Latest Updates
-
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು!
ಕಾಮಾಸಕ್ತಿ ಹಾಗೂ ಸೆಕ್ಸ್ ಪವರ್ ಹೆಚ್ಚಿಸುವ ಆಹಾರಗಳು
ನಮ್ಮ ದೇಹದ ಪ್ರಮುಖ ಘಟ್ಟಗಳನ್ನು ನಿಯಂತ್ರಿಸುವ ರಸದೂತಗಳು ಸಮಪ್ರಮಾಣದಲ್ಲಿ ಸ್ರವಿಸುವ ಮೂಲಕ ಆರೋಗ್ಯಕರ ಜೀವನ ಪಡೆಯಲು ಸಾಧ್ಯ. ಆರೋಗ್ಯಕರ ಎತ್ತರ, ಆರೋಗ್ಯಕ ಲೈಂಗಿಕ ಜೀವನ, ದಂಪತಿಗಳಿಬ್ಬರಲ್ಲಿಯೂ ಫಲವತ್ತತೆ, ತ್ವಚೆ, ಕೂದಲು, ಚರ್ಮದ ಕಾಂತಿ ಮೊದಲಾದ ಪ್ರತಿಯೊಂದೂ ನಮ್ಮ ರಸದೂತಗಳ ನಿಯಂತ್ರಣಕ್ಕೊಳಪಟ್ಟಿವೆ. ಈ ಪ್ರಮಾಣ ಹೆಚ್ಚಾದರೂ, ಕಡಿಮೆಯಾದರೂ ಇವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಹಾಗೂ ಹಲವು ಕ್ಲಿಷ್ಟತೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ನಿಟ್ಟಿನಲ್ಲಿ ಎದುರಾಗುವ ಮೊದಲ ಪ್ರಶ್ನೆ ಎಂದರೆ ಈ ರಸದೂತಗಳ ಪ್ರಮಾಣ ಸಮತೋಲನದಲ್ಲಿರಿಸುವುದು ಹೇಗೆ?
ರಸದೂತಗಳ ಪ್ರಮಾಣಗಳನ್ನು ಸುಲಭವಾಗಿ ಸಮಪ್ರಮಾಣದಲ್ಲಿರಿಸಲು ಜೀವನದಲ್ಲಿ ಕೆಲವು ಅಗತ್ಯವಾದುದನ್ನು ಮಾತ್ರ ಅನುಸರಿಸಿ ಅನಗತ್ಯವಾದುದನ್ನು ಅನುಸರಿಸದೇ ಇರುವುದನ್ನು ನಿತ್ಯದ ಅಭ್ಯಾಸವನ್ನಾಗಿಸಬೇಕು. ಇದರಲ್ಲಿ ಆರೋಗ್ಯಕ ಆಹಾರಗಳತ್ತ ಒಲವು ಹಾಗೂ ಅನಾರೋಗ್ಯಕರ ಆಹಾರಗಳನ್ನು ವರ್ಜಿಸುವುದು ಸೇರಿದೆ. ಲೈಂಗಿಕ ಜೀವನ ಸುಖಕರವಾಗಿಸುವ ರಸದೂತಗಳನ್ನು ಹೆಚ್ಚಿಸುವ ಮತ್ತು ಒತ್ತಡಕ್ಕೆ ಕಾರಣವಾಗುವ ರಸದೂತಗಳನ್ನು ಕಡಿಮೆ ಮಾಡುವ ಆಹಾರಗಳನ್ನು ಸೇವಿಸಬೇಕು. ಮಾನಸಿಕ ಒತ್ತಡದಲ್ಲಿದ್ದಾಗ ಇದು ಕೇವಲ ಮೆದುಳಿನ ಮೇಲೆ ಮಾತ್ರವಲ್ಲ, ದೇಹದ ಹಲವು ವ್ಯವಸ್ಥೆಗಳ ಮೇಲೂ ಪ್ರಭಾವ ಬೀರುತ್ತದೆ.
ಲೈಂಗಿಕ ಶಕ್ತಿ ಉಡುಗುವುದು ಹಾಗೂ ಲೈಂಗಿಕ ರಸದೂತಗಳ ಪ್ರಮಾಣ ಕಡಿಮೆಯಾಗುವುದು ಇದರಲ್ಲಿ ಪ್ರಮುಖವಾಗಿವೆ. ಮನಸ್ಸಿನ ಒತ್ತಡಕ್ಕೆ ಕಾರ್ಟಿಸೋಲ್ ಎಂಬ ರಸದೂತ ಕಾರಣವಾಗಿದ್ದು ಇದರ ಪ್ರಮಾಣ ಹೆಚ್ಚಾದರೆ ಇದು ದೇಹದ ಹಲವು ವ್ಯವಸ್ಥೆಗಳನ್ನು ಏರುಪೇರುಗೊಳಿಸುತ್ತದೆ. ಆದ್ದರಿಂದ ಲೈಂಗಿಕ ಶಕ್ತಿ ಮತ್ತು ಲೈಂಗಿಕ ರಸದೂತಗಳ ಪ್ರಮಾಣ ಆರೋಗ್ಯಕರವಾಗಿರಬೇಕಾದರೆ ಮಾನಸಿಕ ಒತ್ತಡರಹಿತರಾಗುವುದು ಮುಖ್ಯ. ಲೈಂಗಿಕ ನಿಃಶಕ್ತಿಗೆ ರಸದೂತಗಳ ಸಮತೋಲನ ಏರುಪೇರಾಗುವುದೂ ಒಂದು ಕಾರಣವಾಗಿದೆ.
ಇದರ ಜೊತೆಗೇ ನಿದ್ದೆಯ ಕೊರತೆ, ಭಾವನಾತ್ಮಕ ಒತ್ತಡ, ಕೆಲಸದ ಒತ್ತಡ, ಅನಾರೋಗ್ಯಕರ ಆಹಾರ, ವ್ಯಾಯಾಮದ ಕೊರತೆ ಮೊದಲಾದವು ದೇಹದ ರಸದೂತಗಳ ಪ್ರಮಾಣದ ಮೇಲೆ ಪ್ರಭಾವ ಬೀರುತ್ತವೆ. ತನ್ಮೂಲಕ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರಿ ಲೈಂಗಿಕ ನಿಃಶಕ್ತಿಗೆ ಕಾರಣವಾಗುತ್ತವೆ. ಈ ಲೈಂಗಿಕ ರಸದೂತಗಳನ್ನು ಹೆಚ್ಚಿಸಲು ಕೆಲವು ಅದ್ಭುತ ವಿಧಾನಗಳನ್ನು ವಿವರಿಸಲಾಗಿದೆ. ಇವುಗಳನ್ನು ಪಾಲಿಸುವ ಮೂಲಕ ಲೈಂಗಿಕ ರಸದೂತಗಳನ್ನು ಹೆಚ್ಚಿಸಲು ಮತ್ತು ಒತ್ತಡ ರಸದೂತಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ....

ಅರಿಶಿನ ಬೆರೆಸಿದ ಹಾಲು
ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಬಿಸಿ ಹಾಲನ್ನು ಕುಡಿಯುವ ಮೂಲಕ ಮನಸ್ಸಿಗೆ ಮುದ ಲಭಿಸುತ್ತದೆ ಹಾಗೂ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದಕ್ಕಾಗಿ ಒಂದು ಲೋಟ ಹಾಲಿನಲ್ಲಿ ಅರ್ಧ ಚಿಕ್ಕ ಚಮಚ ಅರಿಶಿನ ಪುಡಿ, ಅರ್ಧ ಚಿಕ್ಕ ಚಮಚ ಏಲಕ್ಕಿ ಪುಡಿಯನ್ನು ಬೆರೆಸಿ ಸುಮಾರು ಐದು ನಿಮಿಷಗಳ ಕಾಲ ಕುದಿಸಿ. ಬಳಿಕ ಉರಿ ಆರಿಸಿ ಒಂದು ಚಿಕ್ಕ ಚಮಚ ಜೇನು ಬೆರೆಸಿ. ಈ ಹಾಲನ್ನು ಕುಡಿಯುವ ಮೂಲಕ ಲೈಂಗಿಕ ರಸದೂತಗಳನ್ನು ಹೆಚ್ಚಿಸಬಹುದು ಹಾಗೂ ಮಾನಸಿಕ ಒತ್ತಡದ ರಸದೂತಗಳನ್ನು ಕಡಿಮೆಗೊಳಿಸುತ್ತದೆ.

ಬಿಸಿ ಆಹಾರಗಳನ್ನು ಸೇವಿಸಿ
ಆಯುರ್ವೇದದ ಪ್ರಕಾರ, ಬಿಸಿ ಆಹಾರಗಳ ಸೇವನೆ ಆರೋಗ್ಯಕರವಾಗಿದೆ. ತಣ್ಣನೆಯ ಆಹಾರಗಳನ್ನು ಸೇವಿಸುವ ಮೂಲಕ ಜಠರದ ಅಗ್ನಿಯನ್ನು ಕಡಿಮೆಗೊಳಿಸುತ್ತದೆ ಹಾಗೂ ಆಹಾರವನ್ನು ಜೀರ್ಣಗೊಳಿಸಲು ಕಷ್ಟವಾಗುತ್ತದೆ. ಅಲ್ಲದೇ ರಾತ್ರಿಯೂಟದ ಸಮಯದಲ್ಲಿ ಹಸಿ ಆಹಾರಗಳನ್ನು ಸೇವಿಸಬಾರದು. ಹಸಿ ಆಹಾರಗಳನ್ನು ಜಠರಾಗ್ನಿ ಗರಿಷ್ಟವಾಗಿರುವ ಮದ್ಯಾಹ್ನದ ಊಟದ ಸಮಯದಲ್ಲಿ ಸೇವಿಸಬೇಕು ಎಂದು ಆಯುರ್ವೇದ ತಿಳಿಸುತ್ತದೆ.

ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿರುವ ಆಹಾರ ಸೇವಿಸಿ
ಒಮೆಗಾ 3 ಕೊಬ್ಬಿನ ಆಮ್ಲಗಳು ಉರಿಯೂತವನ್ನು ಕಡಿಮೆಗೊಳಿಸುತ್ತವೆ ಹಾಗೂ ಈ ಮೂಲಕ ಮಾನಸಿಕ ಒತ್ತಡಕ್ಕೆ ಕಾರಣವಾಗುವ ಕಾರ್ಟಿಸೋಲ್ ರಸದೂತದ ಸ್ರಾವ ಕಡಿಮೆಗೊಳಿಸಲು ನೆರವಾಗುತ್ತದೆ. ಈ ರಸದೂತ ಮಾನಸಿಕ ಒತ್ತಡ ಹೆಚ್ಚಿಸುವ ಜೊತೆಗೇ ಲೈಂಗಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಈ ಆಮ್ಲ ಹೆಚ್ಚಿರುವ ಸಾಲ್ಮನ್ ಮೀನು, ಟ್ಯೂನಾ, ಬಂಗಡೆ ಮೊದಲಾದ ಆಹಾರಗಳನ್ನು ಸೇವಿಸಿ. ಇತರ ಆಹಾರಗಳಾದ ತಣ್ಣನೆಯ ವಿಧಾನದಲ್ಲಿ ಹಿಂಡಲಾದ ಕೊಬ್ಬಿನ ಆಮ್ಲಗಳು, ಅಗಸೆ ಬೀಜಗಳು, ಅಕ್ರೋಟು ಇತ್ಯಾದಿಗಳನ್ನೂ ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕು.

ಒಳ್ಳೆಯ ಕೊಬ್ಬುಗಳು
ನಮ್ಮ ದೇಹಕ್ಕೆ ಕೊಬ್ಬುಗಳೂ ಅಗತ್ಯವಾಗಿವೆ. ಇವುಗಳ ಪ್ರಮಾಣ ಅತಿಯಾಗಬಾರದು ಅಷ್ಟೇ. ಆದ್ದರಿಂದ ಒಳ್ಳೆಯ ಕೊಬ್ಬುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕಾಗುತ್ತದೆ. ಇವುಗಳಿಂದ ರಕ್ತದಲ್ಲಿದ್ದ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಲು ಸಾಧ್ಯವಾಗುತ್ತದೆ. ಹಾಗೂ ಇದರಿಂದ ರಸದೂತಗಳ ಸಮತೋಲನ ಮತ್ತು ಪರಿಚಲನೆ ಉತ್ತಮರೀತಿಯಲ್ಲಾಗುತ್ತದೆ. ಲೈಂಗಿಕ ರಸದೂತದಗಳ ಪ್ರಮಾಣ ಹೆಚ್ಚುವ ಮೂಲಕ ಲೈಂಗಿಕ ಶಕ್ತಿ ಹೆಚ್ಚುವುದನ್ನೂ ಗಮನಿಸಬಹುದು. ಇದಕ್ಕಾಗಿ ಇಡಿಯ ಮೊಟ್ಟೆಗಳು, ಸಿಂಪಿ, ಬೆಣ್ಣೆಹಣ್ಣು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬೇಕು.

ಈಸ್ಟ್ರೋಜೆನ್ ಮಟ್ಟ ಹೆಚ್ಚಿಸುವ ಅಹಾರಗಳು
ಮಹಿಳೆಯರ ದೇಹದ ಹಲವಾರು ಬದಲಾವಣೆಗಳಿಗೆ ಕಾರಣವಾಗಿರುವ ಈಸ್ಟ್ರೋಜೆನ್ ರಸದೂತವನ್ನು ಹೆಚ್ಚಿಸಲು ಮಹಿಳೆಯರು ಕೆಲವು ಅಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಆಲಿವ್ ಗಳು, ಬಟಾಣಿ, ಅಗಸೆ ಬೀಜ, ಬೆಳ್ಳುಳ್ಳಿ, ತಣ್ಣನೆಯ ವಿಧಾನದಲ್ಲಿ ಹಿಂಡಿರುವ ಆಲಿವ್ ಎಣ್ಣೆ, ಬೀಟ್ರೂಟ್ ಮತ್ತು ಸೂರ್ಯಕಾಂತಿ ಬೀಜಗಳಲ್ಲಿ ಈ ಗುಣವಿದೆ.

ಕನಿಷ್ಠ ಎಂಟು ಗಂಟೆ ನಿದ್ರೆ ಅಗತ್ಯ
ರಸದೂತಗಳ ಮಟ್ಟಗಳು ಸಮತೋಲನದಲ್ಲಿರಲು ದಿನಕ್ಕೆ ಕನಿಷ್ಟ ಎಂಟು ಘಂಟೆಗಳ ಗಾಢ ನಿದ್ದೆ ಅಗತ್ಯ. ನಿದ್ದೆ ಉತ್ತಮವಾಗಿದ್ದರೆ ಮಾನಸಿಕ ಒತ್ತಡ ಕಡಿಮೆಯಾಗುವುದು, ಲೈಂಗಿಕ ಶಕ್ತಿ ಹೆಚ್ಚುವುದು ಹಾಗೂ ಉರಿಯೂತ ನಿವಾರಿಸಲು ಸಾಧ್ಯವಾಗುತ್ತದೆ. ಲೈಂಗಿಕ ಶಕ್ತಿ ಹೆಚ್ಚಿಸಲು ಹಾಗೂ ಮಾನಸಿಕ ಒತ್ತಡ ಕಡಿಮೆಗೊಳಿಸಲು ಸಾಕಷ್ಟು ನಿದ್ದೆ ಅಗತ್ಯವಾಗಿದೆ ಹಾಗೂ ನಿದ್ದೆಯ ಸಮಯದಲ್ಲಿ ದೇಹದ ಎಲ್ಲಾ ಪ್ರಮುಖ ಅಂಗಗಳು ಪುನರ್ಚೈತನ್ಯ ಪಡೆಯುತ್ತವೆ.

ಕನಿಷ್ಠ ಎಂಟು ಗಂಟೆ ನಿದ್ರೆ ಅಗತ್ಯ
ಒಂದು ವೇಳೆ ನೀವು ಯಾವುದಾದರೊಂದು ಆಹಾರಕ್ಕೆ ಅಲರ್ಜಿ ಹೊಂದಿದ್ದರೆ ಈ ಆಹಾರಗಳನ್ನು ಸರ್ವಥಾ ಸೇವಿಸದಿರಿ. ನೀವು ಸೇವಿಸುವ ಇತರ ಅಹಾರಗಳಲ್ಲಿಯೂ ಈ ಅಹಾರದ ಅಂಶವಿದೆಯೇ ಎಂದು ಪರಿಶೀಲಿಸಿದ ಬಳಿಕವೇ ಸೇವಿಸಿ. ಆಹಾರ ಅಲರ್ಜಿಯಿಂದ ಆಂತರಿಕ ಉರಿಯೂತ ಹೆಚ್ಚುತ್ತದೆ ಹಾಗೂ ಒತ್ತಡ ರಸದೂತವಾದ ಕಾರ್ಟಿಸೋಲ್ ಹೆಚ್ಚು ಉತ್ಪತ್ತಿಯಾಗುತ್ತದೆ. ಇದು ಲೈಂಗಿಕ ರಸದೂತಗಳು ಕಡಿಮೆಯಾಗಲು ಹಾಗೂ ಲೈಂಗಿಕ ಶಕ್ತಿ ಕುಗ್ಗಲು ಕಾರಣವಾಗುತ್ತದೆ.

ಸಲಹೆ ಮಾಡಿದ ಔಷಧಿಗಳನ್ನಷ್ಟೇ ಸೇವಿಸಿ
ಕೆಲವು ಔಷಧಿಗಳು ಲೈಂಗಿಕ ಜೀವನದ ಮೇಲೆ ಅಪಾರವಾದ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಕೆಲವು ಔಷಧಿಗಳು ಜಠರದ ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳನ್ನೇ (probiotics) ಕೊಲ್ಲುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಉರಿಯೂತ ಹೆಚ್ಚುವುದು ಹಾಗೂ ಲೈಂಗಿಕ ಶಕ್ತಿ ಕುಗ್ಗುವುದು ಎದುರಾಗುತ್ತವೆ. ಆದ್ದರಿಂದ ಈ ಔಷಧಿಗಳನ್ನು ಸಲಹೆ ಮಾಡಿದ ವೈದ್ಯರನ್ನು ಸಂಪರ್ಕಿಸಿ ಒಂದು ವೇಳೆ ಈ ಔಷಧಿಗಳು ಅನಿವಾರ್ಯವೇ, ಈ ಔಷಧಿಗಳನ್ನು ಸುರಕ್ಷಿತ ಔಷಧಿಗಳಿಗೆ ಬದಲಿಸಲು ಸಾಧ್ಯವೇ ಎಂದು ಈ ಬಗ್ಗೆ ವಿಚಾರಿಸಿ.

ಏಲಕ್ಕಿ
ಇದರಲ್ಲಿ ಸಿನೆಯೋಲ್ ಎಂಬ ಪೋಷಕಾಂಶವಿದ್ದು ಇದು ವಿಶೇಷವಾಗಿ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಉತ್ತಮ ನಿಮಿರುವಿಕೆಗೂ ಏಲಕ್ಕಿ ಅದ್ಭುತವಾದ ಆಹಾರವಾಗಿದೆ.

ದಾಳಿಂಬೆ
ದಾಳಿಂಬೆಯ ಸೇವನೆಯಿಂದ ಪುರುಷರ ಜನನಾಂಗಗಳಲ್ಲಿ ಹೆಚ್ಚಿನ ರಕ್ತಪರಿಚಲನೆ ಒದಗುತ್ತದೆ. ಈ ಮೂಲಕ ಸಂಗಾತಿಯೊಂದಿಗೆ ಆತ್ಮೀಯ ಘಳಿಗೆಗಳನ್ನು ಹೆಚ್ಚಿನ ಕಾಲ ಕಳೆಯುವುದು ಸಾಧ್ಯವಾಗುತ್ತದೆ.

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಬ್ರೋಮಿಲೈನ್ ಎಂಬ ಕಿಣ್ವವಿದೆ. ಇದು ನೈಸರ್ಗಿಕ ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ. ಅಲ್ಲದೇ ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳು ಆರೋಗ್ಯವನ್ನು ವೃದ್ದಿಸುವ ಜೊತೆಗೇ ಲೈಂಗಿಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಕೇಸರಿ ಹಾಲು
ಕೇಸರಿ ಹಾಲಿನಲ್ಲಿ ಮಿಶ್ರಣ ಮಾಡಿದ ಕೇಸರಿ ಸೇವಿಸುವ ಮೂಲಕ ಪುರುಷರಲ್ಲಿ ಕಾಮೋತ್ತೇಜನ ಸಾಕಷ್ಟು ಮಟ್ಟಿಗೆ ಹೆಚ್ಚುತ್ತದೆ. ರಾತ್ರಿ ಮಲಗುವ ಮುನ್ನ ಕುಡಿದರೆ ಕಾಮಾಸಕ್ತಿ ಹೆಚ್ಚಿಸುವ ರಸದೂತಗಳು ಹೆಚ್ಚು ಬಿಡುಗಡೆಯಾಗುತ್ತವೆ ಹಾಗೂ ದಾಂಪತ್ಯ ಸುಖಕರವಾಗುತ್ತದೆ.

ಕಲ್ಲಂಗಡಿ
ಇದರಲ್ಲಿ ಅತಿಹೆಚ್ಚು ಪ್ರಮಾಣದ ನೀರು ಇದ್ದರೂ ಉಳಿದ ಪೋಷಕಾಂಶಗಳಲ್ಲಿ ಸಿಟ್ರುಲೈನ್ ಎಂಬ ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ವಿಶೇಷವಾಗಿ ಜನನಾಂಗಕ್ಕೆ ರಕ್ತ ಪೂರೈಸುವ ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ಹೆಚ್ಚಿನ ರಕ್ತಪೂರೈಕೆ ಸಾಧ್ಯವಾಗುತ್ತದೆ ಹಾಗೂ ವಯಾಗ್ರಾದಷ್ಟೇ ಪರಿಣಾಮಕಾರಿಯಾಗಿ ಉದ್ರೇಕತೆಯನ್ನು ಹೆಚ್ಚಿಸುತ್ತದೆ.



Click it and Unblock the Notifications











