Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಎಂಟು ಕೆಟ್ಟ ಅಭ್ಯಾಸದಿಂದಲೇ ನಿಮ್ಮ ಶಿಶ್ನಕ್ಕೆ ಕೆಡುಕುಂಟಾಗುತ್ತದೆಯಂತೆ!
ಪುರುಷರಿಗೆ ತಮ್ಮ ದೇಹದ ಯಾವುದೇ ಅಂಗಕ್ಕಿಂತ ಜನನಾಂಗವೇ ಹೆಚ್ಚು ಪ್ರಮುಖ ಎಂಬ ಭಾವನೆಯಿದ್ದು ಈ ಅಂಗವನ್ನು ಆರೋಗ್ಯಕರವಾಗಿರಿಸಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆದರೆ ಇವರಿಗೆ ಅರಿವಿಲ್ಲದೇ ಇವರ ಕೆಲವು ನಿತ್ಯದ ಅಭ್ಯಾಸಗಳು ಶಿಶ್ನಕ್ಕೆ ಕೆಡಕನ್ನುಂಟುಮಾಡುತ್ತಿರುತ್ತವೆ. ಇವುಗಳಲ್ಲಿ ಪ್ರಮುಖವಾದ ಎಂಟು ಅಭ್ಯಾಸಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ...

ಚಲನಾರಹಿತ ಜೀವನ
ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ನಿತ್ಯವೂ ಚಲನಾಶೀಲರಾಗಿದ್ದು ದೈಹಿತ ಚಟುವಟಿಕೆಗಳು ಮತ್ತು ವ್ಯಾಯಾಮಗಳ ಮೂಲಕ ದಿನದ ಅವಧಿಯನ್ನು ಕಳೆಯುವವರು ಉತ್ತಮ ಲೈಂಗಿಕ ಜೀವನವನ್ನು ನಡೆಸುತ್ತಿರುತ್ತಾರೆ. ಇದಕ್ಕೆ ವಿರುದ್ದವಾಗಿ ದಿನವಿಡೀ ಕುಳಿತೇ ಇರುವ ಅಥವಾ ಅತಿ ಕಡಿಮೆ ಚಲನಶೀಲರಾಗಿರುವ ಪುರುಷರಲ್ಲಿ ನಿಮಿರು ದೌರ್ಬಲ್ಯ ಹಾಗೂ ನಪುಂಸಕತ್ವ ಹೆಚ್ಚಾಗಿ ಕಾಣಬಹುತ್ತದೆ.

ಧೂಮಪಾನ
British Journal of Urology ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಎಂಟು ತಿಂಗಳಲ್ಲಿ ಧೂಮಪಾನ ಬಿಡಿ ಎಂಬ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಪುರುಷರಲ್ಲಿ ಶೇಖಡಾ ಇಪ್ಪತ್ತರಷ್ಟು ಪುರುಷರು ತಮಗೆ ನಿಮಿರು ದೌರ್ಬಲ್ಯವಿದೆ ಎಂದು ಒಪ್ಪಿಕೊಂಡಿದ್ದಾರೆ. ಧೂಮಪಾನ ಬಿಟ್ಟ ಬಳಿಕ ಇವರಲ್ಲಿ ಮುಕ್ಕಾಲು ಪಾಲು ಜನರು ಈಗ ತಮ್ಮ ನಿಮಿರುತನ ಹಾಗೂ ಗಡಸುವಿಕೆ ಹೆಚ್ಚಿದೆ ಎಂದು ಒಪ್ಪಿಕೊಂಡಿದ್ದಾರೆ ಧೂಮಪಾನ ತ್ಯಜಿಸುವುದರಿಂದ ನಿಮಿರುದೌರ್ಬಲ್ಯದಿಂದ ಹೊರಬರಲು ನೆರವಾಗುತ್ತದೆ.

ಹಲ್ಲುಗಳ ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ
ಹಲ್ಲು ಮತ್ತು ಜನನಾಂಗಕ್ಕೆ ಯಾವುದೇ ನೇರವಾದ ಸಂಬಂಧವಿಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ನಿಮಿರು ದೌರ್ಬಲ್ಯಕ್ಕೆ ಒಸಡುಗಳ ಕಾಯಿಲೆಗೂ ನಿಕಟವಾದ ಸಂಬಂಧವಿದೆ. ನಿಮಿರುದೌರ್ಬಲ್ಯವಿರುವ ಪುರುಷರಿಗೆ ಒಸಡುಗಳ ತೊಂದರೆ ಇರುವ ಸಾಧ್ಯತೆ ಇತರರಿಗಿಂತ ಏಳು ಪಟ್ಟು ಹೆಚ್ಚು. ಏಕೆಂದರೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ರಕ್ತದ ಮೂಲಕ ದೇಹದ ಇತರ ಭಾಗಗಳಿಗೂ ಹರಡಿ ರಕ್ತಪರಿಚಲನೆಯನ್ನು ಬಾಧಿಸಬಹುದು, ರಕ್ತಪರಿಚಲನೆಯ ತೊಂದರೆ ನಿಮಿರುದೌರ್ಬಲ್ಯಕ್ಕೆ ಪ್ರಮುಖ ಕಾರಣವಾಗಿದೆ.

ಅಗತ್ಯಕ್ಕೂ ಕಡಿಮೆ ನಿದ್ರಿಸುವುದು
ಪುರುಷರ ದೇಹದ ಹಲವು ಕಾರ್ಯಗಳಿಗೆ ಅಗತ್ಯವಾದ ಟೆಸ್ಟಾಸ್ಟೆರೋನ್ ಎಂಬ ರಸದೂತ ನಿದ್ದೆಯ ಸಮಯದಲ್ಲಿ ಉತ್ಪತ್ತಿಯಾಗುತ್ತದೆ. ನಿದ್ದೆ ಕಡಿಮೆಯಾದರೆ ಈ ಪ್ರಮಾಣವೂ ಕಡಿಮೆಯಾಗುತ್ತದೆ ಹಾಗೂ ಸುಸ್ತು, ಆಯಾಸ, ಸ್ನಾಯು ಮತ್ತು ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು ಮೊದಲಾದವು ಎದುರಾಗುತ್ತವೆ. ಈ ಎಲ್ಲಾ ತೊಂದರೆಗಳು ಜನನಾಂಗದ ಕ್ಷಮತೆಯ ಮೇಲೆ ಅಪಾರ ಪ್ರಭಾವ ಬೀರುತ್ತದೆ.

ಸಾಕಷ್ಟು ಲೈಂಗಿಕ ಕ್ರಿಯೆ ನಡೆಸದೇ ಇರುವುದು
American Journal of Medicine ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ದಂಪತಿಗಳ ನಡುವೆ ಎಷ್ಟು ಲೈಂಗಿಕ ಕ್ರಿಯೆ ಅಗತ್ಯ ಅಥವಾ ಸಾಕು ಎಂಬುದು ಆಯಾ ದಂಪತಿಗಳಿಗೇ ಬಿಟ್ಟ ವಿಷಯವಾಗಿದೆ. ಆದರೆ ವಾರಕ್ಕೊಮ್ಮೆಯದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗದೇ ಇರುವ ಪುರುಷರಲ್ಲಿ ನಿಮಿರು ದೌರ್ಬಲ್ಯ ಎದುರಾಗುವ ಸಾಧ್ಯತೆ ದುಪ್ಪಟ್ಟಾಗುತ್ತದೆ. ವಾರದಲ್ಲಿ ಮೂರು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಅತ್ಯಂಅ ಆರೋಗ್ಯಕರ ಎಂದು ವರದಿ ತಿಳಿಸುತ್ತದೆ.

ಕಲ್ಲಂಗಡಿ ಹಣ್ಣು ತಿನ್ನದೇ ಇರುವುದು
ಪುರುಷರ ದೇಹದ ಲೈಂಗಿಕ ಕ್ಷಮತೆಯನ್ನು ಹೆಚ್ಚಿಸಲು citrulline-arginine ಎಂಬ ಪೋಷಕಾಂಶಗಳು ಅಗತ್ಯವಾಗಿದ್ದು ಇವು ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾಗಿವೆ. ಇವುಗಳು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಪ್ರಮಾಣವನ್ನು ಹೆಚ್ಚಿಸುತ್ತವೆ ಹಾಗೂ ನಿಮಿರು ದೌರ್ಬಲ್ಯವಿದ್ದರೆ ಇದನ್ನು ಸರಿಪಡಿಸಲೂಬಹುದು. ಹಾಗಾಗಿ ನಿತ್ಯವೂ ಕೊಂಚ ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಈ ಅಗತ್ಯತೆಯಿಂದಾದರೂ ಉತ್ತಮವಾಗಿದೆ.

ಅತಿ ಹೆಚ್ಚು ಕೊಬ್ಬಿನ ಆಮ್ಲಯುಕ್ತ ಆಹಾರಗಳ ಸೇವನೆ
ಟ್ರಾನ್ಸ್ ಫ್ಯಾಟ್ ಎಂದೂ ಕರೆಯಲ್ಪಡುವ ಈ ಕೊಬ್ಬುಯುಕ್ತ ಆಹಾರಗಳನ್ನು ಸೇವಿಸಿದಷ್ಟೂ ವೀರ್ಯಾಣುಗಳ ಗುಣಮಟ್ಟ ಕುಂದುತ್ತದೆ. ಹಾಗಾಗಿ ಉತ್ತಮ ವೀರ್ಯಾಣುಗಳಿರಬೇಕೆಂದರೆ ಆರೋಗ್ಯಕರ ಆಹಾರ ಸೇವನೆ ಅಗತ್ಯ.

ಅತಿ ಹೆಚ್ಚು ನಿದ್ದೆಗೆಡುವುದು
ರಾತ್ರಿಯ ನಿದ್ದೆ ಆರೋಗ್ಯಕ್ಕೆ ಅವಶ್ಯವಾಗಿದ್ದು ಇದನ್ನು ಕಳೆದುಕೊಳ್ಳುವ ಮೂಲಕ ವೀರ್ಯಾಣುಗಳ ಸಂಖ್ಯೆಯಲ್ಲಿಯೂ ಇಳಿತವಾಗುತ್ತದೆ. ವಾರದಲ್ಲಿ ಇಪ್ಪತ್ತು ಘಂಟೆಗಳ ಕಾಲ ರಾತ್ರಿ ಚಲನಚಿತ್ರಗಳನ್ನು ವೀಕ್ಷಿಸಿ ಮಲಗುವವರಲ್ಲಿ ವೀರ್ಯಾಣುಗಳ ಪ್ರಮಾಣ 44ಶೇಖಡಾ ಕಡಿಮೆಯಾಗಿರುವುದು ಕಂಡುಬಂದಿದೆ.



Click it and Unblock the Notifications