Latest Updates
-
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ
ಕದ್ದುಮುಚ್ಚಿ ಬ್ಲೂ ಫಿಲಂ ನೋಡುತ್ತಿದ್ದೀರಾ? ಹಾಗಾದರೆ ಇಂದೇ ನಿಲ್ಲಿಸಿ! ಯಾಕೆ ಗೊತ್ತೇ?
ನೀಲಿ ಚಿತ್ರಗಳು ಲೈಂಗಿಕತೆ ಬಗ್ಗೆ ನೀಡುವ ಶಿಕ್ಷಣಕ್ಕಿಂತ ಹೆಚ್ಚಾಗಿ ಅದು ಚಟವಾಗಿ ಪರಿಣಮಿಸುತ್ತದೆ ಎನ್ನುವುದು ಹಲವಾರು ಅಧ್ಯಯನಗಳಿಂದಲೂ ತಿಳಿದು ಬಂದಿದೆ. ಇದು ಕೇವಲ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುವುದಲ್ಲದೆ, ವ್ಯಕ್ತಿಯೊಬ್ಬನ ಮನಸ್ಸಿನಲ್ಲಿ ತಪ್ಪಿತಸ್ಥ ಭಾವನೆ, ಅವಮಾನ ಅಥವಾ ಹತಾಶೆ ಉಂಟು ಮಾಡುವುದು. ಅಂತಿಮವಾಗಿ ಇದರಿಂದಾಗಿ ಆ ವ್ಯಕ್ತಿ ಖಿನ್ನತೆಗೆ ಒಳಗಾಗುತ್ತಾನೆ ಮತ್ತು ಆತನಲ್ಲಿನ ಸ್ವಾಭಿಮಾನ ಕಡಿಮೆಯಾಗುವುದು. ಇದು ಆತನ ಲೈಂಗಿಕ ಜೀವನ ಮತ್ತು ಲೈಂಗಿಕ ಸಂಬಂಧದ ಮೇಲೆ ಪರಿಣಾಮ ಬೀರುವುದು.
ಸಾಮಾನ್ಯವಾಗಿ ಪ್ರಾಯಕ್ಕೆ ಬಂದ ಪ್ರತಿಯೊಂದು ಜೀವಿಯೂ ಲೈಂಗಿಕಾಸಕ್ತಿಯನ್ನು ಹೊಂದಿರುತ್ತದೆ. ಇದಕ್ಕೆ ಪ್ರಾಣಿ, ಪಕ್ಷಿ, ಮನುಷ್ಯರು ಎನ್ನುವ ಭೇದವಿಲ್ಲ. ಪ್ರತಿಯೊಂದು ಜೀವಿಗೂ ಇದೊಂದು ಸ್ವಾಭಾವಿಕ ಕ್ರಿಯೆ. ಆದರೆ ಈ ವಿಚಾರವಾಗಿಯೇ ಅಮಾನವೀಯವಾಗಿ ವರ್ತಿಸುವುದು ಉಚಿತವಲ್ಲ. ಲೈಂಗಿಕ ಆಸಕ್ತಿ ವ್ಯಕ್ತಿಯ ಅತ್ಯಂತ ವೈಯಕ್ತಿಕ ವಿಚಾರ. ಇದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚು ಪವಿತ್ರ ಸ್ಥಾನವನ್ನು ನೀಡಲಾಗಿದೆ. ಗೌಪ್ಯವಾಗಿ ಕಾಪಾಡಿಕೊಳ್ಳಬೇಕಾದ ಈ ವಿಚಾರವನ್ನು ಇಂದು ಅನೇಕ ಮಾಧ್ಯಮಗಳು ಪ್ರಸಿದ್ಧಿಪಡೆಯಲು ಉಪಯೋಗಿಸಿಕೊಳ್ಳುತ್ತಿವೆ.
ಅಶ್ಲೀಲ ಚಿತ್ರ ಮತ್ತು ಅಶ್ಲೀಲ ವೀಡಿಯೋಗಳನ್ನು ನೋಡುವುದರಿಂದ ಅನೇಕ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆರಂಭದಲ್ಲಿ ಕುತೂಹಲಕ್ಕೆ ನೋಡುವ ಕೇಳುವ ಅಶ್ಲೀಲ ವಿಚಾರಗಳು ಬರಬರುತ್ತಾ ವ್ಯಸನವಾಗಿ ತಿರುಗುತ್ತದೆ. ಇದು ವ್ಯಕ್ತಿಯ ಭಾವೋದ್ರೇಕಕ್ಕೆ ಕಾರಣವಾಗುವುದು. ನಿಧಾನವಾಗಿ ಅಪರಾಧಿ ಕೃತ್ಯಗಳನ್ನು ಎಸಗಲು ಪ್ರೋತ್ಸಾಹ ನೀಡುತ್ತದೆ. ಅದರಲ್ಲೂ ಹದಿ ಹರೆಯದವರಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುವುದು.
ಅನೇಕರಿಗೆ ಚಹಾ, ಕಾಫೀ, ಮದ್ಯ, ಸಿಗರೇಟ್‍ನಂತಹ ಚಟಗಳಂತೆ ಅಶ್ಲೀಲ ಚಿತ್ರಗಳ ವೀಕ್ಷಣೆಯೂ ಒಂದು ಚಟವಾಗಿ ಪರಿರ್ವನೆಗೊಂಡಿದೆ. ಹಾಗಾಗಿ ಈ ಬಗೆಯ ವೀಡಿಯೋಗಳನ್ನು ನೋಡುವುದು ಜನರು ನಿಲ್ಲಿಸಬೇಕು. ಸಾಮಾಜಿಕ ತಾಣಗಳಲ್ಲೂ ಇದರ ಬಗ್ಗೆ ಚರ್ಚೆ ಹಾಗೂ ವೀಡಿಯೋಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು.
ಅದರಲ್ಲೂ ಈ ಲೈಂಗಿಕ ಚಟದಿಂದಾಗಿ ಅಪಾಯಕಾರಿ ಲೈಂಗಿಕ ಮತ್ತು ವೃತ್ತಿಪರ ನಡವಳಿಕೆ ಕಂಡುಬರುವುದು ಎಂದು ಅಧ್ಯಯನಗಳು ಹೇಳಿವೆ. ಶೃಂಗಾರಸಾಹಿತ್ಯದ ಶಕ್ತಿಯನ್ನು ನಂಬುತ್ತೀರೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಆದರೆ ಅಮೆರಿಕಾದ ಮನಶಾಸ್ತ್ರಜ್ಞರ ಸಂಸ್ಥೆ ಪ್ರಕಾರ ಮಹಿಳೆಯರಲ್ಲಿ ನೀಲಿ ಚಿತ್ರ ನೋಡುವ ಸಂಖ್ಯೆಯು ಶೇ.30ರಷ್ಟು ಮತ್ತು ಪುರುಷರಲ್ಲಿ ಇದು ಶೇ.50ಕ್ಕಿಂತಲೂ ಹೆಚ್ಚಾಗಿದೆಯಂತೆ. ಕೆಲವರಿಗೆ ಇದು ಶಿಕ್ಷಣ ನೀಡಿದರೆ, ಇನ್ನು ಕೆಲವರಿಗೆ ಇದು ಲೈಂಗಿಕ ಮನೋರಂಜನೆಯಾಗಿದೆ. ಆದರೆ ಈ ಮನೋರಂಜನೆಯು ಚಟವಾಗಿ ಬದಲಾದರೆ ಅದು ನಿಮ್ಮನ್ನು ದೊಡ್ಡ ಸಮಸ್ಯೆ ಗೀಡು ಮಾಡಲಿದೆ. ನೀಲಿಚಿತ್ರದ ಆಸಕ್ತಿಯಿಂದ ಹಿಡಿದು ಅದು ಚಟವಾಗುವ ಲಕ್ಷಣಗಳು ಯಾವುದು ಎಂದು ತಿಳಿಯಿರಿ. ನೀಲಿಚಿತ್ರಗಳ ಅಡ್ಡಪರಿಣಾಮಗಳ ಐದು ಸಾಧ್ಯತೆಗಳ ಬಗ್ಗೆ ನಿಮಗಿಲ್ಲಿ ತಿಳಿಸಲಿದ್ದೇವೆ, ಮುಂದೆ ಓದಿ...

ಹೆಚ್ಚಾಗಿ ಪುರುಷರಿಗೆಯೇ ಇದು ಕಬ್ಬಿಣದ ಕಡಲೆಯಾಗಲಿದೆ!!
ಅಶ್ಲೀಲ ಚಿತ್ರಗಳನ್ನು ನೋಡಿದಾಗ ನಿಮಿರುವಿಕೆಯು ಪುರುಷರಿಗೊಂದು ಸಾಮಾನ್ಯ ಪ್ರಕ್ರಿಯೆ. ಪದೇ ಪದೇ ಅಶ್ಲೀಲ ಚಿತ್ರಗಳನ್ನು ನೋಡುವುದು ಮತ್ತು ಹಸ್ತಮೈಥುನ ಮಾಡಿಕೊಳ್ಳುವುದರಿಂದ ವ್ಯಕ್ತಿಯ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ಜೊತೆಗೆ ಲೈಂಗಿಕ ಆಸಕ್ತಿಯನ್ನು ಕುಗ್ಗಿಸುತ್ತಾ ಬರುವುದು. ಲೈಂಗಿಕ ಜೀವನವೂ ಅಸ್ವಸ್ಥಗೊಳ್ಳುವುದು. ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳನ್ನು ನೋಡುವುದು ನಿಲ್ಲಿಸಿದಾಗ ಈ ತೊಂದರೆಗಳಿಂದ ಪಾರಾಗಬಹುದು.

ಅತೃಪ್ತರಾಗುತ್ತಾರೆ
ಅಶ್ಲೀಲ ಮತ್ತು ಹಸ್ತ ಮೈಥುನ ವ್ಯಸನಿಗಳಿಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಇವರಿಗೆ ಅಶ್ಲೀಲತೆಯನ್ನು ನೋಡದೆ ಇರಲು ಸಾಧ್ಯವಾಗದೇ ಇರುವುದರಿಂದ ಅತೃಪ್ತ ಮನೋಭಾವವನ್ನು ಹೊಂದಿರುತ್ತಾರೆ. ಈ ವ್ಯಸನದಿಂದ ದೂರವಾದ ಕ್ಷಣದಿಂದ ಅವರ ಆತ್ಮವಿಶ್ವಾಸ ಬೆಳೆಯುತ್ತಾ ಹೋಗುತ್ತದೆ.

ಸ್ವಯಂ ನಿಯಂತ್ರಣ ಹೆಚ್ಚುವುದು
ಅಶ್ಲೀಲತೆ ಸೇರಿದಂತೆ ಉಳಿದೆಲ್ಲಾ ಚಟಗಳಿಂದಲೂ ದೂರವಿದ್ದರೆ, ಯಾವುದೇ ರೀತಿಯ ಪ್ರಚೋದನೆ ಉಂಟಾದರೂ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬಹುದಾದ ಶಕ್ತಿ ಇರುತ್ತದೆ. ಸೌಂದರ್ಯ ಹಾಗೂ ಅದರಾಚೆ ಇರುವ ಎಲ್ಲಾ ಬಗೆಯ ಸಂಬಂಧ ಹಾಗೂ ಭಾವನೆಗಳಿಗೆ ಗೌರವ ನೀಡುವ ವ್ಯಕ್ತಿತ್ವ ನಮ್ಮದಾಗುತ್ತದೆ.

ಸಂಬಂಧದ ಸಮಸ್ಯೆ ಮತ್ತು ಕೆಟ್ಟ ಲೈಂಗಿಕ ಜೀವನ
ನೀಲಿಚಿತ್ರಗಳನ್ನು ಅತಿಯಾಗಿ ನೋಡಿಕೊಂಡರೆ ಆಗ ಅದರಿಂದ ನಿಮ್ಮ ವೈವಾಹಿಕ ಜೀವನದ ಲೈಂಗಿಕ ಸಂಬಂಧದ ಮೇಲೆ ಪರಿಣಾಂ ಬೀರುವುದು. ಹಸ್ತಮೈಥುನ ಮಾಡಿಕೊಳ್ಳುವ ಸಲುವಾಗಿ ಅತಿಯಾಗಿ ನೀಲಿಚಿತ್ರಗಳನ್ನು ನೋಡಿದರೆ ಆಗ ಲೈಂಗಿಕವಾಗಿ ಸಂಗಾತಿಯಿಂದ ನೀವು ದೂರವಾಗಬಹುದು. ನೀಲಿಚಿತ್ರದಲ್ಲಿ ಇರುವಂತೆ ಮಹಿಳೆ ಕೂಡ ಮಾಡಬೇಕೆಂದು ನೀವು ಬಯಸಬಹುದು. ಕಾಲೇಜಿನ ಹುಡುಗರು ಅತಿಯಾಗಿ ನೀಲಿಚಿತ್ರ ನೋಡುತ್ತಾರೆಂದು ಭಾವಿಸಲಾಗಿದ್ದ ಕಾಲೇಜಿನ ಹುಡುಗಿಯರನ್ನು ಸಂದರ್ಶನ ಮಾಡಿದಾಗ ಈ ವಿಷಯವು ಬೆಳಕಿಗೆ ಬಂದಿದೆ. ಇದರಿಂದ ಮಹಿಳೆಯರು ಕೂಡ ಸ್ವಾಭಿಮಾನ ಕಳೆದುಕೊಳ್ಳುವರು ಮತ್ತು ಅವರ ಲೈಂಗಿಕ ತೃಪ್ತಿಯು ತುಂಬಾ ಕಡಿಮೆಯಿರುವುದು.

ಅಪಾಯಕಾರಿ ನಡವಳಿಕೆ
ನೀಲಿಚಿತ್ರದ ಚಟ ಅಂಟಿಸಿಕೊಂಡಿರುವವರು ಸಾಮಾಜಿಕವಾಗಿ ಅಪಾಯಕಾರಿಯಾಗುವಂತಹ ಸಾಧ್ಯತೆಗಳು ಇವೆ. ಈ ಚಟದ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲವೆಂದಾದರೆ ಅದು ಅಪಾಯಕಾರಿ ನಡವಳಿಕೆಯಲ್ಲಿ ಬದಲಾಗಬಹುದು. ಇದರಿಂದ ಅವರ ಶಿಕ್ಷಣ ಅಥವಾ ಕೆಲಸವು ಅಪಾಯದಲ್ಲಿ ಸಿಲುಕಬಹುದು. ಕೆಲವರು ಈ ಚಟದಿಂದ ಕೆಲಸ ಕಳೆದುಕೊಂಡು, ಆರ್ಥಿಕವಾಗಿಯೂ ಸಂಕಷ್ಟಕ್ಕೆ ಸಿಲುಕುವರು. ಇವರು ತಮ್ಮ ಚಟ ತೀರಿಸಿಕೊಳ್ಳಲು ವೃತ್ತಿ ಮತ್ತು ಜವಾಬ್ದಾರಿಯನ್ನು ಅಪಾಯಕ್ಕೆ ಸಿಲುಕಿಸುವರು.

ಲೈಂಗಿಕ ಚಟ
ನೀಲಿಚಿತ್ರದ ಚಟವೆನ್ನುವುದು ಕೆಲವರಿಗೆ ಕೇವಲ ಒಂದು ಭಾಗವಾಗಿರುವುದು. ಯಾಕೆಂದರೆ ಇದರಲ್ಲಿ ಪ್ರಮುಖವಾಗಿ ಇವರು ಲೈಂಗಿಕ ಚಟಕ್ಕೆ ಒಳಗಾಗಿರುವರು. ಇಂತಹ ಸಂದರ್ಭದಲ್ಲಿ ಲೈಂಗಿಕವಾಗಿ ಬರುವಂತಹ ರೋಗಗಳು ಹಾಗೂ ಸೋಂಕಿಗೆ ಒಳಗಾಗುವಂತಹ ಸಾಧ್ಯತೆಯು ಇರುವುದು. ಮುರಿದು ಬಿದ್ದ ಮದುವೆ, ಕಚೇರಿಯಲ್ಲಿ ಗುರಿ ಸಾಧಿಸಲು ಆಗದೆ ಇರುವುದು ಅಥವಾ ಜೀವನದ ಕೆಲವೊಂದು ನಕಾರಾತ್ಮಕ ಅಂಶಗಳು ಇವರನ್ನು ಈ ರೀತಿ ಮಾಡಬಹುದು. ಲೈಂಗಿಕ ಚಟವನ್ನು ಒಳಗೊಂಡಿರುವಂತವರಿಗೆ ತಮ್ಮ ಚಟ ತೀರಿಸಿಕೊಳ್ಳಲು ನೀಲಿಚಿತ್ರವೆನ್ನುವುದು ಸುಲಭ ಮಾಧ್ಯಮವಾಗಿದೆ.

ನಕಾರಾತ್ಮಕ ಭಾವನೆಗಳು ಮೂಡಬಹುದು!
ನೀಲಿಚಿತ್ರ ನೋಡುವುದಕ್ಕೆ ಮೊದಲು ಮತ್ತು ಬಳಿಕ ಒಂದು ರೀತಿಯ ಕುತೂಹಲವಿರುವುದು. ದುರಾದೃಷ್ಟವೆಂದರೆ ಇದನ್ನು ನೋಡಿಯಾದ ಬಳಿಕ ನಿಮ್ಮಲ್ಲಿ ನಕಾರಾತ್ಮಕ ಭಾವನೆಗಳು ಮೂಡುವುದು. ಇದರಿಂದಾಗಿ ನಿಮ್ಮಲ್ಲಿ ಅಪರಾಧಿ ಭಾವನೆ ಅಥವಾ ಅವಮಾನ ಕಾಡಲು ಆರಂಭವಾಗುವುದು. ಇದರಿಂದಾಗಿ ಖಿನ್ನತೆಯಲ್ಲಿ ಬೀಳುವ ಸಾಧ್ಯತೆಯಿದೆ. ಇದರಿಂದ ವ್ಯಕ್ತಿಯ ಸ್ವಾಭಿಮಾನದ ಮೇಲೆ ಸಂಪೂರ್ಣ ಪರಿಣಾಮ ಬೀರುವುದು.

ಖಿನ್ನತೆಯೂ ಬರಬಹುದು!
ನೀಲಿಚಿತ್ರದ ಚಟವು ತುಂಬಾ ಆಳವಾಗಿರುವ, ಖಿನ್ನತೆಯಂತಹ ಅಡ್ಡಪರಿಣಾಮ ಬೀರುವುದು ಮತ್ತು ಇದಕ್ಕಾಗಿ ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯ. ಅಧ್ಯಯನವೊಂದರ ಪ್ರಕಾರ ನೀಲಿ ಚಿತ್ರಗಳ ಚಟ ಅಂಟಿಸಿಕೊಂಡಿರುವವರು ಇತರರಿಗಿಂತ ಹೆಚ್ಚು ಖಿನ್ನತೆಗೆ ಒಳಗಾಗುವರು ಮತ್ತು ಮಾನಸಿಕ ಆರೋಗ್ಯವು ತುಂಬಾ ಕೆಟ್ಟದಾಗಿರುವುದು ಮಾತ್ರವಲ್ಲದೆ ಜೀವನವು ಕಳಪೆಯಾಗಿರುವುದು. ಖಿನ್ನತೆ ಮತ್ತು ನೀಲಿಚಿತ್ರದ ಚಟದ ಬಗ್ಗೆ ಚಿಕಿತ್ಸೆ ಪಡೆದುಕೊಳ್ಳದೆ ಇದ್ದರೆ ಆಗ ದೊಡ್ಡ ಮಟ್ಟದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಪುರುಷರ ಮ್ಯಾಗಜಿನ್ ನಲ್ಲಿ ಓದುವವರ ರಿಸ್ಕ್ ಮೇಲೆ ಎಂದು ಬರೆಯಲಾಗಿರುತ್ತದೆ. ಇದನ್ನು ಕಡೆಗಣಿಸಿ ನೀಲಿಚಿತ್ರ ನೋಡುವುದು ಒತ್ತಡ ಅಥವಾ ಏಕಾಂಗಿತನದ ಲಕ್ಷಣವಾಗಿದೆ. ಇದರಿಂದ ವ್ಯಕ್ತಿಯು ಯಾವತ್ತೂ ಸಂತೋಷವಾಗಿರಲು ಸಾಧ್ಯವಿಲ್ಲ.

ಅಷ್ಟಕ್ಕ ನೀಲಿ ಚಿತ್ರ ಬರಲು ಕಾರಣವೇನು?
ಭಾರತದಲ್ಲಿ ಕದ್ದು ಮುಚ್ಚಿ ನೋಡುವ, ಕುಡಿಯುವ, ಜಗಿಯುವ ವಸ್ತುಗಳಿಗೆ ಅಡ್ಡ ಹೆಸರುಗಳಿಂದ ಕರೆಯಲಾಗುತ್ತದೆ. ಮುಂಬೈಯಲ್ಲಿ ಕಂಭ ಎಂದು ಯಾವುದನ್ನು ಕರೆಯುತ್ತಾರೆ ಗೊತ್ತೇ? ಮದ್ಯದ ಬಾಟಲಿಯನ್ನು. ಇದೇ ರೀತಿ ಪಿಸ್ತೂಲಿಗೆ ಘೋಡಾ, ಲಕ್ಷ ರೂಪಾಯಿಗೆ ಪೇಟಿ, ಕೋಟಿ ರೂಪಾಯಿಗೆ ಖೋಕಾ ಮೊದಲಾದ ಹೆಸರುಗಳಿವೆ. ಅಂತೆಯೇ ಕನ್ನಡದಲ್ಲಿ ಮದ್ಯಕ್ಕೆ 'ಎಣ್ಣೆ' ಎಂದೂ ಕರೆಯುತ್ತಾರೆ. ಎಲ್ಲೆಡೆ ಇಂದು ಸಾರ್ವತ್ರಿಕವಾಗಿರುವ ಅಶ್ಲೀಲ ಚಿತ್ರಗಳಿಗೆ ನೀಲಿ ಚಿತ್ರಗಳು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ವಯಸ್ಕರ ಚಿತ್ರದ ಪೋಸ್ಟರುಗಳನ್ನು ಅಂಟಿಸುವಾಗ ಹಿನ್ನೆಲೆ ನೀಲಿಯಾಗಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಅಂದರೆ ಈ ಪೋಸ್ಟರು ನೋಡಿದ ಕೂಡಲೇ ಜನರಿಗೆ ಇದು ವಯಸ್ಕರ ಚಿತ್ರ ಎಂದು ಗೊತ್ತಾಗುತ್ತಿತ್ತು. ಇಂದು ನೀಲಿ ಚಿತ್ರಗಳೂ ದೊಡ್ಡ ಬಜೆಟ್ಟಿನಲ್ಲಿ ಚಿತ್ರೀಕರಣಗೊಳ್ಳುತ್ತಿವೆ. ಆದರೆ ಹಿಂದಿನ ದಿನಗಳಲ್ಲಿ ಕಡಿಮೆ ಬಜೆಟ್ಟಿನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದವು. ಹೆಚ್ಚಾಗಿ ಈ ಚಿತ್ರಗಳನ್ನು ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಿ ಕಡಿಮೆ ಬಜೆಟ್ಟಿನಲ್ಲಿ ಬಣ್ಣಗೊಳಿಸುವ ಯತ್ನಗಳಾಗುತ್ತಿದ್ದವು.



Click it and Unblock the Notifications











