Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಹಾಲು ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್: ಇದರಲ್ಲಿ ಮುಂಜಾನೆಗೆ ಯಾವುದು ಒಳ್ಳೆಯದು?
ರಾತ್ರಿ ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವ ದೇಹಕ್ಕೆ ಬೆಳಗ್ಗೆ ಎದ್ದ ಬಳಿಕ ಮತ್ತೆ ದೈನಂದಿನ ಕೆಲಸಕಾರ್ಯಗಳನ್ನು ಮಾಡಲು ಹೆಚ್ಚಿನ ಶಕ್ತಿ ಬೇಕಾಗುವುದು. ಇದಕ್ಕಾಗಿ ಬೆಳಗ್ಗೆ ಪ್ರತಿಯೊಬ್ಬರು ಉಪಾಹಾರ ಸೇವಿಸುವರು. ಇಂಗ್ಲಿಷ್ ನಲ್ಲಿ ಇದನ್ನು ಬ್ರೇಕ್ ಫಾಸ್ಟ್ ಎಂದು ಕರೆಯುವರು. ಅಂದರೆ ರಾತ್ರಿ ಸಂಪೂರ್ಣವಾಗಿ ಉಪವಾಸವಿರುವುದನ್ನು ಬಿಡುವುದು ಎಂದು. ಆದರೆ ಬೆಳಗ್ಗಿನ ಉಪಾಹಾರಕ್ಕೆ ಏನು ತಿನ್ನಬೇಕು ಎನ್ನುವ ಗೊಂದಲವು ಹೆಚ್ಚಿನ ಜನರಲ್ಲಿ ಇರುವುದು. ಯಾಕೆಂದರೆ ಯಾವೆಲ್ಲಾ ಆಹಾರವು ನಮ್ಮ ದೇಹಕ್ಕೆ ಶಕ್ತಿ ನೀಡುವುದು ಎಂದು ತಿಳಿದಿರುವುದಿಲ್ಲ.

ಹಾಲು, ಜ್ಯೂಸ್, ವಿವಿಧ ಬಗೆಯ ತಿಂಡಿಗಳನ್ನು ತಿನ್ನಬೇಕಾಗುತ್ತದೆ. ಇದರಿಂದ ದೇಹಕ್ಕೆ ಶಕ್ತಿ ಸಿಗುವುದು. ಪೋಷಕಾಂಶಯುಕ್ತ ಆಹಾರವನ್ನು ಬೆಳಗ್ಗೆ ಸೇವನೆ ಮಾಡಿದರೆ ಅದರಿಂದ ಆ ದಿನಕ್ಕೆ ಬೇಕಾಗುವ ಶಕ್ತಿಯು ದೇಹಕ್ಕೆ ದೊರಕುವುದು. ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ ಹಣ್ಣಿನ ಜ್ಯೂಸ್ ಮತ್ತು ಹಾಲಿನೊಂದಿಗೆ ದಿನವನ್ನು ಆರಂಭಿಸಬಹುದೇ? ಈ ಲೇಖನದಲ್ಲಿ ಈ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

ಕಿತ್ತಳೆ ಹಣ್ಣಿನ ಜ್ಯೂಸ್
ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ನಮ್ಮ ದೇಹಕ್ಕೆ ಯಾವುದೇ ಕಾಯಿಲೆಗಳು ಭಾದಿಸದಂತೆ ತಡೆಯುವುದು. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವಂತಹ ಕಿತ್ತಳೆ ಹಣ್ಣಿನ ಜ್ಯೂಸ್ ದೇಹವನ್ನು ವಾಯು ಮಾಲಿನ್ಯ, ಹಾನಿಕಾರಕ ಯುವಿ ಕಿರಣಗಳು ಮತ್ತು ಅಪಾಯಕಾರಿ ವಾತಾವರಣದ ಕಲ್ಮಷಗಳಿಂದ ಕಾಪಾಡುವುದು. ಒಂದು ಲೋಟ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿದರೆ ಅದು ಆ ದಿನಕ್ಕೆ ಬೇಕಾಗಿರುವ ವಿಟಮಿನ್ ಸಿ ಒದಗಿಸಿಕೊಡುವುದು.

ತೊಂದರೆಗಳು
ಕಿತ್ತಳೆ ಹಣ್ಣಿನ ಜ್ಯೂಸ್ ಪ್ಯಾಕ್ ಗಳಲ್ಲಿ ಬರುವುದು. ಇದರಲ್ಲಿ ಹೆಚ್ಚಿನ ಅಡಗಿರುವಂತಹ ಸಕ್ಕರೆಯು ಇರುವುದು. ನಾವು ತಾಜಾ ಜ್ಯೂಸ್ ನ ಬಗ್ಗೆ ಮಾತನಾಡಿದರೆ ಆಗ ಅದರ ಹೆಚ್ಚಿನ ಪೋಷಕಾಂಶಗಳ ಭಾಗವನ್ನು ನಾವು ತೆಗೆದುಹಾಕುತ್ತೇವೆ. ಇದರಿಂದ ನಾವು ತಾಜಾ ಹಣ್ಣಿನ ಜ್ಯೂಸ್ ಎಂದು ಕುಡಿದರೂ ಇದರಲ್ಲಿ ಇರುವುದು ನೀರು ಮಾತ್ರ. ನೀವು ಮಾರುಕಟ್ಟೆಯಿಂದ ಕಿತ್ತಳೆ ಹಣ್ಣಿನ ಜ್ಯೂಸ್ ಖರೀದಿ ಮಾಡಿದರೆ ಆಗ ಅದರಲ್ಲಿ ರುಚಿಗೆ ಬೇಕಾಗುವ ವಸ್ತುವನ್ನು ಹಾಕಿರಬಹುದು. ಯಾಕೆಂದರೆ ಕಿತ್ತಳೆ ಹಣ್ಣು ಸ್ವಲ್ಪ ಹುಳಿ ಹಾಗೂ ಕಹಿಯಾಗಿರುವುದು. ಕಿತ್ತಳೆ ಜ್ಯೂಸ್ ದಂತಕವಚಕ್ಕೆ ತುಂಬಾ ಹಾನಿಕಾರ ಮತ್ತು ಇದು ಶಾಶ್ವತವಾಗಿ ಅದನ್ನು ತೆಗೆದುಹಾಕಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಹಾಲು
ನೈಸರ್ಗಿಕದತ್ತವಾಗಿರುವ ಕ್ಯಾಲ್ಸಿಯಂ ಹೊಂದಿರುವ ಹಾಲು ಹಲವಾರು ರೀತಿಯಿಂದ ನಮ್ಮ ದೇಹಕ್ಕೆ ನೆರವಾಗುವುದು ಎಂದು ಅಧ್ಯಯನಗಳು ಹೇಳಿವೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ಕ್ಯಾಲ್ಸಿಯಂನೊಂದಿಗೆ ಪ್ರೋಟೀನ್, ವಿಟಮಿನ್ ಬಿ-12, ಆರೋಗ್ಯಕಾರಿ ಕೊಬ್ಬು ಸಹಿತ ಹಲವಾರು ಪೋಷಕಾಂಶಗಳು ಇವೆ. ಹಾಲಿನಲ್ಲಿ ಇರುವಂತಹ ಪೋಷಕಾಂಶಗಳಿಂದಾಗಿ ಇದನ್ನು ಒಂದು ಸಂಪೂರ್ಣ ಊಟವೆಂದು ಪರಿಗಣಿಸಲಾಗಿದೆ.

ತೊಂದರೆಗಳು
ಹಾಲಿನಲ್ಲಿ ಪರಿಷ್ಕರಿಸಿದ ಕೊಬ್ಬು ಇರುವ ಕಾರಣದಿಂದಾಗಿ ಇದು ಹೃದಯದ ಕಾಯಿಲೆ ಮತ್ತು ಬೊಜ್ಜಿಗೆ ಕಾರಣವಾಗುವುದು. ಇದರ ಹೊರತಾಗಿ ಹೆಚ್ಚು ಹಾಲು ಪಡೆಯಬೇಕೆನ್ನುವ ದೃಷ್ಟಿಯಿಂದ ಗೋವುಗಳಿಗೆ ಹಾರ್ಮೋನು ಇಂಜೆಕ್ಷನ್ ನೀಡುವ ಕಾರಣದಿಂದ ಇದು ಕೂಡ ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ನೀವು ಸಾವಯವವಾಗಿರುವಂತಹ ಹಾಲನ್ನು ಸೇವಿಸುವ ಬಗ್ಗೆ ದೃಢಪಡಿಸಿಕೊಳ್ಳಿ. ಅತಿಯಾಗಿ ಹಾಲು ಸೇವಿಸಿದರೆ ಇದರಿಂದ ನಿಮ್ಮ ದೇಹದ ಮೇಲೆ ಅಡ್ಡಪರಿಣಾಮವಾಗಬಹುದು.

ಕಿತ್ತಳೆ ಹಣ್ಣು vs ಹಾಲು
ಈ ಎರಡರ ಮಧ್ಯೆ ಹಾಲು ಮೇಲುಗೈ ಪಡೆಯುತ್ತದೆ. ಮೊದಲನೇಯದಾಗಿ, ಹಾಲಿನಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಇದೆ ಮತ್ತು ಇದು ಹಲ್ಲುಗಳನ್ನು ಬಲಗೊಳಿಸುವುದು. ಕಿತ್ತಳೆ ಹಣ್ಣಿನ ಜ್ಯೂಸ್ ಮೇಲೆ ಹೇಳಿರುವಂತೆ ದಂತಕವಚಕ್ಕೆ ಹಾನಿಯುಂಟು ಮಾಡುವುದು. ಹಾಲಿನಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್ ಗಿಂತ ಹೆಚ್ಚಿನ ಪ್ರೋಟೀನ್ ಇರುವ ಕಾರಣದಿಂದಾಗಿ ಇದು ಹೆಚ್ಚು ತೃಪ್ತಿ ನೀಡುವುದು. ಆರೋಗ್ಯಕಾರಿ ಪ್ರೋಟೀನ್ ನಿಂದಾಗಿ ನೀವು ದಿನವಿಡಿ ಅನಾರೋಗ್ಯಕರ ಆಹಾರ ಸೇವನೆ ಮಾಡುವುದು ತಪ್ಪುವುದು. ಎಂಟು ಗಂಟೆಗಳ ಉಪವಾಸ ಬಿಡಲು ಕಿತ್ತಳ ಕ್ಯೂಸ್ ಗಿಂತ ಹಾಲು ತುಂಬಾ ಒಳ್ಳೆಯದು. ಕಿತ್ತಳೆ ಹಣ್ಣಿನ ಜ್ಯೂಸ್ ನ್ನು ನೀವು ಬೇರೆ ಆಹಾರದೊಂದಿಗೆ ಸೇವಿಸುವ ಕಾರಣದಿಂದ ಇದು ಅಷ್ಟು ಕೆಟ್ಟ ಆಯ್ಕೆಯಲ್ಲ. ಆರೋಗ್ಯಕಾರಿ ಉಪಾಹಾರದೊಂದಿಗೆ ನೀವು ಕಿತ್ತಳೆ ಹಣ್ಣಿನ ಜ್ಯೂಸ್ ಮತ್ತು ಒಂದರ್ಧ ಗಂಟೆ ಬಿಟ್ಟು ಹಾಲನ್ನು ಕುಡಿದರೆ ಅದರಿಂದ ನಿಮಗೆ ಒಳ್ಳೆಯ ಪೋಷಕಾಂಶಗಳು ಲಭ್ಯವಾಗುವುದು.



Click it and Unblock the Notifications