Latest Updates
-
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ
ಗೊರಕೆಯ ಕಿರಿಕಿರಿಗೆ, ಇಲ್ಲಿದೆ ಪವರ್ ಫುಲ್ ಮನೆ ಔಷಧಿಗಳು
ಗೊರಕೆಯ ತೊಂದರೆ ಇಂದು ನಿನ್ನೆಯದಲ್ಲ, ಅನಾದಿಕಾಲದಿಂದಲೂ ಇದೆ. ಕುಂಭಕರ್ಣನ ಗೊರಕೆ ಮೈಲುಗಟ್ಟಲೆ ದೂರ ಕೇಳಿಸುತ್ತಿತ್ತು ಎಂದು ರಾಮಾಯಣದಲ್ಲಿಯೇ ಹೇಳಲಾಗಿದೆ. ಒಬ್ಬರ ಸುಖನಿದ್ದೆಗೆ ಕಾರಣವಾಗುವ ಗೊರಕೆ ಇನ್ನೊಬ್ಬರ ನಿದ್ದೆಯನ್ನು ಕೆಡಿಸಬಲ್ಲುದು. ಅಷ್ಟೇ ಏಕೆ, ಗೊರಕೆಯನ್ನೇ ನೆಪವಾಗಿಸಿ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೇಳಿಕೊಂಡು ಬರುವ ಮಹಿಳೆಯರ ಸಂಖ್ಯೆಯೂ ದೊಡ್ಡದೇ..!
ವೈದ್ಯಕೀಯ ಸಮೀಕ್ಷೆಯ ಪ್ರಕಾರ ಶೇಖಡಾ ಐವತ್ತರಷ್ಟು ವಯಸ್ಕರು ಗೊರಕೆ ಹೊಡೆಯುತ್ತಾರೆ. ಆದರೆ ಇದರ ಪ್ರಮಾಣ ಹೆಚ್ಚು ಕಡಿಮೆ ಇರುತ್ತದೆ. ಆದರೆ ಕೆಲವರ ಗೊರಕೆಯಂತೂ ಬಸ್ಸಿನ ಇಂಜಿನ್ನಿನ ಶಬ್ದಕ್ಕಿಂತಲೂ ಭೀಕರವಾಗಿದ್ದು, ಪಕ್ಕದಲ್ಲಿ ಮಲಗಿದ್ದವರಿಗೂ ಇದರಿಂದ ಕಿರಿಕಿರಿ ಬಂದು ಬಿಡುತ್ತದೆ.
ಸಾಮಾನ್ಯವಾಗಿ ನಮ್ಮ ಮೂಗಿನ ಹಿಂದೆ ಮತ್ತು ಗಂಟಲ ಮೇಲ್ಭಾಗದ ರಚನೆಗಳು ತೆಳುವಾದ ಪಟ್ಟಿಯಂತಿರುತ್ತವೆ. ಎಚ್ಚರಿದ್ದಷ್ಟೂ ಹೊತ್ತು ಇವು ಸೆಳೆತದಲ್ಲಿದ್ದು ವಾಯುಮಾರ್ಗವನ್ನು ಸರಾಗವಾಗಿರಿಸಲು ನೆರವಾಗುತ್ತವೆ. ಗೊರಕೆ ಹೊಡೆಯೋದನ್ನ ನಿಲ್ಲಿಸೋದು ಹೇಗೆ? ಆದರೆ ನಿದ್ದೆ ಬಂದ ಬಳಿಕ ಈ ರಚನೆಗಳು ನಿಯಂತ್ರಣಗಳನ್ನು ಕಳೆದುಕೊಂಡು ಸಡಿಲವಾಗುತ್ತದೆ. ಉಸಿರಾಟದ ಗಾಳಿ ಈ ಪಟ್ಟಿಗಳನ್ನು ಹಾದು ಹೋಗುವಾಗ ಸಡಿಲವಾಗಿದ್ದ ಇವು ಕಂಪಿಸುತ್ತವೆ. ಇದೇ ಗೊರಕೆ! ಹಾಗಾದರೆ ಈ ಕರ್ಕಶ ಧ್ವನಿಯ ಗೊರಕೆಯನ್ನು ನಿಯಂತ್ರಿಸವುದು ಹೇಗಪ್ಪಾ ಎಂದು ಆಲೋಚಿಸುತ್ತಿರುವಿರಾ? ಚಿಂತಿಸದಿರಿ, ಅದಕ್ಕೆಂದೇ ನಾವು ನೀಡಿರುವ ಕೆಲವೊಂದು ಸೂಕ್ತ ಮನೆಮದ್ದುಗಳನ್ನು ಪ್ರಯತ್ನಿಸಿ, ಸೂಕ್ತ ಫಲಿತಾಂಶ ಪಡೆಯಿರಿ...

ಅರಿಶಿನ
ಅರಿಶಿನದಲ್ಲಿ ಪ್ರತಿಜೀವಕ ಗುಣಗಳಿದ್ದು ದೇಹಕ್ಕೆ ಇತರ ರೀತಿಯಲ್ಲಿ ಉಪಕಾರಿಯಾಗಿರುವಂತೆಯೇ ಗೊರಕೆಗೂ ಉತ್ತಮವಾಗಿದೆ. ಇದು ಮೂಗಿನ ಹೊಳ್ಳೆಗಳಲ್ಲಿ ತುಂಬಿಕೊಂಡಿರುವ ಕಫ ಮತ್ತು ಕಲ್ಮಶಗಳನ್ನು ನೀರಾಗಿಸಿ ನಿವಾರಿಸಲು ನೆರವಾಗುತ್ತದೆ. ಗೊರಕೆಗೆ ಗಂಟಲ ಮೇಲ್ಭಾಗ ಮತ್ತು ಮೂಗಿನ ಹಿಂದೆ ಕಟ್ಟಿಕೊಂಡಿರುವ ಕಫ ಪ್ರಮುಖ ಕಾರಣವಾಗಿದೆ. ಇದನ್ನು ನಿವಾರಿಸಲು ಅರಿಶಿನ ಒಂದು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಒಂದು ಲೋಟ ಬಿಸಿಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನ ಕದಡಿ ಕುಡಿದು ಮಲಗಿ. ನಿಧಾನವಾಗಿ ಮೂಗು ಕಟ್ಟಿಕೊಂಡಿದ್ದುದು ತೆರೆದಂತೆ ಗೊರಕೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

ಬೆಳ್ಳುಳ್ಳಿ
ಒಂದು ವೇಳೆ ಕುಹರ (ಸೈನಸ್) ದಲ್ಲಿ (ಕುಹರ-ಮೂಗಿನ ಹಿಂಭಾಗ ಮತ್ತು ಹಣೆಯ ನಟ್ಟ ನಡುವಣ ಟೊಳ್ಳು ಭಾಗ) ಸೋಂಕು ಉಂಟಾಗಿರುವ ಪರಿಣಾಮವಾಗಿ ತಲೆನೋವು ಮತ್ತು ನಿದ್ದೆಯಲ್ಲಿ ಗೊರಕೆ ಕಂಡುಬಂದರೆ ಇದಕ್ಕೆ ಬೆಳ್ಳುಳ್ಳಿ ಉತ್ತಮ ಪರಿಹಾರವಾಗಿದೆ. ಇದು ಈ ಸೋಂಕನ್ನು ಕಡಿಮೆ ಮಾಡುತ್ತದೆ ಹಾಗೂ ಮೂಗಿನ ಹಿಂಭಾಗದಲ್ಲಿ ಕಫ ಕಟ್ಟಿಕೊಂಡಿರುವುದನ್ನು ನಿವಾರಿಸುತ್ತದೆ. ಇದಕ್ಕಾಗಿ ಕೆಲವು ಹಸಿಬೆಳ್ಳುಳ್ಳಿಗಳನ್ನು ರಾತ್ರಿಯ ಊಟದ ಅನ್ನದೊಡನೆ ಕಲಸಿ ಸೇವಿಸಿ.

ಆಲಿವ್ ಎಣ್ಣೆ
ಗೊರಕೆಯನ್ನು ಕಡಿಮೆಗೊಳಿಸಲು ಆಲಿವ್ ಎಣ್ಣೆ ಸಹಾ ಉತ್ತಮ ಆಯ್ಕೆಯಾಗಿದೆ. ಇದರ ಉರಿಯೂತ ನಿವಾರಕ ಗುಣ ವಾಯುಮಾರ್ಗದ ಸೋಂಕನ್ನು ಕಡಿಮೆಗೊಳಿಸಿ ಸೆಳೆತವನ್ನು ಹೆಚ್ಚಿಸುತ್ತದೆ. ಇದು ನಿದ್ದೆಯ ಸಮಯದಲ್ಲಿ ತೀರಾ ಜೋಲುಬೀಳುವುದನ್ನು ತಪ್ಪಿಸಿ ಹೆಚ್ಚಿನ ಕಂಪನವಾಗದಂತೆ ತಡೆಯುತ್ತದೆ. ಪರಿಣಾಮವಾಗಿ ಗೊರಕೆ ಅತೀವವಾಗಿ ಕಡಿಮೆಯಾಗುತ್ತದೆ. ಆಲಿವ್ ಎಣ್ಣೆಯನ್ನು ನಿತ್ಯದ ಅಡುಗೆ ಮತ್ತು ಚಪಾತಿಗಳಿಗೆ ಸವರಿಕೊಂಡು ಬಳಸಲು ಪ್ರಾರಂಭಿಸಿ. ಉತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ಸಮಪ್ರಮಾಣದಲ್ಲಿ ಆಲಿವ್ ಎಣ್ಣೆ ಮತ್ತು ಜೇನುತುಪ್ಪವನ್ನು ಸೇರಿಸಿ ದಿನದ ಅಂತಿಮ ಆಹಾರವಾಗಿ ಸೇವಿಸಿ ಮಲಗಿ. ಎರಡು ಅಥವಾ ಮೂರು ತೊಟ್ಟು ಆಲಿವ್ ಎಣ್ಣೆಯನ್ನು ನೇರವಾಗಿ ನಾಲಿಗೆಯ ಹಿಂಭಾಗಕ್ಕೆ ಹಾಕಿ ಮಲಗುವುದರಿಂದಲೂ ಉತ್ತಮ ಪರಿಹಾರ ಕಂಡುಬರುತ್ತದೆ.

ಏಲಕ್ಕಿ
ಏಲಕ್ಕಿಯ ಪರಿಮಳವನ್ನು ಹೀರುವುದರಿಂದ ಮೂಗಿನ ಹೊಳ್ಳೆ ಕಟ್ಟಿಕೊಂಡಿರುವುದು, ಉಸಿರಾಟವನ್ನು ಸರಾಗಗೊಳಿಸುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚ ಏಲಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ರಾತ್ರಿ ಮಲಗುವ ಮುನ್ನ ಗಟಗಟನೇ ಕುಡಿದು ಮಲಗಿ.

ಜೇನು
ಜೇನು ಗಂಟಲ ಒಳಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಲು ಮತ್ತು ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದು ಗೊರಕೆಯನ್ನು ಕಡಿಮೆಯಾಗಿಸಲು ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಒಂದು ದೊಡ್ಡಚಮಚ ಜೇನನ್ನು ಸೇರಿಸಿ ಮಲಗುವ ಮುನ್ನ ಕುಡಿಯಿರಿ.

ಸೋಯಾ ಹಾಲು
ನಿಮ್ಮ ನಿತ್ಯದ ಆಹಾರದಲ್ಲಿ ಹಸುವಿನ ಹಾಲಿನ ಬದಲು ಸೋಯಾ ಅವರೆಯ ಬಳಕೆಯಿಂದ ಗೊರಕೆ ಕಡಿಮೆಯಾಗುತ್ತದೆ. ಹಸುವಿನ ಹಾಲಿನಲ್ಲಿರುವ ಒಂದು ವಿಶೇಷ ಕಿಣ್ವ ಮೂಗಿನ ಒಳಭಾಗದ ಕೊಳವೆಗಳನ್ನು ಸಂಕುಚಿಸಲು ಕಾರಣವಾಗಿದ್ದು ಇದರಿಂದ ಗೊರಕೆಯುಂಟಾಗುತ್ತಿದೆ. ಈ ಹಾಲನ್ನು ಬದಲಿಸುವ ಮೂಲಕ ಗೊರಕೆಯೂ ಕಡಿಮೆಯಾಗುತ್ತದೆ.

ಅರಿಶಿನ ಹಾಲು
ಅರಿಶಿನದಲ್ಲಿ ಪ್ರತಿಜೀವಕ ಗುಣಗಳಿದ್ದು ದೇಹಕ್ಕೆ ಇತರ ರೀತಿಯಲ್ಲಿ ಉಪಕಾರಿಯಾಗಿರುವಂತೆಯೇ ಗೊರಕೆಗೂ ಉತ್ತಮವಾಗಿದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ, ಪ್ರತಿ ದಿನ ನೀವು ಮಲಗುವ ಮುನ್ನ ಇದಕ್ಕಾಗಿ ಒಂದು ಲೋಟ ಬಿಸಿಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನ ಕದಡಿ ಕುಡಿದು ಮಲಗಿ. ನಿಧಾನವಾಗಿ ಮೂಗು ಕಟ್ಟಿಕೊಂಡಿದ್ದುದು ತೆರೆದಂತೆ ಗೊರಕೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

ಒಂದು ಪಕ್ಕಕ್ಕೆ ವಾಲಿ ಮಲಗಿ!
ಕಿವಿಮಾತುಗಳಲ್ಲಿ ಕಂಡುಬರುವ ಸಲಹೆಯಂತೆ ಗೊರಕೆಯಿಂದ ಮುಕ್ತವಾಗಲು ಒಂದು ಪಕ್ಕಕ್ಕೆ ವಾಲಿ ಮಲಗುವುದು ಉತ್ತಮವಾಗಿದೆ. ಇದೊಂದು ಸುಲಭವಾದ ಮತ್ತು ಸಫಲವಾದ ಕ್ರಮವಾಗಿದೆ.

ಧೂಮಪಾನ, ಮದ್ಯಪಾನಗಳನ್ನು ತ್ಯಜಿಸಿ
ಹೇಳುವುದು ಸುಲಭ, ಅನುಸರಿಸುವುದು ಕಷ್ಟವಾದರೂ ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವತ್ತ ಒಲವು ತೋರಿಸಿ. ಈಗಾಗಲೇ ವ್ಯಸನಿಯಾಗಿದ್ದರೆ ಇಂದು ಧೂಮಪಾನ ಮತ್ತು ಮದ್ಯಪಾನದಿಂದ ವೈಜ್ಞಾನಿಕವಾಗಿ ಹೊರಬರುವ ವಿಧಾನಗಳು ಲಭ್ಯವಿವೆ. ನಿಮ್ಮ ವೈದ್ಯರು ಮತ್ತು ವ್ಯಸನದಿಂದ ಹೊರಬರಲು ಸಲಹಾ ಕೇಂದ್ರಗಳು ನಿಮ್ಮ ನೆರವಿಗೆ ಬರುತ್ತಾರೆ. ಇವುಗಳ ಪ್ರಯೋಜನ ಪಡೆದುಕೊಳ್ಳಿ. ಈ ವ್ಯಸನಗಳಿಂದ ಹೊರಬರಲು ನಿರ್ಧರಿಸಿದ್ದೇನೆ ಎಂದು ಮುಕ್ತವಾಗಿ ನಿಮ್ಮ ಸ್ನೇಹವೃಂದದಲ್ಲಿ ಹೇಳಿಕೊಳ್ಳಿ, ಅದರಂತೆಯೇ ನಡೆದುಕೊಳ್ಳಿ. ದಿನಗಳು ಬದಲಾಗಿವೆ, ಇಂದು ಈ ವ್ಯಸನದಿಂದ ಹೊರಬರುವವರನ್ನು ಸಮಾಜ ಮುಕ್ತವಾಗಿ ಸ್ವಾಗತಿಸುತ್ತದೆ ಮತ್ತು ಸಹಕರಿಸುತ್ತದೆ. ತನ್ಮೂಲಕ ಗೊರಕೆಯೂ ಕಡಿಮೆಯಾಗಿ ನಿಮ್ಮ ಜೀವನ ಸಂತೋಷಮಯವಾಗುತ್ತದೆ.

ಸಾಧ್ಯವಾದಷ್ಟು ಹಾಲಿನ ಉತ್ಪನ್ನಗಳನ್ನು ದೂರವಿಡಿ
ನಿಮ್ಮ ಆಹಾರ ಕ್ರಮದಲ್ಲಿರುವ ಹಾಲಿನ ಉತ್ಪನ್ನಗಳನ್ನು ಆದಷ್ಟು ಕಡಿಮೆ ಮಾಡಿದರೆ ಗೊರಕೆಯ ಪ್ರಮಾಣ ಬಹಳ ಕಡಿಮೆಯಾಗುತ್ತದೆ. ನಿಮಗೆ ಅಷ್ಟು ಇಷ್ಟವಾದರೆ ಹಾಲಿನ ಉತ್ಪನ್ನಗಳನ್ನು ಸೇವಿಸಿದ ನಾಲ್ಕು ತಾಸಿನ ನಂತರ ಮಲಗುವ ಅಭ್ಯಾಸ ಮಾಡಿ.



Click it and Unblock the Notifications











