Latest Updates
-
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ!
ಪುರುಷರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ಭಾರತೀಯ ಆಹಾರಗಳು
ಭಾರತದಲ್ಲಿ ಇಂದು ಸಂತಾನಹೀನತೆ ಪ್ರಮುಖ ತೊಂದರೆಯಾಗಿ ಪರಿಣಮಿಸಿದ್ದು ಲಕ್ಷಾಂತರ ದಂಪತಿಗಳ ದುಃಖಕ್ಕೆ ಕಾರಣವಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸಂತಾನಹೀನತೆ 20-30%ದಷ್ಟು ಏರಿದೆ. ಸಂತಾನಹೀನತೆಗೆ ದಂಪತಿಗಳಿಬ್ಬರೂ ಸಮಾನರಾಗಿ ಕಾರಣರಾದರೂ ಪುರುಷರಲ್ಲಿ ಈ ತೊಂದರೆಗೆ ಕನಿಷ್ಠ ಸಂಖ್ಯೆಯ ವೀರ್ಯಾಣುಗಳಿಲ್ಲದಿರುವುದು ಅಥವಾ ಇದ್ದರೂ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಪ್ರಮುಖ ಕಾರಣವಾಗಿದೆ.
ಇತ್ತೀಚಿನವರೆಗೂ ಪುರುಷರಲ್ಲಿಯೇ ಕೊರತೆ ಇದ್ದರೂ ಇದರಿಂದ ತಮ್ಮ ಪೌರುಷವನ್ನೇ ಕೆಣಕಿದಂತಾಗುತ್ತದೆ ಎಂಬ ಭಾವನೆಯಿಂದ ಹೆಚ್ಚಿನವರು ತಮ್ಮ ಪರೀಕ್ಷೆಯನ್ನೇ ಮಾಡಿಸದಿರುವುದು ಹಾಗೂ ಸಂತಾನಹೀನತೆಗೆ ಮಹಿಳೆಯನ್ನೇ ಕಾರಣವಾಗಿಸಿ ಎರಡನೇ ಮದುವೆ ಮಾಡಿಕೊಳ್ಳುವುದು, ಕೊನೆಗೊಮ್ಮೆ ಪುರುಷನಲ್ಲಿಯೇ ಕೊರತೆ ಇದೆ ಎಂದು ಖಚಿತವಾಗುವ ವೇಳೆಗೆ ಮಹಿಳೆ ತಾಯಿಯಾಗುವ ಅಮೂಲ್ಯ ವರ್ಷಗಳನ್ನು ದಾಟಿರುವುದು ಕಂಡುಬರುತ್ತಿತ್ತು. ಬಹುತೇಕ ಎಲ್ಲಾ ಊರಿನಲ್ಲಿಯೂ ಈ ತೊಂದರೆ ಇರುವ ಕುಟುಂಬಗಳಲ್ಲಿ ಇದು ಸಮಾನವಾದ ಕಾರಣವಾಗಿದೆ.
ಪುರುಷರು ನಿಮಿರು ಸಾಮರ್ಥ್ಯವನ್ನೇ ಸಂತಾನಫಲಕ್ಕೆ ಮೂಲ ಎಂದು ಭಾವಿಸಿರುವುದು ಇನ್ನೊಂದು ಕಾರಣ. ವಾಸ್ತವವಾಗಿ ಪ್ರತಿ ಮಿಲಿಲೀಟರ್ ವೀರ್ಯದಲ್ಲಿ ಯಲ್ಲಿ ಕನಿಷ್ಟ 20 ಮಿಲಿಯನ್ (2 ಕೋಟಿ) ಆರೋಗ್ಯಕರ ವೀರ್ಯಾಣುಗಳಿರಬೇಕು. ಇದಕ್ಕೂ ಕಡಿಮೆ ಇದ್ದರೆ ಗರ್ಭಾಂಕುರದ ಸಾಧ್ಯತೆ ಕಡಿಮೆ. ಆರೋಗ್ಯವರಂತರಲ್ಲಿ ಅರವತ್ತರಿಂದ ಇನ್ನೂರು ಮಿಲಿಯನ್ ನಷ್ಟಿರುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇರಲು ಹಲವಾರು ಕಾರಣಗಳಿವೆ. ಅನುವಂಶಿಕ, ಪರ್ಯಾವರಣ, ಅಹಾರಾಭ್ಯಾಸ, ಸಾಮಾಜಿಕ-ಆರ್ಥಿಕ ಸ್ಥಿತಿ, ಮಾನಸಿಕ ಒತ್ತಡ ಮೊದಲಾದ ಕೆಲವಾರು ಸಂದರ್ಭಗಳೂ ಪ್ರಭಾವ ಬೀರುತ್ತವೆ. ಕೆಲವು ಅನಾರೋಗ್ಯದ ಸ್ಥಿತಿಗಳೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವಂತೆ ಮಾಡುತ್ತವೆ.
ಜೀವನಶೈಲಿಯಲ್ಲಿ ಬದಲಾವಣೆಯ ಮೂಲಕ ಎದುರಾಗುವ ಸ್ಥೂಲಕಾಯ, ಅತಿಹೆಚ್ಚು ಧೂಮಪಾನ, ಮದ್ಯಪಾನ, ಮಾದಕದ್ರವ್ಯ ಸೇವನೆ, ದೇಹದಲ್ಲಿ ಸತುವಿನೆ ಕೊರತೆ ಮೊದಲಾದವೂ ಪ್ರಭಾವ ಬೀರಬಲ್ಲವು. ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಪುರುಷರು ಸೇವಿಸುವ ಆಹಾರವೂ ವೀರ್ಯಾಣುಗಳ ಗುಣಮಟ್ಟವನ್ನು ನಿರ್ಧರಿಸುತ್ತದೆ. ಸಂತುಲಿತ ಹಾಗೂ ಆರೋಗ್ಯಕರ ಆಹಾರಸೇವನೆಯಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಳವಾಗುತ್ತದೆ ಹಾಗೂ ಗರ್ಭಾಂಕುರದ ಸಾಧ್ಯತೆ ಹೆಚ್ಚುತ್ತದೆ. ಬನ್ನಿ, ಈ ಸಾಮರ್ಥ್ಯವನ್ನು ಹೆಚ್ಚಿಸುವ ಹನ್ನೆರಡು ಭಾರತೀಯ ಆಹಾರಗಳ ಬಗ್ಗೆ ಅರಿಯೋಣ....

ಮೊಟ್ಟೆಗಳು
ಪುರುಷರದಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ಮೊಟ್ಟೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಇ, ಪ್ರೋಟೀನು ಇವೆ. ಇವು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತವೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲೂ ಈ ಫ್ರೀ ರ್‍ಯಾಡಿಕಲ್ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಯಲ್ಲಿರುವ ಇತರ ಪೋಷಕಾಂಶಗಳೂ ದೇಹದ ಜೀವಕೋಶಗಳ ಬೆಳವಣಿಗೆಗೆ ನೆರವಾಗುವಂತೆಯೇ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಹೆಚ್ಚಲೂ ನೆರವಾಗುತ್ತದೆ.

ಪಾಲಕ್ ಸೊಪ್ಪು
ಪಾಲಕ್ ಹಾಗೂ ಬಸಲೆ ಸೊಪ್ಪುಗಳಲ್ಲಿ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲವಿದ್ದು ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ನೆರವಾಗುತ್ತದೆ. ಪುರುಷರಲ್ಲಿ ಫೋಲೇಟ್ ಅಂಶ ಕಡಿಮೆಯಾದಾಗ ವೀರ್ಯಾಣುಗಳ ಸಂಖ್ಯೆ ಅಷ್ಟೇ ಇದ್ದರೂ ಇದರಲ್ಲಿ ವಿಕೃತಗೊಂಡ ವೀರ್ಯಾಣುಗಳ ಸಂಖ್ಯೆ ಹೆಚ್ಚೇ ಇರುವ ಕಾರಣ ಇವು ಗರ್ಭಾಂಕುರಕ್ಕೆ ನೆರವಾಗವು, ಅಲ್ಲದೇ ಒಂದು ವೇಳೆ ಈ ವಿಕೃತ ವೀರ್ಯಾಣುವಿನ ಸಂಯೋಜನೆಯಿಂದ ಹುಟ್ಟಿದ ಮಗು ವಿಕಲಾಂಗವಾಗಿ ಹುಟ್ಟುವ ಸಾಧ್ಯತೆಯೂ ಹೆಚ್ಚು.

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ೧ ಹಾಗೂ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತವೆ. ಬಾಳೆಹಣ್ಣಿನಲ್ಲಿರುವ ಇನ್ನೊಂದು ಕಿಣ್ವವಾದ ಬ್ರೋಮಿಲೈನ್ ಒಂದು ನೈಸರ್ಗಿಕ ಉರಿಯೂತ ನಿವಾರಕ ವಾಗಿದ್ದು ಒಟ್ಟು ವೀರ್ಯಾಣುಗಳ ಸಂಖ್ಯೆ ಹಾಗೂ ಅದರಲ್ಲಿ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಿರುವಂತೆ ನೋಡಿಕೊಳ್ಳುತ್ತದೆ.

ಕಪ್ಪು ಚಾಕಲೇಟು
ಕಪ್ಪು ಚಾಕಲೇಟು (ಅಂದರೆ ಇಡಿಯ ಚಾಕಲೇಟಿನಲ್ಲಿ ಕೋಕೋ ಪ್ರಮಾಣ 70%ಕ್ಕೂ ಹೆಚ್ಚಿರುವ ಚಾಕಲೇಟು) ಸಹಾ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಳಕ್ಕೆ ನೆರವಾಗುತ್ತದೆ. ಇದರಲ್ಲಿರುವ ಅಮೈನೋ ಆಮ್ಲಗಳು ಒಟ್ಟು ವೀರ್ಯಾಣುಗಳ ಸಂಖ್ಯೆ ಹಾಗೂ ಆರೋಗ್ಯವಂತ ವೀರ್ಯಾಣುಗಳ ಪ್ರಮಾಣವೂ ಹೆಚ್ಚಾಗಲು ನೆರವಾಗುತ್ತವೆ. ಅಷ್ಟೇ ಅಲ್ಲ, ದಂಪತಿಗಳ ಮಿಲನದ ಸಮಯದಲ್ಲಿ ಕಾಮಪರಾಕಾಷ್ಠೆಯನ್ನೂ ಉತ್ತಮಗೊಳಿಸುತ್ತದೆ.

ಶತಾವರಿ
ಆಸ್ಪರಾಗಸ್ ಎಂದೇ ಹೆಚ್ಚು ಜನಪ್ರಿಯವಾಗಿರುವ ಶತಾವರಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದು ಸಹಾ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಇದು ವೃಷಣಗಳ ಜೀವಕೋಶಗಳನ್ನು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ರಕ್ಷಿಸುತ್ತದೆ, ತನ್ಮೂಲಕ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ಹಾಗೂ ವೀರ್ಯಾಣುಗಳ ಗುಣಮಟ್ಟ ಹೆಚ್ಚಲೂ ನೆರವಾಗುತ್ತದೆ.

ಬ್ರೋಕೋಲಿ
ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿಯಲ್ಲಿಯೂ ಉತ್ತಮ ಪ್ರಮಾಣದ ಫೋಲಿಕ್ ಆಮ್ಲವಿದ್ದು ಪುರುಷರಲ್ಲಿ ನಪುಂಸಕತ್ವವನ್ನು ನಿವಾರಿಸಲು ನೆರವಾಗುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಬ್ರೋಕೋಲಿಯನ್ನು ನಿಯಮಿತವಾಗಿ ಸೇವಿಸಿದ ಪುರುಷರ ವೀರ್ಯಾಣುಗಳ ಸಂಖ್ಯೆ ಸುಮಾರು 70%ದಷ್ಟು ಏರಿದೆ.

ದಾಳಿಂಬೆ
ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟವನ್ನು ಹೆಚ್ಚಿಸಲು ಸಮರ್ಥವಿರುವ ಇನ್ನೊಂದು ಫಲವೆಂದರೆ ದಾಳಿಂಬೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ವಿಶೇಷವಾಗಿ ರಕ್ತದ ಮೂಲಕ ಪ್ರವಹಿಸುವ ಫ್ರೀ ರ್‍ಯಾಡಿಕಲ್ ಕಣಗಳ ವಿರುದ್ದ ಹೋರಾಡುತ್ತದೆ. ಈ ಹಣ್ಣಿನ ತಿರುಳಿನಿಂದ ಸಂಗ್ರಹಿಸಿದ ರಸವನ್ನು ಸೇವಿಸುವ ಮೂಲಕ ವೀರ್ಯಾಣುಗಳ ಸಂಖ್ಯೆ ಹೆಚ್ಚುವುದನ್ನು ಭಾರತದಲ್ಲಿ ಸಾವಿರಾರು ವರ್ಷ ಹಿಂದಿನಿಂದಲೇ ಕಂಡುಕೊಳ್ಳಲಾಗಿತ್ತು.

ಅಕ್ರೋಟು
ಈ ಒಣಫಲಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲಗಳಿದ್ದು ವಿಶೇಷವಾಗಿ ವೃಷಣಗಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸಿ ವೀರ್ಯಾಣುಗಳ ಸಂಖ್ಯೆ ಹಾಗೂ ಆರೋಗ್ಯವಂತ ವೀರ್ಯಾಣುಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಅಕ್ರೋಟಿನಲ್ಲಿರುವ ಆರ್ಜಿನೈನ್ ಎಂಬ ಪೋಷಕಾಂಶಕ್ಕೆ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವ ಗುಣವಿದೆ.

ಬೆಳ್ಳುಳ್ಳಿ
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ೬ ಹಾಗೂ ಸೆಲೆನಿಯಂ ಎಂಬ ಪೋಷಕಾಂಶಗಳು ಆರೋಗ್ಯವಂತ ವೀರ್ಯಾಣುಗಳ ನಿರ್ಮಾಣಕ್ಕೆ ನೆರವಾಗುತ್ತವೆ. ಅಷ್ಟೇ ಅಲ್ಲ ಬೆಳ್ಳುಳ್ಳಿಯಲ್ಲಿ ರಕ್ತವನ್ನು ಶುದ್ಧೀಕರಿಸುವ ಗುಣವಿದ್ದು ಶುದ್ದವಾದ ರಕ್ತ ವೃಷಣಗಳಿಗೆ ಹರಿಯಲು ನೆರವಾಗುತ್ತದೆ, ತನ್ಮೂಲಕ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ.

ಕಪ್ಪೆಚಿಪ್ಪು ಅಥವಾ ಸಿಂಪಿ
ಕಪ್ಪೆಚಿಪ್ಪಿನಲ್ಲಿರುವ (Oysters) ಹೆಚ್ಚಿನ ಪ್ರಮಾಣದ ಸತು ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುತ್ತದೆ ಹಾಗೂ ಪುರುಷರ ದೇಹಕ್ಕೆ ಮೀಸಲಾದ ಟೆಸ್ಟೋಸ್ಟೆರಾನ್ ಎಂಬ ರಸದೂತದ ಪ್ರಮಾಣ ಹೆಚ್ಚಿಸುವ ಮೂಲಕ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆಯನ್ನೂ ಹೆಚ್ಚಿಸುತ್ತದೆ.

ಅಶ್ವಗಂಧ
ಇವುಗಳ ಸೇವನೆಯಿಂದ ನಿಮ್ಮ ಮನೋಭಾವನೆ ಮಾತ್ರವೇ ಉತ್ತಮಗೊಳ್ಳುವುದಲ್ಲ, ಜೊತೆಗೇ ವೀರ್ಯಾಣುಗಳ ಸಂಖ್ಯೆಗೂ ವೃದ್ದಿಗೊಳ್ಳುತ್ತದೆ. ಈ ಬೆರ್ರಿಗಳು ಫ್ರೀ ರ್‍ಯಾಡಿಕಲ್ ಹಾಗೂ ಇತರ ಹಾನಿಕಾರಕ ಕಣಗಳು ವೀರ್ಯಾಣುಗಳ ಮೇಲೆ ಒಡ್ಡುವ ಪ್ರಹಾರವನ್ನು ತಡೆದು ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ನೆರವಾಗುತ್ತವೆ. ಈ ಮಾಹಿತಿ ಉತ್ತಮ ಎಂದು ಕಂಡುಬಂದರೆ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ, ಸಂತಾನಹೀನತೆಯಿಂದ ದುಃಖಿತ ದಂಪತಿಗಳಿಗೆ ಇದು ಆಶಾಕಿರಣವಾಗಬಹುದು.



Click it and Unblock the Notifications








