಿರುವ ಜೀವವಿರೋಧಿ ಗುಣ ಮನೆಯಲ್ಲಿ ಫಂಗಸ್ ಬರದಂತೆ ತಡೆಯಲು ಸಹಕಾರಿಯಾಗಿದೆ.ಈರುಳ್ಳಿಯನ್ನು ತೇವಭರಿತ ನೀರಿರುವ ಜಾಗದಲ್ಲಿ ಬೆಳೆಯಬಹುದು. ನೀವು ನಿಮ್ಮ ಮನೆಯ ಹಿಂಭಾಗದಲ್ಲೂ ಕೂಡ ಇದನ್ನು ಬೆಳೆಯಬಹುದು.ವಿಶ್ವದಾದ್ಯಂತ ಅನೇಕ ಖಾದ್ಯ ತಯಾರಿಸಲು ಈರುಳ್ಳಿಯನ್ನು ಬಳಸುತ್ತಾರೆ. ಇದನ್ನು ಒಡನಾಡಿ ಸಸ್ಯ ಎಂದು ಕರೆಯುತ್ತಾರೆ ಏಕೆಂದರೆ ಇದರ ಸುತ್ತ ಇತರ ತರಕಾರಿಗಳು ಮತ್ತು ಸಸ್ಯಗಳನ್ನು ಬೆಳೆದರೆ ಇದು ಚೆನ್ನಾಗಿ ಬೆಳೆಯುತ್ತದೆ. ಹೆಚ್ಚಿನ ಸಲಾಡ್‎ಗಳಲ್ಲಿ ಈರುಳ್ಳಿ ಬಳಸಿರುವುದನ್ನು ನೀವು ಕಂಡಿರುತ್ತೀರಿ. ಅವುಗಳು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದಲೇ ಹಸಿಯಾಗಿ ಈ ತರಕಾರಿಯನ್ನು ಸೇವಿಸಲಾಗುತ್ತದೆ. ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬ ಕಾರಣಕ್ಕಾಗಿ ಹಸಿ ಈರುಳ್ಳಿ ಜ್ಯೂಸ್ ಅನ್ನು ಸೇವಿಸುತ್ತಾರೆ.

ಕ್ಯಾರೆಟ್
ನೈಸರ್ಗಿಕವಾಗಿ ಸಿಹಿಯಾಗಿರುವ, ಜಗಿಯುವಾಗ ಕುರುಕು ಶಬ್ದ ಬರುವ ಹಾಗೂ ನೋಡಲೂ ಕೇಸರಿ ಬಣ್ಣ ಹೊಂದಿರುವ ಕ್ಯಾರೆಟ್ಟುಗಳು ಯಾರಿಗೆ ಇಷ್ಟವಿಲ್ಲ? ರಸಭರಿತ ಹಾಗೂ ತಾಜಾ ಕ್ಯಾರೆಟ್ಟುಗಳನ್ನು ಹಸಿಯಾಗಿಯೂ ಬೇಯಿಸಿ ತಯಾರಿಸಿದ ಖಾದ್ಯಗಳನ್ನೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇವುಗಳ ಸಿಹಿ ಹಾಗೂ ಪೌಷ್ಟಿಕಾಂಶಗಳಿಂದಾಗಿ ಇದನ್ನೊಂದು ಅಪ್ಪಟ ಆರೋಗ್ಯಕರ ಆಹಾರವೆಂದು ಕರೆಯಬಹುದು. ಸಾಮಾನ್ಯ ಮರಳುಮಿಶ್ರಿತ ಮಣ್ಣಿನಲ್ಲಿ ಹೆಚ್ಚಿನ ಆರೈಕೆ ಬೇಡದೇ ಬೆಳೆಯುವ ಕ್ಯಾರೆಟ್ಟುಗಳನ್ನು ವಿಶ್ವದಾದ್ಯಂತ ಎಲ್ಲೆಡೆ ಬೆಳೆಯಲಾಗುತ್ತದೆ. ಕನ್ನಡದಲ್ಲಿ ಗಜ್ಜರಿ ಎಂದು ಕರೆಯಲಾಗುವ ಈ ಸುಂದರ ಕ್ಯಾರೆಟ್ ರುಚಿಕರ ಮಾತ್ರವಲ್ಲ, ಬೀಟಾ ಕ್ಯಾರೋಟೀನ್, ವಿಟಮಿನ್ ಎ, ವಿವಿಧ ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಇದನ್ನೊಂದು ಆರೋಗ್ಯಕರ ಅಹಾರವನ್ನಾಗಿಸಿವೆ.


ಇವುಗಳ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವುದು ಮಾತ್ರವಲ್ಲ, ಕಣ್ಣುಗಳ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಅಲ್ಲದೇ ಇದರಲ್ಲಿರುವ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಖನಿಜಗಳನ್ನು ಕ್ಯಾರೆಟ್ ನೀಡಲು ಶಕ್ತವಾಗಿದೆ ಎಂದು ನಿಮಗೆ ಗೊತ್ತಿತ್ತೇ? ಇದರಲ್ಲಿ ತಾಮ್ರ, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಗಂಧಕ, ಪೊಟ್ಯಾಶಿಯಂ ಹಾಗೂ ಮ್ಯಾಂಗನೀಸ್ ಇದ್ದು ಮೂಳೆಗಳನ್ನು ದೃಢಗೊಳಿಸುತ್ತದೆ. ನಿತ್ಯವೂ ಕ್ಯಾರೆಟ್ಟುಗಳನ್ನು ಸೇವಿಸುವ ಮೂಲಕ ನಿತ್ಯದ ಖನಿಜಗಳ ಅಗತ್ಯತೆಯನ್ನು ಪೂರೈಸಬಹುದು.

ಟೊಮೇಟೊ
ಟೊಮೇಟೊವನ್ನು ಹಸಿಯಾಗಿ ಸೇವಿಸಬಹುದಾಗಿದೆ. ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ಬಾಯಿ, ಶ್ವಾಸಕೋಶ ಮತ್ತು ಜನನೇಂದ್ರಿಯ ಕ್ಯಾನ್ಸರ್ ಅನ್ನು ನಿವಾರಿಸುತ್ತದೆ.

ಸೌತೆಕಾಯಿ
ನಮ್ಮ ಆಹಾರದಲ್ಲಿ ಹಸಿ ತರಕಾರಿಗಳನ್ನು ಅಳವಡಿಸಿಕೊಳ್ಳಲು ಹಲವು ಕಾರಣಗಳಿವೆ. ಬೇಯಿಸಿದ ತರಕಾರಿಗಳ ಮೂಲಕ ನಮಗೆ ಹಲವು ಪೋಷಕಾಂಶಗಳು ಲಭ್ಯವಾದರೂ ಕೆಲವು ಅಮೂಲ್ಯ ಪೋಷಕಾಂಶಗಳು ಬೇಯುವಾಗ ನಷ್ಟವಾಗುತ್ತವೆ. ವಿಶೇಷವಾಗಿ ನೀರಿನಲ್ಲಿ ಕರಗುವ, ಆದರೆ ಬಿಸಿಯಾದರೆ ಆವಿಯಾಗುವ ಪೋಷಕಾಂಶಗಳು. ಅಂತೆಯೇ ಹಣ್ಣುಗಳು, ಸೌತೆಕಾಯಿ, ಲಿಂಬೆರಸ ಮೊದಲಾದವುಗಳನ್ನು ಬಿಸಿಮಾಡದೇ ಸೇವಿಸಿದರೆ ಉತ್ತಮ.


ಸೌತೆಕಾಯಿಯಲ್ಲಿ ವಿಟಮಿನ್ ಸಿ, ಕೆ, ಬಿ, ತಾಮ್ರ, ಪೊಟ್ಯಾಶಿಯಂ, ಮ್ಯಾಂಗನೀಸ್ ನಂತಹ ಖನಿಜಗಳ ಜೊತೆಗೆ ವಿವಿಧ ಆಂಟಿ ಆಕ್ಸಿಡೆಂಟುಗಳಿವೆ. ಇವು ಹಲವು ಕಾಯಿಲೆಗಳಿಗೆ ಔಷಧಿಯಂತೆ ಕಾರ್ಯ ನಿರ್ವಹಿಸುವುದರೊಂದಿಗೇ ದೇಹಕ್ಕೆ ಪೋಷಣೆಯನ್ನೂ ನೀಡುತ್ತವೆ. ಅದರಲ್ಲೂ ಒಂದು ದೊಡ್ಡ ಜಗ್ ನೀರಿನಲ್ಲಿ ಸಿಪ್ಪೆ ಸುಲಿಯದ ಕೆಲವು ಸೌತೆಕಾಯಿಗಳನ್ನು ಚಿಕ್ಕದಾಗಿ ಹೋಳಾಗಿಸಿ ಹನ್ನೆರಡು ಗಂಟೆಗಳ ಕಾಲ (ಸಂಜೆ ಆರರಿಂದ ಬೆಳಿಗ್ಗೆ ಆರರವರೆಗೆ ಅತಿ ಸೂಕ್ತವಾದ ಸಮಯ) ನೆನೆಸಿ ಬಳಿಕ ಈ ನೀರನ್ನು ಸೋಸಿ ದಿನವಿಡೀ ಈ ನೀರನ್ನು ಕುಡಿಯಿರಿ.

ಪಾಲಾಕ್ ಮತ್ತು ಕೋಸುಗೆಡ್ಡೆ
ಹೌದು ತರಕಾರಿಗಳಾದ ಪಾಲಾಕ್ ಮತ್ತು ಕೋಸುಗೆಡ್ಡೆಯನ್ನು ನೀವು ಹಸಿಯಾಗಿ ಸೇವಿಸಬಹುದಾಗಿದೆ. ಬ್ರಕೋಲಿಯನ್ನು ಹಸಿಯಾಗಿ ಸೇವಿಸಿದಷ್ಟು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಇವುಗಳನ್ನು ಜ್ಯೂಸ್ ರೂಪದಲ್ಲಿ ಕೂಡ ನಿಮಗೆ ಸೇವಿಸಬಹುದಾಗಿದೆ.

English summary

Which Vegetables Are To Be Eaten Raw?

We all know that vegetables play a key role in helping us survive. Apart from calories, we also need nutrients to function well. Only when you consume enough vegetables, you can minimise the risk of various health issues. And in fact, some vegetables also have the potential to prevent dangerous health issues like diabetes, cancer and even heart issues. Certain essential nutrients like minerals, vitamins, antioxidants and fibre can be provided through vegetables. So, you can fall in love with salads if you are in love with your health. But can all vegetables be consumed raw? Or should they be cooked before consumed? Well, here are some vegetables that can be eaten raw.
X
Desktop Bottom Promotion