For Quick Alerts
ALLOW NOTIFICATIONS  
For Daily Alerts

ಎಚ್ಚರ: ರಾತ್ರಿ ನಿದ್ದೆ ಬಿಟ್ಟರೆ, ಭಯಾನಕ ರೋಗ ಬರಬಹುದು!

By Arshad
|

ಬಿಡುವಿಲ್ಲದ ಕೆಲಸ ಅಥವಾ ಪರೀಕ್ಷೆಯ ಅಭ್ಯಾಸಕ್ಕಾಗಿ ದಿನದ ಕನಿಷ್ಟ ಅಗತ್ಯದ ನಿದ್ದೆಯನ್ನೂ ತ್ಯಾಗ ಮಾಡಬೇಕಾಗಿ ಬಂದಿದೆಯೇ? ಆದರೆ ಈ ತ್ಯಾಗ ನಿಮ್ಮ ಆರೋಗ್ಯಕ್ಕೆ ಮಾರಕ! ಇದು ದೇಹ ಮತ್ತು ಮನಸ್ಸು ಎರಡರ ಮೇಲೂ ಅಪಾರವಾದ ಪ್ರಭಾವ ಬೀರಬಹುದು. ನಮ್ಮ ದೇಹಕ್ಕೆ ಸಂತುಲಿತ ಅಹಾರ, ಸಾಕಷ್ಟು ವ್ಯಾಯಾಮದ ಜೊತೆಗೇ ಸಾಕಷ್ಟು ನಿದ್ದೆ ಸಹಾ ಅಗತ್ಯ! ಎಲ್ಲವೂ ಚೆನ್ನಾಗಿದ್ದರೆ ಮಾತ್ರ ಒಳ್ಳೆಯ ಆರೋಗ್ಯದಲ್ಲಿದ್ದೇವೆ ಎಂದು ತಿಳಿದುಕೊಳ್ಳಬಹುದು.

ಅಗತ್ಯಕ್ಕೂ ಕಡಿಮೆ ನಿದ್ದೆ ಅಥವಾ ಒಂದಿಡೀ ದಿನ ನಿದ್ದೆಯನ್ನೇ ಮಾಡದಿರುವುದು ಕೆಲವು ಕಾಯಿಲೆಗಳಿಗೆ ಮುಕ್ತ ಆಹ್ವಾನ ನೀಡುತ್ತದೆ. ಮಧುಮೇಹ, ಸ್ಥೂಲಕಾಯ ಹಾಗೂ ಹೃದ್ರೋಗಗಳೆಂಬ ರಸ್ತೆಯಲ್ಲಿ ಹೋಗುತ್ತಿರುವ ಮಾರಿಗಳನ್ನು ಮನೆಗೆ ಕರೆದಂತಾಗುತ್ತದೆ. ನಮ್ಮ ದೇಹ ಒಂದು ವ್ಯವಸ್ಥೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸಾಧ್ಯವಾಗಲು ನಮ್ಮ ದೇಹದಲ್ಲಿ ಹಲವಾರು ರಸದೂತಗಳು ಕಾಲಕಾಲಕ್ಕೆ ಸ್ರವಿಸಬೇಕು.

ಉತ್ತಮ ನಿದ್ರೆಗಾಗಿ ಸೇವಿಸಬಹುದಾದ ಆಹಾರಗಳ ಪಟ್ಟಿ

ಇಂತಹ ಒಂದು ರಸದೂತವಾದ ಕಾರ್ಟಿಸೋಲ್ ನಿದ್ದೆಯ ಸಮಯದಲ್ಲಿ ಅವಶ್ಯವಾಗಿದ್ದು ಇತರ ಸಮಯದಲ್ಲಿ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ನಿದ್ದೆಯನ್ನೇ ಮಾಡದೇ ಇದ್ದಾಗ ಕಾರ್ಟೀಸೋಲ್ ಉತ್ಪಾದನೆಯೂ ಹೆಚ್ಚುತ್ತದೆ ಹಾಗೂ ಇದು ಮಾನಸಿಕ ಒತ್ತಡದ ಸಹಿತ ಹಲವಾರು ಇತರ ತೊಂದರೆಗಳನ್ನು ತಂದೊಡ್ಡುತ್ತದೆ. ವಿಶೇಷವಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಹೆಚ್ಚಳ, ತನ್ಮೂಲಕ ಟೈಪ್ 2 ಮಧುಮೇಹಕ್ಕೆ ಆಹ್ವಾನ. ಬನ್ನಿ, ನಿದ್ದೆ ಬಿಡುವುದರಿಂದ ಇನ್ನೂ ಯಾವ ರೀತಿಯ ತೊಂದರೆಗಳು ಎದುರಾಗುತ್ತವೆ ನೋಡೋಣ....

ಅನಾರೋಗ್ಯಕ್ಕೆ ಸುಲಭವಾಗಿ ತುತ್ತಾಗುವುದು

ಅನಾರೋಗ್ಯಕ್ಕೆ ಸುಲಭವಾಗಿ ತುತ್ತಾಗುವುದು

ನಮ್ಮ ದೇಹದ ರೋಗ ನಿರೋಧಕ ಶಕ್ತಿ ಉತ್ತಮವಾಗಿರಲು ಸಾಕಷ್ಟು ನಿದ್ದೆಯೂ ಅವಶ್ಯ. ನಿದ್ದೆ ಕಡಿಮೆಯಾದರೆ ರೋಗ ನಿರೋಧಕ ಶಕ್ತಿಯೂ ಕುಂದುತ್ತದೆ ಹಾಗೂ ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗಲು ಸಾಧ್ಯವಾಗುತ್ತದೆ. ರೋಗ ನಿರೋಧಕ ಶಕ್ತಿ ಉತ್ತಮವಾಗಿರಲೂ ನಿದ್ದೆಯ ಪ್ರಮಾಣಕ್ಕೂ ನೇರವಾದ ಸಂಬಂಧವಿದೆ. ನಿದ್ದೆ ಕಡಿಮೆಯಾದರೆ ರೋಗ ನಿರೋಧಕ ಶಕ್ತಿಯೂ ಕುಂದುತ್ತದೆ.

ನಿಮ್ಮ ಹೃದಯಕ್ಕೆ ಹೆಚ್ಚಿನ ಭಾರ ಬೀಳುತ್ತದೆ

ನಿಮ್ಮ ಹೃದಯಕ್ಕೆ ಹೆಚ್ಚಿನ ಭಾರ ಬೀಳುತ್ತದೆ

ಉತ್ತಮ ಆರೋಗ್ಯಕ್ಕೆ ಆರರಿಂದ ಎಂಟು ಗಂಟೆಯ ಗಾಢ ನಿದ್ದೆ ಅಗತ್ಯ. ಇದನ್ನು ಕೊಂಚ ಆಚೀಚೆ ಮಾಡಿದರೂ ಐದು ಗಂಟೆಗಳಿಗಿಂತ ಕಡಿಮೆ ಹಾಗೂ ಒಂಭತ್ತು ಘಂಟೆಗಳಿಗಿಂತ ಹೆಚ್ಚು ನಿದ್ರಿಸುವುದು ಆರೋಗ್ಯಕ್ಕೆ ಮಾರಕ. ಏಕೆಂದರೆ ನಿದ್ದೆಯ ಸಮಯದಲ್ಲಿ ಕೇವಲ ಅನೈಚ್ಛಿಕ ಕಾರ್ಯಗಳು ಮಾತ್ರವೇ ಜರುತ್ತದೆ ಹಾಗೂ ಈ ಸಮಯದಲ್ಲಿ ಹೃದಯಕ್ಕೆ ಕಡಿಮೆ ಒತ್ತಡದಲ್ಲಿ ಕಾರ್ಯನಿರ್ವಹಿಸಿದರೆ ಸಾಕಾಗುತ್ತದೆ. ನಿದ್ದೆಯ ಸಮಯವನ್ನು ಏರುಪೇರುಗೊಳಿಸುವ ಮೂಲಕ, ವಿಶೇಷವಾಗಿ ನಿದ್ದೆಯ ಸಮಯವನ್ನು ಕಡಿಮೆ ಮಾಡುವ ಮೂಲಕ ಹೃದಯ ಹೆಚ್ಚು ಕಾಲ ತನ್ನ ಪೂರ್ಣ ಕ್ಷಮತೆಯಿಂದ ಕೆಲಸ ಮಾಡಬೇಕಾಗುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರಿ ಹೃದ್ರೋಗ, ಸ್ತಂಭನ ಮೊದಲಾದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ

ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ

ಒಂದು ವೇಳೆ ನಿದ್ದೆಯನ್ನು ಸತತವಾಗಿ ಬಿಡಬೇಕಾಗಿ ಬರುತ್ತಿದ್ದರೆ ನಿಮಗೆ ಕೆಲವು ಕ್ಯಾನ್ಸರ್‌ಗಳು ಆವರಿಸುವ ಸಾಧ್ಯತೆ ಹೆಚ್ಚು. ಕರುಳಿನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್‌ಗಳು ಆವರಿಸುವ ಸಾಧ್ಯತೆ ಹೆಚ್ಚಾಗುತ್ತದೆ. ವಿಶೇಷವಾಗಿ ತಡರಾತ್ರಿಯವರೆಗೆ ಕೆಲಸದ ನಿಮಿತ್ತ ಎಚ್ಚರವಾಗಿದ್ದು ಬೆಳಿಗ್ಗೆಯೂ ಬೇಗನೇ ಏಳಬೇಕಾಗಿ ಬರುವ ವ್ಯಕ್ತಿಗಳಿಗೆ ಈ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚು.

ಯೋಚನಾ ಸಾಮರ್ಥ್ಯ ಕುಂಠಿತವಾಗುತ್ತದೆ

ಯೋಚನಾ ಸಾಮರ್ಥ್ಯ ಕುಂಠಿತವಾಗುತ್ತದೆ

ಒಂದು ವೇಳೆ ಒಂದು ರಾತ್ರಿಯ ನಿದ್ದೆಯಿಂದ ವಂಚಿತರಾಗಿ ಮರುದಿನ ಹಾಗೇ ಕೆಲಸಕ್ಕೆ ಹೋದಾಗ ನಿಮ್ಮ ನಿತ್ಯದ ಸಾಮಾನ್ಯ ಕೆಲಸಗಳಿಗೂ ನಿಮ್ಮ ಗಮನ ಸಾಕಾಗದಿರುವುದು, ಚಿಕ್ಕ ಪುಟ್ಟ ಕೆಲಸಗಳೂ ಸಾಧ್ಯವಾಗದೇ ಹೋಗುವುದನ್ನು ಗಮನಿಸಬಹುದು. ಏಕೆಂದರೆ ಒಂದು ರಾತ್ರಿಯ ನಿದ್ದೆ ಬಿಟ್ಟರೆ ಮರುದಿನ ಮೆದುಳಿಗೆ ತಲುಪಬೇಕಾಗುವಷ್ಟು ರಕ್ತ ಹಾಗೂ ಪೋಷಕಾಂಶಗಳು ನಿನ್ನೆ ಎಚ್ಚರಿದ್ದ ಸಮಯದಲ್ಲಿ ಬಳಕೆಯಾಗಿ ಹೋಗಿದ್ದು ಈಗ ದೇಹದಲ್ಲಿ ಇದನ್ನು ಒದಗಿಸಲು ದಾಸ್ತಾನು ಇಲ್ಲದಿರುವುದೇ ಕಾರಣ. ಇದರಿಂದ ಯೋಚನಾ ಸಾಮರ್ಥ್ಯ ಕುಂದುತ್ತದೆ. ಆದ್ದರಿಂದ ಈ ತೊಂದರೆ ಎದುರಾಗದೇ ಇರಲು ಒಳ್ಳೆಯ ನಿದ್ದೆ ಅಗತ್ಯ. ವಿಶೇಷವಾಗಿ ವಿದ್ಯಾರ್ಥಿಗಳು ಪರೀಕ್ಷೆಯ ಹಿಂದಿನ ರಾತ್ರಿ ಒಂದಿನಿತೂ ಮಲಗದೇ ಅಭ್ಯಾಸ ಮಾಡಿ ಮರುದಿನ ಹಾಗೇ ಪರೀಕ್ಷೆಗೆ ಹೋದಾಗ ಸುಲಭ ಪ್ರಶ್ನೆಗಳಿಗೂ ಉತ್ತರಿಸಲಾಗದೇ ಅಂಕಗಳನ್ನು ಕಳೆದುಕೊಳ್ಳುವುದಕ್ಕೂ ಇದೇ ಕಾರಣ.

ಮರೆಗುಳಿತನ ಹೆಚ್ಚುತ್ತದೆ

ಮರೆಗುಳಿತನ ಹೆಚ್ಚುತ್ತದೆ

ಒಂದು ರಾತ್ರಿ ನಿದ್ದೆ ಮಾಡದೇ ಇದ್ದರೆ ಮರುದಿನ ಮೆದುಳಿನ ಕ್ಷಮತೆ ಕುಂದುವ ಜೊತೆಗೇ ಮರೆಗುಳಿತನವೂ ಆವರಿಸುತ್ತದೆ. ಈ ಬಗ್ಗೆ ನಡೆಸಿದ ಒಂದು ಅಧ್ಯಯನದಲ್ಲಿ ನಿದ್ದೆಯ ಕೊರತೆ ಕಲಿಕಾ ಸಾಮರ್ಥ್ಯ ಹಾಗೂ ಸ್ಮರಣಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ಕಂಡುಕೊಳ್ಳಲಾಗಿದೆ. ನಮ್ಮ ಮೆದುಳು ಗ್ರಹಿಸಿದ ವಿಷಯಗಳನ್ನು ಮನನ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಸಾಕಷ್ಟು ನಿದ್ದೆ ಅವಶ್ಯ ಎಂದು ತಿಳಿದುಬಂದಿದೆ. ಆದ್ದರಿಂದ ಯಾವುದೇ ಹೊಸ ವಿಷಯವನ್ನು ಕಲಿಯಬೇಕಿದ್ದರೂ ಅಗತ್ಯವಿದ್ದಷ್ಟು ನಿದ್ದೆಯನ್ನು ಪಡೆಯಲೇಬೇಕಾಗುತ್ತದೆ.

ಕಾಮಪ್ರಚೋದಕ ಹಾರ್ಮೋನುಗಳು ಕುಂಠಿತಗೊಳ್ಳುತ್ತವೆ

ಕಾಮಪ್ರಚೋದಕ ಹಾರ್ಮೋನುಗಳು ಕುಂಠಿತಗೊಳ್ಳುತ್ತವೆ

ದಾಂಪತ್ಯ ಜೀವನದಲ್ಲಿ ದಂಪತಿಗಳ ನಡುವಣ ಬಾಂಧವ್ಯ ಉತ್ತಮಗೊಳ್ಳಲು ಸಹಾ ಸಾಕಷ್ಟು ನಿದ್ದೆ ಅಗತ್ಯ. ವಿಶೇಷವಾಗಿ ಸತತವಾಗಿ ಒಂದು ವಾರ ಅಗತ್ಯಕ್ಕೂ ಕಡಿಮೆ ನಿದ್ದೆ ಮಾಡಿದ ಯುವ ಪುರುಷರಲ್ಲಿ ಟೆಸ್ಟಾಸ್ಟೆರೋನ್ ರಸದೂತದ ಪ್ರಮಾಣ ತೀರಾ ಕಡಿಮೆಯಾಗಿರುವುದು ಕಂಡು ಬಂದಿದೆ. ಒಂದು ವೇಳೆ ನಿದ್ದೆಯ ಪ್ರಮಾಣ ದಿನಕ್ಕೆ ಐದು ಗಂಟೆಗಳಿಗೂ ಕಡಿಮೆಯಾದರೆ ಈ ರಸದೂತದ ಪ್ರಮಾಣ ಹತ್ತರಿಂದ ಹದಿನೈದು ಶೇಖಡಾ ಇಳಿಯುತ್ತದೆ. ಇದು ಲೈಂಗಿಕ ಜೀವನದ ಮೇಲೆ ಅಪಾರ ಪ್ರಭಾವ ಬೀರಬಲ್ಲುದು.

ಸ್ಥೂಲಕಾಯ ಆವರಿಸುತ್ತದೆ

ಸ್ಥೂಲಕಾಯ ಆವರಿಸುತ್ತದೆ

ನಿದ್ದೆಯ ಕೊರತೆ ಎಂದರೆ ದೇಹ ಹೆಚ್ಚು ಕಾಲ ಎಚ್ಚರಿರಬೇಕಾಗುತ್ತದೆ ಎಂದು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ದಿನಕ್ಕೆ ಐದು ಘಂಟೆಗೂ ಕಡಿಮೆ ನಿದ್ದೆ ಮಾಡಿದವರಲ್ಲಿ ಈ ಪ್ರಮಾಣ ಗರಿಷ್ಠವಾಗಿದ್ದು ಕೆಲವೇ ದಿನಗಳಲ್ಲಿ ಹೆಚ್ಚಿನ ಸ್ಥೂಲಕಾಯವನ್ನು ಪಡೆಯುತ್ತಾರೆ. ದಿನಕ್ಕೆ ಏಳರಿಂದ ಎಂಟು ಗಂಟೆ ನಿದ್ರಿಸುವವರು ಉತ್ತಮ ಆರೋಗ್ಯ, ದೇಹದಾರ್ಢ್ಯ ಹೊಂದಿರುತ್ತಾರೆ ಹಾಗೂ ಮಾನಸಿಕವಾಗಿ ಹೆಚ್ಚು ಚುರುಕಾಗಿದ್ದು ಚಲನಶೀಲರಾಗಿಯೂ ಇರುತ್ತಾರೆ.

ಮಧುಮೇಹದ ಸಾಧ್ಯತೆ ಹೆಚ್ಚುತ್ತದೆ

ಮಧುಮೇಹದ ಸಾಧ್ಯತೆ ಹೆಚ್ಚುತ್ತದೆ

ದೇಹ ಸ್ಥೂಲಕಾಯಕ್ಕೆ ಒಡ್ಡಿಕೊಳ್ಳುತ್ತಾ ಹೋದಂತೆಯೇ ನಿದ್ದೆಯ ಕೊರತೆ ಈ ವ್ಯಕ್ತಿಗಳಿಗೆ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆಯನ್ನೂ ಹೆಚ್ಚಿಸುತ್ತಾ ಹೋಗುತ್ತದೆ. ನಿದ್ದೆಯ ಕೊರತೆಯಿಂದ ದೇಹದಲ್ಲಿ ಬಿಡುಗಡೆಯಾಗಬೇಕಾಗಿದ್ದ ಪ್ರಮಾಣಕ್ಕಿಂತಲೂ ಹೆಚ್ಚಿನ ಇನ್ಸುಲಿನ್ ಬಿಡುಗಡೆಯಾಗುತ್ತದೆ ಹಾಗೂ ಇದನ್ನು ಬಳಸಿಕೊಳ್ಳಲು ದೇಹ ಅಸಮರ್ಥವಾಗಿ ಹೋಗುತ್ತದೆ. ತನ್ಮೂಲಕ ಟೈಪ್ 2 ಮಧುಮೇಹ ನಿಧಾನವಾಗಿ ಆವರಿಸುತ್ತದೆ. ದಿನಕ್ಕೆ ಎಂಟು ಗಂಟೆ ನಿದ್ದೆ ಮಾಡುವವರಿಗೆ ಈ ಸಾಧ್ಯತೆ ಅತಿ ಕಡಿಮೆ.

ವೃದ್ಧಾಪ್ಯ ಬೇಗನೇ ಆವರಿಸುತ್ತದೆ

ವೃದ್ಧಾಪ್ಯ ಬೇಗನೇ ಆವರಿಸುತ್ತದೆ

ನಿದ್ದೆಯ ಕೊರತೆಯಿಂದ ಚರ್ಮ ಜೋಲುಬೀಳಲು ಪ್ರಾರಂಭಿಸುತ್ತದೆ. ಪರಿಣಾಮವಾಗಿ ಚಿಕ್ಕ ವಯಸ್ಸಿನಲ್ಲಿಯೇ ವೃದ್ಧಾಪ್ಯದ ಚಿಹ್ನೆಗಳು ಮೂಡತೊಡಗಿ ನಿಜವಾದ ವಯಸ್ಸಿಗಿಂತಲೂ ಹೆಚ್ಚು ವಯಸ್ಸಾದಂತೆ ಕಾಣತೊಡಗುತ್ತದೆ. ಕಡಿಮೆ ನಿದ್ದೆ ಅಥವಾ ಕ್ರಮಬದ್ಧವಲ್ಲದ ನಿದ್ದೆ ಮಾಡುವ ವ್ಯಕ್ತಿಗಳು ತಮ್ಮ ನಿಜವಾದ ವಯಸ್ಸಿಗಿಂತಲೂ ಹೆಚ್ಚು ವಯಸ್ಸಾದವರಂತೆ ಕಾಣತೊಡಗುತ್ತಾರೆ ಎಂದು ಒಂದು ಅಧ್ಯಯನ ತಿಳಿಸಿದೆ. ನಿದ್ದೆಯ ಕೊರತೆಯಿಂದ ನೆರಿಗೆಗಳು, ಕಣ್ಣಿನ ಅಡಿ ಅರ್ಧ ವೃತ್ತಾಕಾರದ ಗುರುತು, ಚರ್ಮದ ಬಣ್ಣ ಏಕ ಪ್ರಕಾರವಾಗಿಲ್ಲದಿರುವುದು, ನಡುನಡುವೆ ಸಡಿಲವಾಗಿ ಜೋತು ಬೀಳುವುದು ಮೊದಲಾದವು ಎದುರಾಗುತ್ತವೆ.

 ಸಂಬಂಧಗಳಲ್ಲಿ ಬಿರುಕು

ಸಂಬಂಧಗಳಲ್ಲಿ ಬಿರುಕು

ನಿದ್ದೆಯ ಕೊರತೆಯಿಂದ ಚಿಂತನಾ ಸಾಮರ್ಥ್ಯ ಕುಂದುವ ಜೊತೆಗೇ ದೇಹದ ಶಕ್ತಿಯೂ ಕುಂದುತ್ತದೆ. ಸುಸ್ತು, ಗಮನ ನೀಡದಿರುವಿಕೆ, ನಿದ್ದೆಯ ಗುಂಗು ಮೊದಲಾದವು ಇತರರಲ್ಲಿ ತಪ್ಪು ಭಾವನೆಯನ್ನುಂಟು ಮಾಡಬಹುದು. ನಿದ್ದೆಯ ಕೊರತೆಯಿಂದ ಎದುರಿನವರಿಗೆ ಕೊಡಬೇಕಾದಷ್ಟು ಗಮನ ಕೊಡದೇ ಹೋದಾದ ಎದುರಿನವರು ತಮ್ಮನ್ನು ಅಲಕ್ಷಿಸುತ್ತಿದ್ದಾರೆ ಎಂದೇ ತಿಳಿದುಕೊಳ್ಳಬಹುದು. ಇದು ಸಂಬಂಧಗಳ ಬಿರುಕಿಗೆ ಕಾರಣವಾಗಬಹುದು. ವ್ಯಾಪಾರದ ಸಮಯದಲ್ಲಿ ಗ್ರಾಹಕರ ಪ್ರಶ್ನೆಗೆ ಸೂಕ್ತ ಉತ್ತರ ನೀಡದೇ ಹೋದರೆ ಗ್ರಾಹಕ ಕೊಳ್ಳದೇ ಹೋಗುವ ಮೂಲಕ ವ್ಯಾಪಾರ ಇಲ್ಲವಾಗಬಹುದು. ವಿಶೇಷವಾಗಿ ಸಂಗಾತಿಯಲ್ಲಿ ಈ ಬಗೆಯ ಉಪೇಕ್ಷೆ ದಾಂಪತ್ಯದಲ್ಲಿ ಹುಳಿ ಹಿಂಡಬಹುದು. ಉತ್ತಮ ಪ್ರಮಾಣದ ನಿದ್ದೆ ಪಡೆದ ವ್ಯಕ್ತಿಗಳು ತಮ್ಮ ಆಪ್ತರೊಂದಿಗೆ ಹಾಗೂ ಸಂಗಾತಿಯೊಂದಿಗೆ ಪೂರ್ಣ ಪ್ರಮಾಣದ ಗಮನ ನೀಡುವ ಮೂಲಕ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಬಹುದು.

English summary

This Is What Happens When You Don't Sleep For A Day

Are you not getting enough sleep due to all-night study sessions or important business deals? The occasional lack of sleep may have an impact on the body which can be intense and the effects of sleep deprivation can linger. Sleep, along with a proper balanced diet and exercise, constitutes the very foundation of good health. Chronic poor sleep will put you at an increased risk of serious medical conditions such as diabetes, obesity and heart disease.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more