For Quick Alerts
ALLOW NOTIFICATIONS  
For Daily Alerts

ನೆನೆಸಿಟ್ಟ ಬಾದಾಮಿ ಬೀಜ-ಇದನ್ನು ಎಷ್ಟು ಹೊಗಳಿದರೂ ಸಾಲದು!

By
|

ಒಣಫಲಗಳನ್ನು ಊಟದ ಬಳಿಕ ಕೆಲವನ್ನಾದರೂ ತಿನ್ನುವುದು ಉತ್ತಮ ಎಂದು ಹಿರಿಯರು ಹೇಳಿರುವುದನ್ನು ನೀವು ಕೇಳಿಯೇ ಇರುತ್ತೀರಿ. ಒಣಫಲಗಳ ಪೋಷಕಾಂಶಗಳು ಅವು ಹಸಿಯಾಗಿದ್ದಾಗ ಗರಿಷ್ಠವಾಗಿದ್ದರೂ ಇವು ಎಲ್ಲೆಡೆ ಸುಲಭವಾಗಿ ಸಿಗದ ಕಾರಣ ಒಣಗಿಸಿ ಕೆಡದಂತೆ ಸಂರಕ್ಷಿಸಿಡಬಹುದಾದುದರಿಂದ ಒಣರೂಪದಲ್ಲಿಯೇ ಹೆಚ್ಚು ಜನಪ್ರಿಯವಾಗಿವೆ. ಆದರೆ ಒಣಗಿಸುವ ಮೂಲಕ ಕೆಲವು ಪೋಷಕಾಂಶಗಳ ಪ್ರಭಾವವೂ ಕಡಿಮೆಯಾಗುತ್ತದೆ. ಕಳೆದುಕೊಂಡ ಶಕ್ತಿಯನ್ನು ಮತ್ತೆ ಪಡೆಯುವಂತಾಗಲು ಸುಲಭ ವಿಧಾನವಿದೆ. ಇಂದಿನ ಲೇಖನದಲ್ಲಿ ಈ ವಿಧಾನವನ್ನು ವಿವರಿಸಲಾಗಿದೆ.

ಪ್ರಸ್ತುತ ಲಭ್ಯವಿರುವ ಒಣಫಲಗಳಲ್ಲಿಯೇ ಅತ್ಯಂತ ಆರೋಗ್ಯಕರ ಮತ್ತು ಅತಿ ಹೆಚ್ಚಿನ ಪೌಷ್ಟಿಕಾಂಶವುಳ್ಳ ಹಾಗೂ ಹಲವಾರು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಒಣಫಲವೆಂದರೆ ಬಾದಾಮಿ. ಈ ಫಲವನ್ನೂ ನೆನೆಸಿಟ್ಟು ಮೆದುವಾದ ಬಳಿಕ ಸೇವಿಸಿದರೆ ಇದರ ಗುಣಗಳು ಇನ್ನಷ್ಟು ಹೆಚ್ಚುತ್ತವೆ. ನಾವು ಮೊಳಕೆ ಬರಿಸಲು ಧಾನ್ಯಗಳನ್ನು ನೆನೆಸಿಟ್ಟ ಬಳಿಕ ಆ ಧಾನ್ಯಗಳಲ್ಲಿನ ಪೌಷ್ಟಿಕಾಂಶ ಹೆಚ್ಚುವುದಿಲ್ಲವೇ, ಅದೇ ರೀತಿ ಬಾದಾಮಿಯಲ್ಲಿಯೂ ಪೋಷಕಾಂಶಗಳು ಹೆಚ್ಚುತ್ತವೆ. ಆದರೆ ಇದನ್ನು ಗೊರಟಿನಿಂದ ಒಡೆದು ತೆಗೆದಿರುವ ಕಾರಣ ಇದು ಮೊಳಕೆ ಬರಲಾರದು.

ಬಾದಾಮಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ನುಗಳು, ಕರಗುವ ನಾರು, ಮ್ಯಾಂಗನೀಸ್, ಒಮೆಗಾ 3 ಕೊಬ್ಬಿನ ಆಮ್ಲ ಹಾಗೂ ಪ್ರೋಟೀನ್ ಸಹಾ ಇದೆ. ಇದರ ಪೌಷ್ಟಿಕಾಂಶಗಳ ಹೊರತಾಗಿ ಕೆಲವು ಬಾದಾಮಿಗಳನ್ನು ತಿಂದ ಬಳಿಕ ಇದು ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುವ ಮೂಲಕ ದಿನದ ಹೆಚ್ಚಿನ ಹೊತ್ತು ಹಸಿವಾಗದಂತೆ ತಡೆಯುತ್ತದೆ. ಒಣ ಬಾದಾಮಿಗಳನ್ನು ಸುಮಾರು ಏಳರಿಂದ ಎಂಟು ಗಂಟೆಗಳ ಕಾಲ ತಣ್ಣೀರಿನಲ್ಲಿ ನೆನೆಸಿಟ್ಟು ಬಳಿಕ ಸೇವಿಸುವ ಮೂಲಕ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇನ್ನೂ ಹೆಚ್ಚು ಹೊತ್ತು ಇರಿಸಿದರೆ ಇನ್ನೂ ಉತ್ತಮ. ಆದರೆ ಇದರ ಸಿಪ್ಪೆಯಲ್ಲಿ ಟ್ಯಾನಿನ್ ಎಂಬ ಅಂಶವಿದ್ದು ಬಾದಾಮಿಯ ಅಂಶಗಳನ್ನು ದೇಹ ಸ್ವೀಕರಿಸಲು ಅಡ್ಡಿ ಮಾಡುತ್ತದೆ. ಆದ್ದರಿಂದ ಸಿಪ್ಪೆ ನಿವರಿಸಿಯೇ ತಿನ್ನಬೇಕು. ಒಣಫಲದಲ್ಲಿ ಸಿಪ್ಪೆ ಗಟ್ಟಿಯಾಗಿ ಅಂಟಿಕೊಂಡಿರುವ ಕಾರಣ ಇದನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲದ ಕಾರಣದಿಂದಲೂ ಬಾದಾಮಿಯ ಪೂರ್ಣ ಪ್ರಮಾಣದ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಬನ್ನಿ, ನೆನೆಸಿಟ್ಟ ಬಾದಾಮಿ ಸೇವನೆಯ ಪ್ರಯೋಜನಗಳೇನು ಎಂಬುದನ್ನು ನೋಡೋಣ....

ಜೀರ್ಣಕ್ರಿಯೆ ಸುಧಾರಣೆ

ಜೀರ್ಣಕ್ರಿಯೆ ಸುಧಾರಣೆ

ನೆನೆಸಿಟ್ಟ ಬಾದಾಮಿಯು ಸಂಪೂರ್ಣ ಕ್ರಿಯೆ ವ್ಯವಸ್ಥೆಗೆ ನೆರವಾಗಿ ಆಹಾರವು ವೇಗವಾಗಿ ಮತ್ತು ಸರಾಗವಾಗಿ ಜೀರ್ಣವಾಗುವಂತೆ ಮಾಡುವುದು. ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟಾಗ ಅದರ ಹೊರಗಿನ ಸಿಪ್ಪೆಯು ಕಿತ್ತುಬರುವುದು. ಇದರಿಂದ ಜೀರ್ಣಕ್ರಿಯೆ ಸುಲಭವಾಗುವುದು ಮತ್ತು ಅತ್ಯಧಿಕ ಪೋಷಕಾಂಶಗಳು ದೇಹಕ್ಕೆ ಸಿಗುವುದು.

ಗರ್ಭಧರಿಸಲು ಒಳ್ಳೆಯದು

ಗರ್ಭಧರಿಸಲು ಒಳ್ಳೆಯದು

ನೀವು ಗರ್ಭ ಧರಿಸಲು ನಿರ್ಧರಿಸಿದ್ದರೆ ಆಗ ನೆನೆಸಿಟ್ಟ ಬಾದಾಮಿ ತಿನ್ನಬೇಕು. ಇದು ನಿಮಗೆ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆನೆಸಿಟ್ಟ ಬಾದಾಮಿಯು ತಾಯಿ ಹಾಗೂ ಗರ್ಭದಲ್ಲಿರುವ ಮಗುವಿಗೆ ಸಂಪೂರ್ಣ ಪೋಷಕಾಂಶ ಹಾಗೂ ಶಕ್ತಿ ನೀಡುವುದು. ಇದರಲ್ಲಿರುವಂತಹ ಫಾಲಿಕ್ ಆಮ್ಲವು ಹುಟ್ಟು ಮಗುವಿನಲ್ಲಿ ಆಗುವ ಅಂಗವೈಫಲ್ಯ ತಡೆಯುವುದು.

ಮೆದುಳಿನ ಕ್ರಿಯೆ ಸುಧಾರಣೆ

ಮೆದುಳಿನ ಕ್ರಿಯೆ ಸುಧಾರಣೆ

ಪ್ರತಿನಿತ್ಯ ನೆನೆಸಿಟ್ಟ 4-6 ಬಾದಾಮಿ ತಿಂದರೆ ಅದು ಮೆದುಳಿಗೆ ಶಕ್ತಿ ನೀಡುವುದು ಮತ್ತು ಕೇಂದ್ರೀಯ ನರ ಮಂಡಲವು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ಬೆಳಗ್ಗೆ ಎದ್ದು ನೆನೆಸಿಟ್ಟ ಬಾದಾಮಿ ತಿಂದರೆ ಅದರಿಂದ ನೆನಪಿನ ಶಕ್ತಿ ಹೆಚ್ಚುವುದು ಮತ್ತು ಮೆದುಳಿನ ಕ್ರಿಯೆ ಸುಧಾರಣೆಯಾಗುವುದು.

ಕೊಲೆಸ್ಟ್ರಾಲ್ ತಗ್ಗುವುದು

ಕೊಲೆಸ್ಟ್ರಾಲ್ ತಗ್ಗುವುದು

ನೆನೆಸಿಟ್ಟ ಬಾದಾಮಿಯು ಕೊಲೆಸ್ಟ್ರಾಲ್ ಮಟ್ಟವನ್ನು ತೀವ್ರವಾಗಿ ತಗ್ಗಿಸುವುದು. ಇದರಲ್ಲಿ ಏಕಪರ್ಯಾಪ್ತ ಕೊಬ್ಬಿನಾಮ್ಲವಿದ್ದು, ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು. ಬಾದಾಮಿಯಲ್ಲಿ ವಿಟಮಿನ್ ಇ ಇದೆ. ಇದು ರಕ್ತಕಣದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವುದು.

ಹೃದಯದ ಆರೋಗ್ಯಕ್ಕೆ

ಹೃದಯದ ಆರೋಗ್ಯಕ್ಕೆ

ನೆನಸಿಟ್ಟ ಬಾದಾಮಿಯಲ್ಲಿ ಇರುವಂತಹ ಪ್ರೋಟೀನ್, ಪೊಟಾಶಿಯಂ ಮತ್ತು ಮೆಗ್ನಿಶಿಯಂ ಹೃದಯದ ಆರೋಗ್ಯ ಕಾಪಾಡಲು ಅತ್ಯಗತ್ಯ. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಕೊಲೆಸ್ಟ್ರಾಲ್ ಮಟ್ಟ ಕಾಪಾಡುವುದು ಮತ್ತು ಹೃದಯ ಸಂಬಂಧಿ ರೋಗಗಳನ್ನು ತಡೆಯುವುದು.

ರಕ್ತದೊತ್ತಡ ಸುಧಾರಣೆ

ರಕ್ತದೊತ್ತಡ ಸುಧಾರಣೆ

ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನೆನೆಸಿಟ್ಟ ಬಾದಾಮಿಯು ನಿವಾರಣೆ ಮಾಡುವುದು. ನೆನೆಸಿಟ್ಟ ಬಾದಾಮಿಯಲ್ಲಿ ಉನ್ನತ ಮಟ್ಟದ ಪೊಟಾಶಿಯಂ ಮತ್ತು ಕಡಿಮೆ ಸೋಡಿಯಂ ಇದ್ದು, ಇದು ರಕ್ತದೊತ್ತಡ ಹೆಚ್ಚದಂತೆ ತಡೆಯುವುದು. ಇದರಲ್ಲಿರುವ ಫಾಲಿಕ್ ಆಮ್ಲ ಮತ್ತು ಮೆಗ್ನಿಶಿಯಂ ಅಪದಮನಿ ದಟ್ಟಣೆ ತಡೆಯುವುದು.

ರಕ್ತದೊತ್ತಡ ಸುಧಾರಣೆ

ರಕ್ತದೊತ್ತಡ ಸುಧಾರಣೆ

ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನೆನೆಸಿಟ್ಟ ಬಾದಾಮಿಯು ನಿವಾರಣೆ ಮಾಡುವುದು. ನೆನೆಸಿಟ್ಟ ಬಾದಾಮಿಯಲ್ಲಿ ಉನ್ನತ ಮಟ್ಟದ ಪೊಟಾಶಿಯಂ ಮತ್ತು ಕಡಿಮೆ ಸೋಡಿಯಂ ಇದ್ದು, ಇದು ರಕ್ತದೊತ್ತಡ ಹೆಚ್ಚದಂತೆ ತಡೆಯುವುದು. ಇದರಲ್ಲಿರುವ ಫಾಲಿಕ್ ಆಮ್ಲ ಮತ್ತು ಮೆಗ್ನಿಶಿಯಂ ಅಪದಮನಿ ದಟ್ಟಣೆ ತಡೆಯುವುದು.

ತೂಕ ಇಳಿಸಲು

ತೂಕ ಇಳಿಸಲು

ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸಬೇಕೆಂದು ನೀವು ಬಯಸಿದ್ದರೆ ನೆನೆಸಿಟ್ಟ ಬಾದಾಮಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ. ನೆನೆಸಿಟ್ಟ ಬಾದಾಮಿಯ ಹೊರಗಿನ ಸಿಪ್ಪೆ ಕಿತ್ತುಹೋಗುವ ಕಾರಣದಿಂದಾಗಿ ನೆನೆಸಿಟ್ಟ ಬಾದಾಮಿಯು ತೂಕ ಕಳೆದುಕೊಳ್ಳಲು ಸಹಕಾರಿ. ನೆನೆಸಿಟ್ಟ ಬಾದಾಮಿಯಲ್ಲಿ ಏಕಪರ್ಯಾಪ್ತ ಕೊಬ್ಬು ಇದ್ದು, ಇದು ಹಸಿವು ಕಡಿಮೆ ಮಾಡಿ, ಹೊಟ್ಟೆ ತುಂಬಿರುವಂತೆ ಮಾಡುವುದು.

 ಹೃದ್ರೋಗಗಳನ್ನು ತಡೆಯುತ್ತದೆ

ಹೃದ್ರೋಗಗಳನ್ನು ತಡೆಯುತ್ತದೆ

ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಸಿಡುವುದರಿ೦ದ, ಅವುಗಳಲ್ಲಿನ ಆರೋಗ್ಯಕರ ಕೊಲೆಸ್ಟೆರಾಲ್ ನ ಮಟ್ಟದಲ್ಲಿ ಹೆಚ್ಚಳವಾಗುತ್ತದೆ (ಹೈ ಡೆನ್ಸಿಟಿ ಲೈಪೋಪ್ರೋಟೀನ್ - HDL) ಹಾಗೂ ಜೊತೆಗೆ ಅನಾರೋಗ್ಯಕರ ಕೊಲೆಸ್ಟ್ರಾಲ್‌ನ ಮಟ್ಟದಲ್ಲಿ ಇಳಿಮುಖವಾಗುತ್ತದೆ (ಲೋ ಡೆನ್ಸಿಟಿ ಲೈಪೋಪ್ರೋಟೀನ್ - LDL). ಹೃದಯದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ HDL ಹಾಗೂ LDL ಗಳ ಅನುಪಾತವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಬಾದಾಮಿ ಕಾಳುಗಳಲ್ಲಿರುವ ವಿಟಮಿನ್ E ಯ ಅ೦ಶವು ಹೃದ್ರೋಗಗಳ ಸ೦ಭವನೀಯತೆಯನ್ನು ತಡೆಯುತ್ತದೆ. ಬಾದಾಮಿ ಬೀಜಗಳಲ್ಲಿರುವ ಮೆಗ್ನೀಷಿಯ೦ ನ ಅ೦ಶಕ್ಕೆ ಹೃದಯಾಘಾತಗಳನ್ನು ಪಲ್ಲಟಗೊಳಿಸುವ ಗುಣಧರ್ಮಗಳಿವೆ. ಬಾದಾಮಿ ಬೀಜಗಳಲ್ಲಿರುವ ಫೋಲಿಕ್ ಆಮ್ಲವು ರಕ್ತನಾಳಗಳಲ್ಲಿ ಅಡಚಣೆಗಳು ಉ೦ಟಾಗದ೦ತೆ ತಡೆಯಬಲ್ಲದು.

ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯ೦ತ್ರಿಸುತ್ತದೆ

ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯ೦ತ್ರಿಸುತ್ತದೆ

ಕಡಿಮೆ ಕ್ಯಾಲರಿವುಳ್ಳ ಆಹಾರದೊ೦ದಿಗೆ ನೆನೆಸಿಟ್ಟಿರುವ ಬಾದಾಮಿ ಕಾಳುಗಳನ್ನು ಸೇವಿಸಿದಲ್ಲಿ, ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅ೦ಶ, ಇನ್ಸುಲಿನ್ ನ ಅ೦ಶ, ಹಾಗೂ ಸೋಡಿಯ೦ ನ ಮಟ್ಟಗಳನ್ನು ತಗ್ಗಿಸುತ್ತವೆ ಹಾಗೂ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸ೦ಭಾವ್ಯವನ್ನು ನಿಯ೦ತ್ರಿಸಬಲ್ಲ ಮೆಗ್ನೀಷಿಯ೦ನ ಮಟ್ಟವನ್ನು ಶರೀರದಲ್ಲಿ ಹೆಚ್ಚಿಸುತ್ತವೆ.

ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ

ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ

ಮಾನವನಿಗೆ ಪರಿಚಿತವಾಗಿರುವ ಸ್ಮರಣಶಕ್ತಿಯ ಸ೦ವರ್ಧಕಗಳ ಪೈಕಿ ಒ೦ದು ಯಾವುದೆ೦ದರೆ ಅದು ಬಾದಾಮಿ. ಬಾದಾಮಿ ಕಾಳುಗಳು ಕೊಬ್ಬಿನಾ೦ಶದಿ೦ದ ಸಮೃದ್ಧವಾಗಿದ್ದು, ಇವು ಬುದ್ಧಿಶಕ್ತಿಯ ಹಾಗೂ ಸ್ಮರಣಶಕ್ತಿಯ ಮಟ್ಟಗಳನ್ನು ಸುಧಾರಿಸಲು ನೆರವಾಗುತ್ತವೆ. ಸ್ಮರಣಶಕ್ತಿಯ ಮಟ್ಟವು ಗಮನಾರ್ಹವಾಗಿ ವೃದ್ಧಿಗೊಳ್ಳಬೇಕೆ೦ದಿದ್ದಲ್ಲಿ, ಪ್ರತಿದಿನ ಬೆಳಗ್ಗೆ ನಾಲ್ಕರಿ೦ದ ಆರು ನೆನೆಸಿಟ್ಟ ಬಾದಾಮಿ ಕಾಳುಗಳನ್ನು ಸೇವಿಸುವುದು ಸೂಕ್ತವಾಗಿರುತ್ತದೆ.

English summary

reasons to eat soaked almonds in the morning every day

Almonds are extremely helpful for people who suffer with blood pressure problems and these also help nerve and muscle functioning. Nutritionists say that eating soaked almonds is much more healthier than eating the raw ones. It is because soaking almonds in water overnight removes the toxic materials present in its coating, releases phytic acid and decomposes its gluten content, so that you get most of the nutrients from the nuts. So, let's have a look at some of the health benefits of eating soaked almonds in the morning.
X
Desktop Bottom Promotion