Latest Updates
-
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ
ದೇಹದ ಮಚ್ಚೆಗಳ ಮೇಲೆ ಕೂದಲು ಬೆಳೆದರೆ, ಅದು ಕ್ಯಾನ್ಸರ್ ರೋಗದ ಲಕ್ಷಣವೇ?
ಮಚ್ಚೆಗಳು ದೇಹದಲ್ಲಿ ಮೂಡುವುದು ಸಾಮಾನ್ಯ. ಇದು ಪ್ರತಿಯೊಬ್ಬರ ದೇಹದಲ್ಲಿ ಇರುವುದು. ಕೆಲವೊಮ್ಮೆ ಮಾಂಸದ ತುಂಡುಗಳಂತೆ ಅದು ದೇಹದ ಯಾವುದಾದರೂ ಭಾಗದಲ್ಲಿ ಮೂಡುವುದು. ಇದು ದೇಹದ ಇತರ ಭಾಗದ ಚರ್ಮಕ್ಕಿಂತ ಭಿನ್ನವಾಗಿದ್ದು, ಗಾತ್ರ ಹಾಗೂ ಆಕಾರದಲ್ಲಿ ತುಂಬಾ ವ್ಯತ್ಯಾಸಗಳು ಇರುವುದು. ಕೆಲವೊಮ್ಮೆ ಇದು ತುಂಬಾ ಕಂದು ಬಣ್ಣದ್ದಾಗಿರುವುದು. ಮತ್ತೆ ಕೆಲವು ಸಲ ಚರ್ಮಕ್ಕಿಂತ ತುಂಬಾ ಕಡು ಬಣ್ಣವನ್ನು ಹೊಂದಿರುವುದು. ಇದು ಕಂದು ಬಣ್ಣಕ್ಕಿಂತ ಕಪ್ಪು ಬಣ್ಣವನ್ನು ಹೊಂದಿರುವುದು. ಇದು ಸಾಮಾನ್ಯವೆಂದೇ ಪರಿಗಣಿಸಲಾಗಿದೆ. ಆದರೆ ಮಚ್ಚೆಗಳ ಮೇಲೆ ಒಂದಕ್ಕಿಂತ ಹೆಚ್ಚಿನ ಕೂದಲು ಬೆಳೆದರೆ ಆಗ ಚಿಂತೆ ಮಾಡಬೇಕಾಗುತ್ತದೆ. ಕೂದಲು ಬೆಳೆಯುವಂತಹ ಮಚ್ಚೆಗಳು ಕ್ಯಾನ್ಸರ್ ಕಾರಕವೆಂದು ಹೇಳಲಾಗುತ್ತದೆ. ಆದರೆ ಇದು ಸುಳ್ಳು. ಯಾಕೆಂದರೆ ಮಚ್ಚೆ ಮೇಲೆ ಕೂದಲು ಬೆಳೆಯುವುದು ಇದು ತುಂಬಾ ಆರೋಗ್ಯಕರ ಮತ್ತು ಕ್ಯಾನ್ಸರ್ ಕಾರಕವಲ್ಲವೆಂದು ಹೇಳುತ್ತದೆ.

ಮಚ್ಚೆಯಲ್ಲಿ ಕೂದಲು ಬೆಳೆಯಲು ಕಾರಣವೇನು?
Image courtesy: www.menshealth.com
ನಮ್ಮ ದೇಹದ ಹೆಚ್ಚಿನ ಭಾಗದಲ್ಲಿ ಕೂದಲು ಇರುವುದು. ಹೀಗಾಗಿ ದೇಹದ ಯಾವುದೇ ಭಾಗದಲ್ಲೂ ಮಚ್ಚೆಯು ಮೂಡಿದರೆ ಅಲ್ಲಿಂದ ಕೂದಲು ಬರುವುದು ಸಾಮಾನ್ಯ. ಕೂದಲಿನ ಕಿರುಚೀಲದ ಮೇಲೆ ಮಚ್ಚೆಯು ಬೆಳೆದರೆ ಆಗ ಕೂದಲು ಬರುವುದು. ಸಾಮಾನ್ಯ ಚರ್ಮದ ಕೋಶಗಳು ಮಾಡುವಂತಹ ಮಚ್ಚೆಗಳು ಆರೋಗ್ಯಕರ ಮತ್ತು ಇದರಲ್ಲಿ ಕೂದಲು ಬೆಳೆಯುವುದು ಕೂಡ ಸಾಮಾನ್ಯ. ಕಿರುಚೀಲವು ಕೂದಲನ್ನು ಬೆಳೆಸುತ್ತದೆ, ಮಚ್ಚೆಯನ್ನಲ್ಲ. ಇದರ ಬಳಿಕ ಕೂದಲು ಮಚ್ಚೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವುದು. ಇದು ಇತರ ಚರ್ಮದಂತೆ ಸಾಮಾನ್ಯ ಪ್ರಕ್ರಿಯೆಯಾಗಿರುವುದು.
ಮಚ್ಚೆ ಮೇಲಿಂದ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕೂದಲು ಬೆಳೆಯುವುದು ಅಸಾಮಾನ್ಯವೇನಲ್ಲ. ಕೆಲವೊಂದು ಸಲ ಮಚ್ಚೆ ಮೇಲೆ ಬೆಳೆಯುವಂತಹ ಕೂದಲು ದೇಹದ ಇತರ ಭಾಗದಲ್ಲಿ ಬೆಳೆಯುವ ಕೂದಲಿಗಿಂತ ಹೆಚ್ಚು ದಪ್ಪ ಮತ್ತು ಕಡುಬಣ್ಣ ಹೊಂದಿರಬಹುದು. ಯಾಕೆಂದರೆ ಅಂಗಾಂಶಗಳಲ್ಲಿನ ಹೆಚ್ಚಿನ ವರ್ಣದ್ರವ್ಯವು ಇದನ್ನು ಮತ್ತಷ್ಟು ಕಪ್ಪಾಗಿಸುವುದು.

ಚರ್ಮಶಾಸ್ತ್ರಜ್ಞರ ಪ್ರಕಾರ
ಚರ್ಮಶಾಸ್ತ್ರಜ್ಞರು ಮತ್ತು ಇತರ ಕೆಲವೊಂದು ಅಧ್ಯಯನಗಳಿಂದ ಕಂಡುಕೊಂಡಿರುವ ವಿಚಾರವೆಂದರೆ ಮಚ್ಚೆಗಳ ಮೇಲೆ ಬೆಳೆಯುವಂತಹ ಕೂದಲು ಕ್ಯಾನ್ಸರ್ ಕಾರಕವಲ್ಲ. ಅದಾಗ್ಯೂ, ಮಚ್ಚೆಯು ಕ್ಯಾನ್ಸರ್ ಗಡ್ಡೆಯಾಗಿ ಬೆಳೆಯಬಾರದು ಎಂದೇನಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ಹೇಳುವಂತೆ ಮಚ್ಚೆಯ ಮೇಲ್ಮೈ ಮೇಲಿನ ಅಂಗಾಂಶವು ಅಸಾಮಾನ್ಯವಾಗಿ, ಅದು ಕೂದಲಿನ ಬೆಳವಣಿಗೆಗೆ ಸಹಕರಿಸುವುದು.

ಮಚ್ಚೆ ಮೇಲಿನ ಕೂದಲು ತೆಗೆಯಬಹುದೇ?
ಮಚ್ಚೆ ಮೇಲೆ ಬೆಳೆದಿರುವಂತಹ ಕೂದಲನ್ನು ತೆಗೆಯುವುದರಿಂದ ಅದು ಕ್ಯಾನ್ಸರ್ ಆಗಿ ಬೆಳೆಯಬಹುದು ಎನ್ನುವ ಮತ್ತೊಂದು ಸುಳ್ಳು ಕೂಡ ಹರಿದಾಡುತ್ತಲಿದೆ. ಆದರೆ ಒಳ್ಳೆಯ ಸುದ್ದಿಯೆಂದರೆ ಹಾಗೆ ಏನು ಇಲ್ಲ. ಮಚ್ಚೆ ಮೇಲಿನ ಕೂದಲು ನಿಮಗೆ ಚೆನ್ನಾಗಿ ಕಾಣಿಸದೆ ಇದ್ದರೆ, ಅದು ನಿಮ್ಮ ಅಂದಗೆಡಿಸುತ್ತಿದೆ ಎಂದು ಅನಿಸಿದರೆ ಆಗ ನೀವು ಈ ಕೂದಲು ತೆಗೆಯಬಹುದು. ದೇಹದ ಬೇರೆ ಭಾಗದಲ್ಲಿ ನಿಮಗೆ ಬೇಡದಿರುವಂತಹ ಕೂದಲು ತೆಗೆಯುವಂತೆ ಈ ಕೂದಲು ಕೂದ ತೆಗೆಯಿರಿ. ನೀವು ಇದನ್ನು ಕೀಳಬಹುದು ಅಥವಾ ಯಾವುದೇ ಹೇರ್ ರಿಮೂವರ್ ಬಳಸಿ ತೆಗೆಯಿರಿ.

ಶೇವ್ ಅಥವಾ ವ್ಯಾಕ್ಸ್ ಮಾಡಿ
ಮಚ್ಚೆಯು ಚರ್ಮಕ್ಕೆ ಹೊಂದಿಕೊಂಡು ಚಪ್ಪಟೆಯಾಗಿದ್ದರೆ ಆಗ ನೀವು ಶೇವ್ ಮಾಡಿ ಅಥವಾ ವ್ಯಾಕ್ಸ್ ಮಾಡಿ ಇದನ್ನು ತೆಗೆಯಬಹುದು. ಅದಾಗ್ಯೂ, ಬೆಳೆದಿರುವಂತಹ ಮಚ್ಚೆಯ ಮೇಲೆ ಬ್ಲೇಡ್ ಮಾತ್ರ ಬಳಸಬೇಡಿ. ನಿಮಗೆ ಮಚ್ಚೆಯಲ್ಲಿ ಬೆಳೆದಿರುವಂತಹ ಕೂದಲಿನಿಂದ ತುಂಬಾ ಕಿರಿಕಿರಿಯಾಗುತ್ತಲಿದ್ದರೆ ಆಗ ನೀವು ಟ್ರಿಮ್ಮರ್ ಬಳಸಿಕೊಂಡು ಇದನ್ನು ತೆಗೆಯಿರಿ. ಮಚ್ಚೆ ಮೇಲಿರುವಂತಹ ಕೂದಲು ತೆಗೆಯುವ ವೇಳೆ ನಿಮಗೆ ತುಂಬಾ ಕಿರಿಕಿರಿಯಾಗಿದ್ದರೆ ಆಗ ನೀವು ಚರ್ಮತಜ್ಞರನ್ನು ಭೇಟಿಯಾಗಿ ಅವರಲ್ಲಿ ಈ ಮಚ್ಚೆಯನ್ನು ತೆಗೆಯಲು ತಿಳಿಸಿ.

ಸಣ್ಣ ಶಸ್ತ್ರಚಿಕಿತ್ಸೆ
ಮಚ್ಚೆಯನ್ನು ತೆಗೆಯುವುದು ತುಂಬಾ ಸರಳ ಮತ್ತು ಇದನ್ನು ಸಣ್ಣ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಿರಿ. ಮೊದಲು ವೈದ್ಯರು ಈ ಭಾಗದ ಚರ್ಮವು ಸ್ಪರ್ಶಜ್ಞಾನ ಕಳೆದುಕೊಳ್ಳಲು ಇಂಜೆಕ್ಷನ್ ನೀಡುವರು. ಇದರ ಬಳಿಕ ಶೇವ್ ಮಾಡಿ ಅಥವಾ ಮಚ್ಚೆಯನ್ನು ತುಂಡು ಮಾಡಿ ತೆಗೆಯುವರು. ಮಚ್ಚೆಯು ದೊಡ್ಡದಾಗಿದ್ದರೆ ಆಗ ವೈದ್ಯರು ಈ ಭಾಗಕ್ಕೆ ಕೆಲವೊಂದು ಸ್ಟಿಚ್ ಹಾಕುವರು. ಮಚ್ಚೆ ತೆಗೆಯುವುದು ತುಂಬಾ ಸರಳ. ಆದರೆ ಇದು ಚರ್ಮದ ಮೇಲೆ ಶಾಶ್ವತವಾಗಿ ಕಲೆಯನ್ನು ಉಂಟು ಮಾಡುವುದು. ಮಚ್ಚೆ ಯಾವ ಜಾಗದಲ್ಲಿ ಇದೆ ಎನ್ನುವುದನ್ನು ಅನುಸರಿಸಿಕೊಂಡು ಕಲೆ ಮೂಡುವಂತಹ ಅಪಾಯವಿದ್ದರೂ ನೀವು ಇದನ್ನು ತೆಗೆಯಬಹುದು.

ಕ್ಯಾನ್ಸರ್ ಕಾರಕ ಮಚ್ಚೆಗಳ ಲಕ್ಷಣಗಳು
ಬಿಸಿಲಿಗೆ ತುಂಬಾ ದೀರ್ಘಕಾಲ ಮತ್ತು ನಿಯಮಿತವಾಗಿ ಒಡ್ಡಲ್ಪಡುವಂತಹ ಚರ್ಮದ ಮೇಲೆ ಮಚ್ಚೆಯು ಮೂಡುವುದು. ಆದರೆ ಎಲ್ಲಾ ಸಮಯದಲ್ಲೂ ಇದು ಹೀಗೆ ಇರದು. ನಿಮ್ಮ ದೇಹದ ಯಾವುದೇ ಭಾಗದಲ್ಲೂ ಇದು ಮೂಡಬಹುದು. ಕಪ್ಪು ಬಣ್ಣದ ಚರ್ಮದವರಿಗಿಂತ ಬಿಳಿ ಬಣ್ಣದ ಚರ್ಮವಿರುವಂತಹ ವ್ಯಕ್ತಿಗಳಲ್ಲಿ ಮಚ್ಚೆಯು ಹೆಚ್ಚಾಗಿ ಮೂಡುವುದು. ಹೆಚ್ಚಿನ ಜನರಲ್ಲಿ ಸಾಮಾನ್ಯಕ್ಕಿಂತ ಮಧ್ಯಮದ ತನಕ ಅಂದರೆ ಸುಮಾರು 10ರಿಂದ 40 ಮಚ್ಚೆಗಳು ದೇಹದಲ್ಲಿರುವುದು. ಇನ್ನು ಕೆಲವರ ದೇಹದಲ್ಲಿ 50ಕ್ಕಿಂತಲೂ ಹೆಚ್ಚು ಮಚ್ಚೆಗಳು ಇರುವುದು.
ಆರೋಗ್ಯಕರ, ಸಾಮಾನ್ಯ ಮಚ್ಚೆಗಳು ಸಣ್ಣ, ಚಪ್ಪಟೆ ಕಲೆಗಳಿಂದ ಹಿಡಿದು ದೊಡ್ಡ ಬೊಕ್ಕೆಗಳಂತೆ ಇರಬಹುದು. ಇದು ಪೆನ್ಸಿಲ್ ನ ರಬ್ಬರ್ ನಷ್ಟು ದೊಡ್ಡದಿರಬಹುದು.
*ಸಮ್ಮತೀಯ, ದುಂಡಗಿನ ಆಕಾರದಲ್ಲಿರಬಹುದು.
*ಇದರ ಅಂಚು ತುಂಬಾ ನಯವಾಗಿರಬಹುದು.
*ನೋಡಲು ಸ್ಥಿರವಾಗಿ ಇರುವುದು ಮತ್ತು ಬದಲಾಗದು.
*ಬಣ್ಣದಲ್ಲಿ ಇದು ಕಂದು, ಕೆಂಪು, ಗುಲಾಬಿ, ಚರ್ಮದ ಬಣ್ಣ, ಬಿಳಿ ಮತ್ತು ಕೆಲವೊಮ್ಮೆ ನೀಲಿಯಾಗಿರಬಹುದು.
*ಇದು ಅಗಲದಲ್ಲಿ 5 ಮಿ.ಮೀಟರ್ ಗಿಂತ ದೊಡ್ಡದಾಗಿರದು.
ದೇಹದಲ್ಲಿ ಹೆಚ್ಚಿನ ಮಚ್ಚೆ ಇರುವಂತಹ ವ್ಯಕ್ತಿಗಳು ಅಥವಾ ಪದೇ ಪದೇ ಬಿಸಿಲಿನಿಂದ ಚರ್ಮದ ಮೇಲೆ ಹಾನಿಯಾಗುತ್ತಿದ್ದರೆ ಅಂತಹವರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಮಚ್ಚೆಗಳ ಮೇಲೆ ಒಂದು ಕಣ್ಣಿಟ್ಟುಕೊಂಡು, ಚರ್ಮತಜ್ಞರನ್ನು ಪದೇ ಪದೇ ಭೇಟಿಯಾಗಿ ಪರೀಕ್ಷಿಸಿಕೊಳ್ಳುವುದು ಒಲಿತು. ಕೆಲವೊಂದು ಸಲ ಆರೋಗ್ಯಕಾರಿ ಮಚ್ಚೆಯು ಕ್ಯಾನ್ಸರ್ ಆಗಿ ಪರಿವರ್ತನೆಯಾಗಬಹುದು.
* ತಳದ ಜೀವಕೋಶದ ಕಾರ್ಸಿನೋಮ
* ಸ್ಕ್ವಾಮಸ್ ಸೆಲ್ ಕಾರ್ಸಿನೋಮ
* ಮೆಲನೋಮ(ಚರ್ಮದ ಜೀವಕೋಶದಲ್ಲಿ ಉಂಟಾಗುವ ಹಾನಿಕಾರ ಗಂಟು)

ಈ ರೀತಿಯ ಮಚ್ಚೆಗಳನ್ನು ನೀವು ಗಮನಿಸಬೇಕು
•ಅಸಾಮಾನ್ಯ, ಅಸಮ್ಮಿತ ಆಕಾರ
•ಅಸಮ ಅಥವಾ ಮೊನಚಾದ ಅಂಚು, ಸ್ಪಷ್ಟವಾಗಿ ಸುತ್ತಮುತ್ತಲಿನ ಚರ್ಮದ ಬೇರ್ಪಡಿಸಲಾಗದೆ ಇರುವುದು.
•ಮಚ್ಚೆಯ ಒಳಗಡೆ ಒಂದಕ್ಕಿಂತ ಹೆಚ್ಚಿನ ಬಣ್ಣಗಳು, ಅದರಲ್ಲೂ ಕಪ್ಪು, ಕಂದು, ಗುಲಾಬಿ, ಬಿಳಿ ಬಣ್ಣ.
•ಪೆನ್ಸಿಲ್ ನ ರಬ್ಬರ್ ಗಿಂತ ದೊಡ್ಡ ಗಾತ್ರ.
•ಮೇಲ್ಮೈ ವಿನ್ಯಾಸದಲ್ಲಿ ಬದಲಾವಣೆ: ಗಡಸು, ಚಿಪ್ಪುಗಳುಳ್ಳ, ಕುರುಕಲು, ನಯವಾದ, ಉಬ್ಬಿದ.
•ತುರಿಕೆ
•ರಕ್ತಸ್ರಾವ
•ತೀವ್ರ ಬದಲಾವಣೆ ಅಥವಾ ಬೆಳವಣಿಗೆ
ಮಲನೊಮಾದ ಆರಂಭಿಕ ಲಕ್ಷಣಗಳೆಂದರೆ ಅದು ಇರುವಂತಹ ಮಚ್ಚೆಗಳ್ಲಲಿ ಬದಲಾವಣೆ ಅಥವಾ ಹೊಸ ಮಚ್ಚೆಯು ಮೂಡುವುದು. ನಿಮ್ಮ ಚರ್ಮವನ್ನು ನಿಯಮಿತವಾಗಿ ಪರಿಶೀಲನೆ ಮಾಡಿದರೆ, ಆಗ ನಿಮಗೆ ಮಚ್ಚೆಯಲ್ಲಿ ಆಗುತ್ತಿರುವಂತಹ ಬದಲಾವಣೆಗಳನ್ನು ಆರಂಭದಲ್ಲೇ ಕಂಡು ಹುಡುಕಬಹುದು. ನಿಮ್ಮ ದೇಹದಲ್ಲಿ ಹೆಚ್ಚಿನ ಮಚ್ಚೆಗಳೂ ಇದ್ದರೆ ಅಥವಾ ಚರ್ಮದ ಕ್ಯಾನ್ಸರ್ ಇತಿಹಾಸವಿದ್ದರೆ ಆಗ ನೀವು ಚರ್ಮ ತಜ್ಞರಲ್ಲಿ ವರ್ಷಕ್ಕೊಮ್ಮೆಯಾದರೂ ಇದರ ಪರೀಕ್ಷೆ ಮಾಡಿಸಿಕೊಳ್ಳಿ.

ಎಲ್ಲಾ ಮಚ್ಚೆಗಳು ಕ್ಯಾನ್ಸರ್ ಕಾರಕವಾಗಿರಬೇಕೆಂದಿಲ್ಲ
ಆದರೆ ಸಾಮಾನ್ಯವಾಗಿ ಕಂಡುಬರುವಂತಹ ಮಚ್ಚೆಯು ಕ್ಯಾನ್ಸರ್ ಕಾರಕವಾಗಿರಬೇಕೆಂದಿಲ್ಲ ಎಂದು ನೆನಪಿಟ್ಟು ಕೊಳ್ಳುವುದು ಮುಖ್ಯ. ಮಚ್ಚೆಗಳು ಸಾಮಾನ್ಯವಾಗಿ ವರ್ಣದ್ರವ್ಯದಿಂದಾಗಿ ಕಡುಬಣ್ಣ ಪಡೆಯುವುದು ಅಥವಾ ಬಣ್ಣ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಮೇಲೆ ಹೇಳಿರುವಂತಹ ಯಾವುದೇ ರೀತಿಯ ಅಸಾಮಾನ್ಯತೆ ಕಂಡುಬಂದರೆ ಆಗ ನೀವು ಚರ್ಮ ತಜ್ಞರನ್ನು ಭೇಟಿಯಾಗಿ. ಅವರು ಮಚ್ಚೆಯನ್ನು ತೆಗೆಯುವರು ಮತ್ತು ಕ್ಯಾನ್ಸರ್ ಪತ್ತೆ ಮಾಡಲು ಇದರ ತುಂಡನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡುವರು.

ಅಂತಿಮ ನಿರ್ಣಯ
ಮಚ್ಚೆಯಲ್ಲಿ ಕೂದಲು ಬೆಳೆಯುತ್ತಿರುವುದು ಕಂಡುಬಂದರೆ ಆಗ ನೀವು ಇದರ ಬಗ್ಗೆ ದೊಡ್ಡ ಚಿಂತೆ ಮಾಡಬೇಕೆಂದಿಲ್ಲ. ಯಾಕೆಂದರೆ ಮಚ್ಚೆಯ ಮೇಲ್ಮೈ ಮೇಲಿನ ಕೂದಲು ಬೆಳೆಯುವುದು ಆರೋಗ್ಯಕರ ಕೂದಲಿನ ಕಿರುಚೀಲಗಳು ಇದರಡಿ ಇದೆ ಎನ್ನುವುದನ್ನು ತೋರಿಸುವುದು. ಆರೋಗ್ಯಕಾರಿ ಚರ್ಮದ ಕೋಶಗಳು ಮೇಲಿನ ಭಾಗದಲ್ಲಿರುವುದು. ಹೆಚ್ಚಿನ ಸಮಯದಲ್ಲಿ ಮಚ್ಚೆಗಳ ಮೇಲೆ ಕೂದಲು ಬೆಳೆಯುವುದು ಕ್ಯಾನ್ಸರ್ ಕಾರಕವಾಗಿರದು. ಮಚ್ಚೆ ಮೇಲೆ ಕೂದಲು ಬೆಳೆದಿರುವುದರಿಂದ ನಿಮಗೆ ಸೌಂದರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಅನಿಸಿದರೆ ಆಗ ನೀವು ಇದರ ಕೂದಲು ತೆಗೆಯಬಹುದು ಮತ್ತು ಮಚ್ಚೆ ತೆಗೆಯಲು ಚರ್ಮ ತಜ್ಞರ ಭೇಟಿಯಾಗಬಹುದು. ಚರ್ಮದ ಕ್ಯಾನ್ಸರ್ ನ ಸಾಧ್ಯತೆಯ ಬಗ್ಗೆ ನಿಮಗೆ ಈಗಲೂ ಚಿಂತೆಯಾಗುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಬಯಾಸ್ಪಿ ಮಾಡಿಸಿಕೊಳ್ಳಿ.



Click it and Unblock the Notifications











