Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹಸಿ ಹಾಲು, ಪ್ಯಾಕೇಟ್ ಹಾಲು, ಟೆಟ್ರಾ ಪ್ಯಾಕ್ - ಇದರಲ್ಲಿ ಯಾವುದು ಉತ್ತಮ?
ಹಾಲು ಎನ್ನುವುದು ದೇವರು ಮನುಷ್ಯನಿಗೆ ನೀಡಿರುವಂತಹ ದೊಡ್ಡ ಕೊಡುಗೆ ಎನ್ನಬಹುದು. ದನ, ಎಮ್ಮೆ, ಆಡಿನ ಹಾಲನ್ನು ವಿವಿಧ ಉಪಯೋಗಗಳಿಗೆ ಬಳಸಲಾಗುತ್ತದೆ. ಅದರಲ್ಲೂ ದನದ ಹಾಲು ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಪ್ರತಿಯೊಬ್ಬರು ಹಾಲನ್ನು ಬಳಸುವರು. ಆದರೆ ಹಾಲಿನ ಬಗ್ಗೆ ಕೂಡ ಕೆಲವೊಂದು ಅಧ್ಯಯನಗಳು ನಡೆಯುತ್ತಲೇ ಇದೆ.

ನಾವು ಪ್ಯಾಕೇಟ್ ಹಾಲು, ಟೆಟ್ರಾ ಪ್ಯಾಕ್ ಹಾಲು ಮತ್ತು ಹಸಿ ಹಾಲನ್ನು ಸೇವಿಸುತ್ತೇವೆ. ಇದರಲ್ಲಿ ಇರುವಂತಹ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಭಾವಿಸುತ್ತೇವೆ. ಆದರೆ ಇದು ಎಷ್ಟರ ಮಟ್ಟಿಗೆ ನಮ್ಮ ದೇಹಕ್ಕೆ ಒಳ್ಳೆಯದು ಎಂದು ನಾವು ಈ ಲೇಖನದಲ್ಲಿ ತಿಳಿಯುವ....

ಹಸಿ ಹಾಲು
ಹಸಿ ಹಾಲು ಪಾಶ್ಚೀಕರಿಸದ ಹಾಲು. ಇದು ಯಾವುದೇ ವಿಧದಿಂದಲೂ ಸಂಸ್ಕರಿಸದ ಹಾಲು. ಭಾರತದಲ್ಲಿ ಸಾವಯವ ಮತ್ತು ಸಾವಯವಲ್ಲದ ಹಾಲು ಸಿಗುವುದು. ಸ್ಥಳೀಯ ಕೆಲವು ಡೈರಿಗಳು ಮನೆಗೆ ಹಾಲನ್ನು ಪೂರೈಕೆ ಮಾಡುವುದು.

ಸಾವಯವ
ಜಾನುವಾರುಗಳಿಗೆ ನೀಡುವಂತಹ ಆಹಾರದಲ್ಲಿ ಯಾವುದೇ ರೀತಿಯ ಕೀಟನಾಶಕ ಅಥವಾ ರಾಸಾಯನಿಕ ಬಳಸದೆ ಇರುವುದು. ಇಂತಹ ಡೈರಿಗಳಲ್ಲಿ ದನಗಳು ಮತ್ತು ಎಮ್ಮೆಗಳಿಗೆ ಹಾಲು ನೀಡುವಂತೆ ಹಾರ್ಮೋನು ಇಂಜೆಕ್ಷನ್ ಅಥವಾ ಔಷಧಿ ನೀಡಲಾಗುವುದಿಲ್ಲ.

ಅಸಾವಯವ
ಅಸಾವಯವ ಎಂದರೆ ಜಾನುವರುಗಳಿಗೆ ಕಲಬೆರಕೆಯ ಆಹಾರ ನೀಡಲಾಗುವುದು ಮತ್ತು ಇವುಗಳನ್ನು ತುಂಬಾ ಅಸ್ವಚ್ಛತೆಯಿಂದ ಇಡಲಾಗುತ್ತದೆ.

ಇದು ಯಾಕೆ ಕೆಟ್ಟದು?
ಕಚ್ಚಾ ಹಾಲನ್ನು ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಯಾಕೆಂದರೆ ಇದರ ಬಾಳಿಕೆ ಹಾಗೂ ಪೌಷ್ಠಿಕಾಂಶಗಳು ಇದಕ್ಕೆ ಪ್ರಮುಖ ಕಾರಣ. ಕಚ್ಚಾ ಹಾಲಿನಲ್ಲಿ ಪೋಷಕಾಂಶಗಳು ಇಲ್ಲ ಅಥವಾ ಇದು ಕೆಟ್ಟದು ಎಂದಲ್ಲ. ಆದರೆ ಹಾಲನ್ನು ತೆಗೆಯುವಂತಹ ವಾತಾವರಣವು ಸ್ವಚ್ಛವಾಗಿರದೇ ಇರಬಹುದು. ಇದು ಅಪಾಯಕಾರಿಯಾಗಬಹುದು.

ಪ್ಯಾಕೇಟ್ ಹಾಲು
ಪ್ಯಾಕೇಟ್ ಹಾಲು ಪಾಶ್ಚೀಕರಿಸಿದ, ಹೊಮೊಜಿನೈಸೈಡ್ ಮಾಡಿದ ಹಾಲಿನ ರೂಪ. ಪಾಶ್ಚೀಕರಿಸಿದ ಎಂದರೆ ಹಾಲನ್ನು ಬಿಸಿ ಮಾಡಿದ ಬಳಿಕ ಒಂದು ನಿಗದಿತ ತಾಪಮಾನದಲ್ಲಿ ಅದನ್ನು ತಣ್ಣಗಾಗಿಸಿ, ಬ್ಯಾಕ್ಟೀರಿಯಾ ಮತ್ತು ಅಶುದ್ಧತೆಯಿಂದ ದೂರ ಮಾಡುವುದು. ಪ್ಯಾಕೇಟ್ ಹಾಲು ಮೂರು ವಿಧಗಳಲ್ಲಿ ಬರುವುದು. ಟೋನ್ಡ್, ಡಬಲ್ ಟೋನ್ಡ್ ಮತ್ತು ಫುಲ್ ಕ್ರೀಮ್.

ವಿಧಗಳು
ಫುಲ್ ಕ್ರೀಮ್ ಹಾಲು ಸಾರಗುಂದದ, ಪಾಶ್ಚೀಕರಿಸಿದ ಮತ್ತು ಹೊಮೊಜಿನೈಸ್ಡ್. ಟೋನ್ ಮತ್ತು ಡಬಲ್ ಟೋನ್ಡ್ ಹಾಲು ಸಾರಗುಂದಿಸಿರುವ ಹಾಲಿನ ವಿಧ. ಈ ಮೂರು ವಿಧದ ಹಾಲಿನಲ್ಲಿ ಪೋಷಕಾಂಶಗಳು ಮತ್ತು ಕ್ಯಾಲರಿ ಗುಣಮಟ್ಟವು ಭಿನ್ನವಾಗಿರುವುದು. ಪ್ಯಾಕೇಟ್ ಹಾಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿರುವುದು.

ಟೆಟ್ರಾ ಪ್ಯಾಕ್
ಟ್ರೆಟ್ರಾ ಪ್ಯಾಕ್ ಹಾಲನ್ನು ಯುಎಚ್ ಟಿ(ಅಲ್ಟ್ರಾ ಹೈ ಟೆಂಪರೇಚರ್) ಅಥವಾ ಎಚ್ ಟಿಎಸ್ ಟಿ(ಹೈ ಟೆಂಪರೇಚರ್ ಶಾರ್ಟ್ ಟೈಂ)ನ್ನು ಬಳಸಿಕೊಂಡು ಕೆಲವು ಸೆಕೆಂಡುಗಳ ಕಾಲ ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಲಾಗುತ್ತದೆ. ಇದರ ಬಳಿಕ ತಕ್ಷಣ ತಣ್ಣಗಾಗಿಸಲಾಗುತ್ತದೆ(ರೋಗಗಳನ್ನು ಉಂಟು ಮಾಡುವ ಸೂಕ್ಷ್ಮಾಣು ಜೀವಿಗಳಿಂದ ಮುಕ್ತವಾಗಿರುವುದು). ಇದರ ಬಳಿಕ ಟೆಟ್ರಾ ಪ್ಯಾಕ್ ನಲ್ಲಿ ಪ್ಯಾಕ್ ಮಾಡಲಾಗುತ್ತದೆ.

ಆರು ಪದರ
ಟೆಟ್ರಾ ಪ್ಯಾಕ್ ಹಾಲಿನ ರಕ್ಷಣೆಯ ಆರು ಪದರಗಳನ್ನು ಹೊಂದಿದೆ. ಇದರ ಬಾಳಿಕೆಯು ಕಚ್ಚಾ ಹಾಲು ಮತ್ತು ಪ್ಯಾಕೇಟ್ ಹಾಲಿಗಿಂತ ಹೆಚ್ಚಾಗಿರುವುದು.

ಇವುಗಳಲ್ಲಿ ಯಾವುದು ಹೆಚ್ಚು ಸುರಕ್ಷಿತ?
ಮಾರುಕಟ್ಟೆಯಲ್ಲಿ ಸಿಗುವಂತಹ ಮೂರು ವಿಧದ ಹಾಲಿನ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇದೆ. ಹೆಚ್ಚಿನ ಅಧ್ಯಯನಗಳು ಟೆಟ್ರಾ ಪ್ಯಾಕ್ ತುಂಬಾ ಸುರಕ್ಷಿತ ಆಯ್ಕೆಯೆಂದು ಹೇಳುತ್ತವೆ. ಭಾರತದಲ್ಲಿ ಸಿಗುವಂತಹ ಕಚ್ಚಾ ಹಾಲಿನ ಗುಣಮಟ್ಟದ ಬಗ್ಗೆ ಹಲವಾರು ಪ್ರಶ್ನೆಗಳು ಇವೆ. ಪ್ಯಾಕೇಟ್ ಹಾಲಿನ ಬಗ್ಗೆ 2015ರಲ್ಲಿ ಹಾವರ್ಡ್ ಯೂನಿವರ್ಸಿಟಿ ನಡೆಸಿರುವ ಅಧ್ಯಯನದ ಪ್ರಕಾರ ಹಾಲಿಗೆ ಬಳಸಲು ಪ್ಲಾಸ್ಟಿಕ್ ನಲ್ಲಿ ಬಿಪಿಎ(ಕೆಮಿಕಲ್ ಬಿಸ್ಫೆನಾಲ್ ಎ)ಇರುವುದು ಪತ್ತೆಯಾಗಿದೆ. ಪ್ಲಾಸ್ಟಿಕ್ ನಲ್ಲಿ ಕಂಡುಬರುವಂತಹ ಬಿಪಿಎ ಹಾರ್ಮೋನುಗಳಿಗೆ ಅಡೆತಡೆ ಉಂಟು ಮಾಡುವುದು ಮತ್ತು ಇದು ಹಲವಾರು ಕಾಯಿಲೆಗಳಿಗೆ ಕಾರಣವಾಗುವುದು. ಈ ಪ್ಲಾಸ್ಟಿಕ್ ಬಿಸಿಲಿನ ಸಂಪರ್ಕಕ್ಕೆ ಬಂದಾಗ ಅದರ ಬಿಪಿಎ ಹಾಲಿನೊಂದಿಗೆ ಸೇರಿಕೊಂಡು ವಿಷಕಾರಿಯಾಗಬಹುದು.

ಟೆಟ್ರಾ ಪ್ಯಾಕ್ ಅತ್ಯುತ್ತಮವಾದ ಆಯ್ಕೆ
ಟೆಟ್ರಾ ಪ್ಯಾಕೇಟ್ ಹಾಲು ತುಂಬಾ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಪ್ಯಾಕೇಜಿಂಗ್, ಸಂಸ್ಕರಣೆ ಇತ್ಯಾದಿ ಕಾರಣಗಳಿಂದಾಗಿ ಇದು ತುಂಬಾ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಈ ಹಾಲು ಯಾವುದೇ ವಿಧದಿಂದಲೂ ಕಲುಷಿತವಾಗಲು ಸಾಧ್ಯವಿಲ್ಲ. ಪಾಶ್ಚೀಕರಿಸಿದ ಮತ್ತು ಹೊಮೊಜಿನೈಸ್ಡ್ ಹಾಲಿನಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಇಲ್ಲವೆಂದು ವಿಜ್ಞಾನಿಗಳು ಹಾಗೂ ಹಲವಾರು ಅಧ್ಯಯನಗಳು ಹೇಳಿದ್ದರೂ ಇದು ತುಂಬಾ ಸುರಕ್ಷಿತ. ಇದನ್ನು ಒಳ್ಳೆಯ ಪರಿಸ್ಥಿತಿಯಲ್ಲಿ ಉತ್ಪಾದಿಸಿ, ಯಾವುದೇ ರೀತಿಯ ಸಂರಕ್ಷಕಗಳನ್ನು ಹಾಕಿರುವುದಿಲ್ಲ. ಈ ಎರಡು ಕಾರಣದಿಂದಾಗಿ ಟೆಟ್ರಾ ಪ್ಯಾಕ್ ನ ಹಾಲು ತುಂಬಾ ಶುದ್ಧ ಮತ್ತು ಮಕ್ಕಳಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಈ ಹಾಲು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು.



Click it and Unblock the Notifications
