Latest Updates
-
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ನೋಡಿ ಇದೇ ಕಾರಣದಿಂದಾಗಿ ಒಣ ಗಂಟಲಿನ ಸಮಸ್ಯೆ ಬರುವುದು!
ದೇಹದ ಯಾವುದೇ ಭಾಗವಾದರೂ ಸರಿಯೇ, ನೋವಿದ್ದರೆ ಅದು ತುಂಬಾ ಕಿರಿಕಿರಿ ಉಂಟು ಮಾಡುವುದು. ಇದರಿಂದ ಯಾವಾಗೊಮ್ಮೆ ಹೊರಬರುತ್ತೇವೋ ಎನ್ನುವ ಭಾವನೆ ಮೂಡುವುದು. ಅದರಲ್ಲೂ ಗಂಟಲು ಒಣಗುವುದು ಮತ್ತು ನೋಯುವುದು ನಮ್ಮ ಸಂವಹನ ಕಲೆ ಮೇಲೆ ಪರಿಣಾಮ ಬೀರುವುದು. ಆದರೆ ಇದು ದೊಡ್ಡ ಸಮಸ್ಯೆಯ ಲಕ್ಷಣವೇನಲ್ಲ.
ಗಂಟಲು ಒಣಗುವುದು ಸಣ್ಣ ಸಮಸ್ಯೆಯಿಂದಾದರೂ ಇದನ್ನು ಲಘುವಾಗಿ ಪರಿಗಣಿಸದೆ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯ. ಗಂಟಲು ಒಣಗಲು ಕಾರಣವೇನೆಂದು ನಿಮಗೆ ನಾವು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ ಮತ್ತು ಗಂಟಲು ಒಣಗದಂತೆ ಮುನ್ನೆಚ್ಚರಿಕೆ ವಹಿಸಿ.

1. ಬಾಯಿ ತೆರೆದಿಟ್ಟು ಮಲಗುವುದು
ಗಂಟಲು ಒಣಗಲು ತುಂಬಾ ಪ್ರಮುಖ ಕಾರಣವೆಂದರೆ ಬಾಯಿ ತೆರೆದಿಟ್ಟು ಮಲಗುವುದು. ಆದರೆ ಹೆಚ್ಚಿನವರು ಇದನ್ನು ನಿರ್ಲಕ್ಷಿಸುವರು. ನಾವು ಬಾಯಿಯನ್ನು ತೆರೆದಿಟ್ಟು ಮಲಗುತ್ತೇವೆ. ಆದರೆ ಇದರಿಂದ ಆಗುವ ಪರಿಣಾಮಗಳ ಬಗ್ಗೆ ಗಮನಹರಿಸುವುದಿಲ್ಲ. ಇದು ಒಣಗಂಟಲು ಉಂಟು ಮಾಡುವುದು. ನೀವು ಬಾಯಿ ತೆರೆದಿಟ್ಟು ಮಲಗಿದರೆ ಎದ್ದ ಬಳಿಕ ಗಂಟಲು ಒಣಗಿರುವುದು. ಇದು ಯಾಕೆಂದರೆ ರಾತ್ರಿ ವೇಳೆ ಹೊರಗಡೆ ಗಾಳಿಯು ಬಾಯಿಯ ಜೊಲ್ಲನ್ನು ಒಣಗಿಸುವುದು ಮತ್ತು ಇದರಿಂದ ಗಂಟಲು ಒಣಗಿದಂತೆ ಆಗುವುದು.
2. ಫ್ಲೂ (ಶೀತಜ್ವರ)
ಗಂಟಲು ಒಣಗಲು ಶೀತಜ್ವರ ಕಾರಣವಾಗಿರಬಹುದು. ಶೀತಜ್ವರ ಶ್ವಾಸಕೋಶ ಸಮಸ್ಯೆ. ಶೀತಜ್ವರ ಬಂದರೆ ಆಗ ಗಂಟಲು ಒಣಗುವುದು ಅಥವಾ ಊದಿಕೊಳ್ಳುವುದು. ಗಂಟಲು ಒಣಗುವುದು ಕೇವಲ ಶೀತಜ್ವರದ ಲಕ್ಷಣ ಮಾತ್ರವಲ್ಲ. ಶೀತಜ್ವರದ ಲಕ್ಷಣಗಳು ಇನ್ನು ಹಲವಾರು ಇದೆ. ಆದರೆ ಒಣ ಗಂಟಲು ಫ್ಲೂ ವೈರಸ್ ನ ಲಕ್ಷಣಗಳಲ್ಲಿ ಒಂದು.
3. ಮೊನೋನ್ಯೂಕ್ಲಿಯೊಸಿಸ್
ಒಣ ಗಂಟಲು ಉಂಟಾಗಲು ಮೊನೋನ್ಯೂಕ್ಲಿಯೊಸಿಸ್ ಎನ್ನುವ ಕಾಯಿಲೆಯು ಕಾರಣವಾಗಿದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಮೊನೋನ್ಯೂಕ್ಲಿಯೊಸಿಸ್ ನ್ನು ಹೆಚ್ಚಾಗಿ ಮೊನೊ ಎಂದು ಕರೆಯಲಾಗುತ್ತದೆ. ಮೊನೊ ವೈರಸ್ ನಿಂದ ಬರುವ ಕಾಯಿಲೆ. ಇದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಜೊಲ್ಲಿನ ಮೂಲಕ ಹರಡಬಹುದು. ಒಣ ಗಂಟಲು ಈ ಕಾಯಿಲೆಯ ಪ್ರಮುಖ ಲಕ್ಷಣಗಳಲ್ಲಿ ಒಂದು.
4. ಅಲರ್ಜಿ ಅಥವಾ ತೀವ್ರ ಜ್ವರ
ಕೆಲವೊಂದು ಸಲ ನಮ್ಮ ಸುತ್ತಲಿನ ನೈಸರ್ಗಿಕ ವಸ್ತುಗಳಿಂದಾಗಿಯೇ ನಮಗೆ ಅಲರ್ಜಿ ಕಾಣಿಸಿಕೊಳ್ಳುವುದು. ಆದರೆ ನಾವು ಇದನ್ನು ನಿರಾಕರಿಸುತ್ತೇವೆ. ಋತುಮಾನದ ಅಲರ್ಜಿಗಳು ಅಥವಾ ತೀವ್ರ ಜ್ವರವು ಗಂಟಲು ಒಣಗಲು ಅಥವಾ ತುರಿಕೆ ಉಂಟಾಗಲು ಕಾರಣವಾಗಿರಬಹುದು. ನಿಮ್ಮ ಸುತ್ತಲು ಇರುವಂತಹ ಕೆಲವೊಂದು ನೈಸರ್ಗಿಕ ವಸ್ತುಗಳಾದ ಹುಲ್ಲು ಇತ್ಯಾದಿಗಳಿಗೆ ದೇಹದಲ್ಲಿನ ಪ್ರತಿರೋಧಕ ವ್ಯವಸ್ಥೆಯಾಗಿ ಅತಿಯಾಗಿ ಪ್ರತಿಕ್ರಿಯಿಸಿದಾಗ ಹೀಗೆ ಆಗುವುದು. ಈ ಅಲರ್ಜಿಯಿಂದ ಗಂಟಲು ನೋವು ಬರುವುದು.
5. ನಿರ್ಜಲೀಕರಣ
ಗಂಟಲು ಒಣಗಲು ಅಥವಾ ಊತ ಕಾಣಿಸಲು ಪ್ರಮುಖ ಕಾರಣವೆಂದರೆ ಅದು ನಿರ್ಜಲೀಕರಣ. ದೇಹದಲ್ಲಿ ನಿರ್ಜಲೀಕರಣ ಉಂಟಾದರೆ ಆಗ ಗಂಟಲು ನೋವು ಅಥವಾ ಒಣ ಗಂಟಲು ಕಾಣಿಸಬಹುದು. ನೀವು ಹೆಚ್ಚು ನೀರು ಕುಡಿಯದೇ ಇರಬಹುದು. ದೇಹದಲ್ಲಿ ನಿರ್ಜಲೀಕರಣ ಉಂಟಾದಾಗ ಅದು ಜೊಲ್ಲುರಸ ಉಂಟು ಮಾಡುವುದಿಲ್ಲ. ಇದರಿಂದ ಗಂಟಲು ಒಣಗುವುದು.
6. ಶೀತ
ಶೀತವು ಹೆಚ್ಚಿನ ಜನರನ್ನು ಕಾಡುವ ಮತ್ತು ಪರಿಣಾಮ ಬೀರುವ ಸೋಂಕು. ಸಾಮಾನ್ಯ ಶೀತದಿಂದಲೂ ಗಂಟಲು ಒಣಗಬಹುದು. ಇದರಿಂದಾಗಿ ಗಂಟಲಿನ ಕಿರಿಕಿರಿ ಹಾಗೂ ತುರಿಕೆ ಕಂಡುಬರಬಹುದು.
7. ಸ್ಟ್ರೆಪ್ ಥ್ರಾಟ್
ಸ್ಟ್ರೆಪ್ ಸೋಂಕಿನಿಂದಾಗಿ ಗಂಟಲು ಒಣಗಬಹುದು. ಈ ಸೋಂಕನ್ನು ಬ್ಯಾಕ್ಟೀರಿಯಾ ಉಂಟು ಮಾಡುವುದು. ಈ ಸಮಸ್ಯೆಯಿಂದಾಗಿ ಗಂಟಲು ತುಂಬಾ ಊದಿಕೊಳ್ಳುವುದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಇದರಿಂದಾಗಿ ಒಣಗಂಟಲು ಕೂಡ ಉಂಟಾಗಬಹುದು.
8. ಟಾನ್ಸಿಲಿಟಿಸ್
ಟಾನ್ಸಿಲಿಟಿಸ್ ನ್ನು ಜನರು ಹೆಚ್ಚಾಗಿ ಟಾನ್ಸಿಲ್ ಎಂದು ಕರೆಯುವರು. ಈ ಸೋಂಕುವಿನಿಂದಾಗಿ ಗಂಟಲಿನ ಹಿಂಬದಿಯಲ್ಲಿ ಮೃಧುವಾದ ಬೆಳವಣಿಗೆಯು ಉಂಟುಮಾಡುವುದು. ಇದು ದೇಹದಲ್ಲಿ ಸೋಂಕಿನ ವಿರುದ್ಧ ಹೋರಾಡಲು ಕಾರಣವಾಗಿದೆ. ಟಾನ್ಸಿಲಿಟಿಸ್ ಬ್ಯಾಕ್ಟೀರಿಯಾ ಅಥವಾ ವೈರಸ್ ನಿಂದ ಉಂಟಾಗಬಹುದು. ಟಾನ್ಸಿಲ್ ನಿಂದ ಒಣ ಗಂಟಲು ಉಂಟಾಗಬಹುದು. ಮುಂದಿನ ಸಲ ನಿಮಗೆ ಒಣ ಗಂಟಲಿನ ಸಮಸ್ಯೆ ಕಂಡುಬಂದರೆ ಇದಕ್ಕೆ ಕಾರಣವೇನೆಂದು ತಿಳಿದುಕೊಂಡು ಸರಿಯಾದ ಮುನ್ನೆಚ್ಚರಿಕೆ ಅಥವಾ ಔಷಧಿ ಮಾಡಿಕೊಳ್ಳಿ. ಒಣಗಂಟಲಿನ ಸಮಸ್ಯೆ ದೊಡ್ಡ ವಿಚಾರವೇನಲ್ಲ, ಇದನ್ನು ಕಡೆಗಣಿಸಬಹುದು. ಆದರೆ ಇದು ಬೇರೆ ಯಾವುದೇ ಕಾಯಿಲೆಯ ಲಕ್ಷಣಕ್ಕೆ ತಿರುಗುವ ಮೊದಲು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸೂಕ್ತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











