Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೂತ್ರ ನೊರೆ ನೊರೆ ಆಗಿದ್ದರೆ ಆರೋಗ್ಯದ ಸಮಸ್ಯೆವಿದೆ ಎಂದರ್ಥ! ಹಾಗಾದರೆ ಇದಕ್ಕೆ ಚಿಕಿತ್ಸೆ ಹೇಗೆ?
ಮನುಷ್ಯನ ದೇಹವನ್ನು ಯಾವ ಇಂಜಿನಿಯರ್ ಗಳಿಂದಲೂ ಸೃಷ್ಟಿಸಲು ಅಸಾಧ್ಯ. ಯಾಕೆಂದರೆ ದೇಹದೊಳಗೆ ಅಷ್ಟೊಂದು ಅಂಗಗಳು, ರಕ್ತನಾಳಗಳು, ನರಗಳು ಇತ್ಯಾದಿಗಳು ಇವೆ. ಅದರಲ್ಲೂ ಕೆಲವೊಂದು ಅಂಗಗಳು ದೇಹದ ಹೊರಗಡೆ ಇದ್ದರೆ, ಇನ್ನು ಕೆಲವು ದೇಹದ ಒಳಗಡೆಯೇ ಇದ್ದು, ತಮ್ಮ ಕಾರ್ಯ ನಿರ್ವಹಿಸುವುದು. ಇದರಿಂದ ದೇಹದ ಹೊರಗಿನ ಅಂಗಗಳಂತೆ ದೇಹದ ಒಳಗಿನ ಅಂಗಗಳ ಆರೋಗ್ಯವು ಅತೀ ಅಗತ್ಯವಾಗಿರುವುದು. ಇವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ದೇಹವು ಸರಿಯಾಗಿರಲು ಸಾಧ್ಯ. ದೇಹದೊಳಗೆ ಇರುವಂತಹ ವಿಷಕಾರಿ ಅಂಶಗಳು ಮೂತ್ರ ಮೂಲಕ ಹೊರಹೋಗುತ್ತದೆ.
ನಮ್ಮ ದೇಹದ ಒಳಗಿನ ಅಂಗಾಂಗಗಳು ನಮಗೆ ಕಾಣಲು ಸಿಗದೆ ಇದ್ದರೂ ಅವುಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಯಲು ಮೂತ್ರದ ಬಣ್ಣವನ್ನು ನೋಡಿ ತಿಳಿಯಬಹುದು. ಸಾಮಾನ್ಯವಾಗಿ ಮೂತ್ರವು ಹಗುರ ಹಳದಿಯಿಂದ ಹಿಡಿದು ಕಡು ಹಳದಿ ಮತ್ತು ಬಿಳಿಯಾಗಿರುವುದು. ನೀವು ಸೇವಿಸುವಂತಹ ಆಹಾರ, ಔಷಧಿಗಳು ಮತ್ತು ಅನಾರೋಗ್ಯಗಳು ಮೂತ್ರದ ಬಣ್ಣದ ಮೇಲೆ ಪ್ರಭಾವ ಬೀರುವುದು.
ಇಷ್ಟು ಮಾತ್ರವಲ್ಲದೆ ಕೆಲವೊಂದು ಸಲ ಮೂತ್ರವು ನೊರೆಯನ್ನು ಹೊಂದಿರಬಹುದು. ಮೂತ್ರವು ನೊರೆಯಾಗಿದ್ದರೆ ಆಗ ಮೂತ್ರಕೋಶವು ತುಂಬಿದೆ ಮತ್ತು ಇದನ್ನು ಖಾಲಿ ಮಾಡಲು ಮೂತ್ರವು ತುಂಬಾ ವೇಗವಾಗಿ ಹೊರಗೆ ಬರುತ್ತಿದೆ ಎಂದು ಹೇಳಬಹುದು. ಆದರೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕೂಡ ನೊರೆಯುಕ್ತ ಮೂತ್ರಕ್ಕೆ ಕಾರಣವಾಗಿರಬಹುದು. ಪದೇ ಪದೇ ನೊರೆಯುಕ್ತ ಮೂತ್ರವು ಬರುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗುವುದು ಅತೀ ಅಗತ್ಯವಾಗಿದೆ. ಮೂತ್ರವು ನೊರೆಯಾಗಿರಲು ಕಾರಣವೇನು ಮತ್ತು ಇದನ್ನು ತಡೆಯಲು ಏನು ಮಾಡಬಹುದು ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ....

ನೊರೆಯುಕ್ತ ಮೂತ್ರ ಬರಲು ಇತರ ಕಾರಣಗಳು ಏನು?
ಪ್ರತಿಯೊಬ್ಬರಿಗೂ ಯಾವಾಗಲೊಮ್ಮೆಯಾದರೂ ಮೂತ್ರವು ನೊರೆಯುಕ್ತವಾಗಿರುವುದು. ಇದು ಮೂತ್ರದ ವೇಗದಿಂದಾಗಿ ಬರುವುದು. ಮೂತ್ರದಲ್ಲಿ ನೊರೆ ಬರುವುದು ಪದೇ ಪದೇ ಕಾಣಿಸಿಕೊಂಡರೆ ಮತ್ತು ಇದು ಸಮಯ ಕಳೆದಂತೆ ಹೆಚ್ಚಾಗುತ್ತಲಿದ್ದರೆ ಆಗ ನೀವು ಇದನ್ನು ಯಾವುದೋ ಕಾಯಿಲೆಯ ಲಕ್ಷಣವೆಂದು ತಿಳಿಯಬೇಕು. ಮೂತ್ರವು ನೊರೆಯಿಂದ ಕೂಡಿದ್ದರೆ ಆಗ ನೀವು ಕೆಲವೊಂದು ಲಕ್ಷಣಗಳನ್ನು ಕೂಡ ತಿಳಿಯಬೇಕು. ಈ ಲಕ್ಷಣಗಳು ನೀವು ಯಾವುದೋ ಒಂದು ಅನಾರೋಗ್ಯದಿಂದ ಬಳಲುತ್ತಿದ್ದೀರಿ ಎನ್ನುವುದರ ಸೂಚನೆಯಾಗಿದೆ.
•ಕೈ, ಕಾಲು, ಮುಖ ಮತ್ತು ಹೊಟ್ಟೆಯು ಊದಿಕೊಳ್ಳುವುದು. ಇದು ಕಿಡ್ನಿ ಹಾನಿಗೀಡಾದ ಪರಿಣಾಮ ದ್ರವ ಶೇಖರಣೆಯಾಗುವುದು.
•ನಿಶ್ಯಕ್ತಿ
•ಹಸಿವು ಇಲ್ಲದಿರುವುದು
•ವಾಕರಿಕೆ
•ವಾಂತಿ
•ನಿದ್ರೆಯ ಕೊರತೆ
•ಮೂತ್ರದಲ್ಲಿನ ಪ್ರಮಾಣದಲ್ಲಿ ಬದಲಾವಣೆ
•ಮೋಡದಂತಹ ಮೂತ್ರ
•ಕಡುಬಣ್ಣದ ಮೂತ್ರ
•ನೀವು ಪುರುಷರಾಗಿದ್ದರೆ ಆಗ ಒಣ ಲೈಂಗಿಕ ಪರಾಕಾಷ್ಠೆ ಅಥವಾ ಪರಾಕಾಷ್ಠೆ ವೇಳೆ ವೀರ್ಯ ಬಿಡುಗಡೆ ಕಡಿಮೆ ಆಗುವುದು.
•ನೀವು ಪುರುಷರಾಗಿದ್ದರೆ ಆಗ ಬಂಜೆತನ ಅಥವಾ ನಿಮ್ಮ ಸಂಗಾತಿಯು ಗರ್ಭ ಧರಿಸುವಂತೆ ಮಾಡಲು ವಿಫಲವಾಗಿರುವುದು.

ಮೂತ್ರದಲ್ಲಿ ನೊರೆ ಕಾಣಿಸಲು ಕಾರಣಗಳು ಏನು?
ಮೂತ್ರದಲ್ಲಿ ನೊರೆ ಕಾಣಿಸಲು ಸಾಮಾನ್ಯ ಕಾರಣವೆಂದರೆ ಅದು ಮೂತ್ರದ ವೇಗ. ನಲ್ಲಿಯಿಂದ ನೀರು ತುಂಬಾ ವೇಗವಾಗಿ ಬಂದರೆ ಅಲ್ಲಿ ಕೂಡ ನೊರೆ ಕಾಣಿಸುವುದು. ಅದೇ ರೀತಿಯಾಗಿ ಮೂತ್ರವು ತುಂಬಾ ವೇಗವಾಗಿ ಬಂದರೆ ನೊರೆ ಕಾಣಿಸುವುದು. ನೊರೆಯು ಬೇಗನೆ ಮಾಯವಾಗುವುದು. ಕೆಲವೊಂದು ಸಲ ಮೂತ್ರವು ಕೇಂದ್ರೀಕೃತವಾದಾಗ ನೊರೆ ಕಾಣಿಸಿಕೊಳ್ಳುವುದು. ನೀವು ಹೆಚ್ಚು ನೀರು ಕುಡಿಯದೆ ಇದ್ದರೆ ಮತ್ತು ನಿಮ್ಮ ದೇಹವು ನಿರ್ಜಲೀಕರಣಕ್ಕೆ ಒಳಗಾಗಿದ್ದರೆ ಆಗ ಮೂತ್ರದಲ್ಲಿ ನೊರೆ ಬರುವುದು. ಮೂತ್ರದಲ್ಲಿ ನೊರೆ ಕಾಣಿಸುವುದು ಕೆಲವೊಂದು ಸಲ ನಿಮ್ಮ ದೇಹದಲ್ಲಿ ಅತಿಯಾಗಿ ಪ್ರೋಟೀನ್ ಅಂಶವು ಇರುವಾಗ. ಮೂತ್ರದಲ್ಲಿ ಹೊರಬರುವಂತಹ ಪ್ರೋಟೀನ್ ಅಂಶವು ಗಾಳಿಯೊಂದಿಗೆ ಸೇರಿಕೊಂಡು ನೊರೆ ಉಂಟು ಮಾಡುವುದು.

ಮೂತ್ರದಲ್ಲಿ ನೊರೆ ಬಂದರೆ ಆಗುವ ಅಪಾಯಗಳು ಏನು?
ಮೂತ್ರಕೋಶವು ತುಂಬಿದ್ದರೆ ಆಗ ನಿಮ್ಮ ಮೂತ್ರವು ನೊರೆಯಿಂದ ಕೂಡಿರುವಂತಹ ಸಾಧ್ಯತೆಗಳು ಹೆಚ್ಚು. ಯಾಕೆಂದರೆ ಆಗ ಮೂತ್ರಕೋಶವು ಮೂತ್ರವನ್ನು ಬಲಪೂರ್ವಕ ಹಾಗೂ ವೇಗವಾಗಿ ಹೊರಹಾಕಲು ಪ್ರಯತ್ನಿಸುವುದು. ಮೂತ್ರವು ಕೇಂದ್ರೀಕೃತ ವಾಗಿದ್ದರೂ ನೊರೆ ಬರುವುದು. ಇದು ನಿರ್ಜಲೀಕರಣ ಮತ್ತು ಗರ್ಭಧಾರಣೆಯಿಂದಲೂ ಆಗಬಹುದು.

ಮೂತ್ರದಲ್ಲಿನ ನೊರೆಗೆ ಸ್ಪಷ್ಟ ಕಾರಣವನ್ನು ಪತ್ತೆ ಹಚ್ಚುವುದು ಹೇಗೆ?
ಮೂತ್ರದಲ್ಲಿರುವಂತಹ ಪ್ರೋಟೀನ್ ಮಟ್ಟವನ್ನು ತಿಳಿಯಲು ವೈದ್ಯರು ನಿಮ್ಮ ಮೂತ್ರದ ಪರೀಕ್ಷೆ ಮಾಡಿಸಬಹುದು. ಮೂತ್ರದ ಪರೀಕ್ಷೆಗೆ ಕಡಿಮೆ ಎಂದರೆ ಸುಮಾರು 24 ಗಂಟೆ ಬೇಕಾಗುತ್ತದೆ. ಇದು ಕ್ರಿಯಾಟೈನ್ ನ ಮಟ್ಟವನ್ನು ಅಲ್ಬುಮಿನ್ ಗೆ ಹೋಲಿಸುತ್ತದೆ. ಸ್ನಾಯುಗಳು ತುಂಡಾದಾಗ ಉತ್ಪತ್ತಿ ಯಾಗುವಂತಹ ದ್ರವವೇ ಕ್ರಿಯಾಟೈನ್. ಇದನ್ನು ಮೂತ್ರದ ಅಲ್ಬುಮಿನ್ ನಿಂದ ಕ್ರಿಯಾಟೈನ್(ಯುಎಸಿಆರ್) ಎಂದು ಕರೆಯಲಾಗುತ್ತದೆ. ಕಿಡ್ನಿಗಳು ರಕ್ತವನ್ನು ಎಷ್ಟು ಚೆನ್ನಾಗಿ ಶುದ್ಧೀಕರಿಸುತ್ತಿದೆ ಎಂದು ಇದು ಹೇಳುತ್ತದೆ. ಯುಎಸಿಆರ್ ಪ್ರತೀ ಗ್ರಾಂಗೆ 30 ಮಿ.ಗ್ರಾಂ.ಕ್ಕಿಂತ ಹೆಚ್ಚಾಗಿದ್ದರೆ ಆಗ ನಿಮಗೆ ಕಿಡ್ನಿಯ ಕಾಯಿಲೆ ಇದೆ ಎಂದು ಹೇಳಬಹುದು. ವೈದ್ಯರು ಬೇರೆ ಕೆಲವೊಂದು ಪರೀಕ್ಷೆಗಳನ್ನು ಮಾಡಿ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿದೆಯಾ ಎಂದು ಕಂಡು ಹಿಡಿಯುವರು. ಇದಕ್ಕೆ ತದ್ವಿರುದ್ಧವಾಗಿ ಸ್ಖಲನದ ವೇಳೆ ಬರುವಂತಹ ವೀರ್ಯವು ಮೂತ್ರದಲ್ಲಿರುವ ನೊರೆಗೆ ಕಾರಣವಾಗಿದ್ದರೆ ಆಗ ವೈದ್ಯರು ಮೂತ್ರದಲ್ಲಿನ ವೀರ್ಯವನ್ನು ಪತ್ತೆ ಮಾಡುವರು.

ಮೂತ್ರದಲ್ಲಿನ ನೊರೆಗೆ ಚಿಕಿತ್ಸೆಗಳು ಇದೆಯಾ?
ಮೂತ್ರದಲ್ಲಿನ ನೊರೆಗೆ ಕಾರಣವೇನು ಎಂದು ತಿಳಿದುಕೊಂಡ ಬಳಿಕ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ನಿಮ್ಮ ಮೂತ್ರವು ಕೇಂದ್ರೀಕೃತವಾಗಿ ನೊರೆ ಬರುತ್ತಲಿದ್ದರೆ ಆಗ ನೀವು ಹೆಚ್ಚು ನೀರು ಮತ್ತು ಇತರ ದ್ರವಾಹಾರ ಸೇವನೆ ಮಾಡುವ ಮೂಲಕ ನಿರ್ಜಲೀಕರಣ ತಪ್ಪಿಸಬೇಕು ಮತ್ತು ಮೂತ್ರದಲ್ಲಿನ ನೊರೆ ಕಡಿಮೆ ಮಾಡಬಹುದು.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆಗಳು
ಕಿಡ್ನಿಗೆ ಹಾನಿಯಾಗಿರುವ ಕಾರಣದಿಂದ ಮೂತ್ರದಲ್ಲಿ ನೊರೆ ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ನೀವು ಇದಕ್ಕೆ ಚಿಕಿತ್ಸೆ ಮಾಡಿಕೊಳ್ಳಬೇಕು. ಹೆಚ್ಚಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಕಿಡ್ನಿ ಕಾಯಿಲೆಗೆ ಕಾರಣವಾಗುವುದು. ಈ ಎರಡು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ನೀವು ಕಿಡ್ನಿಗೆ ಆಗಿರುವ ಹಾನಿಯನ್ನು ನಿಧಾನಗೊಳಿಸಬಹುದು.ನೀವು ಸಮತೋಲಿತ ಆಹಾರ ಸೇವನೆ ಮಾಡುವಂತಹ ವೈದ್ಯರು ನಿಮಗೆ ಸೂಚನೆ ನೀಡಬಹುದು ಮತ್ತು ಇದರೊಂದು ಮಧುಮೇಹ ಹದ್ದುಬಸ್ತಿನಲ್ಲಿ ಇಡಲು ಹಲವಾರು ವಿಧದ ವ್ಯಾಯಾಮ ಸೂಚಿಸಬಹುದು.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆಗಳು
ನೀವು ಪದೇ ಪದೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮವಾದ ವಿಧಾನವಾಗಿದೆ.ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರ ಕಿಡ್ನಿಗೆ ಕೂಡ ಹಾನಿಯಾಗುವುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸಲು ನೀವು ಔಷಧಿ ತೆಗೆದುಕೊಳ್ಳಬೇಕು. ಆಗ ಮಾತ್ರ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ಸಾಧ್ಯ.ಅಧಿಕ ರಕ್ತದೊತ್ತಡ ನಿವಾರಣೆ ಮಾಡಲು ನೀವು ಆಹಾರ ಕ್ರಮದ ಬಗ್ಗೆ ಗಮನಹರಿಸಬೇಕು ಮತ್ತು ಚಟುವಟಿಕೆಯಿಂದ ಇರಬೇಕು. ಉಪ್ಪಿನ ಪ್ರಮಾಣ ಮತ್ತು ಪ್ರೋಟೀನ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಕಡಿಮೆ ಮಾಡಿದರೆ ಆಗ ರಕ್ತದೊತ್ತಡವು ನಿಯಂತ್ರಣಕ್ಕೆ ಬರುವುದು ಮತ್ತು ಕಿಡ್ನಿಯು ತುಂಬಾ ಕಠಿಣವಾಗಿ ಕೆಲಸ ಮಾಡುವುದನ್ನು ಇದು ತಡೆಯುವುದು.



Click it and Unblock the Notifications
