For Quick Alerts
ALLOW NOTIFICATIONS  
For Daily Alerts

ಪುರುಷ ಜನನಾಂಗ ಗಾತ್ರವನ್ನು ವೃದ್ಧಿಸುವ ಮನೆಮದ್ದುಗಳು-100% ಕೆಲಸ ಮಾಡುತ್ತವೆ!

|

ಮಹಿಳೆಯರಿಗೆ ತಮ್ಮ ಸ್ತನಗಳ ಗಾತ್ರ ದೊಡ್ಡವು ಮತ್ತು ಆಕರ್ಷಕವಾಗಿರಬೇಕೆಂಬ ಬಯಕೆ ಇದ್ದರೆ ಪುರುಷರಿಗೆ ತಮ್ಮ ಜನನಾಂಗದ ಗಾತ್ರ ದೊಡ್ಡದಿರಬೇಕು ಎಂಬ ಬಯಕೆ ಇರುತ್ತದೆ. ಆದರೆ ಶಸ್ತ್ರಚಿಕಿತ್ಸೆಗೂ ಹೊರತಾಗಿ ಜನನಾಂಗದ ಗಾತ್ರವನ್ನು ಹೆಚ್ಚಿಸಲು ಸಾಧ್ಯವೇ? ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಜನನಾಂಗದ ಗಾತ್ರವನ್ನು ನೈಸರ್ಗಿಕವಾಗಿ ಕೆಲವು ಮನೆಮದ್ದುಗಳು ವೃದ್ದಿಸುತ್ತವೆ. ಇಂದು ಮಾರುಕಟ್ಟೆಯಲ್ಲಿ ಈ ಕೆಲಸವನ್ನು ಮಾಡುವ ಹಲವಾರು ಔಷಧಿಗಳು, ಉಪಕರಣಗಳು, ಹೆಚ್ಚುವರಿ ಆಹಾರ-ಔಷಧಿಗಳು, ಜನನಾಂಗಕ್ಕೆ ಅಂಟಿಸಬಹುದಾದ ಪಟ್ಟಿಗಳು ಹಾಗೂ ಶಸ್ತ್ರಚಿಕಿತ್ಸೆಗಳು ಈಗಿರುವ ಗಾತ್ರವನ್ನು ಕೆಲವು ಇಂಚುಗಳಷ್ಟು ಹೆಚ್ಚಿಸುವುದಾಗಿ ಕೊಚ್ಚಿಕೊಳ್ಳುತ್ತವೆ.

ಆದರೆ ಜನನಾಂಗದ ಗಾತ್ರವನ್ನು ಹೆಚ್ಚಿಸಲು ನೈಸರ್ಗಿಕ ವಿಧಾನಗಳಿಗಿಂತ ಉತ್ತಮವಾದುದು ಇನ್ನಾವುದೂ ಇಲ್ಲ! ಇಂದಿನ ಲೇಖನದಲ್ಲಿ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವ ಕೆಲವು ಮನೆಮದ್ದುಗಳನ್ನು ವಿವರಿಸಲಾಗಿದೆ. ಇವುಗಳ ಸರಿಯಾದ ಸೇವನೆಯಿಂದ ಜನನಾಂಗಗಳಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಲೈಂಗಿಕ ಕ್ರಿಯೆಯನ್ನು ಪ್ರಜ್ವಲಗೊಳಿಸಲು ನೆರವಾಗುತ್ತದೆ. ಸಾಮಾನ್ಯವಾಗಿ ಪುರುಷರಲ್ಲಿ ಎದುರಾಗುವ ನಿಮಿರುದೌರ್ಬಲ್ಯ ಹಾಗೂ ಜನನಾಂಗದ ಇತರ ತೊಂದರೆಗಳನ್ನು ಈ ನೈಸರ್ಗಿಕ ಮೂಲಿಕೆಗಳ ಬಳಕೆಯಿಂದ ಉತ್ತಮ ಪರಿಹಾರ ಕಂಡುಕೊಳ್ಳಬಹುದು.

ಈ ಮನೆಮದ್ದುಗಳ ಬಳಕೆಯಿಂದ ಜನನಾಂಗದ ಗಾತ್ರ ಹೆಚ್ಚುವುದು ಮಾತ್ರವಲ್ಲ, ಲೈಂಗಿಕ ಶಕ್ತಿಯೂ ಉತ್ತಮಗೊಳ್ಳುತ್ತದೆ. ಈ ತೊಂದರೆ ಇರುವ ವ್ಯಕ್ತಿಗಳು ಈಗಾಗಲೇ ಮಾತ್ರೆಗಳು, ಪಂಪುಗಳು, ಲೋಷನ್, ಕ್ರೀಮ್, ಸ್ಪ್ರೇ, ಪಟ್ಟಿ, ನೇತಾಡಿಸುವ ಉಪಕರಣಗಳು, ಕೃತಕ ಉಪಕರಣಗಳು ಹಾಗೂ ಶಸ್ತ್ರಚಿಕಿತ್ಸೆ ಮೊದಲಾದ ವಿಧಾನಗಳನ್ನು ಪ್ರಯತ್ನಿಸಿ ವಿಫಲರಾಗಿದ್ದರೆ ಈ ಮನೆಮದ್ದುಗಳು ನೆರವಿಗೆ ಬರಲಿವೆ. ಇಂದಿನ ಲೇಖನದಲ್ಲಿ ಈ ತೊಂದರೆಯನ್ನು ನೈಸರ್ಗಿಕವಾಗಿ ಸರಿಪಡಿಸುವ ಕೆಲವು ಮನೆಮದ್ದುಗಳನ್ನು ವಿವರಿಸಲಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ...

ಬೆಳ್ಳುಳ್ಳಿ

ಬೆಳ್ಳುಳ್ಳಿ

ಪುರುಷರ ಜನನಾಂಗದ ಗಾತ್ರವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಬೆಳ್ಳುಳ್ಳಿಯಲ್ಲಿ ಉತ್ತಮ ಸಾಂದ್ರತೆಯಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ನೆರವಾಗುತ್ತದೆ. ಇದು ಜನನಾಂಗಗಳಿಗೆ ರಕ್ತಪರಿಚಲನೆಯನ್ನು ಹೆಚ್ಚಿಸಿ ನಿಮಿರುತನವನ್ನು ಉತ್ತಮಗೊಳಿಸುತ್ತದೆ ಹಾಗೂ ಹೆಚ್ಚು ಕಾಲ ಉಳಿಸಿಕೊಳ್ಳಲು ನೆರವಾಗುತ್ತದೆ. ಇನ್ನು

ಬಾದಾಮಿಗಳು

ಬಾದಾಮಿಗಳು

ಬಾದಾಮಿಗಳಲ್ಲಿ ಸತು, ಸೆಲೆನಿಯಂ ಹಾಗೂ ವಿಟಮಿನ್ ಇ ಇದ್ದು ಇವು ಲೈಂಗಿಕ ಆರೋಗ್ಯವನ್ನು ವೃದ್ದಿಸುತ್ತವೆ ಹಾಗೂ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ಸತು ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನುಬಾದಾಮಿಯಲ್ಲಿ ಸತು, ಸೆಲೆನಿಯಮ್ ಮತ್ತು ವಿಟಮಿನ್ ಇ ಸಮೃದ್ಧವಾಗಿರುತ್ತವೆ. ಇವು ಲೈಂಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿಗೆ ಹೆಚ್ಚು ಸಹಾಯಕವಾಗಿರುತ್ತದೆ. ಇದರಲ್ಲಿರುವ ಝಿಂಕ್ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.

ಈರುಳ್ಳಿ

ಈರುಳ್ಳಿ

ಕಾಮೋತ್ತೇಜಕ ಆಹಾರಗಳಲ್ಲಿ ನೀರುಳ್ಳಿ ಪ್ರಮುಖವಾಗಿದ್ದು ಹಸಿಯಾಗಿ ಸೇವಿಸುವ ಮೂಲಕ ಲೈಂಗಿಕ ಶಕ್ತಿ ಮತ್ತು ಜನನಾಂಗಗಳ ದೃಢತೆಗಳನ್ನು ಹೆಚ್ಚಿಸುತ್ತದೆ. ಪುರುಷರ ಜನನಾಂಗದ ಗಾತ್ರವನ್ನು ಹೆಚ್ಚಿಸಲು ನೀರುಳ್ಳಿ ಒಂದು ಅತ್ಯುತ್ತಮವಾದ ಆಹಾರವಾಗಿದೆ.

ಕ್ಯಾರೆಟ್

ಕ್ಯಾರೆಟ್

ಪುರುಷರ ಸಂತಾನಶಕ್ತಿಯನ್ನು ಉತ್ತಮಗೊಳಿಸಲು ಕ್ಯಾರೆಟ್ ಸಹಾ ಉತ್ತಮವಾದ ಆಹಾರವಾಗಿದೆ. ವಿಶೇಷವಾಗಿ ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಮೂಲಕ ವೀರ್ಯಾಣುಗಳು ಅಂಡಾಣುವಿನತ್ತ ಸಾಗಲು ಹೆಚ್ಚು ಕ್ಷಮತೆ ಪಡೆಯುತ್ತವೆ ಹಾಗೂ ಗರ್ಭಧಾರಣೆಯ ಸಂಭವ ಹೆಚ್ಚುತ್ತದೆ.

ಒಮೆಗಾ-3 ಕೊಬ್ಬಿನ ಆಮ್ಲಯುಕ್ತ ಆಹಾರಗಳು

ಒಮೆಗಾ-3 ಕೊಬ್ಬಿನ ಆಮ್ಲಯುಕ್ತ ಆಹಾರಗಳು

ಈ ಪೋಷಕಾಂಶವಿರುವ ಆಹಾರಗಳು ನೈಸರ್ಗಿಕವಾಗಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ವಿಶೇಷವಾಗಿ ಜನನಾಂಗಗಳಿಗೆ ಹೆಚ್ಚಿನ ರಕ್ತವನ್ನು ಪೂರೈಸುವ ಮೂಲಕ ಹೆಚ್ಚಿನ ಆಮ್ಲಜನಕ ಪಡೆಯಲು ಸಾಧ್ಯವಾಗುತ್ತದೆ.

ದಾಳಿಂಬೆ ರಸ

ದಾಳಿಂಬೆ ರಸ

ತಾಜಾ ದಾಳಿಂಬೆ ಹಣ್ಣಿನಿಂದ ಹಿಂಡಿ ತೆಗೆದ ರಸದ ಸೇವನೆಯಿಂದಲೂ ಪುರುಷರ ಜನನಾಂಗದ ಗಾತ್ರ ಹೆಚ್ಚಲು ನೆರವಾಗುತ್ತದೆ. ಜನನಾಂಗದಲ್ಲಿ ಹೆಚ್ಚಿನ ರಕ್ತಪರಿಚಲನೆ ನೀಡುವ ಮೂಲಕ ಲೈಂಗಿಕ ಕೂಟಕ್ಕೆ ಸದಾ ಸಿದ್ದವಾಗಿರಲು ನೆರವಾಗುತ್ತದೆ. ಇನ್ನುದಾಳಿಂಬೆಯು ತನ್ನಲ್ಲಿರುವ ಆಂಟಿಆಕ್ಸಿಡೆಂಟ್ ಕಾರಣವಾಗಿ ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ದಾಳಿಂಬೆಯನ್ನು ಸೇವಿಸುವುದರಿಂದ ನಿಮಿರುವಿಕೆಯ ದೋಷವನ್ನು ಸರಿಪಡಿಸಿಕೊಳ್ಳಬಹುದು ಮತ್ತು ನಿಮ್ಮ ಶಿಶ್ನವನ್ನು ಗಟ್ಟಿಗೊಳಿಸಬಹುದು. ದಾಳಿಂಬೆಯು ರಕ್ತವನ್ನು ಶುದ್ಧಿಗೊಳಿಸುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ. ಜೊತೆಗೆ ಇದು ಅನಿಮಿಯಾಗೂ ಸಹ ಒಳ್ಳೆಯದು.

ದಾಳಿಂಬೆ ರಸಕೊರಿಯನ್ ಕೆಂಪು ಜಿನ್ಸೆಂಗ್

ದಾಳಿಂಬೆ ರಸಕೊರಿಯನ್ ಕೆಂಪು ಜಿನ್ಸೆಂಗ್

ಜಿನ್ಸೆಂಗ್ ಎಂಬ ಬೇರು ಹಸಿಶುಂಠಿಯಂತೆಯೇ ಕಾಣುತ್ತದೆ ಹಾಗೂ ಇದರ ರಸದ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚಿಸಲು ಹಾಗೂ ಸುಸ್ತು ಕಡಿಮೆಯಾಗಿಸಲು ನೆರವಾಗುತ್ತದೆ. ಕೊರಿಯನ್ ರೆಡ್ ಜಿನ್ಸೆಂಗ್ ಎಂಬ ಮೂಲಿಕೆ ಈ ನಿಟ್ಟಿನಲ್ಲಿ ಉತ್ತಮ ಪರಿಹಾರ ಒದಗಿಸುತ್ತದೆ.

ಎಲ್-ಆರ್ಜಿನೈನ್ ಹೆಚ್ಚುವರಿ ಆಹಾರಗಳು

ಎಲ್-ಆರ್ಜಿನೈನ್ ಹೆಚ್ಚುವರಿ ಆಹಾರಗಳು

ಎಲ್ - ಆರ್ಜಿನೈನ್ ಎಂಬುದೊಂದು ಅಮೈನೋ ಆಮ್ಲವಾಗಿದ್ದು ಪುರುಷ ಜನನಾಂಗದ ಗಾತ್ರದ ಹೆಚ್ಚಳಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಇದು ರಕ್ತದಲ್ಲಿ ನೈಟ್ರಿಕ್ ಆಕ್ಸೈಡ್ ಮಟವನ್ನು ಹೆಚ್ಚಿಸುತ್ತದೆ ಹಾಗೂ ಈ ರಕ್ತ ಜನನಾಂಗಗಳಿಗೆ ತಲುಪಿದಾಗ ಸಾಮಾನ್ಯಕ್ಕಿಂತಲೂ ಹೆಚ್ಚು ನಿಮಿರುತನವನ್ನು ಪಡೆಯುತ್ತದೆ.

ಹಸಿಶುಂಠಿ

ಹಸಿಶುಂಠಿ

ಹಸಿಶುಂಠಿಯಲ್ಲಿ ಪೊಟ್ಯಾಶಿಯಂ, ಮೆಗ್ನೀಶಿಯಂ ಹಾಗೂ ವಿಟಮಿನ್ ಬಿ೬ ಮತ್ತು ಮುಖ್ಯವಾಗಿ ಮ್ಯಾಂಗನೀಸ್ ಖನಿಜಗಳಿವೆ ಹಾಗೂ ಇವು ಲೈಂಗಿಕ ಶಕ್ತಿಯನ್ನು ಉತ್ತಮಗೊಳಿಸಲು ಅಗತ್ಯವಾಗಿವೆ. ಹಸಿಶುಂಠಿಯ ಸೇವನೆಯಿಂದ ನಿಮಿರುತನ ಹೆಚ್ಚಿಸುತ್ತದೆ ಹಾಗೂ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಉತ್ತಮಗೊಳ್ಳಲೂ ನೆರವಾಗುತ್ತದೆ.

ಬೋರಿಕ್ ಆಮ್ಲ

ಬೋರಿಕ್ ಆಮ್ಲ

ಬೋರಿಕ್ ಆಮ್ಲ ಪುರುರಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟಗಳನ್ನು ಹೆಚ್ಚಿಸುವ ಮೂಲಕ ಜನನಾಂಗದ ಗಾತ್ರವನ್ನು ಹೆಚ್ಚಿಸಲು ನೆರವಾಗುತ್ತದೆ.

ಸೇಬಿನ ಶಿರ್ಕಾ

ಸೇಬಿನ ಶಿರ್ಕಾ

ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸಲು ಸೇಬಿನ ಶಿರ್ಕಾವನ್ನು (Apple cider vinegar) ವರ್ಷಗಳಿಂದ ಬಳಸುತ್ತಾ ಬರಲಾಗಿದೆ. ಇದು ಪುರುಷ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ.

ಮೆಗ್ನೀಶಿಯಂ-ಸಮೃದ್ದ ಆಹಾರಗಳು

ಮೆಗ್ನೀಶಿಯಂ-ಸಮೃದ್ದ ಆಹಾರಗಳು

ಮೆಗ್ನೇಶಿಯಂ ಪ್ರಮಾಣ ಹೆಚ್ಚಿರುವ ಆಹಾರಗಳ ಸೇವನೆಯಿಂದ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಲು ನೆರವಾಗುತ್ತದೆ. ದೇಹದಲ್ಲಿ ಮೆಗ್ನೇಶಿಯಂ ಪ್ರಮಾಣ ಹೆಚ್ಚಾದಂತೆ ಪೌರುಷ ಸಂಬಂಧಿ ತೊಂದರೆಗಳೂ ಇಲ್ಲವಾಗುತ್ತವೆ. ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸಲು ಈ ಆಹಾರಗಳು ಉತ್ತಮ ಆಯ್ಕೆಯಾಗಿವೆ.

ಕೇಯ್ನ್ ಕಾಳುಮೆಣಸು

ಕೇಯ್ನ್ ಕಾಳುಮೆಣಸು

ಈ ಮೆಣಸುಗಳಲ್ಲಿ ಉತ್ತಮಪ್ರಮಾಣದ ವಿಟಮಿನ್ ಎ, ಬಿಟಮಿನ್ ಬಿ೬, ವಿಟಮಿನ್ ಸಿ, ರೈಬೋಫ್ಲೇವಿನ್, ಪೊಟ್ಯಾಶಿಯಂ ಮತ್ತು ಮ್ಯಾಂಗನೀಸ್ ಇದ್ದು ಇವು ಪುರುಷರ ನಿಮಿರುದೌರ್ಬಲ್ಯವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ವಿಟಮಿನ್ B3 ಉತ್ತಮಗೊಳಿಸುವ ಆಹಾರಗಳು

ವಿಟಮಿನ್ B3 ಉತ್ತಮಗೊಳಿಸುವ ಆಹಾರಗಳು

ನಿತ್ಯದ ಆಹಾರದಲ್ಲಿ ವಿಟಮಿನ್ ಬಿ೩ ಹೆಚ್ಚಿರುವ ಆಹಾರಗಳು ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುವ ಮೂಲಕ ನಿಮಿರುದೌರ್ಬಲ್ಯವನ್ನು ಕಡಿಮೆ ಮಾಡಬಹುದು. ಈ ಪೋಷಕಾಂಶದ ಇರುವಿಕೆಯಿಂದ ಜನನಾಂಗಗಳಿಗೆ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಪುರುಷ ಶಕ್ತಿ ಹೆಚ್ಚುತ್ತದೆ.

 Saw Palmetto

Saw Palmetto

ಇದೊಂದು ಗಿಡಮೂಲಿಕೆಯಾಧಾರಿತ ಔಷಧಿಯಾಗಿದ್ದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆ ಒದಗಿಸುತ್ತದೆ ಹಾಗೂ ನಿಮಿರು ದೌರ್ಬಲ್ಯವನ್ನು ನಿವಾರಿಸುತ್ತದೆ.

English summary

Proven home remedies for male enhancement

Much as women are on the look out for increasing their breast size, men are usually on the lookout for ways to increase the size of their penis. But is it possible to increase its size without a surgery. But believe it or not, home remedies do help with increasing the size of the penis naturally. Looking at the market today, you'll find penis pumps, extender tools, male enhancement supplements, penis patches and even surgical procedures that can add inches to your penis.
X
Desktop Bottom Promotion