Latest Updates
-
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ?
ಕೆಲವೊಮ್ಮೆ ದೇಹದ ಕಿಡ್ನಿಗಳೂ ಊದಿಕೊಳ್ಳಬಹುದು! ಇದಕ್ಕೆಲ್ಲಾ ಕಾರಣವೇನು?
ಮೂತ್ರಪಿಂಡಗಳು ನಮ್ಮ ಆರೋಗ್ಯ ಕಾಪಾಡುವ ಪ್ರಮುಖ ಅಂಗಗಳಾಗಿವೆ. ದೇಹದಲ್ಲಿರುವ ರಕ್ತವನ್ನು ಸತತವಾಗಿ ಶೋಧಿಸುತ್ತಾ ಕಲ್ಮಶಗಳನ್ನು ನಿವಾರಿಸಿ ಮೂತ್ರದ ರೂಪದಲ್ಲಿ ದೇಹದಿಂದ ಹೊರಹಾಕುವುವುದು ಇವುಗಳ ಪ್ರಮುಖ ಕಾರ್ಯವಾಗಿದೆ. ನಮ್ಮಲ್ಲಿರುವ ಎರಡು ಮೂತ್ರಪಿಂಡಗಳಲ್ಲೊಂದು ಕೆಲವು ಕಾರಣಗಳಿಂದ ಊದಿಕೊಳ್ಳುತ್ತದೆ.

ಇದೊಂದು ಗಂಭೀರ ಸಮಸ್ಯೆಯಾಗಿದ್ದು ತಕ್ಷಣವೇ ವೈದ್ಯರ ತಪಾಸಣೆಗೆ ಒಳಗಾಗುವ ಅಗತ್ಯವಿದೆ. ಇದಕ್ಕೆ ಕಾರಣಗಳು ಹಲವಾರು. ಮೂತ್ರಪಿಂಡದಲ್ಲಿ ಕೀವುಗುಳ್ಳಿಯಾಗಿ ಸೋಂಕು ಉಂಟಾಗಿರುವುದು, ಮೂತ್ರಪಿಂಡದೊಳಗೆ ಬೆಳೆಯಲು ಪ್ರಾರಂಭಿಸಿರುವ ಗಡ್ಡೆ, ಮೂತ್ರಪಿಂಡಗಳಿಗೆ ರಕ್ತ ಪೂರೈಸುವ ನಾಳಗಳು ಕಟ್ಟಿಕೊಂಡಿರುವುದು ಅಥವಾ ಸಂಗ್ರಹಗೊಂಡ ಮೂತ್ರ ಮೂತ್ರಪಿಂಡದಿಂದ ಹೊರಹರಿಯದೇ ಒಳಗೇ ಸಂಗ್ರಹಗೊಂಡಿರುವುದು (hydronephrosis)ಮೊದಲಾದವು ಪ್ರಮುಖವಾಗಿವೆ.

ಮೂತ್ರಪಿಂಡದ ಸೋಂಕು
pyelonephritis ಎಂದು ಕರೆಯಲ್ಪಡುವ ಈ ತೊಂದರೆ ಮೂತ್ರಕೋಶದ ಸೋಂಕಿನಿಂದ ಬಂದಿರುವುದಾಗಿದೆ. ಕೆಲವು ಬ್ಯಾಕ್ಟೀರಿಯಾಗಳಿಗೆ ದ್ರವಧಾರೆಯಲ್ಲಿ ಹಿಮ್ಮುಖ ಚಲಿಸುವ ಗುಣವಿರುತ್ತದೆ ಹಾಗೂ ಇಂತಹ ಕೆಲವು ಬ್ಯಾಕ್ಟೀರಿಯಾಗಳು ಮೂತ್ರನಾಳದಿಂದ ಮೂತ್ರಕೋಶಕ್ಕೆ ತಲುಪಿ ಇಲ್ಲಿ ಸೋಂಕು ಹರಡಿದ ಬಳಿಕ ಇನ್ನಷ್ಟು ಹಿಮ್ಮುಖ ಚಲಿಸಿ ಮೂತ್ರಪಿಂಡಗಳನ್ನೂ ತಲುಪಿ ಆಲ್ಲಿಯೂ ಸೋಂಕು ಉಂಟುಮಾಡುತ್ತವೆ.

ಮೂತ್ರಪಿಂಡದ ಸೋಂಕು
ಕೆಲವು ಅಪರೂಪದ ಸಂದರ್ಭಗಳಲ್ಲಿ ಬ್ಯಾಕ್ಟೀರಿಯಾ ರಕ್ತದ ಮೂಲಕವೂ ಮೂತ್ರಪಿಂಡವನ್ನು ತಲುಪಬಹುದು. ಆದರೆ ಸೋಂಕು ಉಂಟಾದ ಬಳಿಕ ಮೂತ್ರಪಿಂಡವಿರುವ ಭಾಗದ ಬೆನ್ನಿನಲ್ಲಿ ಅಥವಾ ಸೊಂಟದ ಹಿಂಭಾಗದಲ್ಲಿ ಚುಚ್ಚಿದಂತಹ ನೋವು, ಜ್ವರ, ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ, ಮೂತ್ರದಲ್ಲಿ ರಕ್ತವೂ ಕಾಣಿಸಿಕೊಳ್ಳಬಹುದು. ಈ ಸ್ಥಿತಿ ಎದುರಾದರೆ ತಕ್ಷಣವೇ ಪ್ರತಿಜೀವಕ ಔಷಧಿಗಳನ್ನು ನೀಡಿ ಈ ಬ್ಯಾಕ್ಟೀರಿಯಾಗಳ ಸೋಂಕನ್ನು ನಿವಾರಿಸುವುದು ಅಗತ್ಯವಾಗಿದೆ.

ಮೂತ್ರಪಿಂಡದಿದ ದ್ರವ ಹೊರಹರಿಯುವ ತಡೆ (Hydronephrosis)
ಮೂತ್ರಪಿಂಡಕ್ಕೆ ಆಗಮಿಸುವ ರಕ್ತ ಶೋಧನೆಗೊಂಡು ಇದರಲ್ಲಿರುವ ಕಲ್ಮಶಗಳು ದ್ರವರೂಪದಲ್ಲಿ ಮೂತ್ರಕೋಶಕ್ಕೆ ರವಾನಿಸಲ್ಪಡುತ್ತವೆ. ಈ ದ್ರವವನ್ನು ರವಾನಿಸಲು ಮೂತ್ರಕೋಶದಿಂದ ಹೊರಡುವ ಮೂತ್ರನಾಳ (ureter) ಒಂದು ವೇಳೆ ಪ್ರಾರಂಭದಲ್ಲಿಯೇ ಅಥವಾ ನಡುವೆ ಎಲ್ಲಾದರೂ ತಡೆಯನ್ನು ಹೊಂದಿದ್ದರೆ ಈ ಮೂಲಕ ದ್ರವ ಮುಂದುವರೆಯಲು ಸಾಧ್ಯವಾಗದೇ ಮೂತ್ರಪಿಂಡದಲ್ಲಿಯೂ ಉಳಿದುಕೊಳ್ಳುತ್ತದೆ. ಮೂತ್ರನಾಳಕ್ಕೆ ತಡೆಯುಂಟಾಗಲು ಕೆಲವಾರು ಕಾರಣಗಳಿವೆ.

ಮೂತ್ರಪಿಂಡದಿದ ದ್ರವ ಹೊರಹರಿಯುವ ತಡೆ (Hydronephrosis)
ಯಾವುದೋ ಗಾಯ ಅಥವಾ ಪೆಟ್ಟಿನಿಂದ ಈ ನರ ಜಖಂಗೊಂಡಿರುವುದು, ಶಸ್ತ್ರಚಿಕಿತ್ಸೆ ಅಥವಾ ಈ ನಾಳದ ಸುತ್ತಮುತ್ತ ಎದುರಾಗಿರುವ ಸೋಂಕಿನ ಕಾರಣ ನಾಳ ಒತ್ತಡಕ್ಕೆ ಸಿಲುಕಿ ಕಿರಿದಾಗಿರುವುದು ಮೊದಲಾಗಿವೆ. ಈ ಸ್ಥಿತಿ ಎದುರಾದ ಬಳಿಕ ತಕ್ಷಣವೇ ಚಿಕಿತ್ಸೆ ಪಡೆಯದೇ ಇದ್ದರೆ ಇದು ಮೂತ್ರಪಿಂಡದೊಳಗೆ ಸತತವಾಗಿ ದ್ರವ ಸಂಗ್ರಹವಾಗುತ್ತಾ ಮೂತ್ರಪಿಂಡವನ್ನು ಹಿಗ್ಗಿಸುವುದು ಮಾತ್ರವಲ್ಲ, ಕ್ಷಮತೆಯನ್ನೂ ಉಡುಗಿಸುತ್ತಾ ಪೂರ್ಣಪ್ರಮಾಣದ ವೈಫಲ್ಯಕ್ಕೂ ಕಾರಣವಾಗಬಹುದು.

ರಕ್ತಹರಿಯುವಿಕೆಯಲ್ಲಿ ತಡೆ
ಮೂತ್ರಪಿಂಡಗಳಿಗೆ ರಕ್ತವನ್ನು ಕೊಂಡು ತರುವ ರಕ್ತನಾಳಗಳಲ್ಲಿ (renal arteries) ಯಾವುದೇ ಬಗೆಯ ಪಾರ್ಶ್ವ ಅಥವಾ ಪೂರ್ಣ ತಡೆಯುಂಟಾದರೆ ಮೂತ್ರಪಿಂಡಕ್ಕೆ ರಕ್ತವೂ ಬರುವುದಿಲ್ಲ ಹಾಗೂ ರಕ್ತದ ಮೂಲಕ ಬರಬೇಕಾದ ಆಮ್ಲಜನಕ ಮತ್ತು ಇತರ ಅಗತ್ಯ ಪೋಷಕಾಂಶಗಳೂ ಲಭಿಸದೇ ಹೋಗುತ್ತವೆ. ಪರಿಣಾಮವಾಗಿ ಮೂತ್ರಪಿಂಡದ ಜೀವಕೋಶಗಳು ಒಣಗಿ ಸಾಯುತ್ತವೆ ಹಾಗೂ ಇದನ್ನು ಸುತ್ತವರೆದಿರುವ ಅಂಗಾಂಶಗಳೂ ನಿಸ್ತೇಜವಾಗುತ್ತವೆ. ಈ ಸ್ಥಿತಿಗೆ kidney infarction ಎಂದು ಕರೆಯುತ್ತಾರೆ. ಮೂತ್ರಪಿಂಡಕ್ಕೆ ರಕ್ತ ಹರಿದು ಬರದೇ ಇರಲು ಸಾಮಾನ್ಯವಾಗಿ ಹೃದಯದ ಪ್ರಮುಖ ನಾಳವಾದ ಅಯೋರ್ಟಾ ದಿಂದ ಹೊರಬರುವ ನಾಳದಿಂದ ಕೊಲೆಸ್ಟ್ರಾಲ್ ಕಣಗಳನ್ನು ಹೊಂದಿರುವ ಜಿಡ್ಡು ರಕ್ತನಾಳ ತಿರುವು ಅಥವಾ ಕಲವು ಪಡೆದಿರುವಲ್ಲಿ ಸಂಗ್ರಹಗೊಂಡು ರಕ್ತದ ಹರಿವಿಗೆ ಒಡ್ಡುವ ತಡೆಯಾಗಿದೆ.

ರಕ್ತಹರಿಯುವಿಕೆಯಲ್ಲಿ ತಡೆ
ಈ ಸ್ಥಿತಿಗೆ atherosclerosisಎಂದು ಕರೆಯುತ್ತಾರೆ. ಮೂತ್ರಪಿಂಡದಿಂದ ರಕ್ತ ಹೊರಹೋಗುವ ನಾಳಗಳಾದ renal veins ಎಂಬ ನರಗಳಲ್ಲಿಯೂ ಒಂದು ವೇಳೆ ತಡೆಯುಂಟಾದರೆ ರಕ್ತ ಹೊರಹರಿಯದೇ ಮೂತ್ರಪಿಂಡದಲ್ಲಿಯೇ ಉಳಿದು ಮೂತ್ರಪಿಂಡ ಪಾರ್ಶ್ವ ಅಥವಾ ಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಹೀಗೆ ಮೂತ್ರಪಿಂಡದಲ್ಲಿ ಉಳಿದ ರಕ್ತದ ಒತ್ತಡದಿಂದ ಮೂತ್ರಪಿಂಡ ಉಬ್ಬತೊಡಗುತ್ತದೆ. renal veins ನರಗಳ ತಡೆಗೆ ಸಾಮಾನ್ಯವಾಗಿ ಹೆಪ್ಪುಗಟ್ಟಿದ ರಕ್ತದ ಗಡ್ಡೆಯೇ ಪ್ರಮುಖ ಕಾರಣವಾಗಿದೆ. ಹೀಗೆ ದೇಹದೊಳಗೇ ರಕ್ತ ಹೆಪ್ಪುಗಟ್ಟುವುದು ದೇಹದ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಕೆಲವು ಸಂದರ್ಭದಲ್ಲಿ ಈ ನರಗಳಿರುವ ಭಾಗದಲ್ಲಿ ಕಟ್ಟಿರುವ ಹೊಟ್ಟೆಯ ಗಡ್ಡೆಗಳೂ ನರಗಳನ್ನು ಒತ್ತಬಹುದು ಹಾಗೂ ಕೆಲವು ಸಂದರ್ಭಗಳಲ್ಲಿ ನರವನ್ನು ತೂರಿಕೊಂಡೂ ರಕ್ತದ ಹರಿವಿಗೆ ತಡೆಯುಂಟುಮಾಡಬಹುದು.

ಮೂತ್ರಪಿಂಡದ ಗುಳ್ಳೆಗಳು ಮತ್ತು ಗಡ್ಡೆಗಳು
ಮುಖದ ಮೇಲೆ ಮೂಡುವ ಮೊಡವೆಗಳಂತೆಯೇ ಮೂತ್ರಪಿಂಡಗಳ ಒಳಗೂ ಕೀವಿನಿಂದ ಕೂಡಿದ ಗುಳ್ಳೆಗಳು ಏಳುತ್ತವೆ. renal cysts ಎಂದು ಕರೆಯಲ್ಪಡುವ ಈ ಗುಳ್ಳೆಗಳೂ ಮೂತ್ರಪಿಂಡ ಊದಿಕೊಳ್ಳಲು ಕಾರಣವಾಗಬಹುದು. ಈ ಗುಳ್ಳೆಗಳು ಹೆಚ್ಚಿನ ಸಂದರ್ಭಗಳಲ್ಲಿ ನಿರಪಾಯಕಾರಿಯಾಗಿದ್ದರೂ ಅಪರೂಪವಾಗಿ ಇನ್ನೂ ಬೆಳೆದು ಕ್ಯಾನ್ಸರ್ ನ ರೂಪ ಪಡೆದುಕೊಳ್ಳಬಹುದು. ಕೆಲವರಲ್ಲಿ ಒಂದೇ ಗುಳ್ಳೆ ಕಾಣಿಸಿಕೊಂಡರೆ ಕೆಲವರಲ್ಲಿ ಹಲವಾರು ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಒಂದೇ ಮೂತ್ರಪಿಂಡದಲ್ಲಿ ಈ ಗುಳ್ಳೆಗಳು ಕಾಣಬರುತ್ತವೆ. ಈ ಸ್ಥಿತಿಗೆ Unilateral renal cystic disease ಎಂದು ಕರೆಯಲಾಗುತ್ತದೆ. ಆದರೆ ಈ ಗುಳ್ಳೆಗಳು ಹೆಚ್ಚಿನ ತೊಂದರೆಯುಂಟು ಮಾಡುವುದಿಲ್ಲ ಹಾಗೂ ಮೂತ್ರಪಿಂಡದ ಸಹಜ ಕಾರ್ಯಗತಿಗೂ ತೊಂದರೆಯಾಗುವುದಿಲ್ಲ.

ಮೂತ್ರಪಿಂಡದ ಗುಳ್ಳೆಗಳು ಮತ್ತು ಗಡ್ಡೆಗಳು
ಮೂತ್ರಪಿಂಡದ ಗಡ್ಡೆಗಳೂ ಮೂತ್ರಪಿಂಡ ಊದಿಕೊಳ್ಳಲು ಕಾರಣವಾಬಹುದು. ಗಡ್ಡೆಗಳು ಸಾಮಾನ್ಯವಾಗಿ ಹಾನಿಕರವೂ ಕ್ಯಾನ್ಸರ್ ರೂಪ ತಳೆಯುವಂತಹದ್ದೂ ಆಗಿರುತ್ತವೆ. ಅಮೇರಿಕಾದಲ್ಲಿ ಎದುರಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಮೂತ್ರಪಿಂಡದ ಕ್ಯಾನ್ಸರ್ ಗೆ ಎಂಟನೆಯ ಸ್ಥಾನವಿದೆ ಎಂದು National Cancer Institute ಸಂಸ್ಥೆ ವರದಿ ಮಾಡಿದೆ. ಈ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದಾಗ ಇದು ತನ್ನ ಇರುವಿಕೆಯ ಯಾವುದೇ ಲಕ್ಷಣಗಳನ್ನು ಪ್ರಕಟಿಸುವುದಿಲ್ಲ. ಆದರೆ ಉಲ್ಬಣಗೊಂಡ ಬಳಿಕವೇ ತೀಕ್ಷ್ಣವಾದ ನೋವು, ಮೂತ್ರದಲ್ಲಿ ನೋವು, ಜ್ವರ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕೆಲವೊಮ್ಮೆ ಈ ಕ್ಯಾನ್ಸರ್ ಮೂತ್ರಪಿಂಡದಿಂದ ಹೊರಹೊರಡುವ enal vein ನರಗಳಿಗೂ ವ್ಯಾಪಿಸಬಹುದು ಅಥವಾ ನರದೊಳಗೆ ಹಾದುಹೋಗುವ ರಕ್ತದಲ್ಲಿ ಗಡ್ಡೆಯನ್ನು ಮೂಡಿಸಬಹುದು ಹಾಗೂ ಇದು ಈಗಾಗಲೇ ಊದಿಕೊಂಡಿರುವ ಮೂತ್ರಪಿಂಡವನ್ನು ಇನ್ನಷ್ಟು ಹಿಗ್ಗಿಸಲು ಕಾರಣವಾಗಬಹುದು.

ಇತರ ಕಾರಣಗಳು
ಒಂದು ವೇಳೆ ಮೂತ್ರಪಿಂಡವೊಂದು ಕ್ಯಾನ್ಸರ್ ಗೆ ತುತ್ತಾದರೆ ವೈದ್ಯರು ಇದನ್ನು ನಿವಾರಿಸಿ ಒಂದೇ ಮೂತ್ರಪಿಂಡ ಕಾರ್ಯನಿರ್ವಹಿಸುವಂತೆ ಮಾಡುತ್ತಾರೆ. ಸಾಮಾನ್ಯ ಜ್ಞಾನದ ಪ್ರಕಾರ ದೇಹದ ನಿರ್ವಹಣೆಗೆ ಒಂದೇ ಮೂತ್ರಪಿಂಡ ಸಾಕಾದರೂ, ಒಂದೇ ಮೂತ್ರಪಿಂಡ ಸಾಮಾನ್ಯ ಸ್ಥಿತಿಯಲ್ಲೇ ತನ್ನೆಲ್ಲಾ ಕ್ಷಮತೆಯನ್ನು ವ್ಯಯಿಸಬೇಕಾದ ಕಾರಣ ಕೊಂಚ ಹೆಚ್ಚಿನ ದೈಹಿಕ ಶ್ರಮವಾದರೂ ಹೆಚ್ಚು ಬಳಲುತ್ತದೆ ಹಾಗೂ ಮೂತ್ರಪಿಂಡ ಉಬ್ಬಲು ಕಾರಣವಾಗಬಹುದು.

ಇತರ ಕಾರಣಗಳು
ಆರೋಗ್ಯವಂತರಲ್ಲಿ ಮೂತ್ರಪಿಂಡ ಊದಿಕೊಳ್ಳಲು ಬೇರಾವುದೋ ಕಾಯಿಲೆ ಕಾರಣವಾಗಿದ್ದರೆ ಇದು ಪ್ರಾರಂಭವಾಗುವಾಗ ಎರಡರಲ್ಲೊಂದು ಮೂತ್ರಪಿಂಡ ಮಾತ್ರವೇ ಊದಿಕೊಳ್ಳಲು ಪ್ರಾರಂಭಗೊಳ್ಳುತ್ತದೆ. ಉದಾಹರಣೆಗೆ ಮಧುಮೇಹಿಗಳಿಗೆ ಎದುರಾಗುವ ಮೂತ್ರಪಿಂಡದ ಕಾಯಿಲೆ ಪ್ರಾರಂಭಿಕ ಹಂತದಲ್ಲಿದ್ದಾಗ ಸಾಮಾನ್ಯವಾಗಿ ಮೂತ್ರಪಿಂಡಗಳು ಊದಿಕೊಳ್ಳುತ್ತವೆ ಹಾಗೂ ಈ ಊತ ಒಂದೇ ಮೂತ್ರಪಿಂಡದಲ್ಲಿ ಪ್ರಕಟಗೊಳ್ಳಬಹುದು.



Click it and Unblock the Notifications











