ಆರೋಗ್ಯ ಟಿಪ್ಸ್: ಮೊಸರನ್ನ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು...

By Hemanth

ಹಲವಾರು ಶತಮಾನಗಳಿಂದಲೂ ಭಾರತದಲ್ಲಿ ಮೊಸರಾನ್ನ ಸೇವಿಸುತ್ತಾ ಬರಲಾಗುತ್ತಿದೆ. ಇದರ ಹಿಂದಿನ ಆರೋಗ್ಯದ ಗುಟ್ಟು ನಮ್ಮ ಹಿರಿಯರಿಗೆ ತಿಳಿದಿತ್ತು. ಪ್ರತಿನಿತ್ಯ ಅಥವಾ ವಾರದಲ್ಲಿ ನಾಲ್ಕೈದು ಸಲವಾದರೂ ಮೊಸರಾನ್ನ ಸೇವನೆ ಮಾಡಿದರೆ ಅದರಿಂದ ಆರೋಗ್ಯ ಲಾಭಗಳು ಸಿಗುವುದು. ಪ್ರತಿನಿತ್ಯ ಮೊಸರಾನ್ನ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ ಸಂಪೂರ್ಣ ಆರೋಗ್ಯಕ್ಕೆ ಇದು ಒಳ್ಳೆಯದು. ದಕ್ಷಿಣ ಭಾರತೀಯರು ಹೆಚ್ಚಾಗಿ ಮೊಸರನ್ನ ಸೇವನೆ ಮಾಡುತ್ತಾರೆ.

ಆದರೆ ಇದರ ಸೇವನೆ ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಭಾರತದಲ್ಲಿ ಬೇಸಿಗೆಯಲ್ಲಿ ತಡೆಯಲಾರದಂತಹ ಉಷ್ಣಾಂಶವಿರುವ ಕಾರಣದಿಂದಾಗಿ ಅಲ್ಲಿನ ಜನರು ಹೆಚ್ಚಾಗಿ ಮೊಸರಾನ್ನ ಸೇವನೆ ಮಾಡುವರು. ಹೊಟ್ಟೆಯು ಸರಿಯಿಲ್ಲದೆ ಇರುವಾಗ ಮೊಸರನ್ನ ಸೇವನೆ ಮಾಡುವುದು ತುಂಬಾ ಪರಿಣಾಮಕಾರಿಯಾಗಿರುವುದು.

Curd Rice

ಮೊಸರಾನ್ನದ ಆರೋಗ್ಯ ಲಾಭಗಳು
ಮೊಸರಾನ್ನ ತಯಾರಿಸುವುದು ತುಂಬಾ ಸುಲಭ ಮಾತ್ರವಲ್ಲದೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ.
*ಇದು ಹೊಟ್ಟೆ ಉಬ್ಬರ ನಿವಾರಣೆ ಮಾಡುವ ಕಾರಣದಿಂದಾಗಿ ಹೊಟ್ಟೆಯ ಸಮಸ್ಯೆ ಅಥವಾ ಅಜೀರ್ಣ ಇರುವಾಗ ಇದು ನಿಮಗೆ ಅತ್ಯುತ್ತಮವಾದ ಔಷಧಿ. ಜೀರ್ಣಕ್ರಿಯೆ ಸರಿಪಡಿಸಲು ಮೊಸರಾನ್ನವು ಒಳ್ಳೆಯ ಮನೆಮದ್ದು.
*ಮೊಸರಾನ್ನವನ್ನು ತಂಪಾಗಿರುವಾಗಲೇ ಸೇವಿಸಬೇಕು. ಇದು ದೇಹಕ್ಕೆ ತಂಪನ್ನು ನೀಡಿ ದೇಹದೊಳಗಿನ ತಾಪಮಾನವನ್ನು ಕಾಪಾಡುವುದು. ನಿಮಗೆ ಜ್ವರವಿದ್ದರೆ ಆಗ ನೀವು ಮೊಸರಾನ್ನ ಸೇವಿಸುವುದು ಉತ್ತಮ. ಉಷ್ಣತೆ ಹೆಚ್ಚಾಗಿರುವ ದಿನದಲ್ಲಿ ನೀವು ಇದರ ಸೇವನೆ ಮಾಡಿದರೆ ಆಗ ನಿಮ್ಮ ದೇಹವು ಬೇಗನೆ ಬಿಸಿಯಾಗದಂತೆ ತಡೆಯುವುದು.
*ಮೊಸರಿನಲ್ಲಿ ಆ್ಯಂಟಿಆಕ್ಸಿಡೆಂಟ್, ಪ್ರೋಬಯಾಟಿಕ್ ಗಳು ಮತ್ತು ಒಳ್ಳೆಯ ಗುಣಮಟ್ಟದ ಕೊಬ್ಬು ಇದೆ. ಮೊಸರು ಸೇವನೆ ಮಾಡಿದರೆ ಅದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಬಹುದು. ಇದರಿಂದ ಮೊಸರನ್ನು ಒತ್ತಡ ನಿವಾರಕವೆಂದು ಕರೆಯಲಾಗುತ್ತದೆ. ಗಾಯವಾದಾಗ ಅಥವಾ ನೋವಾದಾಗ ಮೆದುಳು ಅದನ್ನು ಬೇಗನೆ ಅರಿಯಲು ನೆರವಾಗುವುದು.


*ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಪ್ರಮಾಣವು ಅತ್ಯಧಿಕ ಮಟ್ಟದಲ್ಲಿ ಇರುವ ಕಾರಣದಿಂದಾಗಿ ಅನಾರೋಗ್ಯದ ವೇಳೆ ಇದು ತುಂಬಾ ಪರಿಣಾಮಕಾರಿ. ಇದು ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ನೆರವಾಗುವುದು. ಅನಾರೋಗ್ಯಕ್ಕೆ ಒಳಗಾದಾಗ ದೇಹಕ್ಕೆ ಬೇಕಾಗುವಂತಹ ಶಕ್ತಿ ನೀಡುವುದು.
ಇದನ್ನು ಹೊರತುಪಡಿಸಿ ಮೊಸರಾನ್ನ ತಿನ್ನಲು ಇನ್ನು ಹಲವಾರು ರೀತಿಯ ಕಾರಣಗಳು ಇವೆ. ಈ ಆಹಾರವು ನಿಮಗೆ ಗರ್ಭಧರಿಸಲು ನೆರವಾಗುವುದು. ಮೊಸರಾನ್ನದಲ್ಲಿ ಉನ್ನತ ಮಟ್ಟದ ಕಾರ್ಬ್ರೋಹೈಡ್ರೇಟ್ಸ್ ಮತ್ತು ಪ್ರೋಟೀನ್ ಇದೆ. ಇದು ನಿಮ್ಮ ಪೋಷಕಾಂಶ ಸೇವನೆ ಹೆಚ್ಚಿಸುವುದು. ಖಾರದ ಪದಾರ್ಥ ತಿಂದ ಬಳಿಕ ಮೊಸರನ್ನ ತಿನ್ನುವುದು ತುಂಬಾ ಒಳ್ಳೆಯದು. ಖಾರದ ಆಹಾರ ತಿಂದಾಗ ಉಂಟಾಗುವಂತಹ ಉರಿ ಮತ್ತು ಕಿರಿಕಿರಿಯನ್ನು ಕೇವಲ ಒಂದು ಚಮಚ ಮೊಸರಿನಿಂದ ಕಡಿಮೆ ಮಾಡಬಹುದು. ಮೊಸರು ಮುಖಕ್ಕೆ ಕಾಂತಿ ನೀಡುವ ಕಾರಣದಿಂದಾಗಿ ಇದನ್ನು ಹಲವಾರು ರೀತಿಯ ಫೇಸ್ ಪ್ಯಾಕ್ ಗಳಲ್ಲಿ ಬಳಸಲಾಗುತ್ತದೆ.

ಹೊಟ್ಟೆಯುಬ್ಬರಿಕೆ
ಹೊಟ್ಟೆಯುಬ್ಬರಿಕೆಯಾದರೆ ಇದಕ್ಕೆ ತಕ್ಷಣದ ಪರಿಹಾರವೆಂದರೆ ಮೊಸರನ್ನದ ಸೇವನೆ. ಅಜೀರ್ಣತೆ ಅಥವಾ ಹೊಟ್ಟೆ ಕೆಟ್ಟಿರುವ ಯಾವುದೇ ಸೂಚನೆ ಕಂಡು ಬಂದರೆ ಮೊದಲಾಗಿ ಮೊಸರನ್ನವನ್ನು ಸೇವಿಸಿಬಿಡಬೇಕು. ಅಲ್ಲದೇ ಮೊಸರನ್ನ ಜೀರ್ಣಿಸಿಕೊಳ್ಳಲು ಸುಲಭವಾಗಿರುವ ಕಾರಣ ಎಲ್ಲಾ ವಯಸ್ಸಿನವರೂ ಇದನ್ನು ಯಾವುದೇ ಅಳುಕಿಲ್ಲದೇ ಸೇವಿಸಬಹುದು.

ಮೊಸರನ್ನ ತಣ್ಣಗಿರುವಾಗಲೇ ಸೇವಿಸಿ
• ಮೊಸರನ್ನವನ್ನು, ತಣ್ಣಗಿದ್ದಂತೆಯೇ, ನಿತ್ಯವೂ ಸೇವಿಸಬೇಕೆಂದು ಆಹಾರತಜ್ಞರ ಅಭಿಪ್ರಾಯವಾಗಿದೆ. ಇದರಿಂದ ದೇಹವನ್ನು ಒಳಗಿನಿಂದ ತಪಾಗಿರಿಸಲು ಸಾಧ್ಯವಾಗುತ್ತದೆ ಹಾಗೂ ದೇಹದ ತಾಪಮಾನವನ್ನೂ ಆರೋಗ್ಯಕರ ಮಿತಿಗಳಲ್ಲಿರಿಸಬಹುದು. ವಿಶೇಷವಾಗಿ ಜ್ವರ ಆವರಿಸಿದಾಗ ಸೇವಿಸಲು ಮೊಸರನ್ನ ಅತ್ಯುತ್ತಮವಾದ ಆಹಾರವಾಗಿದೆ. ಅಲ್ಲದೇ, ಬೇಸಿಗೆಯ ದಿನಗಳಲ್ಲಿ, ಮೊಸರನ್ನದ ಸೇವನೆಯಿಂದ ದೇಹ ಅತಿ ಶೀಘ್ರವಾಗಿ ತಾಪವೇರದಂತೆ ನೋಡಿಕೊಳ್ಳುವ ಮೂಲಕ ಬಿಸಿಲ ಝಳವನ್ನು ಸಹಿಸಿಕೊಳ್ಳಲೂ ನೆರವಾಗುತ್ತದೆ.

ಮೊಸರಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು
ಮೊಸರಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು, ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳು ಹಾಗೂ ಕೊಬ್ಬುಗಳು ಎಲ್ಲವೂ ಆರೋಗ್ಯಕ್ಕೆ ಉತ್ತಮವೇ ಆಗಿವೆ. ಅಲ್ಲದೇ ಮೊಸರಿನ ಸೇವನೆಯಿಂದ ಮಾನಸಿಕ ಒತ್ತಡವನ್ನೂ ಸುಲಭವಾಗಿ ನಿರ್ವಹಿಸಬಹುದು. ಇದೇ ಕಾರಣಕ್ಕೆ ಮೊಸರನ್ನು ಒತ್ತಡ ನಿವಾರಕವೆಂದೂ ಕರೆಯುತ್ತಾರೆ. ಅಲ್ಲದೇ ಭಾವನೆಗಳ ಮೂಲಕ ಮೆದುಳಿಗೆ ಎದುರಾಗುವ ನೋವು ಮತ್ತು ವೇದನೆಯನ್ನೂ ನಿರ್ವಹಿಸಲು ಮೊಸರು ನೆರವಾಗುತ್ತದೆ.

ತೂಕ ಕಳೆದುಕೊಳ್ಳಲು
ತೂಕ ಕಳೆದುಕೊಳ್ಳುವ ಯತ್ನದಲ್ಲಿರುವ ವ್ಯಕ್ತಿಗಳು ಅತಿ ಹೆಚ್ಚು ಜನರು ಬಯಸುವ ಆಹಾರವಾಗಿರುವ ಮೊಸರನ್ನ ದಿನದ ಒಂದು ಹೊತ್ತಿನಲ್ಲಾದರೂ, ಕೊಂಚ ಪ್ರಮಾಣದಲ್ಲಿಯಾದರೂ ಇರಬೇಕೆಂದು ಬಯಸುತ್ತಾರೆ. ಒಂದು ಕಪ್ ನಷ್ಟು ಮೊಸರನ್ನ ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ ಹಾಗೂ ಅನಗತ್ಯವಾಗಿ ಹೆಚ್ಚಿನ ಕ್ಯಾಲೋರಿ ಇರುವ ಅನಾರೋಗ್ಯಕರ ಆಹಾರ ಸೇವನೆಯಿಂದ ತಡೆಯುತ್ತದೆ. ಅನ್ನದಿಂದ ತಯಾರಿಸುವ ಇತರ ಖಾದ್ಯಗಳಾದ ಪಲಾವ್, ಘೀ ರೈಸ್ ಮೊದಲಾದವುಗಳಿಗೆ ಹೋಲಿಸಿದರೆ ಮೊಸರನ್ನದಲ್ಲಿ ನಗಣ್ಯ ಪ್ರಮಾಣದ ಕ್ಯಾಲೋರಿಗಳಿವೆ.

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳ ಕಾರಣ ಅನಾರೋಗ್ಯದ ಸಮಯದಲ್ಲಿ ಸೇವಿಸಲು ನೀಡುವ ಪ್ರಮುಖ ಆಹಾರವಾಗಿ ಮೊಸರನ್ನವನ್ನು ಆಯ್ಕೆ ಮಾಡಲಾಗುತ್ತದೆ. ಮೊಸರನ್ನದ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಹಾಗೂ ಹಲವಾರು ಸೋಂಕುಗಳ ವಿರುದ್ದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಶಕ್ತಿಯನ್ನು ನೀಡುವ ಮೂಲಕ ಅನಾರೋಗ್ಯದಿಂದ ಶೀಘ್ರವೇ ಚೇತರಿಸಿಕೊಳ್ಳಲೂ ಸಹಕರಿಸುತ್ತದೆ.

ಇನ್ನೂ ಕೆಲವು ಕಾರಣಗಳಿವೆ
ಮೇಲೆ ವಿವರಿಸಿದ ಕಾರಣಗಳಿಗೆ ಹೊರತಾಗಿ, ಮೊಸರನ್ನವನ್ನು ಕಡ್ಡಾಯವಾಗಿ ಏಕೆ ಸೇವಿಸಬೇಕೆಂದು ನಿರೂಪಿಸಲು ಇನ್ನೂ ಕೆಲವು ಕಾರಣಗಳಿವೆ. ಮೊಸರನ್ನವನ್ನು ಹಾಲುಹಲ್ಲಿನ ಪುಟ್ಟ ಮಕ್ಕಳಿಗೂ ಸೇವಿಸಲು ನೀಡಬಹುದು. ಮೊಸರನ್ನದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರ್ಬೋಹೈಡ್ರೇಟುಗಳು ಹಾಗೂ ಪ್ರೋಟೀನುಗಳು ದೇಹದ ಅಗತ್ಯತೆಯನ್ನು ಪೂರೈಸುತ್ತದೆ ಹಾಗೂ ವಿಶೇಷವಾಗಿ ಹುರಿದ ಅಥವಾ ಖಾರವಾಗಿರುವ ಆಹಾರಗಳ ಸೇವನೆಯ ಬಳಿಕ ಮೊಸರನ್ನವನ್ನು ಸೇವಿಸಿದರೆ ಜೀರ್ಣಕ್ರಿಯೆ ನೆರವಾಗುತ್ತದೆ ಹಾಗೂ ಮರುದಿನದ ಬಹಿರ್ದೆಸೆಯ ಸಮಯದಲ್ಲಿ ಉರಿಯಾಗದಂತೆ ರಕ್ಷಿಸುತ್ತದೆ. ವಿಶೇಷವಾಗಿ ಮೊಸರಿನ ಸೇವನೆಯಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ ಹಾಗೂ ಇದೇ ಕಾರಣಕ್ಕೆ ಮುಖಕ್ಕೆ ಲೇಪಿಸುವ ಕೆಲವಾರು ಮುಖಲೇಪಗಳಲ್ಲಿ ಮೊಸರನ್ನು ಬಳಸಲಾಗುತ್ತದೆ.

ಹಾಲಿಗೆ ಹೋಲಿಸಿದರೆ
ಹಾಲಿಗೆ ಹೋಲಿಸಿದರೆ ಮೊಸರು ಉತ್ತಮವಾದ ಆಯ್ಕೆಯಾಗಿದೆ. ಮೊಸರನ್ನು ಮೊಸರನ್ನದ ರೂಪದಲ್ಲಿ ಸೇವಿಸುವುದು ಅತ್ಯುತ್ತಮವಾಗಿದೆ. ಅಲ್ಲದೇ ಹಾಲು ಕುಡಿದಾದ ಬಳಿಕ ಎದುರಾಗುವ ಹೊಟ್ಟೆಯ ಭಾರವಾಗುವ ಭಾವನೆ ಅದೇ ಪ್ರಮಾಣದ ಮೊಸರನ್ನು ಸೇವಿಸಿದ ಬಳಿಕ ಎದುರಾಗುವುದಿಲ್ಲ. ಅಲ್ಲದೇ ಮೊಸರು ಅತಿ ಸುಲಭವಾಗಿ ಹಾಗೂ ಹಾಲಿಗಿಂತಲೂ ಶೀಘ್ರವಾಗಿ ಜೀರ್ಣಿಸಲ್ಪಡುತ್ತದೆ ಎಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.

ಮೊಸರನ್ನ ತಯಾರಿಸುವುದು ಹೇಗೆ?
ಮೊಸರಾನ್ನ ತಯಾರಿಸುವುದು ತುಂಬಾ ಸರಳ. ಅನ್ನ ಮತ್ತು ಮೊಸರನ್ನು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ. ಒಂದು ತವಾದಲ್ಲಿ ಸ್ವಲ್ಪ ಎಣ್ಣೆ, ಜೀರಿಗೆ, ಕರಿಬೇವಿನ ಎಲೆಗಳು ಮತ್ತು ಸಾಸಿವೆ ಹಾಕಿ. ಇದು ಬಿಸಿಯಾದ ಬಳಿಕ ಅದನ್ನು ಮೊಸರಾನ್ನ ಇರುವ ಪಾತ್ರಗೆ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ರುಚಿಗೆ ಬೇಕಾದಷ್ಟು ಉಪ್ಪು ಹಾಕಿ. ಈಗ ಮೊಸರನ್ನ ತಿನ್ನಲು ತಯಾರು. ತಯಾರಿಸಲು ಸುಲಭವಾಗಿರುವ ಕಾರಣದಿಂದ ಒಬ್ಬಂಟಿಯಾಗಿರುವವರು ಜ್ವರದಿಂದ ಬಳಲುತ್ತಿದ್ದರೆ ಇದನ್ನು ತಯಾರಿಸಿ ತಿನ್ನಿ.
*ಇದು ಕೆಲವೇ ನಿಮಿಷಗಳಲ್ಲಿ ತಯಾರಾಗುವ ಕಾರಣದಿಂದ ಹೆಚ್ಚು ಶ್ರಮ ಮತ್ತು ಒತ್ತಡ ಬೇಕಾಗಲ್ಲ. ಹಸಿಮೆಣಸು, ಒಣದ್ರಾಕ್ಷಿ ಮತ್ತು ಗೋಡಂಬಿ ಹಾಕಿಕೊಂಡು ಇದನ್ನು ಇನ್ನಷ್ಟು ರುಚಿಕರವಾಗಿ ಮಾಡಬಹುದು. ಮೊಸರಾನ್ನಕ್ಕೆ ದಾಳಿಂಬೆ ಬೀಜಗಳು, ದ್ರಾಕ್ಷಿ, ಕ್ಯಾರೆಟ್ ಮತ್ತು ಹಸಿ ಮಾವಿನಕಾಯಿಯನ್ನು ತುರಿದು ಹಾಕಿ.
* ಭೇದಿಯಿಂದ ಬಳಲುತ್ತಿರುವವರಿಗೆ ಮೊಸರನ್ನವು ತುಂಬಾ ಪರಿಣಾಮಕಾರಿ. ಮೆಂತೆಕಾಳಿನೊಂದಿಗೆ ಇದನ್ನು ಸೇವನೆ ಮಾಡಿದರೆ ಆಗ ಹೊಟ್ಟೆಗೆ ಸ್ವಲ್ಪ ಆರಾಮ ನೀಡುವುದು. ಇದು ಹೊಟ್ಟೆ ನೋವು ಕಡಿಮೆ ಮಾಡುವುದು.
*ಋತುಬಂಧದ ಹತ್ತಿರವಿರುವಂತಹ ಮಹಿಳೆಯರಿಗೆ ಮೊಸರನ್ನವು ತುಂಬಾ ಒಳ್ಳೆಯದು ಎಂದು ವೈದ್ಯರು ಕೂಡ ಹೇಳುತ್ತಾರೆ. ಇದರಲ್ಲಿರುವ ಉತ್ತಮ ಮಟ್ಟದ ಕ್ಯಾಲ್ಸಿಯಂ ದೇಹಕ್ಕೆ ಸಹಕಾರಿ. ಹಾಲಿಗೆ ಹೋಲಿಸಿದರೆ ಮೊಸರು ತುಂಬಾ ಉತ್ತಮ ಆಯ್ಕೆ. ಅದರಲ್ಲೂ ಮೊಸರಾನ್ನದ ರೂಪದಲ್ಲಿ ಇದನ್ನು ಸೇವಿಸಬೇಕು.
*ಒಂದು ಲೋಟ ಹಾಲು ಕುಡಿದರೆ ಹೊಟ್ಟೆ ತುಂಬಿದಂತೆ ಆಗುವುದು. ಆದರೆ ಮೊಸರನ್ನ ಸೇವನೆ ವೇಳೆ ಈ ಸಮಸ್ಯೆಯಿಲ್ಲ. ಮೊಸರಿನಲ್ಲಿ ಪ್ರೋಟೀನ್ ನನ್ನು ಹಾಲಿನಲ್ಲಿರುವ ಪ್ರೋಟೀನ್ ಗಿಂತ ವೇಗವಾಗಿ ಜೀರ್ಣಿಸಿಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ. ಇದರಲ್ಲಿ ಪೊಟಾಶಿಯಂ ಕೂಡ ಇರುವ ಕಾರಣದಿಂದ ರಕ್ತದೊತ್ತಡವು ಸಮತೋಲನದಲ್ಲಿರುವುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Here's Why You Should Include Curd Rice In Your Diet

Over the years, consumption of curd has been associated with several health benefits. Curd, in the form of curd rice, when eaten on a frequent or daily basis can show immense results in improving not just your digestive system, but your overall health as well. Curd rice is known to have originated in South India but its consumption is not limited to the southern region of India. It is extremely famous in North India too, especially during the summer. Curd rice is said to be the most opted for food item when one is suffering from an upset tummy.
X
Desktop Bottom Promotion