ಪಾದಗಳಲ್ಲಿ ಕಂಡು ಬರುವ ಬದಲಾವಣೆಗಳು, ಭಯಾನಕ ರೋಗದ ಲಕ್ಷಣಗಳಾಗಿರಬಹುದು!

ವ್ಯಕ್ತಿಯೊಬ್ಬನ ಶರೀರ ನೋಡಿ ಆತ ಎಷ್ಟು ಆರೋಗ್ಯವಾಗಿದ್ದಾನೆ ಎಂಬುದನ್ನು ಅಳೆಯಬಹುದು ಎಂಬ ಮಾತಿದೆ. ಆದರೆ ನಿಮ್ಮ ಪಾದಗಳು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ಬಹಿರಂಗಪಡಿಸುತ್ತವೆ ಎಂಬ ವಿಷಯ ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ. ಪಾದಗಳಿಂದ ಹೇಗೆ ಆರೋಗ್ಯ ತಿಳಿಯುತ್ತದೆ ಎಂದು ಆಶ್ಚರ್ಯವಾದರೂ ಇದು ಸತ್ಯ.

Signs of Disease Your Feet Can Reveal

ಪಾದಗಳ ಒಣಗುವಿಕೆ, ಬಿರುಕು ಬಿಡುವುದು ಮತ್ತು ಮರಗಟ್ಟುವಿಕೆ ಉಂಟಾದಾಗ ಅವು ಯಾವ ಲಕ್ಷಣಗಳನ್ನು ತೋರ್ಪಡಿಸುತ್ತಿವೆ ಎಂಬ ಬಗ್ಗೆ ನೀವು ಗಮನಿಸುವುದೊಳಿತು. ಪಾದಗಳಲ್ಲಿ ಕಂಡು ಬರುವ ಬದಲಾವಣೆಗಳು ಯಾವ ರೀತಿಯ ರೋಗ ಲಕ್ಷಣಗಳನ್ನು ಸೂಚಿಸುತ್ತವೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಪಾದಗಳು ತಿಳಿಸುವ ರೋಗ ಲಕ್ಷಣಗಳು:

ಬಿರುಕು ಬಿಟ್ಟ ಹಾಗೂ ಒಣಗಿದ ಪಾದ

ಬಿರುಕು ಬಿಟ್ಟ ಹಾಗೂ ಒಣಗಿದ ಪಾದ

ನಿಮ್ಮ ಪಾದಗಳು ಬಿರುಕು ಬಿಡುತ್ತಿದ್ದು, ಒಣಗುತ್ತಿದ್ದರೆ ಒಂದೊಮ್ಮೆ ಮಾಯಿಶ್ಚರೈಸರ್ ಹಾಗೂ ಕ್ರೀಂ ಹಚ್ಚಿದರೂ ಗುಣವಾಗದಿದ್ದಲ್ಲಿ ಅದು ಥೈರಾಯ್ಡ ರೋಗದ ಲಕ್ಷಣವಾಗಿರಬಹುದು. ಥೈರಾಯ್ಡ ಸಮಸ್ಯೆ ಇದ್ದಾಗ ಸಾಮಾನ್ಯವಾಗಿ ಚರ್ಮ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನಿಮ್ಮ ಪಾದಗಳು ಒಣಗಿ, ಬಿರುಕು ಬಿಡಲಾರಂಭಿಸಿದರೆ ತಕ್ಷಣ ತಜ್ಞ ವೈದ್ಯರನ್ನು ಭೇಟಿಯಾಗುವುದು ಸೂಕ್ತ.

ಪಾದದ ಮೇಲಿನ ಕೂದಲು ಕಡಿಮೆಯಾಗುವಿಕೆ

ಪಾದದ ಮೇಲಿನ ಕೂದಲು ಕಡಿಮೆಯಾಗುವಿಕೆ

ಕೆಲ ಬಾರಿ ಪಾದದ ಮೇಲ್ಭಾಗದಲ್ಲಿ ಬೆಳೆಯುವ ಕೂದಲು ಕಡಿಮೆಯಾಗಲಾರಂಭಿಸುತ್ತವೆ. ಇದು ಬಾಹ್ಯ ಅಪಧಮನಿಯ ಕಾಯಿಲೆ (peripheral arterial disease) ಯನ್ನು ಸೂಚಿಸುತ್ತದೆ. ಇದರಿಂದ ಸರಾಗ ರಕ್ತ ಪರಿಚಲನೆಗೆ ಅಡ್ಡಿ ಉಂಟಾಗುತ್ತದೆ. ಈ ಕಾಯಿಲೆಯಿಂದ ಪಾದ ಹಾಗೂ ಹಿಮ್ಮಡಿಗಳಲ್ಲಿ ಕೂದಲುಗಳ ಬೆಳವಣಿಗೆ ಕಡಿಮೆಯಾಗುತ್ತದೆ. ಜೊತೆಗೆ ಕಾಲುಬೆರಳುಗಳು ನೀಲಿಗಟ್ಟಿದಂತೆ ಕಾಣಿಸಲಾರಂಭಿಸುತ್ತವೆ.

ಕಾಲು ಬೆರಳುಗಳಲ್ಲಿ ನೋವು

ಕಾಲು ಬೆರಳುಗಳಲ್ಲಿ ನೋವು

ಪಾದ ಹಾಗೂ ಕಾಲು ಬೆರಳುಗಳಲ್ಲಿ ನೋವು ಕಾಣಿಸಿಕೊಂಡರೆ ಅದು ಸಂಧಿವಾತದ ಲಕ್ಷಣವಾಗಿರಬಹುದು. ಇದು ಸಾಮಾನ್ಯವಾಗಿ ಹೆಬ್ಬೆರೆಳಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹೀಗಾದಾಗ ರಕ್ತದಲ್ಲಿನ ಹೆಚ್ಚುವರಿ ಪ್ರಮಾಣದ ಯೂರಿಕ್ ಆಸಿಡ್ ಅನ್ನು ಹೊರಹಾಕಬೇಕಾಗುತ್ತದೆ. ಅಂದರೆ ಯೂರಿಕ್ ಆಸಿಡ್ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು.

ಪಾದಗಳ ಮೇಲೆ ಹುಣ್ಣಾಗುವುದು

ಪಾದಗಳ ಮೇಲೆ ಹುಣ್ಣಾಗುವುದು

ಪಾದಗಳ ಮೇಲೆ ಹುಣ್ಣಾಗಿ ಬಹುಕಾಲ ವಾಸಿಯಾಗದಿದ್ದರೆ ಅದು ಡಯಾಬಿಟೀಸ್‌ನ ಲಕ್ಷಣವಾಗಿರಬಹುದು. ರಕ್ತದಲ್ಲಿನ ಅನಿಯಂತ್ರಿತ ಗ್ಲುಕೋಸ್ ಮಟ್ಟದಿಂದ ರಕ್ತನಾಳಗಳು ಹಾನಿಗೀಡಾಗುತ್ತವೆ ಹಾಗೂ ಇದರಿಂದ ಸರಾಗ ರಕ್ತ ಪರಿಚಲನೆಗೆ ಅಡ್ಡಿ ಉಂಟಾಗುತ್ತದೆ. ಡಯಾಬಿಟೀಸ್ ಇರುವವರಿಗೆ ಮೊದಲು ಈ ರೋಗದ ಲಕ್ಷಣಗಳು ಪಾದಗಳಲ್ಲಿಯೇ ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ. ಪಾದಗಳು ಆಗಾಗ ಮರಗಟ್ಟುವಿಕೆ ಹಾಗೂ ಜುಮ್ಮೆನ್ನಿಸುವುದು ಸಹ ಡಯಾಬಿಟೀಸ್ ಲಕ್ಷಣಗಳಾಗಿವೆ.

ಉಗುರುಗಳ ಕೆಳಗೆ ಕೆಂಪು ಸಣ್ಣ ಸಾಲುಗಳು

ಉಗುರುಗಳ ಕೆಳಗೆ ಕೆಂಪು ಸಣ್ಣ ಸಾಲುಗಳು

ಕೈ ಬೆರಳು ಅಥವಾ ಕಾಲು ಬೆರಳಿನ ಉಗುರುಗಳ ಕೆಳಗೆ ಸಣ್ಣ ಗಾತ್ರದ ಕೆಂಪು ಸಾಲುಗಳು ಕಂಡು ಬಂದಲ್ಲಿ ಅದು ಹೃದಯ ಸೋಂಕಿನ ಲಕ್ಷಣವಾಗಿರಬಹುದು. ಈ ಸಾಲುಗಳು ಚೂರಾದ ರಕ್ತ ನಾಳಗಳಾಗಿದ್ದು, ಇದನ್ನು ವೈದ್ಯಕೀಯ ಭಾಷೆಯಲ್ಲಿ ಸ್ಪ್ಲಿಂಟರ್ ಹೆಮರೇಜಸ್ ಎಂದು ಕರೆಯುತ್ತಾರೆ. ಹೃದಯದ ಒಳಭಾಗದಲ್ಲಿ ಎಂಡೊಕಾರ್ಡಿಟಿಸ್ ಎಂಬ ಸೋಂಕಿನಿಂದ ಈ ರೀತಿಯ ಕೆಂಪು ಸಾಲುಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಒಂದೊಮ್ಮೆ ಈ ರೀತಿಯ ಸಾಲುಗಳು ಕಂಡುಬಂದಲ್ಲಿ ವೈದ್ಯರನ್ನು ಭೇಟಿಯಾಗಿ ರಕ್ತದೊತ್ತಡ ಹಾಗೂ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು.

ಬೆರಳುಗಳು ಕೂಡಿಕೊಳ್ಳುವಿಕೆ

ಬೆರಳುಗಳು ಕೂಡಿಕೊಳ್ಳುವಿಕೆ

ಕೈ ಹಾಗೂ ಕಾಲುಗಳಲ್ಲಿನ ಬೆರಳುಗಳ ಕೂಡಿಕೊಳ್ಳುವಿಕೆ ಕಂಡು ಬಂದಲ್ಲಿ ಅದು ಶ್ವಾಸಕೋಶದ ಕ್ಯಾನ್ಸರ್, ಹೃದಯ ಬೇನೆ ಅಥವಾ ಗಂಭೀರ ಸ್ವರೂಪದ ಶ್ವಾಸಕೋಶದ ಸೋಂಕಿನ ಲಕ್ಷಣವಾಗಿರಬಹುದು. ಸಣ್ಣ ಅಪಧಮನಿಗಳಲ್ಲಿ ಹೆಚ್ಚಿನ ಪ್ರಮಾಣದ ರಕ್ತ ಪರಿಚಲನೆಯಿಂದ ಕಾಲು ಹಾಗೂ ಕೈ ಬೆರಳುಗಳು ಕೂಡಿಕೊಳ್ಳುವಿಕೆ ಉಂಟಾಗುತ್ತದೆ. ಇದರಿಂದ ಬೆರಳುಗಳು ಊದಿಕೊಳ್ಳಲಾರಂಭಿಸುತ್ತವೆ.

ಉಗುರುಗಳಲ್ಲಿ ಸಣ್ಣ ರಂಧ್ರ ಅಥವಾ ಸೀಳು

ಉಗುರುಗಳಲ್ಲಿ ಸಣ್ಣ ರಂಧ್ರ ಅಥವಾ ಸೀಳು

ಕಾಲ್ಬೆರಳುಗಳ ಉಗುರುಗಳಲ್ಲಿ ಸಣ್ಣ ರಂಧ್ರಗಳು ಅಥವಾ ಸೀಳುಗಳು ಕಾಣಿಸಿಕೊಂಡಲ್ಲಿ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇದು ಸೋರಿಯಾಸಿಸ್‌ನ ಲಕ್ಷಣವಾಗಿರಬಹುದು. ಬೆರಳುಗಳ ಸೋರಿಯಾಸಿಸ್ ಇರುವವರು ಚರ್ಮದ ಸೋರಿಯಾಸಿಸ್‌ಗೂ ತುತ್ತಾಗುವ ಸಾಧ್ಯತೆಗಳಿರುತ್ತವೆ. ಹಿಂದೆ ಯಾವತ್ತೂ ನಿಮಗೆ ಸೋರಿಯಾಸಿಸ್ ಬಂದಿಲ್ಲದಿರುವಾಗ, ಉಗುರುಗಳಲ್ಲಿ ರಂಧ್ರ ಹಾಗೂ ಸೀಳು ಕಂಡು ಬಂದಲ್ಲಿ ತಕ್ಷಣ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಿ.

ಉಗುರುಗಳಲ್ಲಿ ತಗ್ಗು ಬೀಳುವಿಕೆ (spooned nails)

ಉಗುರುಗಳಲ್ಲಿ ತಗ್ಗು ಬೀಳುವಿಕೆ (spooned nails)

ಉಗುರುಗಳಲ್ಲಿ ತಗ್ಗು ಬಿದ್ದು ಅವು ಚಮಚೆಯಾಕಾರದಲ್ಲಿ ಕಾಣಿಸುವಿಕೆಯನ್ನು ಸ್ಪೂನಡ್ ನೇಲ್ಸ್ ಎನ್ನಲಾಗುತ್ತದೆ. ಇದು ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ಕೆಲವೊಮ್ಮೆ ಇದು ಅತಿಯಾದ ಪ್ರಮಾಣದ ಕಬ್ಬಿಣದ ಅಂಶ (ಹೆಮೊಕ್ರೊಮ್ಯಾಟೊಸಿಸ್) ಇರುವಿಕೆಯನ್ನು ಸಹ ಸೂಚಿಸುತ್ತದೆ. ಇದು ಬೆರಳು ಹಾಗೂ ಉಗುರುಗಳಿಗೆ ರಕ್ತ ಪರಿಚಲನೆಯನ್ನು ಅಡ್ಡಿ ಪಡಿಸುವ 'ರೇನಾಡ್ಸ್' ರೋಗದ ಲಕ್ಷಣವಾಗಿರಬಹುದು. ಕೆಲವೊಮ್ಮೆ ನವಜಾತ ಶಿಶುಗಳಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿದರೂ ನಂತರದ ದಿನಗಳಲ್ಲಿ ತಾನೇ ವಾಸಿಯಾಗುತ್ತದೆ. ಆದರೂ ಈ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.

English summary

Signs of Disease Your Feet Can Reveal

You must have heard that your body tells a lot about your health. But the fact that your feet can tell even more about your health condition, may startle you. From dry and flaky feet to frequent numbness, you must give attention to what your feet indicates. Here we have mentioned a few signs your feet can show about some diseases that might have affected you.
X
Desktop Bottom Promotion