Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಹಸಿ ಆಲೂಗಡ್ಡೆಯ ಜ್ಯೂಸ್ ಕುಡಿದರೆ, ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ...
ಆಲೂಗಡ್ಡೆ ಅಂದರೆ ನಿಮಗೆ ಇಷ್ಟವೇ? ಮಸಾಲೆ ದೋಸೆ ಇಷ್ಟ ಎಂದರೆ ಆಲುಗಡ್ಡೆಯೂ ಇಷ್ಟವೇ ಸರಿ. ಆದರೆ ಆಲೂಗಡ್ಡೆಯಿಂದ ರಸವನ್ನು ಹಿಂಡಿ ಪ್ರತ್ಯೇಕಿಸಿ ಕುಡಿಯುವ ಪ್ರಯತ್ನವನ್ನೇನಾದರೂ ಮಾಡಿದ್ದೀರೋ? ಸಾಮಾನ್ಯವಾಗಿ ಲಭಿಸುವ ಉತ್ತರ: ಇಲ್ಲ! ಇಂದಿನ ಲೇಖನ ಇದೇ ವಿಷಯದ ಕುರಿತದ್ದಾಗಿದೆ. ಹಸಿ ಆಲುಗಡ್ಡೆಯ ರಸದ ಸೇವನೆಯಿಂದಲೂ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಹಸಿ ಆಲುಗಡ್ಡೆಯನ್ನು ಅರೆದು ಹಿಂಡಿ ತೆಗೆದ ತಣ್ಣನೆಯ ರಸದಲ್ಲಿ ವಿಟಮಿನ್ ಬಿ, ಸಿ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ತಾಮ್ರ ಹಾಗೂ ಗಂಧಕದ ಸಹಿತ ಇನ್ನೂ ಕೆಲವಾರು ಪೋಷಕಾಂಶಗಳಿವೆ.
ಇದುವರೆಗೆ ಆಲುಗಡ್ಡೆಯ ರಸ ಏಕೆ ಅವಗಣನೆಗೆ ಒಳಗಾಗಿತ್ತು ಎಂದರೆ ಈ ರಸ ಹಣ್ಣಿನ ರಸದಂತೆ ರುಚಿಯಾಗೇನೂ ಇರುವುದಿಲ್ಲ. ಅಲ್ಲದೇ ಇದು ಅತಿ ಹೆಚ್ಚು ಕ್ಷಾರೀಯವಾಗಿರುವ ಕಾರಣ ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಹಾಗೂ ಹೊಟ್ಟೆಯ ಇತರ ಸಮಸ್ಯೆಗಳನ್ನೂ ಪರಿಹರಿಸುತ್ತದೆ. ಬನ್ನಿ, ನಿತ್ಯವೂ ಕೊಂಚ ಹಸಿ ಆಲುಗಡ್ಡೆಯ ರಸವನ್ನು ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

ವಿಟಮಿನ್ ಸಿ ಯೊಂದಿಗೆ ಸಮೃದ್ಧವಾಗಿದೆ
ಆಲೂಗಡ್ಡೆಯ ರಸದಲ್ಲಿ ನಿತ್ಯದ ಅಗತ್ಯದ ಶೇಖಡಾ ನೂರರಷ್ಟು ಪ್ರಮಾಣದ ವಿಟಮಿನ್ ಸಿ ಇದೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಲು ಹಾಗೂ ಆಹಾರದ ಮೂಲಕ ಆಗಮಿಸಿದ ಕಬ್ಬಿಣವನ್ನು ಹೀರಿಕೊಳ್ಳಲು ಹಾಗೂ ಮೂಳೆ, ಸ್ನಾಯು ಹಾಗೂ ರಕ್ತನಾಳಗಳಲ್ಲಿ ಕೊಲ್ಯಾಜೆನ್ ಉತ್ಪಾದಿಸಲು ಈ ವಿಟಮಿನ್ ಸಿ ಅಗತ್ಯವಾಗಿದೆ. ಅಲ್ಲದೇ ಈ ರಸದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಒಟ್ಟಾರೆ ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಚರ್ಮದ ತುರಿಕೆ ಇಲ್ಲವಾಗಿಸುವುದು ಮತ್ತು ಕಣ್ಣುಗಳ ಕೆಳಗೆ ತುಂಬಿಕೊಂಡಿದ್ದ ಚೀಲಗಳಂತಹ ಭಾಗವನ್ನು ಸರಿಪಡಿಸಲು ನೆರವಾಗುತ್ತದೆ

ವಿಟಮಿನ್ ಬಿ ಯಿಂದಲೂ ಸಮೃದ್ಧವಾಗಿದೆ
ಒಂದು ಪ್ರಮಾಣದ ಆಲೂಗಡ್ಡೆಯಲ್ಲಿ ನಿತ್ಯದ ಅಗತ್ಯದ ನಲವತ್ತು ಶೇಖಡಾದಷ್ಟು ಥಿಯಾಮಿನ್ ಮತ್ತು ನಿಯಾಸಿನ್ ಇದೆ ಎಂದು ಈ ಮೊದಲು ನಿಮಗೆ ಗೊತ್ತಿತ್ತೇ? ಆಲೂಗಡ್ಡೆಯ ರಸವನ್ನು ನಿತ್ಯವೂ ಸೇವಿಸುವ ಮೂಲಕ ಈ ಪೋಷಕಾಂಶಗಳ ಜೊತೆಗೇ ಇತರ ವಿಟಮಿನ್ ಬಿ ಗಳಾದ ರೈಬೋಫ್ಲೇವಿನ್ ಮತ್ತು ವಿಟಮಿನ್ ಬಿ೬ ನಂತಹ ಪೋಷಕಾಂಶಗಳು ಲಭಿಸುತ್ತವೆ. ಬಿ ವಿಟಮಿನ್ನುಗಳು ನಮ್ಮ ದೇಹದಲ್ಲಿ ಆಗಮಿಸಿದ ಆಹಾರದಲ್ಲಿನ ಕಾರ್ಬೋಹೈಡ್ರೇಟುಗಳನ್ನು ಜೀರ್ಣಿಸಿ ಗ್ಲೂಕೋಸ್
ರೂಪದಲ್ಲಿ ಪರಿವರ್ತಿಸಿ ಶಕ್ತಿಯನ್ನು ಒದಗಿಸಲು ಅಗತ್ಯವಾಗಿವೆ. ಅಲ್ಲದೇ ಮೆದುಳಿನ ಕಾರ್ಯಕ್ಷಮತೆ, ನರವ್ಯವಸ್ಥೆಯ ಕಾರ್ಯನಿರ್ವಹಣೆ, ಯಕೃತ್ ನ ಆರೋಗ್ಯ ನಿರ್ವಹಣೆ ಹಾಗೂ ಆರೋಗ್ಯಕರ ಕೂದಲಿಗೂ ವಿಟಮಿನ್ ಬಿ ಅಗತ್ಯವಾಗಿದೆ.

ಆಂಟಿ ಆಕ್ಸಿಡೆಂಟುಗಳೂ ಸಮೃದ್ಧವಾಗಿವೆ
ಆಲೂಗಡ್ಡೆಯ ರಸದಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಹಾಗೂ ರೋಗಗಳ ವಿರುದ್ದ ಹೋರಾಡುವ ಫೈಟೋಕೆಮಿಕಲ್ಸ್ ಗಳೂ ಇವೆ. ಇವೆರಡೂ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಅಗತ್ಯವಾಗಿದ್ದು ಅವಧಿಗೂ ಮುನ್ನ ವಯಸ್ಸಿನ ಲಕ್ಷಣಗಳು ಕಾಣಿಸಿಕೊಳ್ಳುವುದು ಹಾಗೂ ಉರಿಯುತದಿಂದ ತಡೆಯುತ್ತವೆ. ಲ್ಯೂಟಿನ್, ಜಿಯಾಕ್ಸಾಂಥಿನ್ ಹಾಗೂ ವಿಯೋಲಾಕ್ಸಾಂಥಿನ್ ಮೊದಲಾದ ಆಂಟಿ ಆಕ್ಸಿಡೆಂಟುಗಳು ಆಲುಗಡ್ಡೆಯ ರಸದಲ್ಲಿ ಸಮೃದ್ಧ ಪ್ರಮಾಣದಲ್ಲಿವೆ.

ಆಂಟಿ ಆಕ್ಸಿಡೆಂಟುಗಳೂ ಸಮೃದ್ಧವಾಗಿವೆ
ಆಲೂಗಡ್ಡೆಯ ರಸದಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಹಾಗೂ ರೋಗಗಳ ವಿರುದ್ದ ಹೋರಾಡುವ ಫೈಟೋಕೆಮಿಕಲ್ಸ್ ಗಳೂ ಇವೆ. ಇವೆರಡೂ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಅಗತ್ಯವಾಗಿದ್ದು ಅವಧಿಗೂ ಮುನ್ನ ವಯಸ್ಸಿನ ಲಕ್ಷಣಗಳು ಕಾಣಿಸಿಕೊಳ್ಳುವುದು ಹಾಗೂ ಉರಿಯುತದಿಂದ ತಡೆಯುತ್ತವೆ. ಲ್ಯೂಟಿನ್, ಜಿಯಾಕ್ಸಾಂಥಿನ್ ಹಾಗೂ ವಿಯೋಲಾಕ್ಸಾಂಥಿನ್ ಮೊದಲಾದ ಆಂಟಿ ಆಕ್ಸಿಡೆಂಟುಗಳು ಆಲುಗಡ್ಡೆಯ ರಸದಲ್ಲಿ ಸಮೃದ್ಧ ಪ್ರಮಾಣದಲ್ಲಿವೆ.

ಅಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಂ ಸಹಾ ಇದೆ
ಆಲೂಗಡ್ಡೆಯ ರಸದಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಾಗಿದೆ. ಎಷ್ಟು ಹೆಚ್ಚು ಅಂದರೆ ಕಿತ್ತಳೆಯಲ್ಲಿ ಕಂಡು ಬರುವುದಕ್ಕಿಂತಲೂ ಮೂರು ಪಟ್ಟು ಹೆಚ್ಚು. ಒಂದು ಪ್ರಮಾಣದ ಆಲುಗಡ್ಡೆ ರಸದಲ್ಲಿ 1467ಮಿಲಿಗ್ರಾಂ ಪೊಟ್ಯಾಶಿಯಂ ಇದೆ, ಇದು ನಿತ್ಯದ ಅಗತ್ಯದ 31ಶೇಖಡಾದಷ್ಟನ್ನು ಪೂರೈಸಲು ಸಾಕು. ಪೊಟ್ಯಾಶಿಯಂ ಒಂದು ಬಗೆಯ ಎಲೆಕ್ಟ್ರೋಲೈಟ್ ನಂತೆ ಕಾರ್ಯನಿರ್ವಹಿಸುತ್ತದೆ, ಹಾಗೂ ದೇಹದಲ್ಲಿನ ದ್ರವವನ್ನು ನಿರ್ವಹಿಸುತ್ತದೆ ಹಾಗೂ ಸ್ನಾಯುಗಳ ಕಾರ್ಯನಿರ್ವಹಣೆಯಲ್ಲಿ ನೆರವಾಗುತ್ತದೆ.

ಸಂಧಿವಾತದಿಂದ ತಡೆಯುತ್ತದೆ
ಆಲೂಗಡ್ಡೆಯ ರಸದಲ್ಲಿ ಅತ್ಯುತ್ತಮ ಉರಿಯೂತ ನಿವಾರಕ ಗುಣಗಳಿವೆ ಹಾಗೂ ಇದು ಊತದಿಂದ ಎದುರಾದ ನೋವುಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ. ಉರಿಯೂತ, ಬಾವು ಕೆಂಪಗಾದ ಚರ್ಮ, ಉರಿ ಮೊದಲಾದ ತೊಂದರೆ ಇರುವ ವ್ಯಕ್ತಿಗಳು ನಿತ್ಯವೂ ಆಲುಗಡ್ಡೆಯ ರಸದ ಸೇವನೆಯನ್ನು ಮಡುತ್ತಾ ಬಂದರೆ ಸಂಧಿವಾತ ಹಾಗೂ ಇತರ ಸಂಬಂಧಿತ ತೊಂದರೆಗಳು ಇಲ್ಲವಾಗುತ್ತವೆ.

ಮೈಗ್ರೇನ್ ತಲೆನೋವಿನ ಚಿಕಿತ್ಸೆಗೂ ಸೈ
ಮೈಗ್ರೇನ್ ತಲೆನೋವಿನ ತೊಂದರೆ ಇದ್ದವರು ಆಲುಗಡ್ಡೆಯ ರಸದ ಸೇವನೆಯ ಜೊತೆಗೇ ಹಸಿ ಆಲುಗಡ್ಡೆಯನ್ನು ಕತ್ತರಿಸಿದ ಬಿಲ್ಲೆಯನ್ನು ಹಣೆಯ ಪಕ್ಕದ ಭಾಗ ಹಾಗೂ ಹಣೆಯ ಮೇಲೆ ಇರಿಸಿಕೊಳ್ಳುವ ಮೂಲಕ ಶೀಘ್ರವೇ ತಲೆನೋವು ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ನೆರವಾಗುತ್ತದೆ. ಆಲುಗಡ್ಡೆಯ ರಸವನ್ನು ಆಯುರ್ವೇದದಲ್ಲಿ ತಲೆನೋವಿನ ಚಿಕಿತ್ಸೆಯ ರೂಪದಲ್ಲಿಯೂ ಬಳಸಲಾಗುತ್ತದೆ.

ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ
ಆಲೂಗಡ್ಡೆಯ ರಸದಲ್ಲಿ ಉತ್ತಮ ಪ್ರಮಾಣದ ನಿಯಾಸಿ ಇದೆ, ಈ ವಿಟಮಿನ್ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ಹೆಚ್ಚಿನ ಆಮ್ಲಜನಕವನ್ನು ಪಡೆದುಕೊಳ್ಳಲು ಹಾಗೂ ಇತರ ಪೋಷಕಾಂಶಗಳನ್ನು ರಕ್ತದ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಕೊಂಡೊಯ್ಯಲು ನೆರವಾಗುತ್ತದೆ. ಪರಿಣಾಮವಾಗಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ದೇಹದ ಎಲ್ಲಾ ಅಂಗಗಳು ಪರಿಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ
ಸಾಮಾನ್ಯವಾಗಿ ಆಲೂಗಡ್ಡೆಯನ್ನು ಸೇವಿಸುವುದರಿಂದ ತೂಕ ಏರುತ್ತದೆ ಎಂದು ಹೆಚ್ಚಿನವರು ಅಭಿಪ್ರಾಯಪಡುತ್ತಾರೆ. ಆದರೆ ಸಂಶೋಧನೆಯಿಂದ ಈ ತೂಕದ ಏರುವಿಕೆ ಆಲುಗಡ್ಡೆಯಿಂದಲ್ಲ, ಬದಲಿಗೆ ಇದನ್ನು ಹುರಿಯಲು ಬಳಸಿದ ಎಣ್ಣೆಯಿಂದಾಗುತ್ತದೆ ಎಂದು ಕಂಡುಬಂದಿದೆ. ಹಾಗಾಗಿ ಹಸಿ ಆಲುಗಡ್ಡೆಯ ರಸದ ಸೇವನೆಯಿಂದ ತೂಕ ಏರುವುದಿಲ್ಲ, ಬದಲಿಗೆ ಇಳಿಸುವ ಪ್ರಯತ್ನಗಲಿಗೆ ಹೆಚ್ಚಿನ ಬೆಂಬಲ ದೊರಕುತ್ತದೆ. ಆಲೂಗಡ್ಡೆಯ ರಸದಲ್ಲಿರುವ ವಿಟಮಿನ್ ಸಿ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚಿನ ಕೊಬ್ಬು ಕರಗಿಸಲು ನೆರವಾಗುತ್ತದೆ. ಅಲ್ಲದೇ ಊಟದ ಬಳಿಕ ಸೇವಿಸುವ ಆಲುಗಡ್ಡೆಯ ರಸ ಹಸಿವಿಗೆ ಕಾರಣವಗುವ ರಸದೂತಗಳನ್ನು ಅದುಮಿ ಹಿಡಿಯುವ ಮೂಲಕ ಅಗತ್ಯಕ್ಕೂ ಮೀರಿದ ಆಹಾರ ಸೇವನೆಯಿಂದ ತಡೆದು ತೂಕ ಏರದಂತೆ ನೋಡಿ ಕೊಳ್ಳುತ್ತದೆ.



Click it and Unblock the Notifications











