Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಮೂವತ್ತು ದಾಟಿದ ಮಹಿಳೆಯರಿಗೆ ಕಾಡುವ ಸ್ತನಗಳು ಜೋತು ಬೀಳುವ ಸಮಸ್ಯೆಗೆ ಸಿಂಪಲ್ ಮನೆಮದ್ದುಗಳು
ಮೂವತ್ತು ದಾಟಿದ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆಯೆಂದರೆ ಸ್ತನಗಳು ಜೋತು ಬೀಳುವುದು. ಸ್ತನಗಳು ತಮ್ಮ ಬಿಗಿತ ಮತ್ತು ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಸ್ತನಗಳು ಜೋತು ಬೀಳಲು ವಯಸ್ಸು ಮಾತ್ರವಲ್ಲದೆ, ಅತಿಯಾಗಿ ತೂಕ ಕಳೆದುಕೊಳ್ಳುವುದು, ತೂಕ ಹೆಚ್ಚಳ, ಗರ್ಭಧಾರಣೆ, ಸ್ತನ್ಯಪಾನ ಇತ್ಯಾದಿ ಕಾರಣಗಳು ಆಗಿರಬಹುದು. 20ರ ಹರೆಯದಿಂದ ಮಹಿಳೆಯು ತನ್ನ ಸ್ತನಗಳ ಗಾತ್ರಗಳಿಗೆ ಸರಿಯಾಗಿರುವಂತಹ ಬ್ರಾಗಳನ್ನು ಧರಿಸದೆ ಇದ್ದರೂ ಇಂತಹ ಸಮಸ್ಯೆ ಬರುವುದು. ಸ್ತನದ ಕ್ಯಾನ್ಸರ್ ಮತ್ತು ಕ್ಷಯರೋಗದಂತಹ ಕಾಯಿಲೆಗಳು ಇದಕ್ಕೆ ಕಾರಣವಾಗಬಲ್ಲದು.

ಮೇಲೆ ಹೇಳಿದ ಯಾವುದೇ ಕಾರಣಗಳಿಂದಾಗಿ ನಿಮ್ಮ ಸ್ತನಗಳು ಜೋತು ಬೀಳುತ್ತಿದ್ದರೆ ಆಗ ಕೆಲವೊಂದು ಮನೆಮದ್ದುಗಳನ್ನು ಈ ಲೇಖನದಲ್ಲಿ ನಿಮಗಾಗಿ ತಂದಿದ್ದೇವೆ. ಇದು ತುಂಬಾ ಸರಳ ಮತ್ತು ಮನೆಯಲ್ಲೇ ಇದನ್ನು ನೀವು ಬಳಸಿಕೊಂಡರೆ ಪರಿಣಾಮಕಾರಿ ಫಲಿತಾಂಶ ಖಚಿತ.

1. ಆಲಿವ್ ತೈಲ
ಆಲಿವ್ ತೈಲದಲ್ಲಿ ಇರುವಂತಹ ಕೊಬ್ಬಿನಾಮ್ಲಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು ಮಾತ್ರವಲ್ಲದೆ, ಸ್ತನಗಳು ಜೋತು ಬೀಳದಂತೆ ಮಾಡುವುದು. ಇದರಲ್ಲಿ ಇರುವಂತಹ ಪೋಷಕಾಂಶಗಳು ಚರ್ಮಕ್ಕೆ ಪೋಷಣೆ ನೀಡಿ ಸ್ತನಗಳ ಗಾತ್ರ ಸುಧಾರಿಸುವುದು.
ಅಂಗೈಗೆ ಸ್ವಲ್ಪ ಆಲಿವ್ ತೈಲ ಹಾಕಿಕೊಳ್ಳಿ ಮತ್ತು ಇದನ್ನು ಅಲ್ಲೇ ಉಜ್ಜಿಕೊಂಡು ಬಿಸಿ ಮಾಡಿ. ಇದನ್ನು ಈಗ ನೀವು ಸ್ತನಗಳಿಗೆ ಮೇಲ್ಮುಖವಾಗಿ ಹಚ್ಚಿಕೊಳ್ಳಿ ಮತ್ತು ಸ್ವಲ್ಪ ಸಮಯ ಮಸಾಜ್ ಮಾಡಿ. ಹೀಗೆ 15 ನಿಮಿಷ ಕಾಲ ಮಾಡಿ ಮತ್ತು 4-5 ಸಲ ಹೀಗೆ ಮಾಡಿ.

2. ಮೆಂತೆ ಕಾಳುಗಳು
ಸ್ತನಗಳು ಜೋತು ಬೀಳದಂತೆ ತಡೆಯಲು ಮೆಂತ್ಯೆ ಕಾಳುಗಳು ತುಂಬಾ ಪರಿಣಾಮಕಾರಿ. ಸ್ತನಗಳು ಜೋತು ಬೀಳದಂತೆ ತಡೆಯಲು ಶತಮಾನದಿಂದಲೂ ಮೆಂತ್ಯೆ ಕಾಳನ್ನು ಮನೆಮದ್ದಾಗಿ ಬಳಸಲಾಗುತ್ತಿದೆ.
ಸ್ವಲ್ಪ ಮೆಂತೆ ಕಾಳುಗಳನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಳ್ಳಿ. ಇದರ ದಪ್ಪಗಿನ ಪೇಸ್ಟ್ ಮಾಡಿಕೊಂಡು ಸ್ತನಗಳಿಗೆ ಹಚ್ಚಿಕೊಳ್ಳಿ ಮತ್ತು ಸ್ವಲ್ಪ ಸಮಯ ಹಾಗೆ ಇರಿ. ಉಗುರುಬೆಚ್ಚಗಿನ ನೀರಿನಿಂದ 20-25 ನಿಮಿಷ ಬಿಟ್ಟು ತೊಳೆಯಿರಿ. ದಿನದಲ್ಲಿ ಎರಡು ಸಲ ಹೀಗೆ ಮಾಡಿ. ಇದು ಸ್ತನಗಳಿಗೆ ಬಿಗಿತ್ವ ನೀಡುವುದು. ಇನ್ನೊಂದು ವಿಧಾನಗಳಿವೆ ನೋಡಿ... 1/4 ಕಪ್ ಮೆಂತೆಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ. ಇದನ್ನು ಸ್ತನಗಳ ಮೇಲೆ ಹಚ್ಚಿಕೊಂಡು ಹಾಗೆ ಹತ್ತು ನಿಮಿಷ ಕಾಲ ಬಿಡಿ ಮತ್ತು ಬಳಿಕ ತೊಳೆಯಿರಿ. 15 ದಿನಕ್ಕೊಮ್ಮೆ ಹೀಗೆ ಮಾಡಿದರೆ ಸುಂದರ ಹಾಗೂ ಬಿಗಿಯಾಗಿರುವ ಸ್ತನಗಳನ್ನು ಪಡೆಬಹುದು.

3. ಐಸ್ ಮಸಾಜ್
ಸ್ತನಗಳು ಜೋತು ಬೀಳದಂತೆ ತಡೆಯಲು ಐಸ್ ಮಸಾಜ್ ತುಂಬಾ ಪರಿಣಾಮಕಾರಿ ಚಿಕಿತ್ಸೆ. 2-3 ಐಸ್ ತುಂಡುಗಳನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಸಮಯ ಸ್ತನಗಳಿಗೆ ಮಸಾಜ್ ಮಾಡಿ.
ಒಂದು ನಿಮಿಷಕ್ಕಿಂತ ಹೆಚ್ಚು ಕಾಲ ಐಸ್ ಇಡಬೇಡಿ. ಅತಿಯಾದ ಶೀತವು ರಕ್ತನಾಳಗಳ ಮೇಲೆ ಪರಿಣಾಮ ಬೀರಬಹುದು. ಇದರ ಬಳಿಕ ಮೃಧು ಟವೆಲ್ ನಿಂದ ಒರೆಸಿಕೊಂಡು ತಕ್ಷಣ ಬಿಗಿಯಾಗಿರುವ ಬ್ರಾ ಧರಿಸಿ. ದಿನದಲ್ಲಿ 2-4 ಸಲ ಹೀಗೆ ಮಾಡಿ.

4. ತಾಜಾ ಅಲೋವೆರಾ
ಜೋತು ಬೀಳುವ ಸ್ತನಗಳಿಗೆ ತಾಜಾ ಅಲೋವೆರಾವು ತುಂಬಾ ಪರಿಣಾಮಕಾರಿ ಮನೆಮದ್ದು. ತಾಜಾ ಅಲೋವೆರಾ ಎಲೆಗಳಿಂದ ಲೋಳೆ ತೆಗೆದುಕೊಂಡು ಅದನ್ನು ಸ್ತನಗಳ ಮೇಲೆ ಸುಮಾರು ಹತ್ತು ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ನೀವು ಕೆಲವು ಸಮಯ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

5. ದಾಳಿಂಬೆ
ವಯಸ್ಸಾಗುವ ಲಕ್ಷಣಗಳನ್ನು ತಡೆಯುವಂತಹ ಅಂಶಗಳು ದಾಳಿಂಬೆಯಲ್ಲಿ ಇರುವ ಕಾರಣ ಇದು ಸ್ತನಗಳು ಜೋತು ಬೀಳುವುದನ್ನು ತಡೆಯುವುದು. ದಾಳಿಂಬೆಯ ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಹಾಕಿ ಮಿಶ್ರಣ ಮಾಡಿದ ಬಳಿಕ ಸ್ತನಗಳಿಗೆ ಮಸಾಜ್ ಮಾಡಿ.
ರಾತ್ರಿ ಮಲಗುವ ಮೊದಲು ಈ ಪೇಸ್ಟ್ ನ್ನು ಸುಮಾರು 10-15 ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ದಾಳಿಂಬೆ ಎಣ್ಣೆಯನ್ನು ಸ್ತನಗಳಿಗೆ ಮಸಾಜ್ ಮಾಡಿಕೊಳ್ಳಲು ಬಳಸಬಹುದು.

6. ಶಿಯಾ ಬೆಣ್ಣೆ
ಸ್ತನಗಳಿಗೆ ಬಿಗಿತ್ವ ನೀಡಿ, ಅದು ಜೋತು ಬೀಳದಂತೆ ತಡೆಯಲು ನೈಸರ್ಗಿಕವಾಗಿರುವ ಶಿಯಾ ಬೆಣ್ಣೆ ಬಳಸಿ. ಸ್ವಲ್ಪ ಶಿಯಾ ಬೆಣ್ಣೆ ತೆಗೆದುಕೊಂಡು ಅದನ್ನು ನಿಮ್ಮ ಸ್ತನಗಳಿಗೆ ಉಜ್ಜಿಕೊಳ್ಳಿ. 10-15 ನಿಮಿಷ ಕಾಲ ಮೇಲ್ಮುಖವಾಗಿ ಇದನ್ನು ಮಸಾಜ್ ಮಾಡಿಕೊಳ್ಳಿ. ಕೆಲವು ನಿಮಿಷ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ದಿನದಲ್ಲಿ 2-3 ಸಲ ಈ ಮನೆಮದ್ದನ್ನು ಬಳಸಿ.

7. ರಾಸೌಲ್ ಕ್ಲೇ
ನಯ ಹಾಗೂ ಬಿಗಿ ಸ್ತನಗಳನ್ನು ಪಡೆಯಲು ನೈಸರ್ಗಿಕವಾಗಿ ಸಿಗುವ ರಾಸೌಲ್ ಕ್ಲೇ ಬಳಸಬಹುದು. ಎರಡು ಚಮಚ ರಾಸೌಲ್ ಕ್ಲೇ ತೆಗೆದುಕೊಂಡು ಅದನ್ನು ದಪ್ಪಗಿನ ಪೇಸ್ಟ್ ಮಾಡಿ.
ಇದನ್ನು ಸ್ತನಗಳಿಗೆ ಹಚ್ಚಿಕೊಂಡು ಮೇಲ್ಮುಖವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಜೋತು ಬೀಳುವ ಸ್ತನಗಳನ್ನು ಬಿಗಿಯಾಗಿಸಲು ಈ ಮನೆಮದ್ದನ್ನು ನೀವು ಪ್ರಯತ್ನಿಸಿ ನೋಡಿ.

8. ಸೌತೆಕಾಯಿ ಮತ್ತು ಮೊಟ್ಟೆ ಲೋಳೆ
ಸೌತೆಕಾಯಿ ಮತ್ತು ಮೊಟ್ಟೆಯ ಲೋಳೆ ಬಳಸಿಕೊಳ್ಳುವುದರಿಂದ ಬಿಗಿ ಸ್ತನಗಳು ಮಾತ್ರವಲ್ಲದೆ ಚರ್ಮವು ತುಂಬಾ ನಯ ಹಾಗೂ ಸುಂದರವಾಗುವುದು.
ಸೌತೆಕಾಯಿಯ ರಸ ತೆಗೆದುಕೊಳ್ಳಿ ಮತ್ತು ಅದಕ್ಕೆ ಒಂದು ಮೊಟ್ಟೆ ಲೋಳೆ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಸ್ತನಗಳಿಗೆ ಇದನ್ನು ಹಚ್ಚಿಕೊಳ್ಳಿ.
ಇದನ್ನು ಸ್ತನಗಳಿಗೆ ಹಚ್ಚಿಕೊಂಡ ಬಳಿಕ ಅದು ಸರಿಯಾಗಿ ಒಣಗಲು ಬಿಡಿ. ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ.

9. ಮೊಟ್ಟೆಯ ಬಿಳಿಭಾಗ
ಒಂದು ಮೊಟ್ಟೆಯನ್ನು ಒಡೆದು ಅದನ್ನು ಸರಿಯಾಗಿ ಕಲಸಿಕೊಳ್ಳಿ. ಇದನ್ನು ಸ್ತನಗಳ ಮೇಲೆ ಹಚ್ಚಿಕೊಳ್ಳಿ. ಅದರಲ್ಲೂ ಬುಡಕ್ಕೆ ಸರಿಯಾಗಿ ಹಚ್ಚಿ. ಅರ್ಧ ಗಂಟೆ ಹಾಗೆ ಬಿಟ್ಟು ಬಳಿಕ ಸೌತೆಕಾಯಿ ಅಥವಾ ಈರುಳ್ಳಿ ಜ್ಯೂಸ್ ನಿಂದ ತೊಳೆಯಿರಿ. ಇದನ್ನು ಪ್ರತೀ ವಾರ ಬಳಸಿ.



Click it and Unblock the Notifications











