ಸೆಕ್ಸ್ ವೇಳೆ ಪುರುಷರಿಗೆ ಕಾಡುವ ನೋವಿಗೆ ಕಾರಣಗಳು ಹಾಗೂ ಸರಳ ಸಲಹೆಗಳು

ಲೈಂಗಿಕ ಕ್ರಿಯೆ ಎನ್ನುವುದು ಕೇವಲ ಎರಡು ದೇಹದ ನಡುವಿನ ಸಮಾಗಮ ಮಾತ್ರವಲ್ಲ. ಇಲ್ಲಿ ಪ್ರೀತಿ, ಖುಷಿ ಕೂಡ ಇರುವುದು, ಪರಸ್ಪರ ಪ್ರೀತಿಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ಸಿಗುವಂತಹ ಆನಂದವನ್ನು ಹೇಳತೀರದು. ಕೆಲವು ಮಹಿಳೆಯರಲ್ಲಿ ಲೈಂಗಿಕ ಕ್ರಿಯೆ ವೇಳೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಪುರುಷರಲ್ಲೂ ಈ ಕ್ರಿಯೆ ವೇಳೆ ನೋವು ಕಾಣಿಸುವುದು. ಇದು ಲೈಂಗಿಕ ಕ್ರಿಯೆಯ ಪ್ರದರ್ಶನ ಮಾತ್ರವಲ್ಲದೆ, ಸುಖದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಮಾನಸಿಕವಾಗಿ ಕೆಲವೊಂದು ಸಮಸ್ಯೆಗಳು ಕಾಣಿಸಬಹುದು.

ಇದರಲ್ಲಿ ಪ್ರಮುಖವಾಗಿ ಬಂಜೆತನ. ಲೈಂಗಿಕಕ್ರಿಯೆ ವೇಳೆ ಕಾಣಿಸಿಕೊಳ್ಳುವಂತಹ ನೋವು ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಸೆಕ್ಸ್ ವೇಳೆ ನಿಮಗೆ ನೋವು ಕಾಣಿಸಿಕೊಂಡರೆ ಅದನ್ನು ಹಾಗೆ ಸಹಿಸಿಕೊಂಡು ಸುಮ್ಮನಿರುವುದಲ್ಲ. ನೋವಿಗೆ ಕೆಲವು ಕಾರಣಗಳು ಇರಬಹುದು. ಇದನ್ನು ನೀವು ತಿಳಿದುಕೊಂಡರೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ನೀಡಿರುವಂತಹ ಕಾರಣಗಳನ್ನು ತಿಳಿದುಕೊಂಡ ಬಳಿಕ ನಿಮ್ಮ ನೋವಿಗೂ ಇದೇ ಕಾರಣವೇ ಎಂದು ತಿಳಿಯಿರಿ. ನಿಮಗೆ ಇದು ಸ್ಪಷ್ಟವಾಗಿಲ್ಲವೆಂದಾದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ.

ಲೈಂಗಿಕ ರೋಗದ ಸೋಂಕು

ಲೈಂಗಿಕ ರೋಗದ ಸೋಂಕು

ಲೈಂಗಿಕವಾಗಿ ಹರಡಿರುವಂತಹ ಸೋಂಕು(ಎಸ್ ಟಿಐ) ನೋವು ಉಂಟು ಮಾಡಬಹುದು. ಹರ್ಪಿಸ್ ಮತ್ತು ಗೊನೊರಿಯಾದಿಂದ ಹೀಗೆ ಆಗಬಹುದು. ಎಸ್ ಟಿಯ ಬರುವಂತಹ ಸಾಧ್ಯತೆಯು ಇದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಬಹುದು. ಈ ಸೋಂಕಿನಿಂದಾಗಿ ಕಳಂಕವು ಬರಬಹುದು. ಇದರಿಂದ ನಿಮ್ಮ ಆರೋಗ್ಯ ಹಾಗೂ ಮುಂಜಾಗೃತೆಗಾಗಿ ಪರೀಕ್ಷಿಸಿಕೊಳ್ಳುವುದು ಅತೀ ಅಗತ್ಯ. ಸೋಂಕು ತಗುಲಿದೆ ಎಂದು ತಿಳಿದ ಕೂಡಲೇ ನೀವು ಚಿಕಿತ್ಸೆ ಪಡೆಯಿರಿ ಮತ್ತು ಈ ಸೋಂಕನ್ನು ನಿವಾರಣೆ ಮಾಡಬಹುದು.

ಮುಂದೊಗಲಿನ ಸಮಸ್ಯೆ

ಮುಂದೊಗಲಿನ ಸಮಸ್ಯೆ

ತುಂಬಾ ಬಿಗಿಯಾಗಿರುವಂತಹ ಮುಂದೊಗಲು ಅಥವಾ ಉರಿಯೂತ, ಹರಿಯುವಿಕೆಯಿಂದ ಹಾನಿಗೀಡಾಗಿರುವ ಮುಂದೊಗಲಿನಿಂದಾಗಿ ನೋವು ಕಾಣಿಸಬಹುದು. ನಿಮ್ಮ ವೈದ್ಯರನ್ನು ಭೇಟಿಯಾಗಿ ಮುಂದೊಗಲಿನ ಸಮಸ್ಯೆ ನಿವಾರಣೆ ಮಾಡಿಕೊಳ್ಳಿ.

ಶಿಶ್ನದ ವಿರೂಪತೆ

ಶಿಶ್ನದ ವಿರೂಪತೆ

ಹೈಪೊಸ್ಪಾಡಿಯಾ ಅಥವಾ ಅಂಗಾಂಶಗಳಿಗೆ ಆಗಿರುವ ಗಾಯ ಅಥವಾ ಸೋಂಕಿನಿಂದಾಗಿ ಲೈಂಗಿಕಕ್ರಿಯೆ ವೇಳೆ ನೋವು ಕಾಣಿಸಬಹುದು. ಗಡ್ಡೆಗಳ ಬೆಳವಣಿಗೆ, ಮೂತ್ರಕೋಶದಲ್ಲಿ ಕಲ್ಲು ಕೂಡ ಇದಕ್ಕೆ ಕಾರಣವಾಗಿರಬಹುದು. ಮೂತ್ರಶಾಸ್ತ್ರಜ್ಞರು ಅಥವಾ ವೈದ್ಯಕೀಯ ತಜ್ಞರಿಂದ ನೀವು ನೆರವು ಪಡೆದುಕೊಂಡು ಇದನ್ನು ಬಗೆಹರಿಸುವುದು ಒಳ್ಳೆಯದು.

ಕಾಮುಕತೆ

ಕಾಮುಕತೆ

ಲೈಂಗಿಕ ಕ್ರಿಯೆ ಇಲ್ಲದೆ ಇರುವ ವೇಳೆ ನೋವಿನಿಂದ ಕೂಡಿರುವಂತಹ ನಿಮಿರುವಿಕೆ ಉಂಟಾಗುವುದು.

ಸೋಂಕು

ಸೋಂಕು

ವಿವಿಧ ರೀತಿ ಗರ್ಭನಿರೋಧಕಗಳಲ್ಲಿ ಕಂಡುಬರುವಂತಹ ಕೆಲವೊಂದು ರೀತಿಯ ದ್ರವ ಅಥವಾ ರಾಸಾಯನಿಕಗಳಿಂದ ಪುರುಷರಿಗೆ ಅಲರ್ಜಿ ಉಂಟಾಗಬಹುದು. ಲ್ಯಾಟೆಕ್ಸ್ ಅಥವಾ ಬೇರೆ ರೀತಿಯ ಗರ್ಭನಿರೋಧಕದಿಂದ ಬಂದಿರುವಂತಹ ಅಲರ್ಜಿ ಇದಾಗಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗುವುದು ಅತೀ ಅಗತ್ಯ. ವೈದ್ಯರು ಪರೀಕ್ಷೆ ಮಾಡಿದ ಬಳಿಕ ನಿಮಗೆ ಯೋನಿ ದ್ರವದಿಂದ ಅಥವಾ ಬೇರೆ ರಾಸಾಯನಿಕದಿಂದ ಅಲರ್ಜಿ ಇದೆಯಾ ಎಂದು ತಿಳಿಯುವರು. ಸಂಗಾತಿಗೆ ಅಲರ್ಜಿ ಉಂಟುಮಾಡುತ್ತಲಿದ್ದರೆ ಆಗ ನೀವು ಇದು ತಗುಲದಂತೆ ಬೇರೆ ಯಾವುದಾದರೂ ವಿಧಾನ ಅನುಸರಿಸಬೇಕಾಗಬಹುದು.

ನಿಮ್ಮ ಸಂಬಂಧವು ಗಂಭೀರವಾಗಿಲ್ಲದಿದ್ದರೆ ಆಗ ನೀವು ಸಂಗಾತಿ ಬದಲಾಯಿಸುವ ಬಗ್ಗೆ ಯೋಚಿಸಿ. ಇದರಿಂದ ನಿಮಗೆ ಅಲರ್ಜಿ ಸಮಸ್ಯೆ ತಪ್ಪುವುದು.

ಅತಿ ಸೂಕ್ಷ್ಮತೆ

ಅತಿ ಸೂಕ್ಷ್ಮತೆ

ಪರಾಕಾಷ್ಠೆ ಮತ್ತು ಸ್ಖಲನದ ಬಳಿಕ ಶಿಶ್ನವು ಅತೀ ಸೂಕ್ಷ್ಮವಾಗಿರುವುದು. ಇದರಿಂದ ಶಿಶ್ನದಲ್ಲಿ ಲೈಂಗಿಕ ಕ್ರಿಯೆ ವೇಳೆ ನೋವು ಕಂಡುಬರಬಹುದು. ಒಂದು ದಿನದಲ್ಲಿ ನೀವು ಸಂಗಾತಿ ಜತೆಗೆ ಎಷ್ಟು ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಿರಿ ಎಂದು ನೀವು ನಿರ್ಧರಿಸಿ. ಬೇರೆ ವಿಧಾನಗಳಿಂದ ನೀವು ಸಂಗಾತಿಗೆ ಖುಷಿ ನೀಡಬಹುದು ಅಥವಾ ಪರಾಕಾಷ್ಠೆ ತಲುಪಿಸಬಹುದು.

ಮುಗಿಸುವ ಮೊದಲು

ಮುಗಿಸುವ ಮೊದಲು

ನಿಮಗೆ ಲೈಂಗಿಕಕ್ರಿಯೆ ವೇಳೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗುವುದು ತುಂಬಾ ಒಳ್ಳೆಯದು. ನೀವು ನೋವಿದ್ದರೆ ಅದನ್ನು ಸಹಿಸಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಡಿ. ಚಿಕಿತ್ಸೆ ಪಡೆಯಿರಿ. ಸೋಂಕಿನಿಂದಾಗಿ ಈ ನೋವು ಕಾಣಿಸಿಕೊಂಡಿದ್ದರೆ ಆಗ ಚಿಕಿತ್ಸೆಯು ಅತೀ ಅಗತ್ಯವಾಗಿರುವುದು. ಯಾಕೆಂದರೆ ಇದು ನಿಮ್ಮ ಸಂಗಾತಿಗೆ ಹಬ್ಬುವ ಮೊದಲು ನೀವು ಚಿಕಿತ್ಸೆ ಪಡೆಯಿರಿ. ನಿಮಗೆ ವೈದ್ಯರ ಮುಂದೆ ಹೇಳಿಕೊಳ್ಳಲು ತುಂಬಾ ಮುಜುಗರವಾಗಬಹುದು. ಆದರೆ ವೈದ್ಯರು ನಿಮ್ಮಂತೆ ಸಾವಿರಾರು ರೋಗಿಗಳ ಸಮಸ್ಯೆಯನ್ನು ತಿಳಿದುಕೊಂಡಿದ್ದಾರೆ. ಇದೇನು ಅವರಿಗೆ ಹೊಸತಲ್ಲ. ನಿಮಗೆ ತುಂಬಾ ಹತ್ತಿರವಾಗಿರುವಂತಹ ವೈದ್ಯರ ಬಳಿಗೆ ನೀವು ಹೋಗಿ ಸಮಸ್ಯೆ ಹೇಳಿಕೊಳ್ಳಬಹುದು.

ಪುರುಷರ ಶಿಶ್ನದಲ್ಲಿ ಕಾಣಿಸುವ ಖತರ್ನಾಕ್ ಕಾಯಿಲೆ ಇದು!

ಪುರುಷರ ಶಿಶ್ನದಲ್ಲಿ ಕಾಣಿಸುವ ಖತರ್ನಾಕ್ ಕಾಯಿಲೆ ಇದು!

ವಕ್ರ ಹಾಗೂ ನೋವಿನ ಉದ್ರೇಕವು ಪೆರೋನಿಯಾ ಕಾಯಿಲೆಯ ಲಕ್ಷಣವಾಗಿದೆ. ಈ ಕಾಯಿಲೆಯಲ್ಲಿ ಶಿಶ್ನದ ಒಳಗಡೆ ತಂತು ಗಾಯದ ಅಂಗಾಂಶಗಳು ಬೆಳವಣಿಗೆಯಾಗುವುದು. ಕೆಲವು ಪುರುಷರಲ್ಲಿ ಈ ಕಾಯಿಲೆಯು ತುಂಬಾ ಚಿಂತೆ ಉಂಟು ಮಾಡುವುದು. ಯಾಕೆಂದರೆ ಉದ್ರೇಕದ ವೇಳೆ ಅತಿಯಾದ ನೋವು ಹಾಗೂ ವಕ್ರತೆ ಕಾಣಿಸುವುದು. ಈ ಕಾಯಿಲೆಯಿಂದಾಗಿ ಲೈಂಗಿಕ ಕ್ರಿಯೆಯು ತುಂಬಾ ಕಠಿಣವಾಗಿ ಪುರುಷರಲ್ಲಿ ಆತಂಕ ಮತ್ತು ಒತ್ತಡ ನಿರ್ಮಾಣವಾಗಬಹುದು. ತಂತುವಿನ ಪದರ ನಿರ್ಮಾಣದಿಂದಾಗಿ ಶಿಶ್ನದಲ್ಲಿ ರಕ್ತಸ್ರಾವವಾಗಬಹುದು. ಕೆಲವೊಂದು ಸಂದರ್ಭದಲ್ಲಿ ಇದು ಅನುವಂಶೀಯವಾಗಿಯು ಬರಬಹುದು.

ಪೆರೋನಿ ಕಾಯಿಲೆಯ ಕೆಲವೊಂದು ಲಕ್ಷಣಗಳು ಹಾಗೂ ಚಿಹ್ನೆಗಳು

ಪೆರೋನಿ ಕಾಯಿಲೆಯ ಕೆಲವೊಂದು ಲಕ್ಷಣಗಳು ಹಾಗೂ ಚಿಹ್ನೆಗಳು

ಈ ಕಾಯಿಲೆಯ ಲಕ್ಷಣಗಳು ಮತ್ತು ಚಿಹ್ನೆಗಳು ಹಠಾತ್ ಆಗಿ ಅಥವಾ ನಿಧಾನವಾಗಿ ಕಾಣಿಸಿಕೊಳ್ಳಬಹುದು. ಕೆಲವೊಂದು ಲಕ್ಷಣಗಳು ಮತ್ತು ಚಿಹ್ನೆಗಳು ಈ ಕೆಳಗಿನಂತಿವೆ.

ಶಿಶ್ನದಲ್ಲಿ ವಕ್ರತೆ

ಶಿಶ್ನದಲ್ಲಿ ವಕ್ರತೆ

ಶಿಶ್ನವು ಒಂದು ಕಡೆಗೆ ವಾಲಿರಬಹುದು ಅಥವಾ ಕೆಳಗಡೆ ಅಥವಾ ಮೇಲ್ಗಡೆ ವಕ್ರವಾಗಿರಬಹುದು. ಶಿಶ್ನವು ನಿಮಿರಿದಾಗ ಅದು ಗಾಜಿನ ನೋಟವನ್ನು ಹೊಂದಿರಬಹುದು.

ನಿಮಿರುವಿಕೆಯಲ್ಲಿ ಸಮಸ್ಯೆ

ನಿಮಿರುವಿಕೆಯಲ್ಲಿ ಸಮಸ್ಯೆ

ಈ ಕಾಯಿಲೆಯಿಂದಾಗಿ ನಿಮಿರುವಿಕೆಯಲ್ಲಿ ಸಮಸ್ಯೆ ಕಾಣಿಸಬಹುದು.

ಗಾಯಗೊಂಡ ಅಂಗಾಂಶ

ಗಾಯಗೊಂಡ ಅಂಗಾಂಶ

ಶಿಶ್ನದ ಚರ್ಮದ ಒಳಗೊಂಡ ಗಾಯಗೊಂಡಿರುವ ಅಂಗಾಂಶವು ಕಂಡುಬರಬಹುದು. ಇದು ಗಡಸು ಅಂಗಾಂಶ ಅಥವಾ ಗಡ್ಡೆಯಂತಿರಬಹುದು.

ನಿಮಿರುವಿಕೆ ಇಲ್ಲದೆ ಅಥವಾ ಇರುವಾಗ ನೋವು ಕಂಡುಬರಬಹುದು

ನಿಮಿರುವಿಕೆ ಇಲ್ಲದೆ ಅಥವಾ ಇರುವಾಗ ನೋವು ಕಂಡುಬರಬಹುದು

ಶಿಶ್ನವು ಸಣ್ಣದಾಗುವಂತೆ ಮಾಡಬಹುದು. ಇನ್ನು ಶಿಶ್ನದ ವಕ್ರತೆಯು ಈ ಕಾಯಿಲೆಯಿಂದಾಗಿ ತುಂಬಾ ಕೆಟ್ಟದಾಗಬಹುದು. ಅದಾಗ್ಯೂ, ಕೆಲವೊಂದು ಸಂದರ್ಭದಲ್ಲಿ ಇದು ಸ್ಥಿರವಾಗಬಹುದು. ನೀವು ವೈದ್ಯರನ್ನು ಭೇಟಿಯಾಗಿ ಆದಷ್ಟು ಬೇಗ ಪೆರೋನಿ ಕಾಯಿಲೆಗೆ ಚಿಕಿತ್ಸೆ ಪಡೆಯುವುದು ಅಗತ್ಯ.

ಪೆರೋನಿ ಕಾಯಿಲೆಗೆ ಚಿಕಿತ್ಸೆ ಹೇಗೆ?

ಪೆರೋನಿ ಕಾಯಿಲೆಗೆ ಚಿಕಿತ್ಸೆ ಹೇಗೆ?

ಕೆಲವೊಂದು ಸಲ ಈ ಕಾಯಿಲೆಯ ಲಕ್ಷಣಗಳು ಅದಾಗಿಯೇ ಮಾಯವಾಗುವುದು. ನೀವು ವೈದ್ಯರನ್ನು ಭೇಟಿಯಾದಾಗಲೂ ಒಂದು ಅಥವಾ ಎರಡು ವರ್ಷಗಳ ಕಾಲ ಕಾದು ನೋಡುವಂತೆ ಸೂಚಿಸಲಾಗುತ್ತದೆ.ಈ ಕಾಯಿಲೆಯು ಮಧ್ಯಮವಾಗಿದ್ದರೆ ಆಗ ಯಾವುದೇ ರೀತಿಯ ಚಿಕಿತ್ಸೆ ಅಗತ್ಯವಿಲ್ಲ. ಲೈಂಗಿಕ ಕ್ರಿಯೆ ವೇಳೆ ನಿಮಗೆ ಯಾವುದೇ ರೀತಿಯ ಸಮಸ್ಯೆ ಕಂಡುಬರದೇ ಇದ್ದರೆ ಆಗ ನೀವು ಇದನ್ನು ಕಡೆಗಣಿಸಬಹುದು.

ಔಷಧಿ ಅಥವಾ ಶಸ್ತ್ರಚಿಕಿತ್ಸೆ

ಔಷಧಿ ಅಥವಾ ಶಸ್ತ್ರಚಿಕಿತ್ಸೆ

ಅದಾಗ್ಯೂ, ಕಾಯಿಲೆಯು ತುಂಬಾ ತೀವ್ರವಾಗಿದ್ದರೆ ಆಗ ನೀವು ಇದನ್ನು ಔಷಧಿ ಅಥವಾ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬೇಕಾಗ ಬಹುದು. ಚಿಕಿತ್ಸೆಯ ಆರಂಭಿಕ ಹಂತದಲ್ಲಿ ಇದಕ್ಕೆ ಪೆಂಟೊಕ್ಸಿಫ್ಲೈನ್ ಅಥವಾ ಪೊಟ್ಯಾಸಿಯಮ್ ಪ್ಯಾರಾ-ಅಮೈನೋಬೆನ್ಜೋಟ್ ನೀಡಲಾಗುತ್ತದೆ. ಔಷಧಿಯು ಯಾವುದೇ ಕೆಲಸ ಮಾಡದೆ ಇದ್ದರೆ ಆಗ ವೈದ್ಯರು, ಶಿಶ್ನದ ಗಾಯದ ಅಂಗಾಂಶದ ಭಾಗಕ್ಕೆ ಕಾಲಜಿನೇಸ್ ಅಥವಾ ವೆರಪಾಮಿಲ್ ನೀಡಬಹುದು. ಅಂತಿಮವಾಗಿ ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಬಹುದು. ಆದರೆ ಲೈಂಗಿಕ ಕ್ರಿಯೆಯಲ್ಲಿ ನಿಮಗೆ ತೊಡಗಲು ಸಾಧ್ಯವಾಗದೆ ಇದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಿಸಿ.

ಪೆರೋನಿ ಕಾಯಿಲೆ ನಿವಾರಿಸಬಹುದೇ?

ಪೆರೋನಿ ಕಾಯಿಲೆ ನಿವಾರಿಸಬಹುದೇ?

ವಕ್ರ ಶಿಶ್ನವೆಂದು ಕರೆಯಲ್ಪಡುವಂತಹ ಈ ಕಾಯಿಲೆಯು ಕೆಲವೊಂದು ಸಲ ತನ್ನಿಂದ ತಾನೇ ಗುಣವಾಗುವುದು. ಇನ್ನು ಕೆಲಸವು ಸಲ ಚಿಕಿತ್ಸೆ ಮಾಡಬೇಕಾಗಬಹುದು. ಚಿಕಿತ್ಸೆಗೆ ತೆರಳುವ ಮೊದಲು ಒಂದು ಅಥವಾ ಎರಡು ವರ್ಷ ತನಕ ಕಾದರೆ, ಇದು ತಾನಾಗಿಯೇ ಗುಣಮುಖವಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಶೇ.10ರಷ್ಟು ಮಾತ್ರ ಪೆರೋನಿ ಕಾಯಿಲೆಯು ಗುಣಮುಖವಾಗದೆ ಇರಬಹುದು. ಆದರೆ ಇದು ಬಲು ಅಪರೂಪ. ಆದರೆ ಇದನ್ನು ತಪಾಸಣೆ ಮಾಡಬೇಕು. ವೈದ್ಯರು ಸಣ್ಣ ಮಟ್ಟದ ಪರೀಕ್ಷೆಯಿಂದ ಇದನ್ನು ಪತ್ತೆ ಮಾಡುವರು. ಅಸಾಮಾನ್ಯ ವಕ್ರತೆ ಮತ್ತು ಗಾಯವಾಗುವುದು ಇದರ ಪ್ರಮುಖ ಲಕ್ಷಣವಾಗಿದೆ. ಕೆಲವು ಸಪ್ಲಿಮೆಂಟ್ ಮತ್ತು ವಿಟಮಿನ್ ಗಳನ್ನು ಬಳಸಿಕೊಂಡು ಇದನ್ನು ನಿವಾರಿಸಬಹುದು.

ಪೆರೋನಿ ಕಾಯಿಲೆ ಅನುವಂಶೀಯವೇ?

ಪೆರೋನಿ ಕಾಯಿಲೆ ಅನುವಂಶೀಯವೇ?

ಕೆಲವೊಂದು ಅಧ್ಯಯನಗಳು ಮತ್ತು ವೈದ್ಯಕೀಯ ಸಲಹೆಗಳ ಪ್ರಕಾರ ತಂದೆ ಅಥವಾ ಸಹೋದರರಿಗೆ ಈ ಕಾಯಿಲೆಯು ಇದ್ದರೆ ಆಗ ಇದು ನಿಮಗೂ ಬರಬಹುದು. ಈ ಕಾಯಿಲೆಗೆ ಅನುವಂಶೀಯತೆಯ ಜತೆಗೆ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುವುದು. ಅದಾಗ್ಯೂ, ಇದೊಂದು ಸಂಬಂಧಿತ ಅಂಗಾಂಶಗಳ ಅಸ್ವಸ್ಥತೆ ಎಂದು ಹೇಳಲಾಗುತ್ತದೆ ಮತ್ತು ಇದು ಆಘಾತದಿಂದ ಉಂಟಾಗುವುದು ಎಂದು ಕೆಲವೊಂದು ವರದಿಗಳು ಹೇಳಿವೆ. ಪೆರೋನಿ ಕಾಯಿಲೆಯು ಅನುವಂಶೀಯತೆಯಿಂದ ಬರುವಂತಹ ಶಿಶ್ನದ ವಕ್ರತೆ ಎನ್ನಲಾಗುತ್ತದೆ.

ಶಿಶ್ನಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಶಿಶ್ನಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಪೆರೋನಿ ಕಾಯಿಲೆಗೆ ಆಘಾತವು ಪ್ರಮುಖ ಕಾರಣವೆಂದು ನಿಮಗೆ ಈಗಾಗಲೇ ತಿಳಿದಿರುವ ಕಾರಣದಿಂದಾಗಿ ನಿಮ್ಮ ಶಿಶ್ನಗಳನ್ನು ಕಾಪಾಡಿಕೊಳ್ಳಬೇಕು. ಯಾವುದೇ ರೀತಿಯ ಸ್ಪಷ್ಟ ಕ್ರಮಗಳು ಇದಕ್ಕೆ ಇಲ್ಲವಾದರೂ ನೀವು ಕೆಳಗಿನ ಕಾರಣಗಳಿಂದ ಶಿಶ್ನ ರಕ್ಷಿಸಬಹುದು.

ಹೊಟ್ಟೆಯ ಮೇಲೆ ಮಲಗಬೇಡಿ

ಹೊಟ್ಟೆಯ ಮೇಲೆ ಮಲಗಬೇಡಿ

ಸಂತಾನೋತ್ಪತ್ತಿ ತಜ್ಞರ ಪ್ರಕಾರ ವಯಸ್ಕ ಪುರಷರು ಹೊಟ್ಟೆ ಮೇಲೆ ಮಲಗಬಾರದು. ಹೊಟ್ಟೆ ಮೇಲೆ ಮಲಗಿದರೆ ಆಗ ಶಿಶ್ನದ ರಕ್ತನಾಳಗಳ ಮೇಲೆ ಒತ್ತಡ ಬೀಳುವುದು. ಇದರಿಂದ ಶಿಶ್ನದ ಅಂಗಾಂಶಗಳಿಗೆ ರಕ್ತ ಪರಿಚಲನೆ ಕಡಿಮೆಯಾಗುವುದು.

ಲೈಂಗಿಕ ಕ್ರಿಯೆ ವೇಳೆ ಜಾಗೃತೆ ವಹಿಸಿ

ಲೈಂಗಿಕ ಕ್ರಿಯೆ ವೇಳೆ ಜಾಗೃತೆ ವಹಿಸಿ

ಗಾಯದಿಂದಾಗಿ ಈ ಕಾಯಿಲೆಯು ಬರುವುದು. ಲೈಂಗಿಕ ಕ್ರಿಯೆ ವೇಳೆ ಈ ಗಾಯವು ಕಾಣಿಸಬಹುದು. ನೀವು ಲೈಂಗಿಕ ಕ್ರಿಯೆ ವೇಳೆ ತುಂಬಾ ಎಚ್ಚರಿಕೆ ವಹಿಸಬೇಕು.

ನಿಮ್ಮ ಆಹಾರ ಕ್ರಮದಲ್ಲಿ ವಿಟಮಿನ್ ಇ ಸಪ್ಲಿಮೆಂಟ್ ಬಳಸಿ

ನಿಮ್ಮ ಆಹಾರ ಕ್ರಮದಲ್ಲಿ ವಿಟಮಿನ್ ಇ ಸಪ್ಲಿಮೆಂಟ್ ಬಳಸಿ

ವಿಟಮಿನ್ ಇ ಸಪ್ಲಿಮೆಂಟ್ ಸೇವನೆ ಮಾಡುವುದರಿಂದ ಈ ರೋಗದ ಲಕ್ಷಣಗಳು ಕಡಿಮೆಯಾಗುವುದು ಎಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿವೆ.

ಶಿಶ್ನ ಎಳೆಯುವ ಸಾಧನ ಬಳಕೆ

ಶಿಶ್ನ ಎಳೆಯುವ ಸಾಧನ ಬಳಕೆ

ಇದರ ಬಳಕೆಯಿಂದಾಗಿ ಶಿಶ್ನದ ಗಾತ್ರವು ದೊಡ್ಡದಾಗುವುದು ಎಂದು ಅಧ್ಯಯನಗಳು ಹೇಳಿವೆ. ಆದರೆ ಇದರಿಂದಾಗಿ ಶಿಶ್ನದಲ್ಲಿ ವಕ್ರತೆಯನ್ನು ಕಡಿಮೆ ಮಾಡಬಹುದು. ಲಕ್ಷಣವಿರುವಂತಹ ಭಾಗಕ್ಕೆ ಇದನ್ನು ಅಳವಡಿಸಬೇಕು.

English summary

Reasons Men Have Pain During Sexual Intercourse

Pain during sexual intercourse isn't a problem limited to women, as many men have pain during sex as well. Experiencing this problem may not only affect sexual performance but sexual pleasure also. It can even have lasting psychological effects, such as fear of penetration, leading to impotence. Not surprisingly, equating pain with intercourse can put a strain on relationships.
X
Desktop Bottom Promotion