Latest Updates
-
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ?
ವೈದ್ಯರ ಪ್ರಕಾರ, ನಿಯಮಿತ ಹಸ್ತಮೈಥುನ ಒಳ್ಳೆಯದಂತೆ! ಅದಕ್ಕೆ ಕಾರಣಗಳು ಇಲ್ಲಿದೆ ನೋಡಿ
ಹಸ್ತಮೈಥುನದ ಬಗ್ಗೆ ಮಾತನಾಡುವ ಜನರು ತುಂಬಾ ಕಡಿಮೆ. ಇದನ್ನು ಹೆಚ್ಚಾಗಿ ಗಂಡಸರೇ ಮಾಡಿಕೊಳ್ಳುವರು ಎನ್ನುವ ನಂಬಿಕೆ ಇದೆ. ಮಹಿಳೆಯರು ಇಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಹೇಳಲಾಗುತ್ತದೆ. ಆದರೆ ಮಹಿಳೆಯು ತನ್ನ ನಾಚಿಕೆ ಬಿಟ್ಟು ಧೈರ್ಯದಿಂದ ಹಸ್ತಮೈಥುನ ಮಾಡಿಕೊಳ್ಳುವರು. ಇದರ ಬಗ್ಗೆ ಮುಜುಗರ ಪಟ್ಟುಕೊಳ್ಳಬೇಕಾದ ಅಥವಾ ಅವಮಾನ ಪಡಬೇಕಾದ ಅಗತ್ಯವಿಲ್ಲ.

ಯಾಕೆಂದರೆ ನಿಮ್ಮ ದೇಹಕ್ಕೆ ಸುಖವನ್ನು ನೀಡುತ್ತಲಿದ್ದೀರಿ. ವೈದ್ಯಕೀಯವಾಗಿ ನೋಡಿದರೂ ಹಸ್ತಮೈಥುನ ಮಾಡಬಹುದು ಎಂದು ಹೇಳಲಾಗುತ್ತದೆ. ಈ ಲೇಖನದಲ್ಲಿ ನಾವು ಹೇಳುತ್ತಿರುವುದು ವೈದ್ಯರು ಕೂಡ ಹಸ್ತಮೈಥುನ ಮಾಡಿಕೊಳ್ಳಿ ಎಂದು ಹೇಳುವರು. ಯಾಕೆಂದರೆ ಹಸ್ತಮೈಥುನವು ತುಂಬಾ ಆರೋಗ್ಯಕಾರಿ. ಇದರಿಂದ ಸಿಗುವಂತಹ ಐದು ಲಾಭಗಳ ಬಗ್ಗೆ ನಾವು ಇಲ್ಲಿ ಚರ್ಚೆ ಮಾಡಲಿದ್ದೇವೆ.

ಕ್ಯಾನ್ಸರ್ ನ್ನು ತಡೆಯುವುದು
ಹಸ್ತಮೈಥುನವು ನಿಮಗೆ ಪರಾಕಾಷ್ಠೆ ನೀಡುವುದು ಮಾತ್ರವಲ್ಲದೆ, ಇದು ಕ್ಯಾನ್ಸರ್ ನ್ನು ತಡೆಯುವುದು ಎಂದು ನಿಮಗೆ ತಿಳಿದಿದೆಯಾ? ಹೌದು ಆಸ್ಟ್ರೇಲಿಯಾದ ಅಧ್ಯಯನವೊಂದರ ಪ್ರಕಾರ ವಾರದಲ್ಲಿ ಐದಕ್ಕಿಂತ ಹೆಚ್ಚು ಸಲ ವೀರ್ಯ ಸ್ಖಲನ ಮಾಡಿಕೊಳ್ಳುವಂತಹ ವ್ಯಕ್ತಿಗಳಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ನ ಅಪಾಯವು ಗಣನೀಯವಾಗಿ ತಗ್ಗಿದೆ. ವೀರ್ಯವನ್ನು ಹೊರಹಾಕುವ ವೇಳೆ ದೇಹದಲ್ಲಿನ ವಿಷಕಾರಿ ಅಂಶಗಳು ಕೂಡ ಹೊರಹೋಗುವುದು ಎಂದು ಹೇಳಲಾಗುತ್ತದೆ.

ಪ್ರತಿರೋಧಕ ವ್ಯವಸ್ಥೆಗೆ ಒಳ್ಳೆಯದು
ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ಬಲಿಷ್ಠವಾಗಿರದೆ ಇದ್ದರೆ ಆಗ ವಿವಿಧ ರೀತಿಯ ಕಾಯಿಲೆಗಳು ದೇಹವನ್ನು ಮುತ್ತಿಕೊಳ್ಳುವುದು. ಇದರಿಂದ ಪ್ರತಿರೋಧಕ ವ್ಯವಸ್ಥೆ ಬಲಿಷ್ಠವಾಗಿರಬೇಕು. ಹಸ್ತಮೈಥುನ ಮಾಡಿಕೊಳ್ಳುವ ವೇಳೆ ಕೊರ್ಟಿಸಾಲ್ ಎನ್ನುವ ಹಾರ್ಮೋನು ದೇಹದಲ್ಲಿ ಹೆಚ್ಚಾಗುವುದು. ಇದು ದೇಹದಲ್ಲಿ ಒತ್ತಡವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಪ್ರತಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸಿ, ಬಲಪಡಿಸುವುದು.

ಮನಸ್ಥಿತಿ ಸುಧಾರಣೆ
ಸ್ಖಲನ ಮಾಡುವ ವೇಳೆ ಕೆಲವು ಒಳ್ಳೆಯ ಭಾವನೆ ನೀಡುವಂತಹ ನರರಾಸಾಯನಿಕಗಳಾಗಿರುವ ಡೊಪಮೈನ್ ಮತ್ತು ಆಕ್ಸಿಟೊಸಿನ್ ರಕ್ತದಲ್ಲಿ ಬಿಡುಗಡೆಯಾಗುವುದು. ಖಿನ್ನತೆಯಿಂದ ದೂರವಾಗಲು ನೀವು ಮಾತ್ರೆ ಸೇವನೆ ಮಾಡುವುದನ್ನು ನಿಲ್ಲಿಸಬೇಕಾದರೆ ಆಗ ನೀವು ಪರಾಕಾಷ್ಠೆ ತಲುಪಬೇಕು. ಯಾಕೆಂದರೆ ಈ ವೇಳೆ ಡೊಪಮೈನ್ ಎನ್ನುವ ರಾಸಾಯನಿಕ ಬಿಡುಗಡೆಯಾಗುವುದು. ಇದು ನಿಮ್ಮ ಮನಸ್ಥಿತಿ ಸುಧಾರಣೆ ಮಾಡುವುದು.

ನೋವು ನಿವಾರಣೆ ಮಾಡುವುದು
ಹೌದು, ಹಸ್ತಮೈಥುನವು ದೇಹದಲ್ಲಿನ ನೋವು ನಿವಾರಣೆ ಮಾಡುವುದು. ಇದು ಪ್ರತಿನಿತ್ಯ ನಿಮ್ಮನ್ನು ಕಾಡುವಂತಹ ತಲೆನೋವು ಅಥವಾ ಋತುಚಕ್ರದ ವೇಳೆ ಬರುವಂತಹ ನೋವು ಆಗಿರಬಹುದು. ಹಸ್ತಮೈಥುನವು ಈ ನೋವನ್ನು ನಿವಾರಣೆ ಮಾಡಲು ಪ್ರಮುಖ ಪಾತ್ರ ವಹಿಸುವುದು. ವೈದ್ಯಕೀಯವಾಗಿ ಹೇಳುವಂತೆ, ಮಹಿಳೆಯರು ಹಸ್ತಮೈಥುನ ಮಾಡುವಂತೆ ಗರ್ಭಕೋಶವು ಕುಗ್ಗುವುದು. ಇದರಿಂದ ಋತುಚಕ್ರದ ಸೆಳೆತವು ಶಮನವಾಗುವುದು. ಈ ಬಗ್ಗೆ ಸಂಶೋಧನೆಗಳು ನಡೆದಿರುವುದು ತುಂಬಾ ಕಡಿಮೆ. ಆದರೆ ಇದರಿಂದ ಯಾವುದೇ ಹಾನಿಯಿಲ್ಲ. ಮಾತ್ರೆಗಿಂತ ಇದು ಅತ್ಯುತ್ತಮವಾಗಿರುವುದು.

ದೇಹದ ಸಮಸ್ಯೆಗಳನ್ನು ತಿಳಿಯಲು
ಹಸ್ತಮೈಥುನ ಮಾಡಿಕೊಳ್ಳುವ ವೇಳೆ ನೀವು ದೇಹವನ್ನು ಹಿಂದೆದಿಗಿಂತಲೂ ಚೆನ್ನಾಗಿ ಅರಿಯಬಹುದಾಗಿದೆ. ನಿಮ್ಮಲ್ಲಿ ಇರುವಂತಹ ಅಸುರಕ್ಷತೆಯ ಭಾವವನ್ನು ಇದು ಹೋಗಲಾಡಿಸುವುದು ಮತ್ತು ಯಾವ ರೀತಿ ನಿಮ್ಮ ದೇಹವನ್ನು ಆರೈಕೆ ಮಾಡಿಕೊಳ್ಳಬಹುದು ಹಾಗೂ ಸಮಸ್ಯೆಗಳು ಎಲ್ಲಿದೆ ಎಂದು ತಿಳಿಯಬಹುದು.



Click it and Unblock the Notifications