For Quick Alerts
ALLOW NOTIFICATIONS  
For Daily Alerts

  ಶ್ವಾಸಕೋಶದ ರೋಗ 'ಬ್ರಾಂಕೈಟಿಸ್' ಸಮಸ್ಯೆಗೆ ಸರಳ ಮನೆಮದ್ದುಗಳು

  By Arshad
  |

  ಬ್ರಾಂಕೈಟಿಸ್ ಎಂದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು ಇದರ ರೋಗಿಯ ಶ್ವಾಸಕೋಶದ ಒಳಗಣ ಸೂಕ್ಷ್ಮ ನಳಿಕೆಗಳು (airways or bronchial tubes) ಉರಿಯೂತಕ್ಕೆ ಒಳಗಾಗಿ ಇನ್ನಷ್ಟು ಕಿರಿದಾಗಿರುತ್ತವೆ. ಈ ಉರಿಯೂತ ಇಲ್ಲಿ ದಪ್ಪನೆಯ ಕಫವನ್ನು ಉತ್ಪತ್ತಿಯಾಗಲು ಕಾರಣವಾಗುತ್ತದೆ ಹಾಗೂ ನಳಿಕೆಯ ಒಳವ್ಯಾಸ ತೀರಾ ಚಿಕ್ಕದಾಗಿಸುತ್ತದೆ.

  ಇದರ ಮೂಲಕ ಗಾಳಿಯನ್ನು ಎಳೆದುಕೊಳ್ಳಲು ರೋಗಿ ತುಂಬಾ ಕಷ್ಟಪಡುತ್ತಾನೆ. ಒಂದು ವೇಳೆ ಈ ಸ್ಥಿತಿ ಮೂರು ತಿಂಗಳಿಗಿಂತಲೂ ಹೆಚ್ಚು ಕಾಲ ಇದ್ದರೆ ತಕ್ಷಣ ಇದಕ್ಕೆ ಸೂಕ್ತವಾದ ಮನೆಮದ್ದುಗಳನ್ನು ಆಯ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಕಾಯಿಲೆ ಉಲ್ಬಣಗೊಳ್ಳದಂತೆ ಹಾಗೂ ಶೀಘ್ರವಾಗಿ ಗುಣವಾಗಲು ಸಾಧ್ಯವಾಗುತ್ತದೆ.

  ಕಾರಣಗಳು ಮತ್ತು ಲಕ್ಷಣಗಳು

  ಬ್ರಾಂಕೈಟಿಸ್ ಕಾಯಿಲೆಗೆ ಪ್ರಮುಖ ಕಾರಣ ಸಿಗರೇಟು ಸೇವನೆ. ಈ ವ್ಯಸನದಿಂದ ನಿಕೋಟಿನ್ ಗೆ ದೇಹ ಎಷ್ಟು ಹೆಚ್ಚು ವ್ಯಸನಿ ಯಾಗಿರುತ್ತದೆಯೋ, ಈ ರೋಗದಿಂದ ನರಳುವ ಸಾಧ್ಯತೆಯೂ ಹೆಚ್ಚುತ್ತದೆ. ಹೊಗೆಸೊಪ್ಪಿನ ಹೊಗೆ ಶ್ವಾಸಕೋಶದ ಒಳಗೆ ಬಂದಾಗ ಶ್ವಾಸನಳಿಕೆಗಳಿಗೆ ಉರಿಯೂತವನ್ನುಂಟುಮಾಡಿ ಇನ್ನಷ್ಟು ಕಫ ಉತ್ಪತ್ತಿಯಾಗಲು ಕಾರಣವಾಗುತ್ತದೆ. ಈ ಹೊಗೆ ಕೇವಲ ಧೂಮಪಾನಿಗೆ ಮಾತ್ರವಲ್ಲ, ಇವರು ಬಿಟ್ಟ ಹೊಗೆಯನ್ನು ಸೇವಿಸುವ ಅಕ್ಕಪಕ್ಕದವರಿಗೂ ಅಪಾಯಕಾರಿಯಾಗಿದೆ. ಈ ಹೊಗೆ ಸತತವಾಗಿದ್ದರೆ ಈ ವ್ಯಕ್ತಿಗಳಿಗೂ ಬ್ರಾಂಕೈಟಿಸ್ ತಗಲುವ ಸಾಧ್ಯತೆ ಇರುತ್ತದೆ.

  ಸಿಗರೇಟಿನ ಹೊಗೆಯ ಹೊರತಾಗಿ ಗಾಳಿಯಲ್ಲಿರುವ ಹೊಗೆ, ರಾಸಾಯನಿಕ ಧೂಮ, ಧೂಳು ಮೊದಲಾದವೂ ಇದಕ್ಕೆ ಕಾರಣವಾಗಬಹುದು. ಒಂದು ವೇಳೆ ಗಾಳಿಯಲ್ಲಿ ಈ ಕಣಗಳ ಸಾಂದ್ರತೆ ಹೆಚ್ಚಾಗಿದ್ದು ಇಂತಹ ಸ್ಥಳದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇದ್ದರೆ, ಮಾದಕ ವ್ಯಸನ, ವಾತಾವರಣದಲ್ಲಿ ತೀವ್ರವಾದ ಬದಲಾವಣೆ ಇರುವ ಸ್ಥಳಕ್ಕೆ ಪ್ರಯಾಣ ಬೆಳಸಿದರೆ ಅಥವಾ ಅನುವಂಶಿಕವಾಗಿಯೂ ಈ ಸ್ಥಿತಿಯನ್ನು ಪಡೆಯುವ ಸಾಧ್ಯತೆ ಇದೆ. ಇದರೊಂದಿಗೆ ಅಲರ್ಜಿ ಹಾಗೂ ಸೋಂಕುಗಳೂ ಬ್ರಾಂಕೈಟಿಸ್ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.... '

  ತೀವ್ರತರದ ಬ್ರಾಂಕೈಟಿಸ್‌ಗೆ ಮನೆಮದ್ದುಗಳು

  ತೀವ್ರತರದ ಬ್ರಾಂಕೈಟಿಸ್‌ಗೆ ಮನೆಮದ್ದುಗಳು

  ಒಂದು ವೇಳೆ ನೀವು ತೀವ್ರತರದ ಬ್ರಾಂಕೈಟಿಸ್ ರೋಗಿಯಾಗಿದ್ದರೆ ನಿಮಗೆ ಇನ್ನೊಂದು ರೋಗದ ಸೋಂಕು ತಗಲುವ ಸಾಧ್ಯತೆ ತೀರಾ ಹೆಚ್ಚು. ಆದ್ದರಿಂದ ನೀವು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಾಧ್ಯವಾದಷ್ಟು ಗುಂಪುಗಳನ್ನು ತಪ್ಪಿಸುವುದು, ಶೀತದಿಂದ ನರಳುತ್ತಿರುವ ಮಕ್ಕಳಿಂದ ದೂರ ಇರುವುದು, ಹೊಗೆ, ಧೂಳು ಆವೃತ್ತ ಕೋಣೆಗಳಿಂದ ದೂರವಿರುವುದು ಹಾಗೂ ಜ್ವರ, ಶೀತ ಪೀಡಿತ ಜನರಿಂದ ದೂರವಿರುವುದು ಮೊದಲಾದವುಗಳನ್ನು ಅನುಸರಿಸಬೇಕಾಗುತ್ತದೆ. ಬನ್ನಿ, ಕೆಲವು ಸುಲಭ ಮನೆಮದ್ದುಗಳನ್ನು ನೋಡೋಣ:

  ಉಪ್ಪು ನೀರಿನ ಮುಕ್ಕಳಿಕೆ

  ಉಪ್ಪು ನೀರಿನ ಮುಕ್ಕಳಿಕೆ

  ಇದರಿಂದ ಗಂಟಲ ಒಳಭಾಗದ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಗಂಟಲ ಒಳಭಾಗದ ಕಫವನ್ನು ಸಡಿಲಗೊಳಿಸಿ ನೀರಾಗಿಸಿ ನಿವಾರಿಸಲು ನೆರವಾಗುತ್ತದೆ. ಇದಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕ ಚಮಚ ಉಪ್ಪನ್ನು ಬೆರೆಸಿ ಬಳಸಿ.

  ಬಾದಾಮಿ

  ಬಾದಾಮಿ

  ಬಾದಾಮಿ ಅತ್ಯುತ್ತಮವಾದ ಒಣಫಲವಾಗಿದೆ ಹಾಗೂ ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು ಹಾಗೂ ಪೋಷಕಾಂಶಗಳಿವೆ. ವಿಶೇಷವಾಗಿ ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ಮೆಗ್ನೀಶಿಯಂ ಲಭ್ಯವಾಗುತ್ತದೆ. ಇವು ಶ್ವಾಸಕೋಶದ ಒಳಗಣ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ.

  ನೀರು ಹಾಗೂ ಇತರ ದ್ರವಗಳನ್ನು ಹೆಚ್ಚು ಕುಡಿಯಿರಿ

  ನೀರು ಹಾಗೂ ಇತರ ದ್ರವಗಳನ್ನು ಹೆಚ್ಚು ಕುಡಿಯಿರಿ

  ಕಫವನ್ನು ನಿವಾರಿಸಲು ದೇಹಕ್ಕೆ ಹೆಚ್ಚಿನ ನೀರು ಅಗತ್ಯವಿದೆ. ಆದ್ದರಿಂದ ಸಾಧ್ಯವಾದಷ್ಟು ಹೆಚ್ಚು ನೀರನ್ನು ಹಾಗೂ ದ್ರವಾಹಾರಗಳನ್ನು ಸೇವಿಸಿ. ಆದರೆ ಮದ್ಯಪಾನ, ಬುರುಗು ಬರುವ ಲಘು ಪಾನೀಯಗಳನ್ನು ಸೇವಿಸದಿರಿ. ಉತ್ತಮ ಆರೋಗ್ಯಕ್ಕಾಗಿ ದಿನದಕ್ಕೆ ನಾಲ್ಕರಿಂದ ಆರು ಲೋಟ ನೀರು ಸೇವಿಸಿ. ತಣ್ಣನೆಯ ನೀರಿನ ಬದಲು ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ಹೆಚ್ಚಿನ ಪ್ರಯೋಜನ ನೀಡುತ್ತದೆ.

  ವ್ಯಾಯಾಮ

  ವ್ಯಾಯಾಮ

  ಬೆಳಿಗ್ಗೆದ್ದು ಕೊಂಚ ದೂರ ನಡೆಯುವುದು ಅಥವಾ ಹೊರಾಂಗಣದಲ್ಲಿ ಸಾಧ್ಯವಾದಷ್ಟು ವ್ಯಾಯಾಮ ಮಾಡುವುದು ಈ ತೊಂದರೆಗಳಿಂದ ಹೊರಬರಲು ಹಾಗೂ ಗುಣಮುಖರಾಗಲು ನೆರವಾಗುತ್ತದೆ.

  ಈರುಳ್ಳಿ ಹಾಗೂ ಜೇನು

  ಈರುಳ್ಳಿ ಹಾಗೂ ಜೇನು

  ಒಂದು ಈರುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ಒಂದು ಬೋಗುಣಿ ನೀರಿನಲ್ಲಿ ಮುಳುಗಿಸಿ ಇದಕ್ಕೆ ಒಂದು ಚಿಕ್ಕ ಚಮಚ ಜೇನು ಬೆರೆಸಿ ಇಡೀ ರಾತ್ರಿ ಇಡಿ. ಮರುದಿನ ಬೆಳಿಗ್ಗೆ ಈರುಳ್ಳಿಯನ್ನು ನಿವಾರಿಸಿ ಈ ನೀರನ್ನು ದಿನಕ್ಕೆ ನಾಲ್ಕು ಬಾರಿ ಉಗುರುಬೆಚ್ಚಗಾಗಿಸಿ ಕುಡಿಯುವ ಮೂಲಕ ತೀವ್ರತರದ ಬ್ರಾಂಕೈಟಿಸ್ ಶೀಘ್ರವೇ ಕಡಿಮೆಯಾಗುತ್ತದೆ.

  ಲಿಂಬೆ

  ಲಿಂಬೆ

  ಗಂಟಲು ಹಾಗೂ ಶ್ವಾಸಕೋಶದ ಒಳಗಣ ಭಾಗದಲ್ಲಿ ತುಂಬಿಕೊಂಡಿರುವ ಕಫ ಹಾಗೂ ಹಠಮಾರಿ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಲಿಂಬೆ ಉತ್ತಮ ಆಯ್ಕೆಯಾಗಿದೆ. ಒಂದು ಚಿಕ್ಕ ಚಮಚ ಲಿಂಬೆರಸವನ್ನು ಒಂದು ಲೋಟ ಕುದಿಯುವ ನೀರಿಗೆ ಬೆರೆಸಿ ಸುಮಾರು ಐದು ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ. ಬಳಿಕ ಕುಡಿಯಿರಿ. ಲಿಂಬೆರಸದ ಬದಲಿಗೆ ಅರ್ಧ ಲಿಂಬೆಯ ಭಾಗವನ್ನೂ ನೀರಿನಲ್ಲಿ ಕುದಿಸಬಹುದು. ಒಂದು ವೇಳೆ ಕೆಮ್ಮು ನಿರಂತರವಾಗಿದ್ದರೆ ಈ ನೀರಿನಿಂದ ಗಳಗಳ ಮಾಡುವ ಮೂಲಕವೂ ಉತ್ತಮ ಪರಿಹಾರ ಪಡೆಯಬಹುದು.

   ಅರಿಶಿನ

  ಅರಿಶಿನ

  ಅರಿಶಿನದ ಉರಿಯೂತ ನಿವಾರಕ (anti-inflammatory) ಗುಣಗಳು ಬ್ರಾಂಖೈಟಿಸ್ ನಿವಾರಣೆಗೂ ನೆರವಾಗುತ್ತವೆ. ಮೊದಲಾಗಿ ಅರಿಶಿನ ಕೆಮ್ಮಿಗೆ ಕಾರಣವಾದ ಕ್ರಿಮಿಗಳನ್ನು ಕೊಂದು ಕಫ ನಿವಾರಿಸುವ ಮೂಲಕ ಶ್ವಾಸಕೋಶದ ಮೇಲೆ ಬೀಳುವ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಇದಕ್ಕಾಗಿ ಒಂದು ಲೋಟ ಹಾಲಿಗೆ ಒಂದು ಟೀ ಚಮಚ ಅರಿಶಿನದಪುಡಿ ಸೇರಿಸಿ ದಿನಕ್ಕೆ ಮೂರು ಬಾರಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಸುಮಾರು ಮುಕ್ಕಾಲು ಘಂಟೆಯ ಬಳಿಕ ನಿಮ್ಮ ನಿತ್ಯದ ಆಹಾರಗಳನ್ನು ಸೇವಿಸಿ. ಒಂದು ವೇಳೆ ನಿಮಗೆ ಅಲ್ಸರ್, ಮೂತ್ರಕೋಶದಲ್ಲಿ ಕಲ್ಲು, ಜಾಂಡೀಸ್ ಮತ್ತು ಹುಳಿತೇಗಿನ ತೊಂದರೆ ಇದ್ದರೆ ಈ ಚಿಕಿತ್ಸೆ ಅನುಸರಿಸಬೇಡಿ.

  ಶುಂಠಿ

  ಶುಂಠಿ

  ಶೀತಕ್ಕೆ ರಾಮಬಾಣವಾಗಿರುವ ಶುಂಠಿ (ಹಸಿ ಅಥವಾ ಒಣಶುಂಠಿ) ಬ್ರಾಂಖೈಟಿಸ್ ಗೂ ಉತ್ತಮ ಪರಿಹಾರವಾಗಿದೆ. ಶುಂಠಿಯ ಸೇವನೆಯಿಂದ ಶ್ವಾಸನಳಿಕೆಗಳ ಕವಲುಗಳಲ್ಲಿ ಸೋಂಕು ಉಂಟಾಗಿದ್ದರೆ ಅದನ್ನು ನಿವಾರಿಸುತ್ತದೆ. ಜೊತೆಗೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ದೇಹ ಸ್ವಾಭಾವಿಕವಾಗಿ ಈ ರೋಗದ ವಿರುದ್ದ ಹೋರಾಡಲು ಹೆಚ್ಚು ಸಮರ್ಥವಾಗುತ್ತದೆ. ಇದಕ್ಕಾಗಿ ಸುಮಾರು ಅರ್ಧ ಇಂಚು ಹಸಿಶುಂಟಿಯನ್ನು ಅಥವಾ ಒಂದು ಚಿಕ್ಕ ಚಮಚ ಶುಂಠಿಯ ಪುಡಿಯನ್ನು ನಿಮ್ಮ ಚಹಾದಲ್ಲಿ ಮಿಶ್ರಣ ಮಾಡಿ ಸಕ್ಕರೆಯ ಬದಲಿಗೆ ಜೇನನ್ನು ಸೇರಿಸಿ ದಿನಕ್ಕೆರಡು ಲೋಟ ಕುಡಿಯಿರಿ.

  ದಾಲ್ಚಿನ್ನಿ ಎಲೆಗಳು

  ದಾಲ್ಚಿನ್ನಿ ಎಲೆಗಳು

  ಒಣ ದಾಲ್ಚಿನ್ನಿ ಎಲೆಗಳನ್ನೂ ಬ್ರಾಂಖೈಟಿಸ್ ಚಿಕಿತ್ಸೆಗೆ ಬಳಸಬಹುದು. ಇದಕ್ಕಾಗಿ ಕೆಲವು ದಾಲ್ಚಿನ್ನಿಯ ಒಣ ಎಲೆಗಳನ್ನು ಬಿಸಿನೀರಿನಲ್ಲಿ ಮುಳುಗಿಸಿ ಸುಮಾರು ಒಂದು ನಿಮಿಷದ ಬಳಿಕ ರೋಗಿಯ ಎದೆಯ ಮೇಲೆ ಇಡಿ. ಇದೇ ವೇಳೆ ಹೆಚ್ಚಿನ ಎಲೆಗಳನ್ನು ಬಿಸಿನೀರಿನಲ್ಲಿ ಮುಳುಗಿಸಿಡಿ. ಒಂದು ನಿಮಿಷದ ಬಳಿಕ ಅಥವಾ ಎದೆಯ ಮೇಲಿದ್ದ ಎಲೆಗಳು ತಣ್ಣಗಾದಂತೆ ಈ ಎಲೆಗಳನ್ನು ತೆಗೆದು ಕುದಿನೀರಿನಲ್ಲಿದ್ದ ಎಲೆಗಳನ್ನು ಇಡಿ. ತಣ್ಣಗಿನ ಎಲೆಗಳನ್ನು ಪುನಃ ಬಿಸಿನೀರಿನಲ್ಲಿ ಮುಳುಗಿಸಿ ಈ ಕ್ರಿಯೆಯನ್ನು ಎಂಟರಿಂದ ಹತ್ತು ಬಾರಿ ಪುನರಾವರ್ತಿಸಿ. ವಾರಕ್ಕೆರಡು ಅಥವಾ ಮೂರು ಬಾರಿ ಈ ಚಿಕಿತ್ಸೆ ನಡೆಸಬಹುದು. ಪ್ರತಿದಿನವೂ ಹೊಸ ಎಲೆಗಳನ್ನೇ ಬಳಸಿ.

   ಬೆಳ್ಳುಳ್ಳಿ

  ಬೆಳ್ಳುಳ್ಳಿ

  ಬೆಳ್ಳುಳ್ಳಿಯ ಬ್ಯಾಕ್ಟೀರಿಯಾ ನಿವಾರಕ ಹಾಗೂ ವೈರಸ್ ನಿವಾರಕ ಗುಣ ಬ್ರಾಂಕೈಟಿಸ್ ಚಿಕಿತ್ಸೆಗೂ ನೆರವಾಗುತ್ತದೆ. ಹಸಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಜಗಿದು ನುಂಗುವ ಮೂಲಕ ಅಥವಾ ಆಹಾರದೊಂದಿಗೆ ಸೇವಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ರಕ್ತದಲ್ಲಿ ಬೆರೆತ ಬಳಿಕ ಇದರ ಪ್ರತಿಜೀವಕ ಗುಣ ಶ್ವಾಸಕೋಶದೊಳಗಿನ ಸುಲಭವಾಗಿ ಕಫವನ್ನು ಸಡಿಲಿಸಿ ನಿವಾರಿಸಲು ನೆರವಾಗುತ್ತದೆ.

  ಸಾಸಿವೆ

  ಸಾಸಿವೆ

  ಒಗ್ಗರಣೆಗೆ ಉಪಯೋಗಿಸುವ ಸಾಸಿವೆಯೂ ಬ್ರಾಂಕೈಟಿಸ್ ರೋಗ ನಿವಾರಣೆಗೆ ಸಹಕರಿಸಬಲ್ಲದು. ಇದಕ್ಕಾಗಿ ಮೊದಲು ಸುಮಾರು ಇನ್ನೂರು ಗ್ರಾಂ ಸಾಸಿವೆಯನ್ನು ನುಣ್ಣಗೆ ಅರೆದು ನೀರಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಸುಮಾರು ದೋಸೆಹಿಟ್ಟಿನ ಹದಕ್ಕೆ ಬಂದ ಬಳಿಕ ಸ್ವಚ್ಛವಾದ ಒಂದು ಬಟ್ಟೆಯ ಅರ್ಧಭಾಗದ ಮೇಲೆ ಸವರಿ ಇನ್ನರ್ಧಭಾಗವನ್ನು ಮೇಲೆ ಮಡಚಿ. ಲೇಪನ ಬದಿಗಳಿಂದ ಸೋರಿ ಹೋಗದಂತೆ ಬಟ್ಟೆಯನ್ನು ಒಂದು ಸ್ಟಾಪ್ಲರ್ ನಿಂದ ಬಂಧಿಸಿ. ಈ ವ್ಯವಸ್ಥೆಗೆ ಸಾಸಿವೆ ಪ್ಲಾಸ್ಟರ್ (mustard plaster) ಎಂದು ಕರೆಯುತ್ತಾರೆ. ಚಿಕಿತ್ಸೆಗೆ ಮುನ್ನ ಸ್ವಲ್ಪ ಆಲಿವ್ ಎಣ್ಣೆಯನ್ನು ರೋಗಿಯ ಎದೆಗೆ ಸವರಿ ಈ ಪ್ಲಾಸ್ಟರ್ ಅನ್ನು ಎದೆಯ ಮೇಲೆ ಹರಡಿ. ಎದೆ ಸ್ವಲ್ಪ ಬಿಸಿಯಾಗುವ ಮತ್ತು ಉರಿಯುವ ಅನುಭವವಾಗುತ್ತದೆ. ರೋಗಿಗೆ ಈ ಅವಧಿಯಲ್ಲಿ ಸಾಕಷ್ಟು ಕುಡಿಯಲು ನೀರು ಮತ್ತು ಹಣ್ಣಿನ ರಸಗಳನ್ನು ನೀಡಿ (ವಿಟಮಿನ್ ಸಿ ರಸಗಳು ಉತ್ತಮ). ಸುಮಾರು ಅರ್ಧ ಘಂಟೆ ಅಥವಾ ಒಂದು ಘಂಟೆ (ರೋಗಿಗೆ ಅನುಕೂಲವಾದಷ್ಟು ಕಾಲ) ಈ ಪ್ಲಾಸ್ಟರ್ ಹಾಗೇ ಇರಲಿ. ಒಂದು ವೇಳೆ ರೋಗಿಯ ಚರ್ಮ ಹೆಚ್ಚು ಸಂವೇದಿಯಾಗಿದ್ದು ಉರಿ ಎನಿಸಿದರೆ ತಕ್ಷಣ ತೆಗೆದುಬಿಡಿ. ನೆನಪಿಡಿ, ಈ ಚಿಕಿತ್ಸೆ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ವೃದ್ಧರಿಗೆ ಸೂಕ್ತವಲ್ಲ. ಈ ಚಿಕಿತ್ಸೆ ವಾರಕ್ಕೆರಡು ಬಾರಿ ನಡೆಸುವುದರಿಂದ ಉತ್ತಮ ಪರಿಣಾಮ ನಿರೀಕ್ಷಿಸಬಹುದು.

  ನೀಲಗಿರಿ ಎಣ್ಣೆ

  ನೀಲಗಿರಿ ಎಣ್ಣೆ

  ನೀಲಗಿರಿ ಎಣ್ಣೆಯಲ್ಲಿರುವ ಜೀವಿರೋಧಿ (antibacterial) ಗುಣಗಳು ಬ್ರಾಂಖೈಟಿಸ್ ನಿವಾರಣೆಗೆ ನೆರವಾಗುತ್ತದೆ. ಇದರಿಂದ ತಡೆಗೊಂಡಿದ್ದ ಶ್ವಾಸಕೊಳವೆಯ ಕವಲುಗಳು ತೆರೆದು ಉಸಿರಾಟ ಸರಾಗವಾಗುತ್ತದೆ. ಇದಕ್ಕಾಗಿ ಒಂದು ಲೋಟ ನೀರನ್ನು ಕುದಿಸಿ ಕೆಲವು ತೊಟ್ಟು ನೀಲಗಿರಿ ಎಣ್ಣೆಯನ್ನು ಚಿಮುಕಿಸಿ. ಈಗ ನೀರಿನ ಮೇಲಿನಿಂದ ಆವಿಯಾಗಿ ಬರುವ ನೀಲಗಿರಿ ಎಣ್ಣೆಯ ಹಬೆಯನ್ನು ಮೂಗಿನಿಂದ ಉಸಿರಾಡಿ. ಹೆಚ್ಚು ಪರಿಣಾಮಕ್ಕಾಗಿ ತಲೆಯನ್ನು ಒಂದು ದಪ್ಪನೆಯ ಟವೆಲ್ ಅಥವಾ ಬಟ್ಟೆಯಿಂದ ಆವರಿಸಿ ಹಬೆ ವ್ಯರ್ಥವಾಗದಂತೆ ನೋಡಿಕೊಳ್ಳಿ. ಒಂದೆರಡು ನಿಮಿಷಗಳ ಕಾಲ ಸತತವಾಗಿ ಹಬೆಯನ್ನು ಉಸಿರಾಡಿ. ವಾರಕ್ಕೆರಡು ಅಥವಾ ಮೂರು ಬಾರಿ ಈ ಚಿಕಿತ್ಸೆಯನ್ನು ಪುನರಾವರ್ತಿಸುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ.

  ಸಾವೋರಿ (Savory)

  ಸಾವೋರಿ (Savory)

  ಸಾವೋರಿ ಎಂಬ ಹೆಸರಿನ ಗಿಡಮೂಲಿಕೆ ಬ್ರಾಂಖೈಟಿಸ್ ಗೆ ಆಯುರ್ವೇದ ಸೂಚಿಸುವ ಚಿಕಿತ್ಸೆಯಾಗಿದೆ. ಇದರಿಂದ ಶ್ವಾಸಕೋಶಗಳಲ್ಲಿ ಶೇಖರವಾಗಿದ್ದ ಕಫ ಕರಗಿ ಉಸಿರಾಟ ಸರಾಗವಾಗುತ್ತದೆ. ಒಂದು ಲೋಟ ಕುದಿಯುವ ನೀರಿಗೆ ಅರ್ಧ ಚಮಕ್ಕಿಂತಲೂ ಕಡಿಮೆ ಪ್ರಮಾಣದ ಒಣಎಲೆಗಳ ಪುಡಿ ಸೇರಿಸಿ ಕುಡಿಯಿರಿ. ದಿನಕ್ಕೊಂದು ಲೋಟ ಬ್ರಾಂಖೈಟಿಸ್ ಗೆ ಉತ್ತಮ ಪರಿಹಾರ ನೀಡಬಲ್ಲುದು.

  ಜೇನುತುಪ್ಪ

  ಜೇನುತುಪ್ಪ

  ಬಿಸಿನೀರಿನಲ್ಲಿ ಜೇನು ಸೇರಿಸಿ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೇನಿನ ಪ್ರತಿಜೀವಕ (antibiotic) ಹಾಗೂ ವೈರಸ್ ಜೀವಕ (anti-viral) ಗುಣಗಳು ರೋಗ ನಿವಾರಣೆಗೆ ನೆರವಾಗುತ್ತವೆ. ಪ್ರತಿದಿನದ ನಿಮ್ಮ ಟೀಯಲ್ಲಿ ಸಕ್ಕರೆ ಬದಲಿಗೆ ಜೇನು ಸೇವಿಸಿ ಕುಡಿಯುವ ಮೂಲಕವೂ ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

  ಎಳ್ಳು ಮತ್ತು ಅಗಸೆ ಬೀಜಗಳು

  ಎಳ್ಳು ಮತ್ತು ಅಗಸೆ ಬೀಜಗಳು

  ಸಮಪ್ರಮಾಣದಲ್ಲಿ ಬಿಳಿಎಳ್ಳು ಮತ್ತು ಅಗಸೆ ಬೀಜಗಳನ್ನು ದಪ್ಪನಾಗಿ ಅರೆದು ಸ್ವಲ್ಪ ಜೇನುತುಪ್ಪ ಮತ್ತು ಚಿಟಿಕೆಯಷ್ಟು ಉಪ್ಪು ಸೇರಿಸಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಚಮಚ ಸೇವಿಸುವುದರಿಂದ ಬ್ರಾಂಖೈಟಿಸ್ ಶೀಘ್ರ ಹತೋಟಿಗೆ ಬರುತ್ತದೆ.

  English summary

  Home Remedies for Chronic Bronchitis

  Bronchitis causes the tubes in your lungs that air passes through (also known as the airways or bronchial tubes) to become inflamed or irritated. The irritation causes thick mucus to develop, making it even harder for you to get air into your lungs. If this condition lasts longer than three months, you should seek home remedies for chronic bronchitis to ease symptoms and treat this lingering condition.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more