For Quick Alerts
ALLOW NOTIFICATIONS  
For Daily Alerts

ಮೂವತ್ತರ ಬಳಿಕ ಪುರುಷರ ದೇಹದಲ್ಲಿ ಎದುರಾಗುವ ಬದಲಾವಣೆಗಳು

By Arshad
|

ಮಾನವರ ದೇಹ ವಯಸ್ಸಿಗನುಗುಣವಾಗಿ ಬದಲಾವಣೆಗೆ ಒಳಪಡುತ್ತಾ ಸಾಗುತ್ತದೆ. ಈ ಬದಲಾವಣೆ ಮಹಿಳೆಯರಲ್ಲಿಯೂ ಪುರುಷರಲ್ಲಿಯೂ ಬೇರೆ ಬೇರೆ ತೆರನಾಗಿರುತ್ತವೆ. ಇಂದಿನ ಲೇಖನದಲ್ಲಿ ಮೂವತ್ತರ ಬಳಿಕ ಪುರುಷರ ದೇಹದಲ್ಲಿ ಎದುರಾಗುವ ಬದಲಾವಣೆಗಳ ಬಗ್ಗೆ ಅರಿಯೋಣ....ಮೂವತ್ತಾಗುತ್ತಿದ್ದಂತೆಯೇ ದೇಹದ ಮೂಳೆಗಳು ಶಿಥಿಲವಾಗಲು ಪ್ರಾರಂಭವಾಗುತ್ತವೆ.

ಸ್ನಾಯುಗಳು ಸಂಕುಚಿತಗೊಳ್ಳಲು ಹಾಗೂ ತಮ್ಮ ಸೆಳೆತವನ್ನು ಕಳೆದುಕೊಳ್ಳತೊಡಗುತ್ತವೆ. ಪುರುಷ ರಸದೂತವಾದ ಟೆಸ್ಟಾಸ್ಟೆರಾಲ್ ಪ್ರಮಾಣ ಕಡಿಮೆಯಾಗತೊಡಗುತ್ತದೆ, ಕಾಮಾಸಕ್ತಿ ಕಡಿಮೆಯಾಗತೊಡಗುತ್ತದೆ, ಜೀವರಾಸಾಯನಿಕ ಕ್ರಿಯೆ ನಿಧಾನವಾಗತೊಡಗುತ್ತದೆ. ಹಾಗಾದರೆ ಮೂವತ್ತರ ಬಳಿಕ ಏನು ಮಾಡಬೇಕು? ಮೊದಲಿಗೆ ಮೂವತ್ತಾದ ಬಳಿಕ ವೈದ್ಯರ ಬಳಿ ನಿಯಮಿತವಾಗಿ ಆರೋಗ್ಯವನ್ನು ತಪಾಸಿಸಿಕೊಳ್ಳಬೇಕು. ಈ ತಪಾಸಣೆಯ ವಿವರಗಳಿಂದ ವೈದ್ಯರಿಗೆ ಹಲವು ಮಾಹಿತಿಗಳು ಲಭ್ಯವಾಗುತ್ತವೆ.

ಪುರುಷರೇ ಕೇಳಿ ಇಲ್ಲಿ, ನಿಮಗೂ ಈ ಸಂಗತಿಗಳು ತಿಳಿದಿರಲಿ!

ಈ ಮಾಹಿತಿಗಳಿಗನುಸಾರವಾಗಿ ವೈದ್ಯರು ಕೆಲವು ಸಲಹೆ ಹಾಗೂ ಜೀವನಕ್ರಮದಲ್ಲಿ ಬದಲಾವಣೆಗಳನ್ನು ಸೂಚಿಸುತ್ತಾರೆ. ಇವುಗಳನ್ನು ತಪ್ಪದೇ ಪಾಲಿಸಬೇಕು. ಮುಂದಿನ ಕ್ರಮ ಆಹಾರ ಕ್ರಮದಲ್ಲಿ ಬದಲಾವಣೆ. ನಿಮ್ಮ ಜೀವರಾಸಾಯನಿಕ ಕ್ರಿಯೆ ನಿಧಾನಗೊಂಡಿರುವ ಕಾರಣ ಈಗ ಆಹಾರದ ಪ್ರಮಾಣವನ್ನೂ ಕೊಂಚ ಕಡಿಮೆ ಮಾಡಬೇಕು. ಇದುವರೆಗೆ ಯೌವನದ ಭರಾಟೆಯಲ್ಲಿ ಅನುಸರಿಸಿದ್ದ ಎಲ್ಲಾ ವ್ಯಸನಗಳನ್ನು, ಆರೋಗ್ಯಕ್ಕೆ ಮಾರಕವಾಗುವ ಯಾವುದೇ ಕ್ರಮವನ್ನು ಕಷ್ಟವಾದರೂ ಸರಿ, ಬಿಡಬೇಕು. ಒಂದು ನಿಯಮಿತವಾದ ವ್ಯಾಯಮಕ್ರಮವನ್ನು ಅನುಸರಿಸಬೇಕು ಹಾಗೂ ಈ ಮೂಲಕ ಮುಂದೆ ಎದುರಾಗಬಹುದಾದ ಹಲವು ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು. ಬನಿ, ಈ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ನೋಡೋಣ...

ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುವ ಸಾಧ್ಯತೆ

ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುವ ಸಾಧ್ಯತೆ

ಕೆಲವು ಪುರುಷರದಲ್ಲಿ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಈ ವಯಸ್ಸಿನಲ್ಲಿಯೇ ಆವರಿಸತೊಡಗುತ್ತದೆ. ಇದರ ಬಗ್ಗೆ ಕೆಲವು ಸೂಚನೆಗಳು ಈಗಲೇ ಚಿಕ್ಕದಾಗಿ ಕಾಣಿಸಿಕೊಳ್ಳುತ್ತವೆ. ಮೂತ್ರವಿಸರ್ಜನೆಯ ಸಮಯದಲ್ಲಿ ನೋವು, ನಿಮಿರು ದೌರ್ಬಲ್ಯ, ರಾತ್ರಿ ಹೊತ್ತು ಸತತವಾಗಿ ಮೂತ್ರವಿಸರ್ಜನೆಗೆ ಅವಸರವಾಗುವುದು ಇತ್ಯಾದಿ ಇದರ ಮುನ್ಸೂಚನೆಗಳಾಗಿವೆ. ಆದರೆ ಈ ಸೂಚನೆಗಳಿದ್ದರೆ ಪ್ರಾಸ್ಟೇಟ್ ಕ್ಯಾನ್ಸರ್ ಬಂತೇ ಬಂದು ಎಂಬ ನಿರ್ಧಾರಕ್ಕೆ ಬರುವಂತಿಲ್ಲ. ಇವು ಬೇರೆ ತೊಂದರೆಯ ಸೂಚನೆಗಳೂ ಆಗಿರಬಹುದು. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸದೇ ವೈದ್ಯರಿಂದ ತಪಾಸಣೆಗೊಳ್ಳಬೇಕು. ಒಂದು ವೇಳೆ ಇದು ನಿಜಕ್ಕೂ ಪ್ರಾಸ್ಟೇಟ್ ಕ್ಯಾನ್ಸರ್ ಆಗಿದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಕಂಡುಕೊಂಡಿರುವ ಕಾರಣದಿಂದ ಇದಕ್ಕೆ ಚಿಕಿತ್ಸೆಯೂ ಸುಲಭವಾಗುತ್ತದೆ ಹಾಗೂ ಸಂಪೂರ್ಣವಾಗಿ ಗುಣಪಡಿಸುವ ಸಾಧ್ಯತೆಯೂ ಅತಿ ಹೆಚ್ಚಾಗಿರುತ್ತದೆ.

ಪುರುಷರಲ್ಲಿ ಕಂಡುಬರುವ ‌ಮಹಾಮಾರಿ ಕ್ಯಾನ್ಸರ್‌ನ ಲಕ್ಷಣಗಳೇನು?

ಸ್ನಾಯುಗಳ ಸೆಡೆತ ಕಾಣಿಸಿಕೊಳ್ಳಬಹುದು

ಸ್ನಾಯುಗಳ ಸೆಡೆತ ಕಾಣಿಸಿಕೊಳ್ಳಬಹುದು

ಮೂವತ್ತರ ಬಳಿಕ ಪುರುಷರ ಸ್ನಾಯುಗಳು ನಿಧಾನವಾಗಿ ತಮ್ಮ ಸ್ಥಿತಿಸ್ಥಾಪಕತ್ವ ಗುಣವನ್ನು ಕಳೆದುಕೊಳ್ಳುತ್ತಾ ಸಾಗುತ್ತವೆ. ಪರಿಣಾಮವಾಗಿ ಇವು ಸಂಕುಚಿತಗೊಂಡರೆ ವಿಕಸಿತಗೊಳ್ಳಲು ಹೆಚ್ಚು ಹೊತ್ತು ಬೇಕಾಗಬಹುದು ಅಥವಾ ಸಾಧ್ಯವಾಗದೇ ಹೋಗಬಹುದು. ಆಗ ಈ ಸ್ನಾಯುಗಳ ಮೇಲಿನ ಒತ್ತಡ ಸೆಡೆತಕ್ಕೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ನಿಧಾನಗೊಳಿಸಲು ವ್ಯಾಯಾಮ ಹಾಗೂ ಯೋಗಾಭ್ಯಾಸ ಅತ್ಯುತ್ತಮ ಆಯ್ಕೆ. ದೇಹದ ಎಲ್ಲಾ ಸ್ನಾಯುಗಳು ಗರಿಷ್ಟ ಸೆಳೆತಕ್ಕೆ ಒಳಗಾಗುವ ವ್ಯಾಯಾಮ, ಯೋಗಾಭ್ಯಾಸಗಳನ್ನು ನಿತ್ಯವೂ ಅನುಸರಿಸಬೇಕು.

ಮೂಳೆಗಳ ಸಾಂದ್ರತೆ ಇಳಿಮುಖವಾಗುತ್ತದೆ

ಮೂಳೆಗಳ ಸಾಂದ್ರತೆ ಇಳಿಮುಖವಾಗುತ್ತದೆ

ಮೂವತ್ತರ ಬಳಿಕ ಮೂಳೆಗಳ ಸಾಂದ್ರತೆ ಇಳಿಮುಖವಾಗತೊಡಗುತ್ತದೆ. ಅಂದರೆ ಮೂಳೆಗಳು ಸುಲಭವಾಗಿ ತುಂಡಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಸಾಧ್ಯವಾದರೆ ಒಂದು ಬಾರಿ ಮೂಳೆಗಳ ಸಾಂದ್ರತೆಯನ್ನು ಸ್ಕ್ಯಾನ್ ಪರೀಕ್ಷೆಯ ಮೂಲಕ ಪರಿಶೀಲಿಸಿಕೊಳ್ಳಿ. ಈ ವರದಿಯನ್ನು ಪರಿಶೀಲಿಸಿದ ವೈದ್ಯರು ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಗುಳಿಗೆಗಳನ್ನು ಸಲಹೆ ಮಾಡಬಹುದು. ಒಂದು ವೇಳೆ ಸಾಂದ್ರತೆ ತೀರಾ ಕಡಿಮೆ ಇದ್ದರೆ ಇದಕ್ಕೆ ಹೆಚ್ಚಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಹಾಗೂ ಹೆಚ್ಚಿನ ಭಾರಗಳನ್ನು ಎತ್ತುವ ವ್ಯಾಯಾಮಗಳನ್ನೂ ವೈದ್ಯರು ಸೂಚಿಸಬಹುದು.

ಸೊಂಟದ ಕೊಬ್ಬು ಹೆಚ್ಚಬಹುದು

ಸೊಂಟದ ಕೊಬ್ಬು ಹೆಚ್ಚಬಹುದು

ಮೂವತ್ತರ ಬಳಿಕ ಸಾಮಾನ್ಯ ಎಲ್ಲಾ ಪುರುಷರಲ್ಲಿ ಕಾಣಿಸಿಕೊಳ್ಳುವ ಪ್ರಮುಖ ವ್ಯತ್ಯಾಸವೆಂದರೆ ಸೊಂಟದ ಸುತ್ತಳತೆ ಹೆಚ್ಚುವುದು. ಇದುವರೆಗೆ ಬಳಸಿಕೊಳ್ಳುತ್ತಿದ್ದ ಕ್ಯಾಲೋರಿಗಳ ಪ್ರಮಾಣವೂ ಕಡಿಮೆಯಾಗಿ ಇವೆಲ್ಲವೂ ಕೊಬ್ಬಾಗಿ ಪರಿವರ್ತನೆಗೊಳ್ಳುತ್ತಾ ಹೋಗುವ ಮೂಲಕ ಹೊಟ್ಟೆ ಮುಂದೆ ಬರುವುದು ಹಾಗೂ ಸೊಂಟದ ವಿಸ್ತಾರ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಇದು ಎದುರಾಗದಂತೆ ಮಾಡಲು ವ್ಯಾಯಾಮವನ್ನು ಹೆಚ್ಚಿಸುವುದು ಹಾಗೂ ಆಹಾರಕ್ರಮದಲ್ಲಿ ಬದಲಾವಣೆ ಮಾಡುವುದೊಂದೇ ಮಾರ್ಗವಾಗಿದೆ.

ನಡುವಯಸ್ಸಿನ ತುಮುಲ

ನಡುವಯಸ್ಸಿನ ತುಮುಲ

ಮೂವತ್ತರ ಬಳಿಕ ಎದುರಾಗುವ ಮಾನಸಿಕ ತುಮುಲ ದೇಹದ ಬದಲಾವಣೆಯ ಕಾರಣದಿಂದಾಗಿ ಎದುರಾಗುತ್ತದೆ. ಒಂದು ವೇಳೆ ಖಿನ್ನತೆ ಹಾಗೂ ಉದ್ವೇಗಗಳು ಹೆಚ್ಚೇ ಆಗಿದ್ದರೆ ವೈದ್ಯರನ್ನು ಭೇಟಿಯಾಗುವ ಮೂಲಕ ಮುಂದಿನ ದಿನಗಳಲ್ಲಿ ನಿಮ್ಮ ಮನಃಶಾಂತಿ ಕಸಿದುಕೊಳ್ಳುವುದರಿಂದ ತಡೆಯಬಹುದು.

ಹೃದಯದ ಕ್ಷಮತೆ ಕುಸಿಯತೊಡಗುತ್ತದೆ

ಹೃದಯದ ಕ್ಷಮತೆ ಕುಸಿಯತೊಡಗುತ್ತದೆ

ಮೂವತ್ತಕ್ಕೂ ಮೊದಲು ಓಡಿದಷ್ಟು ಓಡಲು ಈಗ ಆಗತ್ತಿಲ್ಲವೇ? ಇದಕ್ಕೆ ಪ್ರಮುಖ ಕಾರಣ ಹೃದಯದ ಕ್ಷಮತೆ ಕ್ಷೀಣಿಸತೊಡಗುವುದು. ಹಿಂದಿನ ವರ್ಷಗಳಲ್ಲಿ ಸೇವಿಸಿದ್ದ ಆಹಾರದಲ್ಲಿ ನ ಜಿಡ್ಡು ನಿಧಾನವಾಗಿ ರಕ್ತನಾಳಗಳಲ್ಲಿ ಸಂಗ್ರಹಗೊಳ್ಳುತ್ತಾ ಈಗ ಕೊಂಚ ಹೆಚ್ಚೇ ಪ್ರತಿರೋಧ ಒಡ್ಡುತ್ತಿರುವ ಕಾರಣ ಹೃದಯಕ್ಕೆ ಹೆಚ್ಚೇ ಒತ್ತಡದಿಂದ ರಕ್ತವನ್ನು ದೂಡಿಕೊಡಬೇಕಾಗುತ್ತದೆ. ಪರಿಣಾಮವವಾಗಿ ರಕ್ತದೊತ್ತಡ ಏರುತ್ತದೆ. ಈಗ ಆಹಾರದಲ್ಲಿ ಬದಲಾವಣೆ ಅಗತ್ಯ. ಆರೋಗ್ಯಕರ ಆಹಾರಗಳಿಗೆ ಒಲವು ಹಾಗೂ ಅನಾರೋಗ್ಯಕರ ಆಹಾರಗಳಿಗೆ ವಿದಾಯ ಹೇಳುವುದು ಈ ಸಮಯದ ಸೂಕ್ತ ನಿರ್ಧಾರವಾಗಿದೆ. ಕ್ಷಿಪ್ರ ಹಾಗೂ ಹೆಚ್ಚಿನ ಸೆಳೆತದ ವ್ಯಾಯಾಮಗಳು ಈಗ ಹೆಚ್ಚು ಅಗತ್ಯವಾಗಿದೆ.

ಟೆಸ್ಟೋಸ್ಟೆರಾನ್ ಕಡಿಮೆಯಾಗಬಹುದು

ಟೆಸ್ಟೋಸ್ಟೆರಾನ್ ಕಡಿಮೆಯಾಗಬಹುದು

ಮೂವತ್ತರ ಬಳಿಕ ಪುರುಷರಿಗೆ ಮೀಸಲಾದ ರಸದೂತವಾದ ಟೆಸ್ಟೋಸ್ಟೆರಾನ್ ಪ್ರಮಾಣ ಕಡಿಮೆಯಾಗತೊಡಗುತ್ತದೆ. ಇದನ್ನು ಒಂದು ಪರೀಕ್ಷೆಯಿಂದ ಖಚಿತಪಡಿಸಬಹುದು. ಒಂದು ವೇಳೆ ಕಾಮಾಸಕ್ತಿ ಅಥವಾ ನಿಮಿರುತನ ಅಗತ್ಯಕ್ಕೂ ಕಡಿಮೆಯೇ ಆಗಿದ್ದರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ವಯಸ್ಸಿಗೆ ಸಹಜವಾದ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

 ವೃಷಣಗಳ ಕ್ಯಾನ್ಸರ್ ಸಾಧ್ಯತೆ

ವೃಷಣಗಳ ಕ್ಯಾನ್ಸರ್ ಸಾಧ್ಯತೆ

ಮೂವತ್ತಾದ ಬಳಿಕ ಎದುರಾಗುವ ಇನ್ನೊಂದು ತೊಂದರೆ ಎಂದರೆ ವೃಷಣಗಳ ಕ್ಯಾನ್ಸರ್. ಒಂದು ವೇಳೆ ಒಂದು ಅಥವಾ ಎರಡೂ ವೃಷಣಗಳಲ್ಲಿ ನೋವು ಕಾಣಿಸಿಕೊಂಡರೆ ತಕ್ಷಣವೇ ತಪಾಸಣೆಗೆ ಒಳಪಡುವ ಮೂಲಕ ಈ ಭಾಗದಲ್ಲಿ ಕ್ಯಾನ್ಸರ್ ಪ್ರಾರಂಭವಾಗಿದೆಯೇ ಎಂದು ಕಂಡುಕೊಳ್ಳಬಹುದು. ಒಂದು ವೇಳೆ ಹೌದು ಎಂದಾದರೆ ಈ ವಯಸ್ಸಿನಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಪೂರ್ಣವಾಗಿ ಗುಣಹೊಂದುವ ಸಾಧ್ಯತೆಯೂ ಗರಿಷ್ಟವಾಗಿರುತ್ತದೆ.

English summary

Male health Changes After 30 In Men

To begin with, your bone density may decrease, your muscles may contract and start losing their flexibility, your testosterone levels may dip, your libido may decrease, your overall strength may take a dip, your heart begins to age, your metabolism slows down a bit and so on. What to do after 30? Well, a routine health checkup is very important as soon as your cross 30 years. Following your doctor's advice, try to embrace a healthy lifestyle.
X
Desktop Bottom Promotion