Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಜೇನುತುಪ್ಪ ಸೇವಿಸಿದರೆ, ಆರೋಗ್ಯಕ್ಕೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳಿವೆ
ಬೆಳಗ್ಗೆ ಎದ್ದ ಕೂಡಲೇ ನೀವು ಒಂದು ಲೋಟ ಬಿಸಿ ನೀರಿಗೆ ಜೇನುತುಪ್ಪ ಬೆರೆಸಿಕೊಂಡು ಕುಡಿದರೆ ತುಂಬಾ ಒಳ್ಳೆಯದು. ಇದರ ಬಗ್ಗೆ ಜನರು ಬೇರೆ ಬೇರೆ ರೀತಿಯ ವಾದ ಮಂಡಿಸಬಹುದು. ಆದರೆ ಇದು ಹಲವಾರು ರೋಗಗಳನ್ನು ನಿವಾರಣೆ ಮಾಡುವುದು ಮತ್ತು ದೇಹದ ಆರೋಗ್ಯ ಕಾಪಾಡುವುದು.

ಜೇನುತುಪ್ಪವು ನೈಸರ್ಗಿಕ ಉತ್ಪನ್ನವಾಗಿರುವ ಕಾರಣದಿಂದಾಗಿ ಇದನ್ನು ಪ್ರತಿನಿತ್ಯ ಸೇವನೆ ಮಾಡಬೇಕು. ಜೇನುತುಪ್ಪದ ಜತೆಗೆ ಬಿಸಿ ನೀರು ಕುಡಿದರೆ ಆಗ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು. ಇದು ತುಂಬಾ ಹಳೆಯ ಮತ್ತು ಪರಿಣಾಮಕಾರಿ ನೈಸರ್ಗಿಕ ಮನೆಮದ್ದು. ಬೆಳಗ್ಗೆ ನೀವು ಕಾಫಿ ಅಥವಾ ಚಾ ಕುಡಿಯುವ ಬದಲಿಗೆ ಒಂದು ಲೋಟ ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ಕುಡಿದರೆ ಅದರಿಂದ ಸಿಗುವಂತಹ ಲಾಭಗಳು ಅಧಿಕ. ಇದರಿಂದ ದಿನಪೂರ್ತಿ ನಿಮ್ಮ ದೇಹವು ಶಕ್ತಿಯಿಂದ ಕೆಲಸ ಮಾಡುವಂತೆ ಮಾಡುವುದು. ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚನೆಯ ನೀರು ಕುಡಿದರೆ ಸಿಗುವ ಲಾಭಗಳೇನು ಎಂಬುದನ್ನು ತಿಳಿಯಲು ಮುಂದೆ ಓದಿ

ಜೀರ್ಣಕ್ರಿಯೆ ಸುಧಾರಣೆ
ಜೇನುತುಪ್ಪವು ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ನಂಜುನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರಿಗೆ, ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ಅದು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸಿ ಕರುಳಿನ ಕ್ರಿಯೆಯು ಸರಾಗವಾಗಿ ಆಗಲು ನೆರವಾಗುವುದು.

ಮಲಬದ್ಧತೆ ನಿವಾರಣೆ
ಬಿಸಿ ನೀರಿಗೆ ಜೇನುತುಪ್ಪ ಬೆರೆಸಿಕೊಂಡು ಕುಡಿದರೆ, ಇದು ಕರುಳಿನ ಕ್ರಿಯೆಯನ್ನು ಉತ್ತೇಜಿಸುವುದು ಮತ್ತು ಮಲಬದ್ಧತೆ ನಿವಾರಣೆ ಮಾಡುವುದು.

ಕೆಮ್ಮು ಮತ್ತು ಗಂಟಲು ನೋವು ನಿವಾರಣೆ
ಜೇನುತುಪ್ಪವು ಗಂಟಲು ನೋವು ಮತ್ತು ಕೆಮ್ಮಿನಿಂದ ನಿಮಗೆ ಮುಕ್ತಿ ನೀಡುವುದು. ಇದನ್ನು ನೀವು ಪ್ರತಿನಿತ್ಯ ಸೇವಿಸುತ್ತಾ ಇದ್ದರೆ ಅದರಿಂದ ನಿಮಗೆ ಗಂಟಲು ನೋವು ಮತ್ತು ಕೆಮ್ಮಿನ ಸಮಸ್ಯೆ ಕಡಿಮೆಯಾಗುವ ಅನುಭವವಾಗುವುದು.

ತೂಕ ಇಳಿಸಲು
ನೂರು ಗ್ರಾಂನಷ್ಟು ಜೇನುತುಪ್ಪದಲ್ಲಿ 305ರಷ್ಟು ಕ್ಯಾಲರಿಗಳಿರುತ್ತವೆ. ಒಂದು ಚಮಚ ಜೇನುತುಪ್ಪವು ತೂಕ ಕಳೆದುಕೊಳ್ಳಲು ನೆರವಾಗುವುದು. ಜೇನುತುಪ್ಪದಲ್ಲಿ ನೈಸರ್ಗಿಕದತ್ತ ಸಕ್ಕರೆಯಿರುವ ಕಾರಣ ಹೆಚ್ಚು ಸಕ್ಕರೆ ದಾಹವು ನಿಮಗೆ ಕಾಡದು.

ರಕ್ತಸಂಚಾರ ಸುಧಾರಣೆ
ಜೇನುತುಪ್ಪ ಬೆರೆಸಿದ ಬಿಸಿ ನೀರು ಕುಡಿದರೆ, ಇದು ದೇಹದಲ್ಲಿನ ಕೊಬ್ಬು ತೆಗೆದು, ವಿಷಕಾರಿ ಅಂಶವನ್ನು ಹೊರ ಹಾಕುವ ಕಾರಣದಿಂದಾಗಿ ರಕ್ತ ಸಂಚಾರವು ಸುಗಮವಾಗುವುದು ಮತ್ತು ರಕ್ತವು ಶುದ್ಧವಾಗುವುದು.

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ
ಜೇನಿನಲ್ಲಿ ಕೊಲೆಸ್ಟ್ರಾಲ್ ಇಲ್ಲದೇ ಇರುವ ಕಾರಣ ಇದರ ಸೇವನೆಯಿಂದ ಕೊಲೆಸ್ಟಾಲ್ ಏರುವ ಸಂಭವ ಇಲ್ಲವೇ ಇಲ್ಲ. ಬದಲಿಗೆ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸಂತುಲಿತ ಪ್ರಮಾಣದಲ್ಲಿರಿಸಲು ನೆರವಾಗುತ್ತದೆ. ಇದರ ಆಂಟಿ ಆಕ್ಸಿಡೆಂಟು ಗುಣ ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ನಿವಾರಿಸಲು ನೆರವಾಗುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.

ಉರಿಯೂತ ನಿವಾರಿಸುವುದು
ಜೇನುತುಪ್ಪದಲ್ಲಿ ಫ್ಲಾವನಾಯ್ಡ್ ಮತ್ತು ಪಾಲಿಫೆನಾಲ್ಸ್ ಗಳು ಇವೆ. ಆ್ಯಂಟಿಆಕ್ಸಿಡೆಂಟ್ ಆಗಿರುವಂತಹ ಇದು ಉರಿಯೂತ ವಿರುದ್ಧ ಹೋರಾಡುವುದು ಮತ್ತು ದೀರ್ಘಕಾಲದ ಉರಿಯೂತ ನಿವಾರಣೆ ಮಾಡುವುದು.

ಶಕ್ತಿ ವೃದ್ಧಿಸುವುದು
ಜೇನುತುಪ್ಪದಲ್ಲಿ ನೈಸರ್ಗಿಕ ಸಕ್ಕರೆಯಂಶವಿರುವ ಕಾರಣದಿಂದಾಗಿ ಇದು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ ತೇವಾಂಶದಿಂದ ಇಟ್ಟು, ಮೆದುಳಿಗೆ ರಕ್ತಸಂಚಾರ ಸರಿಯಾಗಿರುವಂತೆ ಮಾಡುವುದು. ಅಲ್ಲದೆ ಜೇನುತುಪ್ಪ, ಒಂದು ಒಳ್ಳೆಯ ಆ್ಯಂಟಿಬಯೋಟಿಕ್ ನಂತೆ ಕಾರ್ಯ ನಿರ್ವಹಿಸುತ್ತದೆ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಸೂಕ್ಷ್ಮಾಣು ಜೀವಿಗಳ ವಿರುದ್ಧ ಹೋರಾಡುವುದು.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ
ಕೆಲವು ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತನಾಳಗಳನ್ನು ಕಿರಿದಾಗಿಸುವುದನ್ನು ತಡೆಗಟ್ಟುತ್ತದೆ. ರಕ್ತನಾಳಗಳು ಕಿರಿದಾಗುವ ಮೂಲಕ ಹೃದಯದ ಮೇಲೆ ಒತ್ತಡ ಹೆಚ್ಚುತ್ತದೆ ಹಾಗೂ ಕೆಲವಾರು ತೊಂದರೆಗಳು ಎದುರಾಗುತ್ತದೆ. ಅಧಿಕ ರಕ್ತದೊತ್ತಡ, ಸ್ಮರಣಶಕ್ತಿ ಕುಂದುವುದು, ತಲೆನೋವು ಮೊದಲಾದವು ಇದರ ಪರೋಕ್ಷ ಕೊಡುಗೆಗಳಾಗಿವೆ. ಪ್ರತಿದಿನವೂ ಒಂದು ಲೋಟ ನೀರಿನಲ್ಲಿ ಒಂದು ಅಥವಾ ಎರಡು ಚಿಕ್ಕಚಮಚ ಜೇನು ಬೆರೆಸಿ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಈ ಪ್ರಯೋಜನವನ್ನು ಪಡೆಯಬಹುದು.

ನಿದ್ದೆಯ ಸಮಸ್ಯೆ ದೂರಮಾಡುತ್ತದೆ
ಜೇನಿನಲ್ಲಿರುವ ಸಕ್ಕರೆ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಸೆರೋಟೋನಿನ್ ಎಂಬ ಕಣಗಳ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಸೆರೋಟೋನಿನ್ ಬಳಿಕ ಇದು ಮೆಲಟೋನಿನ್ ಎಂಬ ರಸದೂತವಾಗಿ ಪರಿವರ್ತಿತವಾಗುತ್ತದೆ. ಈ ಮೆಲಟೋನಿನ್ ಗಾಢನಿದ್ದೆಗ ಅಗತ್ಯವಿರುವ ರಸದೂತವಾಗಿದೆ. ಪ್ರತಿದಿನವೂ ಜೇನನ್ನು ಕೊಂಚವಾಗಿ ಸೇವಿಸುವ ಮೂಲಕ ಪಡೆಯಬಹುದಾದ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ಕ್ಯಾನ್ಸರ್ ತಡೆಗಟ್ಟುತ್ತದೆ
ಜೇನಿನಲ್ಲಿರುವ ಫ್ಲೇವನಾಯ್ಡುಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಇತರ ಪೋಷಕಾಂಶಗಳು ಕೆಲವಾರು ಕ್ಯಾನ್ಸರ್ ಆವರಿಸುವುದರಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಹೃದಯದ ಮೇಲಿನ ಒತ್ತಡ ನಿವಾರಿಸಿ ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ಪ್ರತಿದಿನವೂ ಜೇನನ್ನು ಸೇವಿಸುವ ಮೂಲಕ ಪಡೆಯಬಹುದಾದ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ಕರುಳಿನ ಹುಣ್ಣುಗಳನ್ನು ಕಡಿಮೆಗೊಳಿಸುತ್ತದೆ
ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಜೇನಿನ ಸೇವನೆಯಿಂದ ಕರುಳುಗಳ ಹುಣ್ಣು ಹಾಗೂ ಕರುಳುಗಳ ಒಳಭಾಗದಲ್ಲಿ ಎದುರಾಗುವ ಬ್ಯಾಕ್ಟೀರಿಯಾಗಳ ಸೋಂಕು (bacterial gastroenteritis) ಮೊದಲಾದ ತೊಂದರೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕೆಂದರೆ ಪ್ರತಿದಿನವೂ ಮುಂಜಾನೆ ಪ್ರಥಮ ಆಹಾರವಾಗಿ ಜೇನು ಬೆರೆಸಿದ ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ಅಗತ್ಯ.

ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರು ಹಲವಾರು ಲಾಭಗಳು
ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜೇನುತುಪ್ಪ ಸೇವಿಸಬಾರದು. ಕುದಿಯುವ ನೀರಿಗೆ ಜೇನುತುಪ್ಪ ಹಾಕಬೇಡಿ. ಇದು ಪರಿಣಾಮ ಭಿನ್ನವಾಗಿಸಬಹುದು. ಜೇನುತುಪ್ಪದ ನೀರನ್ನು ಸೇವನೆ ಮಾಡಿದ 20 ನಿಮಿಷ ಬಳಿಕ ಆರೋಗ್ಯಕರ ಉಪಾಹಾರ ಸೇವಿಸಿ.



Click it and Unblock the Notifications