Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ಎಚ್ಚರ! ಜಾಸ್ತಿ ಬ್ರೆಡ್ ತಿಂದರೆ ಲೂಸ್ ಮೋಷನ್ ಆಗಬಹುದು!

ಸರಿ ಸುಮಾರು 30,000ಕ್ಕಿಂತಲೂ ಹೆಚ್ಚು ವರ್ಷಗಳಿಂದ ಬ್ರೆಡ್‍ಅನ್ನು ಸೇವಿಸುತ್ತಾ ಬಂದಿದ್ದೇವೆ. ಆಧುನಿಕ ಜೀವನ ಶೈಲಿಯಲ್ಲಿ ಮುಳುಗಿರುವವರು ಅಂದರೆ ಒಂದು ಅಂಕಿ ಅಂಶದ ಪ್ರಕಾರ ಶೇ.65ರಷ್ಟು ಜನರ ಪ್ರಮುಖ ಆಹಾರವೇ ಬ್ರೆಡ್ ಆಗಿದೆ ಎಂದರೆ ತಪ್ಪಾಗಲಾರದು. ಬ್ರೆಡ್ ಕೆಲವು ರೀತಿಯಲ್ಲಿ ಆರೋಗ್ಯಕರವಾದ ತಿನಿಸು ಅಥವಾ ಆಹಾರ ಪದಾರ್ಥ ಎಂದು ಹೇಳಲಾಗುತ್ತದೆ.
ಆದರೂ ಗಣನೀಯವಾಗಿ ಬ್ರೆಡ್ ಸೇವನೆ ಮಾಡಿದರೆ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವವಾಗುವುದು. ಬ್ರೆಡ್ ಸಂಸ್ಕರಿಸಿದ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಬರುತ್ತದೆ. ಒತ್ತಡದ ಬದುಕು ಅಥವಾ ಗಡಿಬಿಡಿಯ ಜೀವನ ಶೈಲಿಯಲ್ಲಿ ಬ್ರೆಡ್ ಸೇವನೆ ಸರಳ ಹಾಗೂ ಸುಲಭ ವಿಧಾನವಾಗಿದೆ. ಇದರಿಂದ ಅಷ್ಟೇ ಸುಲಭವಾಗಿ ರಕ್ತದೊತ್ತಡ, ಉದರ ಕಾಯಿಲೆ, ಫ್ರಕ್ಟೋಸ್, ಕೊಲೆಸ್ಟ್ರಾಲ್, ಅಧಿಕ ಕ್ಯಾಲೋರಿ, ಅನಗತ್ಯ ಪೋಷಕಾಂಶಗಳು, ಮಲಬದ್ಧತೆಯಂತಹ ಸಮಸ್ಯೆಗಳು ಕಾಡುತ್ತವೆ.

ಸರಳ ಹಾಗೂ ಸುಲಭ ರೀತಿಯಲ್ಲಿ ಸೇವಿಸಬಹುದಾದ ಆಹಾರವಾದ ಬ್ರೆಡ್‍ನಿಂದ ಮಲಬದ್ಧತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು? ಎನ್ನುವುದರ ವಿವರಣೆಯನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ.
ಗ್ಲುಟನ್ ಇರುವಿಕೆ:
ಬ್ರೆಡ್ ತಯಾರಿಸುವ ಹಿಟ್ಟಿನಲ್ಲಿ ಗ್ಲುಟನ್ ಎಂಬ ಪ್ರೋಟೀನ್ ಮಿಶ್ರಣವು ಒಳಗೊಂಡಿರುತ್ತದೆ. ಗ್ಲುಟನ್ ಎನ್ನುವುದು ಧಾನ್ಯಗಳ ಎಂಡೋಸ್ಪರ್ಮ್ ಗಳ ಪಿಷ್ಟದೊಂದಿಗೆ ಇರುತ್ತದೆ. ಬ್ರೆಡ್‍ನ ಹಿಟ್ಟಿನಲ್ಲಿ ಇರುವ ವಿಸ್ಕೋಲಾಸ್ಟಿಕ್ ಪ್ರೋಟೀನ್ ಎನ್ನಲಾಗುವುದು. ಇದು ಬೇಯಿಸಿದಾಗ ಬ್ರೆಡ್‍ನ ಸೂಕ್ತ ವಿನ್ಯಾಸ ತರಲು ಸಹಕರಿಸುವುದು.
ಬ್ರೆಡ್ ಸೇವನೆಯಿಂದ ಜೀರ್ಣಕಾರಿ ಗೋಡೆಗಡ ಕಿರಿಕಿರಿಯನ್ನು ಉಂಟುಮಾಡುವುದು. ಮುಖ್ಯವಾಗಿ ಸಣ್ಣಕರುಳಿನ ವಿಲ್ಲಿಗಳಿಗೆ ಎನ್ನಬಹುದು. ಈ ಸಮಸ್ಯೆಗೆ ಗ್ಲುಟನ್ ಸಮಸ್ಯೆ ಅಥವಾ ಉದರ ಕಾಯಿಲೆ ಎಂದು ಕರೆಯಲಾಗುತ್ತದೆ. ನಮ್ಮ ದೇಹದಲ್ಲಿರುವ ಪೋಷಕಾಂಶಗಳನ್ನು ಕರುಳಿನಲ್ಲಿರುವ ವಿಲ್ಲಿಗಳು ಹೀರಿಕೊಳ್ಳುತ್ತವೆ. ಬ್ರೆಡ್ ಸೇವನೆಯ ಪರಿಣಾಮವಾಗಿ ವಿಲ್ಲಿಗಳು ಕಾರ್ಯನಿರ್ವಹಿಸದೆ ಇರುತ್ತವೆ. ಇದರಿಂದಾಗಿ ಹೊಟ್ಟೆ ನೋವು, ಉಬ್ಬರ, ಜೀರ್ಣಕ್ರಿಯೆ, ಕರುಳಿನ ಅಸಂಗತತೆ ಉಂಟಾಗುವುದು. ಒಂದು ಅಂಕಿ ಅಂಶದ ಪ್ರಕಾರ ಶೇ.77ರಷ್ಟು ಜನರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಫೈಟಿಕ್ ಆಸಿಡ್:
ಬ್ರೆಡ್ ಹಿಟ್ಟಿನಲ್ಲಿ ಫೈಟಿಕ್ ಆಮ್ಲಗಳು ಇರುತ್ತವೆ. ಇದು ವಿರೋಧಿ ಪೋಷಕಾಂಶ ಎಂದು ಕರೆಯಲಾಗುವುದು. ಇದು ಅಂಟುವ ಪರಿಣಾಮವನ್ನು ಉಂಟುಮಾಡುತ್ತದೆ. ಜೊತೆಗೆ ಸೇವಿಸುವ ಆಹಾರದಿಂದ ಸತು ಮತ್ತು ಕ್ಯಾಲ್ಸಿಯಂ ಗಳಂತಹ ಪೋಷಕಾಂಶಗಳ ಹೀರುವಿಕೆಯನ್ನು ತಡೆಯುವುದು. ಇದರಿಂದ ಕರುಳಿಗೆ ಕಿರಿಕಿರಿ ಉಂಟಾಗುವುದು. ಜೊತೆಗೆ ಮಲಬದ್ಧತೆಗೆ ಕಾರಣವಾಗುವುದು.
ಅಧಿಕ ಫೈಬರ್:
ಬ್ರೆಡ್ ಫೈಬರ್ ಭರಿತವಾದ ಆಹಾರ. ಈ ಫೈಬರ್ ಜೀರ್ಣಕ್ರಿಯೆಗೆ ಕಷ್ಟಕರವಾಗಿರುತ್ತದೆ. ಇದರಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇಡುವುದು ಕಷ್ಟ ಎಂದು ಹೇಳಬಹುದು. ಇದು ಕರುಳಿಗೆ ಕಿರಿಕಿರಿಯನ್ನುಂಟುಮಾಡುವುದು. ನಾರು ಮತ್ತು ನೀರಿನ ಸಂಯೋಜನೆ ಹೊಂದಿರುವಾಗ ಹೆಚ್ಚು ಸಮಯ ಶೌಚಾಲಯಕ್ಕೆ ಓಡಬೇಕಾದಂತಹ ಪರಿಸ್ಥಿತಿ ಎದುರಾಗುವುದು.
ಸ್ಟಾರ್ಚ್ ಹೊಂದಿರುವುದು:
ಬ್ರೆಡ್ ಪಿಷ್ಟವನ್ನು ಹೊಂದಿರುತ್ತದೆ. ಈ ಪಿಷ್ಟವು ದೇಹದಿಂದ ಬಹಳ ಸುಲಭವಾಗಿ ವಿಭಜನೆಯಾಗುತ್ತದೆ. ಇದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ತ್ವರಿತವಾಗಿ ಏರಿಕೆಯಾಗುವಂತೆ ಮಾಡುವುದು. ಇದರ ಫಲಿತಾಂಶದಿಂದ ಬಹುಬೇಗ ಹಸಿವಿನ ಸಂವೇದನೆಗೆ ಒಳಗಾಗಬೇಕಾಗುವುದು. ಇದರಿಂದಾಗಿ ವ್ಯಕ್ತಿ ಹೆಚ್ಚು ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸಲು ಬಯಸುವಿರಿ. ಜೊತೆಗೆ ಹೊಟ್ಟೆ ಉಬ್ಬರ ಸೇರಿದಂತೆ ಇನ್ನಿತ ಸಮಸ್ಯೆಗಳಿಗೆ ಒಳಗಾಗುವಿರಿ. ಹಾಗಾಗಿ ಇದೊಂದು ಮಲಬ್ಧತೆ ನಿಯಂತ್ರಣಕ್ಕೆ ಸಹಕರಿಸುವ ಆಹಾರವಲ್ಲ ಎಂದೇ ಹೇಳಬಹುದು.
ಬ್ರೆಡ್ ಸೇವನೆಯಿಮದ ಕರುಳಿಗೆ ಉಂಟಾಗುವ ಕಿರಿಕಿರಿಯನ್ನು ತಡೆಗಟ್ಟುವ ವಿಧಾನ ಇದು:
1. ಸಾಕಷ್ಟು ನೀರನ್ನು ಸೇವಿಸುವುದರ ಮೂಲಕ ದೇಹವನ್ನು ಹೆಚ್ಚು ನೀರಿನಂಶದಿಂದ ಕೂಡಿರುವಂತೆ ಮಾಡುವುದು.
2. ನೀರಿನ ನಷ್ಟದಿಂದ ಉಂಟಾದ ಸಮಸ್ಯೆಗಳನ್ನು ಅಥವಾ ಅಸಮತೋಲನವನ್ನು ನಿಯಂತ್ರಿಸಬಹುದು.
3. ಸೋಡಿಯಂ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.
4. ಫೈಬರ್ ಭರಿತ ಆಹಾರಗಳು ಹಾಗೂ ಜಿಎಲ್ ಹೆಚ್ಚಿಸುವಂತಹ ಆಹಾರವನ್ನು ಹೊಂದಬೇಕು.
5. ಆರೋಗ್ಯಕರವಾದ ಆಹಾರ ಪದಾರ್ಥಗಳಾದ ಸೇಬು, ಬಾಳೆಹಣ್ಣು, ಅಕ್ಕಿಯನ್ನು ಸೇವಿಸುವುದು.
6. ಪ್ರೊಬಯಾಟಿಕ್ಸಗಳಾದ ಅಲೋವೆರಾ ರಸ, ಜೀರ್ಣಕಾರಿ ಕಿಣ್ವಗಳು, ಚಿಯಾ ಬೀಜ ಸೇರಿದಂತೆ ಇನ್ನಿತರ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಹೆಚ್ಚು ಆರೋಗ್ಯಕರವಾಗಿ ಇರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














