Latest Updates
-
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ನೈಸರ್ಗಿಕ ಆಹಾರಗಳು
ಹಲವಾರು ನೈಸರ್ಗಿಕ ಆಹಾರ ಪದಾರ್ಥಗಳ ಸೇವನೆಯಿಂದ ನಿಮ್ಮ ಲೈಂಗಿಕ ಪ್ರದರ್ಶನ ಹಾಗೂ ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳಬಹುದು ಎಂಬುದು ಸತ್ಯ ಸಂಗತಿಯಾಗಿದೆ. ಲೈಂಗಿಕತೆ ಎಂಬುದು ಬಹುತೇಕ ಪೋಷಕಾಂಶಗಳನ್ನು ಆಧರಿಸಿದ್ದು, ನಾವು ಸೇವಿಸುವ ಆಹಾರ ಶೈಲಿಯನ್ನು ಅವಲಂಬಿಸಿದೆ. ರೋಮ್ಯಾಂಟಿಕ್ ಆಹಾರ ಶೈಲಿ, ಅಲ್ಕೊಹಾಲ್ ಮತ್ತು ರುಚಿಕಟ್ಟಾದ ಚಾಕೋಲೇಟ್‌ಗಳ ಸೇವನೆಯನ್ನೇ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಸಾಧನಗಳೆಂದು ಬಹುತೇಕರು ತಪ್ಪಾಗಿ ತಿಳಿದುಕೊಂಡಿದ್ದಾರೆ.

ವಾಸ್ತವದಲ್ಲಿ ಕಾಮೋತ್ತೇಜನೆಯು ನಮ್ಮ ದೇಹದ ರಕ್ತ ಪರಿಚಲನೆಗೆ ನೇರವಾಗಿ ಸಂಬಂಧಿಸಿದ ವಿಷಯವಾಗಿದೆ. ಪ್ರೋಟೀನ್‌ಗಳಲ್ಲಿ ಇರುವ ಅಮಿನೊ ಆಸಿಡ್‌ಗಳು ಕಾಮೋತ್ತೇಜನಕ್ಕೆ ಬಲು ಸಹಕಾರಿಯಾಗಿವೆ. ಗ್ರಾನೊಲಾ, ಶೇಂಗಾ ಕಾಳು, ಗೋಡಂಬಿ, ಅಕ್ರೂಡ, ಹಸಿ ತರಕಾರಿಗಳು, ಬೆಳ್ಳುಳ್ಳಿ, ಗಿನ್‌ಸೆಂಗ್, ಸೊಯಾಬೀನ್ ಮತ್ತು ಕಾಳುಗಳ ಸೇವನೆಯು ಸ್ಥಿರ ಹಾಗೂ ಸಮರ್ಥ ಲೈಂಗಿಕ ಜೀವನಕ್ಕೆ ಅತ್ಯುತ್ತಮವಾಗಿವೆ. ಇವಲ್ಲದೆ ಮೆಣಸು ಹಾಗೂ ಶುಂಠಿಯ ಸೇವನೆಯಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಹಾಗೂ ನರಮಂಡಲ ಬಲಿಷ್ಠವಾಗುತ್ತದೆ. ಇದರಿಂದ ಸಹಜವಾಗಿಯೇ ಲೈಂಗಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ಲೈಂಗಿಕ ಸಾಮರ್ಥ್ಯ ವೃದ್ಧಿಗೆ ಈ ಕೆಳಗೆ ತಿಳಿಸಲಾದ ಆಹಾರ ಪದಾರ್ಥಗಳನ್ನು ಬಳಸಬಹುದು;

ಸೋಯಾ
ಆರೋಗ್ಯಕರ ಲೈಂಗಿಕ ಜೀವನಕ್ಕೆ ಸೋಯಾ ಸೇವನೆ ಅತ್ಯುತ್ತಮ ಎಂದು ಹೇಳಲಾಗಿದೆ. ಸೋಯಾ ಸೇವನೆಯಿಂದ ಮಹಿಳೆಯರಲ್ಲಿನ ಯೋನಿಯ ತೈಲ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ ಹಾಗೂ ಮೆನೊಪಾಸ್ ಸಂದರ್ಭದಲ್ಲಿನ ಉರಿಯೂತವನ್ನು ಇದು ಕಡಿಮೆ ಮಾಡುತ್ತದೆ. ಇದರಿಂದ ಸೆಕ್ಸ್‌ನ ಸಂಪೂರ್ಣ ಆನಂದವನ್ನು ಪಡೆಯಲು ಮಹಿಳೆಯರಿಗೆ ಸಾಧ್ಯವಾಗುತ್ತದೆ. ಇದರ ಸೇವನೆಯಿಂದ ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ ಕಡಿಮೆಯಾಗಿ, ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ.

ಓಟ್ಸ್
ಓಟ್ಸ್‌ನಲ್ಲಿರುವ ಎಲ್-ಆರ್ಗನೈನ್ ಅಂಶವು ಕಾಮ ಪ್ರಚೋದನೆಯನ್ನು ವೃದ್ಧಿಸುತ್ತದೆ. ಓಟ್ಸ್ ಅಲ್ಲದೆ ಎಲ್-ಆರ್ಗನೈನ್ ಅಂಶವಿರುವ ಇತರ ಆಹಾರ ಪದಾರ್ಥಗಳಾದ ಗ್ರಾನೊಲಾ, ಡ್ರೈ ಫ್ರುಟ್ಸ್, ಬೀಜಗಳು, ಡೇರಿ ಪದಾರ್ಥಗಳು ಹಾಗೂ ಮೀನುಗಳ ಸೇವನೆಯಿಂದ ಸಹ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಮೀನು
ಸೆಕ್ಸ್ ಹಾರ್ಮೋನ್‌ಗಳ ಉತ್ಪತ್ತಿಗೆ ಪ್ರಮುಖವಾಗಿ ಬೇಕಾದ ಒಮೆಗಾ-೩ ಎಂಬ ಫ್ಯಾಟಿ ಆಸಿಡ್ ಅಂಶಗಳು ಮೀನಿನಲ್ಲಿ ಹೇರಳವಾಗಿರುತ್ತವೆ. ಮ್ಯಾಕೆರಲ್, ವೈಲ್ಡ್ ಸಾಲ್ಮನ್, ಹಾಲಿಬಟ್ ಮತ್ತು ಸಾರ್ಡೈನ್ ಜಾತಿಯ ಮೀನುಗಳು, ಅಗಸೆ ಬೀಜ, ಇತರ ಕಾಳುಗಳು ಮತ್ತು ಆಲಿವ್ ಎಣ್ಣೆ, ಸೋಯಾ ಎಣ್ಣೆಗಳಲ್ಲಿ ಸಹ ಒಮೆಗಾ-೩ ಫ್ಯಾಟಿ ಆಸಿಡ್ ಇರುತ್ತದೆ. ಇವುಗಳ ಸೇವನೆಯಿಂದ ಸಹಜವಾಗಿಯೇ ಕಾಮೋತ್ತೇಜನ ಹೆಚ್ಚಳವಾಗುತ್ತದೆ.

ಶಿಂಪಿ
ರುಚಿಯಾದ ಶಿಂಪಿ ಖಾದ್ಯ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಕಾಮೋತ್ತೇಜನಕ್ಕೆ ಬೇಕಾಗುವ ಟೆಸ್ಟೊಸ್ಟಿರಾನ್, ಹಾರ್ಮೋನ್ ವೃದ್ಧಿಗೆ ಬೇಕಾದ ಸತುವಿನ ಧಾತು ಅಂಶ ಶಿಂಪಿ ಹುಳುಗಳಲ್ಲಿ ಇರುತ್ತದೆ. ಶಿಂಪಿಗಳ ಸೇವನೆಯಿಂದ ಒಟ್ಟಾರೆ ದೈಹಿಕ ಸಾಮರ್ಥ್ಯ ಹಾಗೂ ಚುರುಕುತನ ಹೆಚ್ಚಾಗುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಅಂಶವು ರಕ್ತ ಪರಿಚಲನೆ ಸುಧಾರಣೆಗೆ ಸಹಕಾರಿಯಾಗಿದೆ. ಜೊತೆಗೆ ಇದು ಸಂವೇದನೆಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಅಲ್ಲದೆ ಬೆಳ್ಳುಳ್ಳಿಯಲ್ಲಿ ಮ್ಯಾಂಗನೀಸ್, ಕ್ಯಾಲ್ಸಿಯಂ, ತಾಮ್ರ, ಫಾಸ್ಫರಸ್, ಸೆಲೆನಿಯಂ, ವಿಟಾಮಿನ್ ಬ೧, ವಿಟಾಮಿನ್ ಬಿ೬ ಮತ್ತು ವಿಟಾಮಿನ್ ಸಿ ಪೋಷಕಾಂಶಗಳು ಇರುತ್ತವೆ. ಹೀಗಾಗಿ ಬೆಳ್ಳುಳ್ಳಿಯ ಸೇವನೆಯು ಹಲವಾರು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾಗಿದೆ.

ಅವೊಕ್ಯಾಡೊ ಹಣ್ಣು
ವಿಟಾಮಿನ್ ಬಿ6 ನಿಂದ ಸಮೃದ್ಧವಾಗಿರುವ ಅವೊಕ್ಯಾಡೊ ಹಣ್ಣುಗಳ ಸೇವನೆಯಿಂದ ದೇಹದಲ್ಲಿ ಸೆರಾಟೊನಿನ್ ಅಂಶವು ಹೆಚ್ಚಾಗುತ್ತದೆ. ಇದರಲ್ಲಿನ ವಿಟಾಮಿನ್-ಇ ಅಂಶದಿಂದ ರಕ್ತ ಪರಿಚಲನೆ ಉತ್ತಮವಾಗುತ್ತದೆ ಹಾಗೂ ಟೆಸ್ಟೊಸ್ಟಿರಾನ್ ಮಟ್ಟ ಹೆಚ್ಚಾಗುತ್ತದೆ. ವಿಟಾಮಿನ್-ಇ ಅಂಶವು ಲೈಂಗಿಕ ಆರೋಗ್ಯಕ್ಕೂ ಉತ್ತಮವಾಗಿದೆ. ಇದು ವೀರ್‍ಯದ ಗುಣಮಟ್ಟ ಹಾಗೂ ಚಲನಾ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಕಾಯಿ ಮತ್ತು ಬೀಜಗಳು
ವಿವಿಧ ರೀತಿಯ ಬೀಜ ಹಾಗೂ ಕಾಯಿಗಳ ಸೇವನೆಯಿಂದ ಉತ್ತಮ ಲೈಂಗಿಕ ಆರೋಗ್ಯ ಪಡೆಯಲು ಸಾಧ್ಯವಿದೆ. ಇವುಗಳಲ್ಲಿರುವ ಸತುವಿನ ಅಂಶವು ಟೆಸ್ಟೊಸ್ಟಿರಾನ್ ಅಂಶವನ್ನು ಹೆಚ್ಚಿಸುತ್ತವೆ. ಮಹಿಳೆಯರ ಜನನಾಂಗಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಇವು ಸಹಕಾರಿಯಾಗಿವೆ.

ಮಲಗುವ ಮುನ್ನ ಬಾಳೆಹಣ್ಣು ಸೇವಿಸಿ
ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ. ಇನ್ನು ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ೧ ಹಾಗೂ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತವೆ. ಬಾಳೆಹಣ್ಣಿನಲ್ಲಿರುವ ಇನ್ನೊಂದು ಕಿಣ್ವವಾದ ಬ್ರೋಮಿಲೈನ್ ಒಂದು ನೈಸರ್ಗಿಕ ಉರಿಯೂತ ನಿವಾರಕ ವಾಗಿದ್ದು ಒಟ್ಟು ವೀರ್ಯಾಣುಗಳ ಸಂಖ್ಯೆ ಹಾಗೂ ಅದರಲ್ಲಿ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಿರುವಂತೆ ನೋಡಿಕೊಳ್ಳುತ್ತದೆ.

ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸಿ
ಕಾಫಿ ಒಂದು ಅಧ್ಯಯನದ ಪ್ರಕಾರ ಯಾರು ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುತ್ತಾರೋ ಅವರಿಗೆ ನಿಮಿರುವಿಕೆಯ ದೋಷ ಬರುವ ಸಾಧ್ಯತೆಯು ಕಾಫಿ ಸೇವಿಸದೆ ಇರುವ ಪುರುಷರಿಗೆ ಹೋಲಿಸಿದರೆ ಕಡಿಮೆ ಇರುತ್ತದೆಯಂತೆ. ಕಾಫಿಯಲ್ಲಿರುವ ಉದ್ದೀಪನಕಾರಕಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆಯಂತೆ ಹಾಗು ಆ ಮೂಲಕ ಶಿಶ್ನವನ್ನು ಸದೃಢವಾಗಿ ಇರಿಸುತ್ತವೆಯಂತೆ.



Click it and Unblock the Notifications