Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಿಳೆಯರು ಸೆಕ್ಸ್ ಬಳಿಕ ಮೂತ್ರ ವಿಸರ್ಜಿಸಿದರೆ ಮಕ್ಕಳಾಗುವುದೇ?
ಗರ್ಭಧರಿಸಬೇಕೆಂದು ನಿರ್ಧರಿಸಿರುವ ಮಹಿಳೆಯರು ಕೆಲವೊಂದು ಹಳೆಯ ತಂತ್ರಗಳ ಮೊರೆ ಹೋಗುವುದು ಸಹಜ. ಹಳೆಯ ತಂತ್ರಗಳಲ್ಲಿ ಕೆಲವು ಕೆಲಸ ಮಾಡಿದರೂ ಇನ್ನು ಕೆಲವು ಕೇವಲ ಸಲಹೆಗಷ್ಟೇ ಸೀಮಿತ. ಇದರಲ್ಲಿ ಪ್ರಮುಖವಾಗಿ ಲೈಂಗಿಕ ಕ್ರಿಯೆ ಬಳಿಕ ಮಹಿಳೆಯರು ಮೂತ್ರ ಮಾಡಿದರೆ ಗರ್ಭ ನಿಲ್ಲುವುದಿಲ್ಲವೆಂದು ಹೇಳಲಾಗುತ್ತದೆ. ಲೈಂಗಿಕ ಕ್ರಿಯೆ ಬಳಿಕ ವೀರ್ಯವು ಒಳಗಡೆ ಹೋದರೆ ಅದನ್ನು ಹೊರಬರದಂತೆ ತಡೆಯುವುದು ಮುಖ್ಯವಾಗಿರುವುದು ಎನ್ನಲಾಗುತ್ತದೆ. ಗರ್ಭಧರಿಸಲು ಮುಂದಾಗಿದ್ದರೆ ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದಾಗ ಏನಾಗುವುದು?
ಪ್ಲ್ಯಾನಡ್ ಪೇರೆಂಟ್ ಹುಡ್ ಪ್ರಕಾರ ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆಗೆ ತೆರಳುವುದು ಮತ್ತು ಗರ್ಭಧಾರಣೆಗೆ ಯಾವುದೇ ಸಂಬಂಧವಿಲ್ಲವೆಂದು ಅಧ್ಯಯನಗಳು ಹೇಳುತ್ತದೆ. ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೂ ನೀವು ಗರ್ಭಿಣಿಯಾಗಬಹುದು. ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಗರ್ಭ ಧರಿಸಲು ಸಮಸ್ಯೆಯಿಲ್ಲ ಮತ್ತು ನೀವು ಮೂತ್ರ ವಿಸರ್ಜನೆ ಮಾಡದೇ ಇದ್ದರೆ ಆಗ ಯುಟಿಐ ಅಪಾಯವು ಹೆಚ್ಚಾಗುವುದು ಎಂದು ಒಬಿ-ಜಿವೈಎನ್ ನ ಡಾ. ಲೇಹ್ ಮಿಲ್ಹೈಸರ್ ತಿಳಿಸಿದ್ದಾರೆ. ಒಂದು ಸಲ ವೀರ್ಯವು ಮಹಿಳೆಯ ಯೋನಿಯೊಳಗೆ ಹೋದರೆ ಅದನ್ನು ವಾಪಸ್ ತರಲು ಸಾಧ್ಯವಿಲ್ಲ. ಮೂತ್ರವಿಸರ್ಜನೆಯಿಂದ ವೀರ್ಯವು ಹೊರಬರುವುದಿಲ್ಲ ಮತ್ತು ಗರ್ಭಧಾರಣೆ ಸಾಧ್ಯತೆ ಕಡಿಮೆ ಮಾಡಲ್ಲ.

ವೀರ್ಯ ಪ್ರಯಾಣಕ್ಕೆ ನೆರವು ಬೇಕೇ?
ವೀರ್ಯ ಪ್ರಯಾಣಕ್ಕೆ ನೆರವು ಬೇಕೇ? ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರ ನೀಡಬಹುದು. ಪುರುಷರು ಹೊರಹಾಕುವಂತಹ ಎಲ್ಲಾ ವೀರ್ಯವು ಗುರಿಮುಟ್ಟಲು ಯಶಸ್ವಿಯಾಗಲ್ಲ. `ದ ಮೆಕಾನಿಸಮ್ ಆಫ್ ಸ್ಪ್ರೇಮ್ ಮೊಟೊಲಿಟಿ'ಎನ್ನುವ ಅಧ್ಯಯನದಲ್ಲಿ ಡಾ. ಚಾರ್ಲ್ಸ್ ಲಿಂಡೆಮ್ಯಾನ್ ಅವರು ಕಂಡುಕೊಂಡಿರುವ ಪ್ರಕಾರ ಪುರುಷರು ಒಮ್ಮೆ ಸ್ಖಲನ ಮಾಡಿದಾಗ 180 ಮಿಲಿಯನ್ ವೀರ್ಯವು ಹೊರಹೋಗುವುದು. ಅಂಡೋತ್ಪತ್ತಿ ಮಾಡುವ ಜಾಗಕ್ಕೆ ತಲುಪಲು ಈ ವೀರ್ಯಕ್ಕೆ ಸುಮಾರು ಐದರಿಂದ 68 ನಿಮಿಷ ಬೇಕಾಗುವುದು. ಇದರಿಂದಾಗಿ ಮಹಿಳೆಯು 180 ಮಿಲಿಯನ್ ಮಕ್ಕಳಿಗೆ ಜನ್ಮ ನೀಡುವುದಿಲ್ಲ. ಯಾಕೆಂದರೆ ಪ್ರಯಾಣವು ಸುದೀರ್ಘವಾಗಿರುವ ಕಾರಣ ಎಲ್ಲಾ ವೀರ್ಯವು ಗುರಿಮುಟ್ಟಲು ಆಗಲ್ಲ.

ವೀರ್ಯವು ಕೆಲವು ದಿನಗಳ ಕಾಲ ಉಳಿದುಕೊಳ್ಳುವುದು
ಮಹಿಳೆಯ ಸಂತಾನೋತ್ಪತ್ತಿ ಭಾಗದಲ್ಲಿ ವೀರ್ಯವು ಕೆಲವು ದಿನಗಳ ಕಾಲ ಉಳಿದುಕೊಳ್ಳುವುದು ಎಂದು ಮಾಯೊ ಕ್ಲಿನಿಕ್ ಹೇಳುತ್ತದೆ. ನೇರವಾಗಿ ಮಲಗುವುದರಿಂದ ವೀರ್ಯಗಳಿಗೆ ತಮ್ಮ ಜಾಗಕ್ಕೆ ಹೋಗಲು ಸಾಧ್ಯವಾಗುವುದು ಎಂದು ಹೆಚ್ಚಿನ ಮಹಿಳೆಯರು ತಿಳಿದುಕೊಂಡಿದ್ದಾರೆ. ವೀರ್ಯವು ತುಂಬಾ ಪರಿಣಾಮಕಾರಿಯಾಗಿ ಸಾಗಲು ಮೂತ್ರವಿಸರ್ಜನೆ ಮಾಡಬಾರದು ಎಂದು ನಂಬಿ ಕುಳಿತುಕೊಂಡ ಮಹಿಳೆಯರಲ್ಲಿ ನಾನು ಒಬ್ಬಳು. ಪರಿಣಾಮದ ಬಗ್ಗೆ ಹಲವಾರು ಪ್ರಶ್ನೆಗಳಿವೆ ಮತ್ತು ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಬಾರದು ಎನ್ನುವುದು ತಮಾಷೆಯ ವಿಷಯ.

ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ
ಮಿಲ್ಹೈಸರ್ ಪ್ರಕಾರ ನಿಮ್ಮ ದೇಹದ ಕರೆಗೆ ಓಗೊಡುವುದು ಅತೀ ಅಗತ್ಯ. ಲೈಂಗಿಕ ಕ್ರಿಯೆ ಬಳಿಕ ನಿಮಗೆ ಮೂತ್ರ ವಿಸರ್ಜನೆ ಮಾಡಬೇಕೆಂದು ಅನಿಸಿದರೆ ಖಂಡಿತವಾಗಿಯೂ ಮಾಡಿ. ಗರ್ಭಧರಿಸುವ ವೇಳೆ ನಿಮ್ಮ ಆರೋಗ್ಯವು ಅತೀ ಅಗತ್ಯ ಮತ್ತು ಯುಟಿಐ ನಿಮ್ಮ ಮೇಲೆ ಪರಿಣಾಮ ಬೀರಬಹುದು. ನೀವು ಸ್ವಲ್ಪ ಸಮಯ ಕಾದು, ಸಂಗಾತಿ ಜತೆಗೆ ಮುದ್ದಾಡಿದರೆ ಆಗ ಕೊನೆಯ ವೀರ್ಯವು ಅಂಡಾಣುವಿನ ಬಳಿಗೆ ಹೋಗುವ ಸಾಧ್ಯತೆಯು ಹೆಚ್ಚಾಗಿರುವುದು. ನೀವು ಗರ್ಭಧರಿಸಲು ಬಯಸಿದ್ದರೆ ಆಗ ನೀವು ಕೆಲವು ನಿಮಿಷಗಳ ತನಕ ಹಾಸಿಗೆಯಲ್ಲಿ ಮಲಗಿರುವುದು ಒಳ್ಳೆಯದು.

ಮೂತ್ರವಿಸರ್ಜನೆ ಮಾಡಬಹುದು
ಗುರುತ್ವಾಕರ್ಷಣೆ ಮತ್ತು ಗರ್ಭಧಾರಣೆಗೆ ಯಾವುದೇ ರೀತಿಯ ಸಂಬಂಧವಿಲ್ಲ. ಇದರಿಂದ ನೀವು ಎದ್ದು ಹೋಗಿ ಮೂತ್ರವಿಸರ್ಜನೆ ಮಾಡಿಬರಬಹುದು. ಲಕ್ಷಾಂತರ ವೀರ್ಯಗಳು ನಿಮ್ಮ ಅಂಡಾಣುವನ್ನು ಹುಡುಕುತ್ತಿರುವುದು. ಆದರೆ ನಿಮಗೆ ಗರ್ಭಧರಿಸಬೇಕೆಂದಿದ್ದರೆ ಆಗ ನೀವು ಮೂತ್ರ ವಿಸರ್ಜನೆಗೆ ಹೋಗದೆ ಇರಬಹುದು.

ಮೂತ್ರವಿಸರ್ಜನೆ ಮಾಡಬಹುದು ಗರ್ಭಧರಿಸಲು ಬಯಸಿದ್ದರೆ ಲೈಂಗಿಕ ಕ್ರಿಯೆ ಬಳಿಕ ಮೂತ್ರವಿಸರ್ಜನೆ ಮಾಡಬಹುದೇ?
ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಹಲವಾರು ರೀತಿಯ ಲೈಂಗಿಕ ರೋಗಗಳನ್ನು ತಡೆಗಟ್ಟಬಹುದು ಎಂದು ನಿಮಗೆ ವೈದ್ಯರು, ಸ್ನೇಹಿತರು ಮತ್ತು ತಾಯಿ ಹೇಳಿರಬಹುದು. ಗರ್ಭಧರಿಸಲು ಮುಂದಾಗಿದ್ದರೆ ಆಗ ಏನು ಮಾಡಬೇಕು? ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಆಗ ಯೋನಿಯಿಂದ ವೀರ್ಯವು ಹೊರಹೋಗುವುದು ಮತ್ತು ಗರ್ಭಕಂಠದೊಳಗೆ ಇವುಗಳು ಹೋಗುವಂತಹ ಸಾಧ್ಯತೆಯು ತುಂಬಾ ಕಡಿಮೆ ಇರುವುದು.

ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದೇ
ಒಳ್ಳೆಯ ಸುದ್ದಿ: ಲೈಂಗಿಕ ಕ್ರಿಯೆ ಬಳಿಕ ಮೂತ್ರವಿಸರ್ಜನೆ ಮಾಡುವುದರಿಂದ ನಿಮ್ಮ ಗರ್ಭಧಾರಣೆಗೆ ಯಾವುದೇ ಪ್ರಭಾವ ಬೀರಲ್ಲ. ಯುಟಿಐ ಇದ್ದರೆ ಆಗ ನೀವು ಮೂತ್ರವಿಸರ್ಜನೆ ಮಾಡಿ. ಇಲ್ಲವಾದರೆ, ನೀವು ಸಂಗಾತಿ ಜತೆ ಮುದ್ದಾಡಿಕೊಂಡು ಇರಿ. ಎರಡು ವಿಧದಿಂದಲೂ ನೀವು ಗರ್ಭಧರಿಸುವ ಸಾಧ್ಯತೆಯು ಇರುವುದು.

ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದೇ
ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಏನಾಗುತ್ತದೆ ಎಂದು ತಿಳಿಯುವ. ಪುರುಷನೊಬ್ಬ ಸ್ಖಲನ ಮಾಡಿದಾಗ ಸುಮಾರು 20-400 ಮಿಲಿಯನ್ ವೀರ್ಯವು ಹೊರಬರುವುದು. ಸ್ಖಲನವಾದ ತಕ್ಷಣ ಶೇ.65ರಷ್ಟು ವೀರ್ಯವು ಗರ್ಭಕಂಠದ ಕಡೆಗೆ ಪ್ರಯಾಣ ಬೆಳೆಸಲು ಆರಂಭಿಸುತ್ತದೆ. ಸ್ವಲ್ಪ ವೀರ್ಯವು ನಿಮ್ಮ ಯೋನಿಯ ಹಿಂಭಾಗದಲ್ಲಿ ಉಳಿದುಕೊಳ್ಳಬಹುದು ಮತ್ತು ಕೆಲವು ನಿಮಿಷ ಅಥವಾ ಗಂಟೆಗಳ ಬಳಿಕ ಬೀಳಬಹುದು. ವೀರ್ಯವಲ್ಲದ ವಸ್ತುಗಳಾದ ಪ್ರೋಟೀನ್ ಮತ್ತು ವಿಟಮಿನ್ ಗಳು ಯೋನಿಯಿಂದ ತಕ್ಷಣ ಹೊರಗೆ ಬರುವುದು.

ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದೇ
ನೀವು ಮೂತ್ರವಿಸರ್ಜನೆಗೆ ಹೋಗುವ ಸಮಯದಲ್ಲಿ ವೇಗವಾಗಿ ಸಾಗಿರುವಂತಹ ವೀರ್ಯವು ಗರ್ಭಕಂಠವನ್ನು ದಾಟಿರುವುದು. ಉಳಿದವು ನೀವು ತಕ್ಷಣ ಎದ್ದರೆ ಅಥವಾ ಎದ್ದುಕೊಂಡು ಮೂತ್ರವಿಸರ್ಜನೆಗೆ ಹೋದಾಗ ಅವುಗಳು ತಮ್ಮ ಗುರಿ ಮುಟ್ಟಲು ಸಾಧ್ಯವಾಗಿರಲ್ಲ.



Click it and Unblock the Notifications
