ಅಕಸ್ಮಾತ್ ಗಾಯವಾಗಿ ರಕ್ತ ಬರುತ್ತಿದೆಯೇ? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು

By Divya Pandith
Subscribe to Boldsky

ಒಮ್ಮೆ ಬಿದ್ದಾಗ ಅಥವಾ ಏನಾದರೂ ಮೊನಚಾದ ವಸ್ತು ತಗುಲಿದರೆ ಗಾಯವಾಗುತ್ತದೆ. ಗಾಯವು ರಕ್ತ ಸ್ರಾವ ಉಂಟುಮಾಡುವುದು. ಇದು ಮೇಲ್ನೋಟಕ್ಕೆ ಚಿಕ್ಕ ಗಾಯ ಎನಿಸಬಹುದು. ಆದರೆ ಕೆಲವೊಮ್ಮೆ ಅದೇ ಚಿಕ್ಕ ಗಾಯವು ದೊಡ್ಡ ಗಾಯವಾಗಿ ಮಾರ್ಪಡುತ್ತದೆ. ಜೊತೆಗೆ ಅಧಿಕ ರಕ್ತಸ್ರಾವ ಉಂಟಾಗಿ ಗಂಭೀರ ಸಮಸ್ಯೆಯಾಗಿ ಪರಿವರ್ತನೆ ಗೊಳ್ಳುವುದು. ದೇಹದಿಂದ ಅಧಿಕ ರಕ್ತಸ್ರಾವ ಉಂಟಾದರೆ ಅನೇಕ ಆರೋಗ್ಯ ಸಮಸ್ಯೆಗಳು ಉಲ್ಭಣವಾಗುವ ಸಾಧ್ಯತೆಗಳಿರುತ್ತವೆ.

ಅಧಿಕ ರಕ್ತಸ್ರಾವ ಉಂಟಾದಾಗ ಆತಂಕ ಮತ್ತು ಭಯವು ಪ್ರಚೋದನೆಗೆ ಒಳಗಾಗುವುದು. ಅಧಿಕ ಭಯದಿಂದ ಕೆಲವರಿಗೆ ವಾಕರಿಕೆ ಮತ್ತು ತಲೆಸುತ್ತು ಉಂಟಾಗುವ ಸಾಧ್ಯತೆ ಹೆಚ್ಚು. ಒಂದು ಸಣ್ಣ ಗಾಯವು ಅಧಿಕ ಸ್ರಾವ ಹಾಗೂ ಆರೋಗ್ಯ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಚಿಕ್ಕ ಪುಟ್ಟ ರಕ್ತಸ್ರಾವದಿಂದ ಹಿಡಿದು ದೊಡ್ಡ ದೊಡ್ಡ ಗಾಯಗಳಿಂದ ಸೋರುವ ರಕ್ತಗಳನ್ನು ಹೇಗೆ ನಿಯಂತ್ರಿಸಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗಾಗಿ ಪರಿಚಯಿಸುತ್ತಿದೆ. ಹಾಗಾದರೆ ಇನ್ನೇಕೆ ತಡ. ಯಾವೆಲ್ಲಾ ಉತ್ಪನ್ನಗಳು ಗಾಯ ಮತ್ತು ರಕ್ತಸ್ರಾವದ ಸಮಸ್ಯೆಯನ್ನು ಬಹುಬೇಗ ನಿಯಂತ್ರಣಕ್ಕೆ ತರುತ್ತವೆ ಎನ್ನುವುದನ್ನು ಪರಿಶೀಲಿಸೋಣ ಬನ್ನಿ...

ಚಹಾ ಪುಡಿ

ಚಹಾ ಪುಡಿ

ಚಹಾ ಪುಡಿ ರಕ್ತಸ್ರಾವವನ್ನು ನಿಯಂತ್ರಿಸುವಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತದೆ. ಇದು ಬಹುಬೇಗ ರಕ್ತ ಹೆಪ್ಪುಗಟ್ಟುವಿಕೆಯನ್ನು ಪ್ರಚೋದಿಸುತ್ತದೆ. ಪುಟ್ಟ ಚಹಾದ ಚೀಲವನ್ನು ನೀರಿನಲ್ಲಿ ಅದ್ದಿ ತೇವಗೊಳಿಸಿ. ನಂತರ ಗಾಯಗೊಂಡ ಅಥವಾ ರಕ್ತಸ್ರಾವ ಆಗುತ್ತಿರುವ ಜಾಗದಲ್ಲಿ ಇಡಿ. ಬಹುಬೇಗ ರಕ್ತ ಸ್ರಾವ ನಿಯಂತ್ರಣಕ್ಕೆ ಬರುವುದು.

ಗ್ರೌಂಡ್ ಕಾಫಿ ಪೌಡರ್

ಗ್ರೌಂಡ್ ಕಾಫಿ ಪೌಡರ್

ಗ್ರೌಂಡ್ ಕಾಫಿ ಪೌಡರ್ ರಕ್ತಸ್ರಾವವನ್ನು ಹೆಪ್ಪುಗಟ್ಟಿಸುವ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಗುಣವನ್ನು ಹೊಂದಿದೆ. ತ್ವಚೆಯ ಮೇಲೆ ಉಂಟಾದ ಗಾಯ ಅಥವಾ ಸೀಳಿಕೊಂಡ ಗಾಯದಿಂದ ಉಂಟಾಗುವ ರಕ್ತ ಸ್ರಾವವನ್ನು ನಿಲ್ಲಿಸಲು ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ನೈಸರ್ಗಿಕ ಚಿಕಿತ್ಸೆಯೆಂದರೆ ಗ್ರಂಡ್ ಕಾಫಿ ಪೌಡರ್. ಗಾಯದ ಮೇಲೆ ಕಾಫಿ ಪೌಡರ್ ನೀರನ್ನು ಹಾಕಿ. ನಂತರ 10 ನಿಮಿಷಗಳ ಬಳಿಕ ಸ್ವಚ್ಛಗೊಳಿಸಿ.

ಬಿಳಿ ವಿನೆಗರ್

ಬಿಳಿ ವಿನೆಗರ್

ಬಿಳಿವಿನೆಗರ್ ರಕ್ತವನ್ನು ಹೆಪ್ಪುಗಟ್ಟುವಿಕೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಔಷಧೀಯ ಗುಣವನ್ನು ಒಳಗೊಂಡಿದೆ. ಇದು ಅಪಧಮನಿಗಳನ್ನು ನಿರ್ಬಂಧಿಸಲು ಮತ್ತು ಗಾಯವನ್ನು ಗುಣಪಡಿಸಲು ಸಹಾಯಮಾಡುತ್ತದೆ. ಹತ್ತಿ ಚೆಂಡಿನಿಂದ ಬಿಳಿ ವಿನೆಗರ್ಅನ್ನು ಅದ್ದಿ ಗಾಯದ ಮೇಲೆ ನೇರವಾಗಿ ಅನ್ವಯಿಸಬಹುದು.

ಅರಿಶಿನ

ಅರಿಶಿನ

ಅರಿಶಿನ ಅತ್ಯುತ್ತಮ ಔಷಧೀಯ ಗುಣವನ್ನು ಒಳಗೊಂಡಿರುವ ನೈಸರ್ಗಿಕ ಉತ್ಪನ್ನಗಳಲ್ಲಿ ಒಂದು. ಗಾಯದ ಮೇಲೆ ಅಥವಾ ರಕ್ತಸ್ರಾವ ಉಂಟಾಗುತ್ತಿರುವ ಸ್ಥಳಗಳ ಮೇಲೆ ಅರಿಶಿನವನ್ನು ಅನ್ವಯಿಸುವುದರಿಂದ ಬಹುಬೇಗ ರಕ್ತಸ್ರಾವವನ್ನು ನಿಯಂತ್ರಿಸಬಹುದು. ಜೊತೆಗೆ ಸೋಂಕನ್ನು ತಡೆಗಟ್ಟುವ ಗುಣವನ್ನು ಒಳಗೊಂಡಿದೆ. ಗಾಯದ ಗಾತ್ರವನ್ನು ನೋಡಿ ಅರಿಶಿನವನ್ನು ಅನ್ವಯಿಸಿ. ಸ್ವಲ್ಪ ಸಮಯಗಳ ಕಾಲ ಬಿಡಿ.

ಕರಿ ಮೆಣಸು

ಕರಿ ಮೆಣಸು

ಗಾಯದ ಮೇಲೆ ಕರಿಮೆಣಸನ್ನು ಅನ್ವಯಿಸುವುದರಿಂದ ಸ್ವಲ್ಪ ಉರಿ ಉಂಟಾಗಬಹುದು. ಆದರೆ ಬಹುಬೇಗ ರಕ್ತಸ್ರಾವ ನಿಯಂತ್ರಣಕ್ಕೆ ಬರುತ್ತದೆ. ಅಧಿಕ ನೋವನ್ನು ಅನುಭವಿಸಲು ಕಷ್ಟ ವೆಂದಾದರೆ. ಮೆಣಸನ್ನು ತೊಳೆದು ಗಾಯದ ಮೇಲೆ ಅನ್ವಯಿಸಬಹುದು. ಇದರಿಂದ ಬಹುಬೇಗ ಗಾಯ ಹೆಪ್ಪುಗಟ್ಟುವಿಕೆಗೆ ಒಳಗಾಗುವುದು.

ಹಿಟ್ಟು

ಹಿಟ್ಟು

ಗಾಯದ ಮೇಲೆ ಅಥವಾ ರಕ್ತಸ್ರಾವ ಉಂಟಾಗುತ್ತಿರುವ ಸ್ಥಳಗಳ ಮೇಲೆ ಹಿಟ್ಟುನ್ನು ಅನ್ವಯಿಸುವುದರಿಂದ ಬಹುಬೇಗ ರಕ್ತಸ್ರಾವವನ್ನು ನಿಯಂತ್ರಿಸಬಹುದು. ರಕ್ತಸ್ರಾವವನ್ನು ನಿಲ್ಲಿಸುವ ಮೂಲಕ ಉರಿಯುವ ಪ್ರಕ್ರಿಯೆಯನ್ನು ಹಿಟ್ಟುನಿಯಂತ್ರಿಸುತ್ತದೆ . ತೇವಾಂಶವನ್ನು ಹೀರಿಕೊಳ್ಳುವ ಗುಣವನ್ನು ಹಿಟ್ಟು ಒಳಗೊಂಡಿದೆ. ಗಾಯದ ಮೇಲೆ 20 ನಿಮಿಷಗಳ ಕಾಲ ಹಿಟ್ಟನ್ನು ಸಿಂಪಡಿಸಿ. ಆಗ ರಕ್ತಸ್ರಾವವು ನಿಯಂತ್ರಣಕ್ಕೆ ಒಳಗಾಗುವುದು..

ಸಕ್ಕರೆ

ಸಕ್ಕರೆ

ಸಕ್ಕರೆ ರಕ್ತವನ್ನು ಹೆಪ್ಪುಗಟ್ಟುವಂತಹ ಮತ್ತು ನಂಜುನಿರೋಧಕ ಲಕ್ಷಣಗಳನ್ನು ಹೊಂದಿದೆ. ಅದರ ಸ್ಫಟಿಕ ಸ್ವರೂಪದ ಕಾರಣ ಅದು ರಕ್ತ ಹೆಪ್ಪುಗಟ್ಟುವಂತೆಯೇ ಕಾರ್ಯನಿರ್ವಹಿಸುತ್ತದೆ ಮತ್ತು ರಕ್ತವನ್ನು ಒಣಗಿಸುತ್ತದೆ. ಗಾಯಗೊಂಡ ಪ್ರದೇಶದ ಗಾಯದ ಮೇಲೆ ಸಕ್ಕರೆಯನ್ನು ಅನ್ವಯಿಸಿ. ರಕ್ತಸ್ರಾವವು ನಿಯಂತ್ರಣಕ್ಕೆ ಒಳಗಾಗುವುದು..

ಕಾರ್ನ್ ಸ್ಟ್ರ್ಯಾಚ್

ಕಾರ್ನ್ ಸ್ಟ್ರ್ಯಾಚ್

ಗಾಯಗಳನ್ನು ಗುಣಪಡಿಸಲು ಹಾಗೂ ರಕ್ತಸ್ರಾವವನ್ನು ನಿಯಂತ್ರಿಸಲು ಇರುವ ಅತ್ಯುತ್ತಮ ನೈಸರ್ಗಿ ಘಟಕವೆಂದರೆ ಕಾರ್ನ್ ಸ್ಟ್ರ್ಯಾಚ್. ಕಟ್ ಆಗಿರುವ ಸ್ಥಳಗಳ ಮೇಲೆ ಅಥವಾ ಗಾಯದಿಂದ ರಕ್ತ ಸೋರಿಕೆ ಉಂಟಾಗಿದ್ದರೆ ಇದನ್ನು ಸ್ವಲ್ಪ ಸಿಂಪಡಿಸಿದರೆ ಸಾಕು. ರಕ್ತದ ಹರಿವು ನಿಯಂತ್ರಣಕ್ಕೆ ಬರುವುದು. ಒಮ್ಮೆ ಗಾಯದ ರಕ್ತ ಹೆಪ್ಪುಗಟ್ಟಿದ ಮೇಲೆ ನೀರಿನಿಂದ ಸ್ವಚ್ಛಗೊಳಿಸಿ.

ಉಪ್ಪಿನ ನೀರು

ಉಪ್ಪಿನ ನೀರು

ಉಪ್ಪಿನ ನೀರು ಒಂದು ನೈಸರ್ಗಿಕ ಔಷಧ ಉತ್ಪನ್ನ ಎನ್ನಬಹುದು. ಗಾಯದ ಮೇಲೆ ಅಥವಾ ರಕ್ತದ ಹರಿವು ಉಂಟಾದ ಗಾಯದ ಮೇಲೆ ಉಪ್ಪಿನ ನೀರ ಗಾಯ ಸಿಂಪಡಿಸಿ. ಬಾಯಲ್ಲಿ ಉಂಟಾದ ಗಾಯಗಳಿಗೂ ಉಪ್ಪಿನ ನೀರು ಅತ್ಯುತ್ತಮ ಔಷಧದ ರೀತಿಯಲ್ಲಿ ಗಾಯವನ್ನು ಗುಣಪಡಿಸುತ್ತದೆ. ಗಾಯ ಉಂಟಾದಾಗ ಅದರ ಮೇಲೆ ನೇರವಾಗಿ ಉಪ್ಪನ್ನು ಸುರಿಯಿರಿ. ಆಗ ಗಾಯ ಬಹುಬೇಗ ನಿಯಂತ್ರಣಕ್ಕೆ ಬರುತ್ತದೆ.

ಅಲುಮ್

ಅಲುಮ್

ಅಲುಮ್ ಎಂಬುದು ಒಂದು ಖನಿಜ ಕಲ್ಲು. ಅದು ಗಾಯವನ್ನು ವಾಸಿಮಾಡುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ನೈಸರ್ಗಿಕವಾಗಿ ರಕ್ತಸ್ರಾವವನ್ನು ನಿಲ್ಲಿಸುತ್ತದೆ. ಅಲುಮ್ ಸಂಪೂರ್ಣವಾಗಿ ನಿರುಪದ್ರವವಾಗಿದೆ ಏಕೆಂದರೆ ಇದು ಖಾಯಿಲೆಗಳನ್ನು ಗುಣಪಡಿಸುವ ಖನಿಜಗಳನ್ನು ಹೊಂದಿದೆ. ಗಾಯದ ಮೇಲೆ ಆಲುಮ್ ಕಲ್ಲನ್ನು ಇಡಿ. ಆಗ ಬಹು ಬೇಗ ರಕ್ತಸ್ರಾವ ನಿಯಂತ್ರಣಕ್ಕೆ ಬರುವುದು. ಅಲ್ಲದೆ ಬಹುಬೇಗ ಹೆಪ್ಪುಗಟ್ಟುವಿಕೆಗೆ ಒಳಗಾಗುವುದು.

ಪೆಟ್ರೋಲಿಯಂ ಜೆಲ್ಲಿ

ಪೆಟ್ರೋಲಿಯಂ ಜೆಲ್ಲಿ

ವ್ಯಾಸಲೀನ್ ಉತ್ಪನ್ನಗಳು ಪೆಟ್ರೋಲಿಯಂ ಜೆಲ್ಲಿ ಮತ್ತು ಚರ್ಮವನ್ನು ರಕ್ಷಿಸಲು ಬಳಸಬಹುದಾದ ತೈಲಗಳು ಮೇಣಗಳ ಮಿಶ್ರಣವನ್ನು ಹೊಂದಿರುತ್ತವೆ. ವ್ಯಾಸಲೀನ್ ಗಾಯದ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ ಮತ್ತು ರಕ್ತಸ್ರಾವವನ್ನು ನಿಲ್ಲಿಸುತ್ತದೆ. ಗಾಯವನ್ನು ಸ್ವಚ್ಛಗೊಳಿಸಿ ಮತ್ತು ಗಾಯದ ಮೇಲೆ ಪೆಟ್ರೋಲಿಯಂ ಜೆಲ್ಲಿ ಅನ್ವಯಿಸಿ. ರಕ್ತಸ್ರಾವ ನಿಂತ ನಂತರ ಉಳಿದ ಜೆಲ್ಲಿಯನ್ನು ತೆಗೆದುಹಾಕಿ.

ವಿಚ್ ಹ್ಯಾಝೆಲ್

ವಿಚ್ ಹ್ಯಾಝೆಲ್

ವಿಚ್ ಹ್ಯಾಝೆಲ್ ಹಳದಿ ಹೂವುಗಳ ಪೊದೆ ಸಸ್ಯ. ಗಾಯದ ಮೇಲೆ ವಿಚ್ ಹ್ಯಾಝೆಲ್ ಅನ್ವಯಿಸುವುದರಿಂದ ಬಾಹ್ಯವಾಗಿ ರಕ್ತಸ್ರಾವ ನಿಲ್ಲಿಸಲು ಸಹಾಯವಾಗುತ್ತದೆ. ಅನ್ವಯಿಸಿದಾಗ ಇದು ಗಾಯದ ಸೋಂಕನ್ನು ತಗ್ಗಿಸುತ್ತದೆ. ಇದನ್ನು ಅನ್ವಯಿಸುವುದು ಮತ್ತು ಸ್ವಚ್ಛಗೊಳಿಸುವಾಗ ಹತ್ತಿ ಉಂಡೆಯನ್ನು ಬಳಸುವುದು ಉತ್ತಮ.

ಯಾರೋವ್

ಯಾರೋವ್

ಯಾರೊವ್ ಸಣ್ಣ ಬಿಳಿ ಹೂವುಗಳ ಒಂದು ಸಸ್ಯ. ಸಸ್ಯದ ಎಲೆಗಳು ಗಾಯವನ್ನು ಗುಣಪಡಿಸಲು ಸಹಾಯ ಮಾಡುವ ಗುಣಗಳನ್ನು ಒಳಗೊಂಡಿದೆ. ಎಲೆಗಳನ್ನು ನುಜ್ಜುಗುಜ್ಜಿಸಿ ಗಾಯದ ಮೇಲೆ ಸಿಂಪಡಿಸಿ. ಬ್ಯಾಂಡೇಜ್ ಸಹಾಯದಿಂದ ಮುಚ್ಚಿ. ಇದರಿಂದ ಬಹುಬೇಗ ಗಾಯ ಹೆಪ್ಪುಗಟ್ಟುವಿಕೆಗೆ ಒಳಗಾಗುವುದು.

ಐಸ್

ಐಸ್

ಐಸ್ ಅತ್ಯಂತ ಸಾಮಾನ್ಯ ನೈಸರ್ಗಿಕ ಮನೆ ಪರಿಹಾರವಾಗಿದೆ. ಗಾಯದ ಮೇಲೆ ಅನ್ವಯಿಸಿದಾಗ ಐಸ್ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ನೋವು ನಿವಾರಣೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ತೆರೆದ ಗಾಯದ ಮೇಲೆ ನೇರವಾಗಿ ಐಸ್ ಅನ್ನು ಅನ್ವಯಿಸಬೇಡಿ. ಅನ್ವಯಿಸುವ ಮೊದಲು ಅದನ್ನು ಟವಲ್ ಅಲ್ಲಿ ಕಟ್ಟಿಕೊಳ್ಳಿ.

For Quick Alerts
ALLOW NOTIFICATIONS
For Daily Alerts

    English summary

    Home Remedies To Stop Bleeding Quickly

    Bleeding can create pain in the wounded area when you don't have a first-aid around. If it is a minor cut or scrape, the blood starts clotting quickly, but sometimes it may rise in profuse bleeding. Also, sometimes, due to the location of the wound or the health of an individual, bleeding just doesn't stop. Bleeding can trigger anxiety and fear, but it has a healing process. In cases of moderate blood loss, the bleeding person may feel light-headed or nauseous. Bleeding also serves as a useful function because it helps to clean the wound from inside. One can't always judge the seriousness of a cut by the amount it bleeds.
    Story first published: Thursday, January 18, 2018, 17:01 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more