For Quick Alerts
ALLOW NOTIFICATIONS  
For Daily Alerts

ದೀರ್ಘಕಾಲಿಕ ನೋವು ಮತ್ತು ಅದರ ಲಕ್ಷಣಗಳು

By Hemanth
|

ಯಾವುದೇ ಗಾಯ ಅಥವಾ ಗುದ್ದಿದ ಅನುಭವವಾದಾಗ ದೇಹಕ್ಕೆ ನೋವಾಗುವುದು ಸಹಜ ಲಕ್ಷಣ. ಏನೋ ಒಂದು ರೀತಿಯ ಅನಾರೋಗ್ಯವು ತನ್ನನ್ನು ಕಾಡಿದೆ ಎಂದು ಈ ನೋವು ಹೇಳುತ್ತದೆ. ಇದು ಸ್ವಲ್ಪ ಸಮಯದ ಬಳಿಕ ಮಾಯವಾಗುವುದು. ಆದರೆ ಕೆಲವೊಂದು ಸಲ ಈ ನೀವು 3-6 ತಿಂಗಳಿಗಿಂತಲೂ ಹೆಚ್ಚು ಕಾಲ ಉಳಿಯುವುದು. ಅಂತಹ ನೋವನ್ನು ದೀರ್ಘಕಾಲದ ನೋವು ಎಂದು ಹೇಳಲಾಗುತ್ತದೆ. ದೇಹದಲ್ಲಿ ದೀರ್ಘಕಾಲದ ನೋವಿದ್ದರೆ ಅದರಿಂದ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆಯಾಗುವುದು.

ಇಂತಹ ದೀರ್ಘಕಾಲದ ನೋವು ಇರುವ ಶೇ.25ರಷ್ಟು ಮಂದಿಗೆ ದೀರ್ಘಕಾಲ ನೋವಿನ ಲಕ್ಷಣ(ಸಿಪಿಎಸ್) ಕಾಣಿಸಿಕೊಳ್ಳುವುದು. ಖಿನ್ನತೆ ಹಾಗೂ ಆತಂಕದಂತಹ ಲಕ್ಷಣಗಳು ಇದರಲ್ಲಿ ಪ್ರಮುಖವಾಗಿರುವುದು ಮತ್ತು ಇದು ದೈನಂದಿನ ಚಟುವಟಿಕೆ ಮೇಲೆ ಕೂಡ ಪರಿಣಾಮ ಬೀರುವುದು. ದೀರ್ಘಕಾಲದ ನೋವಿಗೆ ಚಿಕಿತ್ಸೆ ನೀಡುವುದು ತುಂಬಾ ಕಷ್ಟ. ಆದರೆ ಇದಕ್ಕೆ ಸರಿಯಾದ ಚಿಕಿತ್ಸೆಯಿದೆ. ಈ ಲೇಖನದಲ್ಲಿ ಇದನ್ನು ಸವಿಸ್ತಾರವಾಗಿ ತಿಳಿದುಕೊಳ್ಳುವ.

Chronic Pain

ದೀರ್ಘಕಾಲದ ನೋವಿನ ಲಕ್ಷಣಗಳಿಗೆ ಕಾರಣವೇನು?
ಸಿಪಿಎಸ್ ಗೆ ಕಾರಣಗಳು ಏನು ಎನ್ನುವುದು ಇದುವರೆಗೆ ತಿಳಿದಿಲ್ಲ. ಆದರೆ ಸಾಮಾನ್ಯವಾಗಿ ಇದು ಗಾಯ ಅಥವಾ ಸಂಧಿವಾತ, ಗಂಟುನೋವು, ಬೆನ್ನುನೋವು, ತಲೆನೋವು, ಸ್ನಾಯುಸೆಳೆತ, ಬಿರುಕುಬಿಟ್ಟ ಮೂಳೆ, ಕ್ಯಾನ್ಸರ್, ಹೊಟ್ಟೆಯ ಉರಿಯೂತ ಕಾಯಿಲೆ, ಹೊಟ್ಟೆಯ ಕಿರಿಕಿರಿ ಸಮಸ್ಯೆ, ಆಮ್ಲ ಹಿಮ್ಮುಖವಾಗುವುದು ಇತ್ಯಾದಿ ನೋವಿ ಪರಿಸ್ಥಿತಿಯಿಂದ ಬರಬಹುದು. ದೇಹವು ಉಪಯೋಗಿಸುವಂತಹ ನರ ಹಾಗೂ ಗ್ರಂಥಿಗಳ ವ್ಯವಸ್ಥೆಯು ಒತ್ತಡವನ್ನು ಸಹಿಸಿಕೊಳ್ಳಲು ವಿಫಲವಾಗುವ ಕಾರಣದಿಂದಾಗಿ ಈ ಪರಿಸ್ಥಿತಿ ಬರುವುದು ಎಂದು ತಜ್ಞರು ಹೇಳುತ್ತಾರೆ. ಸಿಪಿಎಸ್ ಎನ್ನುವುದು ಎಲ್ಲಾ ವಯಸ್ಸಿನವರನ್ನು ಕಾಡಬಹುದು. ಇದಕ್ಕೆ ಲಿಂಗಭೇದವೆನ್ನುವುದಿಲ್ಲ. ಆದರೆ ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುವುದು. ತೀವ್ರ ಖಿನ್ನತೆ ಮತ್ತು ಇತರ ಮಾನಸಿಕ ಸಮಸ್ಯೆಯಿಂದ ಬಳಲುತ್ತಾ ಇರುವ ಜನರು ಸಿಪಿಎಸ್ ಗೆ ಒಳಗಾಗುವ ಸಾಧ್ಯತೆಯು ಹೆಚ್ಚಾಗಿರುವುದು.

ದೀರ್ಘಕಾಲಿಕ ನೋವಿನ ಲಕ್ಷಣಗಳು
ಸಿಪಿಎಸ್ ನಿಮ್ಮ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುವುದು. ಈ ನೋವಿನಿಂದಾಗಿ ಆತಂಕ, ಖಿನ್ನತೆ, ನಿದ್ರಾಹೀನತೆ, ಕಿರಿಕಿರಿ, ಕೀಳರಿಮೆ, ಆಯಾಸದ ಭಾವನೆ, ಡ್ರಗ್ಸ್ ಅಥವಾ ಆಲ್ಕೋಹಾಲ್ ಗೆ ದಾಸರಾಗುವುದು, ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದು, ನಿರುದ್ಯೋಗ, ಆತ್ಮಹತ್ಯೆ ಆಲೋಚನೆಗಳು ಮತ್ತು ಕೌಟುಂಬಿಕ ಸಮಸ್ಯೆಗಳು.

ದೀರ್ಘಕಾಲಿಕ ನೋವಿಗೆ ಪರಿಹಾರಗಳು
ನೋವು ಹಾಗೆ ಇದ್ದರೆ ಮತ್ತು ಅದನ್ನು ಗುಣವಾಗಲು ತುಂಬಾ ದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಬೇಕು. ವೈದ್ಯರು ಪರೀಕ್ಷೆ ಮಾಡಿಕೊಂಡು ಗಂಟಿಗೆ ಹಾನಿಯಾಗಿದೆಯಾ ಅಥವಾ ಇತರ ಸಮಸ್ಯೆಯಿಂದ ನೋವು ಬರುತ್ತಿದೆಯಾ ಎಂದು ಹೇಳುವರು. ಸಿಟಿ ಸ್ಕ್ಯಾನ್, ಎಂಆರ್ ಐ ಸ್ಕ್ಯಾನ್ ಮತ್ತು ಎಕ್ಸ್ ರೇ ಮೂಲಕ ಇದನ್ನು ತಿಳಿಯಬಹುದು. ನಿಮಗೆ ದೈಹಿಕ ಚಿಕಿತ್ಸೆ, ಔದ್ಯೋಗಿಕ ಚಿಕಿತ್ಸೆ, ಸಮಾಲೋಚನೆ, ಆರಾಮದ ತಾಂತ್ರಿಕತೆ, ಬೆನ್ನು ಉರಿ ಉದ್ದೀಪನ, ನರಗಳ ಬ್ಲಾಕ್, ನೋವಿನ ಔಷಧಿ ಮತ್ತು ಶಸ್ತ್ರಚಿಕಿತ್ಸೆ ಮಾಡಬಹುದು.

ಸಿಪಿಎಸ್ ಕಡಿಮೆ ಮಾಡುವ ವಿಧಾನಗಳು
*ದೀರ್ಘಕಾಲಿನ ನೋವಿನಿಂದ ಬಳಲುತ್ತಿದ್ದರೆ ಅದಕ್ಕೆ ಒಳ್ಳೆಯ ಮದ್ದು ನಡೆಯುವುದು. ನಡೆದಾಡುವುದರಿಂದ ಎಂಡ್ರೋಪಿನ್ ಎನ್ನುವುದು ಬಿಡುಗಡೆಯಗುವುದು. ಇದು ದೇಹ ಬಿಡುಗಡೆ ಮಾಡುವಂತಹ ನೈಸರ್ಗಿಕ ನೋವು ನಿವಾರಕವಾಗಿದೆ. ಪ್ರತಿನಿತ್ಯ 30 ನಿಮಿಷ ಕಾಲ ನಡೆಯಿರಿ.
* ಸಿಪಿಎಸ್ ಮತ್ತು ನಿದ್ರಾಹೀನತೆಯು ಜತೆಯಾಗಿ ಬರುವುದು. ಇದರಿಂದ ದಿನನಿತ್ಯ ಸರಿಯಾಗಿ ನಿದ್ರೆ ಮಾಡಿ.
*ದೀರ್ಘಕಾಲಿಕ ನೋವಿನಿಂದ ನಿಮ್ಮ ಮನಸ್ಸನ್ನು ಬೇರೆಡೆ ವರ್ಗಾಯಿಸಬೇಕು. ಇದಕ್ಕಾಗಿ ಪದಬಂಧ, ಚರ್ಚೆ ಮತ್ತು ಪುಸ್ತಕ ಓದುವುದರಲ್ಲಿ ನಿರತರಾಗಿ.
* ನಿಮ್ಮ ಆಹಾರ ಕ್ರಮದ ಬಗ್ಗೆ ಗಮನಹರಿಸಿ. ಕೆಂಪು ವೈನ್ ಮತ್ತು ಚೀಸ್ ನಂತಹ ಆಹಾರಗಳು ಸಮಸ್ಯೆ ಹೆಚ್ಚು ಮಾಡಬಹುದು. ಇದರಿಂದ ಆಹಾರ ನಿಮ್ಮ ದೇಹಕ್ಕೆ ಒಳ್ಳೆಯದೇ ಎಂದು ತಿಳಿಯಿರಿ.


*ಬಲ ನೀಡುವ ವ್ಯಾಯಮದ ತರಬೇತಿಯು ನಿಮಗೆ ಸಮತೋಲನ ಮತ್ತು ಸ್ಥಿತಿಸ್ಥಾಪಕತ್ವ ತರುವುದು. ಇದರಿಂದ ಕೂಡ ನೋವು ಕಡಿಮೆಯಾಗುವುದು.
ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಇದನ್ನು ಬೇರೆಯವರೊಂದಿಗೆ ಕೂಡ ಶೇರ್ ಮಾಡಿಕೊಳ್ಳಿ.
English summary

What Is Chronic Pain Syndrome And What Are Its Symptoms

About 25 percent of people with chronic pain will start having a condition called chronic pain syndrome. That is when people will have symptoms like depression and anxiety, which interfere with their daily lives. Experts believe that people with this condition have a problem with the system of nerves and glands that the body uses to handle stress.
X
Desktop Bottom Promotion