Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ನೋವು ನಿವಾರಕ-ನಿರಾಳತೆಗಾಗಿ ಜಪಾನೀಯರ- ಶಿಯಾತ್ಸು ಸ್ವ-ಮಸಾಜ್ ಪ್ರಯತ್ನಿಸಿ
ನಿಮ್ಮ ಜೀವನದಲ್ಲಿ ಹೆಚ್ಚಿನ ಶ್ರಮ ಹಾಗೂ ಮಾನಸಿಕ ಒತ್ತಡವಿದ್ದು ನಿಮಗೆ ಖಿನ್ನತೆ ಹಾಗೂ ಅತೀವ ಸುಸ್ತು ಉಂಟುಮಾಡುತ್ತಿದೆಯೇ? ಹಾಗಾದರೆ ನೀವು ಜಪಾನೀಯರ ಶಿಯಾತ್ಸು ಸ್ವ-ಮಸಾಜ್ ವಿಧಾನವನ್ನು ಅನುಸರಿಸುವುದು ಒಳ್ಳೆಯದು. ಈ ವಿಧಾನದಿಂದ ದೇಹಕ್ಕೆ ನಿರಾಳತೆ ಹಾಗೂ ನೋವಿನಿಂದ ಮುಕ್ತಿ ದೊರಕುತ್ತದೆ. ಏನಿದು ಶಿಯಾತ್ಸು? ಹೆಸರನ್ನೇ ಕೇಳಿಲ್ಲವಲ್ಲ? ಇದು ನಮಗೆ ಹೊಸ ಪದವಾಗಿದ್ದರೂ ಜಪಾನ್ ನಲ್ಲಿ ಈ ವಿಧಾನವನ್ನು ಹಿಂದಿನಿಂದಲೂ ಅನುಸರಿಸುತ್ತಾ ಬರಲಾಗಿದೆ. ಈ ವಿಧಾನ ಅತಿ ಸರಳವಾಗಿದ್ದು ನಾವೇ ನಮ್ಮ ದೇಹದ ಕೆಲವು ಭಾಗಗಳಿಗೆ, ಅಂದರೆ ಬೆರಳು, ಮೊಣಕಾಲು ಮೊದಲಾದ ಕಡೆ ಒತ್ತಡ ಮತ್ತು ಸೆಳೆತ ನೀಡುವ ಮೂಲಕ ರಕ್ತಸಂಚಾರವನ್ನು ಉತ್ತಮಗೊಳಿಸುವುದಾಗಿದೆ.
ಬೆರಳುಗಳ ಚರ್ಮದ ಅಡಿಯಲ್ಲಿರುವ ಸ್ನಾಯು ಮತ್ತು ಸಂಯೋಜಕ ಅಂಗಾಂಶಗಳ (connective tissue) ಮೇಲಿನ ಒತ್ತಡ ಅತಿ ಹೆಚ್ಚಿನ ಪ್ರಭಾವ ಬೀರುತ್ತದೆ. ಈ ಅಂಗಾಂಶ ಪ್ರತಿ ಗಂಟು, ನರ, ಸ್ನಾಯು, ಮೂಳೆಗಳು ಹಾಗೂ ವಿಶೇಷವಾಗಿ ಮೆದುಳು ಮತ್ತು ಮೆದುಳುಬಳ್ಳಿಗಳಿಗೆ ರಕ್ಷಣೆನೀಡುವ ಪದರವಾಗಿದೆ. ರಕ್ತಸಂಚಾರದ ಕೊರತೆಯುಂಟಾದರೆ ಈ ಅಂಗಾಂಶವೂ ಸಂಕುಚಿತಗೊಳ್ಳುತ್ತದೆ. ಶಿಯಾತ್ಸು ಮಸಾಜ್ ವಿಧಾನದಲ್ಲಿ ಈ ಕೊರತೆಯನ್ನು ಮರುದುಂಬಿಸಿ ದೇಹವನ್ನು ನಿರಾಳಗೊಳಿಸಬಹುದು. ಇತರ ಮಸಾಜ್ ನಲ್ಲಿ ಇನ್ನೊಬ್ಬರ ಸಹಾಯ ಅಗತ್ಯವಾದರೆ ಇಲ್ಲಿ ಸ್ವತಃ ಮಾಡಿಕೊಳ್ಳುವ ಮೂಲಕ ಉತ್ತಮ ಪರಿಣಾಮವನ್ನು ಪಡೆಬಹುದು. ಇದುವರೆಗೆ ಈ ವಿಧಾನವನ್ನು ಅನುಸರಿಸದೇ ಇರುವವರಿಗೆ ಸುಲಭ ಮಾರ್ಗದರ್ಶಿ ಇಲ್ಲಿದೆ:

ನಿರಾಳತೆಯ ವಿಧಾನ 1
ಬಲಪಾದವನ್ನು ಎರಡೂ ಹಸ್ತಗಳಿಂದ ಅಮುಕಿ ಹಿಡಿಯಿರಿ ಹಾಗೂ ಈ ಸಮಯದಲ್ಲಿ ಪಾದದ ಅಡಿಭಾಗವನ್ನು ಎರಡೂ ಹೆಬ್ಬೆರಳುಗಳಿಂದ ಒತ್ತಿ.
ನಿರಾಳತೆಯ ವಿಧಾನ 2 - ಎರಡೂ ಪಾದಗಳು ಮೇಲ್ಮುಖವಾಗಿರುವಂತೆ ಮೊಣಕಾಲುಗಳ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ, ಅಂದರೆ ನಿತಂಬಗಳು ಹಿಮ್ಮಡಿಗಳ ಮೇಲಿರುವಂತೆ. ಈಗ ಕೈಗಳನ್ನು ಪಾದಗಳತ್ತ ತಂದು ಹೆಬ್ಬೆರಳುಗಳಿಂದ ಆಯಾ ಪಾದದ ನಡುಭಾಗದಲ್ಲಿ ಕೊಂಚ ಒತ್ತಡ ನೀಡಿ
ಈ ವಿಧಾನ ಹೇಗೆ ಕಾರ್ಯನಿರ್ವಹಿಸುತ್ತದೆ?
ಇವೆರಡೂ ವಿಧಾನಗಳಿಂದ ಪಾದಗಳ ನರಗಳು ನಿರಾಳಗೊಳ್ಳುತ್ತವೆ ಹಾಗೂ ಪಾದಗಳ ಮೇಲೆ ದೇಹ ಸಮತೋಲನವನ್ನು ಪಡೆಯಲು ನೆರವಾಗುತ್ತದೆ. ಒಂದು ವೇಳೆ ಗಂಟುಗಳು ಪೆಡಸಾಗಿದ್ದರೆ ಈ ವಿಧಾನದಿಂದ ಸಡಿಲಗೊಳ್ಳುತ್ತದೆ. ಈ ಎರಡೂ ವಿಧಾನಗಳನ್ನು ದಿನಕ್ಕೆರಡು ಬಾರಿ ನಿರ್ವಹಿಸಬಹುದು.
ಶಕ್ತಿಯ ಹರಿಯುವಿಕೆಯ ವಿಧಾನ 1 - ಮೊದಲು ಬಲಪಾದದ ಹೆಬ್ಬೆರಳನ್ನು ಎರಡೂ ಹಸ್ತಗಳಿಂದ ಹಿಡಿಯಿರಿ ಹಾಗೂ ಬಳಿಕ ಪಾದದ ಉಳಿದ ಬೆರಳುಗಳನ್ನು ಎರಡೂ ಕೈಗಳ ಹೆಬ್ಬೆರಳು ಮತ್ತು ಕಿರು ಬೆರಳುಗಳನ್ನು ಬಳಸಿ ಅಗಲಿಸಿ. ಈಗ ಉಳಿದ ಬೆರಳುಗಳಿಂದ ಪಾದದ ಹೆಬ್ಬೆರಳಿನಿಂದ ಮಸಾಜ್ ಮಾಡಲು ಪ್ರಾರಂಭಿಸಿ. ಬೆರಳಿನ ಬುಡದಿಂದ ಉಗುರಿನವರೆಗೆ ಕೊಂಚವೇ ಒತ್ತಡ ಬರುವಂತೆ ಏಕಪ್ರಕಾರವಾಗಿ ಸುಮಾರು ಐದರಿಂದ ಹತ್ತು ಬಾರಿ ಮಸಾಜ್ ಮಾಡಿ. ಇದೇ ರೀತಿ ಉಳಿದ ಬೆರಳುಗಳನ್ನೂ ಮಸಾಜ್ ಮಾಡಿ.
ಶಕ್ತಿಯ ಹರಿಯುವಿಕೆಯ ವಿಧಾನ 2 - ಎರಡೂ ಕೈಗಳನ್ನು ನಿಮ್ಮ ಎದೆಯ ಮೇಲಿರಿಸಿ ಕೊಂಚವೇ ಒತ್ತಡವನ್ನು ಎದೆಯ ಮೇಲೆ ಹೇರಿ ಬೆರಳುಗಳಿಂದ ಮೇಲಿನಿಂದ ಕೆಳಕ್ಕೆ ಬರುವಂತೆ ಸುಮಾರು ಹತ್ತು ಬಾರಿ ಮಸಾಜ್ ಮಾಡಿ.
ಈ ವಿಧಾನ ಹೇಗೆ ಕಾರ್ಯನಿರ್ವಹಿಸುತ್ತದೆ: ಇದೊಂದು ಗುಣಪಡಿಸುವ ವ್ಯಾಯಾಮವಾಗಿದ್ದು ಎದೆಯ ಭಾಗದ ಶಕ್ತಿಯ ಅಲೆಗಳನ್ನು ದೇಹದ ಇತರ ಭಾಗಗಳಿಗೆ ಕೊಂಡೊಯ್ಯಲು ನೆರವಾಗುತ್ತದೆ. ಈ ವ್ಯಾಯಾಮವನ್ನು ದಿನಕ್ಕೆರಡು ಬಾರಿ ನಿರ್ವಹಿಸಬಹುದು.
ಮಾನಸಿಕ ಒತ್ತಡ ನಿವಾರಣಾ ವಿಧಾನ
ಮಾನಸಿಕ ಒತ್ತಡ ನಿವಾರಣಾ ವಿಧಾನ 1 - ಬಲಗೈಯ ಹೆಬ್ಬೆರಳಿನಿಂದ ಎಡಹಸ್ತದ ನಡುಭಾಗದ ಮೇಲೆ ಕೊಂಚವೇ ಒತ್ತಡದಿಂದ ಒತ್ತಿ ಸುಮಾರು ಮೂವತ್ತರಿಂದ ಅರವತ್ತು ಸೆಕೆಂಡ್ ಕಾಲ ಇದೇ ಒತ್ತಡವನ್ನು ಕಾಯ್ದುಕೊಳ್ಳಿ.
ಬಳಿಕ ಎಡಗೈಯ ಐದೂ ಬೆರಳುಗಳ ತುದಿಗಳನ್ನು ಬಲಗೈಯ ಬೆರಳುಗಳನ್ನು ಬಳಸಿ ಕೊಂಚ ಹಿಂದೆಳೆದುಕೊಳ್ಳಿ (ಗೋಲಿ ಆಡಲು ಬೆರಳನ್ನು ಎಳೆದುಕೊಂಡಂತೆ) ಹಾಗೂ ಸುಮಾರು ಐದು ನಿಮಿಷಗಳ ಬಳಿಕ ಸಡಿಲವಾಗಿಸಿ. ಬಳಿಕ ಎಡಗೈಯ ಹಸ್ತದ ಮೇಲೆ ಬಲಗೈ ಹೆಬ್ಬೆರಳನ್ನು ಬಳಸಿ ಸುಮಾರು ಮೂವತ್ತರಿಂದ ಅರವತ್ತು ಸೆಕೆಂಡ್ ಕಾಲ ಕೊಂಚವೇ ಒತ್ತಡದಿಂದ ಗೀಚಿದಂತೆ ಇಡಿಯ ಹಸ್ತದ ಮೇಲೆ ಓಡಾಡಿಸಿ. ಬಳಿಕ ಹಸ್ತವನ್ನು ತಿರುಗಿಸಿ ಹಿಂಭಾಗದ ಮೇಲೂ ವೃತ್ತಾಕಾರದಲ್ಲಿ ಸುಮಾರು ಮೂವತ್ತರಿಂದ ಅರವತ್ತು ಸೆಕೆಂಡ್ ಕಾಲ ಕೊಂಚವೇ ಒತ್ತಡದಿಂದ ಮಸಾಜ್ ಮಾಡಿ. ಇದೇ ವಿಧಾನವನ್ನು ಬಲಗೈ ಹಸ್ತಕ್ಕೂ ಪುನರಾವರ್ತಿಸಿ.
ಈ ವಿಧಾನ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ವ್ಯಾಯಾಮಗಳನ್ನು ದಿನಕ್ಕೆರಡು ಬಾರಿ ಅನುಸರಿಸುವ ಮೂಲಕ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಒತ್ತಡ ಕಡಿಮೆ ಮಾಡುವ ವಿಧಾನ:
ಎರಡೂ ಕೈಗಳ ಹೆಬ್ಬೆರಳುಗಳು ಹಣೆಯ ಪಕ್ಕದ ಭಾಗ (ಅಂದರೆ ಕನ್ನಡಕದ ಕಡ್ಡಿ ಇರುವ ಭಾಗ)ದಲ್ಲಿ ಬರುವಂತೆ ಇರಿಸಿ ಉಳಿದ ನಾಲ್ಕೂ ಬೆರಳುಗಳನ್ನು ತಲೆಯ ಮೇಲೆ ಬರುವಂತೆ ಇರಿಸಿ. ಈಗ ಕೊಂಚವೇ ಒತ್ತಡದಿಂದ ಹಣೆಯ ಪಕ್ಕದ ಭಾಗದಲ್ಲಿ ವೃತ್ತಾಕಾರವಾಗಿ ಮಸಾಜ್ ಮಾಡಿ ಹಾಗೂ ಈ ಸಮಯದಲ್ಲಿ ದೀರ್ಘವಾಗಿ ಉಸಿರಾಡುತ್ತಾ ಸುಮಾರು ಐದರಿಂದ ಹತ್ತು ನಿಮಿಷ ಮಸಾಜ್ ಮುಂದುವರೆಸಿ.
ಈ ವಿಧಾನ ಹೇಗೆ ಕಾರ್ಯನಿರ್ವಹಿಸುತ್ತದೆ?
ವಿಶೇಷವಾಗಿ ಸಾಮಾನ್ಯ ತಲೆನೋವು ಮತ್ತು ಮೈಗ್ರೇನ್ ತಲೆನೋವು ಇರುವ ವ್ಯಕ್ತಿಗಳಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಉತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ದಿನಕ್ಕೆರಡು ಬಾರಿ ಪುನರಾವರ್ತಿಸಿ. ವೀಡಿಯೋದಲ್ಲಿ ವಿವರಿಸಿರುವ ಸ್ವ-ಮಸಾಜ್ ವಿಧಾನದ ಹೊರತಾಗಿ ನೀವು ಇತರ ಶಿಯಾತ್ಸು ಮಸಾಜ್ ವಿಧಾನಗಳನ್ನೂ ಅನುಸರಿಸಬಹುದು.
ಕೆಳಬೆನ್ನಿನ ನೋವಿಗಾಗಿ ಶಿಯಾತ್ಸು ಮಸಾಜ್:
ಬೆನ್ನಿನ ಮೇಲೆ ಮಲಗಿ ಮೊಣಕಾಲುಗಳನ್ನು ಮಡಚಿ ಎರಡೂ ಪಾದಗಳು ನೆಲದ ಮೇಲೆ ಬರುವಂತೆ ಇರಿಸಿ. ಈಗ ಕಣ್ಣುಗಳನ್ನು ಮುಚ್ಚಿ ದೀರ್ಘವಾಗಿ ಉಸಿರಾಡುತ್ತಾ ಹಾಗೇ ನಾಲ್ಕು ನಿಮಿಷ ಕಳೆಯಿರಿ. ಬಳಿಕ ನಿಧಾನವಾಗಿ ಬಲಮೊಣಕಾಲನ್ನು ಎತ್ತುತ್ತ್ತಾಎರಡೂ ಹಸ್ತಗಳಿಂದ ಮೊಣಕಾಲುಗಳನ್ನು ಹಿಡಿದು ಎದೆಯ ಮಟ್ಟಕ್ಕೆ ಹಿಂದೆಳೆದುಕೊಳ್ಳಿ. ಕೊಂಚ ಹೊತ್ತಿನ ಬಳಿಕ ಮೊದಲಿನ ಸ್ಥಾನಕ್ಕೆ ಬನ್ನಿ. ಇದೇ ರೀತಿಯಾಗಿ ಎಡಗಾಲಿಗೂ ಇದೇ ವಿಧಾನವನ್ನು ಅನುಸರಿಸಿ ನಾಲ್ಕಾರು ಬಾರಿ ಎರಡೂ ಕಾಲುಗಳಿಗೆ ಸಮಾನವಾದ ಮಸಾಜ್ ನೀಡಿ.
ಸೈನಸ್ ತಲೆನೋವು ನಿವಾರಣಾ ವಿಧಾನ:
ತೋರುಬೆರಳನ್ನು ಕೆನ್ನೆಯ ಮೇಲಿನ ಮೂಳೆಯಭಾಗದ ಅಮೇಲೆ ಇರಿಸಿ ಕೊಂಚವೇ ಒತ್ತಡದಿಂದ ವೃತ್ತಾಕಾರದಲ್ಲಿ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿ. ಇದೇ ರೀತಿಯಾಗಿ ತೋರುಬೆರಳನ್ನು ಹಣೆಯ ಎರಡೂ ಹುಬ್ಬಿನ ತುದಿಭಾಗದಲ್ಲಿ ಎರಡೂ ತೋರುಬೆರಳುಗಳನ್ನು ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿ. ಈ ವ್ಯಾಯಾಮವನ್ನು ದಿನಕ್ಕೆರಡು ಬಾರಿ ಪುನರಾವರ್ತಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications