ಆರೋಗ್ಯ ಟಿಪ್ಸ್: ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಮೂರು-ನಾಲ್ಕು 'ನೆನೆಸಿಟ್ಟ ಬಾದಾಮಿ' ತಿನ್ನಿ

Posted By: Hemanth Amin
Subscribe to Boldsky

ಬಾದಾಮಿಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ಅದನ್ನು ತಿನ್ನುತ್ತೇವೆ. ಆದರೆ ಅದು ಬಾದಾಮಿ ಗಿಡದ ಹಣ್ಣಿನಿಂದ ತೆಗೆದಿರುವ ಬೀಜ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಬಾದಾಮಿಯಲ್ಲಿ ಎರಡು ವಿಧಗಳು. ಒಂದು ಸಿಹಿ, ಮತ್ತೊಂದು ಕಹಿ. ಸಿಹಿ ಬಾದಾಮಿ ತಿನ್ನಲು ಬಳಸಲಾಗುವುದು ಮತ್ತು ಕಹಿ ಬಾದಾಮಿಯನ್ನು ಎಣ್ಣೆ ತೆಗೆಯಲು ಉಪಯೋಗಿಸುವರು. ಬಾದಾಮಿಯಲ್ಲಿ ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲ, ಒಮೆಗಾ-6 ಕೊಬ್ಬಿನಾಮ್ಲ, ವಿಟಮಿನ್ ಇ, ಕ್ಯಾಲ್ಸಿಯಂ, ಫೋಸ್ಪರಸ್, ಸತು, ಹಿರಿಕೊಳ್ಳುವ ಮತ್ತು ಹಿರಿಕೊಳ್ಳದ ನಾರಿನಾಂಶಗಳು ಪ್ರಮುಖವಾಗಿವೆ.

ಕುರುಕುರು ಹಾಗೂ ಸಿಹಿಯಾಗಿರುವ ಬಾದಾಮಿಯನ್ನು ಹಸಿಯಾಗಿಯೇ ತಿನ್ನುವರು ಅಥವಾ ಯಾವುದಾದರೂ ಪದಾರ್ಥಗಳಿಗೆ ಇದನ್ನು ಹಾಕುವರು. ಅಧಿಕ ರಕ್ತದೊತ್ತಡದ ಸಮಸ್ಯೆ, ನರ ಮತ್ತು ಸ್ನಾಯುಗಳ ಸಮಸ್ಯೆ ಇರುವವರಿಗೆ ಇದು ನೆರವಾಗುವುದು. ಆದರೆ ತಜ್ಞರ ಪ್ರಕಾರ ಹಸಿ ಬಾದಾಮಿ ತಿನ್ನುವುದರ ಬದಲು ಬಾದಾಯಿಯನ್ನು ನೆನೆಸಿಟ್ಟು ತಿಂದರೆ ತುಂಬಾ ಒಳ್ಳೆಯದು.

ದಿನಕ್ಕೆ ಒಂದೆರಡು 'ನೆನೆಸಿಟ್ಟ ಬಾದಾಮಿ' ಸೇವಿಸಿ-ಆರೋಗ್ಯ ಪಡೆಯಿರಿ

ಬಾದಾಮಿಯನ್ನು ರಾತ್ರಿಯಿಡಿ ನೆನೆಹಾಕುವುದರಿಂದ ಅದರಲ್ಲಿರುವ ವಿಷಕಾರಿ ಅಂಶಗಳು ಹೋಗುವುದು, ಫೈಟಿಕ್ ಆಮ್ಲ ಬಿಡುಗಡೆ ಮಾಡುವುದು ಮತ್ತು ಗ್ಲುಟೇನ್ ಅಂಶವನ್ನು ವಿಭಜಿಸುವುದು. ಇದರಿಂದ ಬಾದಾಮಿಯಲ್ಲಿರುವ ಪೋಷಕಾಂಶಗಳು ನಿಮಗೆ ಲಭ್ಯವಾಗುವುದು. ಇದರಿಂದ ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ತಿನ್ನುವುದರಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಳ್ಳುವ...

ಜೀರ್ಣಕ್ರಿಯೆ ಸುಧಾರಣೆ

ಜೀರ್ಣಕ್ರಿಯೆ ಸುಧಾರಣೆ

ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ಅದು ಸಂಪೂರ್ಣ ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗಿ ಆಹಾರ ಸರಾಗ ಹಾಗೂ ವೇಗವಾಗಿ ಕರಗಲು ನೆರವಾಗುವುದು. ಬಾದಾಮಿಯನ್ನು ನೀರಿನಲ್ಲಿ ನೆನೆಸಲು ಹಾಕಿದರೆ ಹೊರಗಿನ ಸಿಪ್ಪೆಯು ಕಿತ್ತುಹೋಗುವುದು. ಇದರಿಂದ ಅದು ಬೇಗನೆ ಕರಗಿ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದು.

ಗರ್ಭಿಣಿಯರಿಗೆ ಒಳ್ಳೆಯದು

ಗರ್ಭಿಣಿಯರಿಗೆ ಒಳ್ಳೆಯದು

ನೀವು ತಾಯಿಯಾಗುವುದರಿದ್ದರೆ ನೆನೆಸಿಟ್ಟ ಬಾದಾಮಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದು ನಿಮ್ಮ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆನೆಸಿಟ್ಟ ಬಾದಾಮಿಯು ತಾಯಿ ಹಾಗೂ ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ ಹಾಗೂ ಶಕ್ತಿ ನೀಡುವುದು. ಬಾದಾಮಿಯಲ್ಲಿ ಇರುವ ಫಾಲಿಕ್ ಆಮ್ಲವು ಯಾವುದೇ ರೀತಿಯ ಜನ್ಮ ವೈಕಲ್ಯವನ್ನು ತಡೆಯುವುದು.

ಮೆದುಳಿನ ಕಾರ್ಯ ಸುಧಾರಿಸುವುದು

ಮೆದುಳಿನ ಕಾರ್ಯ ಸುಧಾರಿಸುವುದು

ದಿನನಿತ್ಯ 4ರಿಂದ 6 ನೆನೆಸಿಟ್ಟ ಬಾದಾಮಿ ಸೇವನೆ ಮಾಡಿದರೆ ಅದರಿಂದ ಮೆದುಳಿಗೆ ಶಕ್ತಿ ಸಿಗುವುದು ಮತ್ತು ಮೆದುಳಿನ ನರವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಅದು ಸಹಕಾರಿ. ಬೆಳಗ್ಗೆ ನೆನೆಸಿಟ್ಟ ಬಾದಾಮಿ ತಿಂದರೆ ಅದರಿಂದ ಜ್ಞಾಪಕಶಕ್ತಿ ಹೆಚ್ಚುವುದು ಮತ್ತು ಮೆದುಳಿನ ಕಾರ್ಯ ಸುಧಾರಿಸುವುದು.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ನೆನೆಸಿಟ್ಟ ಬಾದಾಮಿಯು ಪ್ರೋಟೀನ್, ಪೊಟಾಶಿಯಂ ಮತ್ತು ಮೆಗ್ನಿಶಿಯಂನ್ನು ಒದಗಿಸುವುದು. ಇದು ಹೃದಯದ ಆರೋಗ್ಯಕ್ಕೆ ಅತೀ ಅಗತ್ಯ. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಟ್ಟು ದೊಡ್ಡ ಮಟ್ಟದ ಹೃದಯ ಕಾಯಿಲೆ ತಡೆಯುವುದು.

ರಕ್ತದೊತ್ತಡ ಸುಧಾರಿಸುವುದು

ರಕ್ತದೊತ್ತಡ ಸುಧಾರಿಸುವುದು

ನೆನೆಸಿಟ್ಟ ಬಾದಾಮಿಯಲ್ಲಿ ಹೆಚ್ಚಿನ ಮಟ್ಟದ ಪೊಟಾಶಿಯಂ ಮತ್ತು ಸೋಡಿಯಂ ಕಡಿಮೆ ಇರುವುದು. ಇದು ಅಧಿಕ ರಕ್ತದೊತ್ತಡ ತಡೆಯುವುದು. ಇದರಲ್ಲಿ ಫಾಲಿಕ್ ಆಮ್ಲು ಮತ್ತು ಮೆಗ್ನಿಶಿಯಂ ಕೂಡ ಇದ್ದು, ಇದು ಅಪಧಮನಿಗಳಲ್ಲಿ ಉಂಟಾಗುವ ಒತ್ತಡ ಕುಗ್ಗಿಸುವುದು.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ಹೊಟ್ಟೆಯ ಸುತ್ತಲು ಇರುವಂತಹ ಕೊಬ್ಬು ಕರಗಿಸಬೇಕೆಂದು ನೀವು ಪ್ರಯತ್ನಿಸುತ್ತಾ ಇದ್ದರೆ ನೆನೆಸಿಟ್ಟ ಬಾದಾಮಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಬಾದಾಮಿ ಹೊರಗಿನ ಸಿಪ್ಪೆ ತೆಗೆಯಲ್ಪಡುವ ಕಾರಣದಿಂದಾಗಿ ನೆನೆಸಿಟ್ಟ ಬಾದಾಮಿ ತಿಂದರೆ ಬೇಗನೆ ತೂಕ ಕಳೆದುಕೊಳ್ಳಬಹುದು. ನೆನೆಸಿಟ್ಟಂತಹ ಬಾದಾಮಿಯಲ್ಲಿ ಏಕಪರ್ಯಾಪ್ತ ಕೊಬ್ಬಿರುವುದು. ಇದು ಹಸಿವು ಕಡಿಮೆ ಮಾಡಿ ಹೊಟ್ಟೆ ತುಂಬಿದಂತೆ ಮಾಡುವುದು.

ಮಲಬದ್ಧತೆ ನಿವಾರಣೆ

ಮಲಬದ್ಧತೆ ನಿವಾರಣೆ

ನೆನೆಸಿಟ್ಟ ಬಾದಾಮಿ ತಿಂದರೆ ಅದರಿಂದ ದೀರ್ಘಕಾಲದ ಮಲಬದ್ಧತೆ ನಿವಾರಣೆ ಮಾಡಬಹುದು. ನೆನೆಸಿಟ್ಟ ಬಾದಾಮಿಯಲ್ಲಿ ಹೀರಿಕೊಳ್ಳದ ನಾರಿನಾಂಶವು ಹೆಚ್ಚಾಗಿದೆ. ಇದು ಒರಟು ಪ್ರಮಾಣ ಅಧಿಕಗೊಳಿಸಿ, ಮಲಬದ್ಧತೆಯನ್ನು ನಿವಾರಿಸುವುದು.

ಪ್ರತಿರೋಧಕ ಶಕ್ತಿ ಬಲಪಡಿಸುವುದು

ಪ್ರತಿರೋಧಕ ಶಕ್ತಿ ಬಲಪಡಿಸುವುದು

ನೆನೆಸಿಟ್ಟ ಬಾದಾಮಿಯಲ್ಲಿ ಇರುವಂತಹ ಪ್ರಿಬಯಾಟಿಕ್ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಪ್ರಿಬಯಾಟಿಕ್ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಉತ್ಪಾದಿಸುವುದು ಮತ್ತು ಇದರ ಫಲವಾಗಿ ಹೊಟ್ಟೆಗೆ ಪರಿಣಾಮ ಬೀರುವಂತಹ ರೋಗಗಳನ್ನು ಇದು ತಡೆಯುವುದು.

ಚರ್ಮಕ್ಕೆ ವಯಸ್ಸಾಗುವುದನ್ನು ತಪ್ಪಿಸುವುದು

ಚರ್ಮಕ್ಕೆ ವಯಸ್ಸಾಗುವುದನ್ನು ತಪ್ಪಿಸುವುದು

ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳು ಚರ್ಮದಲ್ಲಿರುವ ನೆರಿಗೆಗಳ ನಿವಾರಣೆ ಮಾಡದರೆ ಇರಬಹುದು. ಆದರೆ ಬಾದಾಮಿಯಲ್ಲಿ ನೈಸರ್ಗಿಕ ಅಂಶಗಳು ನೆರಿಗೆ ನಿವಾರಿಸುವುದು. ಪ್ರತಿನಿತ್ಯ ಬೆಳಗ್ಗೆ ನೆನೆಸಿಟ್ಟ ಬಾದಾಮಿ ಸೇವನೆ ಮಾಡಿದರೆ ಅದರಿಂದ ಚರ್ಮದಲ್ಲಿನ ನೆರಿಗೆ ಮತ್ತು ವಯಸ್ಸಾಗುವ ವೇಳೆ ಮೂಡುವ ಇತರ ಲಕ್ಷಣಗಳನ್ನು ತಡೆಯಬಹುದು. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಅದನ್ನು ಶೇರ್ ಮಾಡಿ ಮತ್ತು ಬಾದಾಮಿ ಲಾಭ ನಿಮ್ಮ ಪ್ರೀತಿಪಾತ್ರರಿಗೂ ಸಿಗಲಿ.

English summary

health-benefits-of-eating-soaked-almonds-in-the-morning

Almonds are high in nutritional content with a wide range of vital nutrients like protein, omega-3 fatty acids, omega-6 fatty acids, vitamin E, calcium, phosphorous, zinc, soluble and insoluble fibre among others. The crunchy and sweet almonds are usually consumed raw or are added in sweet and savoury dishes. Almonds are extremely helpful for people who suffer with blood pressure problems and these also help nerve and muscle functioning. Nutritionists say that eating soaked almonds is much more healthier than eating the raw ones
Story first published: Wednesday, February 14, 2018, 7:01 [IST]