Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ತಕ್ಷಣವೇ ಲೈಂಗಿಕ ಸಾಮರ್ಥ್ಯ ವೃದ್ಧಿಸುವ ನೈಸರ್ಗಿಕ ಪಾನೀಯಗಳು
ಆಹಾರದಲ್ಲಿ ಹುಳಿ, ಖಾರ ಹಾಗೂ ಉಪ್ಪು ಹೇಗೆ ಇರುತ್ತದೆಯಾ ಹಾಗೆಯೇ ಜೀವನ ಕೂಡ. ಪ್ರತಿಯೊಂದು ರಸವು ಇದ್ದರೆ ಮಾತ್ರ ಜೀವನ ಸಾರ್ಥಕವಾಗುವುದು. ಇದರಲ್ಲಿ ಲೈಂಗಿಕ ರಸವು ಒಂದು. ಲೈಂಗಿಕ ಜೀವನ ಸರಿಯಾಗಿರಬೇಕಾದರೆ ಲೈಂಗಿಕ ಶಕ್ತಿಯು ಬೇಕಾಗುವುದು. ಇದರಿಂದ ಮಾತ್ರ ಲೈಂಗಿಕ ಜೀವನದಲ್ಲಿ ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಾಗುವುದು. ವಯಸ್ಸಾಗುತ್ತಾ ಹೋದಂತೆ ಮತ್ತು ಹವಾಮಾನ ಬದಲಾವಣೆಯಿಂದಲೂ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುವುದು. ಇದರಿಂದ ಲೈಂಗಿಕ ಶಕ್ತಿಯ ಮೇಲೆ ಪರಿಣಾಮ ಬೀರುವುದು.

ಪುರುಷರಲ್ಲಿ ನಿಮಿರುವಿಕೆ, ಶೀಘ್ರ ಸ್ಖಲನ ಇತ್ಯಾದಿ ಸಮಸ್ಯೆಗಳು, ಮಹಿಳೆಯರಲ್ಲಿ ಯೋನಿ ಒಣಗುವ ಸಮಸ್ಯೆಯಿಂದಾಗಿ ಲೈಂಗಿಕ ಜೀವನವು ದುಸ್ತರವಾಗಬಹುದು. ಲೈಂಗಿಕ ಜೀವನದಲ್ಲಿ ಕ್ರಿಯಾಶೀಲವಾಗಿರದೆ ಇರುವುದು ಮತ್ತು ಹಾಸಿಗೆಯಲ್ಲಿ ಕಳಪೆ ಪ್ರದರ್ಶನವು ಸ್ವಾಭಿಮಾನವನ್ನು ಕುಂದಿಸುವುದು. ನೀವು ಮತ್ತು ನಿಮ್ಮ ಸಂಗಾತಿಯು ದೈಹಿಕವಾಗಿ ಚಟುವಟಿಕೆಯಲ್ಲಿ ಇರದೇ ಇದ್ದರೆ ಅಥವಾ ಹಾಸಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಾ ಇದ್ದರೆ ಆಗ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸಲು ಇದು ಸಕಾಲವಾಗಿದೆ. ಇಂತಹ ಸಮಸ್ಯೆ ಬಗ್ಗೆ ದಂಪತಿಯು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆರೋಗ್ಯಕರ ಜೀವನಶೈಲಿ ಪಾಲಿಸಿಕೊಂಡು ಹೋಗಿ, ಕೆಲವೊಂದು ಪಾನೀಯವನ್ನು ಸೇವಿಸಿದರೆ ಅದರಿಂದ ಲೈಂಗಿಕಶಕ್ತಿಯು ವೃದ್ಧಿಸುವುದು. ಈ ಲೇಖನದಲ್ಲಿ ನೀಡಿರುವಂತಹ 15 ಪಾನೀಯಗಳು ಖಂಡಿತವಾಗಿಯೂ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸುವುದು. ಇದು ಯಾವುದು ಎಂದು ತಿಳಿಯಲು ಓದುತ್ತಾ ಹೋಗಿ....

ಅಲೋವೆರಾ ಜ್ಯೂಸ್
ಅಲೋವೆರಾ ಜ್ಯೂಸ್ ನಿಂದಾಗಿ ಟೆಸ್ಟೊಸ್ಟೆರಾನ್ ಮಟ್ಟವು ಹೆಚ್ಚಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಇದು ಪುರುಷರಲ್ಲಿ ಕಾಮಾಸಕ್ತಿ ಮತ್ತು ಲೈಂಗಿಕ ಶಕ್ತಿ ಹೆಚ್ಚಿಸುವುದು. ಅಲೋವೆರಾ ಜ್ಯೂಸ್ ನಲ್ಲಿ ಇರುವಂತಹ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಮತ್ತು ದೇಹವನ್ನು ಇದು ಶಕ್ತಿಯುತವಾಗಿಸುವುದು.

ಕಲ್ಲಂಗಡಿ ಜ್ಯೂಸ್
ಕಲ್ಲಂಗಡಿ ಜ್ಯೂಸ್ ನಲ್ಲಿ ಉನ್ನತ ಮಟ್ಟದ ಅಮಿನೊ ಆಮ್ಲವಾಗಿರುವಂತಹ ಎಲ್-ಸಿಟ್ರುಲ್ಲೈನ್ ಇದೆ. ಇದು ನಿಮಿರುವಿಕೆಯ ಶಕ್ತಿಯನ್ನು ಹೆಚ್ಚಿಸುವುದು. ಕಲ್ಲಂಗಡಿ ಹಣ್ಣು ಜನನೇಂದ್ರೀಯಕ್ಕೆ ರಕ್ತಸಂಚಾರವನ್ನು ಉತ್ತಮಪಡಿಸಿ, ನಿಮಿರುವಿಕೆಗೆ ಶಕ್ತಿ ನೀಡುವುದು.

ಸೇಬಿನ ಜ್ಯೂಸ್
ಸೇಬಿನಲ್ಲಿ ಇರುವಂತಹ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಫ್ಲಾವನಾಯ್ಡ್ ಕ್ವೆರ್ಸೆಟಿನ್ ನಿಂದಾಗಿ ಇದು ಲೈಂಗಿಕ ಶಕ್ತಿ ವೃದ್ಧಿಸಲು ಅದ್ಭುತವಾದ ಆಹಾರವಾಗಿದೆ. ಸೇಬಿನ ಜ್ಯೂಸ್ ನ್ನು ಪ್ರತಿನಿತ್ಯ ಸೇವಿಸಿದರೆ ಅದರಿಂದ ಲೈಂಗಿಕ ಶಕ್ತಿ ವೃದ್ಧಿಸುವುದು.

ಶುಂಠಿ ಜ್ಯೂಸ್
ಲೈಂಗಿಕ ಜೀವನಕ್ಕೆ ಹೆಚ್ಚಿನ ಮಸಾಲೆ ಬೇಕಿದ್ದರೆ ಶುಂಠಿ ಜ್ಯೂಸ್ ಕುಡಿಯಿರಿ. ಶುಂಠಿ ಜ್ಯೂಸ್ ನಿಮ್ಮ ಅಪಧಮನಿ ಆರೋಗ್ಯ ಕಾಪಾಡುವುದು ಮತ್ತು ದೇಹದಲ್ಲಿ ರಕ್ತಸಂಚಾರವನ್ನು ಸುಗಮಪಡಿಸುವುದು. ಲೈಂಗಿಕ ಅಸಾಮರ್ಥ್ಯ ಮತ್ತು ಶೀಘ್ರ ಸ್ಖಲನವನ್ನು ಇದು ನಿಭಾಯಿಸಿ, ಲೈಂಗಿಕ ಪ್ರದರ್ಶನ ಉತ್ತಮಪಡಿಸುವುದು.

ಹಾಲಿನೊಂದಿಗೆ ಜೇನುತುಪ್ಪ
ಜೇನುತುಪ್ಪವು ನೈಸರ್ಗಿಕ ಸಿಹಿಯಾಗಿದ್ದು, ಇದು ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸುವುದು. ಜೇನುತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ಆಗ ಲೈಂಗಿಕಾಸ್ತಿಯು ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮತ್ತು ಅಧಿಕ ಲಾಭ ನೀಡುವುದು. ಯಾಕೆಂದರೆ ಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ನಿಮಗೆ ತಕ್ಷಣ ಶಕ್ತಿ ಒದಗಿಸುವುದು.

ಬನಾನ(ಬಾಳೆಹಣ್ಣು) ಶೇಕ್
ಬಾಳೆಹಣ್ಣಿನಲ್ಲಿ ಇರುವಂತಹ ಬ್ರೊಮೆಲೈನ್ ಎನ್ನುವ ಕಿಣ್ವದಿಂದಾಗಿ ಲೈಂಗಿಕ ಶಕ್ತಿ ಮತ್ತು ಕಾಮಾಸಕ್ತಿಯು ಪರಿಣಾಮಕಾರಿಯಾಗಿ ಸುಧಾರಣೆಯಾಗುವುದು. ಬಾಳೆಹಣ್ಣಿನಲ್ಲಿ ಇರುವಂತಹ ಹೆಚ್ಚಿನ ವಿಟಮಿನ್ ಗಳು ಮತ್ತು ಖನಿಜಾಂಶಗಳು ಹೆಚ್ಚಿನ ಶಕ್ತಿ ಹಾಗೂ ಸಾಮರ್ಥ್ಯ ನೀಡಿ, ಲೈಂಗಿಕ ಹಾರ್ಮೋನುಗಳ ಬಿಡುಗಡೆಗೆ ನೆರವಾಗುವುದು.

ದಾಳಿಂಬೆ ಜ್ಯೂಸ್
ದಾಳಿಂಬೆಯಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಇದೆ. ಇದು ರಕ್ತಸಂಚಾರ ಉತ್ತಮಪಡಿಸಿ, ನಿಮಿರುವಿಕೆ ಸಮಸ್ಯೆ ಹೋಗಲಾಡಿಸುವುದು. ಒಂದು ಲೋಟ ದಾಳಿಂಬೆ ಜ್ಯೂಸ್ ನಿಂದ ನಿಮ್ಮ ಲೈಂಗಿಕ ಶಕ್ತಿಯು ನೈಸರ್ಗಿಕವಾಗಿ ಹೆಚ್ಚಾಗುವುದು.

ಕಾಫಿ
ಕಾಫಿಯು ನೈಸರ್ಗಿಕವಾಗಿ ಕಾಮಾಸಕ್ತಿ ವೃದ್ಧಿಸುವುದು ಎಂದು ಹೇಳಲಾಗುತ್ತದೆ. ಇದರಲ್ಲಿ ಇರುವಂತಹ ಕೆಫಿನ್ ಅಂಶವು ಲೈಂಗಿಕ ಶಕ್ತಿ ಹಾಗೂ ಸಾಮರ್ಥ್ಯ ನೀಡುವುದು. ಲೈಂಗಿಕ ಜೀವನ ಸುಗಮವಾಗಿಸಲು ದಿನನಿತ್ಯ ಕಾಫಿ ಸೇವಿಸಿ.

ಬೀಟ್ ರೂಟ್ ಜ್ಯೂಸ್
ಬೀಟ್ ರೂಟ್ ಜ್ಯೂಸ್ ನಲ್ಲಿ ಉನ್ನತ ಮಟ್ಟದ ನೈಟ್ರೇಟ್ ಇದ್ದು, ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಮಟ್ಟ ಹೆಚ್ಚಿಸಲು ಇದು ನೆರವಾಗುವುದು. ಇದರ ಪರಿಣಾಮವಾಗಿ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಾಗುವುದು.

ಪಾಲಕ್ ಜ್ಯೂಸ್
ಪಾಲಕ್ ನಲ್ಲಿ ಹೆಚ್ಚಿನ ಮಟ್ಟದ ಅರ್ಜಿನೈನ್ ಅಂಶವಿದೆ. ಇದನ್ನು ಸೇವಿಸಿದಾಗ ಇದು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆ ಹೊಂದುವುದು. ಇದರಿಂದ ನೈಸರ್ಗಿಕವಾಗಿ ಲೈಂಗಿಕ ಶಕ್ತಿಯು ಹೆಚ್ಚುವುದು.

ಅವಕಾಡೋ ಜ್ಯೂಸ್
ಅವಕಾಡೋದಲ್ಲಿ ಉನ್ನತ ಮಟ್ಟದ ಫಾಲಿಕ್ ಆಮ್ಲ ಮತ್ತು ವಿಟಮಿನ್ ಬಿ6 ಇದೆ. ವಿಟಮಿನ್ ಬಿ6 ಹಾರ್ಮೋನುಗಳನ್ನು ಸ್ಥಿರಗೊಳಿಸುವುದು ಮತ್ತು ಫಾಲಿಕ್ ಆಮ್ಲವು ದೇಹಕ್ಕೆ ಶಕ್ತಿ ಒದಗಿಸುವುದು.

ಚಿಯಾ ಬೀಜದ ನೀರು
ಚಿಯಾ ಬೀಜಗಳಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್, ನಾರಿನಾಂಶ ಮತ್ತು ಆರೋಗ್ಯಕಾರಿ ಕೊಬ್ಬು ಇದೆ. ದೇಹಕ್ಕೆ ಇವುಗಳು ಶಕ್ತಿ ನೀಡುವುದು. ಚಿಯಾ ಬೀಜದ ನೀರನ್ನು ಸೇವಿಸುವುದರಿಂದ ದೈಹಿಕವಾಗಿ ಚಟುವಟಿಕೆಯಿಂದ ಇರಬಹುದು ಮತ್ತು ಎಲ್ಲಾ ರೀತಿಯ ಶಕ್ತಿಯು ದೇಹಕ್ಕೆ ಸಿಗುವುದು.

ಡಾರ್ಕ್ ಚಾಕಲೇಟ್ ಶೇಕ್
ಡಾರ್ಕ್ ಚಾಕಲೇಟ್ ನಲ್ಲಿ ಇರುವಂತಹ ಥಿಯೋಬ್ರೊಮಿನ್ ಅಂಶವು ಲೈಂಗಿಕಾಸಕ್ತಿ ಹೆಚ್ಚಿಸಿ, ಲೈಂಗಿಕ ಶಕ್ತಿಯನ್ನು ಸ್ಥಿರವಾಗಿಡುವುದು. ಹಾಸಿಗೆಯಲ್ಲಿ ಉತ್ತಮ ಪ್ರದರ್ಶನಕ್ಕೆ ಒಂದು ಲೋಟ ಡಾರ್ಕ್ ಚಾಕಲೇಟ್ ಶೇಕ್ ಕುಡಿಯಿರಿ.

ಬಾದಾಮಿ ಹಾಲು
ಬಾದಾಮಿಯಲ್ಲಿರುವಂತಹ ಉನ್ನತ ಮಟ್ಟದ ಕೊಬ್ಬಿನಾಮ್ಲಗಳು ಮತ್ತು ಖನಿಜಾಂಶಗಳು ಪುರುಷರಲ್ಲಿ ಆರೋಗ್ಯಕಾರಿ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ತುಂಬಾ ಸಹಕಾರಿಯಾಗಿದೆ. ಬಾದಾಮಿ ಹಾಲು ಮಹಿಳೆಯರಲ್ಲಿ ಲೈಂಗಿಕ ಉತ್ತೇಜನ ನೀಡುವುದು.

ವೆನಿಲ್ಲಾ ಜೇನುತುಪ್ಪ ಮಾರ್ಟಿನಿ
ಜೇನುತುಪ್ಪವು ದೊಡ್ಡ ಮಟ್ಟದಲ್ಲಿ ಶಕ್ತಿ ವರ್ಧಕವಾಗಿದೆ ಮತ್ತು ಇದು ಟೆಸ್ಟೊಸ್ಟೆರಾನ್ ಉತ್ಪಾದನೆಗೆ ನೆರವಾಗುವುದು. ಜೇನುತುಪ್ಪವನ್ನು ವೆನಿಲ್ಲಾದೊಂದಿಗೆ ಸೇರಿಸಿದರೆ ಆಗ ಪುರುಷರು ಹಾಗೂ ಮಹಿಳೆಯರಲ್ಲಿ ಕಾಮೋತ್ತೇಕವಾಗುವುದು. ಇದರಿಂದ ಲೈಂಗಿಕ ಚಟುವಟಿಕೆಗಳಿಗೆ ಯಾವುದೇ ರೀತಿಯಿಂದಲೂ ಅಡ್ಡಿಯಾಗದು.



Click it and Unblock the Notifications