ಹೆಬ್ಬಾಡಿ ಸೊಪ್ಪಿನ ಹೆಸರು ಕೇಳಿದ್ದೀರಾ.. ಇಲ್ಲಿದೆ ನೋಡಿ ಇದರ ಆರೋಗ್ಯ ಲಾಭಗಳು

Posted By: Sushma Charhra
Subscribe to Boldsky

ಗದ್ದೆ ಹಿತ್ತಲಲ್ಲಿ ಬೆಳೆಯೋ ಬಳ್ಳಿ ನಿಮ್ಮ ಬಾಳಿನ ಬಂಗಾರವಾಗುತ್ತೆ ಅಂದರೆ ನೀವು ನಂಬಲೇಬೇಕು. ಪ್ರಕೃತಿಯ ಸೊಬಗಲ್ಲಿ ಅದೆಷ್ಟೋ ಲಕ್ಷಗಟ್ಟಲೆ ಸೊಪ್ಪುಗಳಿವೆ. ಆದ್ರೆ ಅವುಗಳಲ್ಲಿ ಕೆಲವು ಮಾತ್ರ ಈಗಿನವರಿಗೆ ಪರಿಚಿತ. ಹಿಂದೆಲ್ಲ ಸಣ್ಣಪುಟ್ಟ ಕಾಯಿಲೆಗಳಿಗೂ ವೈದ್ಯರ ಬಳಿ ಹೋಗುವ ಪರಿಪಾಠವಿರಲಿಲ್ಲ. ಬದಲಾಗಿ ಯಾವುದೋ ಗಿಡವನ್ನೋ, ಮರವನ್ನೋ, ಬಳ್ಳಿಯನ್ನೋ ಅವಲಂಬಿಸುತ್ತಿಸುತ್ತಿದ್ದರು.

ದಿನಗಳು ಉರುಳಿದಂತೆ ಕೆಲವು ಸಸ್ಯಗಳ ಪರಿಚಯವೇ ನಮಗೆ ಇಲ್ಲದಂತಾಗಿ ಹೋಗಿದೆ. ಅಂತಹ ಕೆಲವು ಸಸ್ಯ ಪ್ರಭೇದಗಳಲ್ಲಿ ಹೆಬ್ಬಾಡಿ ಸೊಪ್ಪು ಕೂಡ ಒಂದು. ಬಳ್ಳಿಯಂತೆ ಹಬ್ಬುವ ಇದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಹಲವು ಉಪಯೋಗಗಳನ್ನು ಮಾಡಲಿದೆ.,.. ಸದ್ಯ ಯಾವುದೇ ಮಾರುಕಟ್ಟೆಯಲ್ಲೂ ಈ ಸಸ್ಯದ ಎಲೆಗಳು ಮಾರಾಟಕ್ಕೆ ಸಿಗುವುದಿಲ್ಲ. ಆದ್ರೆ ನೀವು ಇದರ ಉಪಯೋಗ ತಿಳಿದರೆ ಗುಡ್ಡಗಾಡು ಅಲೆದಾದರೂ ಇದನ್ನು ಹುಡುಕಾಡುತ್ತೀರಿ....

ದೇಹಕ್ಕೆ ತಂಪು ನೀಡುವ ಹೆಬ್ಬಾಡಿ ಸೊಪ್ಪು

ದೇಹಕ್ಕೆ ತಂಪು ನೀಡುವ ಹೆಬ್ಬಾಡಿ ಸೊಪ್ಪು

ಹೆಬ್ಬಾಡಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಕಿವುಚಿ. ಅರ್ಧ ಲೀಟರ್ ನೀರಿಗೆ 10 ಎಲೆಗಳು ಸಾಕಾಗುತ್ತದೆ. ನೀರು ಲೋಳೆಯಂತಾಗುತ್ತೆ. ಇದಕ್ಕೆ ಸಕ್ಕರೆ ಹಾಕಿ ಕುಡಿದರೆ ದೇಹಕ್ಕೆ ತಂಪಾಗುತ್ತೆ. ಬಿಸಿಲಿನ ಬೇಗೆಯಿಂದ ಬಳಲಿ ಬೆಂಡಾಗಿದ್ದರೆ ಈ ಜ್ಯೂಸ್ ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತೆ. ದೇಹಕ್ಕೆ ಉಷ್ಣವಾಗಿದ್ದಾಗ ಇದರ ಬಳಕೆ ಬಹಳ ಉಪಯುಕ್ತ.

ಉರಿಮೂತ್ರ ಸಮಸ್ಯೆಗೆ ಪರಿಹಾರ ನೀಡುತ್ತೆ

ಉರಿಮೂತ್ರ ಸಮಸ್ಯೆಗೆ ಪರಿಹಾರ ನೀಡುತ್ತೆ

ದೇಹಕ್ಕೆ ಅತಿಯಾಗಿ ಉಷ್ಣವಾದರೆ ಕೆಲವರಿಗೆ ಉರಿಮೂತ್ರ ಕಾಣಿಸಿಕೊಳ್ಳುತ್ತೆ. ಇಂತಹ ಸಂದರ್ಬದಲ್ಲಿ ಹೆಬ್ಬಾಡಿ ಸೊಪ್ಪಿನ ಜ್ಯೂಸ್ ತಯಾರಿಸಿ ಕುಡಿಯುವುದು ಸೂಕ್ತ. ಈಗಲೂ ಹಳ್ಳಿಗಾಡು ಮಂದಿ ಇದನ್ನು ಮನೆಮದ್ದಾಗಿ ಹಲವು ಕಾಯಿಲೆಗಳಿಗೆ ಬಳಸುತ್ತಾರೆ. ಆದರೆ ಮಾರ್ಕೆಟ್‌ನಲ್ಲಿ ಈ ಎಲೆಗಳು ಲಭ್ಯವಿಲ್ಲದ ಕಾರಣ ಸಿಟಿ ಮಂದಿಗೆ ಇದರ ಉಪಯೋಗ ಇನ್ನೂ ತಿಳಿಯದು.

ಕೂದಲಿಗೆ ಅತ್ಯುತ್ತಮ ಕಂಡೀಷನರ್

ಕೂದಲಿಗೆ ಅತ್ಯುತ್ತಮ ಕಂಡೀಷನರ್

ಕೂದಲಿಗೆ ಶಾಂಪೂ ಮಾಡಿದ ನಂತ್ರ ಫಳಫಳ ಹೊಳೆಯುವ ಕೂದಲು ಪಡೆಯಲು ಬಹಳ ಕಾಸ್ಲ್ಟೀಯಾದ ಯಾವುದೇ ಕಂಡೀಷನರ್ ಖರೀದಿಸುವ ಅಗತ್ಯವಿಲ್ಲ. ಜಸ್ಟ್ ಹೆಬ್ಬಾಡಿ ಸೊಪ್ಪಿನ ಎಲೆಗಳನ್ನು ನೀರಿನಲ್ಲಿ ಕಿವುಚಿ ಗೋಂಪು ತಯಾರಿಸಿಕೊಂಡು ಕೂದಲಿಗೆ ಅಪ್ಲೈ ಮಾಡಿದರೆ ಸಾಕು. ಕೂದಲು ಫಳಫಳ ಎಂದು ಸ್ಮೂತ್ ಆಗುವುದೂ ಅಲ್ಲದೆ ಡ್ರ್ಯಾಂಡ್ರಫ್ ನಂತ ಸಮಸ್ಯೆಯನ್ನೂ ಕೂಡ ದೂರಮಾಡುತ್ತೆ.

ಹೊಟ್ಟೆ ಹುಳುವಿಗೆ ಅತ್ಯುತ್ತಮ

ಹೊಟ್ಟೆ ಹುಳುವಿಗೆ ಅತ್ಯುತ್ತಮ

ಹೆಬ್ಬಾಡಿ ಸೊಪ್ಪಿನ ಗೋಂಪಿಗೆ ಸಕ್ಕರೆ ಹಾಕಿ ಕುಡಿದರೆ ಹೊಟ್ಟೆಯಲ್ಲಿ ಜಂತುಹುಳುವಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಹೆಬ್ಬಾಡಿ ಸೊಪ್ಪಿನ ಗಿಡದಲ್ಲಿ ಬಿಡುವ ಸಣ್ಣಸಣ್ಣ ಬಿಳಿವರ್ಣದ ಕಾಳುಗಳಲ್ಲಿ ಒಂದೆರಡು ಕಾಳುಗಳನ್ನು ಬಾಯಿಗೆ ಹಾಕಿಕೊಳ್ಳುವುದರಿಂದ ಹೆಚ್ಚಿನ ಪರಿಣಾಮವಾಗಲಿದೆ.

ಕಜ್ಜಿಗೆ ಪರಿಣಾಮಕಾರಿ

ಕಜ್ಜಿಗೆ ಪರಿಣಾಮಕಾರಿ

ಚರ್ಮದಲ್ಲಿ ಹುಳು ಕಜ್ಜಿಯಾಗಿದ್ದಲ್ಲಿ ಹೆಬ್ಬಾಡಿ ಗಿಡದ ಕಾಳುಗಳನ್ನು ತೇದು ಕಜ್ಜಿಗೆ ಅಪ್ಲೈ ಮಾಡಿಕೊಂಡರೆ ಕೆಲವೇ ದಿನದಲ್ಲಿ ಕಜ್ಜಿ ನಿವಾರಣೆಯಾಗಲಿದೆ.

 ಮಲಮೂತ್ರ ವಿಸರ್ಜನೆಯ ಸಮಸ್ಯೆ

ಮಲಮೂತ್ರ ವಿಸರ್ಜನೆಯ ಸಮಸ್ಯೆ

ಹೆಬ್ಬಾಡಿ ಸೊಪ್ಪಿನ ಜ್ಯೂಸ್ ಮಲಮೂತ್ರ ವಿಸರ್ಜನೆಯಲ್ಲಿ ಸಮಸ್ಯೆಯಿದ್ದಲ್ಲಿ ಅದನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತೆ. ಹೆಬ್ಬಾಡಿ ಸೊಪ್ಪನ್ನು ನೀರಿನಲ್ಲಿ ಕಿವುಚಿ ಕೆಲವು ನಿಮಿಷ ಹಾಗೆಯೇ ಬಿಟ್ಟರೆ ಇಡ್ಲಿಯ ಹದಕ್ಕೆ ಬರಲಿದೆ. ಅದನ್ನು ತಿನ್ನುವುದರಿಂದ ವಿಸರ್ಜನೆಯ ಸಮಸ್ಯೆ ನಿವಾರಣೆಯಾಗುತ್ತೆ.

ಕಣ್ಣಿನ ಆರೋಗ್ಯಕ್ಕೆ ಸಹಕಾರಿ

ಕಣ್ಣಿನ ಆರೋಗ್ಯಕ್ಕೆ ಸಹಕಾರಿ

ಕಣ್ಣಿನಲ್ಲಿ ಉರಿ, ಕಣ್ಣು ಕೆಂಪಗಾಗಿರುವುದು, ಕಣ್ಣಿನಲ್ಲಿ ತುರಿಕೆ ಇಂತಹ ಸಮಸ್ಯೆಗಳನ್ನು ಕೂಡ ಇದು ನಿವಾರಿಸುತ್ತೆ. ಹೆಬ್ಬಾಡಿ ಸೊಪ್ಪಿನ ಗೋಂಪನ್ನು ತಲೆಗೆ ಹಚ್ಚಿಕೊಳ್ಳಬೇಕು ಮತ್ತು ಸ್ವಲ್ಪ ಜ್ಯೂಸ್ ಕುಡಿಯಬೇಕು., ಇದರಿಂದ ಕಣ್ಣಿಗೆ ತಂಪಾಗಿ ನಿಮ್ಮ ಕಣ್ಣು ಆರೋಗ್ಯವಾಗಿರಲು ಇದು ಸಹಾಯ ಮಾಡುತ್ತೆ.

English summary

Health benefits of Hebbadi soppu

hebbadi leaf is rich in vitamins, minerals and phytonutrients and it is the most versatile food. hebbadi leaf provides essential nutrients and energy to kids and adults alike and it is great for improving your cognitive functions. It can be added as a part of your daily diet due to its profound health benefits.