Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮುಂಜಾನೆ ಮೊಸರು ಸೇವಿಸಿದರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು
ಮೊಸರು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಸರನ್ನೂ ಇಷ್ಟಪಡುತ್ತಾರೆ. ಅತ್ಯುತ್ತಮವಾದ ಡೈರಿ ಉತ್ಪನ್ನವಾದ ಮೊಸರು ಅನೇಕ ರೋಗಗಳನ್ನು ಬರದಂತೆ ತಡೆಯುತ್ತದೆ. ನಿತ್ಯವೂ ಇದರ ನಿಯಮಿತ ಸೇವನೆಯಿಂದ ಸದಾ ಆರೋಗ್ಯವಂತರಾಗಿ ಬಾಳಬಹುದು.
ಮೊಸರನ್ನು ವಿವಿಧ ಭಕ್ಷ್ಯಗಳೊಂದಿಗೆ ಸೇರಿಸಿ ತಿನ್ನಬಹುದು. ಹಣ್ಣುಗಳ ಸಲಾಡ್‌ಗಳೊಂದಿಗೆ ಸೇರಿಸಿ ಸವಿಯಬಹುದು. ಅನ್ನದೊಂದಿಗೆ ಬೆರೆಸಿ ಸೇವಿಸಬಹುದು. ಅನ್ನಗಳಲ್ಲಿ ತಯಾರಿಸಿದಂತಹ ಬಾತ್ಗಳಿಗೆ ಮೊಸರನ್ನು ಸೇರಿಸಿ ಸೇವಿಸಬಹುದು. ಹಾಲಿನಿಂದ ತಯಾರಿಸಲಾಗುವ ಮೊಸರು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನಿಷಿಯಮ್, ವಿಟಮಿನ್ ಬಿ2 ಮತ್ತು ವಿಟಮಿನ್ ಬಿ12 ಸೇರಿದಂತೆ ವಿವಿಧ ಪೌಷ್ಟಿಕ ದ್ರವ್ಯಗಳಿಂದ ಕೂಡಿರುವುದನ್ನು ನಾವು ಕಾಣಬಹುದು. ಮುಂಜಾನೆಯ ಉಪಹಾರದ ಸಮಯದಲ್ಲಿ ಮೊಸರನ್ನು ಸೇವಿಸುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವ ವಿವರವಾದ ವಿವರಣೆಯನ್ನು ಬೋಲ್ಡ್ ಸ್ಕೈ ನೀಡಿದೆ...

ಜೀರ್ಣಕ್ರಿಯೆಗೆ ಸಹಾಯ
ಪ್ರತಿದಿನ ಮುಂಜಾನೆ ನಿಯಮಿತವಾಗಿ ಮೊಸರು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಯು ಸುಗಮಗೊಳ್ಳುತ್ತದೆ. ಅಲ್ಲದೆ ಕರುಳು ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಜೀವಾಣು ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸಮಸ್ಯೆಗಳನ್ನು ಮೊಸರು ನಿಯಂತ್ರಿಸುತ್ತದೆ ಎನ್ನಲಾಗುವುದು. ಜೀರ್ಣ ಕ್ರಿಯೆಯಲ್ಲಿ ಉಂಟಾಗುವ ಉರಿಯೂತವು ಶಮನಗೊಳ್ಳುವುದು.

ರೋಗ ನಿರೋಧಕ ಶಕ್ತಿ
ಮೊಸರು ರೋಗವನ್ನು ಉಂಟುಮಾಡುವ ಸೂಕ್ಷ್ಮ ಜೀವಾಣುಗಳ ವಿರುದ್ಧ ಹೋರಾಡಲು ಮತ್ತು ಕರುಳಿನ ಕವಚವನ್ನು ರಕ್ಷಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಇದರಲ್ಲಿರುವ ಮೆಗ್ನಿಸಿಯಮ್, ಸತು, ಸೆಲೆನಿಯಮ್ ನಂತಹ ಖನಿಜಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಅಧಿಕ ರಕ್ತದೊತ್ತಡ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗುವುದು. ಮೊಸರಿನಲ್ಲಿ ಇರುವ ಪೊಟ್ಯಾಸಿಯಮ್ ಗುಣವು ದೇಹದಲ್ಲಿರುವ ಹೆಚ್ಚಿನ ಸೋಡಿಯಂ ಪ್ರಮಾಣವನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಹೃದಯವನ್ನು ಉತ್ತೇಜಿಸುತ್ತದೆ.

ಯೋನಿ ಸೋಂಕು ತಡೆಗಟ್ಟುತ್ತದೆ
ಮೊಸರು ಸೇವನೆ ಮಹಿಳೆಯರಿಗೆ ಅತ್ಯುತ್ತಮವಾದದ್ದು. ಏಕೆಂದರೆ ಇದು ಯೀಸ್ಟ್ ಸೋಂಕಿನ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಮೊಸರು ಕಂಡುಬರುವ ಲ್ಯಾಕ್ಟೋಬಾಸಿಲ್ಲಸ್ ಅಸಿಡೋಫಿಲಸ್ ಬ್ಯಾಕ್ಟೀರಿಯಾವು ದೇಹದಲ್ಲಿ ಸೋಂಕಿನ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ ಮತ್ತು ಯೀಸ್ಟ್ ಸೋಂಕನ್ನು ಕೊಲ್ಲುತ್ತದೆ.

ಮೂಳೆಯನ್ನು ಬಲಪಡಿಸುತ್ತದೆ
ಒಂದು ಕಪ್ ಮೊಸರು 275 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ದಿನನಿತ್ಯವೂ ಬೆಳಿಗ್ಗೆ ಮೊಸರನ್ನು ಸೇವಿಸುವುದರಿಂದ ಮೂಳೆಗಳು ಬಲವಾಗಿರುತ್ತವೆ. ಇದು ಮೂಳೆಗಳ ಬಲವನ್ನು ಮಾತ್ರವಲ್ಲದೇ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ
ಮೊಸರು ಸೂಕ್ಷ್ಮಾಣು ಜೀವಿಗಳನ್ನು ತೆಗೆದುಹಾಕುತ್ತದೆ. ಇದು ಕರುಳಿನ ಸೋಂಕಿಗೆ ಕಾರಣವಾಗಬಹುದು. ಹೊಟ್ಟೆ ಉಬ್ಬರ ಅಥವಾ ಅತಿಸಾರದಿಂದ ಬಳಲುತಿದ್ದರೆ ಮುಂಜಾನೆ ಮೊಸರು ಸೇವಿಸುವುದರಿಂದ ನಿಯಂತ್ರಿಸಬಹುದು.

ಸ್ನಾಯುಗಳಿಗೆ ಉತ್ತಮವಾದದು
ನಿಯಮಿತವಾದ ಮೊಸರು ಸೇವನೆಯಿಂದ ಸ್ನಾಯುಗಳ ಆರೋಗ್ಯವನ್ನು ಕಾಪಾಡಬಹುದು. ಸ್ನಾಯುಗಳಿಗೆ ಅಗತ್ಯವಾದ ಅಮೈನೋ ಆಮ್ಲವನ್ನು ಮೊಸರು ಒದಗಿಸುತ್ತದೆ. ವ್ಯಾಯಾಮದ ನಂತರ ಅಥವಾ ಅತಿಯಾದ ದೇಹ ದಂಡನೆಯ ನಂತರ ಮೊಸರನ್ನು ಸೇವಿಸಬೇಕು. ಕಡಿಮೆಯಾದ ದೇಹದ ಶಕ್ತಿಯನ್ನು ಮೊಸರು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅಲರ್ಜಿಯನ್ನು ತಡೆಯಬಹುದು
ಗರ್ಭಿಣಿಯರು 8ನೇ ತಿಂಗಳಲ್ಲಿ ಇರುವಾಗ ಹೆಚ್ಚು ಮೊಸರನ್ನು ಸೇವಿಸಬೇಕು. ತಾಯಿ ಹೆಚ್ಚು ಮೊಸರನ್ನು ಸೇವಿಸುವುದರಿಂದ ಮಗುವಿಗೆ ಉಂಟಾಗುವ ಅಲರ್ಜಿಯ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಕೆಲವು ಅಧ್ಯಯನದ ಪ್ರಕಾರ ಮಕ್ಕಳಿಗೆ ಬರುವ ಸೋಂಕು ಮತ್ತು ಅಲರ್ಜಿಗಳನ್ನು ಮೊಸರು ನಿವಾರಿಸುತ್ತದೆ ಅಥವಾ ಉಂಟಾಗುವ ಅಪಾಯವನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಹೇಳಲಾಗಿದೆ.

ತೂಕ ನಷ್ಟವನ್ನು ಉತ್ತೇಜಿಸುತ್ತದೆ
ಮೊಸರಿನಲ್ಲಿ ಕ್ಯಾಲೋರಿ ಪ್ರಮಾಣ ಕಡಿಮೆ ಇರುತ್ತದೆ. ನಿಮ್ಮ ತೂಕವನ್ನು ನಿಯಂತ್ರಣದಲ್ಲಿ ಇಡಲು ಮೊಸರು ಸಹಾಯ ಮಾಡುತ್ತದೆ. ನಿಮ್ಮ ಸೊಂಟದ ಸುತ್ತ ಇರುವ ಕೊಬ್ಬು ಹಾರ್ಮೋನ್ ಕಾರ್ಟಿಸೋಲ್ ಅನ್ನು ಉತ್ಪತ್ತಿ ಮಾಡುತ್ತದೆ. ಅದು ದೇಹವನ್ನು ಹೆಚ್ಚು ಹೊಟ್ಟೆ ಕೊಬ್ಬು ಸಂಗ್ರಹಿಸುವುದಕ್ಕೆ ಕಾರಣವಾಗುವುದು. ನೀವು ಮೊಸರು ಸೇವಿಸಿದಾಗ, ಕ್ಯಾಲ್ಸಿಯಂ ಕಡಿಮೆ ಕೊರ್ಟಿಸೊಲ್ ಅನ್ನು ತಳ್ಳಲು ನಿಮ್ಮ ಕೊಬ್ಬಿನ ಕೋಶಗಳನ್ನು ಸೂಚಿಸುತ್ತದೆ. ಇದರಿಂದಾಗಿ ನೀವು ತೂಕವನ್ನು ಕಳೆದುಕೊಳ್ಳಬಹುದು.

ಒಸಡುಗಳನ್ನು ರಕ್ಷಿಸುತ್ತದೆ
ಮೊಸರು ಸೇವನೆಯಿಂದ ದಂತಕವಚಗಳನ್ನು ಗಟ್ಟಿ ಗೊಳಿಸುತ್ತದೆ. ಅನಗತ್ಯ ಆಹಾರ ಪದಾರ್ಥಗಳಿಂದ ಒಸಡು ಹಾಗೂ ಹಲ್ಲುಗಳ ಕುಳಿಗೆ ಕಾರಣವಾಗುವ ಲ್ಯಾಕ್ಟಿಕ್ ಆಮ್ಲವನ್ನು ಮೊಸರು ನಿಯಂತ್ರಿಸುತ್ತದೆ.

ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆಲ್ಲಾ ರಾಮಬಾಣ
ಮೊಸರಿನ ಸೇವನೆಯಿಂದ ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಗಳಿಂದ ರಕ್ಷಣೆ ದೊರಕುತ್ತದೆ. ಅಲ್ಲದೇ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಈ ಮೂಲಕ ಹೃದಯದ ಬಡಿತದ ವೇಗ ಹಾಗೂ ಒತ್ತಡವನ್ನೂ ನಿಯಂತ್ರಿಸುತ್ತದೆ.

ಮೂಲವ್ಯಾಧಿಯ ಸಮಸ್ಯೆಗೆ
ಮೂಲವ್ಯಾಧಿಯ ಕಾರಣ ಆಸನಭಾಗದಲ್ಲಿ ಗಂಟುಗಳಾಗಿರುವ (hemorrhoids) ವ್ಯಕ್ತಿಗಳಿಗೆ ಮೊಸರನ್ನು ನೀರಾಗಿಸಿ ಇದರಲ್ಲಿ ಕೆಲವು ನೆನೆಸಿಟ್ಟ ಪಿಸ್ತಾಗಳನ್ನು ಅರೆದು ಕುಡಿಯುವ ಮೂಲಕ ನೋವಿನಿಂದ ಮುಕ್ತಿ ದೊರಕುತ್ತದೆ.

ಸೂಕ್ತ ಮೊಸರಿನ ಆಯ್ಕೆ
* ಇಂದು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಮೊಸರುಗಳು ಮತ್ತು ಇತರ ಆಹಾರಗಳೊಡನೆ ಸಂಯೋಜನೆಗೊಂಡ ವೈವಿಧ್ಯ ಕಾಣಸಿಗುತ್ತವೆ. ಇವುಗಳಲ್ಲಿ ತೂಕ ಹೆಚ್ಚಿಸುವುದು ಯಾವುವು? ತೂಕ ಇಳಿಸಲು ನೆರವಾಗುವುವು ಯಾವುವು ಎಂಬುದನ್ನು ಹೇಳುವವರು ಯಾರೂ ಇಲ್ಲದೇ ಸರಿಯಾದ ಉತ್ಪನ್ನದ ಆಯ್ಕೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹಾಗಾದರೆ ಕೆಳಗಿನ ಮಾಹಿತಿ ನಿಮ್ಮ ನೆರವಿಗೆ ಬರಬಲ್ಲುದು.
*ಮಾರುಕಟ್ಟೆಯಲ್ಲಿ ಒಂದು ವೇಳೆ ಗ್ರೀಕ್ ಕರ್ಡ್ ಎಂಬ ಉತ್ಪನ್ನ ಲಭ್ಯವಿದ್ದರೆ ತೂಕ ಇಳಿಸಲು ಇದು ಅತ್ಯುತ್ತಮವಾದ ಆಯ್ಕೆಯಾಗಿದೆ. ಇದರಲ್ಲಿ ಕೇವಲ ತೊಂಬತ್ತು ಕ್ಯಾಲೋರಿಗಳು ಹಾಗೂ ಕೇವಲ ಏಳು ಗ್ರಾಂ ಸಕ್ಕರೆ ಇದ್ದು ಆರೋಗ್ಯಕ್ಕೆ ಪೂರಕ ಹಾಗೂ ತೂಕ ಇಳಿಸಲು ಸಮರ್ಪಕವಾಗಿದೆ.

ಸೂಕ್ತ ಮೊಸರಿನ ಆಯ್ಕೆ
* ಇದರ ಹೊರತಾಗಿ ಬೇರೆ ಮೊಸರು ಲಭ್ಯವಿದ್ದರೆ ಇದರಲ್ಲಿ ಮುದ್ರಿತವಾಗಿರುವ ಕ್ಯಾಲೋರಿಗಳ ಸಂಖ್ಯೆಯನ್ನು ಗಮನಿಸಿ. ಇದು 130ಕ್ಕಿಂತ ಕಡಿಮೆ ಇದ್ದು ಪ್ರತಿ ಬಾರಿಯ ಸೇವನೆಯ ಪ್ರಮಾಣದಲ್ಲಿ ಒಂದು ಗ್ರಾಂಗಿತಲೂ ಕಡಿಮೆ ಕೊಬ್ಬು ಇದ್ದರೆ ಇವು ಸಹಾ ತೂಕ ಇಳಿಕೆಗೆ ಸಹಕಾರಿಯಾಗಿರುತ್ತವೆ.
* ಇಂದು ಮೊಸರಿನ ಪ್ಯಾಕ್ ಮೇಲೆ ದೊಡ್ಡದಾಗಿ ಕಾಣುವಂತೆ 'ಲೋ ಫ್ಯಾಟ್' ಹಾಗೂ 'ಲೋ ಕ್ಯಾಲೋರಿ' ಎಂದು ಬರೆದಿರುವ ಉತ್ಪನ್ನಗಳೂ ಲಭ್ಯವಿವೆ. ಈ ಕವಚಗಳು ಅತ್ಯಂತ ಆಕರ್ಷಕವಾಗಿದ್ದು ಈ ಹೆಸರುಗಳಿಂದ ತೂಕ ಏರಲಾರದು ಎಂದುಕೊಂಡಿದ್ದರೆ ನಿಮಗೆ ಭ್ರಮನಿರಸನವಾಗುವುದು ಖಚಿತ. ಏಕೆಂದರೆ ಇವುಗಳಲ್ಲಿ ಕೊಬ್ಬು ಕಡಿಮೆ ಮಾಡಿದ್ದರೂ ಸಕ್ಕರೆ ಮಾತ್ರ ಇತರ ಮೊಸರಿಗಿಂತಲೂ ಹೆಚ್ಚೇ ಇರುತ್ತದೆ. ಅಷ್ಟೇ ಅಲ್ಲ, ಕೊಬ್ಬು ರಹಿತವಾಗಿಸಿದಾಗ ಕೊಂಚ ಕಹಿಯಾಗುವ ಕಾರಣ ಕೃತಕ ರುಚಿಕಾರಕಗಳನ್ನೂ ಸೇರಿಸಿರಲಾಗಿರುತ್ತದೆ. ಇವುಗಳಲ್ಲಿ ಮೆಕ್ಕೆ ಜೋಳದ ಸಿರಪ್ ಪ್ರಮುಖವಾಗಿದೆ. ಇದರಲ್ಲಿ ಫ್ರುಕ್ಟೋಸ್ ಎಂಬ ಸಕ್ಕರೆ ಅತಿ ಹೆಚ್ಚಾಗಿದ್ದು ಕೊಬ್ಬು ಸಂಗ್ರಹಕ್ಕೆ ನೇರವಾಗಿ ಕಾರಣವಾಗಿದೆ. ಹಾಗಾಗಿ ಲೋ ಫ್ಯಾಟ್ ಇದ್ದರೂ ಹೈ ಶುಗರ್ ಎಂದು ಎಲ್ಲೂ ಬರೆದಿಲ್ಲದ ಕಾರಣ ಈ ಮೊಸರನ್ನು ಆಯ್ಕೆ ಮಾಡದಿರುವುದೇ
ಉಚಿತ.

ಸಲಹೆ
*ಪ್ರತಿಬಾರಿ ತಾಜಾ ಮೊಸರನ್ನೇ ಕೊಳ್ಳಿ. ಮಾರುಕಟ್ಟೆಯಿಂದ ತಂದಿದ್ದರೂ, ಮನೆಯಲ್ಲಿಯೇ ಹೆಪ್ಪು ಹಾಕಿದ್ದರೂ ಮೊಸರನ್ನು ತುಂಬಿಸಿದ ಜಾಡಿ ಗಾಳಿಯಾಡದಂತೆ ಮುಚ್ಚಳ ಮುಚ್ಚುವಂತಿರಬೇಕು ಹಾಗೂ ತಡಮಾಡದೇ ಫ್ರಿಜ್ಜಿನಲ್ಲಿರಿಸಬೇಕು. *ಯಾವುದೇ ಕಾರಣಕ್ಕೂ ಮೊಸರನ್ನು ಫ್ರೀಜರ್ ನಲ್ಲಿ ಇಡಬಾರದು ಹಾಗೂ ಹೀಗೆ ಇರಿಸಿದ್ದನ್ನೂ ಸೇವಿಸಬಾರದು.
*ಪ್ರತಿಬಾರಿ ಮೊಸರನ್ನು ಸೇವಿಸುವ ಕೊಂಚ ಹೊತ್ತಿಗೂ ಮುನ್ನ ಫ್ರಿಜ್ಜಿನಿಂದ ಹೊರತೆಗೆದು ಸಾಮಾನ್ಯ ತಾಪಮಾನಕ್ಕೆ ಬಂದ ಬಳಿಕವೇ ಸೇವಿಸಬೇಕು.



Click it and Unblock the Notifications











