Latest Updates
-
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ!
ದೇಹವನ್ನು ನಿರ್ವಿಷಗೊಳಿಸುವ ಎಬಿಸಿ ಪಾನೀಯ!

ಆರೋಗ್ಯದ ಬಗ್ಗೆ ನಿಜವಾದ ಕಾಳಜಿ ಇರುವವರು ಆಹಾರ ಕ್ರಮ ಹಾಗೂ ವ್ಯಾಯಮ ಅಥವಾ ಯೋಗದಿಂದ ಇದನ್ನು ಸರಿಯಾದ ರೀತಿಯಲ್ಲಿ ದೇಹವನ್ನು ಇಟ್ಟುಕೊಳ್ಳುವರು. ಆದರೆ ಇಂದಿನ ದಿನಗಳಲ್ಲಿ ನೀವು ಆರೋಗ್ಯದ ಬಗ್ಗೆ ಸಲಹೆ ಕೇಳಲು ಹೋದರೆ ಸಾವಿರಾರು ಸಲಹೆಗಳು ನಿಮ್ಮ ಮುಂದಿರುವುದು. ಇದರಲ್ಲಿ ಯಾವುದನ್ನು ಪಾಲಿಸಬೇಕು ಅಥವಾ ಬಿಡಬೇಕು ಎನ್ನುವುದೇ ದೊಡ್ಡ ಪ್ರಶ್ನೆ. ಈಗೀಗ ಆರೋಗ್ಯದ ಕಾಳಜಿ ಇರುವವರು ಪ್ರಮುಖವಾಗಿ ದೇಹದಿಂದ ವಿಷ ಹೊರಹಾಕುವ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಜ್ಯೂಸ್ ಮೂಲಕವಾಗಿ ದೇಹದಲ್ಲಿರುವ ವಿಷವನ್ನು ಹೊರಹಾಕುವುದು ಸುಲಭ ಹಾಗೂ ಉತ್ತಮ ವಿಧಾನ. ಇದು ದೇಹದಲ್ಲಿರುವ ವಿಷ ಹೊರಹಾಕುವುದು ಮಾತ್ರವಲ್ಲದೆ, ಪ್ರಮುಖವಾಗಿರುವ ಪೋಷಕಾಂಶಗಳನ್ನು ದೇಹಕ್ಕೆ ನೀಡುವುದು. ವಿಷಕಾರಿಗಳನ್ನು ಹೊರಹಾಕುವಂತಹ ಜ್ಯೂಸ್ ಕುಡಿದರೆ ಅದರಿಂದ ನೀವು ದಿನಪೂರ್ತಿ ತುಂಬಾ ಉಲ್ಲಾಸದಿಂದ ಇರಬಹುದು. ಈ ಜ್ಯೂಸ್ ನ್ನು ಬೀಟ್ ರೂಟ್, ಕ್ಯಾರೆಟ್ ಮತ್ತು ಸೇಬಿನ ಜ್ಯೂಸ್ ನಿಂದ ಮಾಡಲಾಗುತ್ತದೆ. ಇದರಿಂದ ಇದನ್ನು ಎಬಿಸಿ ನಿರ್ವಿಷಗೊಳಿಸುವ ಜ್ಯೂಸ್ ಎಂದು ಕರೆಯಲಾಗುತ್ತದೆ.

ಈ ಜ್ಯೂಸ್ ನಿಂದ ಹಲವಾರು ರೀತಿಯ ಲಾಭಗಳು ದೇಹಕ್ಕೆ ಸಿಗಲಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುವುದು. ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಕೆಲವು ರೋಗಗಳಿಗೆ ಚೀನಾದ ಗಿಡಮೂಲಿಕೆ ತಜ್ಞರು ಇದನ್ನು ಕಂಡುಹುಡುಕಿದ್ದಾರೆ. ಇದರ ಬಗ್ಗೆ ಓದುತ್ತಾ ತಿಳಿಯಿರಿ.
ಸೇಬಿನ ಆರೋಗ್ಯ ಲಾಭಗಳು
ಸೇಬಿನಲ್ಲಿ ಪ್ರಮುಖ ವಿಟಮಿನ್ ಗಳಾದ ವಿಟಮಿನ್ ಎ, ಬಿ1, ಬಿ2, ಬಿ6, ವಿಟಮಿನ್ ಸಿ ಮತ್ತು ಇ, ಕೆ, ಫಾಲಟೆ, ನಿಯಾಸಿನ್, ಸತು, ತಾಮ್ರ, ಪೊಟಾಶಿಯಂ, ಪೋಸ್ಪರಸ್ ಮತ್ತು ಮೆಗ್ನಿಶಿಯಂ ಇದೆ. ಸೇಬಿನಲ್ಲಿ ಇರುವಂತಹ ಆಹಾರದ ನಾರಿನಾಂಶವು ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದ್ದು, ಇದು ಕರುಳಿನ ಕ್ರಿಯೆಯನ್ನು ಸರವಾಗಿಸಲು ನೆರವಾಗುವುದು. ಸೇಬಿನಲ್ಲಿರುವಂತಹ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಪ್ರತಿರೋಧಕ ಶಕ್ತಿ, ನರವ್ಯವಸ್ಥೆ ಬಲಗೊಳಿಸುವುದು. ಫ್ರೀ ರ್ಯಾಡಿಕಲ್ ನಿಂದ ಕೋಶಗಳನ್ನು ರಕ್ಷಿಸುವುದು.
ಬೀಟ್ ರೂಟ್ ನ ಲಾಭಗಳು
ಬೀಟ್ ರೂಟ್ ಹೃದಯ ಆರೋಗ್ಯಕ್ಕೆ ಅತೀ ಉತ್ತಮ ಮತ್ತು ಇದರಲ್ಲಿರುವಂತಹ ವಿಟಮಿನ್ ಎ, ಸಿ, ಬಿ-ಸಂಕೀರ್ಣ, ಕಬ್ಬಿಣ, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ತಾಮ್ರವಿದೆ. ಬೀಟ್ ರೂಟ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಗಳಾದ ಲೈಕೋಪೀನ್ ಮತ್ತು ಆಂಥೋಸಯಾನಿನ್ಸ್ ಗಳಿವೆ. ಇದರಿಂದಾಗಿ ಕಡು ನಸುಗೆಂಪು ಮತ್ತು ಕೆನ್ನೇರಳೆ ಬಣ್ಣವು ಬರುವುದು. ಈ ಆ್ಯಂಟಿಆಕ್ಸಿಡೆಂಟ್ ಗಳು ಪ್ರತಿರೋಧಕ ಶಕ್ತಿ ಬಲಿಷ್ಠಗೊಳಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು. ಇದರಲ್ಲಿ ವಯಸ್ಸಾಗುವ ಲಕ್ಷಣ ನಿಧಾನಗೊಳಿಸುವಂತಹ ಅಂಶಗಳು ಇವೆ. ಇದರಲ್ಲಿರುವಂತಹ ಬೆಟಾಲೈನ್ ಎನ್ನುವ ಅಂಶವು ಉರಿಯೂತ ಶಮನಕಾರಿಯಾಗಿದೆ. ಇದು ಯಕೃತ್ ನ್ನು ರಕ್ಷಿಸುವುದು.
ಕ್ಯಾರೆಟ್ ನ ಲಾಭಗಳು
ಕ್ಯಾರೆಟ್ ನಲ್ಲಿ ಹಲವಾರು ರೀತಿಯ ಪೋಷಕಾಂಶಗಳಾದ ವಿಟಮಿನ್ ಎ, ವಿಟಮಿನ್ ಬಿ1, ಬಿ2, ಬಿ3, ಬಿ6, ವಿಟಮಿನ್ ಕೆ, ವಿಟಮಿನ್ ಇ ಮತ್ತು ವಿಟಮಿನ್ ಸಿ ಇದೆ. ಖನಿಜಾಂಶಗಳಾದ ಮೆಗ್ನಿಶಿಯಂ, ಪೊಟಾಶಿಯಂ, ಕ್ಯಾಲ್ಸಿಯಂ, ಫೋಸ್ಪರಸ್ ಮತ್ತು ಸೆಲೆನಿಯಂ ಇದೆ. ಕ್ಯಾರೆಟ್ ನಲ್ಲಿ ಇರುವಂತಹ ಬೆಟಾ ಕ್ಯಾರೋಟಿನ್ ಅಂಶವು ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಂಡು ಕಣ್ಣುಗಳು ಹಾಗೂ ಪ್ರತಿರೋಧಕ ಶಕ್ತಿಗೆ ನೆರವಾಗುವುದು. ವಿಟಮಿನ್ ಎ ದೇಹದಲ್ಲಿರುವ ಅತಿಯಾದ ವಿಷವನ್ನು ಹೊರಹಾಕುವುದು. ಯಕೃತ್ ನಿಂದ ಪಿತ್ತರಸ ಕಡಿಮೆ ಮಾಡಿ ಕಣ್ಣಿನ ಆರೋಗ್ಯವನ್ನು ಉತ್ತಮಪಡಿಸುವುದು.
ಎಬಿಸಿ ನಿರ್ವಿಷ ಪಾನೀಯದ ಆರೋಗ್ಯ ಲಾಭಗಳು
ಮೂರು ಪ್ರಮುಖ ಸಾಮಗ್ರಿಗಳಾದ ಸೇಬು, ಬೀಟ್ ರೂಟ್ ಮತ್ತು ಕ್ಯಾರೆಟ್ ನಿಂದಾಗಿ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು ಮತ್ತು ಇದು ನಿಮ್ಮನ್ನು ದಿನವಿಡಿ ಶಕ್ತಿಯುತವಾಗಿಡುವುದು ಮಾತ್ರವಲ್ಲದೆ ಚರ್ಮ ಮತ್ತು ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳನ್ನು ದೀರ್ಘಕಾಲಕ್ಕೆ ನೀಡುವುದು. ಈ ಅದ್ಭುತ ಪಾನೀಯದ ಲಾಭಗಳ ಬಗ್ಗೆ ತಿಳಿಯಿರಿ.
1. ವಿಟಮಿನ್ ಗಳು ಮತ್ತು ಖನಿಜಾಂಶಗಳಿಂದ ಸಮೃದ್ಧ
ತುಂಬಾ ಆರೋಗ್ಯಕರವಾಗಿರುವ ಈ ಅದ್ಭುತ ಪಾನೀಯದಲ್ಲಿ ಪ್ರಮುಖ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ಪ್ರತಿಯೊಂದು ಅಂಶವು ಈ ಪಾನೀಯಕ್ಕೆ ಪೋಷಕಾಂಶಗಳ ಮೌಲ್ಯ ಒದಗಿಸಿದೆ. ಮೂರು ಜತೆಯಾಗಿರುವುದರಿಂದ ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ6, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ಫಾಲಟೆ, ಕಬ್ಬಿಣ, ಮೆಗ್ನಿಶಿಯಂ, ಫ್ರೋಸ್ಪರಸ್, ಪೊಟಾಶಿಯಂ, ಕ್ಯಾಲ್ಸಿಯಂ, ಸತು, ತಾಮ್ರ, ನಿಯಾಸಿನ್, ಸೋಡಿಯಂ ಮತ್ತು ಮೆಗ್ನಿಶಿಯಂ ದೇಹಕ್ಕೆ ಲಭ್ಯವಾಗುವುದು.
2. ಮೆದುಳಿಗೆ ಶಕ್ತಿ
ನರಗಳು ತುಂಬಾ ವೇಗವಾಗಿ ಪ್ರತಿಕ್ರಿಯಿಸುವಂತೆ ಮಾಡುವ ಎಬಿಸಿ ಜ್ಯೂಸ್ ಮೆದುಳಿಗೆ ಶಕ್ತಿ ನೀಡುವುದು. ಇದು ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಿಸುವುದು. ಇದರಿಂದ ನೀವು ತುಂಬಾ ವೇಗವಾಗಿ ಚಿಂತಿಸಿ, ಉತ್ತಮವಾಗಿ ಕೆಲಸ ಮಾಡಬಹುದು.
3. ಹೃದಯಕ್ಕೆ ಒಳ್ಳೆಯದು
ಈ ಅದ್ಭುತ ಪಾನೀಯವು ಹೃದಯಕ್ಕೆ ತುಂಬಾ ಒಳ್ಳೆಯದು. ಬೀಟ್ ರೂಟ್ ಮತ್ತು ಕ್ಯಾರೆಟ್ ನಲ್ಲಿ ಬೆಟಾ ಕ್ಯಾರೋಟಿನ್, ಲುಟೇನ್ ಮತ್ತು ಅಲ್ಪಾ ಇದೆ. ಇದು ಹೃದಯದ ಆರೋಗ್ಯ ಕಾಪಾಡುವುದು. ಈ ಎರಡು ತರಕಾರಿಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು ಮತ್ತು ಹೃದಯವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುವುದು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಕ್ಯಾರೊಟೆನಾಯ್ಡ್ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವುದು.
4. ಕಣ್ಣಿನ ಸ್ನಾಯುಗಳ ಶಕ್ತಿ ಹೆಚ್ಚಿಸುವುದು
ಕಣ್ಣು ದಿನವಿಡಿ ಹೆಚ್ಚಿನ ಒತ್ತಡ ಹಾಗೂ ಬಳಲಿಕೆಗೆ ಒಳಗಾಗುವುದು. ಅದರಲ್ಲೂ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವವರಿಗೆ ಈ ಸಮಸ್ಯೆ ಹೆಚ್ಚು. ಇದು ನಿಮ್ಮ ಕಣ್ಣುಗಳು ಬಳಲಿದಂತೆ ಮಾಡುವುದು ಮತ್ತು ಸ್ನಾಯುಗಳ ಮೇಲೆ ಪರಿಣಾಮ ಬೀರಿ ಕಣ್ಣುಗಳು ಒಣಗುವುದು. ಸೇಬು, ಬೀಟ್ ರೂಟ್ ಮತ್ತು ಕ್ಯಾರೆಟ್ ನ ಈ ಜ್ಯೂಸ್ ಕುಡಿದರೆ ನಿಮ್ಮ ದೇಹಕ್ಕೆ ವಿಟಮಿನ್ ಎ ಸಿಗುವುದು. ಇದು ದೃಷ್ಟಿ ಉತ್ತಮಪಡಿಸಲು ನೆರವಾಗುವುದು. ಎಬಿಸಿ ಪಾನೀಯವು ಬಳಲಿರುವಂತಹ ಕಣ್ಣುಗಳಿಗೆ ಆರಾಮ ನೀಡುವುದು ಮತ್ತು ಇದರಿಂದ ಕಣ್ಣಿನ ದೃಷ್ಟಿ ಉತ್ತಮವಾಗುವುದು.
5. ಒಳಗಿನ ಅಂಗಾಂಗಳನ್ನು ಬಲಗೊಳಿಸುವುದು
ದೇಹದಲ್ಲಿರುವ ಪ್ರತಿಯೊಂದು ಅಂಗಾಂಗಳಿಗೆ ತನ್ನದೇ ಆಗಿರುವಂತಹ ಪಾತ್ರವಿದೆ. ಇದು ಸಂಪೂರ್ಣ ದೇಹದ ರಕ್ಷಣೆ ಮಾಡುವುದು. ಬೀಟ್ ರೂಟ್ ಮತ್ತು ಕ್ಯಾರೆಟ್ ನಲ್ಲಿ ಇರುವಂತಹ ಅಲ್ಪಾ ಮತ್ತು ಬೆಟಾ ಕ್ಯಾರೋಟಿನ್ ಅಂಶಗಳು ಯಕೃತ್ ನ್ನು ನಿರ್ವಿಷಗೊಳಿಸುವುದು, ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡುವುದು, ಕೊಲೆಸ್ಟ್ರಾಲ್ ನಿಯಂತ್ರಿಸುವುದು, ಜೀರ್ಣಕ್ರಿಯೆ ಸುಧಾರಿಸಿ, ದೇಹವು ತುಂಬಾ ಕ್ರಿಯೆಯಿಂದ ಮತ್ತು ಫಿಟ್ ಇರುವಂತೆ ಮಾಡುವುದು. ಇದರಿಂದ ಹೃದಯದ ಕಾಯಿಲೆ, ಅಲ್ಸರ್ ಸಮಸ್ಯೆ, ಯಕೃತ್ ಸಮಸ್ಯೆ, ದೀರ್ಘಕಾಲದ ಮಲಬದ್ಧತೆ ಮತ್ತು ಕಿಡ್ನಿ ಸಮಸ್ಯೆ ನಿವಾರಿಸುವುದು.
6. ಸಾಮಾನ್ಯ ಕಾಯಿಲೆಗಳ ವಿರುದ್ಧ ಹೋರಾಟ
ಈ ಜ್ಯೂಸ್ ನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸಿ, ವರ್ಧಿಸುವುದು. ಇದರಿಂದ ಸಾಮಾನ್ಯ ಕಾಯಿಲೆಗಳಾದ ಜ್ವರ, ರಕ್ತಹೀನತೆ ಮತ್ತು ಅಸ್ತಮಾವನ್ನು ತಡೆಯುವುದು. ಪ್ರತಿರೋಧಕ ಶಕ್ತಿಯು ಉತ್ತಮವಾಗಿರಲು ಹಿಮೋಗ್ಲೋಬಿನ್ ಮಟ್ಟವು ಉತ್ತಮವಾಗಿರಬೇಕು ಮತ್ತು ಬಿಳಿ ರಕ್ತದ ಕಣಗಳು ಸರಿಯಾಗಿರುವುದು ಮುಖ್ಯ. ಬೀಟ್ ರೂಟ್, ಕ್ಯಾರೆಟ್ ಮತ್ತು ಸೇಬಿನ ಜ್ಯೂಸ್ ನಿಂದ ದೇಹದಲ್ಲಿ ಬಿಳಿರಕ್ತ ಕಣಗಳು ಉತ್ಪತ್ತಿಯಾಗುವುದು ಮತ್ತು ಹಿಮೋಗ್ಲೋಬಿನ್ ಕಾಪಾಡುವುದು. ಇದರಿಂದ ಸಣ್ಣಪುಟ್ಟ ಕಾಯಿಲೆಗಳು ದೂರವಿರುವುದು.
7. ಚರ್ಮದ ಆರೋಗ್ಯಕ್ಕೆ
ಸೇಬು, ಬೀಟ್ ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ನ ಪ್ರಮುಖ ಲಾಭವೆಂದರೆ ಇದು ಚರ್ಮದಲ್ಲಿ ಮೂಡುವ ಕಲೆಗಳು, ಕಪ್ಪುಕಲೆಗಳು, ಮೊಡವೆ ಮತ್ತು ಇತರ ಬೊಕ್ಕೆಗಳ ಸಮಸ್ಯೆಯನ್ನು ನಿವಾರಣೆ ಮಾಡಿ, ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು. ಇದರಲ್ಲಿ ವಿಟಮಿನ್ ಎ, ಬಿ ಸಂಕೀರ್ಣ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಚರ್ಮವು ಯೌವನಯುತವಾಗಿ ಕಾಣುವಂತೆ ಮಾಡುವುದು.
8. ತೂಕ ಇಳಿಸಲು
ತೂಕ ಕಳೆದುಕೊಳ್ಳಬೇಕೆಂದು ಬಯಸುವವರು ಎಬಿಸಿ ಜ್ಯೂಸ್ ಸೇವನೆ ಮಾಡಬಹುದು. ಇದರಲ್ಲಿರುವ ಕಡಿಮೆ ಕ್ಯಾಲರಿಗಳು ದೇಹದ ತೂಕ ಇಳಿಕೆಗೆ ನೆರವಾಗುವುದು. ಈ ನಿರ್ವಿಷ ಪಾನೀಯವು ತೂಕ ಕಳೆದುಕೊಳ್ಳಲು ತುಂಬಾ ಪರಿಣಾಮಕಾರಿಯಾಗಿ ನೆರವಾಗುವುದು. ಯಾಕೆಂದರೆ ಇದರಲ್ಲಿ ಗ್ಲೆಸಮಿಕ್ ಕಡಿಮೆಯಿದೆ ಮತ್ತು ನಾರಿನಾಂಶವು ಹೆಚ್ಚಾಗಿದೆ. ಇದು ಕಡಿಮೆ ಕ್ಯಾಲರಿ ಸೇವನೆ ಮಾಡಿ, ದೇಹಕ್ಕೆ ಹೆಚ್ಚಿನ ಶಕ್ತಿ ಒದಗಿಸುವುದು.
ಎಬಿಸಿ ನಿರ್ವಿಷ ಪಾನೀಯವನ್ನು ಯಾವಾಗ ಸೇವಿಸಬೇಕು?
ಪ್ರತಿನಿತ್ಯ ದಿನಕ್ಕೆ ಒಂದು ಸಲ ಈ ಪಾನೀಯವನ್ನು ಸೇವಿಸಬೇಕೆಂದು ಹೇಳಲಾಗಿದೆ. ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಸೇವನೆ ಮಾಡಿದರೆ ಅದರಿಂದ ಅದ್ಭುತವಾಗಲಿದೆ. ಉಪಾಹಾರಕ್ಕೆ ಒಂದು ಗಂಟೆ ಮೊದಲು ಇದನ್ನು ಕುಡಿಯಿರಿ ಅಥವಾ ಸಂಜೆ ವೇಳೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಪಾನೀಯ ತಯಾರಿಸುವುದು ಹೇಗೆ?
ಬೇಕಾಗುವ ಸಾಮಗ್ರಿಗಳು
- ಒಂದು ದೊಡ್ಡ ಬೀಟ್ ರೂಟ್
- ಒಂದು ದೊಡ್ಡ ಸೇಬು
- ಒಂದು ತುಂಡು ತಾಜಾ ಶುಂಠಿ
- ಒಂದು ಕ್ಯಾರೆಟ್
ವಿಧಾನ
- ಬೀಟ್ ರೂಟ್ ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆಯಿರಿ.
- ಇದರ ಸಿಪ್ಪೆ ತೆಗೆದುಕೊಂಡು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ.
- ಸೇಬು ಮತ್ತು ಕ್ಯಾರೆಟ್ ನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ.
- ಇದನ್ನು ಜ್ಯೂಸರ್ ಗೆ ಹಾಕಿ ಮತ್ತು ಅದಕ್ಕೆ ಶುಂಠಿ ಹಾಕಿ.
- ¼ ಕಪ್ ನೀರು ಹಾಕಿಕೊಂಡು ಇದನ್ನು ರುಬ್ಬಿಕೊಳ್ಳಿ.
- ಸೋಸಿಕೊಂಡು ಕುಡಿಯಿರಿ.
ಈ ಲೇಖನ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications








