Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮಲಗುವಾಗ ಮಹಿಳೆಯರು ಒಳ ಉಡುಪು ಹಾಗೂ ಬ್ರಾ ಧರಿಸದೇ ಮಲಗಬೇಕಂತೆ!
ದಿನವಿಡಿ ದೇಹವು ದಣಿದ ಬಳಿಕ ರಾತ್ರಿ ಒಳ್ಳೆಯ ಗುಣಮಟ್ಟದ ನಿದ್ರೆ ಸಿಕ್ಕಿದರೆ ಮಾತ್ರ ಮರುದಿನ ಮತ್ತೆ ದೇಹವು ಒಳ್ಳೆಯ ಶಕ್ತಿಯಿಂದ, ಚುರುಕಾಗಿ ಇರಲು ಸಾಧ್ಯ. ನಿದ್ರೆಯ ಗುಣಮಟ್ಟವನ್ನು ಉತ್ತಮಪಡಿಸಿಕೊಂಡರೆ ಆಗ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇರುವುದು. ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ವಿಧಾನಗಳು ಇವೆ. ಇದರಲ್ಲಿ ಮುಖ್ಯವಾಗಿ ತಲೆದಿಂಬು ಇಲ್ಲದೆ ಮಲಗುವುದು, ನೆಲದ ಮೇಲೆ ಮಲಗುವುದು ಮತ್ತು ಒಳ ಉಡುಪು ಇಲ್ಲದೆ ಮಲಗುವುದು ಇತ್ಯಾದಿಗಳು.
ಆದರೆ ಹೆಚ್ಚಿನವರಿಗೆ ಬಟ್ಟೆ ಇಲ್ಲದೆ ಮಲಗಲು ಅಷ್ಟು ಆರಾಮದಾಯಕವೆಂದು ಅನಿಸದು. ಕೆಲವರು ಮಾತ್ರ ಹೀಗೆ ಮಾಡಿ ಅದರ ಲಾಭ ಪಡೆದುಕೊಂಡಿದ್ದಾರೆ. ಒಳಉಡುಪು ಇಲ್ಲದೆ ರಾತ್ರಿ ನಿದ್ರಿಸುವುದರಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ಕೇಳಿದರೆ ಆಗ ಖಂಡಿತವಾಗಿಯೂ ನೀವು ಹಾಗೆ ಮಾಡುವಿರಿ. ಒಮ್ಮೆ ನೀವು ಹೀಗೆ ಮಲಗಿದರೆ ಮುಂದೆ ನಿಮಗೆ ಇದು ಅಭ್ಯಾಸವಾಗಿ, ಒಳ್ಳೆಯ ಭಾವನೆ ಮೂಡಿಸಬಹುದು.

ನಿದ್ರಾಹೀನತೆ ನಿವಾರಣೆ
ನಿದ್ರಾಹೀನತೆ ಅನೇಕರನ್ನು ಕಾಡಲು ಕಾರಣವೇನೆಂದು ತಿಳಿದಿದೆಯಾ? ಇದರಲ್ಲಿ ಒಂದು ದೇಹವು ಸರಿಯಾದ ತಾಪಮಾನ ಕಾಪಾಡಿಕೊಳ್ಳಲು ವಿಫಲವಾಗಿರುವುದು. ದೇಹದ ತಾಪಮಾನವು ನೀವು ಧರಿಸಿರುವ ಬಟ್ಟೆಗಳಲ್ಲಿ ಬಂಧಿಯಾಗಿರುವುದು. ಇದನ್ನು ತೆಗೆಯಿರಿ ಮತ್ತು ನಿಮ್ಮ ದೇಹದ ತಾಪಮಾನವು ಕಡಿಮೆಯಾಗಿ, ನೀವು ಒಳ್ಳೆಯ ನಿದ್ರೆ ಮಾಡಬಹುದು.

ಸ್ವಾತಂತ್ರ್ಯದ ಭಾವನೆ
ಇದನ್ನು ನೀವು ನಂಬಿ ಅಥವಾ ಬಿಡಿ, ಆದರೆ ನಗ್ನವಾಗಿ ಮಲಗಿದರೆ ಸ್ವಾತಂತ್ರ್ಯದ ಭಾವನೆಯಾಗುವುದು. ಹೌದು, ಸ್ವಾತಂತ್ರ್ಯವೆಂದರೆ ಈ ರೀತಿ ಸರಳವಾಗಿರುವುದು. ಮಲಗುವ ವೇಳೆ ಬಟ್ಟೆ ಧರಿಸಿ ಮಲಗಿದರೆ ಆಗ ಏನೋ ಒಂದು ರೀತಿಯ ಅಸಮಾಧಾನ ಮತ್ತು ಮುಕ್ತವಾಗಿರಲು ಆಗಲ್ಲ. ಇದರಿಂದ ಮಲಗುವ ವೇಳೆ ಬಟ್ಟೆ ತೆಗೆಯಿರಿ ಮತ್ತು ಸ್ವಾತಂತ್ರ್ಯದ ಭಾವನೆ ಅನುಭವಿಸಿ. ಈ ಮಾನಸಿಕ ಪರಿಣಾಮವು ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.

ಮಧುಮೇಹದ ಅಪಾಯ ತಗ್ಗಿಸುವುದು
ಮಧುಮೇಹ ಮತ್ತು ನಗ್ನವಾಗಿ ಮಲಗುವುದಕ್ಕೆ ಏನು ಸಂಬಂಧವೆಂದು ನೀವು ಕೇಳಬಹುದು. ಒಳ ಉಡುಪು ಇಲ್ಲದೆ ಮಲಗುವಾಗ ಅಂಗಾಂಗಗಳ ಕಾರ್ಯವು ಉತ್ತಮವಾಗುವುದು. ಕಂದು ಕೊಬ್ಬು ಇದರಲ್ಲಿ ಒಂದು. ಕಂದುಕೊಬ್ಬು ದೇಹದ ತಾಪಮಾನ ಕಡಿಮೆಯಾದಾಗ ಕ್ಯಾಲರಿ ದಹಿಸುವಂತಹ ಕೊಬ್ಬು ಆಗಿದೆ. ಕ್ಯಾಲರಿ ಕಡಿಮೆಯಾದರೆ ಆಗ ನೀವು ಮಧುಮೇಹದಿಂದ ತುಂಬಾ ದೂರವಿರುವಿರಿ.

ತೂಕ ಸಮತೋಲನದಲ್ಲಿಡಲು
ನಿದ್ರಿಸುವ ವೇಳೆ ಒತ್ತಡದ ಹಾರ್ಮೋನು ಕಡಿಮೆಯಾಗುವುದು. ಪೈಜಾಮ ಧರಿಸಿ ಮಲಗುವವರ ದೇಹವು ಸರಿಯಾಗಿ ಆರಾಮ ಮಾಡಲು ವಿಫಲವಾಗುವುದು. ಯಾಕೆಂದರೆ ಬಟ್ಟೆ ಧರಿಸಿ ಮಲಗಿದರೆ ಆಗ ಆರೋಗ್ಯಕರ ನಿದ್ರೆಗೆ ಅಡ್ಡಿಯಾಗುವುದು. ಸರಿಯಾಗಿ ನಿದ್ರೆ ಬರದೆ ಇದ್ದರೆ ಆಗ ಒತ್ತಡವು ಹೆಚ್ಚಾಗುವುದು ಮತ್ತು ಇದರಿಂದ ನೀವು ಹೆಚ್ಚು ತಿನ್ನುತ್ತೀರಿ.

ಆರೋಗ್ಯಕರ ಚರ್ಮ
ದೇಹದಲ್ಲಿ ರಕ್ತಸಂಚಾರವು ಸುಗಮವಾಗಿ ಆದರೆ ಅದರಿಂದ ಚರ್ಮದ ಆರೋಗ್ಯವು ಚೆನ್ನಾಗಿರುವುದು. ನೀವು ಬಟ್ಟೆ ಧರಿಸಿದರೆ ಆಗ ಅದರಿಂದ ಕಲೆಗಳು ಮೂಡುವುದು ಮತ್ತು ಚರ್ಮವು ಸರಿಯಾಗಿ ಉಸಿರಾಡುವುದು. ಬಟ್ಟೆಗಳಿಂದಾಗಿ ಆರಂಭದಲ್ಲಿ ಚರ್ಮದ ಮೇಲೆ ಕೆಂಪುಗೆರೆಗಳು ಮೂಡುವುದು. ಆದರೆ ಇದು ಭವಿಷ್ಯದಲ್ಲಿ ಗಂಭೀರ ಪರಿಣಾಮ ಉಂಟು ಮಾಡುವುದು.

ಅಂಗಾಂಗಗಳ ಆರೋಗ್ಯ ಕಾಪಾಡುವುದು
ಒಳಉಡುಪುಗಳು ಇಲ್ಲದೆ ಮಲಗಿದರೆ ಆಗ ಮಹಿಳೆಯರು ಹಾಗೂ ಪುರುಷರ ಅಂಗಾಂಗಗಳಲ್ಲಿ ಉಂಟಾಗುವಂತಹ ಶಿಲೀಂಧ್ರ ಸೋಂಕು ಮತ್ತು ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುವುದು. ಪುರುಷರು ಒಳ ಉಡುಪು ಹಾಕದೆ ಮಲಗುವುದರಿಂದ ವೀರ್ಯದ ಫಲವತ್ತತೆಯು ಹೆಚ್ಚಾಗುವುದು. ಪುರುಷರ ಅಂಗಾಂಗಗಳಿಗೆ ಕೂಡ ಉಸಿರಾಡಬೇಕಾಗಿದೆ. ಒಳಉಡುಪು ಇಲ್ಲದೆ ಮಲಗಿದರೆ ಆಗ ಮಹಿಳೆಯರ ಜನನೇಂದ್ರೀಯದಲ್ಲಿ ಕೆಟ್ಟ ಮತ್ತು ಒಳ್ಳೆಯ ಬ್ಯಾಕ್ಟೀರಿಯಾದ ಸಮತೋಲನ ಕಾಪಾಡುವುದು. ಅಂಗಾಂಗಗಳು ಆರೋಗ್ಯವಾಗಿದ್ದರೆ ಆಗ ತುರಿಕೆ ಹಾಗೂ ದುರ್ಗಂಧವು ಕಡಿಮೆಯಾಗುವುದು. ಬ್ಯಾಕ್ಟೀರಿಯಾ ಬೆಳವಣಿಗೆಗೆ ಗುಡ್ ಬೈ ಹೇಳಿ ಮತ್ತು ಗಾಳಿಯಾಡಲು ಅವಕಾಶ ನೀಡಿ.

ಬ್ಯಾಕ್ಟೀರಿಯಾ ಸೋಂಕು ತಗ್ಗಿಸುವುದು
ಮಹಿಳೆಯರಲ್ಲಿ ಸ್ತ್ರೀ ನಿಕಟ ಪ್ರದೇಶದಲ್ಲಿ ಉಂಟಾಗುವ ಬ್ಯಾಕ್ಟೀರಿಯಾ ಸೋಂಕನ್ನು ಯೋನಿನೋಸಿಸ್ ಎಂದು ಕರೆಯಲಾಗುತ್ತದೆ. ಜನನೇಂದ್ರಿಯ ಜಾಗದಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾದ ಅಸಮತೋಲನದಿಂದ ಹೀಗೆ ಆಗುವುದು. ನಿದ್ರಿಸುವ ವೇಳೆ ಕೂಡ ಒಳಉಡುಪು ಧರಿಸಿಯೇ ಇರುವ ಕಾರಣದಿಂದ ಆ ಪ್ರದೇಶದಲ್ಲಿ ಆರ್ದ್ರತೆ ಹೆಚ್ಚಾಗಿ ಸೋಂಕು ಉಂಟಾಗುವುದು. ಒಳಉಡುಪು ಧರಿಸದೆ ಇದ್ದರೆ ಆಗ ಆ ಪ್ರದೇಶವು ಒಣಗಿ ಸೋಂಕನ್ನು ಕಡಿಮೆ ಮಾಡುವುದು. ಇನ್ನು ಸೊಂಟದ ಕೆಳಗಡೆ ಯಾವುದೇ ರೀತಿಯ ಸೋಂಕು ಇದ್ದರೆ ಆಗ ಆರ್ದ್ರತೆ ಮತ್ತು ಬೆವರಿನಿಂದಾಗಿ ವಾಸನೆ ಬರುವುದು. ನಿದ್ರಿಸುವಾಗ ಒಳಉಡುಪು ಇಲ್ಲದೆ ಇದ್ದರೆ ವಾಸನೆ ಕಡಿಮೆ ಮಾಡಬಹುದು. ಆದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯುದು.

ಬ್ರಾ ಧರಿಸದೆ ಮಲಗುವುದರಿಂದ ಸಿಗುವ ಲಾಭಗಳು
ರಕ್ತ ಸಂಚಾರವನ್ನು ತ್ವರಿತಗೊಳಿಸುವುದು
ಬ್ರಾ ಧರಿಸುವುದರಿಂದಾಗಿ ಸ್ತನಗಳು ಬಿಗಿಯಾಗಿ ಹಿಡಿದುಕೊಂಡ ಕಾರಣದಿಂದಾಗಿ ಸ್ತನಗಳ ಸುತ್ತಲು ರಕ್ತಸಂಚಾರವು ಸರಿಯಾಗಿ ಆಗದೆ ಇರುವುದು. ಈ ಕಾರಣದಿಂದಾಗಿ ಮಲಗುವ ವೇಳೆ ಬ್ರಾ ಧರಿಸದೆ ಮಲಗಬೇಕು. ಮಲಗುವ ವೇಳೆ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಬೇಕಾಗಿದೆ ಮತ್ತು ರಕ್ತಸಂಚಾರವು ಸುಗಮವಾಗಬೇಕು.

ಚರ್ಮದ ಕಿರಿಕಿರಿ ತಡೆಯುವುದು
ದಿನವಿಡಿ ಬಳಲಿದ ದೇಹವು ಬೆವರನ್ನು ಉತ್ಪತ್ತಿ ಮಾಡುವುದು. ಬ್ರಾ ಧರಿಸಿಕೊಂಡು ಮಲಗಿದರೆ ಆಗ ಬೆವರು ಅದರೊಂದಿಗೆ ಸೇರಿಕೊಂಡು ಸುತ್ತಲಿನ ಚರ್ಮವು ತುರಿಕೆಯನ್ನು ಉಂಟು ಮಾಡುವುದು. ಇದರಿಂದ ಬ್ರಾ ಇಲ್ಲದೆ ಮಲಗಿದರೆ ಆಗ ಕಿರಿಕಿರಿ ತಪ್ಪಿಸಬಹುದು.

ಚರ್ಮ ವರ್ಣ ಕಳೆದುಕೊಳ್ಳುವುದನ್ನು ತಡೆಯುವುದು
ಬ್ರಾ ಹಾಕಿಕೊಂಡು ಮಲಗಿದರೆ ಆಗ ಬ್ರಾದ ಗೆರೆಯು ನಿಮ್ಮ ಚರ್ಮದ ಮೇಲೆ ಮೂಡುವುದು. ನಿದ್ರಿಸುವ ವೇಳೆ ನೀವು ಬ್ರಾ ಧರಿಸದೆ ಮಲಗಿದರೆ ಆಗ ನೀವು ಎದೆಯ ಭಾಗದಲ್ಲಿ ಚರ್ಮದ ಬಣ್ಣವು ಬದಲಾಗುವುದನ್ನು ತಪ್ಪಿಸಬಹುದು.

ಸರಿಯಾದ ಆಕಾರ
ಬ್ರಾ ಇಲ್ಲದೆ ಇರುವುದರಿಂದ ಸರಿಯಾದ ಆಕಾರವು ಬರುವುದು ಎಂದು ಹೆಚ್ಚಿನ ಮಹಿಳೆಯರು ಪರಿಗಣಿಸಿದ್ದಾರೆ. ಬ್ರಾ ಹಾಕುವುದರಿಂದ ಸ್ತನಗಳ ಮೇಲೆ ಹೆಚ್ಚಿನ ಅನೈಸರ್ಗಿಕ ಒತ್ತಡವು ಬೀಳುವುದು. ಇದರಿಂದಾಗಿ ಸ್ತನಗಳ ಸ್ನಾಯುಗಳು ಸಡಿಲಗೊಳ್ಳುವುದು. ಎದೆಯಲ್ಲಿರುವ ಸ್ನಾಯುಗಳು ಸ್ತನಗಳಿಗೆ ತುಂಬಾ ನೆರವಾಗುವುದು. ಹದಿಹರೆಯದ ಹುಡುಗಿಯರು ಮಲಗುವ ವೇಳೆ ಬ್ರಾ ಧರಿಸದೆ ಮಲಗಬೇಕು. ಯಾಕೆಂದರೆ ಇದರಿಂದ ಸ್ತನಗಳು ಒಳ್ಳೆಯ ರೀತಿಯಲ್ಲಿ ಬೆಳವಣಿಗೆಯಾಗುವುದು.



Click it and Unblock the Notifications