For Quick Alerts
ALLOW NOTIFICATIONS  
For Daily Alerts

ನೀವು ಸೆಕ್ಸ್ ವೇಳೆ ಮಾಡಲೇಬಾರದ 9 ತಪ್ಪುಗಳು...

|

ಸೆಕ್ಸ್ ಅನ್ನವುದು ಪ್ರೀತಿ, ಅನ್ಯೋನ್ಯತೆ ಹೊಂದಿರುವ ಸಂಬಂಧದ ಒಂದು ಭಾಗ. ಕೇವಲ ಸೆಕ್ಸ್ ಗಾಗಿ ಮಾತ್ರ ಸಂಬಂಧ ಬೆಳೆಸುವಂತಹ ಜನರು ಇರಬಹುದು. ಆದರೆ ಇದು ಕೇಲವೇ ಕ್ಷಣಗಳ ಆಕರ್ಷಣೆ ಮಾತ್ರ. ಪ್ರೀತಿ ಹಾಗೂ ಅನ್ಯೋನ್ಯತೆಯಿದ್ದರೆ ಮಾತ್ರ ಅಲ್ಲಿ ಸೆಕ್ಸ್ ಗೂ ಒಂದು ಅರ್ಥವಿರುವುದು.

ಕೆಲವೊದು ವಿಚಾರಗಳನ್ನು ನೀವು ಸೆಕ್ಸ್ ವೇಳೆ ಮಾಡಿದರೆ ಉತ್ತಮ ಹಾಗೂ ಇನ್ನು ಕೆಲವೊಂದು ಒಳ್ಳೆಯದಲ್ಲವೆಂದು ಈಗಾಗಲೇ ನೀವು ಇದೇ ವಿಭಾಗದಲ್ಲಿ ಓದಿಕೊಂಡಿರಬಹುದು. ಸಂಗಾಗಿ ಜತೆಗೆ ನೀವು ಹಾಸಿಗೆಯಲ್ಲಿ ಇರುವಾಗ ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಮಾಡಲೇಬಾರದು. ಇದು ಯಾವುದು ಎಂದು ಈ ಲೇಖನ ಓದುತ್ತಾ ಸಾಗಿದರೆ ನಿಮಗೆ ತಿಳಿಯುವುದು.

ಚುಂಬಿಸದೆ ಇರುವುದು

ಚುಂಬಿಸದೆ ಇರುವುದು

ಲೈಂಗಿಕ ಕ್ರಿಯೆ ನಡೆಸುವಾಗ ಹೆಚ್ಚಿನ ಜನರು(ಮಹಿಳೆಯರ ಸಹಿತ) ತಮ್ಮ ಸಂಗಾತಿಗೆ ಚುಂಬಿಸುವುದೇ ಇಲ್ಲ. ಯಾಕೆ ಹೀಗೆ ಆಗುವುದು? ಭಂಗಿಯು ನಿಮಗೆ ಚುಂಬಿಸಲು ಕಿರಿಕಿರಿ ಉಂಟು ಮಾಡಬಹುದು ಅಥವಾ ಪರಾಕಾಷ್ಠೆ ತಲುಪಲು ಎದುರುನೋಡುತ್ತಲಿರುವ ಕಾರಣದಿಂದ ಚುಂಚಿಸಲು ಹಿಂಜರಿಯಬಹುದು. ಆದರೆ ನೀವು ಈ ಸಮಯದಲ್ಲಿ ಚುಂಬಿಸಲೇಬೇಕು. ಇದು ಅನುಭವ ಹೆಚ್ಚಿಸುವುದು.

 ಸಂಗಾತಿ ತಯಾರಾಗುವ ಮೊದಲೇ ಕಚ್ಚುವುದು

ಸಂಗಾತಿ ತಯಾರಾಗುವ ಮೊದಲೇ ಕಚ್ಚುವುದು

ಕೆಲವು ಜನರಿಗೆ ತುಂಬಾ ಆಕ್ರಮಣಕಾರಿ ಸಂಗಾತಿಗಳು ಇರುವರು. ಕಾಮೋದ್ರೇಕಗೊಳ್ಳುವ ಮೊದಲೇ ನೀವು ಕಚ್ಚಿದರೆ ಆಗ ನೋವು ಅಥವಾ ಕಿರಿಕಿರಿ ಉಂಟು ಮಾಡಬಹುದು ಅಥವಾ ಭೀತಿ ಹುಟ್ಟಿಸಬಹುದು. ನಿಮ್ಮ ಸಂಗಾತಿಯು ಸಂಪೂರ್ಣವಾಗಿ ಕಾಮೋದ್ರೇಕಗೊಂಡ ಬಳಿಕ ನೀವು ಕಿವಿ, ಭುಜ, ಕುತ್ತಿಗೆ ಅಥವಾ ದೇಹದ ಯಾವುದೇ ಭಾಗಕ್ಕೆ ಕಚ್ಚಬಹುದು.

Most Read:ಪುರುಷರು ಮತ್ತು ಮಹಿಳೆಯರ ಸೆಕ್ಸ್‌ನ ಬಗ್ಗೆ ಕೆಲವೊಂದು ಅಚ್ಚರಿಯ ಸಂಗತಿಗಳು

ಲೈಂಗಿಕ ಅಂಗಗಳನ್ನು ಬಿಟ್ಟು ಬೇರೆ ಭಾಗಗಳ ಕಡೆಗಣನೆ

ಲೈಂಗಿಕ ಅಂಗಗಳನ್ನು ಬಿಟ್ಟು ಬೇರೆ ಭಾಗಗಳ ಕಡೆಗಣನೆ

ಜನನೇಂದ್ರೀಯಗಳು ತುಂಬಾ ಶ್ರೇಷ್ಠವಾಗಿರುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಿಮ್ಮ ಸಂಗಾತಿಯ ದೇಹದ ಬೇರೆ ಭಾಗಗಳ ಕೂಡ ಹೆಚ್ಚಿನ ಗಮಹರಿಸಬೇಕು. ಇದರಲ್ಲಿ ಪ್ರಮುಖವಾಗಿ ಮೊಣಕಾಲು, ಮೊಣಕೈ, ಬೆನ್ನು ಮತ್ತು ಮತ್ತು ಹೊಟ್ಟೆಯು ಪುರುಷರಿಗೆ ಹಾಗೂ ಮಹಿಳೆಯರಿಗೆ ಕಾಮೋದ್ರೇಕಗೊಳಿಸುವ ಭಾಗಗಳು. ಈ ಭಾಗಗಳನ್ನು ಆರೈಕೆ ಮಾಡುವುದರಿಂದ ಸಂಗಾತಿಯು ಮತ್ತಷ್ಟು ಕಾಮೋದ್ರೇಕಗೊಳ್ಳುವರು. ಮರಳಿ ನಿಮಗೂ ಇದೇ ರೀತಿ ಮಾಡಬಹುದು.

ಸಂಗಾತಿ ಮೇಲೆ ಭಾರ ಹಾಕುವುದು

ಸಂಗಾತಿ ಮೇಲೆ ಭಾರ ಹಾಕುವುದು

ನೀವು ಹುಡುಗಿಯಾಗಿದ್ದರೆ ಆಗ ಒಂದು ಕ್ಷಣ ನೀವು ಸಂಗಾತಿ ಬಗ್ಗೆ ತುಂಬಾ ಹುಚ್ಚಿಗೆ ಬಿದ್ದು ನಿಮ್ಮನ್ನು ನೀವು ಕಳಕೊಳ್ಳುವುದು ಇದೆ. ಆದರೆ ಅವರ ಮೇಲೆ ಮಲಗುವಾಗ ನೀವು ಗಮನಹರಿಸಬೇಕು. ಸಂಪೂರ್ಣ ಭಾರವನ್ನು ಅವರ ಮೇಲೆ ಹಾಕಬಾರದು. ಅವರಿಗೆ ಉಸಿರಾಡಲು ಕಷ್ಟವಾದರೆ ಆಗ ಆ ಕ್ಷಣದ ಸಂಭ್ರಮವೆಲ್ಲವೂ ಮಾಯವಾಗಬಹುದು.

ಅತೀ ಶೀಘ್ರ ಅಥವಾ ವಿಳಂಬವಾಗಿ ಕ್ಲೈಮ್ಯಾಕ್ಸ್

ಅತೀ ಶೀಘ್ರ ಅಥವಾ ವಿಳಂಬವಾಗಿ ಕ್ಲೈಮ್ಯಾಕ್ಸ್

ಇದು ವಿಶೇಷವಾಗಿ ಪುರುಷರಿಗೆ. ನಿಮ್ಮ ಮೇಲೆ ನಿಯಂತ್ರಣವನ್ನು ಸಾಧಿಸಿಕೊಂಡು ಯಾವ ಸಮಯದಲ್ಲಿ ಸ್ಖಲನ ಮಾಡಬೇಕು ಎಂದು ತಿಳಿದಿರಬೇಕು. ಬೇಗನೆ ಸ್ಖಲನವಾದರೆ ಸಂಗಾತಿಗೆ ಅತೃಪ್ತಿಯಾಗಬಹುದು. ತುಂಬಾ ವಿಳಂಬವಾದರೆ ಆಗಲೂ ಅವರಿಗೆ ಸಮಸ್ಯೆಯಾಗಬಹುದು. ಇದನ್ನು ಕಡೆಗಣಿಸಲು ಇದಕ್ಕೆ ಮೊದಲು ಆಟದಲ್ಲಿ ತೊಡಗಿಕೊಳ್ಳಿ. ನಿಮಗೆ ತುಂಬಾ ದೀರ್ಘ ಸಮಯ ಬೇಕಾಗುತ್ತಿದ್ದರೆ ಆಗ ನೀವು ಸಂಗಾತಿಯು ಪರಾಕಾಷ್ಠೆ ತಲುಪುವಂತೆ ಮಾಡಿ ಮತ್ತು ಬಳಿಕ ನಿಮಗೆ ಅವರು ನೆರವಾಗುವರು.

ಕ್ಲೈಮ್ಯಾಕ್ಸ್ ಗೆ ಮೊದಲು ಎಚ್ಚರಿಸದಿರುವುದು

ಕ್ಲೈಮ್ಯಾಕ್ಸ್ ಗೆ ಮೊದಲು ಎಚ್ಚರಿಸದಿರುವುದು

ನಿಮ್ಮಷ್ಟಕ್ಕೆ ನೀವು ಸ್ಖಲನ ಮಾಡಿಕೊಂಡರೆ ಆಗದು. ಇದು ಮಹಿಳೆಯರಿಗೆ ಕೂಡ ಅನ್ವಯವಾಗುವುದು. ಸ್ಖಲನಕ್ಕೆ ಮೊದಲು ನೀವು ಸಂಗಾತಿಗೆ ಎಚ್ಚರಿಸಬೇಕು. ಈಗ ನಾನು ವೀರ್ಯ ಸ್ಖಲನ ಮಾಡಲಿದ್ದೇನೆ ಎಂದು ಹೇಳಿ.

Most Read:ಥಾಯ್ಲೆಂಡ್‌ನಲ್ಲಿ ಶಿಶ್ನ ಬಿಳಿಯಾಗಿಸುವ ಟ್ರೆಂಡ್ ಸಿಕ್ಕಾಪಟ್ಟೆ ಫೇಮಸ್ ಅಂತೆ!!

ಸೆಕ್ಸ್ ನ್ನು ನೀಲಿಚಿತ್ರದಂತೆ ಭಾವಿಸುವುದು

ಸೆಕ್ಸ್ ನ್ನು ನೀಲಿಚಿತ್ರದಂತೆ ಭಾವಿಸುವುದು

ಕೆಲವು ದಂಪತಿಗಳು ಗಡಸು ಸೆಕ್ಸ್ ನಲ್ಲಿ ತೊಡಗಿಕೊಳ್ಳುವರು. ಇಂತಹ ಯಾವುದೇ ಕಾರ್ಯಕ್ಕೆ ಮೊದಲು ನೀವು ಸಂಗಾತಿ ಜತೆಗೆ ಮಾತನಾಡಿ. ಇದನ್ನು ನಿಮ್ಮ ಸಂಗಾತಿಯು ಇಷ್ಟಪಡುತ್ತಾರೆಯಾ, ಇಲ್ಲವಾ ಎನ್ನುವುದು ತಿಳಿದಿರುವುದಿಲ್ಲ. ಕೆಲವೊಂದು ಸಲ ಇದು ಬೇಸರದಲ್ಲಿ ಕೊನೆಯಾಗಬಹುದು.

ಮೌನವಾಗಿರುವುದು

ಮೌನವಾಗಿರುವುದು

ಸಂಗಾತಿಯು ಒಳ್ಳೆಯ ಸಮಯವನ್ನು ಅನುಭವಿಸುವುದನ್ನು ನೀವು ಕೇಳಲು ಬಯಸುತ್ತೀರಾ? ನೀವು ಆನಂದಿಸುವಾಗ ಅವರೊಂದಿಗೆ ಮಾತನಾಡಿ ಮತ್ತು ಅದೇ ರೀತಿಯ ಗೌರವ ನೀಡಿ. ಸ್ವಲ್ಪ ಮಟ್ಟಿನ ನರಳಾಟ ಅಥವಾ ತುಂಬಾ ಒಳ್ಳೆಯದಾಗುತ್ತಿದೆ ಎನ್ನುವ ಶಬ್ಧಗಳು ನಿಮ್ಮ ಸಂಗಾತಿಯನ್ನು ಪ್ರೇರೇಪಿಸುವುದು ಮತ್ತು ನರಳಾಟದ ಬಗ್ಗೆ ಮತ್ತಷ್ಟು ಹೇಳಿಕೊಡಿ.

Most Read:ಬೆಳಗಿನ ಹೊತ್ತಿಗೆ ನಡೆಸುವ ಸೆಕ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

ಯಾಂತ್ರಿಕ ಕ್ರಿಯೆ

ಯಾಂತ್ರಿಕ ಕ್ರಿಯೆ

ಕೆಲವೊಂದು ಸಲ ಸಂಗಾತಿಯು ತುಂಬಾ ಯಾಂತ್ರಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವರು. ಆದರೆ ಇದನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಸಲ್ಪ ವೇಗವಾಗಿ ಹೋಗಿ....ಮತ್ತೆ ನಿಧಾನವಾಗಿಸಿ. ತುಂಬಾ ಕ್ರಿಯಾತ್ಮಕವಾಗಿರಿ ಮತ್ತು ಇದರಿಂದ ನಿಮಗೂ ವೈವಿಧ್ಯತೆಯನ್ನು ಆನಂದಿಸಲು ಸಿಗುವುದು.

English summary

things you should never do while having sex

When you're in bed with your lover, the last thing you want to do is turn them off. That said, here are a few common blunders that you should not commit.
X
Desktop Bottom Promotion